ಪ್ರಚಲಿತ
ಶಿವಾನಂದ ಸೈದಾಪೂರ, ಹವ್ಯಾಾಸಿ ಬರಹಗಾರರು
ಪ್ರಾಾಚೀನ ವಿಶ್ವವಿದ್ಯಾಾಲಯಗಳು ಬಾಹ್ಯ ದಾಳಿಗಳಿಂದ ನಶಿಸಿ ಹೋದರೆ, ಆಧುನಿಕ ವಿವಿಗಳು ದೇಶವಿರೋಧಿ ಕೃತ್ಯಗಳಿಂದ ಬೌದ್ಧಿಿಕ ಭಯೋತ್ಪಾಾದನೆಯಿಂದ ಅವನತಿಯತ್ತ ಸಾಗುತ್ತಿಿವೆ. ವಿಶ್ವವಿದ್ಯಾಾಲಯಗಳಲ್ಲಿ ಜಾತಿಯತೆ, ರಾಜಕೀಯ, ದೇಶ ವಿರೋಧಿ ಕೃತ್ಯ, ಕ್ಯಾಾಂಪಸ್ ನಕ್ಸಲಿಸಂ, ಬೌದ್ಧಿಿಕ ದಿವಾಳಿತನದಿಂದ ಅವನತಿಯತ್ತ ಸಾಗುತ್ತಿಿವೆ.
ಜೆಎನ್ಯುನಲ್ಲಿ ಹಿಂದೂ ಹಬ್ಬ ಆಚರಣೆ ಮಾಡಿದರೆ ಕೋಮುವಾದ. ಮುಸ್ಲಿಿಂ, ಕ್ರಿಿಶ್ಚಿಿಯನ್ ಹಬ್ಬ ಮಾಡಿದರೆ ಅದು ಜಾತ್ಯತೀತತೆ. ಇದರ ಹಿಂದಿನ ದುಷ್ಟಶಕ್ತಿಿಗಳನ್ನು ಹುಡುಕುವುದೆನು ಕಷ್ಟವಲ್ಲ. ಸುಧಾರಣೆ ಹೆಸರಿನಲ್ಲಿ ಪಾಶ್ಚಿಿಮಾತ್ಯ ಮೂಲದಿಂದ ಮಿಷನರಿಗಳಿಗೆ ಹಣ ವರ್ಗಾವಣೆಯಾಗುತ್ತದೆ. ಸುಧಾರಣೆ, ಸರ್ವರಿಗೂ ಸಮಪಾಲು ಸಮಬಾಳು ಮಾರ್ಕ್ಸ್ ಲೆನಿನ್ ಸಿದ್ಧಾಾಂತ ರಕ್ತ ಕ್ರಾಾಂತಿಯ ಬೆರೆತುಕೊಳ್ಳುತ್ತದೆ. ತಲೆಯಲ್ಲಿ ಚೀನಾದ ಮಾವನ ಸಿದ್ಧಾಾಂತ, ಕುತ್ತಿಿಗೆಗೆ ಕತ್ತಿಿ ಹಿಡಿದಾದರೂ ಸರಿ ಜಗತ್ತಿಿನ ಎಲ್ಲ ಕಡೆ ತನ್ನ ಧರ್ಮ ಹರಡಲು ಮುಂದಾಗಿರುವ ಅಲ್ಪಸಂಖ್ಯಾಾತರ ಧರ್ಮ; ಒಟ್ಟಿಿಗೆ ಸೇರಿ ಭಾರತದಲ್ಲಿ ಕೆಲಸ ಮಾಡುತ್ತಿಿವೆ. ಅದಕ್ಕೆೆ ಸಂಪನ್ಮೂಲವಾಗಿ ನಮ್ಮ ದೇಶದ ವಿದ್ಯಾಾರ್ಥಿಗಳು ಕ್ಯಾಾಂಪಸ್ ನಕ್ಸಲರಾಗಿ ಬಳಕೆಯಾಗುತ್ತಾಾರೆ. ಇವುಗಳ ಹಿಂದಿನ ಮೂಲಗಳ ಕೈ ಯಾವುದೆಂದು ಹುಡುಕುತ್ತಾಾ ಹೋದರೆ ಅದು ಹೋಗಿ ನಿಲ್ಲುವುದು ಸೆಮೆಟಿಕ್ ರಿಲಿಜಿಯನ್ಗಳ ಹಿಂದೆಯೇ!
