ಸ್ಮರಣೆ
ಜಯಪ್ರಕಾಶ್ ಪುತ್ತೂರು
kudukolly@gmail.com
2015 ರ ಜುಲೈ 27ರಂದು ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತಾನಾಡುತ್ತಾ ನಮ್ಮ ದೇಶ ಕಂಡ ಸರಳ, ಆದರ್ಶ ಹಾಗೂ ರಾಷ್ಟ್ರ ಪ್ರೇಮಗಳ ಪ್ರತೀಕವಾಗಿದ್ದ ಜನ ಸಾಮಾನ್ಯರ ನೆಚ್ಚಿನ ರಾಷ್ಟ್ರಪತಿ ಆಗಿದ್ದ ಭಾರತರತ್ನ ಡಾ. ಏ.ಪಿ.ಜೆ ಅಬ್ದುಲ್ ಕಲಾಂ ನಿಧನರಾಗಿ ಇಂದಿಗೆ 7 ವರ್ಷಗಳು ಸಂದುಹೋಗಿದೆ.
ಡಾ. ರಾಜೇಂದ್ರ ಪ್ರಸಾದ್, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಳಿಕ ಮತ್ತೊಮ್ಮೆ ಒರ್ವ ಸಂತನನ್ನು ರಾಷ್ಟ್ರಪತಿ ಭವನದಲ್ಲಿ ಮಹಾಜನತೆ ಕಂಡದ್ದು ಸರ್ವವಿಽತವಾದ ವಿಚಾರ. ಮೂಲತಃ ರಾಮೇಶ್ವರದ ತೀರಾ ಸಾಮಾನ್ಯ ಬಾಲಕನಾಗಿ ಬೆಳೆದು ಪೈಲಟ್ ಆಗಬೇಕೆಂಬ ಕನಸುಕಂಡು ಗುರಿ ಸಾಧನೆಯ ಛಲದ ಅಗ್ನಿಯನ್ನು ಹೃದಯದಲ್ಲಿ ಬೆಳೆಗಿಸಿ ವೈಮಾನಿಕ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ತದನಂತರ ಕಾರಣಾಂತರಗಳಿಂದ ಬಾಹ್ಯಾಂತರಿಕ್ಷ ಹಾಗೂ ರಕ್ಷಣಾ ಸಂಶೋಧನೆ ಯಲ್ಲಿ ತೊಡಗಿಸುತ್ತಾ ಗಣನಿಯವಾದ ಕೊಡುಗೆಯನ್ನು ನೀಡಿ ಕೊನೆಗೆ ಅಲಂಕರಿಸಿದ ರಾಷ್ಟ್ರಪತಿ ಹುದ್ದೆಯನ್ನು ಎಲ್ಲಾ ಭಾರತೀಯರು ಗೌರವಿಸುವಂಥಹ ಮಟ್ಟವನ್ನು ತಂದುಕೊಟ್ಟ ಡಾ.ಕಲಾಂ ಅಪ್ಪಟ ದೇಶಪ್ರೇಮ ಹಾಗೂ ಸರಳತೆಗೆ ಎಂಬ ವಿಚಾರ ಗಳಿಗೆ ಆದರ್ಶ ಪ್ರಾಯವಾಗಿ ಮೂಡಿಬಂದರು.
ಸಾಮಾಜಿಕ ರಾಜಕೀಯ ಹಾಗೂ ನಾಗರಿಕ ಆಡಳಿತ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬನೆಯನ್ನು ಪಡೆದರೂ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಯನ್ನು ಸ್ವದೇಶೀಯವಾಗಿ ಸಾಧಿಸಲು ಅಗತ್ಯ ಇದೆ ಎಂಬುದಾಗಿ ಸಾರಿ ಈ ನಿಟ್ಟಿನಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಜತೆಯಲ್ಲಿ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಗಳಲ್ಲಿ ಎಲ್ಲಾ ಭಾರತೀಯರಿಗೆ ಅಚಲ ವಿಶ್ವಾಸ ಹಾಗೂ ನಂಬಿಕೆ ಮೂಡಿಸುತ್ತಾ ಮುಂದೊಂದು ದಿನ ಭಾರತ ದೇಶ ಖಂಡಿತವಾಗಿಯೂ ಅಭಿವೃದ್ದಿ ಪಡೆದ ಶಕ್ತಿಶಾಲಿ ರಾಷ್ಟ್ರವಾಗಿ ಮಾರ್ಪಾಡಾಗುತ್ತದೆ ಎಂಬ ಘೋಷಣೆಯನ್ನು ಮಾಡಿದರು.
