Thursday, 12th December 2024

ಖಾನ್‌ಗಳು ಹೇಳೋ ಕಿವಿ ಮಾತು – ಕಾನ್‌ ಕೀ ಬಾತ್‌

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ
ಅಮೇಜಾನ್ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಇತ್ತೀಚೆಗೆ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿತ್ತು. ಆದರೆ ಅದು ರೆಂಟ್ ಬೇಸಿಸ್ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿಯರು, ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ ದುಡ್ಡು ಕೊಟ್ಟು ನೋಡಬೇಕಾ ಅಂತ ವರಾತ ತೆಗೆದಿದ್ದರು. ಅದು ಸಹಜ ಕೂಡಾ. ಆದರೆ ಕೆಲವೇ ದಿನಗಳಲ್ಲಿ ರೆಂಟ್ ಬೇಸಿಸ್‌ನಲ್ಲಿ ಇದ್ದ ಕೆಜಿಎಫ್ ಈಗ ಉಚಿತ ವೀಕ್ಷಣೆಗೆ ಲಭ್ಯವಿದೆ.

ಇಲ್ಲಿ ಅಮೇಜಾನ್ ಅವರ ಪಾಲಿಸಿ ಮತ್ತು ಆಲೋಚನೆ ಹೇಗಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋದೇ ಕಷ್ಟ. ಹೀಗೆ ಮೂರು ದಿನಕ್ಕೆ ಇವರು ತಮ್ಮ ಪ್ಲ್ಯಾನ್ ಚೇಂಜ್ ಮಾಡಿದರೆ ಯಾವ ಗ್ರಾಹಕ ತಾನೆ ರೆಂಟ್ ಕೊಟ್ಟು ಇವರು ಹಾಕುವ ಸಿನಿಮಾಗಳನ್ನು ನೋಡುತ್ತಾರೆ? ಚಿತ್ರವೊಂದು ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದರೂ, ಅಯ್ಯೋ, ಓಟಿಟಿಯಲ್ಲಿ ಬಂದಾಗ ನೋಡೋಣ ಬಿಡಿ ಅಂತ ತಿಂಗಳು ಗಟ್ಟಲೆ ಕಾಯುವ ನಮ್ಮ ಮಂದಿ, ಒಂದು ವಾರ ಕಾಯದೇ, ಇವರಿಗೆ ರೆಂಟ್ ಕೊಟ್ಟು ಸಿನಿಮಾ ನೋಡು ತ್ತಾರಾ? ಕೆಜಿಎಫ್ ಏನೋ, ದೊಡ್ಡ ಬಜೆಟ್‌ನ ಅತಿಯಾದ ನಿರೀಕ್ಷೆ ಇದ್ದ ಚಿತ್ರ ಅನ್ನೋ ಕಾರಣಕ್ಕೆ ಹಾಗೆ ಮಾಡಿರಬಹುದು ಅಂದುಕೊಂಡರೆ ಅದು ತಪ್ಪು.

ಯಾಕಂದ್ರೆ ಈಗ ಡಾಲಿ ಧನಂಜಯ ಅವರ 21 ಅವರ್ಸ್ ಸಿನಿಮಾನ ಮತ್ತೆ ಬಾಡಿಗೆಗೆ ಕೊಟ್ಟಿದ್ದಾರೆ. ಇದೇನೂ ದೊಡ್ಡ ಸಿನಿಮಾನೂ ಅಲ್ಲ, ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡ ಚಿತ್ರವೂ ಅಲ್ಲ. ಅಲ್ಲದೆ, ಇದೂ ಕೂಡಾ ಇನ್ನೊಂದು 24 ಗಂಟೆಗಳಲ್ಲಿ ಫ್ರೀ ಆಗಿ ಸಿಗುತ್ತೆ ಅಂತ ಗೊತ್ತಿರೋ ಗ್ರಾಹಕರು ಇದನ್ನ ದುಡ್ಡು ಕೊಟ್ಟು ನೋಡ್ತಾರೆ ಅಂತ ಪ್ರೈಮ್ ವಿಡಿಯೋದವರಿಗೆ ಅದೇನು ನಂಬಿಕೆಯೋ ಗೊತ್ತಿಲ್ಲ. ಈ ನಡುವೆ ವೂಟ್ ಓಟಿಟಿಯವರದ್ದು ಇನ್ನೊಂದು ಆಧ್ವಾನ.

