Wednesday, 11th December 2024

ಕನ್ನಡ ಹೋರಾಟಗಾರರ ಫೇವರೇಟ್ ಹಾಡು- ಕಲ್ಲಾದರೆ ನಾನು

ತುಂಟರಗಾಳಿ

ಸಿನಿಗನ್ನಡ

ಈ ವರ್ಷದ ಆರಂಭದಲ್ಲಿ ಶಿಕ್ಷಣ ಕ್ರಾಂತಿ ಮಾಡೋಕೆ ಹೊರಟಿದ್ದ ನಟ ದರ್ಶನ್ ವರ್ಷದ ಕೊನೆಯಲ್ಲಿ ಕಾಟೇರನ ಮೂಲಕ ಹಸಿರು ಕ್ರಾಂತಿ ಮಾಡಿದ್ದಾರೆ. ಈ
ಹಿಂದೆ ಒಡೆಯ ಅನ್ನೋ ಸಿನಿಮಾ ಮಾಡಿದ್ದ ದರ್ಶನ್ ಈಗ ಉಳುವವನೇ ಭೂಮಿಯ ಒಡೆಯ ಅಂತ ರೈತರ ಪರ ನಿಂತಿದ್ದಾರೆ. ರೈತ ಅಂದ್ರೆ ಎಷ್ಟೇ ದುಃಖ ಇದ್ರೂ ಸುಮ್ನೆ ಕೂರೋನಲ್ಲ.

ಅವನ ಕಣ್ಣಲ್ಲಿ ಕಣ್ಣೀರು ಬಂದ್ರೂ ಅದು ಕಣ್ಣಿನ ಬೆವರಿನ ಹನಿನೇ ಆಗಿರುತ್ತೆ. ಕಾಟೇರ, ಪ್ರಕೃತಿ ಅನ್ನೋ ನೇಚರ್ ಮಧ್ಯೆ ಕಷ್ಟಪಡುವ ರೈತರ ನೇಚರ್ ಬಗ್ಗೆ ಮಾತಾಡೋ ಸಿನಿಮಾ, ಕಷ್ಟಪಡೋದು ರೈತರ ಸಿಗ್ನೇಚರ್ ಸ್ಟೈಲ್ ಅನ್ನೋ ಸಿನಿಮಾ. ಒಬ್ಬ ಮಾಸ್ ಹೀರೋ ಆಗಿದ್ದುಕೊಂಡು ಇಂಥ ಹಸಿರು ಕ್ರಾಂತಿಯ ಎವರ್ ಗ್ರೀನ್ ಸಬ್ಜೆಕ್ಟ್ ಇರೋ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದಕ್ಕೆ ದರ್ಶನ್ ಅವರಿಗೆ ಕ್ರೆಡಿಟ್ ಕೊಡಬೇಕು.

ಉಳುವವನೇ ಭೂಮಿಯ ಒಡೆಯ ಅನ್ನೋ ಕಾಯಿದೆ ಬಂದಾಗ ಸರಕಾರದ ಆದೇಶಕ್ಕಾಗಿ ಕಾಯದೆ ರೈತರ ಮಕ್ಕಳನ್ನ ಬೆಳೆಯೋಕೆ ಬಿಡಲ್ಲ, ಎನ್ನುವ ಆಳುವ ಜನ ಅನ್ನದಾತನನ್ನ ಅಳಿಸ್ತಾರೆ. ಆದರೆ ಅವರ ಕಷ್ಟ ಆಲಿಸೋಕೆ ಕಾಟೇರ ಇದ್ದಾನೆ ಅನ್ನುತ್ತೆ ಚಿತ್ರದ ಕಥೆ. ಚಿತ್ರದ ಕಥೆಯಲ್ಲಿ ಹೊಸತೇನು ಅಲ್ಲ. ಶ್ರೀಮಂತರು ಬಡವರ ಮೇಲೆ ನಡೆಯೋ ದೌರ್ಜನ್ಯದ ಕಥೆ. ಹಾಗಾಗಿ ಇದು ಮಚ್ ಮೇಕಿಂಗ್ ಕೆಲಸ ಮಾಡೋ ಚಿತ್ರದ ನಾಯಕನ ಕೈಗೆ ಸಿಕ್ಕು ಎಷ್ಟೇ ಕಾಯಿಸಿ, ಬೇಯಿಸಿ,
ತಟ್ಟಿದರೂ ಹೊಸದಾಗೋದಿಲ್ಲ ಎನ್ನುವಂಥ ಹಳೆ ಕಥೆ. ಆದರೆ ಅದನ್ನ ಮನಸ್ಸು ತಟ್ಟೋ ಹಾಗೇ ನಿರೂಪಣೆ ಮಾಡಿದ್ದಾರೆ ತರುಣ. ಮೊದಲಾರ್ಧದಲ್ಲಿ ಉಳ್ಳವರು ಮತ್ತು ಉಳುವವರ ಕಥೆ ಮತ್ತು ನಿರೂಪಣೆಯಲ್ಲಿ ಹುಳುಕುಗಳಿಲ್ಲ.

