ಪ್ರಚಲಿತ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡಾ
ಇಡೀ ದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಕಚ್ಚತೀವು. ಅನೇಕರಿಗೆ ಇದೇನು ಎಂದು ತಿಳಿಯುವ ಮೊದಲೇ, ಕಾಂಗ್ರೆಸ್ ವಿರುದ್ಧ ಇದನ್ನು ಬಹುದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡಿದೆ.
ಅಷ್ಟಕ್ಕೂ ಕಚ್ಚತೀವು ಬಗ್ಗೆ ಗೊತ್ತಿಲ್ಲದವರಿಗೆ ಇದರ ಬಗ್ಗೆ ಹೇಳಬೇಕೆಂದರೆ, ‘ಕಚ್ಚತೀವು’ ಭಾರತ ಮತ್ತು ಶ್ರೀಲಂಕಾದ ಮಧ್ಯೆ ಯಿರುವ ಒಂದು ಸಣ್ಣ ನಡುಗಡ್ಡೆ. ೨೮೫ ಎಕರೆ ವಿಸ್ತಾರದ ಜನವಸತಿ ಇಲ್ಲದ ಈ ದ್ವೀಪ, ಭಾರತ ಮತ್ತು ಶ್ರೀಲಂಕಾದ ರಾಮೇಶ್ವರ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಇದನ್ನು ಸಾಂಪ್ರದಾಯಿಕವಾಗಿ ಎರಡೂ ದೇಶಗಳ ಮೀನುಗಾರರು ಬಳಸುತ್ತಿದ್ದರು. ಆರಂಭದಲ್ಲಿ ಅದು ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು.
ಅದಕ್ಕೂ ಮೊದಲು, ಇದು ರಾಮನಾಥಪುರದ ರಾಮೇಶ್ವರದ ರಾಮನಾಡ್ ಸಾಮ್ರಾಜ್ಯದ ಒಡೆತನದಲ್ಲಿತ್ತು, ಇದು ನಂತರ ಭಾರತೀಯ ಉಪಖಂಡದ ಬ್ರಿಟಿಷ್ ಆಳ್ವಿಕೆಯಲ್ಲಿಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬಂದಿತು. ೧೯೨೦ ರ ಹೊತ್ತಿಗೆ, ಶ್ರೀಲಂಕಾವು
ಕಚ್ಚತೀವಿಗೆ ತನ್ನ ಹಕ್ಕುಗಳನ್ನು ಮರುಸ್ಥಾಪಿಸಲು ಪ್ರಯತ್ನ ಆರಂಭಿಸಿತು ಮತ್ತು ೧೯೨೧ರಲ್ಲಿ ದ್ವೀಪವು ಶ್ರೀಲಂಕಾದ ಭೂ ಪ್ರದೇಶದೊಳಗೆ ಹೋಯಿತು.
ದ್ವೀಪದ ಹಳೆಯ ಹೆಸರು, ‘ಕಚ್ಚಿ’ ಹೊಸ ಹೆಸರು ‘ಕಚ್ಚತೀವು’. ಶ್ರೀಲಂಕಾದ ರಾಜನಿಸ್ಸಂಕಮಲ್ಲನು ತನ್ನ ಸಾಮ್ರಾಜ್ಯ ವಿಸ್ತಾರದ ದಂಡಯಾತ್ರೆಯ ಸಮಯದಲ್ಲಿ ಈ ದ್ವೀಪಕ್ಕೆ ಭೇಟಿ ನೀಡಿದ್ದನೆಂದು ಅಲ್ಲಿನ ಶಾಸನವು ಹೇಳುತ್ತದೆ. ಐತಿಹಾಸಿಕವಾದ ವಾಸ್ತ ವಾಂಶವನ್ನು ಆಧರಿಸಿ ೧೯೭೪ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಶ್ರೀಲಂಕಾದ ಸಿರಿಮಾ ಬಂಡಾರು ನಾಯಕೆಯವರ ಜತೆಗೆ ಒಂದು ಒಪ್ಪಂದಕ್ಕೆ ಸಹಿಹಾಕಿದರು.
