ಸಂಗತ
ವಿಜಯ್ ದರ್‌ಡ
ಆ ನರಮೇಧ ನಡೆದ ಕಾಲಘಟ್ಟದಲ್ಲಿ ಯಾರ ಸರಕಾರ ಆಡಳಿತದಲ್ಲಿತ್ತು ಎಂಬುದು ಇಲ್ಲಿ ಮುಖ್ಯವಲ್ಲ. ಫಾರೂಕ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾಗಲೂ ಹಿಂದುಗಳ ಕೊಲೆ ನಡೆದಿದೆ, ನಂತರ ಜಗಮೋಹನ್ ಗವರ್ನರ್ ಆಗಿ ಬಂದ ನಂತರವೂ ಅದು ನಿಲ್ಲಲಿಲ್ಲ. ಯಾರು ಅಧಿಕಾರದಲ್ಲಿದ್ದರು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಹಿಂದೂಗಳು ಅಲ್ಲಿಂದ ಉಟ್ಟಬಟ್ಟೆಯಲ್ಲಿ ವಲಸೆ ಹೋದರು.
ಅತಿಹೆಚ್ಚು ಸುದ್ದಿಯಲ್ಲಿರುವ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್ ’ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಎಲ್ಲರ ಗಮನ ಸೆಳೆದಿದ್ದು
ಸಾರ್ವಜನಿಕ ಚರ್ಚೆಯ ವಿಷಯವಾಗಿಬಿಟ್ಟಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಗಟ್ಟಲೆ ಹಣಮಾಡಿದೆ. ಜತೆಜತೆಗೆ ಇಡೀ ದೇಶದಲ್ಲಿ ಸಂಚಲನವನ್ನು ಕೂಡ ಮೂಡಿಸಿದೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಮಹಾವಲಸೆಗೆ ಸಂಬಂಧಪಟ್ಟಂತೆ ಸತ್ಯಘಟನೆ ಯಾಧಾರಿತ ಚಲನಚಿತ್ರ ಇದಾಗಿರುವು ದರಿಂದ ಎಲ್ಲರೂ ನೋಡಲೇ ಬೇಕು ಎಂದು ಪ್ರಧಾನಿ ನರೇಂದ್ರಮೋದಿಯವರು ಕೂಡ ಕರೆಕೊಟ್ಟಿದ್ದಾರೆ. ಈ ಚಲನಚಿತ್ರ ವೀಕ್ಷಣೆ ಮಾಡಿ ಹೊರಬರುವಾಗ ರಕ್ತಕುದಿಯುವ ಅನುಭವವಾಗುತ್ತದೆ, ಜತೆಗೆ ಒಂದು ವಿಲಕ್ಷಣ ವಿಷಣ್ಣಭಾವ ಮನವನ್ನಾವರಿಸುತ್ತದೆ.
ನಿಜವಾಗಿಯೂ ಗಿರಿಜಾ ಟಿಕ್ಕುವನ್ನು ಉಗ್ರವಾದಿಗಳು ರೇಪ್ ಮಾಡಿ ಮರ ಕಟಾಯಿಸುವ ಯಂತ್ರದಲ್ಲಿ ನಿರ್ದಯವಾಗಿ ಛೇದಿಸಿ ಸಾಯಿಸಿದರೇ? ಎಂದು ಜನರು ಪ್ರಶ್ನೆ ಮಾಡು ತ್ತಿದ್ದಾರೆ. ಕಾಶ್ಮೀರಿ ಪಂಡಿತನೊಬ್ಬ ಅಕ್ಕಿಯ ಡ್ರಮ್ಮಿನಲ್ಲಿ ತಲೆ ಮರೆಸಿಕೊಂಡಿರುವುದರ
ಸುಳಿವನ್ನು ಪಕ್ಕದ ಮನೆಯಾತ ಯಾಕೆ ಉಗ್ರರಿಗೆ ಕೊಟ್ಟ? ಎಂಬುದು ಕೂಡ ಒಂದು ಪ್ರಶ್ನೆ. ರಕ್ತಸಿಕ್ತವಾದ ಅಕ್ಕಿಯನ್ನು ಮುಷ್ಟಿಯಲ್ಲಿ ಹಿಡಿದು ಮೃತನ ಪತ್ನಿಯ ಬಾಯಿಗೆ ಬಲಾತ್ಕಾರದಿಂದ ತುರುಕುವ ಸನ್ನಿವೇಶ ಅದೆಷ್ಟೋ ಭಯಾನಕ? ಇದನ್ನೆಲ್ಲ ನೋಡಿದಾಗ ನನಗೆ ಕ್ರೋಧ ಉಕ್ಕಿ ಬರುತ್ತಿದೆ ಮತ್ತು ಭವಿಷ್ಯದ ಬಗ್ಗೆ ಆತಂಕವೂ ಮನಸ್ಸಿನಲ್ಲಿ ಮೂಡುತ್ತಿದೆ.
