Thursday, 21st November 2024

ಕೋಟು ಬೂಟು ತೊಟ್ಟು ಬರುವ ಜುಗಾಡುಗಳು

ಶಿಶಿರ ಕಾಲ

shishirh@gmail.com

ಆಗ ನಮ್ಮೂರಿನ ಎಲ್ಲರ ಮನೆಗಳಲ್ಲಿ ಫ್ರಿಜ್ ಇರಲಿಲ್ಲ. ತಂಗಳನ್ನ ಬಿಟ್ಟರೆ ಬೇರೆ ಯಾವ ಅಡುಗೆಯನ್ನೂ ಶೇಖರಿಸಿಟ್ಟು ತಿನ್ನುವ ರೂಢಿಯೇ ಇರಲಿಲ್ಲ.  ಅದು ಸಾಧ್ಯವೂ ಇರಲಿಲ್ಲ. ಮಾಡಿದ ಅಡುಗೆಯನ್ನು ತಂಪಾದ ಜಾಗದಲ್ಲಿಡದಿದ್ದಲ್ಲಿ ಸಂಜೆಯ ಊಟದೊಳಗೆ ಕಸರು ಕಂಪು ಬಂದುಬಿಡುತ್ತಿತ್ತು. ಈರುಳ್ಳಿ, ಬೆಳ್ಳುಳ್ಳಿ ಬಳಸಿದ ಚಟ್ನಿ ಮೊದಲಾದವುಗಳಿಗೆ ಕೆಲವೇ ಗಂಟೆಯ ಆಯಸ್ಸು. ಅಡುಗೆ ಹೆಚ್ಚಾಗಬಾರದೆಂಬ ಕಾರಣಕ್ಕೆ ಮನೆಯಲ್ಲೊಂದು ಅಚ್ಚುಕಟ್ಟು, ಶಿಸ್ತು ಇತ್ತು. ಆದರೆ ಸಂತೆಯಿಂದ ತಂದ ತರಕಾರಿಗಳನ್ನು ಬಾಡದಂತೆ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು.

ಜಾಸ್ತಿ ನೀರು ಚಿಮುಕಿಸಿ ಇಟ್ಟರೆ ತರಕಾರಿ ಸೆಖೆಗೆ ಕೊಳೆತು ಅಥವಾ ಬೆಳೆದು ಹೋಗುತ್ತಿತ್ತು. ಮನೆಯಲ್ಲೇನಾದರೂ ಕಾರ್ಯವಿದ್ದಲ್ಲಿ, ಆ ದಿನ ಬೆಳಗ್ಗೆ ಬಸ್ಸೇರಿ, ದೂರದ ಪೇಟೆಗೆ ಹೋಗಿ ತರಕಾರಿ ತರುವುದೇ ಕೆಲಸದ ಮುಖ್ಯ ತಾರಾಗಣ ವಾಗಿತ್ತು. ಇದೆಲ್ಲ ಬಾಧಿಸುತ್ತಿದ್ದುದು ಹೆಂಗಸರಿಗಾದರೆ, ಗಂಡಸರ ತಲೆ
ಬಿಸಿಯೇ ಬೇರೆಯಿತ್ತು. ಅವರಿಗೋ, ಎಲೆಯಡಿಕೆ ಶಿಬ್ಬಲಿ ನಲಿಟ್ಟ ವೀಳ್ಯದೆಲೆಯ ತಾಜಾತನದ ಚಿಂತೆ. ಎಲೆಯನ್ನು ಬಳ್ಳಿಯಿಂದ ಕೊಯ್ದು ತಂದ ಗಂಟೆ ಎರಡರೊಳಗೆ ಸೆಖೆಗೆ ಬಾಡಿ ಬಡಕಲಾಗಿಬಿಡುತ್ತಿತು.

ಎಲೆಯ ತಾಜಾತನದ ಮಹತ್ವ ಎಲೆಯಡಿಕೆ ತಿನ್ನುವವರಿಗಷ್ಟೇ ಗೊತ್ತು. ಹೀಗಿರುವಾಗ ಇಂಥ ಅತ್ಯಂತ ಜಟಿಲ ಸಮಸ್ಯೆಗೆ ಪರಿಹಾರ ಅನಿವಾರ್ಯ ವಾಗಿತ್ತು. ಅಲ್ಲಿಂದ ಈ ಜುಗಾಡ್ ಕೆಲ ಮನೆಗಳಲ್ಲಿ ಶುರುವಾಯಿತು. ಎಲೆ, ಪೂಜೆಯ ಹೂವು, ತರಕಾರಿ, ಸೊಪ್ಪು ಇತ್ಯಾದಿಯನ್ನು ಬೆತ್ತದ ಬುಟ್ಟಿಯ ಲ್ಲಿಟ್ಟು, ಅದನ್ನು ಬಾವಿಯ ಹಗ್ಗಕ್ಕೆ ಕಟ್ಟಿ ಕೆಳಕ್ಕೆ ಬಿಡುವುದು. ನೀರಿನಿಂದ ಸುಮಾರು ಎರಡು ಫೀಟು ಮೇಲಕ್ಕೆ ನೇತಾಡುವಂತೆ ಹಗ್ಗವನ್ನು ಮೇಲೆ ಕಟ್ಟಿಡುವುದು. ಯಾವಾಗ ಏನು ಬೇಕೋ, ಫ್ರಿಜ್ಜಿನಿಂದ ಹೊರ ತೆಗೆದಂತೆ ಬಾವಿಯಿಂದ ಮೇಲಕ್ಕೆತ್ತಿ ತೆಗೆದುಕೊಳ್ಳುವುದು. ತರಕಾರಿಗಳನ್ನು ಬಾವಿಯೊ ಳಗಿನ ನೀರಾವಿ ಮತ್ತು ತಂಪು ದೀರ್ಘಕಾಲ ತಾಜಾ ಇಡುತ್ತಿತ್ತು, ವಾರಗಟ್ಟಲೆ.