ಭಾರತ ಮತ್ತು ಲಂಕಾ ನಡುವೆ ಸಮುದ್ರದಲ್ಲಿ ಗಡಿಯನ್ನು ನಿರ್ಧರಿಸುವ ಒಪ್ಪಂದವಾಗಿತ್ತು ಅದು. ಶ್ರೀಲಂಕಾ ಮತ್ತು ಭಾರತೀಯ ಸರಕಾರಗಳ ನಡುವೆ ಈ ದ್ವೀಪದ ವಿವಾದವು ೧೯೨೦ ರಿಂದ ೧೯೭೪ರವರೆಗೂ ವಿವಾದಿತ ಪ್ರದೇಶವಾಗೇ ಇತ್ತು. ಆ ವರ್ಷ ಇಂದಿರಾ ಗಾಂಧಿ ಸರಕಾರವು ಶ್ರೀಲಂಕಾ ದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅಲ್ಲಿನ ಲಕ್ಷಾಂತರ ತಮಿಳರಿಗೆ ಸಹಾಯ ಮಾಡಲು ದ್ವೀಪ ರಾಷ್ಟ್ರದ ಸರಕಾರದೊಂದಿಗೆ ಮಾತುಕತೆ ನಡೆಸಿತು.
ಮಾತುಕತೆಗಳ ನಂತರ, ಕಚ್ಚತೀವು ಶ್ರೀಲಂಕಾಕ್ಕೆ ಸೇರಿದೆ ಎಂದು ಭಾರತ ಒಪ್ಪಿಕೊಂಡಿತು. ಪ್ರತಿಯಾಗಿ, ಆರು ಲಕ್ಷ ತಮಿಳರು ಭಾರತಕ್ಕೆ ಬರಲು ಅವಕಾಶವಾಯಿತು. ಅದಕ್ಕೂ ಮೊದಲು ೧೯೬೧ರಲ್ಲಿ ಈ ವಿಷಯ ಪ್ರಸ್ತಾಪವಾದ ಸಮಯದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂಸತ್ತಿನಲ್ಲಿ ಈ ವಿಷಯವನ್ನು ‘ಅಪ್ರಸ್ತುತ’ವೆಂದು ತಳ್ಳಿಹಾಕಿದರು ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಅಂದು ನೆಹರೂ ‘ಈ ದ್ವೀಪದ ಮೇಲಿನ ಹಕ್ಕು ಬಿಟ್ಟುಕೊಡಲು ನಾನು ಯಾವುದೇ ಹಿಂಜರಿಕೆ ತೋರಿ ಸುವುದಿಲ್ಲ’ ಎಂದಿದ್ದರು. ನನಗೆ ಈ ಪುಟ್ಟ ದ್ವೀಪವು ಒಂದು ರೀತಿಯ ‘ಇರಿಟೇಶನ್’ ಆಗಿದೆ. ಆದ್ದರಿಂದ ಈ ವಿವಾದವನ್ನು ಅನಿರ್ದಿಷ್ಟವಾಗಿ ಮುಂದುವರಿಯುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವುದು ನನಗೆ ಸುತರಾಂ ಇಷ್ಟವಿಲ್ಲ ಎಂದಿದ್ದರು.
