Thursday, 12th December 2024

ಜಿನ್ನಾಗಿದ್ದ ದೂರದೃಷ್ಟಿ ಗಾಂಧಿಗೇಕಿರಲಿಲ್ಲ ?

ಹಂಪಿ ಎಕ್ಸ್’ಪ್ರೆಸ್ 

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಅಲ್ಲಿಂದ ಇಲ್ಲಿಯವರೆಗೂ ಈ ಜಾತ್ಯತೀತವೆನ್ನುವ ಪರಿಕಲ್ಪನೆ ರೋಗಗ್ರಸ್ಥ ಮನಸುಗಳಂತೆ ಕೊಳೆತು ನಾರುತ್ತಿದೆ. ಪ್ರಸ್ತುತ ಈ ಪದಕ್ಕೆ ಇರುವ ಒಂದೇ ಅರ್ಥ ವೆಂದರೆ ಹಿಂದೂಗಳನ್ನು ಮತ್ತು ಅವರ ನಂಬಿಕೆ ಸ್ವಾತಂತ್ರ್ಯ, ಹಿಂದೂಗಳ ಹಕ್ಕುಗಳನ್ನು ಹತ್ತಿಕ್ಕಲು ಮೇಲೆ ಎತ್ತಿಕಟ್ಟಲು ಬಲು ಸುಲಭದ ಸಾಧನ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಾಲೇಜಿನ ನೌತಾನ್‌ಲಾಲ್ ಎಂಬ ಹಿಂದೂ ಶಿಕ್ಷಕನಿಗೆ ಪಾಕಿಸ್ತಾನದ ನ್ಯಾಯಾಲಯ ಮೊನ್ನೆ ಜೀವಾವಧಿ ಶಿಕ್ಷೆ ಮತ್ತು ಐವತ್ತು ಸಾವಿರ ರು. ದಂಡ ವಿಧಿಸಿದೆ. ಇದಕ್ಕೆ ಕಾರಣವೇನು ಗೊತ್ತೇ? 2019ರಲ್ಲಿ ಆ ಶಿಕ್ಷಕ ಧರ್ಮ ನಿಂದನೆ ಮಾಡಿದ್ದಾನೆಂದು. ಹಾಗೆಂದು ಆರೋಪಿಸಿ ಪಾಕ್‌ನ ಬಹುಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ವಿಚಾರ ಣಾಧೀನ ಖೈದಿಯಾಗಿ ಜೈಲಿನಲ್ಲಿಟ್ಟು ವಿಚಾರಣೆ ನಡೆಸಲಾಗಿತು. ಮೊನ್ನೆ ಮಂಗಳವಾರವಷ್ಟೇ ಈ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ.

ಇದು ಇಷ್ಟಕ್ಕೇ ಮುಗಿದಿದ್ದಲ್ಲ, ಅಂದು ಆತ ಧರ್ಮ ನಿಂದನೆ ಮಾಡಿದ್ದಾನೆಂದು ಬಂಧಿಸಿದ ದಿನವೇ ಉಗ್ರ ಪ್ರತಿಭಟನೆಗಳಾಗಿ ಅಲ್ಲಿನ ಜಿಹಾದಿ ಮತಾಂಧರು ‘ಸಚೋ ಸತ್ರಂ ಧಾಮ್’ ಎಂಬ ಹಿಂದೂ ದೇವಾಲಯಕ್ಕೆ ನುಗ್ಗಿ ದಾಂದಲೆ ನಡೆಸಿ ವಿಗ್ರಹಗಳನ್ನು ಹಾನಿಗೊಳಿಸಿದ್ದಾರೆ. ಧರ್ಮ ನಿಂದನೆಗೆ ಪಾಕಿಸ್ತಾನದಲ್ಲಿ ಕಾನೂನು ಗಳಿದ್ದರೂ ಕ್ರಮ ಕೈಗೊಳ್ಳುವುದು ಮಾತ್ರ ಅಲ್ಲಿನ ಜಿಹಾದಿಗಳೇ. ಇದೇ ಕಾರಣಕ್ಕೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಆಸ್ತಿ- ಮನೆ, ಉದ್ದಮೆಗಳನ್ನು ಸುಟ್ಟು ಬದುಕಿಲ್ಲದಂತೆ ಮಾಡಿದ್ದಾರೆ. ಇನ್ನು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹಿಂಸಾಚಾರ ಎಸಗುವುದು ಅಲ್ಲಿ ಆಶ್ಚರ್ಯದ ಸಂಗತಿಯೇನಲ್ಲ. ಮೊನ್ನೆಯಷ್ಟೇ ಧರ್ಮ ಅವಹೇಳನದ ಕಾರಣಕ್ಕೆ ಲಂಕಾ ಮೂಲದ ವ್ಯಾಪಾರಿಯೊಬ್ಬನನ್ನು ಜನ ಸಮೂಹವೇ ಬಡಿದು ಕೊಂದು ಸುಟ್ಟು ಹಾಕಿದೆ.