ಕ್ರಮೇಣ ಈ ಜುಗಾಡ್ ಅನ್ನು ಊರಿನ ಬಹುತೇಕರು ತಮ್ಮದಾಗಿಸಿ ಕೊಂಡರು. ಅದೆಲ್ಲ ನಿಂತದ್ದು ಫ್ರಿಜ್ಜು ಬಂದ ಮೇಲೆ. ಜುಗಾಡ್ ಇದರ ಶಬ್ಧಾರ್ಥ ಮತ್ತು ಭಾವಾರ್ಥ ನಿಮಗೆ ಗೊತ್ತಿರುತ್ತದೆ. ಊಜZ ಐqಛ್ಞಿಠಿಜಿಟ್ಞo- ಮಿತವ್ಯಯದ ಬುದ್ಧಿವಂತ ಆವಿಷ್ಕಾರ. ಏನೋ ಒಂದು ತೊಂದರೆ, ಅವಶ್ಯಕತೆ
ಎದುರಾದಾಗ, ತಾತ್ಕಾಲಿಕ ಪರಿಹಾರಕ್ಕೆ ಏನೋ ಒಂದು ಜುಗಾಡ್. ಬುದ್ಧಿ ಬಳಸಿ ಅಲ್ಲಿಯೇ ಸುತ್ತಲಿರುವ ನಿರುಪಯುಕ್ತ ಅಥವಾ ಇನ್ನೇನೋ ಉದ್ದೇಶ ಕ್ಕಿರುವ ವಸ್ತುವನ್ನು ಬಳಸಿ ಪಡೆವ ಪರಿಹಾರ. ಇವೆಲ್ಲ ಜುಗಾಡ್ ಎಂದು ವರ್ಗೀಕರಿಸಲ್ಪಡುವ ಚಿಕ್ಕಪುಟ್ಟ ಆವಿಷ್ಕಾರಗಳು. ನೀವು ಈಗೀಗ ಸೋಷಿಯಲ್ ಮೀಡಿಯಾ ರೀಲ್‌ಗಳಲ್ಲಿ ಇಂಥದ್ದನ್ನು ನೋಡಿಯೇ ಇರುತ್ತೀರಿ. ಅಲ್ಲಿ ಸುಮಾರಾಗಿ ಚೀನಾ, ಪೂರ್ವ ಏಷ್ಯಾದವರೇ ಇಂಥ ಜುಗಾಡ್ ವಿಡಿಯೋ ಮಾಡಿ ಹಾಕು ವುದು. ಅದಕ್ಕೆ ಔಜ್ಛಿಛಿ ಏZho ಎಂದು ಕರೆಯುವುದಿದೆ.

ನಮ್ಮೂರಿನಲ್ಲಿ ಬಹುತೇಕರು ಕೃಷಿಕರು. ಕೃಷಿಕರೆಂದರೆ ಇಂಥ ಅದೆಷ್ಟೋ ಜುಗಾಡುಗಳನ್ನು, ಮಿತವ್ಯಯದ ಆವಿಷ್ಕಾರವನ್ನು ಮಾಡುತ್ತಲೇ ಇರುವ ವರು. ಅದು ಕೃಷಿಯ ಅನಿವಾರ್ಯ. ಕೃಷಿಕರು ತೋಟದಲ್ಲಿ, ಮನೆಯಲ್ಲಿ ತಾವು ಮಾಡಿದ ಇಂಥ ಜುಗಾಡುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳು
ತ್ತಾರೆ. ಕುಮಟಾದ ಯಾಣದಲ್ಲಿ ಕೃಷಿಕರೊಬ್ಬರು ಗುಡ್ಡದ ಮೇಲಿಂದ ಹರಿದುಬರುತ್ತಿದ್ದ ನೀರಿಗೆ ಟರ್ಬೈನ್ ಅಳವಡಿಸಿ ತಮಗೆ ಬೇಕಾದ ವಿದ್ಯುತ್ ತಾವೇ ತಯಾರಿಸಿಕೊಳ್ಳುತ್ತಿದ್ದರು. ಈ ರೀತಿಯ ಅದೆಷ್ಟೋ ಆಶ್ಚರ್ಯವೆನಿಸುವ ಜುಗಾಡುಗಳು ನಮ್ಮೂರಿನ ತೋಟ ಮನೆಗಳಲ್ಲಿದ್ದವು.

ಒಬ್ಬ ಕಲೆಗಾರನಿಗೆ, ವಿಜ್ಞಾನಿಗೆ, ಕೃಷಿಕನಿಗೆ, ಎಂಜಿನಿಯರ್‌ಗೆ ಜುಗಾಡ್ ಚಾತುರ್ಯ ಇರಲೇಬೇಕು. ಈ ಶಾಣ್ಯಾತ ನವಿರುವವನು ಮಾತ್ರ ಇಂಥ ಕ್ಷೇತ್ರ ಗಳಲ್ಲಿ ಯಶಸ್ವಿಯೆನಿಸಬಲ್ಲ, ಹೊಸತನವನ್ನು ತರಬಲ್ಲ. ಎಂಜಿನಿಯರಿಂಗ್‌ನಲ್ಲಿ ನೂರೆಂಟು ವಿಷಯ ಕಲಿತರೂ ಕೊನೆಯಲ್ಲಿ ಕಲಿಯುವುದು ಏನು ಬೇಕಾದರೂ ಕಲಿತು ಜುಗಾಡ್ ಪರಿಹಾರ ಸೂಚಿಸುವ ಚಾಕಚಕ್ಯತೆಯನ್ನು. ಆ ಕಾರಣಕ್ಕೆ ಮೆಕ್ಯಾನಿಕಲ್, ಕೆಮಿಕಲ್ ಎಂಜಿನಿಯರಿಂಗ್  ಮಾಡಿದ ವರೂ ಸಾಫ್ಟ್ ವೇರ್ ಕಂಪನಿ ಸೇರಿ ಯಶಸ್ವಿಯಾಗುತ್ತಾರೆ. ಹೊಸತನ್ನು ಕಲಿಯುವುದು, ಅಲ್ಲಿಯೇ ಇರುವ ಏನೋ ಒಂದನ್ನು ಬಳಸಿ ಪರಿಹಾರ ಪಡೆದುಕೊಳ್ಳು ವುದು- ಜುಗಾಡ್ ಎಂಜಿನಿಯರಿಂಗ್‌ನ ಜೀವಾಳ.