ಇದಾದ ಬಳಿಕ ಜೂನ್ ೨೦೧೧ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನೇತೃತ್ವದ ತಮಿಳುನಾಡು ಸರಕಾರವು ಕಚ್ಚತೀವುವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಕುರಿತು ಭಾರತ ಮತ್ತು ಶ್ರೀಲಂಕಾ ನಡುವಿನ ೧೯೭೪ ರ ಒಪ್ಪಂದಗಳ ಘೋಷಣೆ ಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತು. ಬೇರೊಂದು ದೇಶಕ್ಕೆ ಭಾರತೀಯ ಭೂ ಪ್ರದೇಶವನ್ನು ಬಿಟ್ಟುಕೊಡುವು ದನ್ನು ಸಂವಿಧಾನದ ತಿದ್ದುಪಡಿಯ ಮೂಲಕ ಸಂಸತ್ತು ಅನುಮೋದಿಸಬೇಕೆಂದು ನ್ಯಾಯಾಲಯವು ತೀರ್ಪು ನೀಡಿತು. ಭಾರತ ಸರಕಾರವು ದ್ವೀಪ ಯಾವತ್ತೂ ಭಾರತದ್ದಾಗಿರಲಿಲ್ಲ, ಆದ್ದರಿಂದ ಸರಕಾರ ಭಾರತಕ್ಕೆ ಸೇರಿದ ಯಾವುದೇ ಪ್ರದೇಶವನ್ನು ಬಿಟ್ಟು ಕೊಟ್ಟಿಲ್ಲ ಅಥವಾ ಸಾರ್ವಭೌಮತ್ವವನ್ನು ಬಿಟ್ಟುಕೊಡಲಾಗಿಲ್ಲ, ಈ ಪ್ರದೇಶವು ವಿವಾದದಲ್ಲಿದೆ ಎಂದು ಯಾವತ್ತೂ
ಗುರುತಿಸಲಾಗಿರಲಿಲ್ಲ.
ಹಾಗಾಗಿ, ಭಾರತ ಯಾವುದೇ ಪ್ರದೇಶವನ್ನು ಬಿಟ್ಟುಕೊಡದ ಕಾರಣ ಒಪ್ಪಂದಗಳಿಗೆ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿಲ್ಲ ಎಂದು ಸರಕಾರ ಫೆಬ್ರವರಿ ೨೦೧೪ರಲ್ಲಿ ಸುಪ್ರೀಂ ಕೋರ್ಟ್ಗೆ ಹೇಳಿತ್ತು. ಆದರೆ ಇದೀಗ ಈ ವಿಷಯವನ್ನು ಮತ್ತೆ ಮುನ್ನಲೆಗೆ
ತಂದಿದ್ದು ಅಣ್ಣಾಮಲೈ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರ್ಟಿಐಗೆ ಅರ್ಜಿ ಸಲ್ಲಿಸಿ ಉತ್ತರ ಪಡೆದು
ಇತಿಹಾಸದಲ್ಲಿ ಹುದುಗಿ ಹೋಗಿದ್ದ ಈ ಪ್ರಮಾದಕ್ಕೆ ಮರುಜೀವ ನೀಡಿದರು ಮತ್ತು ತಮಿಳುನಾಡಿನಲ್ಲಿ ಈ ಕುರಿತು ವಿಸ್ತಾರವಾಗಿ ಪ್ರಚಾರ ಮಾಡಲು ಶುರುವಿಟ್ಟುಕೊಂಡರು. ನಂತರ ಇದಕ್ಕೆ ಪೂರಕವಾಗಿ ಪ್ರಧಾನ ಮಂತ್ರಿಗಳೂ, ವಿದೇಶಾಂಗ ವ್ಯವಹಾರಗಳ ಮಂತ್ರಿಗಳೂ ದನಿಗೂಡಿಸಿದರು.
