Saturday, 14th December 2024

ಜಿಲ್ಲೆ ಎಂಬುದು ಹುಣಸೆ ಬೀಜವಾ?

ಪ್ರಚಲಿತ

 ಕೆ.ಬಿ.ರಮೇಶನಾಯಕ 

ಬಡವರು, ದಲಿತರು, ಶೋಷಿತರಿಗೆ ಹತ್ತಾಾರು ಕ್ರಾಾಂತಿಕಾರಕ ಯೋಜನೆಗಳನ್ನ ಜಾರಿಗೆ ತಂದು ಇಂದಿಗೂ ನಾಡಿನ ಜನರ ಮನದಲ್ಲಿ ಮನೆ ಮಾತಾಗಿರುವ ‘ಸಾಮಾಜಿಕ ನ್ಯಾಾಯ’ದ ಹರಿಕಾರ ಡಿ.ದೇವರಾಜ ಅರಸು ಅವರ ಪುಣ್ಯಭೂಮಿಯನ್ನು ಜಿಲ್ಲೆೆಯನ್ನಾಾಗಿ ಮಾಡುವಂತೆ ಪ್ರಸ್ತಾಾಪ ಮಾಡುವ ಮೂಲಕ ಹುಣಸೂರು ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿದೆ. ಅಂದು ‘ಉಳುವವನೇ ಭೂ ಒಡೆಯ’ ಅನ್ನುವ ಜತೆಗೆ ಸಮಾಜದ ಕಟ್ಟಕಡೆಯ ಸಮಾಜಕ್ಕೂ ಮೀಸಲು, ರಾಜಕೀಯದಲ್ಲಿ ಸ್ಥಾಾನಮಾನ ಕಲ್ಪಿಿಸಿಕೊಟ್ಟಿಿದ್ದ ಡಿ.ದೇವರಾಜ ಅರಸು ಹೆಸರನ್ನೇ ಮುಂದಿಟ್ಟುಕೊಂಡು ಜಿಲ್ಲೆೆ ವಿಭಜನೆಯ ಮಾತಿನ ಕೂಗು ಆರಂಭಿಸಿರುವುದು ಸರೀನಾ ಎನ್ನುವ ಪ್ರಶ್ನೆೆ ಈಗ ಎಲ್ಲರಲ್ಲೂ ಕಾಡುತ್ತಿದೆ. ಕೆ.ಆರ್.ನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋತು ಹುಣಸೂರು ಕ್ಷೇತ್ರದಲ್ಲಿ ರಾಜಕೀಯ ಪುನರ್ಜನ್ಮ ಪಡೆದಿದ್ದ ಹಳ್ಳಿಹಕ್ಕಿಯ ಹಾಡು ಅಡಗೂರು ಎಚ್.ವಿಶ್ವನಾಥ್ ಮೈಸೂರು ಜಿಲ್ಲೆೆಯನ್ನು ವಿಭಜಿಸಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆೆಯನ್ನಾಾಗಿ ಮಾಡಬೇಕೆಂದು ಸಿಎಂಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದ್ದಾಾರೆ. ರಾಜಕೀಯ ಲಾಭಕ್ಕಾಾಗಿ ಇಂತಹ ಪ್ರಸ್ತಾಾಪ ಮುಂದಿಟ್ಟು ಜನರಲ್ಲಿ ಗೊಂದಲ ಮೂಡಿಸುವ ಜತೆಗೆ ಅಭಿವೃದ್ಧಿಿಯಲ್ಲೂ ಹಿಂದುಳಿಯಲು ಕಾರಣವಾಗಿದೆ.

