Saturday, 14th December 2024

ಕಳೆದುಕೊಂಡವರ ದುಃಖ ನಮ್ಮದಾಗದಿರಲಿ!

ಅಕ್ಷರ ದಾಮ್ಲೆ

ಮನಃಶಾಸ್ತ್ರಜ್ಞ

‘ನಾನು ಇನ್ನು ಯಾಕೆ ಬದುಕಿರಬೇಕು? ನಾನು ಇದ್ದು ಯಾರಿಗೆ ಏನು ಲಾಭ ಇದೆ? ನಾನು ಸತ್ತರೆ ಆಳುವವರಾರು? ನಾನು ಇದ್ದು ಏನು ಮಾಡಬೇಕಾಗಿದೆ?’…ಇದು ವಿಷವನ್ನು ಕುಡಿದು ಆಮೇಲೆ ತನ್ನ ಚಿಕ್ಕಪ್ಪನಲ್ಲಿ ಆ ಯುವಕ ಬಂದು ಹೇಳಿದ ಮಾತು. ಅವನ ಜೀವನದಲ್ಲಿ ಹೇಳುವಂತಹ ಯಾವುದೇ ದುರ್ಘಟನೆಯೂ ಸಂಭವಿಸಿರಲಿಲ್ಲ. ಕಿತ್ತು ತಿನ್ನುವಂತಹ ಕಷ್ಟವೂ ಇರಲಿಲ್ಲ. ತಂದೆ ತಾಯಿಗೆ ಒಬ್ಬನೇ ಮಗ. ಚಿಕ್ಕಪ್ಪನಿಗೆ ಹುಡುಗ ಏನೋ ಹುಡುಗಾಟಿಕೆಯ ಮಾತುಗಳನ್ನಾಾಡುತ್ತಿಿದ್ದಾನೆ ಎಂದೇ ತೋರಿತ್ತು. ವಿಷ ಕುಡಿದು ಬಂದು ಮಾತನಾಡುತ್ತಿಿದ್ದೇನೆ ಅಂತ ಆತ ಹೇಳುವಾಗ ಸಮಯ ಕೈಮೀರಿ ಹೋಗಿತ್ತು. ಆಮೇಲೆ ಆಸ್ಪತ್ರೆೆಗೆ ಕರೆದುಕೊಂಡು ಹೋಗಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಆತನ ತಾಯಿಯ ಆಕ್ರಂದನ ಮುಗಿಲು ಮುಟ್ಟಿಿತ್ತು. ಹಸನ್ಮುಖಿಗಳಾಗಿರುತ್ತಿಿದ್ದ ದಂಪತಿಯ ಮುಖದಲ್ಲಿ ಪುತ್ರಶೋಕದಿಂದ ಕಾರ್ಮೋಡದ ಛಾಯೆ ಆವರಿಸಿತ್ತು. ವಯಸ್ಸಿಿಗೆ ಬಂದಿದ್ದ ಮಗನಿಗೆ ಮದುವೆ ಮಾಡಿ ತುಂಬು ಸಂಸಾರವನ್ನು ಹೊಂದಿ ಖುಷಿಯಿಂದ ಜೀವನ ಮಾಡುವ ಕನಸು ಬತ್ತಿಿ ಹೋಗಿತ್ತು.

ಇದು ಕೇವಲ ಒಂದು ಕುಟುಂಬದ ಕಥೆಯಲ್ಲ. ಭಾರತದಲ್ಲಿ ಪ್ರತಿ ವರ್ಷ ಇದೇ ರೀತಿ ಲಕ್ಷಾಂತರ ಕುಟುಂಬಗಳ ಕನಸುಗಳು ಕಣ್ಮರೆಯಾಗುತ್ತಿಿವೆ. ಅಧಿಕೃತ ವಿಶ್ವ ಆರೋಗ್ಯ ಸಂಸ್ಥೆೆಯ 2016ರ ಅಂಕಿಅಂಶದ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 2.3 ಲಕ್ಷ ಜನ ಆತ್ಮಹತ್ಯೆೆ ಮಾಡಿಕೊಳ್ಳುತ್ತಾಾರೆ. ಭಾರತ ಸರಕಾರದ ಅಧಿಕೃತ ಮಾಹಿತಿ ಇರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಬಳಿ. ಅದರ ಪ್ರಕಾರ ಅಂಕಿಅಂಶಗಳು ಇನ್ನೂ 2015ರ ಪ್ರಕಾರವಷ್ಟೇ ಲಭ್ಯವಿದೆ.