ಪಾಕಿಸ್ತಾನದಿಂದ ಪ್ರೇರಿತರಾಗಿ ಬರ್ಬರ, ನೀಚ ಕೃತ್ಯಗಳನ್ನು ಎಸಗಿ ಝೀಲಂ ಮತ್ತು ಚೆನಾಬ್ ನದಿಯ ನೀರನ್ನು ಕಾಶ್ಮೀರಿ ಪಂಡಿತರ ರಕ್ತದಿಂದ ಕೆಂಪಾಗಿಸಿದ ಮಹಾಪಾತಕಿಗಳನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ. ಅಲ್ಲಿ ಸ್ನೇಹಾಚಾರ ಮತ್ತು ಸಹೋದರತ್ವದ ಕೊಲೆ ನಡೆದಿದೆ. ನಂಬಿಕೆ ಮತ್ತು ಪರಸ್ಪರ ಒಳಗೊಳ್ಳುವಿಕೆಯ ಭಾವವನ್ನು ಹೊಂದಿದ್ದ ನಾಗರಿಕತೆ ಬಲಿಪಶು ವಾಗಿದೆ.
ಅಲ್ಲಿ ತಾಯ್ತನದ ಮಹತ್ವಕ್ಕೆ ಧಕ್ಕೆಯಾಗಿದೆ, ಸಹೋದರ- ಸಹೋದರಿಯರ ನಡುವಿನ ಬಂಧದ ಪಾವಿತ್ರ್ಯದ ಸಂಕೇತವಾಗಿದ್ದ ರಾಖಿ ರಕ್ತಸಿಕ್ತವಾಗಿದೆ. ಮಾನವೀಯತೆ, ನಂಬಿಕೆ ಮತ್ತು ಪ್ರೀತಿಯನ್ನು ಛಿದ್ರಗೊಳಿಸುವಲ್ಲಿ ಬರ್ಬರತೆ ತನ್ನ ಅಟ್ಟಹಾಸವನ್ನು ಮೆರೆದಿದೆ. ಸಹೋದರತ್ವ ಮತ್ತು ಸಂಬಂಧಗಳ ಕೊಂಡಿ ಕಡಿದುಹೋಗಿದೆ. ಮನುಷ್ಯರ ನಡುವಿನ ಪವಿತ್ರ ಬಂಧಗಳು ರಕ್ತದಲ್ಲಿ ತೋಯ್ದುಹೋಗಿವೆ. ಎಲ್ಲಿ ಬರ್ಬರ ಕೃತ್ಯಗಳು ನಡೆದಿದ್ದವೋ ಅಲ್ಲ ಗಾಯ ಇನ್ನೂ ಮಾಸಿಲ್ಲ, ನೋವಿನ್ನೂ ಶಮನವಾಗಿಲ್ಲ. ವಿಶ್ವಾಸಾರ್ಹತೆ ಎಂಬುದು ಬದುಕಿನ ಬಹುಮುಖ್ಯ ಅಂಗ. ಹಾಗಾಗಿ ಕಾಶ್ಮೀರದಲ್ಲಿ ವಿಶ್ವಾಸದ ಫಸಲು ತೆಗೆಯುವ ಕೆಲಸ ಬಹುಮುಖ್ಯವಾಗಿ ಆಗಬೇಕಿದೆ.