ಇವುಗಳಿಗೆ ಭಾರತವನ್ನು ಆಂತರಿಕವಾಗಿ ಕುಗ್ಗಿಿಸುವ ಷಡ್ಯಂತ್ರಕ್ಕೆೆ ಮುಖ್ಯ ವೇದಿಕೆಯಾಗಿ ಸಿಕ್ಕಿಿರುವುದೇ ಜೆಎನ್ಯು ವಿಶ್ವವಿದ್ಯಾಾಲಯ! ಜೆಎನ್ಯು ವಿಷಯಕ್ಕೆೆ ಬರೋಣ. ಯಾವಾಗಲೂ ಶಿಕ್ಷಣ ಹೊರತುಪಡಿಸಿ ದೇಶ ವಿರೋಧಿ ಕೃತ್ಯಗಳಿಗೆ ಹೆಚ್ಚು ಸುದ್ದಿಯಾಗುತ್ತದೆ. ಅಲ್ಲಿರತಕ್ಕಂತಹ ಶಿಕ್ಷಣ, ಸಾಮಾಜಿಕ ಬದ್ಧತೆ ಹೊರತು ಪಡಿಸಿ ಒಳಗಿನಿಂದಲೇ ದೇಶವನ್ನು ಹೇಗೆ ಛಿದ್ರಸಬಹುದೆಂಬ ಯೋಜನೆಗಳಿಗೆ ಕೇಂದ್ರಸ್ಥಾಾನವಾಗಿದೆ. ಜೆಎನ್ಯುನಲ್ಲಿ ತಳವೂರಿ ಕುಳಿತಿರುವವರಾದರೂ ಎಂಥವರು? ಓದಿನ ಹೆಸರಿನಲ್ಲಿ ಅಧ್ಯಾಾಪಕರಿಗಿಂತ ವಯಸ್ಸಾಾದವರು ವಿದ್ಯಾಾರ್ಥಿಗಳು! ಹೆದರಿಸಿ ಬೆದರಿಸಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಾರೆ. ವಿದ್ಯಾಾರ್ಥಿಗಳ ಸೋಗಿನಲ್ಲಿ ಇರುವ ಮಾವೋವಾದಿಗಳು. ಕ್ಯಾಾಂಪಸ್ ನಕ್ಸಲರು. ಯಾವುದಾದರೂ ಒಂದು ನೆಪದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುಖಭಂಗ ಮಾಡಲು ಹಾತೊರೆಯುತ್ತಿಿರುತ್ತಾಾರೆ.
ಯಾವುದೋ ಮೂಲದಿಂದ ಯಾವುದೋ ಮೂಲದಿಂದ ಹಣ ಬಸಿದುಕೊಂಡು ವಿವಿಯ ಆವರಣದಲ್ಲಿಯೇ ಜೀವಿಸುತ್ತ ಬರುವ ವಿದ್ಯಾಾರ್ಥಿನಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಲಿವಿಂಗ್ ಟುಗೆದರ್ ಹೆಸರಿನಲ್ಲಿ ದೈಹಿಕ ತೆವಲನ್ನು ತೀರಿಸಿಕೊಳ್ಳುತ್ತಾಾರೆ. ವಿಶ್ವವಿದ್ಯಾಾಲಯದ ಆವರಣವೆಂದರೆ ಒಂದು ರೀತಿಯ ಅಧಿಕೃತವಾಗಿ ವ್ಯಭಿಚಾರದ ಕೇಂದ್ರ ಎಂಬಂತಾಗಿದೆ. ಗರ್ಭನಿರೋಧಕ ಕಿಟ್, ಕಾಂಡೋಮ್ಗಳು ಕಾಣಸಿಗುತ್ತವೆ. ಮನುಷ್ಯನಿಗೆ ಬೇಕಿರುವುದು ಒಂದು ಹೊಟ್ಟೆೆ ತುಂಬ ಊಟ ಮತ್ತೊೊಂದು ದೈಹಿಕ ಸುಖ. ಇವತ್ತು ಯಾವುದೇ ಕಷ್ಟವಿಲ್ಲದೆ ಸಹಜವಾಗಿ ಇವೆರಡೂ ಸಿಗುವಾಗ ಹೇಗೆ ತಾನೆ ಜಾಗ ಖಾಲಿ ಮಾಡಲು ಸಾಧ್ಯ. ಅನಾಯಾಸವಾಗಿ ಬರುವ ಹಣಕ್ಕೆೆ ದೇಶ ವಿರೋಧಿ ಕೂಗಿ ಋಣ ಸಂದಾಯ ಮಾಡುತ್ತಾಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ದೇಶಾದ್ಯಂತ ಹೊರಗಿನ ಶಕ್ತಿಿಗಳು ನೈತಿಕ ಬೆಂಬಲಕ್ಕೆೆ ನಿಲ್ಲುತ್ತವೆ. ಹೊರಗಿನ ದುಷ್ಟ ಶಕ್ತಿಿಗಳು ವಿದ್ಯಾಾರ್ಥಿಗಳನ್ನು ದೇಶ ಹಾಳು ಮಾಡುವುದಕ್ಕೆೆ ಬಳಸಿಕೊಳ್ಳುತ್ತಿಿದ್ದಾರೆ. ವಿದ್ಯಾಾರ್ಥಿ ಮುಖವಾಡದ ದೇಶದ್ರೋಹಿಗಳು ಯಾವುದೇ ದುಶ್ಕೃತ್ಯ ಎಸಗಿದರೆ ಸಾಕು ರಕ್ಷಿಸುವುದಕ್ಕೆೆ ಸಂಘಟನೆಗಳಂತೂ ನಾಯಿಕೊಡೆಯಂತೆ ಎದ್ದು ಬಂದು ಅಮಾಯಕರಂತೆ ಬಿಂಬಿಸಿ ನೈತಿಕ ಬೆಂಬಲ ನೀಡುತ್ತಾಾರೆ.
ವಿಶ್ವವಿದ್ಯಾಾಲಯವೆಂದರೆ ಅದು ವಿಶ್ವಕ್ಕೆೆ ಜ್ಞಾನವನ್ನು ನೀಡುವ ಆಲಯವಾಗಬೇಕೆ ಹೊರತು ದೇಶದ ಮಾರಕ ಸೃಷ್ಟಿಿಗೆ ಕಾರಣವಾಗಬಾರದು. ಕ್ರಿಿ.ಪೂ 2600ರಲ್ಲಿ ಭಾರತದಲ್ಲಿಯೇ ಇರತಕ್ಕಂತಹ ತಕ್ಷಶಿಲಾ ವಿಶ್ವವಿದ್ಯಾಾಲಯ ಜಗತ್ತಿಿನ ಮೊಟ್ಟಮೊದಲ ವಿಶ್ವವಿದ್ಯಾಾಲಯ ಆಗಿತ್ತು. 10500ಕ್ಕೂ ಅಧಿಕ ಅಧಿಕ ವಿದ್ಯಾಾರ್ಥಿಗಳು ಏಕಕಾಲದಲ್ಲಿ ವಿದ್ಯಾಾಭ್ಯಾಾಸ ಮಾಡುತ್ತಿಿದ್ದರು. ಭಾರತ ಮಾತ್ರವಲ್ಲದೆ ಜಗತ್ತಿಿನ ಬ್ಯಾಾಬಿಲೋನಿಯನ್, ಚೀನಾ, ಗ್ರೀಸ್, ಸಿರಿಯಾ, ಟಿಬೆಟ್, ಕಾಂಬೋಡಿಯಂತಹ ಬೇರೆ ಬೇರೆ ದೇಶಗಳಿಂದ ವ್ಯಾಾಸಂಗಕ್ಕೆೆ ನಮ್ಮಲ್ಲಿಗೆ ಬರುತ್ತಿಿದ್ದರು. ಭಾಷಾಶಾಸ್ತ್ರ, ವೇದಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಾಕರಣ, ಯುದ್ಧದ ನೈಪುಣ್ಯತೆ, ಖಗೋಳಶಾಸ್ತ್ರ, ಗಣಿತ, ವಾಣಿಜ್ಯಶಾಸ್ತ್ರ, ನೃತ್ಯ, ನಾಟಕ ಶಾಸ್ತ್ರ, ಸಂಗೀತ, ವೈದ್ಯಕೀಯ ಶಾಸ್ತ್ರ, 64 ವಿದ್ಯೆೆಗಳ ತಾಣ ಭಾರತವಾಗಿತೆಂದರೆ ಅದನ್ನು ಯಾರು ಅಲ್ಲಗಳೆವುದಿಲ್ಲ.