ಮಿತವ್ಯಯ ಇಂದಿನ ಎಲ್ಲಾ ಕಂಪನಿಗಳ ಪರಮ ಧ್ಯೇಯ. ಕೆಲವೊಂದು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಜುಗಾಡ್ ಚಾತುರ್ಯ ಒಂದು ಅವಶ್ಯಕತೆ. ಉದಾಹರಣೆಗೆ ವಾಣಿಜ್ಯ ಸರಕು ಸಾಗಿಸುವ- ಕಾರ್ಗೋ ಹಡಗುಗಳಲ್ಲಿ ಕೆಲಸ ಮಾಡುವ ಎಂಜಿನಿಯರುಗಳು. ಸರಬರಾಜು ಹಡಗು ತನ್ನ ಜೀವಮಾನ ವಿಡೀ ಸಮುದ್ರದ ಮಧ್ಯದಲ್ಲಿಯೇ ಇರುತ್ತದೆ. ಹಡಗೆಂದರೆ ನಟ್ಟು, ಬೋಲ್ಟು, ಇನ್ನಿತರ ಲಕ್ಷಾಂತರ ವಸ್ತುಗಳಿಂದ ಮಾಡಿದಂಥದ್ದು. ಅದೆಲ್ಲವನ್ನು ಸ್ಪೇರ್ ಇಟ್ಟುಕೊಂಡಿರಲು ಸಾಧ್ಯವಾಗುವುದಿಲ್ಲ. ಹೀಗೆ ಮಹಾಸಾಗರಗಳಲ್ಲಿ ಪ್ರಯಾಣಿಸುವಾಗ ಎಂಜಿನ್ ದುರಸ್ತಿಗೆ ಬಂದು, ಏನೋ ಒಂದು ಅಳತೆಯ ಬೋಲ್ಟು ಬೇಕಾದಲ್ಲಿ, ಅದು ಹಡಗಿನಲ್ಲಿಲ್ಲದಿದ್ದರೆ? ಸಮುದ್ರ ಮಧ್ಯದಲ್ಲಿ ಹಾರ್ಡ್‌ವೇರ್ ಅಂಗಡಿ ಇರುತ್ತದೆಯೇ? ಎಂಜಿನಿಯರುಗಳು ಅಲ್ಲಿರುವ ವಸ್ತುವಿನಿಂದಲೇ ಅದನ್ನು ತಯಾರಿಸಿ ಅಥವಾ ಇನ್ನೇನೋ ಜುಗಾಡಿನಿಂದ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.

ಇಲ್ಲೆಲ್ಲ ಜುಗಾಡಿನ ಬುದ್ಧಿವಂತರೇ ಈಸಿ ಜಯಿಸುವುದು. ನಮ್ಮ ಭಾರತೀಯರಲ್ಲಿ ಈ ಜುಗಾಡ್ ಬುದ್ಧಿ ಮೊದಲಿನಿಂದಲೂ ಜಾಸ್ತಿಯೇ ಇದೆ. ಅದುವೇ ಮುಂದುವರಿದು ನಮ್ಮ ಯೋಗ, ಜೀವ, ವಾಸ್ತುಶಿಲ್ಪ ಇತ್ಯಾದಿ ನೂರಾರು ಶಾಸ್ತ್ರವಾಗಿ ಬೆಳೆದು ಬಂದಿರುವುದು. ಮನುಷ್ಯನಿಂದ ನಿರ್ಮಿಸಲಿಕ್ಕೆ
ಸಾಧ್ಯವೇ ಎಂಬ ಪ್ರಶ್ನೆ ಮೂಡಿಸುವ ದೇವಸ್ಥಾನಗಳು ಇಂದಿಗೂ ನಮ್ಮಲ್ಲಿವೆ. ನಮ್ಮ ವಾಸ್ತುಶಿಲ್ಪ ಅಷ್ಟು ಬೆಳೆದಿರಲು ನಮ್ಮವರೊಳಗಿನ ಸಾಮೂಹಿಕ ಆವಿಷ್ಕಾರಿ ಮನೋಭಾವವೇ ಕಾರಣ. ನಮ್ಮವರು ಅದೆಷ್ಟು ಪ್ರಯೋಗಗಳನ್ನು, ಆವಿಷ್ಕಾರಗಳನ್ನು ಮಾಡಿದ್ದರೋ ದೇವರಿಗೇ ಗೊತ್ತು, ಇರಲಿ. ಅದೇ
ರೀತಿಯಲ್ಲಿ ನಮ್ಮ ದೇಹಕ್ಕೆ ಸಂಬಂಧಿಸಿದ ಜುಗಾಡುಗಳ ಪ್ರಯೋಗವೂ ಭಾರತದಲ್ಲಿ ಒಂದು ಕಾಲಘಟ್ಟದಲ್ಲಿ ಯಥೇಚ್ಛ ನಡೆದಿದೆ ಮತ್ತು ಅದು ನಂತರದಲ್ಲಿ ಮುಂದುವರಿದುಕೊಂಡು ಬಂದಿದೆ.