ಕಾಟೇರ ಚಿತ್ರವನ್ನ ಕಾಟಾಚಾರಕ್ಕೆ ಮಾಡಿಲ್ಲ ಅನ್ನೋದನ್ನು ನಿರ್ದೇಶಕರು ಪ್ರೂವ್ ಮಾಡಿದ್ದಾರೆ. ಚಿತ್ತು ಕಾಟು ಇಲ್ಲದ ಬರವಣಿಗೆ ಅವರಿಗೆ ಸಾಥ್ ನೀಡಿದೆ. ಸಿನಿಮಾ ಆಗಿ ಮತ್ತು ದರ್ಶನ್ ಅವರ ಅಭಿನಯದ ವಿಷಯದಲ್ಲಿ ಇದು ಅವರ ಇದುವರೆಗಿನ ಬೆ ಸಿನಿಮಾ ಅಂದ್ರೆ ತಪ್ಪಿಲ್ಲ. ಈವಾಗೇನ್ ನಾವ್ ಬದುಕಿದ್ದೀವಿ ಅಂತ ಅಂದ್ಕೊಂಡಿದ್ದೀಯಾ ಅಂತ ಶುರುವಾಗೋ ಡೈಲಾಗ್ ಇರೋ ಸೀನ್ ದರ್ಶನ್ ಅವರಬ್ಬ ಕಲಾವಿದ ಜೀವಂತವಾಗಿzನೆ ಅಂತ ತೋರಿಸುತ್ತದೆ. ಸಣ್ಣಪುಟ್ಟ ವಿಷಯಗಳ ಕಡೆ ಗಮನ ಕೊಟ್ಟು ಒಂದು ಒಳ್ಳೆ ಕ್ಲೈಮ್ಯಾಕ್ಸ್ ಇಟ್ಟು, ಸಿನಿಮಾ ಮುಗಿಸೋ ಸಮಯದಲ್ಲಿ ಸ್ವಲ್ಪ ಮನರಂಜನೆಗೆ ಒತ್ತು ಕೊಟ್ಟಿದ್ದಿದ್ರೆ, ಕಾಟೇರ ಒಳ್ಳೆ ಟೇ ಇರೋ ಸಿನಿಮಾ ಅಷ್ಟೇ ಆಗದೆ, ಟೇಸ್ಟಿ ರಸಗವಳ ಕೂಡಾ ಆಗ್ತಾ ಇತ್ತು. ಹಿಟ್ ಅಂಡ್ ರನ್ ಅಂದ್ರೆ ಸಿನಿಮಾ ಹಿಟ್ ಆಗೋಕೂ, ಇನ್ನಷ್ಟು ಚೆನ್ನಾಗಿ ರನ್ ಆಗೋಕೂ ಅದು ಹೆಲ್ಪಮಾಡ್ತಿತ್ತು.

ಲೂಸ್ ಟಾಕ್: ಕನ್ನಡ ಹೋರಾಟಗಾರ
ಏನ್ ಸಾರ್, ಫುಲ್ ಕನ್ನಡಕ್ಕೋಸ್ಕರ ರೊಚ್ಚಿಗೆದ್ದುಬಿಟ್ಟಿದ್ದೀರಾ, ಇಂಗ್ಲಿಷ್ ಬೋರ್ಡ್‌ಗಳಿಗೆ ಕಲ್ಲು ಹೊಡಿತಿದ್ದೀರಾ. ಇದಕ್ಕೆ ನಿಮಗೆ ಯಾರು ಸ್ಫೂರ್ತಿ?
-‘ಕಲ್’ಲಡ್ಕ ಪ್ರಭಾಕರ್ ಭಟ್

ಇದ್ಯಾಕೋ ಜಾಸ್ತಿ ಆಯ್ತು. ಸರಿ, ಕನ್ನಡದ ಬಗ್ಗೆ ಇ ಮಾತಾಡ್ತೀರಲ್ಲ, ನಿಮ್ಮ ಫೇವರೆಟ್ ಕನ್ನಡ ಸಾಂಗ್ ಯಾವ್ದು?
-ಕಲ್ಲಾದರೆ ನಾನು..