ತಕ್ಷಶಿಲಾ ವಿಶ್ವವಿದ್ಯಾಾಲಯದ ನಂತರ ಇವತ್ತಿಿನ ಬಿಹಾರದಲ್ಲಿ ನಳಂದ ವಿಶ್ವವಿದ್ಯಾಾಲಯವೂ ಇತ್ತು. 300ಕ್ಕೂ ಅಧಿಕ ಕ್ಲಾಾಸ್ರೂಮಗಳನ್ನು ಹೊಂದಿತ್ತು. ಏಕಕಾಲದಲ್ಲಿ 10000ಕ್ಕೂ ಅಧಿಕ ಜನ ವಿದ್ಯಾಾರ್ಥಿಗಳು ವಿದ್ಯಾಾಭ್ಯಾಾಸ ಮಾಡುತ್ತಿಿದ್ದರು. ಬೃಹತ್ ಪ್ರಮಾಣದ 3 ಗ್ರಂಥಾಲಯಗಳು, ಖಗೋಳಶಾಸ್ತ್ರಕ್ಕೆೆ ಸಂಬಂಧಿಸಿದ ಗೋಪುರ ಹೊಂದಿತ್ತು. ಭಾರತ ಮಾತ್ರವಲ್ಲದೆ ಜಗತ್ತಿಿನ ಎಲ್ಲ ಭಾಗಗಳಿಂದ ವಿದ್ಯಾಾರ್ಥಿಗಳು ನಳಂದ ವಿಶ್ವವಿದ್ಯಾಾಲಯಕ್ಕೆೆ ಬರುತ್ತಿಿದ್ದರೆಂದು ಚೀನಾ ಯಾತ್ರಿಿಕ ಹ್ಯೂಯನ್ತ್ಸಾಾಂಗ್ ಬರೆದುಕೊಂಡಿದ್ದಾನೆ.
ಪ್ರಾಾಚೀನ ವಿಶ್ವವಿದ್ಯಾಾಲಯಗಳು ದಾಳಿಗಳಿಂದ ನಶಿಸಿ ಹೋದರೆ, ಆಧುನಿಕ ವಿವಿಗಳು ದೇಶವಿರೋಧಿ ಕೃತ್ಯಗಳಿಂದ ಬೌದ್ಧಿಿಕ ಭಯೋತ್ಪಾಾದನೆಯಿಂದ ಅವನತಿಯತ್ತ ಸಾಗುತ್ತಿಿವೆ. ವಿಶ್ವವಿದ್ಯಾಾಲಯಗಳಲ್ಲಿ ಜಾತಿಯತೆ, ರಾಜಕೀಯ, ದೇಶ ವಿರೋಧಿ ಕೃತ್ಯ, ಕ್ಯಾಾಂಪಸ್ ನಕ್ಸಲಿಸಂ, ಬೌದ್ಧಿಿಕ ದಿವಾಳಿತನದಿಂದ ಅವನತಿಯತ್ತ ಸಾಗುತ್ತಿಿವೆ. ಜೆಎನ್ಯು ವಿವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ವಿದೇಶಿ ನೀತಿ, ಸಾಮಾಜಿಕ ನೀತಿ, ಆರ್ಥಿಕ ನೀತಿಗಳಿಗೆ ಸಲಹೆಗಾರರಾಗಿ ಪ್ರಮುಖ ಪಾತ್ರ ವಹಿಸುತ್ತಾಾರೆ.