ಸತೀಶ್ ನೀನಾಸಂ ಅವರ ಗೋಧ್ರಾ ಚಿತ್ರ ಹೆಸರು ಬದಲಾಯಿಸಿ ಕೊಂಡು ಡಿಯರ್ ವಿಕ್ರಮ್ ಎಂಬ ಹೆಸರಿನಲ್ಲಿ ವೂಟ್‌ನಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಈ ವೂಟ್‌ನಲ್ಲಿ ನೀವು ಪೂರ್ತಿ ದುಡ್ಡು ಕೊಟ್ಟು ವಾರ್ಷಿಕ ಚಂದಾದಾರರಾದರೂ ನಿಮಗೆ ಸಿನಿಮಾಗಳನ್ನು ಕೇವಲ 480 ಪಿ ರೆಸಲ್ಯೂಷನ್‌ನಲ್ಲಿ ಮಾತ್ರ ನೋಡಲು ಸಾಧ್ಯ. ಅಲ್ಲದೆ ನಾವು ಕೇವಲ ಸೆಲೆಕ್ಟೆಡ್ ಚಂದಾದಾರರಿಗೆ ಮಾತ್ರ ಫುಲ್ ಎಚ್ ಡಿ ಸೌಲಭ್ಯ ಕೊಡ್ತೀವಿ ಅನ್ನೋ ಓಟಿಟಿಯ ಅಧಿಕ ಪ್ರಸಂಗ ಬೇರೆ. ಈ ಓಟಿಟಿಗಳ ಅಧ್ವಾನಗಳು ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತವೋ ಏನೋ.

ಲೂಸ್ ಟಾಕ್
ರಕ್ಷಿತ್ ಶೆಟ್ಟಿ (ಕಾಲ್ಪನಿಕ ಸಂದರ್ಶನ)
? ಶೆಟ್ರೇ, ಚಾರ್ಲಿ ಸಿನಿಮಾದಲ್ಲಿ ಮನೆ ಕಾಯೋ ನಾಯಿನೇ, ನಿನ್ ಮನೆ ಕಾಯಾ ಅಂತ ಬಯ್ಕೊಂಡ್ ಓಡಾಡ್ತೀರಲ್ಲ ಸಾರ್?
-ಏನ್ ಮಾಡೋದು ಆಮೇಲೆ ಕಾರ್ಯವಾಸಿ ನಾಯಿ ಕಾಲು ಹಿಡಿಬೇಕು ಅನ್ನೋ ಥರ, ನಾನೇ ನಾಯಿ ಹಿಂದೆ ಬಾಲ ಅಡಿಸ್ಕೊಂಡ್
ಹೋಗ್ತೀನಲ್ಲ, ಅದನ್ನ ನೋಡಿಲ್ವಾ

? ನೋಡಿದೆ ಬಿಡಿ, ಸರಿ, ನಿಮ್ಮ ಸಿನಿಮಾದಲ್ಲಿ ನಾಯಿಗಳನ್ನ ಅಡಾ ಮಾಡಿಕೊಳ್ಳಿ ಅನ್ನೋ ಸಂದೇಶ ಇದೆಯಂತೆ?
-ಅಯ್ಯೋ, ಹಂಗಂತ, ಇದು ಎಲ್ಲಿಂದಲೋ ಕಾಪಿ ಮಾಡಿದ್ದು, ಅಡಾಪ್ಟೆಡ್ ಸ್ಟೋರಿ ಅಂತೆ ಬರೆದುಬಿಡಬೇಡ್ರೀ ಆಮೇಲೆ..