ಅಂಕಿ ಸಂಖ್ಯೆೆಗಳ ಪ್ರಕಾರ
ಸರಕಾರೀ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ನೋಡಿದಾಗ, ಸುಮಾರು 34 ಶೇಕಡಾ ಜನರು ಕೌಟುಂಬಿಕ ಸಮಸ್ಯೆೆಗಳಿಂದ (ದಾಂಪತ್ಯ ವಿರಸದ ವಿಚಾರಗಳನ್ನು ಹೊರತುಪಡಿಸಿ) ಆತ್ಮಹತ್ಯೆೆಗೆ ಶರಣಾಗುತ್ತಿಿದ್ದಾರೆ. ಅನಾರೋಗ್ಯದ ಸಮಸ್ಯೆೆ ಆತ್ಮಹತ್ಯೆೆಗೆ ಮೂರನೇ ಕಾರಣ (15.8%). ಅಂದರೆ ಈ ಎರಡು ಕಾರಣಗಳೇ ಸುಮಾರು 51 ಶೇಕಡಾದಷ್ಟು ಜೀವಹಾನಿಗೆ ಕಾರಣವಾಗುತ್ತಿಿವೆ.

ಇನ್ನೂ ಸ್ವಲ್ಪ ಆಳವಾಗಿ ನೋಡಿದಾಗ, ಹೆಚ್ಚಿಿನ ಆತ್ಮಹತ್ಯೆೆಯ ಪ್ರಕರಣಗಳು 18 ವರ್ಷದಿಂದ 45 ವರ್ಷ ವಯೋಮಾನದಲ್ಲಿ ನಡೆಯುತ್ತಿಿದೆ. ಅಂದರೆ ಒಬ್ಬ ವ್ಯಕ್ತಿಿಯು ತನ್ನ ಜೀವನದ ಬಹು ಉತ್ತಮ ಘಟ್ಟದಲ್ಲಿ ಇರಬೇಕಾದಂತ ಸಂದರ್ಭದಲ್ಲಿ ಜೀವ ಕಳೆದುಕೊಳ್ಳುವುದು ಎಂದರೆ ಅದು ಅವರ ಕುಟುಂಬಕ್ಕೆೆ ಮತ್ತು ದೇಶಕ್ಕೆೆ ಒಂದು ದೊಡ್ಡ ನಷ್ಟ. ಒಬ್ಬ ವ್ಯಕ್ತಿಿಯ ಜೀವ ಹಾನಿಯು ಇತರ ಅನೇಕರ ಮೇಲೆ ಬಹಳ ದೊಡ್ಡ ಮಾನಸಿಕ ಆಘಾತವನ್ನು ಕೊಡುವುದಲ್ಲದೆ ಇತರ ಅನೇಕ ಸಮಸ್ಯೆೆಗಳನ್ನು ಉಂಟುಮಾಡುತ್ತದೆ. ಅದೂ ಕೂಡಾ 30-45 ವರ್ಷದ ವ್ಯಕ್ತಿಿಗಳಲ್ಲಿ ಅನೇಕರಿಗೆ ಮಕ್ಕಳಿರುತ್ತಾಾರೆ. ಆ ಮಕ್ಕಳ ಮೇಲೂ ಮಾನಸಿಕವಾಗಿ, ಆರ್ಥಿಕವಾಗಿ ಪರಿಣಾಮ ಆಗುತ್ತದೆ.