ಜೆಎನ್ಯು ಪ್ರಾಾಚೀನ ಕಾಲದ ವಿಶ್ವವಿದ್ಯಾಾಲಯಗಳಂತೆ ಸರ್ವಶ್ರೇಷ್ಠ ಶಿಕ್ಷಣ ತಾಣವಾಗಬೇಕು ಉದ್ದೇಶದಿಂದ 1969ರಲ್ಲಿ ಸ್ಥಾಾಪನೆಯಾಯಿತು. ಆದರೆ, ಯಾವಾಗ ಎಡಪಂಥೀಯರು ಹೋಗಿ ಆಶ್ರಯ ಪಡೆದರೋ ಆವಾಗ ಜೆಎನ್ಯು ಕುಲಗೆಟ್ಟು ಹೋಯಿತು. ರೋಮಿಳಾ ಥಾಪರ್, ಬಿಪಿನ್ ಚಂದ್ರರಂಥವರು ದೇಶಕ್ಕೆೆಲ್ಲ ಇತಿಹಾಸ ಪುಸ್ತಕ ಬರೆದರು. ಅಕ್ಬರ್ ಹುಮಾಯುನ್ ಔರಂಗಜೇಬನನ್ನು ಮೇಲಕ್ಕೆೆತ್ತಿಿದರು. ರಾಣಾ ಪ್ರತಾಪ್, ಸಿಂಹ ಶಿವಾಜಿಯಂತವರನ್ನು ಮುಚ್ಚಿಿಬಿಟ್ಟರು. ಮಾರ್ಕ್ಸ್, ಲೆನಿನ್, ಮೆಕಾಲೆ ಹೀರೊಗಳಾದರು. ಬುದ್ಧ, ಚಾಣಕ್ಯ, ಶಂಕರಾಚಾರ್ಯ, ಬಸವಣ್ಣ, ಸ್ವಾಾಮಿ ವಿವೇಕಾನಂದ, ಯೋಗಿ ಅರವಿಂದರು ತಿಲಕರು, ಸಾವರ್ಕರ್ ಕೋಮುವಾದದ ಸಾಲಿನಲ್ಲಿ ಕುಳಿತರು. ಅವರು ಬರೆದ ದೇಶಕ್ಕೆೆ ಪಠ್ಯ ಆಯಿತು. ಭಾರತೀಯ ವೇದಗಳು ತುಕ್ಕು ಹಿಡಿದು ಹೋದವು. ಬೌದ್ಧಿಿಕ ದಿವಾಳಿತನಕ್ಕೆೆ ಒಳಗಾಯಿತು ವಿದ್ಯಾಾರ್ಥಿ ಸಮೂಹ.
ಜೆಎನ್ಯು ಬರುಬರುತ್ತಾಾ ಹಿಂದೂ ವಿರೋಧಿ ಕೃತಿಗಳಿಗೆ ಹೆಸರುವಾಸಿಯಾಯಿತು. ಆರಂಭದಿಂದಲೂ ಪೂಜಿಸಲ್ಪಡುತ್ತಿಿರುವ ಸರಸ್ವತಿ ವಿಗ್ರಹವನ್ನು ಮುಸ್ಲಿಿಂ ಧಾರ್ಮಿಕ ಮುಖಂಡ ಎಚ್.ಎಂ.ಕುರೇಶಿ ಆದೇಶದ ಮೇರೆಗೆ ತೆರವುಗೊಳಿಸಲಾಯಿತು. 2015ರ ನವರಾತ್ರಿಿಯ ಸಂದರ್ಭದಲ್ಲಿ ದುರ್ಗೆಯನ್ನು ವೇಶ್ಯೆೆಯಂತೆ ಚಿತ್ರಿಿಸಿ ದುಷ್ಟತನಕ್ಕೆೆ ಹೆಸರಾದ ಮಹಿಷಾಸುರನನ್ನು ಪೂಜಿಸಲಾಯಿತು. ಹಿಂದೂಗಳ ಭಾವನೆಗಳನ್ನು ಕೆರಳಿಸುವಗೋಸ್ಕರವೇ ಹಾಸ್ಟೆೆಲ್ನಲ್ಲಿ ಊಟಕ್ಕೆೆ ಗೋಮಾಂಸ ನೀಡಬೇಕೆಂದು ಬೇಡಿಕೆ ಇಡಲಾಯಿತು.