ಈ ದ್ವೀಪವು ರಾಮನಾಡಿನ ರಾಜನ ಭೂ ಮಾಲೀಕನಿಗೆ ಸೇರಿದ್ದ ಕಾರಣ ಈ ದ್ವೀಪವು ಭಾರತದ ಭಾಗವಾಗಿದೆ ಎಂದು ಭಾರತೀ ಯರ ಅಂಬೋಣ. ಮತ್ತು ಅಂದಿನ ಕಾಂಗ್ರೆಸ್ ಸರಕಾರ ಈ ದ್ವೀಪವನ್ನು ಸುಲಭವಾಗಿ ಶ್ರೀಲಂಕಾಕ್ಕೆ ಬಿಟ್ಟುಕೊಡುವ ಅಗತ್ಯ ವಿರಲಿ ಎನ್ನುವುದು ಬಿಜೆಪಿಯ ವಾದ. ಭಾರತದ ಅವಿಭಾಜ್ಯ ಭಾಗವಾಗಿದ್ದ ‘ಕಚ್ಚತೀವು’ ನಡುಗಡ್ಡೆಯನ್ನು ಶ್ರೀಲಂಕಾಕ್ಕೆ ಹಸ್ತಾಂತರ ಮಾಡುವ ಮೂಲಕ ನೆಹರೂ ಕಾಲದಿಂದ ಇದ್ದ ಕಾಂಗ್ರೆಸ್ನ ಭಾರತವನ್ನು ಚೂರುಮಾಡುವ ಕಾಯಕವನ್ನು ಇಂದಿರಾಗಾಂಧಿಯವರು ಮುಂದುವರೆಸಿ ಈ ವಿಷಯದಲ್ಲಿ ಅತ್ಯಂತ ತಪ್ಪು ನಿರ್ಧಾರವನ್ನು ಎಸಗಿದರು ಹಾಗೂ ಆಗ ತಮಿಳು ನಾಡಿನಲ್ಲಿ ಆಡಳಿತ ದಲ್ಲಿದ್ದ ಡಿಎಂಕೆ ಸರಕಾರ ಕೇಂದ್ರದ ಈ ನಿರ್ಧಾರವನ್ನು ಪ್ರತಿರೋಧಿಸಲಿಲ್ಲ ಎನ್ನುವುದು ಪ್ರಧಾನಿ ಮೋದಿಯವರ ವಾದ.
ಆಗ ಪ್ರಶ್ನೆ ಮಾಡದಿದ್ದವರು ಈಗ ಮೋದಿ ಈ ದ್ವೀಪವನ್ನು ಪುನಃ ಭಾರತಕ್ಕೆ ಸೇರಿಸಿ ವಿವಾದವನ್ನು ಸರಿಪಡಿಸ ಬೇಕೆಂದು ಪತ್ರ ಬರೆಯುತ್ತೀರಿ. ಇದು ಎಷ್ಟು ಸರಿ ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಕಚ್ಚತೀವುವನ್ನು ಕಾಂಗ್ರೆಸ್ ಹೇಗೆ ಬೇಜವಾಬ್ದಾರಿಯಿಂದ
ಬಿಟ್ಟುಕೊಟ್ಟಿತು ನೋಡಿ! ಇದು ಪ್ರತಿಯೊಬ್ಬ ಭಾರತೀಯ ನನ್ನೂ ಕೆರಳಿಸಿದೆ ಮತ್ತು ಜನರ ಮನಸ್ಸಿನಲ್ಲಿದ್ದ ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ನಾವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ!
ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದೇ ಕಾಂಗ್ರೆಸ್ನ ಕೆಲಸ ಎಂದು ಪ್ರಧಾನಿ ಮೋದಿ ಗುಡುಗಿದರು. ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಅತ್ಯಂತ ಮುಖ್ಯವಾದ ಕಚ್ಚತೀವು ದ್ವೀಪವನ್ನು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಸಲೀಸಾಗಿ ಬಿಟ್ಟುಕೊಟ್ಟಿತು. ದೇಶ ಸ್ವತಂತ್ರವಾದಾಗ ಈ ದ್ವೀಪ ನಮ್ಮ ಇತ್ತು, ಆದರೆ ೪-೫ ದಶಕಗಳ ಹಿಂದೆ ಕಾಂಗ್ರೆಸ್
ಭಾರತದ ಒಂದು ಭಾಗವನ್ನು ಕತ್ತರಿಸಿ ಪ್ರತ್ಯೇಕಿಸಿತು.