ಕಳೆದ ತಿಂಗಳಲ್ಲಿ ನಾನು ಕಾಶ್ಮೀರ ಕಣಿವೆಯ ಪ್ರವಾಸ ಮಾಡಿ ಬಂದಿದ್ದೆ. ಆ ಕುರಿತಾಗಿ ನನ್ನ ಅಂಕಣದಲ್ಲಿ ಉಲ್ಲೇಖ ಮಾಡಿದ್ದೇ ಕೂಡ. ಉಗ್ರವಾದಿಗಳ ಕೃತ್ಯಕ್ಕೆ ಶೂನ್ಯ ಸಂವೇದನೆ ಸಿಕ್ಕ ಕಾರಣದಿಂದ ಅದಿನ್ನೂ ಜೀವಂತವಾಗಿದೆ ಎಂದೆನಿಸುತ್ತದೆ. ಕಾಶ್ಮೀರದಲ್ಲಿ ಪ್ರೀತಿಯ ಸಂದೇಶ ಎಡೆ ಹರಡಬೇಕು. ನಾನು ಅಲ್ಲಿಗೆ ಹೋಗಿದ್ದಾಗ ಕಾಶ್ಮೀರ್ ಫೈಲ್ಸ್ ವಿಚಾರ ಚರ್ಚೆಯಲ್ಲಿರಲಿಲ್ಲ. ಯಾವಾಗ ಈ ಚಲನಚಿತ್ರ ತೆರೆಗೆ ಬಂದು ಕಾಶ್ಮೀರಿ ಪಂಡಿತರ ಮೇಲಾದ ಘನಘೋರ ಅನ್ಯಾಯ ಬಟಾಬಯಲಾಯಿತೋ ಅಂದಿನಿಂದ ಇದು ಎಡೆ ಚರ್ಚಿತವಾಗುತ್ತಿದೆ, ಸುದ್ದಿಗೆ ಗ್ರಾಸವಾಗಿದೆ.
1990ರಲ್ಲಿ ಸರಿಸುಮಾರು ಒಂದೂವರೆ ಲಕ್ಷ ಕಾಶ್ಮೀರಿ ಪಂಡಿತರು ಬೇರೆ ವಿಧಿಯಿಲ್ಲದೇ ತಮ್ಮ ಮನೆಮಠ ತೊರೆದು ವಲಸೆ ಹೋಗಬೇಕಾಯಿತು. ಒಬ್ಬ ವ್ಯಕ್ತಿ ತನ್ನದೇ ದೇಶದಲ್ಲಿ ನಿರಾಶ್ರಿತನಾಗಿ ಬದುಕುವುದು ಎಷ್ಟು ಘೋರ ಎಂಬುದರ ಕುರಿತು ನಾನು ದನಿ ಎತ್ತಿದ್ದೇ ಮತ್ತು ಇದು ಅಕ್ಷಮ್ಯ ಎಂದು ಒತ್ತಿಹೇಳಿದ್ದೆ. ಕಾಶ್ಮೀರಿ ಪಂಡಿತರು ತಮ್ಮ ತಮ್ಮ ಮನೆಗಳಿಗೆ ಮರಳಬೇಕು
ಎಂಬುದರ ಕುರಿತೂ ನಾನು ಆಗ್ರಹಪೂರ್ವಕ ಒತ್ತಾಯ ಮಂಡಿಸಿದ್ದೆ.
ಮನಮೋಹನಸಿಂಗ್‌ರ ಸರಕಾರ ಜಮ್ಮುವಿನಲ್ಲಿ ನಿರಾಶ್ರಿತ ಪಂಡಿತರಿಗೆ 5242 ಮನೆಗಳನ್ನು ಕಟ್ಟಿಸಿಕೊಟ್ಟಿತ್ತು. ಬುದಗಮ್
ಜಿಲ್ಲೆಯ ಶೇಖಾಪುರದಲ್ಲಿ 200 ಫ್ಲಾಟುಗಳನ್ನು ಕೊಡಮಾಡಿತ್ತು. ಇದು ಸಾಕಾಗದು ಎಂದು ನಾನು ಆಗ ಹೇಳಿದ್ದೆ. ಕಾಶ್ಮೀರದಲ್ಲಿ ಯಾರೂ ಕೂಡ ಕಾಶ್ಮೀರಿ ಪಂಡಿತರ ಮೇಲೆ ಹ ಮಾಡದಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದು ನಾನು ಆಗ್ರಹಿಸಿದ್ದೆ. ಅವರು ಎಲ್ಲಿದ್ದರೋ ಅಲ್ಲಲ್ಲಿಗೆ ವಾಪಸು ತೆರಳುವಂತಾಗಬೇಕು. ಪರಿಸ್ಥಿತಿ ತಿಳಿಯಾಗಿ ಎಲ್ಲವೂ ಒಳಿತಾಗಲಿ ಎಂದು ಎಲ್ಲರೂ
ಬಯಸಿದ್ದರು. ಅಷ್ಟರಲ್ಲಿ ಈ ಸಿನಿಮಾ ಹೊರಬಂದಿದೆ. ನನಗೊಂದು ಗೀತೆ ಇಲ್ಲಿ ನೆನಪಾಗುತ್ತಿದೆ.