ಅದುವೇ ಯೋಗ ವಿಜ್ಞಾನವಾಗಿ ವಿಸ್ತಾರ, ಪೂರ್ಣತೆ ಪಡೆದು ಬೆರಗಿನ ಅವಿಷ್ಕಾರವಾಗಿ ಇಂದಿಗೂ ಪ್ರಸ್ತುತವಾಗಿದೆ. ಇನ್ನಷ್ಟು ಸರಳವಾಗಿ ಮುಂದೆ ವಿವರಿಸುತ್ತೇನೆ. ಸಾಮಾನ್ಯವಾಗಿ, ಸಾಧಕರ ಸಂದರ್ಶನಗಳಲ್ಲಿ ಅವರ ದಿನಚರಿಗೆ ಸಂಬಂಧಿಸಿದ ಪ್ರಶ್ನೆಯನ್ನು ನಿರೂಪಕರು ಕೇಳದೇ ಇರುವುದಿಲ್ಲ. ಈ ಬಗ್ಗೆ ಸಹಜವಾಗಿ ಒಂದು ಕುತೂಹಲವಂತೂ ಇದ್ದೇ ಇರುತ್ತದೆ. ಅವರು ಎಷ್ಟು ಹೊತ್ತು ನಿದ್ರಿಸುತ್ತಾರೆ, ಎಷ್ಟು ಗಂಟೆಗೆ ಎದ್ದೇಳುತ್ತಾರೆ, ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಏನು? ಸ್ನಾನ ಯಾವಾಗ, ತಿಂಡಿ-ಊಟ ಎಷ್ಟು ಗಂಟೆಗೆ, ಏನನ್ನು ತಿನ್ನುತ್ತಾರೆ ಇತ್ಯಾದಿ. ಪ್ರಧಾನಿ ಮೋದಿ, ಸದ್ಗುರು
ಇವರೆಲ್ಲರ ಬೆಳಗಿನ ದಿನಚರಿಯ ಬಗೆಗಿನ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆಯುತ್ತವೆ.

ಇತ್ತೀಚೆಗೆ ಬರಹಗಾರ ರಾಬಿನ್ ಶರ್ಮಾ ಬರೆದಿರುವ ಪುಸ್ತಕ ೫ ಅI ಇಔಖಿಆ ಓದುತ್ತಿದ್ದೆ. ಇಡೀ ಪುಸ್ತಕ ಬೆಳಗಿನ ದಿನಚರಿ ಹೇಗಿರಬೇಕು ಎಂಬುದರ ಮೇಲೆ. ಸಾಧಕರ ಬೆಳಗ್ಗೆ ಹೇಗಿರುತ್ತದೆ, ಅವರು ಆ ಸಮಯವನ್ನು ಸರಿಯಾಗಿ ಹೇಗೆ ಬಳಸಿಕೊಳ್ಳುತ್ತಾರೆ, ಅವರ ಆರೋಗ್ಯ ನಿಭಾವಣೆ ಹೇಗೆ ಎಂಬಿತ್ಯಾದಿ. ಈ ಪುಸ್ತಕದ ಒಂದೂವರೆ ಕೋಟಿ ಪ್ರತಿಗಳು ಮಾರಾಟವಾಗಿವೆ. ಬೆಳಗಿನ ಚಟುವಟಿಕೆಗಳಲ್ಲಿ ಬದಲಾವಣೆ ತಂದು ಸಾಧಕರಂತೆಯೇ ಪಾಲಿಸಿದರೆ ಅದೇ ಫಲಿತಾಂಶ ಬರುತ್ತದೆ ಎಂಬುದೇ ಪುಸ್ತಕದ ಸಾರಾಂಶ.

ಬೆಳಗ್ಗೆ ವ್ಯಾಯಾಮ ಯಾವಾಗ ಮಾಡಬೇಕು, ಕಾಫಿ ಎಷ್ಟು ಹೊತ್ತು ಬಿಟ್ಟು ಕುಡಿಯಬೇಕು, ಸ್ನಾನ ಯಾವಾಗ ಮಾಡಬೇಕು ಇತ್ಯಾದಿ ಕೆಲ ವಿಷಯಗಳು ಇಂಟರ್ನೆಟ್ಟಿನಲ್ಲಿ, ಮಾತು ಕತೆಗಳಲ್ಲಿ, ಪಾಠ ಭಾಷಣಗಳಲ್ಲಿ ನಿರಂತರ ಜೀವಿತವಾಗಿರುವ ಚರ್ಚೆಯ ವಿಚಾರ. ಇದಕ್ಕೆ ಅವರವರದೇ ಆದ ವಾದ-
ನಂಬಿಕೆಗಳಿರುತ್ತವೆ. ಇತ್ತೀಚೆಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯ ಈ ಬಗ್ಗೆ ಒಂದು ದೀರ್ಘ ಸಂಶೋಧನಾ ವರದಿ ಪ್ರಕಟಿಸಿತ್ತು. ಅದರ ಸಾರಾಂಶ ಹೀಗಿದೆ. ಬೆಳಗ್ಗೆ ಏಳಲು ಅತ್ಯಂತ ಪ್ರಶಸ್ತ ಸಮಯ ಸೂರ್ಯೋದಯಕ್ಕಿಂತ ಎರಡು ಗಂಟೆ ಮೊದಲು. ಮೊದಲ ಇಪ್ಪತ್ತು ನಿಮಿಷ ಶೌಚ ಇತ್ಯಾದಿ.
ಅದಾದ ಅರ್ಧ ಗಂಟೆ ಏಕಾಗ್ರತೆ, ಧ್ಯಾನ, ಯೋಗ. ನಂತರದಲ್ಲಿ ವ್ಯಾಯಾಮ, ಸ್ನಾನ. ಇದು ಮಾನಸಿಕ ಸ್ಥಿತಿ, ಆ ಸಮಯದ ದೈಹಿಕ ಸ್ಥಿತಿ, ರಾಸಾಯನಿಕ ಗಳು, ಹಾರ್ಮೋನು ಗಳು ಇತ್ಯಾದಿ ಎಲ್ಲವನ್ನೂ ಗ್ರಹಿಸಿ, ನೂರಾರು ಪ್ರಯೋಗಗಳ ತರುವಾಯ ಹೊರತಂದ ಸಂಶೋಧನಾ ವರದಿ.