ದೇಶಕ್ಕೆೆ ಸ್ವಾಾತಂತ್ರ್ಯ ಸಿಕ್ಕಿಿದರೂ ಮೈಸೂರು ರಾಜ್ಯವನ್ನು ವಿಲೀನಗೊಳಿಸಲು ಹಿಂದೇಟು ಹಾಕಿದ್ದ ಅಂದಿನ ಸಂಸ್ಥಾಾನದ ವಿರುದ್ಧ ಸ್ವಾಾತಂತ್ರ್ಯ ಹೋರಾಟಗಾರರು ಮೈಸೂರು ಚಲೋ ನಡೆಸಿದ್ದರು. ಬಳಿಕ, ಮೈಸೂರು ರಾಜ್ಯ ಕರ್ನಾಟಕವಾಗಿ ಉದಯವಾಗಿತ್ತು ಈಗ ಇತಿಹಾಸದ ಪುಟದಲ್ಲಿ ಸೇರಿಕೊಂಡಿದೆ. ದಕ್ಷಿಣಭಾರತದಲ್ಲೇ ಜನರ ಮನದಲ್ಲಿ ಹಾಸುಹೊಕ್ಕಾಾಗಿ ಉಳಿದಿದ್ದ ಮೈಸೂರು ರಾಜಮನೆತನವರು ಕನ್ನಂಬಾಡಿಕಟ್ಟೆೆ, ಸಿಲ್‌ಕ್‌ ಫ್ಯಾಾಕ್ಟರಿ, ಗಂಧದೆಣ್ಣೆೆ ಕಾರ್ಖಾನೆ, ಮೈಸೂರು ವಿಶ್ವವಿದ್ಯಾಾನಿಲಯ ಸೇರಿದಂತೆ ಅನೇಕಾರು ಸಂಸ್ಥೆೆಗಳನ್ನ ಕಟ್ಟಿದ್ದರು. ಮೈಸೂರಿನಿಂದ 1939ರಲ್ಲಿ ಬೇರ್ಪಟ್ಟ ಮಂಡ್ಯ ಜಿಲ್ಲೆೆಯು ಪ್ರತ್ಯೇಕವಾಗಿದ್ದರಿಂದ ಕನ್ನಂಬಾಡಿಕಟ್ಟೆೆ ತಾಂತ್ರಿಕವಾಗಿ ಮಂಡ್ಯಗೆ ಸೇರಿಕೊಂಡಿದೆ. ಇದಾದ ಬಳಿಕ 1998ರಲ್ಲಿ ಮೈಸೂರು ಜಿಲ್ಲೆೆಗೆ ಸೇರಿದ್ದ ಚಾಮರಾಜನಗರ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರ ಕಾಲದಲ್ಲಿ ಪ್ರತ್ಯೇಕ ಜಿಲ್ಲೆೆಯಾಯಿತು. ನಾಲ್ಕು ಜಿಲ್ಲೆೆಗಳನ್ನ ಸೇರಿಸಿ ಜಿಲ್ಲೆೆಯನ್ನಾಾಗಿ ಮಾಡಿದ ಬಳಿಕ ಎರಡು ದಶಕ ಕಳೆದರೂ ಅಭಿವೃದ್ಧಿಿ ಗಗನಕುಸುಮವಾಗಿದೆ. ಅಪಾರ ವನ್ಯಸಂಪತ್ತು, ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಾಮಿಬೆಟ್ಟ, ಬಂಡೀಪುರ ಹೀಗೆ ಅನೇಕ ವೈವಿಧ್ಯತೆ, ಪ್ರವಾಸಿತಾಣಗಳನ್ನು ಹೊಂದಿದ್ದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿಿ ಕಂಡಿಲ್ಲ ಎನ್ನುವುದನ್ನು ಗಮನಿಸಬೇಕಾದ ಸಂಗತಿಯಾಗಿದೆ.