ಇನ್ನು ವರದಿಯಾಗದ ಪ್ರಕರಣಗಳು ಅವೆಷ್ಟೋ?! ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಕೇವಲ ತೊಂಬತ್ತು ಲಕ್ಷದಷ್ಟಿದೆ. ಈಗಲೂ ಅವರು ತಮ್ಮ ಧಾರ್ಮಿಕ ಹಕ್ಕು ಮತ್ತು ಆಚರಣೆಗಳಿಗಾಗಿ ಹೆಣಗಾಡುವ, ಮಾನ-ಮರ್ಯಾದೆ, ಕೊನೆಗೆ ಉಸಿರನ್ನೂ ಕೈಯ್ಯಲ್ಲಿ ಹಿಡಿದು ಬದುಕುವ ಆತಂಕಕಾರಿ ಸ್ಥಿತಿ ಇದೆ. ಅಷ್ಟರ ಮಟ್ಟಿಗೆ
ಪಾಕಿಸ್ತಾನದಲ್ಲಿ ಪರಧರ್ಮ ಸಹಿಷ್ಣುತೆ ಎಂಬುದು ಘೋರ ಮತ್ತು ಭಯಾನಕ ಸ್ಥಿತಿಯಲ್ಲಿದೆ. ಆದರೆ ನಮ್ಮ ದೇಶದ ಬೆಳವಣಿಗೆಗಳನ್ನು ಗಮನಿಸಿದರೆ ಭಾರತ ಎಷ್ಟೊಂದು ಉದಾರ ಮನೋಭಾವದ ಸಹಿಷ್ಣು ದೇಶ ಎಂಬ ಬಗ್ಗೆ ಹೆಮ್ಮೆ ಮೂಡುತ್ತದೆ.

ಇಲ್ಲಿ ಹಿಂದೂಗಳಾಗಿಯೇ ಜನಿಸಿದ ಕೆಲ ಅಯೋಗ್ಯ ಕಾವಿಧಾರಿಗಳು, ಎಡಗೈ ನೆಕ್ಕುವ ಸಾಹಿತಿಗಳು, ಚಿಂತಕರೆಂದುಕೊಳ್ಳುವ ಶತ ಮೂರ್ಖರು, ಪ್ರಾಧ್ಯಾಪಕ ಮಟ್ಟದಲ್ಲಿರುವವರೇ ಹಿಂದೂ ದೇವರನ್ನು, ನಂಬಿಕೆಯನ್ನು ಅವಹೇಳನ ಮಾಡಿ ತಮ್ಮ ತಲೆಯಲ್ಲಿ ಮೆದುಳಿನ ಬದಲಾಗಿ ಹೊಲಸು ಇದೆ ಎಂಬುದನ್ನು  ಸಾಬೀತು ಪಡಿಸುತ್ತಿರುತ್ತಾರೆ. ಇಂಥ ಮತಿಗೇಡಿಗಳನ್ನು ಸಹಿಸಿಕೊಂಡು ಅವರಿಗೆ ಪೊಲೀಸ್ ಭದ್ರತೆ ನೀಡಿ ಸಾರ್ವಜನಿಕರ ಹಣ ವ್ಯಯಿಸಲಾಗುತ್ತಿರುವುದು ನಮ್ಮ ಹೆಗ್ಗಳಿಕೆ?!

ಧರ್ಮನಿಂದನೆ ಹಾರಲಿ, ಮೊನ್ನೆ ಮೊನ್ನೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮರಣಹೊಂದಿದಾಗ ಜಾಲತಾಣಗಳಲ್ಲಿ ಸ್ಮೈಲಿಗಳನ್ನು ಹಾಕಿ ಸಂಭ್ರಮಿಸಿದ ರಲ್ಲ, ಅವರಲ್ಲಿ ಎಷ್ಟು ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲಿಗೆ ಹಾಕಲಾಯಿತು? ಇದುವರೆಗೆ ಹಿಂದೂ ಧರ್ಮ  ವಹೇಳನ ಮಾಡಿದ ಒಬ್ಬನನ್ನಾದರೂ ಬಂಧಿಸಿ ಶಿಕ್ಷೆ ನೀಡಲಾಗಿದೆಯೇ? ಪಾಕಿಸ್ತಾನ ಸೃಷ್ಟಿಸಿಕೊಂಡ ಮಹಮದ್ ಅಲಿ ಜಿನ್ನಾ ಹೇಳುತ್ತಾರೆ- ‘ಬೇಡಪ್ಪಾ ಗಾಂಧಿಜೀ, ಹಿಂದೂ-ಮುಸಲ್ಮಾನರ ಪರಸ್ಪರ ನಂಬಿಕೆಗಳು, ಬದುಕಿನ ಶೈಲಿಗಳು ವಿರುದ್ಧ ದಿಕ್ಕಿನಲ್ಲಿವೆ. ಇದು ಯಾವತ್ತಿಗೂ ಸರಿ ಹೊಂದುವುದಿಲ್ಲ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಅರಿಷಿಣ ಕುಂಕುಮ ಕೊಟ್ಟು ಭಾರತಕ್ಕೆ ಕಳುಹಿಸುತ್ತೇವೆ. ಭಾರತದಲ್ಲಿರುವ ಮುಸಲ್ಮಾನರನ್ನು ತಾಂಬೂಲ ಕೊಟ್ಟು ಪಾಕಿಸ್ತಾನಕ್ಕೆ ಕಳುಹಿಸಿಬಿಡಿ. ನಮ್ಮದು ಇಸ್ಲಾಂ, ನಿಮ್ಮದು ಹಿಂದೂ ಧರ್ಮಾಧಾರಿತ ರಾಷ್ಟ್ರವೆಂದು ಘೋಷಿಸಿಕೊಳ್ಳೋಣ’ ಎಂದು ಗಿಣಿಗೆ ಹೇಳಿದಂತೆ ಜಿನ್ನಾ ತಿಳಿ ಹೇಳುತ್ತಾನೆ.

ಆದರೆ ಗಾಂಧೀಜಿ ಕೇಳುವುದಿಲ್ಲ. ನೀನು ಬೇಕಾದರೆ ಹಿಂದೂಗಳನ್ನು ಏನಾದರು ಮಾಡಿಕೋ, ಭಾರತದಲ್ಲಿರುವ ಮುಸಲ್ಮಾನರು ಮಾತ್ರ ನಮ್ಮ ಸೋದರರು,
ಅವರು ಇಲ್ಲೇ ಇರಲಿ ಎಂಬರ್ಥದಲ್ಲಿ ಹಠಕ್ಕೆ ಬೀಳುತ್ತಾರೆ. ಹೀಗೆ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಇಸ್ಲಾಂ ರಾಷ್ಟ್ರವಾದರೆ, ಭಾರತ ಹಿಂದೂ ರಾಷ್ಟ್ರವಾಗಿ ಅಖಂಡ ಭಾರತ ಎರಡು ಹೋಳಾಗುತ್ತದೆ. ಉಲ್ಲೇಖಾರ್ಹ ಸತ್ಯವೆಂದರೆ ಸಂವಿಧಾನದ ಸಭೆಯಲ್ಲಿ ಸೆಕ್ಯುಲರ್ ಪದವನ್ನು ಸೇರಿಸುವ ಪರಿಕಲ್ಪನೆಯನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಸ್ವತ: ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಮತ್ತು ನೆಹರು ಅವರೇ ವಿರೋಧಿಸುತ್ತಾರೆ.