ಇವೆಲ್ಲವನ್ನು ಸಾಮಾನ್ಯವಾಗಿ ‘ಬಯೋ ಹ್ಯಾಕಿಂಗ್’ ಎಂದು ಕರೆಯುವು ದಿದೆ. ನಮ್ಮ ದೇಹ ಮತ್ತು ಮನಸ್ಸಿನ ಗರಿಷ್ಠ ಬಳಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಕೆಲವೊಂದು ಜುಗಾಡುಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಆರೋಗ್ಯಕರ ಬದಲಾವಣೆಗಳು. ವೇದ ಸಂಸ್ಕೃತಿಯು ಬೆಳಗಿನ ದಿನಚರಿಯ ಬಗ್ಗೆ ಹೇಳುವುದೇನು? ಬ್ರಾಹ್ಮೀ ಮುಹೂರ್ತ, ಬ್ರಹ್ಮ ಮುಹೂರ್ತ ಶುರುವಾಗುವುದು ಸೂರ್ಯೋದಯಕ್ಕಿಂತ ೧ ಗಂಟೆ ೩೬ ನಿಮಿಷ ಮೊದಲು. ಮೊದಲ ೪೮ ನಿಮಿಷ. ಆ ಸಮಯಕ್ಕಿಂತ ಮೊದಲು ಎದ್ದೇಳಬೇಕು. ಎದ್ದ ನಂತರ ಶೌಚ, ಸ್ನಾನ.

ಅದಕ್ಕೊಂದು ಇಪ್ಪತ್ತು ನಿಮಿಷ. ಅದಾದ ನಂತರ ಬ್ರಾಹ್ಮೀ ಮುಹೂರ್ತದ ೪೮ ನಿಮಿಷ ಧ್ಯಾನ, ಯೋಗ. ಇಲ್ಲಿ ಬ್ರಹ್ಮ ಮುಹೂರ್ತಕ್ಕೂ ಮತ್ತು ಯೇಲ್ ಯುನಿವರ್ಸಿಟಿಯ ವರದಿಗೂ ಅದೆಷ್ಟು ಸಾಮ್ಯತೆ ನೋಡಿ. ಸಾಮ್ಯತೆಯಲ್ಲ, ಅವರು ಹೇಳಿದ್ದು ಪಕ್ಕಾ ಇದನ್ನೇ, ಏನೂ ವ್ಯತ್ಯಾಸವಿಲ್ಲ. ಇತ್ತೀಚಿನ ದಿನಗಳಲ್ಲಿ ಬೆಳಗಿನ ಇನ್ನೊಂದು ಚಟುವಟಿಕೆ ಬಹಳ ಸುದ್ದಿ ಮಾಡುತ್ತಿದೆ. ಇಟ್ಝb mಜಛಿ. ಅದೇನೆಂದರೆ, ಬೆಳಗ್ಗೆ ಎದ್ದು, ಹಲ್ಲುಜ್ಜಿ, ಶೌಚ ಮುಗಿಸುವುದು. ತಕ್ಷಣ ಸಹಿಸಲು ಕಷ್ಟವಾಗುವ ತಣ್ಣೀರಿನಲ್ಲಿ ಮುಳುಕು ಹೊಡೆಯುವುದು.

ಇದನ್ನೇ ಇಟ್ಝb mಜಛಿ ಎನ್ನುವುದು. ಸ್ನಾನದ ಟಬ್ಬಿನಲ್ಲಿ ತಣ್ಣೀರು ತುಂಬಿಸಿ, ಅದಕ್ಕೊಂದಿಷ್ಟು ಐಸ್ ಸುರಿದು ಅದರೊಳಕ್ಕೆ ಮುಳುಕು ಹೊಡೆಯು ವುದು. ಇದು ವೈಜ್ಞಾನಿಕ ವಾಗಿ ಬಹಳ ಉಪಯುಕ್ತ ಎಂಬುದರ ಬಗ್ಗೆ ಸಾಕಷ್ಟು ಪ್ರಯೋಗಗಳಾಗಿವೆ. ಇದು ಇನ್ನಷ್ಟು ಪ್ರಭಾವ ಬೀರಬೇಕೆಂದರೆ ಆ ತಣ್ಣೀರು ಹರಿಯುತ್ತಿರಬೇಕು. ಎಷ್ಟೇ ತಣ್ಣನೆಯ ನಿಂತ ನೀರಿನಲ್ಲಿ ಅಲುಗಾಡದೆ ಕೆಲ ಕ್ಷಣ ಕಳೆದರೆ, ನಮ್ಮ ಚರ್ಮ ಒಂದು ತೆಳ್ಳನೆಯ ಉಷ್ಣ ಪದರ ಸೃಷ್ಟಿಸಿಕೊಳ್ಳುತ್ತದೆ. ಆ ಕಾರಣಕ್ಕೆ ತಣ್ಣನೆಯ ನೀರಿನಲ್ಲಿ ಅಲುಗಾಡದೇ ನಿಂತರೆ ಚಳಿ ಮಾಯವಾಗಿಬಿಡುತ್ತದೆ.

ಹಾಗಾಗಿ ಶೀತದ ಮುಳುಕಿಗೆ ತಣ್ಣೀರು ಹರಿಯುತ್ತಿರಬೇಕು. ತಣ್ಣೀರಿನಲ್ಲಿ ಮುಳುಗುವಾಗಲೂ ಅಷ್ಟೆ, ಮುಂಡವನ್ನಷ್ಟೇ ತಣ್ಣೀರಿನಲ್ಲಿ ಮುಳುಗಿಸು
ವುದಲ್ಲ, ತಲೆಯನ್ನೂ ಪೂರ್ಣ ಮುಳುಗಿಸಬೇಕು. ಇದನ್ನು ಮಾಡಲು ಪ್ರಶಸ್ತ ಸಮಯ ಸೂರ್ಯೋದಯಕ್ಕೆ ಎರಡು ಗಂಟೆ ಮೊದಲು. ಈ ಇಟ್ಝb mಜಛಿ ಅನ್ನು ಇಂದು ಬಹುತೇಕ ಹಾಲಿವುಡ್ ಸಿನಿಮಾ ನಟರು, ದೇಹದಾರ್ಢ್ಯ ಪಟುಗಳು ಇವರೆಲ್ಲ ತಪ್ಪದೇ ಮಾಡುತ್ತಾರೆ. ಅವರೆಲ್ಲ ಇದನ್ನು
ಮಾಡಿ ವಿಡಿಯೋ ಹಾಕುವುದರಿಂದ ಈ ತಣ್ಣೀರ ಮುಳುಕು ಈಗೀಗ ಟ್ರೆಂಡಿಂಗ್ !