ಏಕೆಂದರೆ ಜಿಲ್ಲೆೆಯನ್ನು ಪ್ರತಿನಿಧಿಸಿದ ರಾಜಕಾರಣಿಗಳು ರಾಜ್ಯಮಟ್ಟದಲ್ಲಿ ಅಷ್ಟೇನೂ ಪ್ರಭಾವ ಹೊಂದಿರದ ಕಾರಣ ನಿರೀಕ್ಷಿತ ಅಭಿವೃದ್ಧಿಿ ಕಾಣಲಿಲ್ಲ. ಸದಾ ಹೋರಾಟಕ್ಕೆೆ ಸೈ ಅನ್ನುವ ವಾಟಾಳ್ ನಾಗರಾಜ್ ಅವರು ಜಿಲ್ಲೆೆಯ ಘೋಷಣೆಗೆ ಮಾಡಿದ ಹೋರಾಟ, ಒತ್ತಡದ ವಿಚಾರವನ್ನ ಮೆಚ್ಚಬೇಕಾದರೂ ಅಭಿವೃದ್ಧಿಿ ವಿಚಾರದಲ್ಲಿ ಶೂನ್ಯ. ಶಾಸಕರಾಗಿದ್ದಾಾಗ ಜಿಲ್ಲಾಾ ಕೇಂದ್ರದಲ್ಲಿ ಇರದೆ ಬೆಂಗಳೂರು ಕೇಂದ್ರ ಮಾಡಿಕೊಂಡು ಬರಿ ಬಂದು ಹೋಗಿ ಮಾಡುತ್ತಿದ್ದರಿಂದಾಗಿ ಜಿಲ್ಲೆೆಯ ಜನರೇ ಅವರನ್ನ ಶಾಶ್ವತವಾಗಿ ಬೆಂಗಳೂರಲ್ಲೇ ಇರುವಂತೆ ಮಾಡಿದ್ದನ್ನು ನೆನಪಿಸಬೇಕಾಗಿದೆ. ಅದರಲ್ಲೂ ‘ಹಿಂದುಳಿದ ಗಡಿ ಜಿಲ್ಲೆೆ ಎನ್ನುವ ಹಣೆಪಟ್ಟಿ ತಗೆಯಲು ಚಾಮರಾಜನಗರ ಜಿಲ್ಲಾಾ ಕೇಂದ್ರವೇ’ ಸಾಕ್ಷಿಯಾಗಿದೆ. ಆರ್ಥಿಕ ಚಟುವಟಿಕೆಯಲ್ಲಿ ಕೊಳ್ಳೇಗಾಲ ಚೆನ್ನಾಾಗಿದ್ದರೆ, ಚಾಮರಾಜನಗರ ಜಿಲ್ಲಾ ಕೇಂದ್ರ ನಿರೀಕ್ಷಿತ ವಾಣಿಜ್ಯ ಚಟುವಟಿಕೆ ಕೇಂದ್ರವಾಗಿಲ್ಲ. ಈ ತಾಲೂಕಿನ ಜನರೇ ಮೈಸೂರಿನತ್ತ ಉದ್ಯೋೋಗಕ್ಕೆೆ ಗುಳೆ ಬರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಹೆಸರಿಗೆ ಜಿಲ್ಲಾಾ ಕೇಂದ್ರ ಅನ್ನಿಸಿಕೊಂಡರೂ ಎಲ್ಲದಕ್ಕೂ ಮೈಸೂರು ಆಶ್ರಯಿಸಿರುವುದು ಇಂದಿಗೂ ಜೀವಂತ ಉದಾಹರಣೆಯಾಗಿದೆ.