ಹೀಗಾಗಿ ೧೯೪೮ರಲ್ಲಿ ಧರ್ಮಾಧಾರಿತವಾಗಿ ಬಹುಸಂಖ್ಯಾತ ಹಿಂದೂಗಳ ದೇಶವೆಂದು ಗುರುತಿಸಿಕೊಂಡಿದ್ದ ಭಾರತ ‘ಸೆಕ್ಯುಲರ್’ ಆಗಿದ್ದು ಇಂದಿರಾಗಾಂಧಿ ಕಾಲದಲ್ಲಿ. ಮೂವತ್ತು ವರ್ಷಗಳ ನಂತರ ೧೯೭೬ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯ ಸರ್ವಾಧಿಕಾರದ ಹುಚ್ಚಿಗೆ ಬಿದ್ದು, ಸಂವಿಧಾನ ೪೨ನೇ ಬಾರಿಗೆ
ತಿದ್ದುಪಡಿಗೊಳಪಟ್ಟು ಸಂವಿಧಾನದೊಳಗೆ ‘ಜಾತ್ಯತೀತ’ ಪದವನ್ನು ಸೇರಿಸಲಾಯಿತು. ಆ ಮೂಲಕ ತಂದೆ ನೆಹರು ಒಪ್ಪಿಕೊಳ್ಳದೇ ಹೋದ ಜಾತ್ಯತೀತತೆಯನ್ನು ಇಂದಿರಮ್ಮ ಅಪ್ಪಿಕೊಂಡರು.

ಅಲ್ಲಿಂದ ಇಲ್ಲಿಯವರೆಗೂ ಈ ಜಾತ್ಯತೀತವೆನ್ನುವ ಪರಿಕಲ್ಪನೆ ರೋಗಗ್ರಸ್ಥ ಮನಸುಗಳಂತೆ ಕೊಳೆತು ನಾರುತ್ತಿದೆ. ಪ್ರಸ್ತುತ ಈ ಪದಕ್ಕೆ ಇರುವ ಒಂದೇ ಅರ್ಥವೆಂದರೆ ಹಿಂದೂಗಳನ್ನು ಮತ್ತು ಅವರ ನಂಬಿಕೆ ಸ್ವಾತಂತ್ರ್ಯ, ಹಕ್ಕುಗಳನ್ನು ಹತ್ತಿಕ್ಕಲು ಮತ್ತು ಅಲ್ಪಸಂಖ್ಯಾತರನ್ನು ದಾರಿತಪ್ಪಿಸಿ ಅವರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲು ಬಲು ಸುಲಭದ ಸಾಧನ. ಅದರಲ್ಲೂ ಹಿಂದೂಗಳೇ ಆಗಿರುವ ಡೋಂಗಿ ರಾಜಕಾರಣಿಗಳು, ಬುದ್ಧಿಜೀವಿಗಳು, ಕೆಲ ತಲೆಕೆಟ್ಟ ನಟರು, ಹೊಟ್ಟೆಪಾಡಿನ ಹೋರಾಟಗಾರರಿಗೆಲ್ಲ ಇದೊಂಥರ ಗರ್ಭನಿರೋಧಕ ಸಾಧನದಂತೆ ಅನಿಸಿಬಿಟ್ಟಿದೆ.

