ಪ್ರಚಲಿತ
ಡಾ.ಜಿತೇಂದ್ರ ಸಿಂಗ್
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)
ಭಯೋತ್ಪಾದನೆಯ ಘಟನೆಗಳು ಗಣನೀಯವಾಗಿ ಕ್ಷೀಣಿಸಿವೆ ಮತ್ತು ಕಣಿವೆಯಲ್ಲಿ ಶಾಂತಿ ಮತ್ತು ಭದ್ರತೆಯ ಹೊಸ ವಾತಾವರಣ ಕಂಡುಬಂದಿದೆ. ಪ್ರವಾಸೋ ದ್ಯಮವು ತ್ವರಿತವಾಗಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ.ಎಲ್ಲಾ ಹಂತಗಳಲ್ಲಿ ಒಟ್ಟಾಗಿ ಸಮನ್ವಯ ಇರುವುದರಿಂದ, ಇಂದು ಜಮ್ಮು ಮತ್ತು ಕಾಶ್ಮೀರದ ಜನರು ಮೋದಿಯವರ ನವ ಭಾರತದ ಅವಿಭಾಜ್ಯ ಅಂಗವಾಗುವ ಮತ್ತು ಅದರ ಫಲಾನುಭವಿಗಳಾಗುವ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.
ಸುಮಾರು 70 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರವು ಸಾಂವಿಧಾನಿಕ ಅಸಂಗತತೆಯ ನೆರಳಿನಲ್ಲಿತ್ತು. ಇದು ವಾಸ್ತವವಾಗಿ ಇತಿಹಾಸದ ವೈಫಲ್ಯ ಮತ್ತು ಎಲ್ಲರಿಗೂ ಇರುವ ಸಮಾನ ಹಕ್ಕುಗಳನ್ನು ಕಸಿದುಕೊಂಡಿತು. ಬಹುಶಃ ಶ್ರೀನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರನ್ನು 370 ಮತ್ತು 35-ಎ ವಿಧಿಗಳ ಸಂಕೋಲೆಯಿಂದ ಮುಕ್ತಗೊಳಿಸುವುದು ಸರ್ವಶಕ್ತನ ಆದೇಶವಾಗಿತ್ತು.
ಬದಲಾವಣೆಯ ನಂತರ ಹೊಸ ಆಡಳಿತಾತ್ಮಕ ಮತ್ತು ಸಾಂವಿಧಾನಿಕ ವ್ಯವಸ್ಥೆಗಳು ಜಾರಿಯಾಗಿವೆ. ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ವೇಗದ ಪಯಣ ವನ್ನು ಆರಂಭಿಸಿರುವುದು ಮಾತ್ರವಲ್ಲದೆ ಮಾನಸಿಕ ಸಂಕೋಲೆಗಳಿಂದಲೂ ವಿಮೋಚನೆಯನ್ನು ಪಡೆದುಕೊಂಡಿದೆ. ಭಾರತದ ಉಳಿದ ಭಾಗಗಳ ದೇಶವಾಸಿ ಗಳಿಗಿಂತ ನಾವು ಅನ್ಯರು ಎಂಬ ಭಾವನೆ ಇಲ್ಲಿನ ಜನರಿಗೆ, ಹಾಗೆಯೇ, ಭಾರತದ ಉಳಿದ ಭಾಗಗಳು ಕೂಡ ಜಮ್ಮು ಮತ್ತು ಕಾಶ್ಮೀರವನ್ನು ಅನ್ಯವೆಂಬ ನಮ್ಮ ಮಾನಸಿಕತೆಯಿಂದ ಬಿಡುಗಡೆ ದೊರಕಿದೆ.
ಎಲ್ಲಾ ಹಂತಗಳಲ್ಲಿ ಒಟ್ಟಾಗಿ ಸಮನ್ವಯ ಇರುವುದರಿಂದ, ಇಂದು ಜಮ್ಮು ಮತ್ತು ಕಾಶ್ಮೀರದ ಜನರು ಮೋದಿ ಯವರ ನವ ಭಾರತದ ಅವಿಭಾಜ್ಯ ಅಂಗವಾಗುವ ಮತ್ತು ಅದರ ಫಲಾನುಭವಿಗಳಾಗುವ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಕಾಲ್ಪನಿಕ ಜಮ್ಮು ಮತ್ತು ಕಾಶ್ಮೀರವು ಹಿಂದಿನ
ಅನಾರೋಗ್ಯಕರ ಪರಂಪರೆಯಿಂದ ನಿರ್ಗಮನ ಹೊಂದಿರುವುದು ಮಾತ್ರವಲ್ಲದೆ, ಭಾರತದ ಇತರ ಭಾಗ ಗಳಂತೆಯೇ ಆಕಾಂಕ್ಷೆಗಳನ್ನು ಹೊಂದಿದೆ. ಇಂದು, ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ಹೊಸ ಪ್ರಯಾಣ ವನ್ನು ಆರಂಭಿಸಿದೆ. ಈ ಹಿಂದೆ ಇಲ್ಲಿ ಅನ್ವಯವಾಗದಿದ್ದ 170 ಕೇಂದ್ರೀಯ ಕಾನೂನುಗಳನ್ನು ಈಗ ಅನ್ವಯಿಸ ಲಾಗಿದೆ. ಅದೇ ಸಮಯದಲ್ಲಿ, ಎಲ್ಲಾ ಕೇಂದ್ರ ಕಾನೂನುಗಳನ್ನು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಮಾಡಲಾಗಿದೆ.
ಬಾಲ್ಯ ವಿವಾಹ ಕಾಯ್ದೆ, ಶಿಕ್ಷಣದ ಹಕ್ಕು, ಆರ್ ಟಿಐ ಮತ್ತು ಭೂ ಸುಧಾರಣೆಗಳಂತಹ ಅನೇಕ ಕಾನೂನುಗಳು ಈಗ ಅನುಷ್ಠಾನಕ್ಕೆ ಬಂದಿವೆ. ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ವಾಲ್ಮೀಕಿ, ದಲಿತ ಮತ್ತು ಗೂರ್ಖಾ ಸಮುದಾಯಗಳು ಸಹ ಈಗ ಇತರ ನಿವಾಸಿಗಳಿಗೆ ಸರಿಸಮಾನವಾಗಿ ಹಕ್ಕುಗಳನ್ನು ಪಡೆದಿವೆ. ಈಗ ಇಲ್ಲಿನ ಸ್ಥಳೀಯ ನಿವಾಸಿಗಳು, ಇತರ ರಾಜ್ಯಗಳ ಜನರಂತೆಯೇ ಎಲ್ಲ ಹಕ್ಕುಗಳನ್ನು ಆನಂದಿಸುತ್ತಿದ್ದಾರೆ. ಭಾರತ ಸಂವಿಧಾನದ ಪ್ರಕಾರ 334 ರಾಜ್ಯ ಕಾನೂನುಗಳಲ್ಲಿ 164 ಕಾನೂನುಗಳನ್ನು ರದ್ದುಪಡಿಸಲಾಗಿದೆ ಮತ್ತು 167 ಕಾನೂನುಗಳನ್ನು ಅಳವಡಿಸಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ, ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.3 ರಷ್ಟು ಮೀಸಲಾತಿ ಯನ್ನು ಒದಗಿಸಲಾಗಿದೆ. 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾ ಡಳಿತ ಪ್ರದೇಶಕ್ಕೆ 2020-21ರ ಅವಽಯಲ್ಲಿ ಕ್ರಮವಾಗಿ 30,757 ಕೋಟಿ ರು. ಮತ್ತು 5959 ಕೋಟಿ ರು. ಅನುದಾನವನ್ನು ಮಂಜೂರು ಮಾಡಲಾಗಿದೆ.
ಕಳೆದ ವರ್ಷ, ಗ್ರಾಮ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಮೊದಲ ಚುನಾವಣೆ ಯನ್ನು ಯಶಸ್ವಿಯಾಗಿ ನಡೆಸಲಾಯಿತು. ಹಲವು ವರ್ಷಗಳ ನಂತರ, 2018 ರಲ್ಲಿ ಪಂಚಾಯತ್ ಚುನಾವಣೆಗಳು ನಡೆದು ಶೇ.74.1ರಷ್ಟು ಮತದಾನವಾಗಿತ್ತು. 2019 ರಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆ ಗಳನ್ನು ಮೊದಲ ಬಾರಿಗೆ ನಡೆಸಲಾಯಿತು ಮತ್ತು ಶೇ. 98.3 ರಷ್ಟು ಮತದಾನ ನಡೆಯಿತು. ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಚುನಾವಣೆಯಲ್ಲೂ ದಾಖಲೆಯ ಜನರ ಭಾಗವಹಿಸುವಿಕೆ ಇತ್ತು.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 51.7 ಲಕ್ಷ ಫಲಾನು ಭವಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶೀಲಿಸಲಾಗಿದೆ. ಈ ಯೋಜನೆಯಡಿ, ಜಮ್ಮು ಮತ್ತು ಕಾಶ್ಮೀರದ ಆಸ್ಪತ್ರೆಗಳಲ್ಲಿ 2.24 ಲಕ್ಷ ಚಿಕಿತ್ಸೆಗಳನ್ನು ನೀಡಲಾಗಿದೆ. ಇದಕ್ಕಾಗಿ 223 ಕೋಟಿ ರು.ಗಳನ್ನು ಒದಗಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ, ಇದುವರೆಗೆ 12.03 ಲಕ್ಷ -ಲಾನುಭವಿಗಳನ್ನು ಸೇರಿಸಲಾಗಿದೆ. ವಾಸಸ್ಥಾನ ಕಾನೂನನ್ನು ಅನ್ವಯಿಸಲಾಗಿದೆ. ಮತ್ತು 1990 ರಲ್ಲಿ ಕಾಶ್ಮೀರ ಕಣಿವೆಯಿಂದ ಹೊರಹಾಕಲ್ಪಟ್ಟ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಅವಕಾಶ ಕಲ್ಪಿಸಲಾಗಿದೆ. 6000 ಉದ್ಯೋಗಗಳು ಮತ್ತು 6000 ತಂಗು ದಾಣ ಸೌಲಭ್ಯಗಳನ್ನು ಒದಗಿಸುವ ಕೆಲಸ ಪ್ರಗತಿಯಲ್ಲಿದೆ.