? ಅಯ್ಯೋ, ಹಂಗೆ ಮಾಡೋಕಾಗುತ್ತಾ..ಸರಿ, ಚಾರ್ಲಿ ನಿಮ್ಮ ಲೈಫಲ್ಲಿ ಎಷ್ಟು ಇಂಪಾರ್ಟೆಂಟ್ ?
-ಅರೇ, ಏನ್ ಪ್ರಶ್ನೆ ಅಂತ ಕೇಳ್ತೀರಿ, ತುಂಬಾ ಇಂಪಾರ್ಟೆಂಟು, ಅದು ಬರೋಕೆ ಮುಂಚೆ ನಾಯಿ ಬಾಲದ ಥರ ಡೊಂಕಾಗಿದ್ದ ನನ್ನ ಲೈಫ್ ನೆಟ್ಟಗಾಗಿದೆ ಗೊತ್ತಾ..

? ನೀವು ತುಂಬಾ ಎಮೋಷನಲ್ ಆಗಿ ಈ ಸಿನಿಮಾ ಪಾತ್ರದಲ್ಲಿ ಇನ್ವಾಲ್ವ ಆಗಿದ್ದೀರ ಅಂತಿದ್ದಾರೆ ಎಲ್ರೂ
-ಹೌದು ಕಣ್ರೀ, ಮೊದ್ಲು, ನಿಮ್ ಕೈಲಿ ನಂದೊಂದ್ ಕೂದ್ಲೂ ಕಿತ್ಕೊಳ್ಳೋಕಾಗಲ್ಲ ಅಂತ ಜನರನ್ನ ಬಯ್ಕೊತಾ ಇದ್ದೆ. ಆಮೇಲೆ ನಾಯಿ ಮೈಯಿಂದ ಕೂದಲು ಉದುರೋದು ನೋಡಿ ತುಂಬಾ ಬೇಸರ ಆಯ್ತು ಕಣ್ರೀ.

? ಅದಿರ್ಲಿ, ಇಂಥ ಸಿನಿಮಾನೂ ಅಷ್ಟೊಂದ್ ರಿಚ್ ಆಗಿ ಮಾಡಿದೀರಲ್ಲ?
-ಹೌದು ಮತ್ತೆ, ಸಿನಿಮಾದಲ್ಲಿ ಮಾತ್ರ ನಾಯಿಗೆ ನಾನು ಇಡ್ಲಿ, ಚಟ್ನಿ ಹಾಕ್ಬೋದು, ಆದ್ರೆ ಚಾರ್ಲಿಗೆ ಮಾತ್ರ ಪೆಡಿಗ್ರೀ ಥರ ಡಾಗ್ ಫುಡ್ಡೇ ಹಾಕಿರೋದು.

ನೆಟ್ ಪಿಕ್ಸ್
ಖೇಮುಗೆ ವಿಮಾನದಲ್ಲಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಖೇಮು ತನ್ನ ಮೊದಲ ವಿಮಾನ ಪ್ರಯಾಣಕ್ಕೆ ಸಿದ್ಧನಾದ. ಮನೆಯಲ್ಲಿ ಹೆಂಡತಿ ಅವನಿಗೆ ಸಾಕಷ್ಟು ಧೈರ್ಯ ತುಂಬಿ ಕಳಿಸಿದಳು. ಚಿಕ್ಕಮಕ್ಕಳೆ ಹೋಗ್ತಾರೆ, ನೀವ್ಯಾಕ್ರೀ ಹೆದರ್ತೀರಾ ಅಂತ ಗಂಡನಿಗೆ ಬುದ್ಧಿ ಹೇಳಿದಳು. ಸರಿ ಖೇಮು ಪ್ರಯಾಣದ ದಿನ ಧೈರ್ಯ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಿ, ಬೋರ್ಡಿಂಗ್ ಪಾಸ್ ತಗೊಂಡು ಹೋಗಿ ತನ್ನ ಸೀಟಿನಲ್ಲಿ ಕೂತು ಬೆಲ್ಟ ಹಾಕಿಕೊಂಡು ದೇವರನ್ನು ಸ್ಮರಿಸುತ್ತಾ ಕುಳಿತ. ಪ್ರಯಾಣ ಶುರುವಾಯಿತು. ಪೈಲೆಟ್ ಪ್ಲೇನ್ ಚಾಲೂ ಮಾಡಿದ.