ತಮಗೆ ಸಾಕಷ್ಟು ಸುಖ, ಖ್ಯಾತಿ, ಅಧಿಕಾರ, ಪದವಿ ಸಿಗಬೇಕು. ಆದರೆ ಅದರ ಅಡ್ಡಪರಿಣಾಮ ಮಾತ್ರ ಬಹುಸಂಖ್ಯಾತ ಹಿಂದೂಗಳಿಗೆ ಆಗಬೇಕು ಎಂಬ ಧೋರಣೆಯಲ್ಲೇ ಈ ಪದವನ್ನು ಬಳಸಿ ಬಿಸಾಡಲಾಗುತ್ತಿದೆ. ಇಂದಿನ ಹಿಜಾಬ್ ಪ್ರಕರಣವನ್ನೇ ನೋಡಿ, ಮೊದಲಿಗೆ ಆರು ವಿದ್ಯಾರ್ಥಿನಿಯರು ತರಗತಿಯೊಳಗೂ ಹಿಜಾಬ್ ಬೇಕು ಎಂದು ನಿಂತರು. ಆಗ ಯಾವ ಪುಟಗೋಸಿ ಪುಢಾರಿಗಳೂ ನಾಯಕರೂ ‘ಓರಾಟ’ಗಾರರೂ ಅವರನ್ನು ಸಂಪರ್ಕಿಸಿ ಸಂವಿಧಾನದ ಸಮಾನತೆಯ ನೀತಿಯನ್ನು ಬೋಧಿಸಲಿಲ್ಲ. ಆದರೆ, ಯಾವಾಗ ಅದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲನ್ನು ಧರಿಸಿ ಪ್ರತಿಭಟಿಸಿದರೋ ಆಗಲೇ ಅವಕಾಶವಾದಿಗಳೆಲ್ಲ ಸಂವಿಧಾನದ ಮೂಲಭೂತ ಹಕ್ಕಿನ ಬಗ್ಗೆ ಪಾಠ ಹೇಳಲು ಶುರುವಿಟ್ಟಿದ್ದಾರೆ.

ಕೇವಲ ಆರು ವಿದ್ಯಾರ್ಥಿನಿಯರ ಮನವೊಲಿಸಿ ‘ಸಮಾನತೆ ಕಾಪಾಡ್ರಮ್ಮ’ ಎಂದು ತಿಳಿಹೇಳಿದಿದ್ದರೆ ಈ ವಿವಾದ ಎಂದೋ ಬಗೆಹರಿಯುತ್ತಿತ್ತು. ಆದರೆ ಈ ಸಮಯ ಸಾಧಕರಿಗೆ ಅಷ್ಟರಲ್ಲೇ ಮುಗಿಯುವುದು ಬೇಕಿರಲಿಲ್ಲ. ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲು ಬರಲೇ ಬೇಕೆಂದು ಹೆಣಕ್ಕಾಗಿ ಕಾದ ನರಿ ಯಂತೆ ಕಾದು ಕುಳಿತರು. ಅದರಂತೆ ಈಗ ಎಲ್ಲವೂ ನಡೆಯುತ್ತಿದೆ. ಅದಕ್ಕೆ ಬೇಕಾದ ಮಸಾಲೆ ಅರೆ ಯಲು ಆರಂಭಿಸಿದ್ದಾರೆ. ಖಾಲಿ ಧ್ವಜಸ್ತಂಭಕ್ಕೆ ಕೇಸರಿ ಭಗವಾಧ್ವಜ ಕಟ್ಟಿದ್ದನ್ನು ರಾಷ್ಟ್ರಧ್ವಜ ಕಿತ್ತು ಅವಮಾನಿಸಿದ್ದಾರೆ ಎಂದು ಎದೆಬಡಿದುಕೊಳ್ಳುತ್ತಿದ್ದಾರೆ. ಹಿಜಾಬ್ ಬಿಟ್ಟು ನೇರ ಕೇಸರಿಯ ಮೇಲೇ ಪ್ರಹಾರ ಮಾಡುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಕೇಸರಿ ಧರಿಸಿದ ವಿದ್ಯಾರ್ಥಿಗಳ ಮುಂದೆ ಬುರ್ಕಾ ತೊಟ್ಟ ವಿದ್ಯಾರ್ಥಿನಿ ಪ್ರವೇಶಿಸಿದಾಗ ಸಹಜವಾಗಿ ಆಕೆ ‘ಅಲ್ಲಾ ಹು ಅಕ್ಬರ್’ ಎಂದು ಕೂಗಿದ್ದನ್ನೇ ಆಕೆ ಯಾವುದೋ ಯುದ್ಧ ಗೆದ್ದು ಬಂದಂತೆ ವೈಭವೀಕರಿಸಿದ್ದಾರೆ. ಕೆಲ ಮತಾಂಧರು ಆಕೆಗೆ ಲಕ್ಷಾಂತರ ರು.ಉಡುಗೊರೆ ನೀಡುತ್ತಾರೆಂದರೆ ಅದರ ಅರ್ಥವೇನು? ಇದು ಸಮಾಜಕ್ಕೆ, ಹಿಂದೂಗಳಿಗೆ ಪ್ರಚೋದನೆಯ ಸಂದೇಶ ನೀಡದೇ? ಮತ್ತೊಬ್ಬ, ಹಿಜಾಬ್ ವಿರೋಧಿಸುವವರನ್ನು ತುಂಡುತುಂಡಾಗಿ ಕತ್ತರಿಸುತ್ತೇವೆಂದು ಅರಚುತ್ತಾನೆ.