‘ದೇವರಾಜ ಅರಸು ಪ್ರತಿಮೆ ಸಾಧ್ಯವಾಗಲಿಲ್ಲ’ ಇಂತಹ ಹೊತ್ತಲ್ಲೇ ಶೋಷಿತ ಸಮುದಾಯದ ನಾಯಕ ಡಿ.ದೇವರಾಜ ಅರಸು ಅವರ ಪುಣ್ಯಭೂಮಿ, ಕರ್ಮಭೂಮಿಯೂ ಆಗಿರುವ ‘ಹುಣಸೂರು ಕೇಂದ್ರವನ್ನ ಪ್ರತ್ಯೇಕ ಜಿಲ್ಲೆೆ’ಯನ್ನಾಾಗಿ ಮಾಡುವಂತೆ ಇಟ್ಟಿರುವ ಪ್ರಸ್ತಾಾಪ ಮತ್ತೊೊಮ್ಮೆೆ ಮುನ್ನೆೆಲೆಗೆ ಬರುವಂತೆ ಮಾಡಿದೆ. ಕಳೆದ ನಾಲ್ಕು ದಶಕದಿಂದ ರಾಜಕಾರಣದಲ್ಲಿರುವ ಅಡಗೂರು ಎಚ್.ವಿಶ್ವನಾಥ್ ಕಾಂಗ್ರೆೆಸ್ ಸರಕಾರದಲ್ಲಿ ಸಚಿವರಾಗಿರುವ ಜತೆಗೆ ಜಿಲ್ಲಾಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದುವರೆಗೂ ಮೈಸೂರು ನಗರದಲ್ಲಿ ಡಿ.ದೇವರಾಜ ಅರಸು ಭವನವನ್ನಾಾಗಲೀ ಅಥವಾ ಅವರದ್ದೇ ಹೆಸರಿನ ದೇವರಾಜ ಅರಸು ರಸ್ತೆೆ ಇದ್ದರೂ ಒಂದು ಪ್ರತಿಮೆ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಇದಿಷ್ಟೇ ಅಲ್ಲದೆ ಹುಣಸೂರು ತಾಲೂಕಿನ ಕಲ್ಲಹಳ್ಳಿ ಅಥವಾ ಅರಸು ಜನಿಸಿದ್ದ ಪಿರಿಯಾಪಟ್ಟಣ ತಾಲೂಕಿನ ಸ್ವಗ್ರಾಾಮ ಇಂದು ಅಭಿವೃದ್ಧಿಿ ಹೊಂದಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆಯ ಫಲವಾಗಿತ್ತೆೆ ಹೊರತು ವಿಶ್ವನಾಥ್ ಅವರ ಪ್ರಯತ್ನವಾಗಿರಲಿಲ್ಲ. ಹೀಗಿದ್ದರೂ, ಈಗ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಹೊತ್ತಲ್ಲೇ ವಿಭಜನೆಯ ಮಾತು ಹೇಳಿರುವುದಲ್ಲದೆ ಅದಕ್ಕೆೆ ಡಿ.ದೇವರಾಜ ಅರಸು ಹೆಸರನ್ನೇ ಮುಂದಿಟ್ಟುಕೊಂಡು ಪ್ರಸ್ತಾಾಪ ಮಾಡಿರುವುದು ಒಳಮರ್ಮ ಅರಿಯಬೇಕಾಗಿದೆ. ಇದುವರೆಗೂ ಕೆ.ಆರ್.ನಗರ ಕ್ಷೇತ್ರದಿಂದ ಆಯ್ಕೆೆಯಾಗಿ ಬರುತ್ತಿಿದ್ದ ವಿಶ್ವನಾಥ್, ಸಾ.ರಾ.ಮಹೇಶ್ ವಿರುದ್ಧ ಸೋಲುಂಡ ಬಳಿಕ ಸಂಸದರಾಗಿ ಒಂದು ಬಾರಿ ಆಯ್ಕೆೆಯಾಗಿದ್ದರು. ನಂತರ ಪ್ರತಾಪ್ ಸಿಂಹ ವಿರುದ್ಧ ಸೋಲುಂಡು ರಾಜಕೀಯವಾಗಿ ಅಂತ್ಯಗೊಂಡರು ಅನ್ನುವ ಹೊತ್ತಿಿಗೆ ಜೆಡಿಎಸ್‌ಗೆ ಸೇರಿ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ರಾಜಕೀಯ ಮರುಹುಟ್ಟು ಪಡೆದಿದ್ದರು.