ವಿಶ್ವದಲ್ಲಿ ಪ್ರತಿ ವರ್ಷ 8 ಲಕ್ಷಕ್ಕೂ ಅಧಿಕ ಜನ ಆತ್ಮಹತ್ಯೆೆಗೆ ಶರಣಾಗುತ್ತಾಾರೆ. ದಕ್ಷಿಣ ಏಷ್ಯಾಾದಲ್ಲೇ ಆತ್ಮಹತ್ಯೆೆಗಳ ಸಂಖ್ಯೆೆಗಳಲ್ಲಿ ಭಾರತ ಮೊದಲ ಸ್ಥಾಾನದಲ್ಲಿದೆ. ಹೀಗಿರುವಾಗ ಈ ದೊಡ್ಡ ಸಮಸ್ಯೆೆಯನ್ನು ನಿಯಂತ್ರಿಿಸುವುದು ಮತ್ತು ತಡೆಯುವುದು ಬಹಳ ಅಗತ್ಯ. ಹಾಗಾಗಿಯೇ ಬಹುಶಃ ಸೆ.10ನೇ ತಾರೀಕಿನಂದು ಪ್ರತಿ ವರ್ಷ ಆತ್ಮಹತ್ಯೆೆ ತಡೆಗಟ್ಟುವ ದಿನವನ್ನು ಆಚರಿಸುವುದರ ಜೊತೆಗೆ, ಈ ವರ್ಷ, ಅ.10ರಂದು ಆಚರಿಸುವ ವಿಶ್ವ ಮಾನಸಿಕ ಆರೋಗ್ಯ ದಿನದ ಮುಖ್ಯ ವಿಷಯವನ್ನಾಾಗಿ ಆತ್ಮಹತ್ಯೆೆ ತಡೆಗಟ್ಟುವುದನ್ನು ಆಯ್ಕೆೆಮಾಡಿಕೊಂಡಿರುವುದು. ಇದಕ್ಕೆೆ ಇನ್ನೂ ಒಂದು ಮುಖ್ಯ ಕಾರಣ ಇದೆ. ಅದೇನೆಂದರೆ ಮಾನಸಿಕ ಅನಾರೋಗ್ಯ ಅಥವಾ ಅಸಮತೋಲನ ಹಾಗೂ ಆತ್ಮಹತ್ಯೆೆಗೆ ಬಹಳ ನಿಕಟವಾದ ಸಂಬಂಧವಿದೆ. ವಿಶ್ವ ಆರೋಗ್ಯ ಸಂಸ್ಥೆೆಯ ಪ್ರಕಾರ ಹೆಚ್ಚಿಿನ ಬಾರಿ ಆತ್ಮಹತ್ಯೆೆ ಮಾಡಿಕೊಂಡವರು ಒಂದೋ ಖಿನ್ನತೆ ಅಥವಾ ಮಾದಕವಸ್ತುಗಳ ವ್ಯಸನಗಳಿಗೆ ಒಳಗಾಗಿರುತ್ತಾಾರೆ. ಹಾಗಾಗಿ ಆತ್ಮಹತ್ಯೆೆಯನ್ನು ತಡೆಗಟ್ಟಬೇಕಾದರೆ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಬಹಳ ಅನಿವಾರ್ಯ.

ತಡೆಗಟ್ಟುವ ಯೋಜನೆ: ಈ ನಿಟ್ಟಿಿನಲ್ಲಿ ಕಾರ್ಯನಿರತವಾಗಿರುವ ವಿಶ್ವ ಆರೋಗ್ಯ ಸಂಸ್ಥೆೆಯು ಆತ್ಮಹತ್ಯೆೆಯನ್ನು ತಡೆಗಟ್ಟುವುದಕ್ಕೆೆ 4 ಹಂತದ ವಿಧಾನಗಳನ್ನು ತಿಳಿಸಿದ್ದಾರೆ. ಅವುಗಳೆಂದರೆ,
1. ಕಣ್ಗಾಾವಲು
2. ಅಪಾಯಗಳು ಮತ್ತು ರಕ್ಷಣಾತ್ಮಕ ಅಂಶಗಳ ಗುರುತಿಸುವಿಕೆ
3. ತಡೆಗಟ್ಟುವ ಉಪಾಯಗಳ ರಚನೆ ಮತ್ತು ಮೌಲ್ಯಮಾಪನ
4. ಅನುಷ್ಠಾಾನ

ಈ ನಾಲ್ಕೂ ಹೆಜ್ಜೆೆಗಳಲ್ಲಿ ಭಾರತ ಬಹಳ ಹಿಂದಿದೆ. ಇದಕ್ಕೆೆ ಕಾರಣಗಳು ಹಲವಾರು.
ಮೊದಲನೆಯದು, ಭಾರತದ ಜನಸಂಖ್ಯೆೆ! ಇಷ್ಟೊೊಂದು ಜನಸಂಖ್ಯೆೆ ಇರುವ ದೇಶದಲ್ಲಿ ಪ್ರತಿಯೊಬ್ಬರ ಮೇಲೆ ನಿಗಾ ಇಡುವುದು ಕಷ್ಟಸಾಧ್ಯ. ಯಾರಾ ಮನಸ್ಥಿಿತಿ ಯಾವ ರೀತಿ ಇದೆ ಎಂದು ನಿರ್ದಿಷ್ಟ ಅವಧಿಗೊಮ್ಮೆೆಯಾದರೂ ಪರೀಕ್ಷಿಸುವುದು ಅಷ್ಟೊೊಂದು ಸುಲಭದ ಮಾತಲ್ಲ.