ಈ ರೀತಿ ಅಸಹನೀಯ ತಣ್ಣೀರಿನಲ್ಲಿ ಮುಳುಕು ಹೊಡೆಯುವುದು ಹುಚ್ಚುತನವೆನಿಸಬಹುದು. ಇಷ್ಟೊಂದು ತಣ್ಣನೆಯ ನೀರಿನಲ್ಲಿ ಮುಳುಕಿದಾಗ ಹೃದಯ ನಿಂತುಬಿಟ್ಟರೆ ಎಂದೆನಿಸಬಹುದು. ಇದು ಖಂಡಿತ ಒಂದು ದಿನ ಬೆಳಗ್ಗೆ ಎದ್ದು, ಉಮೇದಿಗೆ ಮಾಡುವ ಕೆಲಸವಂತೂ ಅಲ್ಲ. ದೇವನ್ನು ನಿಧಾನವಾಗಿ ತಣ್ಣೀರಿಗೆ ಪರಿಚಯಿಸಬೇಕು. ದೇಹವನ್ನು ಅಣಿಗೊಳಿಸಿ ನಂತರ ನಿತ್ಯ ಬೆಳಗ್ಗೆ ಮಾಡಬೇಕು. ಹೃದಯ ಸಂಬಂಧಿ ಕಾಯಿಲೆಯಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಉಳಿದವರಿಗೆ ಇದೊಂದು ದೈಹಿಕ ಜುಗಾಡ್. ಕಡಿಮೆ ಉಷ್ಣತೆಯ ತಣ್ಣೀರಲ್ಲಿ ಮುಳುಗಿದಾಗ ದೇಹ ರಕ್ಷಣಾತ್ಮಕವಾಗಿ ತೀವ್ರತೆಯಿಂದ ಪ್ರತಿಕ್ರಿಯಿಸುತ್ತದೆ.

ಮೊದಲು ದೇಹದ ಚರ್ಮ ಬಿಗುವಾಗುತ್ತದೆ. ರಕ್ತನಾಳಗಳು ಸಂಕುಚಿತವಾಗುತ್ತವೆ. ಇದರಿಂದ ಊದಿಕೊಂಡ, ನೋವಿನ ದೇಹದ ಭಾಗ ಗುಣಮುಖ ವಾಗುತ್ತದೆ. ಹಾಗಾಗಿ ವ್ಯಾಯಾಮದ ನಂತರ ತಣ್ಣೀರ ಮುಳುಕು ಮಾಡಬೇಕೆನ್ನುವುದು. ಅಷ್ಟೇ ಅಲ್ಲ, ಸ್ನಾಯುಗಳ ಶಕ್ತಿ ಶೀಘ್ರವಾಗಿ ಮರು ಸ್ಥಾಪಿತ ವಾಗುತ್ತದೆ. ಅಲ್ಲದೆ ಮಿದುಳಿನ ಸಹಾನುಭೂತಿಗೆ ಸಂಬಂಧಿಸಿದ ನರಮಂಡಲ ಉತ್ತೇಜಿತಗೊಳ್ಳುತ್ತದೆ. ರಕ್ತ ಸಂಚಾರ ಸರಿಯಾಗುತ್ತದೆ. ಬ್ಲಡ್ ಪ್ರೆಶರ್ ಕೂಡ ಹದಕ್ಕೆ ಬರುತ್ತದೆ. ಅಲ್ಲದೆ ದೇಹ ಯಥೇಚ್ಛ ಪ್ರಮಾಣದ ಉಷ್ಣತೆಯನ್ನು ಕಳೆದುಕೊಳ್ಳುವುದರಿಂದ ಚಯಾಪಚಯ ಶಕ್ತಿ ವರ್ಧಿಸಿ ದೇಹತೂಕ ಸಮತೋಲನಕ್ಕೆ ಬರುತ್ತದೆ. ಜತೆಯಲ್ಲಿ ಪ್ರತಿರೋಧಕ ಶಕ್ತಿ ವರ್ಧಿಸುವುದು.

ಅಷ್ಟೇ ಅಲ್ಲ, ಬೆಳಗ್ಗೆ ತಣ್ಣೀರಲ್ಲಿ ಮುಳುಕುವುದರಿಂದ ಮೆಲಟೋನಿನ್, ಎಂಡೋರ್ಫಿನ್, ಸೆರೆಟೋನಿನ್ ಮೊದಲಾದ ನಮ್ಮ ಮೂಡ್ ಮತ್ತು ದೈಹಿಕ ಆರೋಗ್ಯವನ್ನು ನಿಭಾಯಿಸುವ ರಾಸಾಯನಿಕಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಇವು ಮುಂದಿನ ಇಡೀ ದಿನ ವ್ಯಕ್ತಿಯನ್ನು ಅತ್ಯಂತ ಜಾಗ್ರತೆ ಯಲ್ಲಿಡುತ್ತದೆ. ಪ್ರಮಾಣದಲ್ಲಿ ಕಮ್ಮಿಯಾದರೂ ಇದೇ ಪ್ರಯೋಜನವನ್ನು ತಣ್ಣೀರ ಶವರ್ ಸ್ನಾನದಿಂದ ಪಡೆಯಬಹುದು. ರಚನಾತ್ಮಕ ಕೆಲಸ ಮಾಡುವುದಕ್ಕಿಂತ ಮೊದಲು ತಣ್ಣೀರ ಸ್ನಾನ ಮಾಡಿದಲ್ಲಿ ನಮ್ಮ ಸೃಜನಾತ್ಮಕತೆ ಅತ್ಯಂತ ಜಾಗೃತವಾಗುತ್ತದೆ ಎಂಬುದು ಸಾಬೀತಾದ ಸತ್ಯ. ಹೀಗೆ ತಣ್ಣೀರಿನ ಮುಳುಕು ಹಾಕುವುದರಿಂದ ಇನ್ನೊಂದೈವತ್ತು ರೀತಿಯ ಉಪಯೋಗಗಳಿವೆ.