ಈ ಶಾಸಕ ಸ್ಥಾಾನ ಅವಧಿ ಮುಗಿಯುವ ತನಕ ಇರದೇ ಶಾಸಕ ಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದಲ್ಲದೆ ಕಾಂಗ್ರೆೆಸ್-ಜೆಡಿಎಸ್ ದೋಸ್ತಿಿಸರಕಾರದ ಪತನಕ್ಕೂ ಮಂಗಳ ಹಾಡಿದ್ದರು. ಶಾಸಕತ್ವದ ಅನರ್ಹತೆಯ ವಿಚಾರ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿರುವ ಹೊತ್ತಲ್ಲೇ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಅಡಗೂರು ಎಚ್.ವಿಶ್ವನಾಥ್ ಹುಣಸೂರು ಜಿಲ್ಲೆೆಯನ್ನಾಗಿ ಮಾಡುವಂತೆ ಪ್ರಸ್ತಾಾಪ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಭೌಗೋಳಿಕವಾಗಿ ಸಾಧುವಲ್ಲ; ಅನರ್ಹ ಶಾಸಕ ವಿಶ್ವನಾಥ್ ಪ್ರಸ್ತಾಪಿಸಿರುವ ಹುಣಸೂರನ್ನ ದೇವರಾಜ ಅರಸು ಜಿಲ್ಲೆೆಯನ್ನಾಾಗಿ ಮಾಡುವ ವಿಚಾರ ಭೌಗೋಳಿಕವಾಗಿ ಸಾಧುವಲ್ಲ. ಮೈಸೂರು ತಾಲೂಕಿನ ಇಲವಾಲ ದಾಟಿದರೆ ಹುಣಸೂರು ತಾಲೂಕು ಗಡಿ ಬರಲಿದೆ. ಮೈಸೂರು ನಗರ ದಿನದಿಂದ ದಿನಕ್ಕೆೆ ಬೆಳೆದು ಬಿಳಿಕೆರೆ ತನಕವೂ ಖಾಸಗಿ ಬಡಾವಣೆಗಳು ತಲೆ ಎತ್ತಲುಕಾದಿದೆ. ಈ ಎಲ್ಲಾಾ ಬಡಾವಣೆಗಳು ಮುಂದೆ ಮೈಸೂರು ನಗರಾಭಿವೃದ್ಧಿಿ ಪ್ರಾಧಿಕಾರಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಹೊತ್ತು ಅನೇಕರು ಕೋಟ್ಯಂತರ ರು. ಬಂಡವಾಳ ಹಾಕಿ ಲೇಔಟ್ ನಿರ್ಮಾಣ ಮಾಡಿದ್ದಾಾರೆ. ಅಷ್ಟೇ ಏಕೇ ಬಿಳಿಕೆರೆ ಒಂದು ರೀತಿ ಮೈಸೂರಿಗೆ ಹತ್ತಿರದಂತೆ ಕಾಣುತ್ತದೆ. ಇನ್ನು ಪಿರಿಯಾಪಟ್ಟಣ ಹಾಗೆ ನೋಡಿದರೆ ಮೈಸೂರಿಗಿಂತ ಕೊಡಗು ಜಿಲ್ಲೆೆಗೆ ಹತ್ತಿರವಾಗಿ ಬಿಡುತ್ತದೆ. ಮತ್ತೊೊಂದು ಕಡೆ ಕೆ.ಆರ್.ನಗರ ತಾಲೂಕಿನ ಹಲವು ಹಳ್ಳಿಗಳು ಹೊಳೆನರಸೀಪುರಕ್ಕೆೆ ಹೊಂದಿಕೊಂಡಂತೆ ಇದೆ. ಎಚ್.ಡಿ.ಕೋಟೆ ತಾಲೂಕು ಮೈಸೂರು-ಕೇರಳದ ಕೊಂಡಿಯಾಗಿದೆ. ಹೀಗಾಗಿ, ವಿಶ್ವನಾಥ್ ಪ್ರಸ್ತಾಾಪಿಸಿರುವ ತಾಲೂಕುಗಳು ಭೌಗೋಳಿಕವಾಗಿ ಇರುವ ಕಾರಣ ಪ್ರಸ್ತಾಾಪಿತ ದೇವರಾಜ ಅರಸು ಜಿಲ್ಲೆೆಗೆ ಸೇರಿಸಲು ಸಾಧ್ಯವಾಗದು.