ತಮ್ಮ ಧರ್ಮದ ಪರ ಹೋರಾಡುವುದಕ್ಕೆ ಹೀಗೆ ಪ್ರಚೋದನೆ ನೀಡುವುದು ಸಂವಿಧಾನದ ಆಶಯಕ್ಕೆ ಹಾಕಿದ ಕೊಡಲಿ ಏಟಲ್ಲವೇ? ವಿದ್ಯಾರ್ಥಿಗಳಿಗೆ ಕೇಸರಿ ರುಮಾಲು-ಶಾಲು ಒದಗಿಸುವವರನ್ನು ಪ್ರಶ್ನಿಸುವ ನಾಯಲಾಯಕ್ಕುಗಳು, ಮುಸ್ಲಿಂ ವಿದ್ಯಾರ್ಥಿನಿಯನ್ನು ಪ್ರಚೋದಿಸಿ ಬೆಂಬಲಿಸಿ ಲಕ್ಷಾಂತರ ರು. ಭಕ್ಷೀಸು
ನೀಡುವುದನ್ನು ಏಕೆ ಖಂಡಿಸುವುದಿಲ್ಲ? ನಾಳೆ ಮತ್ತೊಬ್ಬ ಧರ್ಮಾಂಧ ಹಿಜಾಬ್ ವಿರೋಧಿಸುವ ಶಿಕ್ಷಕನ ತಲೆಯನ್ನು ಕತ್ತರಿಸಿ ತಂದರೆ ಇಷ್ಟು ಕೋಟಿ
ಕೊಡುತ್ತೇನೆನ್ನುವುದಿಲ್ಲ ಎಂಬುದಕ್ಕೆ ಏನು ಖಾತ್ರಿ? ಅಂಥದನ್ನು ಪಾಲಿಸುವ ಪೈಶಾಚಿಕ ಮನಃ ಸ್ಥಿತಿಯವರೂ ಇಂದಿನ ಸಮಾಜದಲ್ಲಿದ್ದರೆ ಆಶ್ಚರ್ಯವೇನಿಲ್ಲ. ಪ್ರಕರಣ ಈಗಾಗಲೇ ರಾಜ್ಯದ ನೆಮ್ಮದಿ ಹಾಳುಮಾಡಿದೆ.

ಸರಕಾರ ಕಾಲೇಜು ಮತ್ತು ಶಾಲೆಗಳನ್ನು ತೆರೆಯಲು ಹಿಂಜರಿಯುವ ಸ್ಥಿತಿ ತಲೆದೋರಿದೆ. ಶಾಲಾ-ಕಾಲೇಜು ಪುನಾಂಭಿಸಿದರೂ ಮಕ್ಕಳನ್ನು ಕಳುಹಿಸುವ ಬಗ್ಗೆ ಸಂಭಾವಿತ ಪೋಷಕರು ಆತಂಕದಲ್ಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಸಲ್ಲಿಸುವಷ್ಟು ತೀವ್ರತೆ ಪಡೆದಿರುವುದು
ವಿಪರ್ಯಾಸ. ಅಸಲಿಗೆ ಸಮಾಜಗೇಡಿಗಳು ಹಿಜಾಬ್ ವಿಷಯವನ್ನೇ ತಿರುಚಿ ದಾರಿ ತಪ್ಪಿಸಿದ್ದಾರೆ.