ಬಹುತ್ ದೇರ್ ಕರ್ ದೀ ಹುಜೂರ್ ಆತೆ… ಆತೆ… (ಬರುವಾಗ ನೀವು ತುಂಬಾ ತಡಮಾಡಿಬಿಟ್ಟಿರಿ ಹುಜೂರ್) ಗಾಯವನ್ನು ಎಂದೂ ಕರೆಯಬಾರದು, ಹಾಗೆ ಮಾಡಿದರೆ ಅದರ ಸ್ಥಿತಿ ಇನ್ನಷ್ಟು ಉಲ್ಬಣಗೊಂಡು ಗುಣವಾಗಲು ಹೆಚ್ಚು ಕಾಲ ತಗಲುತ್ತದೆ. ಇದು ನಮ್ಮ ಭಾರತೀಯ ಸಂಸ್ಕೃತಿಯ ಒಂದು ಉಕ್ತಿ. ಹೌದು, ಗಾಯವನ್ನು ಶಮನ ಮಾಡಬೇಕು. ಮುಂಬಯಿ ಗಲಭೆಯ ಕುರಿತಾದ ಶ್ರೀಕೃಷ್ಣ ಕಮಿಶನ್ ವರದಿಯನ್ನು ಬಹಿರಂಗಪಡಿಸುವುದನ್ನು ಅಟಲ ಬಿಹಾರಿ ವಾಜಪೇಯಿಯವರು ನಿರಾಕರಿಸಿ ದ್ದರು. ವಾತಾವರಣ ಇನ್ನಷ್ಟು ಬಿಡಗಾಯಿಸಬಾರದು ಎಂಬುದು ಅದರ ಹಿಂದಿದ್ದ ಕಾರಣ.
ಫಾರೂಕ್ ಅಹಮದ್ ಡಾರ್ ಆಲಿಯಾಸ್ ಬಿಟ್ಟಾ ಕರಾಟೆ ತಾನು ಹಿಂದೂಗಳನ್ನು ಅಮಾನುಷವಾಗಿ ಕೊಲೆ ಮಾಡಿದ್ದೇನೆಂದು ಬಹಿರಂಗ ಸಂದರ್ಶನದಲ್ಲಿ ಹೇಳಿಕೊಂಡಿದ್ದರೂ ಆತನ ಮೇಲೆ ಯಾಕೆ ಕಾನೂನು ಕ್ರಮ ಜರುಗಲಿಲ್ಲ ಎಂದು ಜನ ಇಂದು ಕೇಳುತ್ತಿzರೆ. ಪ್ರಶ್ನೆ ನ್ಯಾಯಯುತವಾಗಿದೆ. ಅದಕ್ಕೊಂದು ಉತ್ತರ ಸಿಗಲೇಬೇಕಿದೆ. ಆ ನರಮೇಧ ನಡೆದ ಕಾಲಘಟ್ಟದಲ್ಲಿ ಯಾರ ಸರಕಾರ ಆಡಳಿತದಲ್ಲಿತ್ತು ಎಂಬುದು ಇಲ್ಲಿ ಮುಖ್ಯವಲ್ಲ. ಫಾರೂಕ್ ಅಬ್ದು ಮುಖ್ಯಮಂತ್ರಿಯಾಗಿzಗಲೂ ಹಿಂದುಗಳ
ಕೊಲೆ ನಡೆದಿದೆ, ನಂತರ ಜಗಮೋಹನ್ ಗವರ್ನರ್ ಆಗಿ ಬಂದ ನಂತರವೂ ಅದು ನಿಲ್ಲಲಿಲ್ಲ. ಯಾರು ಅಽಕಾರದಲ್ಲಿದ್ದರು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಹಿಂದೂಗಳು ಅಲ್ಲಿಂದ ಉಟ್ಟಬಟ್ಟೆಯಲ್ಲಿ ವಲಸೆ ಹೋದರು.