ಒಂದು ವೇಳೆ ಸೇರಿಸಿದರೂ ತಾಲೂಕು ಕೇಂದ್ರವಾಗಿದ್ದುಕೊಂಡೇ ಹಲವು ಸಮಸ್ಯೆೆ ಎದುರಿಸುತ್ತಿರುವ ಜತೆಗೆ ಮತ್ತಷ್ಟು ಸಮಸ್ಯೆೆಗಳು ಬೆನ್ನಿಿಗೆ ಅಂಟಿಕೊಂಡು ಕೂರುತ್ತದೆ ಹೊರತು ಯಾವುದೇ ಪ್ರಯೋಜನವಾಗದು. ಮಾಜಿ ಸಚಿವ ವಿಶ್ವನಾಥ್ ಅವರು ಸಂಸದರಾಗಿದ್ದಾಾಗಲೋ ಅಥವಾ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದಾಾಗ ಈ ಮಾತನ್ನು ಹೇಳಿಕೊಂಡು ಬಂದಿದ್ದರೇ ಸ್ವಲ್ಪ ನಂಬಬಹುದಿತ್ತು. ಆದರೆ, ಈಗ ದಿಢೀರನೇ ಜಿಲ್ಲೆೆಯ ಮಾತನ್ನು ಹೇಳಿಕೊಂಡಿದ್ದಾಾರೆ. ಡಿ.ದೇವರಾಜ ಅರಸು ಹೆಸರನ್ನು ಇಡಲು ಯಾರ ವಿರೋಧವಿಲ್ಲ. ಆದರೆ, ಯಾವುದೇ ಆರ್ಥಿಕ ಚಟುವಟಿಕೆಯೇ ಇಲ್ಲದ ಕೇಂದ್ರವನ್ನ ಜಿಲ್ಲೆೆಯನ್ನಾಾಗಿ ಮಾಡಿದರೆ ಎಷ್ಟು ಸಮಸ್ಯೆೆಯಾಗಲಿದೆ ಅನ್ನುವುದಕ್ಕೆೆ ಇಂದಿಗೂ ಕುಂಟುತ್ತಾಾ ಸಾಗಿರುವ ಜಿಲ್ಲೆೆಗಳೇ ಕಾಣಬಹುದು. ಹಾಗಾಗಿ ರಾಜಕೀಯದ ವಿಚಾರಕ್ಕಾಾಗಿ ಇಂತಹ ಜಿಲ್ಲಾಾ ವಿಭಜನೆಯ ಪ್ರಸ್ತಾಾಪ ಮಾಡದೆ ವಾಸ್ತವಿಕವಾಗಿ ಆಲೋಚನೆ ಮಾಡಿದರೆ ಒಳಿತಾಗಲಿದೆ.