ನಾವು ಭಾರತೀಯರು ಈ ಜಗತ್ತಿನಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸ ಎಲ್ಲರ ಹೃದಯದಲ್ಲಿ ಬೆಳೆಗಿಸುವಲ್ಲಿ ಡಾ.ಕಲಾಂ ಸಫಲರಾದರು. ತನ್ನ ಜೀವನದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾ ತೀರಾ ಸರಳತೆ, ನಿರಾಡಂಬರ ಜೀವನವನ್ನು ವ್ರತದಂತೆ ಪಾಲಿಸುತ್ತಾ ಅದಮ್ಯ ಮಾನವೀಯತೆಯನ್ನು ಆಚರಿಸಿ ಓರ್ವ ಸಂತನಂತೆ ಬಾಳಿ ಎಲ್ಲರ ಹೃದಯ ಸಾಮ್ರಾಟರಾಗಿ ಉಳಿದಿದ್ದಾರೆ.
ಇಸ್ರೋ ಹಾಗೂ ಡಿಆರ್‌ಡಿಒ ಮುಂತಾದ ವೈಜ್ಞಾನಿಕ ಸಂಶೋಧನಾ ಕ್ಷೇತ್ರಗಳಲ್ಲಿ ದುಡಿಯುವ ವೇಳೆ ನಾಯಕತ್ವ, ಸಾಂಕ ಪರಿಶ್ರಮ ಹಾಗೂ ತಂಡಕ್ಕೆ ಅಪಮಿರಿತವಾದ ಪ್ರೋತ್ಸಾಹ ಮುಂತಾದ ಜ್ಞಾನವನ್ನು ಪಡೆದು ಅದ್ವಿತೀಯವಾದ ಸಾಧನೆ ಮಾಡಿದ ಕಲಾಂ ಸರ್ ತನ್ನ ಸರಳತೆ, ಸ್ನೇಹ ಹಾಗೂ ಸಕರಾತ್ಮ ನಿಲುವುಗಳಿಂದ ದೇಶದ ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯ ಪರಿಶ್ರಮಗಳಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ನಿಜ ಜೀವನದಲ್ಲಿ ಓರ್ವ ಬ್ಯಾಚುರಲ್ ಆಗಿ ಬಾಳಿದ ಅವರು ಎಂದಿಗೂ ಸಹೋದ್ಯೋಗಿಗಳ ಕುಟುಂಬ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ವಿಚಾರಗಳಿಗೆ ಬಹು ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂಬುದು ಹಲವಾರು ವಿಜ್ಞಾನಿ ಸಹೋದ್ಯೋಗಿಗಳ ಒಮ್ಮತದ ಅಭಿಪ್ರಾಯ ತನ್ನ ನೆಚ್ಚಿನ ಒಡನಾಡಿಗಳಲ್ಲಿ ಪ್ರೀತಿ ಹಾಗೂ ಸ್ನೇಹ ಪರತೆಗಳನ್ನು ರಾಷ್ಟ್ರಪತಿ ಆಗಿರುವಾಗಲೂ ತೋರಿಸುತ್ತಾ ಬಂದು ಎಲ್ಲರಿಗೂ ತಾನು ಲಭ್ಯ ಎಂಬ ಸರಳತೆ ಮತ್ತು ಮಾನವೀಯ ಗುಣಗಳನ್ನು ತೋರಿಸಿಕೊಟ್ಟಿದ್ದಾರೆ.