ಎರಡನೆಯ ಅಂಶಕ್ಕೆೆ ಬರೋಣ. ಭಾರತದಲ್ಲಿ ಅಪಾಯಗಳನ್ನು ಬಾಹ್ಯ ರೀತಿಯಲ್ಲಿ ನೋಡಿಯಾಗಿದೆ. ಆದರೆ ಅವುಗಳ ಆಳಕ್ಕೆೆ ಇಳಿದು ಇನ್ನೂ ಸಮರ್ಪಕವಾದ ಅಧ್ಯಯನಗಳು ನಡೆದಿಲ್ಲ. ಉದಾಹರಣೆಗೆ, ದಾಖಲೆಗಳ ಪ್ರಕಾರ ನಗರ ಪ್ರದೇಶಗಳಲ್ಲಿ ಆತ್ಮಹತ್ಯೆೆಯ ಪ್ರಮಾಣ ಜಾಸ್ತಿಿ ಇದೆ. ಇದಕ್ಕೆೆ ಕಾರಣಗಳೇನು, ಯಾಕೆ ಹೀಗಾಗುತ್ತಿಿದೆ ಎಂಬುದಕ್ಕೆೆ ನಮ್ಮಲ್ಲಿ ವೈಜ್ಞಾನಿಕ ಅಧ್ಯಯನಗಳಿಲ್ಲ. ‘ಇತರೆ’ ಕೌಟುಂಬಿಕ ಸಮಸ್ಯೆೆಗಳಿಂದಾಗಿ ಅತೀ ಹೆಚ್ಚು ಜನರು ಜೀವಹಾನಿ ಮಾಡಿಕೊಳ್ಳುತ್ತಿಿದ್ದಾರಾದರೂ, ಆ ಇತರೆ ಕಾರಣಗಳೇನು ಎಂಬುದು ಸ್ಪಷ್ಟವಾಗಿಲ್ಲ. ಅಂಕಿ ಅಂಶಗಳ ಪ್ರಕಾರ 2015 ರಲ್ಲಿ 26087 ಮಂದಿಗಳು ‘ಇತರೆ ಕಾರಣಗಳಿಂದಾಗಿ’ ಜೀವ ಕಳೆದುಕೊಂಡಿದ್ದಾರೆ. ಆದರೆ ಈ ಇತರೆ ಕಾರಣಗಳು ಯಾವುವು ಎಂಬುದು ಎಲ್ಲೂ ನಮೂದಿಸಿಲ್ಲ.

ಅಂದರೆ ನಾವು ಬಹಳ ಮೇಲ್ಮಟ್ಟದಲ್ಲಿ ಅಂಕೆ-ಸಂಖ್ಯೆೆಗಳನ್ನು ಇಟ್ಟುಕೊಳ್ಳುತ್ತಿಿದ್ದೇವೆಯೇ ಹೊರತು ತಳಮಟ್ಟಕ್ಕೆೆ ಇಳಿದೇ ಇಲ್ಲ. ಇನ್ನೂ ಒಂದು ವಿಪರ್ಯಾಸವೆಂದರೆ, ಹಲವಾರು ವಿಷಯಗಳಿಗೆ ಆಧಾರ ಕಾರ್ಡ್, ಪ್ಯಾಾನ್ ನಂಬರ್ ಅಂತೆಲ್ಲಾ ಸರಕಾರ ದಾಖಲೆಗಳನ್ನಿಿಟ್ಟುಕೊಂಡರೂ, ಇಷ್ಟೆೆಲ್ಲಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಿಯಾದರೂ, 2015 ರ ನಂತರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂತರ್ಜಾಲದಲ್ಲಿ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಅಂಕಿ ಅಂಶಗಳೇ ಇಲ್ಲದ ಮೇಲೆ ಈ ಕುರಿತು ಸರಿಯಾದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದೆಂತು?

ಮೂರನೇ ಹಾಗೂ ನಾಲ್ಕನೇ ಹಂತಗಳು ಬರುವುದೇ ಮೊದಲೆರಡು ಹಂತಗಳು ಅನುಷ್ಠಾಾನಗೊಂಡಾಗ. ಹಾಗಾಗಿ ಅದರ ಕುರಿತು ಚರ್ಚಿಸುವ ಅಗತ್ಯ ಈಗ ಇಲ್ಲ ಎಂದು ತೋರುತ್ತದೆ.