ಓಕೆ, ಓಕೆ, ಗೊತ್ತಾಯ್ತು ಬಿಡಿ. ಫೇವರೆಟ್ ಸಿನಿಮಾ ಕಲ್ಲರಳಿ ಹೂವಾಗಿ ಅನ್ಸುತ್ತೆ. ಅದನ್ನ ಕೇಳಲ್ಲ ಬಿಡಿ. ಆದ್ರೆ, ಹಿಂಗೆ ಕಲ್ಲು ಹೊಡೆಯೋದು ಸರಿನಾ?
-ಸರಿನೇ. ತಪ್ಪು ಅಂತ ಸುಳ್ಳು ಸುಳ್ಳು ಗುಲ್ಲು ಹಬ್ಬಿಸ್ತಾ ಇರೋರೆ ಹೊರಗಡೆಯಿಂದ ಬಂದ ಹುಲು ಮಾನವರು ಬಿಡಿ.

ಆದ್ರೂ, ಪರಭಾಷೆಯವರ ಮೇಲೆ ನೀವು ದಬ್ಬಾಳಿಕೆ ಮಾಡ್ತಾ ಇದ್ದೀರ ಅಂತಾರಲ್ಲ ಕೆಲವರು?

-ಅವೆಲ್ಲ ಸುಳ್ಳು, ಪರದೇಸಿ ಬಾಬುಗಳೇ, ಪರಭಾಷೆ ತುಂಡುಗಳೇ, ಮಾತಾಡ್ರೋ ಮುದ್ದಾದ ಕನ್ನಡ ಅಂತ ಕೇಳ್ತಾ ಇದ್ದೀವಿ ಅಷ್ಟೇ.

ಒಟ್ಟಾರೆ ಅಪಸ್ವರ ಹಾಡ್ತಾ ಇರೋ ಪರಭಾಷಿಗರಿಗೆ ನಿಮ್ಮ ಸಂದೇಶ ಏನು?
-ನಿಲ್ಸೋ ನೀ ಬೊಂಬಡಾ, ನಿನ್ನ ಭಾಷೆ ಸಂಗಡ, ಕಲಿಯೋ ನೀ ಕನ್ನಡ ಅಂತಷ್ಟೇ ನಮ್ಮ ಕಳಕಳಿಯ ಮನವಿ
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್ 

ಖೇಮು ಮತ್ತು ಖೇಮುಶ್ರೀ ಮದುವೆ ಆಗಿ ೫ ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್‌ಗಳು, ಎಲ್ಲಾ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂ ಮಾರ್ಕೆಟ್ ನಲ್ಲಿ ಹೋಗುತ್ತಿರುವಾಗ ಅಲ್ಲಿ ಖೇಮುಶ್ರೀಯ ತವರು ಮನೆಗೆ ಬರುತ್ತಿದ್ದ ಪೂಜಾರಿಯೊಬ್ಬ ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು.

ಎಲ್ಲಾ ಸೌಖ್ಯನೇನಮ್ಮ ಎಂದು ಅವರು ಕೇಳಿದಾಗ ಖೇಮುಶ್ರೀ, ಜೀವನದಲ್ಲಿ ಎಲ್ಲವೂ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲ ಎಂಬ ಕೊರಗನ್ನು ಹೇಳಿಕೊಂಡಳು.
ಅದಕ್ಕೆ ಪೂಜಾರಿ, ಯೋಚನೆ ಮಾಡಬೇಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಽಯಲ್ಲಿ ನಿನ್ನ ಹೆಸರಲ್ಲಿ ಒಂದು ದೀಪ ಹಚ್ತೀನಿ. ಎಲ್ಲ ಸರಿ
ಹೋಗುತ್ತೆ ಅಂದ್ರು. ಅದಾಗಿ ೫ ವರ್ಷ ಆಯ್ತು. ಒಂದು ದಿನ ಆ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದಂತಾಯ್ತು. ಪೂಜಾರಿ ಎದ್ದು ಹೋಗಿ ಬಾಗಿಲು ತೆರೆದರೆ ಖೇಮು ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು.

ಮಕ್ಕಳಾದ್ವಾ? ಅಂತ ಪೂಜಾರ್ರ‍ು ಕೇಳಿದ ತಕ್ಷಣ ಖೇಮು ಪೂಜಾರ್‌ರ ಕೈಯಲ್ಲಿ ೨೫ ಸಾವಿರ ಹಣ ಇಟ್ಟು, ದಯವಿಟ್ಟು ಇನ್ನೊಮ್ಮೆ ಕಾಶಿಗೆ ಹೋಗಿ ಬನ್ನಿ ಪೂಜಾರ್ರ‍ೇ ಅಂದ. ಯಾಕಪ್ಪಾ ಇನ್ನೂ ಮಕ್ಕಳಾಗಲಿಲ್ವಾ? ಅಂತ ಕೇಳಿದ್ದಕ್ಕೆ ಖೇಮು ಹೇಳಿದ ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ಡೈಲಿ ಎಣ್ಣೆ ಹಾಕ್ತಾ ಇzನೆ ಅನ್ಸುತ್ತೆ. ಖೇಮುಶ್ರೀ ಈಗಾಗ್ಲೇ ೩ ಸಲ ಅವಳಿ ಜವಳಿ ಮಕ್ಕಳನ್ನ ಹೆತ್ತಿzಳೆ. ಇನ್ನು ನನ್ನ ಕೈಲಿ ತಡ್ಕೊಳ್ಳೋಕಾಗಲ್ಲ. ಮೊದ್ಲು, ಆ ಹೋಗಿ ಆ ದೀಪ ಆರಿಸಿ ಬನ್ನಿ.