ಇದಾದ ಮೇಲೆ ಮೈ ನೀರನ್ನು ಒರೆಸಿಕೊಳ್ಳಬಾರದು. ದೇಹ ನಿಧಾನಕ್ಕೆ ತನ್ನ ಉಷ್ಣತೆ ಯನ್ನು ಪಡೆಯಬೇಕು. ಸಾಧ್ಯವಾದಲ್ಲಿ ಒದ್ದೆ ಬಟ್ಟೆಯಲ್ಲಿಯೇ
ಇದ್ದರೆ ಪರಿಣಾಮ ದುಪ್ಪಟ್ಟು. ಏಕೆಂದರೆ ಉಷ್ಣತೆ ಕಳೆದು ಕೊಂಡಷ್ಟು ಈ ದೇಹದೊಳಗಿನ ಎಲ್ಲ ರಾಸಾಯನಿಕ ದೊಂಬರಾಟಗಳು ಇನ್ನಷ್ಟು ನಡೆಯುತ್ತವೆ. ಬ್ರಹ್ಮ ಮುಹೂರ್ತದೊಳಗೆ ಎದ್ದು, ಹೊಳೆಯಲ್ಲಿ, ಪುಷ್ಕರಣಿಯಲ್ಲಿ ಮೂರು ಬಾರಿ ಮುಳುಗಿ ಎದ್ದು, ಒದ್ದೆ ಬಟ್ಟೆಯಲ್ಲಿಯೇ ಬಂದು ಪೂಜೆ ಪುನಸ್ಕಾರಗಳಲ್ಲಿ ತೊಡಗುವ ಪದ್ಧತಿ ಈಗಿನ ಅಥವಾ ಈಗೊಂದು ನೂರು ವರ್ಷದ ಹಿಂದಿನ ವೈದಿಕರು ಮಾಡಿಕೊಂಡು ಬಂದದ್ದಲ್ಲವಲ್ಲ.

ಋಷಿಮುನಿಗಳು ಇದನ್ನು ಅನಾದಿಕಾಲದಿಂದ ಮಾಡಿಕೊಂಡು ಬಂದಿದ್ದಾರೆ. ಪುಣ್ಯಸ್ಥಳಗಳಲ್ಲಿ, ನೀರು ಎಲ್ಲಿದೆಯೋ ಅದೇ ಗಂಗೆ ಎಂದು ಮುಳುಕು ಹೊಡೆಯುವವರು ಕೇವಲ ಋಷಿ-ಮುನಿಗಳು, ವೈದಿಕರು ಅಷ್ಟೇ ಆಗಿರಲಿಲ್ಲ. ಎಲ್ಲರೂ ಇದನ್ನು ಮಾಡುತ್ತಿದ್ದರು. ಇಂದಿಗೂ ಧರ್ಮಸ್ಥಳ, ಶೃಂಗೇರಿ ಬಹುತೇಕ ಧಾರ್ಮಿಕ ಸ್ಥಳಗಳಲ್ಲಿ ಇದು ಇದೆಯಲ್ಲ. ರಾಮೇಶ್ವರದಲ್ಲಿ ೨೨ ಕುಂಡ ಸ್ನಾನದಲ್ಲಿಯೂ ನೀರನ್ನು ತಲೆಯಮೇಲೆಯೇ ಹೊಯ್ಯುವುದು. ನಂತರದಲ್ಲಿ ಅಲ್ಲಿಯೇ ಇರುವ ಸಮುದ್ರದಲ್ಲಿ ಮುಳುಕು ಹಾಕಿದರೆ ಅದು ಪೂರ್ಣ.

ನೀವು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಲಹೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಆರೋಗ್ಯಕರ ಜೀವನ ಎಂದರೆ ಸಾಮಾನ್ಯವಾಗಿ ಇನ್ನಷ್ಟು ಆದಿಮಾನವರಾಗುವುದು. ಅವರಂತೆ ಓಡಾಡಿ, ಸೊಪ್ಪು ಸದೆ, ತರಕಾರಿ ತಿಂದು ಬದುಕಿದರೆ ಇಂದಿನ ಆಧುನಿಕ ರೋಗಗಳು ಯಾವುದೂ ಬರಲಿಕ್ಕಿಲ್ಲ. ಆದರೆ ಹಾಗೆ ಬದುಕಲಿಕ್ಕಾಗುವುದಿಲ್ಲವಲ್ಲ! ಆ ಕಾರಣಕ್ಕೇ ಯೋಗ, ವ್ಯಾಯಾಮ ಎಂಬಿತ್ಯಾದಿ ಜೈವಿಕ ಜುಗಾಡುಗಳನ್ನು ಮನುಷ್ಯ ಶುರುಮಾಡಿಕೊಂಡದ್ದು. ಅಂತೆಯೇ ಧ್ಯಾನ ಕೂಡ ಒಂದು ಜುಗಾಡು. ವ್ಯಾಕುಲತೆ, ಗಮನ ಭಂಗವಾಗುವ ನೂರೆಂಟು ವಿಚಾರಗಳು ನಿತ್ಯ ಬದುಕಿನಲ್ಲಿ ಬಾಽಸುವಾಗ, ಅದೆಲ್ಲವನ್ನು ಮಾನಸಿಕವಾಗಿ ಸಂಭಾಳಿಸುವುದು ಹೇಗೆ ಎಂಬ ಪ್ರಶ್ನೆಗೆ ಇಂದಿನ ಪಾಶ್ಚಾತ್ಯ ವಿಜ್ಞಾನದ ಏಕೈಕ ಉತ್ತರ ಮೆಡಿಟೇಶನ್.