ನಗರಗಳಲ್ಲಿ ಹೆಚ್ಚು :ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಆತ್ಮಹತ್ಯೆೆಯ ಕುರಿತು 2005ರಲ್ಲೇ ಬಹಳ ಸುದೀರ್ಘವಾದ ಅಧ್ಯಯನ ಮಾಡಿ, ತಡೆಗಟ್ಟಲು ಬೇಕಾದ ಕ್ರಮಗಳ ಒಂದು ವರದಿಯನ್ನು ಸಿದ್ಧಮಾಡಿ ಅದನ್ನು ಅನುಷ್ಠಾಾನಗೊಳಿಸಿದ್ದಾರೆ. ದೇಶದ 53 ಮೆಗಾ ಸಿಟಿಗಳಲ್ಲಿ ನಡೆಯುವ ಆತ್ಮಹತ್ಯೆೆಗಳ ಸುಮಾರು 34 ಶೇಕಡಾದಷ್ಟು ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಮುಂಬೈಯಲ್ಲಿ ನಡೆಯುತ್ತಿಿರುವಾಗ ಕನಿಷ್ಠ ಮಹಾನಗರಗಳಲ್ಲಿ ಅಧ್ಯಯನ ಮಾಡಿ ಅಲ್ಲಿನ ಆತ್ಮಹತ್ಯೆೆಗಳನ್ನು ನಿಯಂತ್ರಿಿಸುವ ಕಡೆಗೆ ನಾವು ಗಮನ ಹರಿಸಬೇಕು.

ಭಾರತದಲ್ಲಿ ಆತ್ಮಹತ್ಯೆೆಯ ನಿಯಂತ್ರಣಕ್ಕೆೆ ಹಲವಾರು ಸರಕಾರೇತರ ಸಂಸ್ಥೆೆಗಳು ಹಾಗೂ ಹೆಲ್‌ಪ್‌‌ಲೈನ್ ನಂಬರುಗಳನ್ನು ಒದಗಿಸಲಾಗಿದೆ.

ಆದರೆ ನನ್ನದೇ ಒಂದು ಅಧ್ಯಯನದ ಪ್ರಕಾರ, ಮಾನಸಿಕ ಸಮಸ್ಯೆೆಯಿಂದ ಬಳಲುತ್ತಿಿರುವ ಅನೇಕರು ದೂರವಾಣಿಯಲ್ಲಿ ಮಾತನಾಡುವುದರ ಕುರಿತು ಅಥವಾ ತನ್ಮೂಲಕ ಮಾನಸಿಕ ನೆಮ್ಮದಿ ಸಿಗುವ ಕುರಿತು ಧನಾತ್ಮಕವಾಗಿ ಉತ್ತರಿಸಿಲ್ಲ. ಅಂದರೆ, ಹೆಲ್‌ಪ್‌‌ಲೈನ್‌ಗಳಷ್ಟೇ ಅಲ್ಲದೆ, ಇನ್ನೂ ಬೇರೆ ವಿಧಾನಗಳನ್ನು ಕಂಡುಕೊಳ್ಳುವ ಅಗತ್ಯ ಇದೆ.

ಹ್ಯಾಾಪಿನೆಸ್ ಕ್ಲಬ್: 1980ರ ದಶಕದಿಂದಲೇ ನಾವು ಮಾನಸಿಕ ಆರೋಗ್ಯ ಸಮಾಜ ಮುಖೇನ ನಡೆಯಬೇಕು, ಕೇವಲ ಆಸ್ಪತ್ರೆೆಗಳಲ್ಲಿ ಅಲ್ಲ ಎಂಬುವುದನ್ನು ನಮ್ಮ ಸರಕಾರಿ ನೀತಿಗಳಲ್ಲಿ ಹೇಳಿಕೊಂಡು ಬಂದಿದ್ದೇವೆ. ಆದರೆ ಇನ್ನೂ ಕೂಡಾ ನಮಗೆ ಮಾನಸಿಕ ಆರೋಗ್ಯದ ಕುರಿತು ಇರುವ ಕಳಂಕವನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ವಿದ್ಯಾಾವಂತರೂ ಕೂಡಾ ಮಾನಸಿಕ ಅಸ್ವಸ್ಥತೆಯ ಬಗ್ಗೆೆ ಮುಚ್ಚಿಿಡುತ್ತಾಾರೆ.