ಅವರ ಹೈದರಾಬಾದ್ ದಿನಗಳಲ್ಲಿ ವಿಜ್ಞಾನಿ ಸಹೋದ್ಯೋಗಿಗಳಿಗೆ ಎರಡು ವಾಕ್ಯಗಳನ್ನು ಉದ್ಧರಿಸುತ್ತಾ ಇದ್ದದ್ದನ್ನು ಈಗಲೂ ಆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಫನ್ನಿಗಯ್ಸ್ ಹಾಗೂ ಫೆಂಟಾಸ್ಟಿಕ್ ಫೆಲೊ ಕಲಾಂ ಅವರ ಫೆಲೋ ಎಂಬ ಎರಡು ಅದ್ಭುತ ವಾಕ್ಯಗಳು ಅವಿಸ್ಮರಣಿಯಾವಾಗಿ ಅವರ ಒಡನಾಡಿಗಳ ಬದುಕಿನಲ್ಲಿ ಉಳಿದು ಹೋಗಿದೆ. ಪ್ರಥಮ ಉಪಗ್ರಹ ಉಡಾಯನದ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರೆಲ್ಲ ವೇದಿಕೆಯ ಹಿಂಬಂದಿಯಲ್ಲಿ ದೊಡ್ಡದಾಗಿ ಬರೆಸಿದ ’’FUNNY GUYS! They have done it! we will repeat again’ಎಂಬ ಬ್ಯಾನರ್ ಬಗ್ಗೆ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ರಕ್ಷಣ ಸಂಶೋಧನಾ ಪ್ರಯೋಗಾಲಯ ನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ನಿವೃತ್ತ ಸುಂದರಮ್ ನೆನಪಿಸಿಕೊಳ್ಳುತ್ತಾರೆ. ಯಾರದಾದರೂ ಕಾರ್ಯನಿರ್ವಹಣೆಯಲ್ಲಿ ಕಡಿಮೆ ಶ್ರದ್ಧೆ ಕಂಡುಬಂದಲ್ಲಿ ಕಲಾಂ ಹೇಳುತ್ತಿದ್ದದು ಫೆಂಟಾಸ್ಟಿಕ್ ಫೆಲೊ. ಕೆಲವೊಮ್ಮೆ ಕೇಳಿಸಿಕೊಂಡವರು ಈ ಮಾತುಗಳನ್ನು ಪ್ರಶಂಸೆ ಎಂದು ತಿಳಿದು ಕೊನೆಗೆ ಬೇಸ್ತು ಬಿದ್ದದ್ದು ಇದೆ.
ತನ್ನ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಈ ಮಹಾ ಯಾತ್ರೆಯಲ್ಲಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ತೊಡಗಿಸುತ್ತಾ ಅಪಾರ ಸಂಖ್ಯೆಯ ಯುವಜನರನ್ನು ದೇಶಕ್ಕಾಗಿ ಕಾರ್ಯ ಮಾಡುವ ಪ್ರವೃತ್ತಿಗೆ ಆಕರ್ಷಿಸುವ ದೊಡ್ಡ ಸಾಧನೆ ಮಾಡಿದರು. ಮುಂದೊಂದುದಿನ ಡಾ.ಕಲಾಂ ರಾಷ್ಟ್ರಪತಿಯಾಗಿ ಕಳೆದ ಅವರ ೫ ವರ್ಷದ ಅವಽ ಕೂಡಾ ಅವರ ಸರಳತೆಗೆ ಹಾಗೂ ಮಾನವೀಯ ಗುಣ ಮೌಲ್ಯಗಳಿಗೆ ಉಲ್ಲೇಖಾರ್ಹವಾಗಿದೆ ಎಂಬುದು ಸತ್ಯ. ೩೫೦ ಕೋಣೆಯ ಭವ್ಯ ಬಂಗಲೆಯಲ್ಲಿ ಕೇವಲ 2 ಕೋಣೆಗಳಲ್ಲಿ ತೀರಾ ಸರಳವಾಗಿ ಮನುಷ್ಯನಾಗಿ ಬಾಳಿದ ಈ ಸಂತ ಬ್ರಿಟಿಷ್ ಪರಂಪರೆಯ ಚೌಕಟ್ಟಿನಿಂದ ಹೊರಬಂದು, ದೊಡ್ಡ ಬದಲಾವಣೆಯ ಪ್ರಾರಂಭಕ್ಕೆ ನಾಂದಿ ಹಾಡಿದರು.