ನಾವು ಈಗ ಟೇಕಾಫ್ ಆಗುತ್ತಿದ್ದೇವೆ. ಅಂತ ಅನೌಮೆಂಟ್ ಆಯ್ತು. ಪ್ರಯಾಣ ಮುಗಿತಾ ಬಂತು. ಖೇಮು ಅಯ್ಯೋ ಇಷ್ಟಕ್ಕೆ ಎಷ್ಟೊಂದು ಹೆದರಿಕೊಂಡಿz ಎಂದುಕೊಂಡು ತನ್ನಷ್ಟಕ್ಕೇ ತಾನೇ ನಗುತ್ತಿದ್ದ. ಅಷ್ಟರಲ್ಲಿ ಪೈಲೆಟ್ ಕಡೆಯಿಂದ ಅನೌಮೆಂಟ್ ಬಂತು. ಈಗ ನಾವು ಲ್ಯಾಂಡ್ ಆಗ್ತಾ ಇದ್ದೀವಿ. ರಿಲ್ಯಾಕ್ಸ್..ಎನ್ನುತ್ತಿದ್ದಂತೆ, ಅದರ ಜತೆಯ, ಪೈಲೆಟ್, ಓ ಮೈ ಗಾಡ್, ಓ ಮೈ ಗಾಡ್ ಅಂತ ಕೂಗಿದ್ದು ಕೇಳಿಸಿತು. ಪ್ಲೇನ್‌ನಲ್ಲಿ ಇದ್ದವರೆಲ್ಲ ಗಾಬರಿಯಾದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಪ್ಲೇನ್ ಸೇಫ್ ಆಗಿ ಲ್ಯಾಂಡ್ ಆಯ್ತು. ಕಾಕ್ ಪಿಟ್‌ನಿಂದ ಹೊರಬಂದ ಪೈಲೆಟ, ನಿಮ್ಮನ್ನೆ ಹೆದರಿಸಿದ್ದಕ್ಕೆ ಸಾರಿ, ಅದೇನಾಯ್ತು ಅಂದ್ರೆ ಏರ್ ಹೋಸ್ಟೆಸ್ ನನ್ನ ಪ್ಯಾಂಟ್ ಮೇಲೆ ಕಾಫಿ ಚೆಲ್ಲಿಬಿಟ್ಟಳು. ಅದಕ್ಕೆ ಕೂಗಿಕೊಂಡೆ, ನನ್ನ ಪ್ಯಾಂಟ್‌ನ ಮುಂಭಾಗ ನೋಡಬೇಕಿತ್ತು ನೀವು ಅಂದ. ಅದಕ್ಕೆ ಖೇಮು ಹೇಳಿದ ಅದೇನ್ ಮಹಾ, ನಿಮ್ಮ ಅನೌಮೆಂಟ್ ಬಂದಕೂಡ್ಲೇ, ನೀವು ನನ್ನ ಪ್ಯಾಂಟ್‌ನ ಹಿಂಭಾಗ ನೋಡಬೇಕಿತ್ತು.

ಲೈನ್ ಮ್ಯಾನ್ 
? ಕೆಲವು ನಾಯಿಗಳನ್ನ ಓನಟ್‌ಗಳು ಯಾವ್ ರೇಂಜ್‌ಗೆ ಸಾಕಿರ್ತಾರೆ ಅಂದ್ರೆ, ಅವುಗಳಿಗೆ ನಾನು ನಾಯಿ ಅನ್ನೋದೇ ಮರೆತು ಹೋಗಿರುತ್ತೆ. ಮೊನ್ನೆ ಹಿಂಗೇ ಫ್ರೆಂಡ್ ಜತೆ ಕಾರಲ್ಲಿ ಹೋಗ್ತಾ ಇದ್ದೆ. ಜತೆಗೆ ಅವನ ನಾಯಿನೂ ಇತ್ತು. ಬೀದಿ ನಾಯಿಗಳು ಅದನ್ನ ನೋಡಿ ಬೊಗಳ್ತಾ ಇದ್ರೆ ಇದು ಮಾತ್ರ ಗಂಭೀರವಾಗಿ ಕೂತಿತ್ತು. ಯಾಕಪ್ಪಾ, ಅವು ನಿನ್ನ ನೋಡಿ ಬೊಗಳ್ತಾ ಇವೆ, ನೀನ್ ಬೊಗಳಲ್ವಾ ಅಂದಿದ್ದಕ್ಕೆ ಏನ್ ಹೇಳ್ತು ಗೊತ್ತಾ?
-ಅಯ್ಯೋ, ಹೋಗ್ಲಿ ಬಿಡಿ, ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ?