ಇತರರಲ್ಲಿ ಹೇಳಿಕೊಳ್ಳುವುದಿಲ್ಲ. ಮಾನಸಿಕ ತಜ್ಞರನ್ನು ಕೇವಲ ಹುಚ್ಚರು ಮಾತ್ರ ಭೇಟಿ ಮಾಡುವುದು ಎಂಬ ತಪ್ಪುು ಕಲ್ಪನೆ ಇದೆ. ಇದನ್ನು ಹೋಗಲಾಡಿಸುವುದು ಅಷ್ಟೊೊಂದು ಸುಲಭದ ಮಾತಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇರಬಹುದು, ರ್ಯಾಾಲಿಗಳಿರಬಹುದು ಮುಂತಾದುವುಗಳಿಂದಷ್ಟೇ ಮಾನಸಿಕ ಆರೋಗ್ಯದ ಕುರಿತು ಎಚ್ಚರ ಮೂಡಿಸುವುದು ಕಷ್ಟ. ಅದಕ್ಕೆೆ ನಾನು ಬಳಸಿಕೊಂಡಿರುವ ಮಾಧ್ಯಮವೇ ‘ಸ್ವಸಹಾಯ ಸಂಘ’ಗಳ ಮಾದರಿ.

ಇದು ಸುಳ್ಯದ ‘ಸ್ನೇಹ’ ಶಾಲೆಯಲ್ಲಿ ನಡೆಯುತ್ತಿಿರುವ ಪ್ರಯೋಗ. ಹತ್ತನೆಯ ತರಗತಿಯ ವಿದ್ಯಾಾರ್ಥಿಗಳು ವಾರಕ್ಕೆೆ ಎರಡು ಬಾರಿ ಹ್ಯಾಾಪಿನೆಸ್ ಕ್ಲಬ್ ನಲ್ಲಿ ಜೊತೆಗೂಡಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾಾರೆ. ತಮ್ಮಲ್ಲಾಗುತ್ತಿಿರುವ ಮಾನಸಿಕ ತುಮುಲಗಳನ್ನು ಯಾವುದೇ ಸಂಕೋಚ ಇಲ್ಲದೆ ಇತರರಿಗೆ ತಿಳಿಸುತ್ತಾಾರೆ. ಆವಾಗ ಇತರರು ಅವರ ಭಾವನೆಗಳಿಗೆ ಸ್ಪಂದಿಸುತ್ತಾಾರೆ. ಈ ಮೂಲಕ ವಿದ್ಯಾಾರ್ಥಿಗಳಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮ ಸಿಕ್ಕಿಿರುವುದಷ್ಟೆೆ ಅಲ್ಲ, ಬದಲಾಗಿ ತಮ್ಮ ದೌರ್ಬಲ್ಯಗಳನ್ನು ಇತರರ ಮುಂದೆ ಒಪ್ಪಿಿಕೊಂಡು ಅದನ್ನು ಜಯಿಸಲು ದಾರಿಯನ್ನು ಕಂಡುಕೊಳ್ಳುವುದಕ್ಕೂ ಅವಕಾಶವಾಗಿದೆ.

ತನ್ಮೂಲಕ ಬೇರೆ ಬೇರೆ ಸಂದರ್ಭಗಳಲ್ಲಿ ಆಗುವ ಸಂತೋಷ ಹಾಗೂ ಧನಾತ್ಮಕ ಭಾವನೆಗಳ ಜೊತೆಗೆ, ಉದ್ವೇಗಗಳು, ಅಸಹಾಯಕ ಪರಿಸ್ಥಿಿತಿ, ದುಃಖ ದುಮ್ಮಾಾನಗಳು ಹೀಗೆ ಅನೇಕ ರೀತಿಯ ಭಾವನೆಗಳ ಸ್ಫುರಣೆಗೆ ಮತ್ತು ಅವುಗಳ ಪ್ರಕಟಣೆಗೆ ಒಂದು ಅವಕಾಶ ಸಿಕ್ಕಿಿದಂತಾಗಿದೆ.