ಹಿಜಾಬ್ ಧರಿಸಲು ಶಿಕ್ಷಣ ಮಂಡಳಿಯಾಗಲಿ ಸರಕಾರವಾಗಲಿ ನಿಷೇಧ ಹೇರಿಲ್ಲ. ಕೇವಲ ತರಗತಿಗಳಲ್ಲಿ ಮಾತ್ರ ಧರಿಸದೆ ಸಮಾನತೆ ಪಾಲಿಸಲು ಸೂಚಿಸಿದೆಯಷ್ಟೆ. ಆದರೆ ಇವರುಗಳು ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ಧರಿಸುವ, ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತಿದೆಯೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಿ ದೇಶದ ಘನತೆ ಹಾಳು ಮಾಡುವ ಹುನ್ನಾರ ದಲ್ಲಿದ್ದಾರೆ. ಮೊದಲಿಗೆ ಹಿಂದೂ-ಮುಸ್ಲಿಮರು ಪರಸ್ಪರ ಅನ್ಯೋನ್ಯವಾಗಿ ಬದುಕುವುದೇ
ಇವರ ಅಸ್ತಿತ್ವಕ್ಕೆ ಮಾರಕವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಮುಸಲ್ಮಾನರನ್ನು ಕೇವಲ ಚುನಾವಣಾ ರಾಜಕೀಯದ ಊರುಗೋಲಿನಂತೆ ಬಳಸಿಕೊಂಡು ಅವರನ್ನು ಪ್ರಗತಿ ಹೊಂದಲು ಬಿಡದೇ, ಸಾಮಾಜಿಕವಾಗಿ ತೆರೆದುಕೊಳ್ಳದಂತೆ ಮಾಡಿ ‘ಕೋಮುದಂಧೆ’ಮಾಡಿಕೊಂಡು ಬರಲಾಗಿದೆ.

ಇದೆಲ್ಲದರ ಪರಿಣಾಮ ಇಂಥ ದೊಡ್ಡ ವಿವಾದಕ್ಕೆ ಕಾರಣ ವಾಗಿದೆ. ಒಂದೆಡೆ ಪ್ರಚೋದಿತರು ಸಂವಿಧಾನಕ್ಕಿಂತ ತಮ್ಮ ಧರ್ಮದ ನೀತಿಯೇ ಮಿಗಿಲೆಂದು ವಾದಿಸುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ನಾಳೆ ಹಾಗಾಗಬಹುದು, ಹೀಗಾಗಬಹುದೆಂದು ಭವಿಷ್ಯ ನುಡಿಯುವ ಮಹಾಕಾಲಜ್ಞಾನಿಗಲೂ ಹುಟ್ಟಿಕೊಂಡಿದ್ದಾರೆ. ಇಂದು ಹಿಜಾಬ್, ನಾಳೆ ಬುರ್ಕಾ, ನಂತರ ನಮಾಜಗೆ ಅವಕಾಶ ನೀಡಿ ಎನ್ನಬಹುದು.

ಭಾನುವಾರದ ಬದಲಾಗಿ ಶುಕ್ರವಾರ ರಜೆ ಬೇಕು, ಬೇಸಿಗೆ ರಜಾಕ್ಕಿಂತ ರಂಜಾನ್ ಅವಧಿಯಲ್ಲಿ ರಜೆ ನೀಡಿ ಎನ್ನುತ್ತಾರೆ. ಪಠ್ಯದಲ್ಲಿ ಬಸವ, ಬುದ್ಧ, ರಾಮನ ಪಾಠಗಳಿವೆ ಅವರನ್ನು ದೇವರೆಂದು ಓದುವುದು ಧರ್ಮಗ್ರಂಥದ ಪ್ರಕಾರ ಹರಾಮ್, ಹಾಗಾಗಿ ಈ ಪಾಠಗಳು ಬೇಡ ಎಂದರೆ? ಇವರೇ ಬಹುಸಂಖ್ಯಾತರಾದರೆ ಷರಿಯಾ ಕಾನೂನೇ ಬೇಕೆನ್ನುತ್ತಾರೆ ಎಂದೆಲ್ಲ ಪುಕಾರುಗಳನ್ನು ಹಬ್ಬಿಸುವವರಿಗೂ ಕಡಿಮೆ ಇಲ್ಲ. ಇಂಥದೆಲ್ಲ ಸಮಾಜಕ್ಕೆ ಯಾವ ಸಂದೇಶ ನೀಡುತ್ತದೆ?

ಧನ್ಯವಾದಗಳೊಂದಿಗೆ.