ಆಶ್ಚರ್ಯ ಮತ್ತು ಖುಷಿಯ ವಿಚಾರವೆಂದರೆ ಇದೆಲ್ಲವೂ ನಮ್ಮ ಪೂರ್ವಜರ ನಿತ್ಯಕರ್ಮವಾಗಿತ್ತು. ಮನುಷ್ಯ ಇಂಥದ್ದೆಲ್ಲ ಸುಮ್ಮಸುಮ್ಮನೆ ಮಾಡಿಬಿಡುವುದಿಲ್ಲ. ಅದೊಂದು ರೂಢಿಯಾಗುವ ಮಟ್ಟಿಗೆ ಸಮಾಜದಲ್ಲಿದೆ ಎಂದರೆ, ಇದನ್ನೆಲ್ಲ ಸಾಕಷ್ಟು ಪ್ರಯೋಗಗಳ ತರುವಾಯವೇ ಸಮಾಜ ಅಳವಡಿಸಿ ಕೊಂಡದ್ದು ಎಂಬುದಂತೂ ನಿಜ. ಪಾಶ್ಚಿಮಾತ್ಯ ದೇಶದ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಇಂಥದ್ದನ್ನೆಲ್ಲ ಮಿಲಿಯನ್‌ಗಟ್ಟಲೆ ಖರ್ಚು ಮಾಡಿ ಕಂಡು ಹಿಡಿದ್ದೇವೆ ಎಂದೇ ಹೇಳಿಕೊಳ್ಳುತ್ತವೆ. ಭಾರತದಲ್ಲಿ ಇಂಥ ಪದ್ಧತಿಯಿತ್ತು ಎಂದು ಅಪ್ಪಿತಪ್ಪಿಯೂ ಅವರೆಂದೂ ಗುರುತಿಸುವುದಿಲ್ಲ. ಕೆಲವೊಮ್ಮೆ ಇವರೆಲ್ಲ ಇಲ್ಲಿನ ಯಾವುದೊ ಪದ್ಧತಿಯನ್ನು ನೋಡಿಕೊಂಡು ಹೋಗಿ, ಪ್ರಯೋಗಿಸಿ ದೃಢಪಡಿಸಿ, ತಾವೇ ಕಂಡುಹಿಡಿದದ್ದು ಎನ್ನುತ್ತಾರೆಯೇನೋ ಅನ್ನಿಸಿಬಿಡುತ್ತದೆ.

ನಾವಂತೂ, ‘ಇದೆಲ್ಲ ನಮ್ಮವರಿಗೆ ಗೊತ್ತಿತ್ತು’ ಎಂಬ ಹೆಮ್ಮೆ ಮತ್ತು ಬೆರಗಿನಿಂದಲೇ ಗ್ರಹಿಸಬೇಕಿದೆ. ನಮಗೆ ಗೊತ್ತಿದ್ದದ್ದನ್ನೇ ಖರ್ಚುಮಾಡಿ ದೃಢೀಕರಿಸು ತ್ತಿದ್ದಾರೆ ಎಂದೇ ಅಂದುಕೊಳ್ಳಬೇಕು. ಈ ಅರಿವಿಲ್ಲದಿದ್ದಲ್ಲಿ ನಮ್ಮಲ್ಲಿ ಈಗಾಗಲೇ ಇರುವುದರದ್ದೇ ಇನ್ನೊಂದು ರೂಪ ತಳೆದು ಅಮೆರಿಕದ ಟ್ರೆಂಡ್ ನಮ್ಮನ್ನಾವರಿಸುತ್ತವೆ. ಇಂಥ ಅದೆಷ್ಟೋ ಉದಾಹರಣೆ ಗಳು ಜುಗಾಡುಗಳು, ಬಯೋ ಹ್ಯಾಕ್‌ಗಳು ಪಶ್ಚಿಮದ ರೂಪ ತಳೆದು ನಮ್ಮವಾಗುತ್ತಿವೆ. ನಮ್ಮ ದೇಶದ ವಿಜ್ಞಾನಿಗಳೇಕೆ ನಮ್ಮ ಇಂಥ ಪದ್ಧತಿ-ರೂಢಿ-ರಿವಾಜುಗಳ ಹಿಂದಿನ ವಿಜ್ಞಾನದ ಜಾಡನ್ನು ಹಿಡಿದು ಹೋಗುವುದಿಲ್ಲ? ಅದಕ್ಕೆ ಬೇಕಾದ
ಸೌಲಭ್ಯದ ಕೊರತೆ ನಮ್ಮಲ್ಲಿದೆ ಎಂದೆನಿಸುತ್ತದೆ.

ನಾಡಿ, ಪ್ರಾಣ, ಚಕ್ರ, ಶಕ್ತಿಕೇಂದ್ರಗಳು ಎಂಬಿತ್ಯಾದಿ ಅದೆಷ್ಟೋ ವಿಷಯಗಳು ಇಂದಿಗೂ ವಿಜ್ಞಾನದ ಕೈಗೆಟುಕಿಲ್ಲ, ಬಗೆ ಹರಿದಿಲ್ಲ . ಇವೆಲ್ಲ ಇನ್ನೊಂದು ರೂಪ ಪಡೆದು ದಶಕದ ನಂತರ ಅಮೆರಿಕ, ಯುರೋಪಿನಲ್ಲಿ ಟ್ರೆಂಡಿಂಗ್ ಆದರೆ ನನಗಂತೂ ಆಶ್ಚರ್ಯವಿಲ್ಲ!!