ಇದೇ ಮಾದರಿಯನ್ನು ನಾವು ಬೇರೆ ಬೇರೆ ಪ್ರಕಾರಗಳಲ್ಲಿ, ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ವ್ಯಕ್ತಿಿಗಳು ಒಂದುಗೂಡಿ ಮಾಡಬಹುದು ಮತ್ತು ಹಾಗೆ ಮಾಡುವುದರಿಂದ ವ್ಯಕ್ತಿಿಗಳಿಗೆ ತಮ್ಮ ಜೊತೆಗೆ ಒಂದಷ್ಟು ಜನ ಇದ್ದಾರೆ ಎಂಬ ಧೈರ್ಯ ಬರುತ್ತದೆ.

19 ನೇ ಶತಮಾನದಲ್ಲೇ ಎಮಿಲಿ ಡರ್ಖೆಮ್ (ಉಞಜ್ಝಿಿಛಿ ಈ್ಠ್ಟಛಿಜಿಞ) ಎನ್ನುವ ಸಮಾಜಶಾಸ್ತ್ರಜ್ಞ ಆತ್ಮಹತ್ಯೆೆಯ ಕುರಿತು ಅಧ್ಯಯನ ನಡೆಸಿ, ಆತ್ಮಹತ್ಯೆೆ ಎನ್ನುವುದು ಕೇವಲ ಒಂದು ವೈಯಕ್ತಿಿಕ ಕ್ರಿಿಯೆಯಲ್ಲ, ಬದಲಾಗಿ ಸಾಮಾಜಿಕ ಕ್ರಿಿಯೆ ಎಂದು ಹೇಳಿದ್ದರು. ಬಹುಶಃ ಭಾರತದಲ್ಲೂ ಹೆಚ್ಚುತ್ತಿಿರುವ ಆತ್ಮಹತ್ಯೆೆಯ ಸಂಖ್ಯೆೆಗಳಿಗೆ ಬದಲಾಗುತ್ತಿಿರುವ ನಮ್ಮ ಸಾಮಾಜಿಕ ರಚನೆ, ಕುಟುಂಬ ಪದ್ಧತಿ ಹಾಗೂ ಸ್ತರವಿನ್ಯಾಾಸಗಳೂ ಕಾರಣಗಳಿರಬಹುದು. ಇದರ ಕುರಿತು ಸರಿಯಾಗಿ ಅಧ್ಯಯನ ಮಾಡಿ ಕಾರಣಗಳನ್ನು ಗೊತ್ತುಮಾಡುವ ಅಗತ್ಯವಿದೆ. ಈ ನಿಟ್ಟಿಿನಲ್ಲಿ ಕೌಟುಂಬಿಕ ಮಟ್ಟದಿಂದ, ಜಾಗತಿಕ ಮಟ್ಟದವರೆಗೂ ಕೈಜೋಡಿಸಬೇಕು. ಯಾಕೆಂದರೆ ಪ್ರತಿಯೊಂದು ಜೀವವೂ ಅಮೂಲ್ಯವಲ್ಲವೇ? ಕಳೆದುಕೊಂಡವರ ದುಃಖ ನಮ್ಮದಾಗದಿರಲಿ.

ಮನಃಶಾಸ್ತ್ರಜ್ಞ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉಈ್ಡ ಭಾಷಣಕಾರರಾಗಿರುವ ಅಕ್ಷರ ದಾಮ್ಲೆೆ ಮಾನಸಿಕ ಆರೋಗ್ಯವನ್ನು ಕಾಪಾಡುವುದಕ್ಕಾಾಗಿ ‘ಮನೋ ಸಂವಾದ ’ ಎಂಬ ಸಂಸ್ಥೆೆಯ ಮೂಲಕ ಮನೋಚಿಕಿತ್ಸೆೆ ಮತ್ತು ಇತರ ಸಂಘಸಂಸ್ಥೆೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿಿದ್ದಾರೆ.
ಬ್ಯಾಾಂಕಿಂಗ್, ಪೊಲೀಸ್, ಶಿಕ್ಷಕರು, ಕಾರ್ಪೊರೇಟ್ ಉದ್ಯೋೋಗಿಗಳು ಸೇರಿದಂತೆ ಹಲವಾರು ಸಂಸ್ಥೆೆಗಳಲ್ಲಿ ಒತ್ತಡ ನಿರ್ವಹಣೆ, ಕಲಹಗಳ ನಿರ್ವಹಣೆ, ನಾಯಕತ್ವ ಮುಂತಾದ ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಸಂಪರ್ಕ: ಮನೋಸಂವಾದ