ಹಿಂದೂ ವಿದ್ಯಾಾರ್ಥಿಗಳು ಹೋಮ-ಹವನ ಪೂಜೆ ಮಾಡುವ ಹೊತ್ತಿಿನಲ್ಲಿ ಕಮುನಿಸ್ಟ್ ವಿದ್ಯಾಾರ್ಥಿ ಸಂಘಟನೆಯ ವಿದ್ಯಾಾರ್ಥಿಗಳು ದಾಳಿ ಮಾಡಿ ನಿಲ್ಲಿಸಲಾಯಿತು. ಅಲ್ಲಿ ನಡೆಯುವ ನಮಾಜಿನ ಬಗ್ಗೆೆ ಪ್ರಶ್ನಿಿಸಿದಾಗ ಹಿಂದೂ ವಿದ್ಯಾಾರ್ಥಿಗಳನ್ನು ಮನಬಂದಂತೆ ಥಳಿಸಲಾಯಿತು. ಜತೆಗೆ ನಮಾಜು ಮಾಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲವೆಂದು ಹಾಸ್ಟೆೆಲ್ ಮೇಲ್ವಿಿಚಾರಕರಿಗೆ ಒತ್ತಡ ಹಾಕಿ ಬಲವಂತವಾಗಿ ಆದೇಶ ಹೊರಡಿಸಲಾಯಿತು. ಜೆಎನ್ಯು ಕೃತ್ಯಗಳ ಬಗ್ಗೆೆ ಹೇಳುವುದಾದರೆ ಬಹುಶಃ ಪಾಕಿಸ್ತಾಾನದಲ್ಲಿಯೂ ಕೂಡ ಇಂತಹ ಘಟನೆಗಳು ನಡೆಲಿಕ್ಕಿಿರಲಾರವು.
ಕ್ಯಾಾಂಪಸ್ ನಕ್ಸಲಿಸಂ ಎಡಪಂಥೀಯರು ಮಾಡುವ ಕೆಲಸ ವಿರೋಧಿಸಿದ್ದರು ಹೆಸರಿನಲ್ಲಿ ದೇಶದ್ರೋಹಿಗಳು ಯಾವತ್ತಿಿಗೂ ಮರೆಯುವುದಿಲ್ಲ ಎಡಪಂಥೀಯರು ಮಾಡುವ ಕೆಲಸ ದೇಶವಿರೋಧಿ ಆಕೃತಿಗಳು ಹಿಂದೆ ಗುರುವಿಗೆ ಗಲ್ಲು ಶಿಕ್ಷೆಯನ್ನು ವಿರೋಧಿಸಿ ದೇಶ ವಿರೋಧಿ ಘೋಷಣೆ ಕೂಗಿದರು ದೇಶದ ಕೃತಿಗಳಿಗೆ ಹೆಸರಾಗಿರುವ ವಿದ್ಯಾಾರ್ಥಿಗಳಲ್ಲಿ ಸೋಗು ಹಾಕಿ ದೇಶದ್ರೋಹಿಗಳು ಆಶ್ರಯ ಪಡೆದಿದ್ದನೆಂದು ಯಾವತ್ತಿಿಗೂ ಮರೆಯುವಂತಿಲ್ಲ. ವಿದ್ಯಾಾವಂತರಾಗಿ ಕುಟುಂಬ ಗಣತಿಯನ್ನು ಹಿಡಿಯುವವರಿಗಿಂತ ಜಗತ್ತಿಿನ ಎದುರು ಕಳೆಯುವುದರಲ್ಲಿ ಸಂಖ್ಯೆೆ ಅಧಿಕವಾಗಿದೆ.