ಮೊದಲ ದಿನವೇ ತನ್ನ ಪಾದರಕ್ಷೆಗಳನ್ನು ಸ್ವಚ್ಛಗೊಳಿಸುವ ನಿರ್ವಹಣೆ ಮಾಡುವ ವ್ಯಕ್ತಿಗೆ ಈ ಕೆಲಸವನ್ನು ಬಿಟ್ಟು ಬೇರೆ ಕಾರ್ಯ ಮಾಡುವಂತೆ ನವಿರಾಗಿ ಹೇಳಿ ತನ್ನ ಸರಳತೆಯನ್ನು ಮೆರೆದರು. ಮೊಘಲ್ ಗಾರ್ಡನ್ ಹಾಗೂ ಭವನದ ಕೆಲವೊಂದು ಪ್ರದೇಶ ಗಳನ್ನು ವಾರದ ನಿರ್ದಿಷ್ಟ ದಿನಗಳಿಗೆ ಜನತಾ ಪ್ರಭುಗಳಿಗೆ ತೆರೆದಿಟ್ಟರು. ಜನ ಮಾನ್ಯರುಗಳನ್ನು ಆಮಂತ್ರಿಸಿ ಆದರಿಸಿ ಸತ್ಕಾರ ನೀಡಿದ ಈ ಮಹಾನುಭವ, ಎಲ್ಲ ಕ್ಷೇತ್ರದವರನ್ನೂ ಭೇಟಿಯಾದರು.
ಯುವ ಜನರು ಹಾಗೂ ಮಕ್ಕಳ ಸಮೂದಾಯವನ್ನು ಬಹುದಾಗಿ ಆಕರ್ಷಿಸುತ್ತಾ ಅಪಾರ ಜನಪ್ರಿಯತೆ ಪಡೆದರೂ ತಾವು
ಸೇವೆಸಲ್ಲಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಕೇಂದ್ರಗಳ ಸಾಧನೆಗಳನ್ನು ಕಾಲಕಾಲಕ್ಕೆ ಸಂಪರ್ಕಿಸುತ್ತ ತಮ್ಮ ಆಸಕ್ತಿಯನ್ನು
ಉಳಿಸಿದರು. ರಾಷ್ಟ್ರಪತಿ ಭವನದ ನವೀಕರಣ ಮಾಡಿ ವಿದೇಶಿ ಗಣ್ಯರುಗಳಿಗೆ ಅಲ್ಲಿಯೆ ವಾಸ್ತವ ಮಾಡುವ ವ್ಯವಸ್ಥೆಗಳ
ನಿರ್ಮಾಣ, ಸರ್ವಧರ್ಮಗಳ ಶಾಂತಿಯ ತೋಟ ಒಂದೇ ಎರಡೇ ಎಂದು ಹೀಗೆ ಸಾಗುತ್ತದೆ.
ಅವರು ಮಾಡಿದ ಬದಲಾವಣೆಗಳ ಪಟ್ಟಿ. ದೇಶವಿದೇಶಗಳ ಸಂದರ್ಶನ ಮಾಡಿದಾಗ ಸಾಧಿಸಿದ ನಡೆಸಿದ ಭಾಂಧವ್ಯ ವರ್ಧನೆಯಿಂದಾಗಿ ಜಗತ್ತಿನಲ್ಲಿ ಭಾರತದ ಬಗ್ಗೆ ಹೊಸ ಅಭಿಪ್ರಾಯದ ಅಧ್ಯಾಯ ಪ್ರಾರಂಭವಾಗಿ ಎನ್‌ಆರ್‌ಐಗಳಿಗಂತೂ ಸಂತಸಕ್ಕೆ ಏಣೆಯೇ ಇಲ್ಲ. ಅವರು ಕಂಡುಕೊಂಡ ಇಂಥ ದೇಶಪ್ರೇಮ ಹಾಗೂ ರಾಷ್ಟ್ರೀಯ ಚಿಂತನೆಯ ಯೋಜನೆಗಳು ಮುಂದುವರೆಸಲು ಕೈಜೊಡಿಸಲು ಯಾವುದೇ ರಾಜಕೀಯ ನಾಯಕರುಗಳು ಮುಂದೆ ಬರಲಿಲ್ಲ ಎಂಬುದು ವಿಷಾದನಿಂii ವಿಚಾರವೇ ಸರಿ.