ಕಾಂಗ್ರೆಸ್ ಸರಕಾರದ ದುಷ್ಕೃತ್ಯಗಳಿಗೆ ಭಾರತ ಇನ್ನೂ ಬೆಲೆ ತೆರುತ್ತಿದೆ, ಇದು ಕಾಂಗ್ರೆಸ್ ದೇಶವಿರೋಧಿ ಕೃತ್ಯಕ್ಕೆ ಮತ್ತೊಂದು ನಿದರ್ಶನ ಎಂದು ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಇಲ್ಲಿರುವ ಮತ್ತೊಂದು ವಿಷಯವೆಂದರೆ ಈ ಹಿಂದೆ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಒಪ್ಪಂದಕ್ಕೆ ತಕರಾರು ಮಾಡದೇ ಸಹಿ ಮಾಡಿದ್ದ ಅಂದಿನ ಡಿಎಂಕೆ ಪಕ್ಷದ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರು. ಆದರೆ ಈಗ ಭಿನ್ನ ನಿಲು ವನ್ನು ತಳೆಯುವಂತೆ ನಾಟಕವಾಡುತ್ತಿರುವ ಡಿಎಂಕೆ ಪಕ್ಷದ ದ್ವಂದ್ವ ನಿಲುವಿನ ಕುರಿತು ಮೋದಿ ಕಿಡಿಕಾರಿದರು.
ಸುಮಾರು ಐದು ದಶಕಗಳ ಪೂರ್ವದಲ್ಲಿ ನಡೆದ ಈ ಸಂಗತಿಯ (ಐತಿಹಾಸಿಕ ಪ್ರಮಾದ) ಬಗ್ಗೆ ಪ್ರಧಾನಿ ಮೋದಿ ಅವರು ಈಗ ಮಾತನಾಡುವ ಬದಲು ಕಳೆದ ೨-೩ ವರ್ಷಗಳಲ್ಲಿ ಚೀನಾ ಗಡಿಯಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತನಾಡುವುದು ಒಳಿತು. ೧೯೭೪ರ ಒಪ್ಪಂದವು ಪರಸ್ಪರ ಉತ್ತಮ ಸಂಬಂಧವನ್ನು ಹೊಂದಲು ಮತ್ತು ಅನೇಕ ತಮಿಳರ ಜೀವಗಳನ್ನು ಉಳಿಸಲು ಆದ ಒಪ್ಪಂದವಾಗಿದೆ ಎನ್ನುವುದು ಕಾಂಗ್ರೇಸ್ ಪಕ್ಷದ ಪಿ ಚಿದಂಬರಂ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಇತರ ಹಿರಿಯ ಧುರೀಣರ ವಾದ. ಕಾಂಗ್ರೆಸ್ ಮತ್ತು ಡಿಎಂಕೆಯ ಎಲ್ಲ ನಾಯಕರ ಸಮರ್ಥನೆಯ ನಡುವೆಯೂ ತಮಿಳುನಾಡಿನಲ್ಲಿ ಈ ವಿಷಯ ಡಿಎಂಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದಿರುವುದಂತೂ ಸತ್ಯ.
ಕಚ್ಚತೀವು ದ್ವೀಪವು ಮತ್ತೆ ಭಾರತವನ್ನು ಸೇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಲೋಕಸಭಾ ಚುನಾವಣೆಯ ಈ ಸನ್ನಿವೇಶ ದಲ್ಲಿ ಮೋದಿಯವರಿಗೆ ರಾಷ್ಟ್ರಮಟ್ಟದಲ್ಲೂ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಗೆ ರಾಜ್ಯ ಮಟ್ಟದಲ್ಲಿ ಇಡೀ ಚುನಾವಣೆ ಬಳಸಿಕೊಳ್ಳಲು ಸಿಕ್ಕಿರುವುದು ಅತ್ಯುತ್ತಮ ಅಸವೆಂದು ಹೇಳಲಾಗುತ್ತಿದೆ. ಈ ಒಂದು ವಿಷಯ ಅಣ್ಣಾಮಲೈ ಅವರಿಗೆ ತಮಿಳುನಾಡಿನಲ್ಲಿ ನಾಲ್ಕೈದು ಕ್ಷೇತ್ರಗಳಲ್ಲಿ ಜಯ ತಂದುಕೊಟ್ಟು ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಕೇಸರಿ ಧ್ವಜವನ್ನು ಪ್ರತಿಷ್ಠಾಪಿಸಲು ಸಹಾಯ ಮಾಡಿದರೂ ಅಚ್ಚರಿಯಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.