ಟಿ. ದೇವಿದಾಸ್
ಇಂಗ್ಲಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ದೊಡ್ಡ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು.
1965 ರಲ್ಲಿ ಅನಂತಮೂರ್ತಿಯವರು ಇಂಗ್ಲಿಿಷ್ ಬ್ರಾಾಹ್ಮಣ, ಕನ್ನಡ ಶೂದ್ರ ಎಂಬ ದೀರ್ಘ ಲೇಖನದಲ್ಲಿ ನಮ್ಮ ಮೂಳೆ ಇಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಿಷನ್ನು ಕಂಡು ನಾಚಿಕೆಯಾಗುತ್ತದೆ ಎಂದಿದ್ದರು. ಸುಮಾರು 54 ವರ್ಷಗಳ ಹಿಂದೆಯೇ ಸಾಮ್ರಾಾಜ್ಯಶಾಹಿ ಭಾಷೆಯೆದುರು ಕನ್ನಡದ ಉಳಿವಿನ ಅನಿವಾರ್ಯತೆ, ಆವಶ್ಯಕತೆಯ ಚಿಂತನೆಯನ್ನು ಮಾಡಿದ್ದ ಅವರು ಆಗ ಏನು ಹೇಳಿದ್ದರೋ ಅವೆಲ್ಲವೂ ಸರಿಹೊತ್ತಲ್ಲಿಯೂ ನಿಜವೆನಿಸುತ್ತಿಿದೆ. ಕನ್ನಡ ಮಾತಾಡುತ್ತೇವೆ ಎಂಬುದೇ ಕೀಳಾಗಿ, ಅಥವಾ ಅದೇ ಒಂದು ದೊಡ್ಡ ಸಾಹಸವಾಗಿ ಅಥವಾ ಅದೇ ಒಂದು ದೊಡ್ಡ ಹೆಮ್ಮೆೆಯಂತೆ ಕಾಣುವವರ ಜಗತ್ತಿಿನಲ್ಲಿ ಕನ್ನಡದ ಬಡ ಅಸ್ಮಿಿತೆಯಿದೆ. ಅನಂತಮೂರ್ತಿ ಹೇಳಿದ ಹಾಗೆ, ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದವರೆಂದರೆ ಈಗಲೂ ಹೆಬ್ಬೆೆಟ್ಟಿಿನ ಸಹಿ ಹಾಕುವ ನಮ್ಮ ಹಳ್ಳಿಿಗರು. ಹಿರಿಯ ಸಾಹಿತಿಗಳ ಕೃತಿಯಲ್ಲಿ ಈ ಹಳ್ಳಿಿಗರು ಕಾಣುತ್ತಾಾರೆ. ಭಾವನಾತ್ಮಕವಾಗಿ ಬಾಂಧವ್ಯವನ್ನು ಹೊಂದಿದವರೂ ಇವರೇ. ಯಕ್ಷಗಾನ, ಕೀರ್ತನೆ, ಜನಪದೀಯ ಕಲೆಗಳಿಗೆ ಜಾಗತೀಕರಣದ ಪ್ರಭಾವದಲ್ಲೂ ಯಾವ ಸೋಂಕು ತಟ್ಟಿಿಲ್ಲ. ಇದೇ ಕನ್ನಡದ ನಿಜವಾದ ಅಂತಃಶ್ಶಕ್ತಿಿ.
ಇಂಗ್ಲಿಿಷ್ ಭಾಷೆಯ ಮೂಲಕ ಹಿಗ್ಗಿಿದ ನಮ್ಮ ವಿಚಾರಗಳನ್ನು ಜಾನಪದ ಜೀವನಕ್ಕೆೆ ನಾವು ಒಯ್ಯುತ್ತಿಿಲ್ಲ. ಅನ್ಯಭಾಷೆಗಳಿಂದ ನಾವು ಪಡೆದದ್ದನ್ನು ನಮ್ಮ ಜಾನಪದಕ್ಕೆೆ ಒಯ್ದದ್ದೇ ಆದರೆ ನಿತ್ಯಬದುಕಿನಲ್ಲಿ ಅದು ಅನುಭವವಾಗಿ ಹೊಸರೂಪ ತಾಳಿ ತಿರುಗಿ ನಮಗೆ ಸಿಗುವುದು ಸಾಧ್ಯವಾಗುತ್ತದೆಂದು ಅನಂತಮೂರ್ತಿ ಹೇಳುತ್ತಾಾರೆ. ನಮ್ಮೊೊಳಗಿನ ನ್ಯೂನತೆಗಳನ್ನು ನಿವಾರಿಸುವ ಮಾಧ್ಯಮವಾಗಿ ದೇಶಭಾಷೆ ಐಕ್ಯಗೊಳಿಸಿದೆ. ಯಾವಾಗ ಇಂಗ್ಲಿಿಷಿನ ಆಧಿಪತ್ಯಕ್ಕೆೆ ಶರಣಾದೆವೋ ಅಂದೇ ನಮ್ಮ ಸೃಷ್ಟಿಿಶೀಲತೆಗೆ ಘಾತವಾಗುತ್ತಾಾ ಬಂತು. ತನ್ನೊೊಳಗೇ ಹುಟ್ಟುವ ಚಿಂತನೆಗಳು, ಭಾವಗಳು, ಆಲೋಚನೆಗಳು ಯಾವ ಬಾಹ್ಯಸ್ಪರ್ಶವಿಲ್ಲದೆ ಆಕಾಶಮುಖಿಯಾಗಿ ಚಿಗುರೊಡೆಯುತ್ತವೆ. ಈ ಅಸಾಮಾನ್ಯಶಕ್ತಿಿ ವರ್ತಮಾನದಲ್ಲಿ ಶೂನ್ಯವನ್ನು ಕನ್ನಡದಲ್ಲಿ ಸೃಷ್ಟಿಿಸಿವೆ.