ತಮ್ಮ ವಿಮಾನಯಾನದ ಧೀರ್ಘಾವಧಿಗಳಲ್ಲಿ ಕೂಡ ದೇಶದ ಕಾರ್ಯಗಳ ಬಗ್ಗೆ ಗಮನನೀಡುತ್ತಿದ್ದದು. ಅವರ ಸಮಯ ಹಾಗೂ ಕರ್ತವ್ಯಪ್ರeಗಳಿಗೆ ಸಾಕ್ಷಿಯಾಗಿದೆ. ಇಸ್ರೋ ಹಾಗೂ ಡಿಆರ್‌ಡಿಓ ಸಂಸ್ಥೆಗಳಲ್ಲಿ ಗಣನಿಯವಾದ ಸೇವೆ ಸಲ್ಲಿಸಿದ ವೇಳೆ ಹಲವಾರು ಸ್ವದೇಶಿಯ ಪ್ರಯತ್ನಗಳು ಫಲಪ್ರದವಾಗಿ ಮೇಕ್ ಇನ್ ಇಂಡಿಯಾ ಆಂದೋಲನಕ್ಕೆ ನಾಂದಿ ಹಾಡಿದವು. ಅವರ ಅವಽಯ ಬಳಿಕವೂ ಈ ಪರಿಕಲ್ಪನೆಗಳು ಒಂದೊಂದಾಗಿ ನಿಜರೂಪ ತಾಳಿ ದೇಶಕ್ಕೆ ಹಲವಾರು ಕೋಟಿ ರುಪಾಯಿಗಳಷ್ಟು ವಿದೇಶಿ ವಿನಿಮಯವನ್ನು ಉಳಿಸಿದ್ದಲ್ಲದೆ ಜತೆಯಲ್ಲಿಯೇ ಈ ದೆಸೆಯಲ್ಲಿ ಮುಂದೆ ಹೋಗಲು ಸಾಕಷ್ಟು ಮೂಲಭೂತ ಸೌಲಭ್ಯ ಗಳ ಸ್ಥಾಪನೆಗಳಿಗೂ ಅವಕಾಶ ನೀಡಿದವು.
ತಮ್ಮ ಸಾರ್ವಜನಿಕ ಬೇಟಿ ಹಾಗೂ ಪ್ರವಾಸಗಳ ವೇಳೆ ಯಾವತ್ತೂ ಮಕ್ಕಳಿಗೆ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಿ ಅದಮ್ಯ ಪ್ರೀತಿ ವಿಶ್ವಾಸ ತೋರಿಸುತ್ತಾ ಉತ್ತೇಜನವನ್ನು ನೀಡುತ್ತಿದ್ದದ್ದು ಪ್ರಶಂಸನೀಯ ಕಾರ್ಯವಾಗಿದೆ. ಒರ್ವ
ವಿಜ್ಞಾನ ಜಗತ್ತಿನ ಸಾಧಕ, ಯಾವುದೇ ರಾಜಕೀಯ ಪಕ್ಷಗಳಿಗೆ ವಾಲಿಕೊಳ್ಳದೆ ಕೊನೆಯವರೆಗೆ ಅಪ್ಪಟ್ಟ ದೇಶ ಪ್ರೇಮ ಹಾಗೂ ಅಖಂಡವಾದ ಜಾತ್ಯತೀಯ ಮೌಲ್ಯ ಮತ್ತು ವಿಶ್ವ ಶಾಂತಿ ಮುಂತಾದ ಸರ್ವ ಶ್ರೇಷ್ಠ ಮಾನವ ಗುಣಗಳನ್ನು ಪ್ರತಿಪಾದಿಸುತ್ತ ಬಾಳಿ ಕೋಟಿಗಟ್ಟಲೆ ಜನರ ಪ್ರೀತಿ ಹಾಗೂ ಸಂಪಾದನೆ ಮಾಡಿದ ಡಾ.ಕಲಾಂ ಅವರು ಓರ್ವ ಯುಗಪುರಷರಾಗಿ ಎಲ್ಲರ ಮನಸ್ಸಿನಲ್ಲಿ ಅಮರರಗಿದ್ದಾರೆ.