ಸೆಂಟರ್ ಫಾರ್ ಇಂಟಿಗ್ರೇಟೆಡ್ ಎಂಡ್ ಹೊಲಿಸ್ಟಿಕ್ ಸ್ಟಡೀಸ್‌ನ ಸಂಶೋಧನಾ ತಂಡ ಒಂದು ಪಟ್ಟಿಯನ್ನು ತಯಾರಿಸಿ 1989 ರಿಂದ 2003ರ ತನಕ ಕಾಶ್ಮೀರದ ಹಿಂದೂಗಳ ಮೇಲೆ ಯಾವ್ಯಾವ ಬಗೆಯಲ್ಲಿ ಅನ್ಯಾಯಗಳು ನಡೆದಿವೆ ಎಂಬುದನ್ನು ದಾಖಲಿಸಿದೆ. ಈ ಅಂಕಿ-ಅಂಶಗಳನ್ನು ನೋಡಿದಾಗ ಅಚ್ಚರಿ ಮತ್ತು ಆಕ್ರೋಶ ಎರಡೂ ಏಕಕಾಲಕ್ಕೆ ಉದ್ಭವಿಸುತ್ತವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಆಗ ಏನು ಮಾಡುತ್ತಿದ್ದವು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಆ ಕಾಲದಲ್ಲಿ ಅಽಕಾರದಲ್ಲಿದ್ದ
ನಾಯಕರುಗಳಲ್ಲಿ ನಾನು ಈ ಪ್ರಶ್ನೆಯನ್ನು ಹಾಕಿz.
ಆದರೆ, ಅವರಾರಿಗೂ ಉತ್ತರಿಸುವ ಮತ್ತು ತಮ್ಮ ತಪ್ಪು ಗಳನ್ನು ತೆರೆದಿಡುವ ಧೈರ್ಯ ಇರಲಿಲ್ಲ. ಎಲ್ಲರೂ ಬಾಯಿಮುಚ್ಚಿ ಕೊಂಡಿದ್ದರು. ಸರಕಾರಗಳು ಏಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾದವು, ಉಗ್ರವಾದವನ್ನು ಹತ್ತಿಕ್ಕುವುದು ಅವರಿಂದ ಏಕೆ ಸಾಧ್ಯವಾಗಲಿಲ್ಲ ಎಂಬುದು ಇಂದಿಗೂ ಅರ್ಥವಾಗದ ಬೇಸರದ ವಿಷಯ. ಅದು ಮುಸ್ಲಿಮರ ಮೇಲಿನ ದೌರ್ಜನ್ಯವಾಗಿದ್ದರೆ ಏನಾಗುತ್ತಿತ್ತು ಎಂಬುದು ಕೂಡ ಪ್ರಶ್ನಿತ ವಿಷಯ. ಆದರೆ ಒಂದು ಮಾತು. ಭಾರತ ಎಂದಿಗೂ ಜನಾಂಗೀಯ ತಾರತಮ್ಯವನ್ನು ಎಸಗಿಲ್ಲ. ಹಿಂದುಗಳಾಗಲೀ, ಮುಸ್ಲಿಮರಾಗಲೀ ಎಲ್ಲರೆಡೆಗೆ ಈ ದೇಶಕ್ಕೆ ಏಕಭಾವವಿದೆ.
ಉಗ್ರವಾದ ಈ ದೇಶದಲ್ಲಿ ಎಂದು ಹುಟ್ಟಿತೋ, ಅಂದೇ ಅದನ್ನು ಬೇರುಸಮೇತ ಕಿತ್ತುಹಾಕುವ ಕೆಲಸ ನಡೆಯಬೇಕಿತ್ತು. ಆ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಬೇಕಿತ್ತು. ಇಂದಿರಾಗಾಂಧಿ ಏನು ಮಾಡಿದ್ದರೋ ಅದನ್ನು ಮತ್ತೆ ಮಾಡು ತ್ತೇವೆ ಎಂಬ ಸಂದೇಶ ರವಾನೆಯಾಗಬೇಕಿತ್ತು. ಇದೀಗ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ನಂತರದಲ್ಲಿ ಹುಟ್ಟಿಕೊಂಡಿರುವ ಉದ್ವೇಗದ ಸ್ಥಿತಿಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸಬೇಕು. ಮತ್ತು ಆ ಮೂಲಕ ಆತಂಕವನ್ನು ಬೆಂಕಿಯಾಗಿಸದೇ ಅದಕ್ಕೊಂದು ಕ್ರಿಯಾತ್ಮಕ ಅಂತ್ಯ ಕಂಡುಕೊಳ್ಳಬೇಕು.
ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಬೇಕು, ಅವರ ವಿರುದ್ಧ ನಡವಳಿಕೆಗಳು ನಡೆಯಕೂಡದು. ಕಾಶ್ಮೀರಿ ಮುಸ್ಲಿಮರನ್ನು ಮುನ್ನೆಲೆಗೆ ತಂದು ಕಾಶ್ಮೀರಿ ಪಂಡಿತರ ಮೇಲಾದ ಹತ್ಯಾಕಾಂಡವನ್ನು ಹತ್ತಿಕ್ಕುವುದು ಖಂಡಿತವಾಗಿಯೂ ಸಮಂಜಸ ನಡೆಯಲ್ಲ. ಇರಲಿ ಕಾಶ್ಮೀರಿ ಮುಸ್ಲಿಮರು ಅತ್ಯಾಚಾರದ ಭಾಗವಾಗಿದ್ದರೆ ಅವರೂ ಮುಂದೆ ಬರಲಿ, ಅವರಿಗೂ ನ್ಯಾಯ ಕೊಡಿಸೋಣ. ಆದರೆ ಕಾಶ್ಮೀರಿ ಪಂಡಿತರ ಪುನರ್ವಸತಿಯಲ್ಲಿ ಚ್ಯುತಿ ಮಾಡುವುದು ಬೇಡ.
ರಾಜಕೀಯ ನಡವಳಿಕೆಗಳು ಏನೇ ಇರಲಿ ನ್ಯಾಯದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಮುಗಿಸುವ ಮುನ್ನ ಒಂದು ಮಾತು. ಕಳೆದ ವಾರ ನಾನು ಮಾಲ್ಡೀವ್ಸ್‌ಗೆ ಹೋಗಿದ್ದೆ. ಅಲ್ಲಿ ನಾನು ಭೇಟಿಯಾದ ವ್ಯಕ್ತಿಗಳಲ್ಲಿ ಇಬ್ಬರು ದುಬೈನವರು, ಮತ್ತಿಬ್ಬರು ಪಾಕಿಸ್ತಾನದವರು. ಅವರ ಪೋಷಕರು ದುಬೈಗೆ ಬಂದು ನೆಲೆನಿಂತ ಕುಟುಂಬದವರು. ಶಾಲಾ ಶುಲ್ಕ ಹೆಚ್ಚಿದ್ದ ಕಾರಣ ಆತನನ್ನು ೮ ಪೋಷಕರು ದುಬೈನಲ್ಲಿ ಭಾರತೀಯ ಶಾಲೆಗೆ ಸೇರಿಸಿದ್ದರು. ಅವರು ತಾನು ಓದಿದ್ದ ಖಾನ್ ಅಬ್ದುಲ್ ಗಫಾರ್ ಖಾನ್, ನೆಹರು ಸೇರಿದಂತೆ ಅನೇಕ ನಾಯಕರ ಫೋಟೋಗಳನ್ನು ತನ್ನ ಫೋನಿನಲ್ಲಿ ನನಗೆ ತೋರಿಸಿದ.
ನನ್ನ ಜತೆ ಕುಳಿತಿದ್ದ ಅರಬ್ ವ್ಯಕ್ತಿ ಅಸಹನೆಗೆ ಒಳಗಾದ. ಪಾಕಿಸ್ತಾನವೂ ಒಂದು ದೇಶವೇ? ಅಲ್ಲಿನ ಜನ ಗ್ಯಾಸ್ ಚೇಂಬರ್ ನಲ್ಲಿದ್ದರು. ಆದಾಗ್ಯೂ ಜನರು ಪಾಕಿಸ್ತಾನದ ನಿಲುವನ್ನ ಬೆಂಬಲಿಸುತ್ತಾರೆ; ಇದು ಸರಿಯೇ? ಎಂದರು. ನಾನು ಅವೆಲ್ಲವನ್ನೂ ನೋಡುತ್ತ ಕುಳಿತಿದ್ದೆ.