ಆಧುನಿಕ ಹೋಲಿಕೆ
ಬುದ್ಧಿ ಇಲ್ಲದೇ ಇರೋ ಸೌಂದರ್ಯ, ರೆಸಲ್ಯೂಶನ್ ಇಲ್ದೇ ಇರೋ ಫೋಟೋ,ವಿಡಿಯೋ ಎರಡೂ ಒಂದೇ..ಖ್ಞಿಜ್ಞಿಠಿಛ್ಟಿಛಿoಠಿಜ್ಞಿಜ

ಅನುಭವದ ಮಾತು
ಅಕ್ಕಸಾಲಿಗ – ಹೊಳೆಯುವುದೆ ಚಿನ್ನವಲ್ಲ ಬರಹಗಾರ – ಹೊಳೆಯುವುದೆ ಐಡಿಯಾ ಅಲ್ಲ.

ಸಿನಿಪ್ರಿಯರ ಮಾತು
?‘ಸಾಮ್ರಾಟ್ ಪೃಥ್ವಿರಾಜ್ ನೋಡಿದ್ರಾ?’
-‘ಸಾರಿ, ಸಿನಿಮಾ ನೋಡೋಕೆ ತೀರಾ ಅಷ್ಟೊಂದ್ ಬರಗೆಟ್ಟಿಲ್ಲ’

ಬೋರಿಂಗ್ ವಿಷ್ಯ
?‘ನಮ್ ಹೊಲದಲ್ಲಿ ೩ ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ಇನ್ನೊಂದ್ಸಲ ಹಾಕಿಸ್ಬೇಕು’

-‘೩ ಸಲ ಹಾಕ್ಸಿನೂ ಬೋರ್ ಆಗಿಲ್ವಾ’

ಪ್ರಶ್ನೋತ್ತರ
?‘ನಿಮ್ಮತ್ರ ಕಾರಿಲ್ವಾ ಸರ್?’
-‘ಇಲ್ಲಪ್ಪ, ಲೈಫಲ್ಲಿ ಇನ್ನೂ ಸೈಕಲ್ ಹೊಡೀತಾ ಇದೀನಿ.’

? ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆ
ಬಿಜೆಪಿ- ಇಡಿ, ಐಟಿ, ಕ್ರಿಮಿನಲ್ ಕೇಸುಗಳಿಗೆ ಹೆದರಿ ನಮ್ಮ ಪಕ್ಷಕ್ಕೆ ಸೇರುತ್ತಿರುವ ಪಟೇಲರಿಗೆ ಹಾರ್ದಿಕ ಸ್ವಾಗತ.

? ಮೊದ್ಲೆ ಹೆಬ್ಬೆಟ್ಟುಗಳು ಅಂದ್ರೆ ಅನಕ್ಷರಸ್ಥರು
-ಈಗ ಹೆಬ್ಬೆಟ್ಟುಗಳು ಅಂದ್ರೆ ಮೊಬೈಲ್‌ನಲ್ಲಿ ಪಬ್ ಜಿ ಥರದ ಗೇಮ್ ಆಡೋರು

? ಬಾಲಿವುಡ್ ಖಾನ್‌ಗಳು ಇನ್ನೊಬ್ಬರಿಗೆ ಹೇಳೋ ಕಿವಿ ಮಾತನ್ನ ಏನಂತಾರೆ?
-ಕಾನ್ ಕೀ ಬಾತ್

? ಪ್ರೇಯಸಿಗೆ ಪ್ರತಿದಿನ ಗುಲಾಬಿ ಹೂ ಕೊಟ್ರೆ ಏನಾಗುತ್ತೆ?
-‘ರೋಸ್’ ಡೇ