ಅದಕ್ಕಾಾಗಿ ಕನ್ನಡದಲ್ಲಿ ಹಿಂದಿನ ತಲೆಮಾರಿನಂತೆ ಕಸುವುಳ್ಳ, ನೆಲದ ಗಾಢ ತಾದಾತ್ಮ್ಯದ ಚಿಂತನೆಗಳುಳ್ಳ ಕೃತಿಗಳು ಹುಟ್ಟುತ್ತಿಿಲ್ಲ. ಇಂಗ್ಲಿಿಷಿನ ಪ್ರಭಾವ ಎಷ್ಟೆೆಂದರೆ, ನಮ್ಮಲ್ಲಿ ಅಂತರ್ಗತವಾಗಿ ಮಾನವೀಯವಾಗಿ ಉಳಿಯುವಂಥ ಜೀವನಮೌಲ್ಯಗಳು ಬರಿದಾಗಿ ಶುಷ್ಕವಾದ ಬುದ್ಧಿಿ ಮತ್ತು ಮನಸ್ಸನ್ನು ನಮ್ಮ ಮಕ್ಕಳನ್ನು ಬೆಳೆಸುತ್ತಿಿದ್ದೇವೆ. ನಮ್ಮ ಹಿರಿಯರನ್ನು ನೆನಪಿಟ್ಟುಕೊಂಡು ಸ್ಮರಿಸುವ ನಮ್ಮ ಔದಾರ್ಯವೂ ಹೀನವಾಗಿ ಕೃಶವಾಗಿ ಕೃತಕವಾಗಿ ಸೃಷ್ಟಿಿಸಿಕೊಂಡ ಆಮದು ಸರಕಂತಾಗಿದೆ. ಇಂಗ್ಲಿಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ದೊಡ್ಡ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು.
ಈ ಶುಶ್ರೂಷೆಯಿಂದಾಗಿ ದೇಶಭಾಷೆಗಳು ವಾತಗ್ರಸ್ತವಾಗಿದೆ. ಬಹುಪ್ರಯಾಸದ ನುಡಿಯಾಗಿ, ಕೇಳಲು ಯಾವ ಅಭೀಷ್ಟವೂ ಇಲ್ಲದ ಸ್ಥಿಿತಿಗೆ ಅವು ತಲುಪಿವೆ. ಜನಪದೀಯ ಸ್ಪರ್ಶವಿಲ್ಲದೆ ಯಾವ ಭಾಷೆಯೂ ಸಿರಿಗೊಳ್ಳದೆ ಕಾಲಘಟ್ಟದಲ್ಲೂ ಕಾಡುವಾಸಿಯಾಗಿ ಬೌದ್ಧಿಿಕವಾದ ವಿಕಾಸಕ್ಕೆೆ ಒಳಗಾಗದೆ, ಜನಸಂಪರ್ಕದಿಂದಲೂ ಮರೆಯಾಗಿ, ತನ್ನೊೊಳಗೇ ತಾನು ಅನಾಥವಾಗಿ ಶೂದ್ರಾಾವಸ್ಥೆೆಗೆ ತಲುಪುತ್ತದೆ. ಮುಖ್ಯವಾಗಿ ಅನಂತಮೂರ್ತಿ ಹೇಳುವ ಮಾತುಗಳಲ್ಲಿ ಇಂಗ್ಲಿಿಷ್-ಬ್ರಾಾಹ್ಮಣ, ಕನ್ನಡ- ಶೂದ್ರವೆಂಬ ಎರಡು ಅಮಾನುಷ ಜಾತಿಗಳು ಹುಟ್ಟಿಿ ಯಂತ್ರನಾಗರಿಕತೆಯ ಒತ್ತಡದಲ್ಲಿ ನಮ್ಮ ಮಾನವತ್ವವನ್ನು ರಕ್ಷಿಸುವಂತಹ ಯಾವ ನಮ್ಮ ಗತಕಾಲದ ನೆನಪೂ ನಮಗೆ ಉಳಿಯದೆ ಹೋಗುತ್ತದೆ. ಇದಕ್ಕೆೆ ಪರಿಹಾರವೆಂದರೆ, ಇಂಗ್ಲಿಿಷನ್ನು ಕನ್ನಡದ ಜಗತ್ತಿಿನೊಳಗೆ ದಕ್ಕಿಿಸಿಕೊಳ್ಳುವುದು. ಯಾವುದೇ ಅಭಿವ್ಯಕ್ತಿಿಯಿದ್ದರೂ ಕನ್ನಡದ ಮೂಲಕವೇ ಸಾಧ್ಯವಾಗಿಸುವುದು. ಇಂಗ್ಲಿಿಷನ್ನು ದಕ್ಕಿಿಸಿಕೊಂಡು ಹೊಸದನ್ನು ಸೃಜಿಸಲು ಸಾಧ್ಯವಾಗಿಸಿಕೊಳ್ಳುವುದು.