ಜಿಲ್ಲೆೆ ಮಾಡಬೇಕೆಂಬ ವಿಚಾರದಲ್ಲಿ ಅನೇಕರು ಸಮಸ್ಯೆೆಗಳು ಕಣ್ಣ ಮುಂದೆ ಕಾಣಿಸಿಕೊಂಡರೆ ಉತ್ತಮ. ಯಾವುದೋ ಒಂದೆರಡು ಕಚೇರಿ ತೆರೆದು ನಮ್ಮದು ಜಿಲ್ಲಾಾ ಕೇಂದ್ರ ಅಂಥ ಹೇಳಿಬಿಟ್ಟು ಬೌಂಡರಿ ಹಾಕಿಕೊಂಡರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ಮತ್ತಷ್ಟು ಸಮಸ್ಯೆೆಗಳೇ ಕಾರಣವಾಗಿದೆ. ಸರಗೂರು ತಾಲೂಕು ಕೇಂದ್ರವಾಗಿ ಮೂರು ವರ್ಷ ಕಳೆದರೂ ಇಂದಿಗೂ ಸರಕಾರಿ ದಾಖಲೆಯಲ್ಲಿ ಎಚ್.ಡಿ.ಕೋಟೆ ತಾಲೂಕು ಅಂತ ಬೇರ್ಪಡಿಸಿ ವ್ಯವಹಾರ ಮಾಡಲು ತಾಂತ್ರಿಕ ಸಮಸ್ಯೆೆಗಳನ್ನ ನಿವಾರಿಸಲು ಸಾಧ್ಯವಾಗದೆ ಇರುವ ಹೊತ್ತಲ್ಲೇ ಪ್ರತ್ಯೇಕ ವಿಭಜನೆಯ ಕೂಗು ಹುಟ್ಟು ಹಾಕಿರುವುದು ಸರಿ ಕಾಣದು. ಸದಾ ವಿವಾದಾತ್ಮಕ ವಿಚಾರ, ಹೇಳಿಕೆ ಕೊಟ್ಟು ಸದಾ ಚಾಲ್ತಿಿಯಲ್ಲಿರುವ ವಿಶ್ವನಾಥ್ ಮಾತು ಉಪ ಚುನಾವಣೆಗಷ್ಟೇ ಸೀಮಿತವಾದಂತೆ ಇರಬಾರದು. ಏಕೆಂದರೆ ಕ್ಷೇತ್ರದ ಜನರ ದನಿಯಾಗಿ ಇರುವ ಬದಲು ಎಲ್ಲೋೋ ಮೂಲೆಯಲ್ಲಿದ್ದು ಮತದಾರರಿಗೆ ಪತ್ರ ಬರೆದಿರುವ ಕ್ಷಣಗಳು ಕಣ್ಣ ಮುಂದೆ ಇರುವಾಗ ಪ್ರತ್ಯೇಕ ಜಿಲ್ಲೆೆಯ ಮಾತು ಸಮಂಜಸವಲ್ಲ, ಜನರ ಆಕ್ರೋೋಶ, ವಿಭಜನೆಯ ವಿರುದ್ಧದ ಕೂಗು ಎದ್ದೇಳುವ ಮುನ್ನ ಇತಿಶ್ರೀ ಹಾಡಬೇಕಿದೆ.

ಜಿಲ್ಲೆೆ ಮಾಡಬೇಕೆಂಬ ವಿಚಾರದಲ್ಲಿ ಅನೇಕರು ಸಮಸ್ಯೆೆಗಳು ಕಣ್ಣ ಮುಂದೆ ಕಾಣಿಸಿಕೊಂಡರೆ ಉತ್ತಮ. ಯಾವುದೋ ಒಂದೆರಡು ಕಚೇರಿ ತೆರೆದು ನಮ್ಮದು ಜಿಲ್ಲಾಾ ಕೇಂದ್ರ ಅಂತ ಹೇಳಿಬಿಟ್ಟು ಬೌಂಡರಿ ಹಾಕಿಕೊಂಡರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ಮತ್ತಷ್ಟು ಸಮಸ್ಯೆೆಗಳೇ ಕಾರಣವಾಗಿದೆ. ಸರಗೂರು ತಾಲೂಕು ಕೇಂದ್ರವಾಗಿ ಮೂರು ವರ್ಷ ಕಳೆದರೂ ಇಂದಿಗೂ ಸರಕಾರಿ ದಾಖಲೆಯಲ್ಲಿ ಎಚ್.ಡಿ.ಕೋಟೆ ತಾಲೂಕು ಅಂತ ಬೇರ್ಪಡಿಸಿ ವ್ಯವಹಾರ ಮಾಡಲು ತಾಂತ್ರಿಿಕ ಸಮಸ್ಯೆೆಗಳನ್ನ ನಿವಾರಿಸಲು ಸಾಧ್ಯವಾಗದೆ ಇರುವ ಹೊತ್ತಲ್ಲೇ ಪ್ರತ್ಯೇಕ ವಿಭಜನೆಯ ಕೂಗು ಹುಟ್ಟು ಹಾಕಿರುವುದು ಸರಿ ಕಾಣದು.