ಸೇಬು ಕೃಷಿಗಾಗಿ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಡಿಬಿಟಿ ಪಾವತಿ ಮತ್ತು ಈ ಯೋಜನೆಯಡಿ ಕೇಂದ್ರ ಖರೀದಿ ಏಜೆನ್ಸಿಯ ಸಾರಿಗೆ ವ್ಯವಸ್ಥೆಯು ಸೇಬಬಿನ ಹಣ್ಣು ಬೆಲೆಯನ್ನು ಸ್ಥಿರಗೊಳಿಸಿದೆ. ಕಾಶ್ಮೀರಿ ಕೇಸರಿಗೆ ಜಿ.ಐ. ಟ್ಯಾಗ್ ದೊರೆತಿದೆ. ಕಾಶ್ಮೀರಿ ಕೇಸರಿಯು ಈಗ ಈಶಾನ್ಯ ರಾಜ್ಯ ಗಳನ್ನೂ ತಲುಪುತ್ತಿದೆ. ಪುಲ್ವಾಮಾದ ಉಖು ಗ್ರಾಮವು ಪೆನ್ಸಿಲ್ ವಾಲಾ ಗಾಂವ್ ಎಂಬ ಹೆಸರು ಪಡೆಯಲು ಸಜ್ಜಾಗಿದೆ. ಶ್ರೀನಗರದ ಬಹುನಿರೀಕ್ಷಿತ ರಾಮ್ ಬಾಗ್ -ಓವರ್ ಅನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಐಐಟಿ ಜಮ್ಮುವಿಗೆ ತನ್ನದೇ ಆದ ಕ್ಯಾಂಪಸ್ ದೊರೆತಿದೆ ಮತ್ತು ಜಮ್ಮುವಿನಲ್ಲಿ ಏಮ್ಸ್ ಕೆಲಸವೂ ಆರಂಭವಾಗಿದೆ. ಅಟಲ್ ಸುರಂಗದ ಕೆಲಸ ಪೂರ್ಣಗೊಂಡು, ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಜಮ್ಮು ಸೆಮಿರಿಂಗ್ ರಸ್ತೆ ಮತ್ತು 8.45 ಕಿಮೀ ಉದ್ದದ ಹೊಸ ಬನಿಹಾಲ್ ಸುರಂಗ ಮಾರ್ಗವನ್ನು ಈ ವರ್ಷ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಭಯೋತ್ಪಾದನೆಯ ಘಟನೆಗಳು ಗಣನೀಯವಾಗಿ ಕ್ಷೀಣಿಸಿವೆ ಮತ್ತು ಕಣಿವೆಯಲ್ಲಿ ಶಾಂತಿ ಮತ್ತು ಭದ್ರತೆಯ ಹೊಸ ವಾತಾವರಣ ಕಂಡುಬಂದಿದೆ.
ಪ್ರವಾಸೋದ್ಯಮವು ತ್ವರಿತವಾಗಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ. 40 ವರ್ಷಗಳಿಂದ ಸ್ಥಗಿತಗೊಂಡಿದ್ದ ಶಾಪುರ – ಕಂಡಿಡ್ಯಾಮ್ ಯೋಜನೆಯ ಕೆಲಸವನ್ನು ಪುನರಾರಂಭಿಸಲಾಗಿದೆ. ರಾಟ್ಲೆ ಜಲವಿದ್ಯುತ್ ಯೋಜನೆಯ ಕೆಲಸವನ್ನೂ ಪುನರಾರಂಭಿಸಲಾಗುತ್ತಿದೆ. ಭಾರತ ಸರಕಾರದ ಕೈಗಾರಿಕಾ ಉತ್ತೇಜನಾ ಯೋಜನೆಯಡಿಯಲ್ಲಿ, ಕೈಗಾರಿಕಾ ಅಭಿವೃದ್ಧಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು ಇದೇ ಮೊದಲು. ಹೊಸ ಕೇಂದ್ರ ಯೋಜನೆಯಡಿ, ಮುಂದಿನ 15 ವರ್ಷಗಳಲ್ಲಿ 28400 ಕೋಟಿ ರು. ಪ್ರೋತ್ಸಾಹಧನವು ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಬಾಗಿಲು ಗಳನ್ನು ತೆರೆಯುತ್ತದೆ.
ಪ್ರಾಥಮಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯ ಹೊರತಾಗಿ, ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಡೈರಿ ಉದ್ಯಮದಲ್ಲಿ ಈ ಯೋಜನೆಯಿಂದ 4..5 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರವು ಇಂದು ವೇಗವಾಗಿ ಮುನ್ನಡೆಯುತ್ತಿದೆ. ಇಂದಿನ ಕಲ್ಪನೆಯ ಜಮ್ಮು ಮತ್ತು ಕಾಶ್ಮೀರವು ನಾಳೆಯ ಮಾದರಿಯಾಗಲಿದೆ.