ಲೈನ್ ಮ್ಯಾನ್

ಜೀ, ಜೀ ಅಂತ ಹಿಂದಿ ಗುಲಾಮಗಿರಿ ಮಾಡೋ ಕೆಲಸ

-‘ಜೀ’ತ
ಭೂಗೋಳ ರಹಸ್ಯ
-ಭೂಮಿ ‘ಗುಂಡು’ ಗುಂಡಾಗಿದೆಯಂತೆ…ಅದಕ್ಕೇ ಬಡ್ಡಿಮಗಂದು ಟೈಟ್ ಆಗಿ ‘ತಿರುಗುತ್ತೆ’.

ಮಿತ್ರರೇ ಅಂತ ಮಾತಾಡಿ ಮೋಸ ಮಾಡುವವರಿಗೆ
-Happy fraud ship day ಕುಡುಕರ ಸ್ವಗತ

-ಕುಡುಕರಿಗೆ ಒಂದು ಸೆಪರೇಟ್ ಧರ್ಮ ಬೇಕು..‘ಪ್ರಜ್ಞಾವಂತ’ರ ಲೋಕ ನಮಗೆ ಪರಮ ಬೋರು.

ಮನೆ ಕೆಲಸದವಳು ಪಕ್ಕದ ಮನೆಯವರ ಬಗ್ಗೆ ‘ಕಿವಿ’ ಊದಿದರೂ ಅದು..
-‘ಬಾಯಿ’ ಮಾತು

ಬ್ರೇಕ್ ಅಪ್, ಡೈವೋರ್ಸ್ ಆಗಿ ಬಿಟ್ಟು ಹೋಗುವಾಗ ಒಬ್ಬರ ಮೇಲೆ ಒಬ್ಬರು ಸಿಟ್ಟಿನಿಂದ ಆಡುವ ಮಾತುಗಳು
-ಆqsಛಿಗುಳ

ರೈತರಿಗೆ ಬೆಳೆಯೋದಕ್ಕಿಂತ ಬೆಳೆದಿದ್ದನ್ನ ಮಾರೋದೇ ಕಷ್ಟ. ಅದೊಂಥರಾ.. 
-‘ಮಂಡಿ’ ನೋವು

ನಶೆದಾತರಿಗೆ ತೋರಿಸೋ ತಾರತಮ್ಯ
-ಎಣ್ಣೆನ ಪರಮಾತ್ಮ ಅಂತ ಗೌರವದಿಂದ ಕರೀತೀವಿ. ಆದ್ರೆ ಸಿಗರೇಟ್‌ನ ಮಾತ್ರ ಸೇದಿದ ಮೇಲೆ ಕಾಲಲ್ಲಿ ಹೊಸಕಿ ಹಾಕ್ತೀವಿ.

ಅಸಂಬದ್ಧ ಸಂಬಂಧಗಳು

-ತರಕಾರಿ ಅಂಗಡಿಯಲ್ಲಿ ನಾವು, ಅಕ್ಕಾ ಈರುಳ್ಳಿ ಹೆಂಗೆ ರೇಟು? ಅಂತೀವಿ. ಅವ್ರು ೧೦೦ ರುಪಾಯಿಗೆ ೬ ಕೆಜಿ ಅಣ್ಣಾ ಅಂತಾರೆ.

ಹೆಂಡ್ತಿ ಮಾಡಿದ ಕಬಾಬ್ ಚೆನ್ನಾಗಿಲ್ಲ ಅಂತ ಪತಿ ಆತ್ಮಹತ್ಯೆ
-ಅವ್ನ್ ಹೆಂಡ್ತಿ ಊರ್ ತುಂಬಾ ಫ್ಲೆಕ್ಸ್ ಹಾಕ್ಸಿದ್ದಾಳಂತೆ, ‘ಮತ್ತೆ ಹುಟ್ಟಿ ಬಾ, ಬರ್ಬೇಕಾದ್ರೆ ಚಿಕನ್ ತಗೊಂಡ್ ಬಾ, ಈ ಸಲ ಕಬಾಬ್ ಚೆನ್ನಾಗ್ ಮಾಡ್ಕೊಡ್ತೀನಿ’