ಇಂಗ್ಲಿಿಷ್ ಜಗತ್ತಿಿನ ಜ್ಞಾನವಾಹಿನಿಯೆಂಬುದು ನಿಸ್ಸಂದೇಹ. ಆ ಜ್ಞಾನವನ್ನು ಪಡೆಯುವ ಸಲುವಾಗಿ ಇಂಗ್ಲಿಿಷ್ ಮಾಧ್ಯಮ ಬೇಕೇ ಬೇಕು. ಹಾಗೆ ಒದಗಿಬಂದ ಜ್ಞಾನವು ಕನ್ನಡದಲ್ಲಿ ಮರುಹುಟ್ಟು ಪಡೆಯಬೇಕು. ಆದರೆ, ಬಾಲ್ಯದಲ್ಲೇ ಇಂಗ್ಲಿಿಷ್ ಮಾಧ್ಯಮವನ್ನು ಆರಂಭಿಸಿದರೆ ಚಿಂತನೆಯ ಸಾಮರ್ಥ್ಯ ಕುಸಿಯುತ್ತದೆ. ಇಂಗ್ಲಿಿಷಿಗಿರುವ ದೊಡ್ಡ ಶಕ್ತಿಿಯೆಂದರೆ, ಅದು ಯಾವ ಭಾಷೆಯನ್ನೂ ನಾಶ ಮಾಡಿಬಿಡುತ್ತದೆ. ಇಂಗ್ಲಿಿಷನ್ನು ಕಲಿಯುವಾಗಲೂ, ಇಂಗ್ಲಿಿಷಿನಲ್ಲಿ ಕಲಿಯುವಾಗಲೂ ನಮ್ಮ ಭಾಷೆಯನ್ನು ಬೆಳೆಸುವ, ಅದಕ್ಕೆೆರವಾಗುವಂತೆ ನಮ್ಮ ಚಿಕಿತ್ಸಕ ದೃಷ್ಟಿಿಯನ್ನು, ಬುದ್ಧಿಿಯನ್ನು ವಿಸ್ತರಿಸಿಕೊಳ್ಳುತ್ತಾಾ, ಬಿಡದೆ ನಮ್ಮ ಭಾಷೆಯ ಏಳ್ಗೆೆಗೆ ಬೇಕಾಗಿ ಆಲೋಚಿಸುತ್ತಾಾ ಶ್ರಮಿಸುತ್ತಿಿರಬೇಕು. ನಮ್ಮ ಅರಿವಿಗೆ ಅದು ದಕ್ಕುವಂತೆ ಬಗ್ಗಿಿಸಿಕೊಂಡು ಒಗ್ಗಿಿಸಿಕೊಳ್ಳಬೇಕು. ಕನ್ನಡದಲ್ಲಿ ಓದುವುದಕ್ಕೂ, ಕನ್ನಡವನ್ನು ಓದುವುದಕ್ಕೂ ಇರುವ ಅಂತರ ಇದೇ. ದೇಶಭಾಷೆಗಳ ಮನಸ್ಸಿಿಗೆ ಅನ್ಯಭಾಷೆಯಲ್ಲಿ ಪಡೆಯುವ ಜ್ಞಾನವನ್ನು ಅಂತರಂಗದ ಭಾಷೆಗೆ ಎರವಾಗಿಸಿಕೊಳ್ಳುವ ಸಾಮರ್ಥ್ಯವಿದೆ. ಇಂಗ್ಲಿಿಷಿನಲ್ಲಿ ಮಾತಾಡುವಾಗಲೂ ಮನಸ್ಸು ಮಾತೃಭಾಷೆಗೆ ತರ್ಜುಮೆ ಮಾಡುತ್ತಿಿರುತ್ತದೆ.
ಮಾತೃಭಾಷೆಯ ಅನನ್ಯತೆಯಿದು. ಇಂಗ್ಲಿಿಷಿಗೂ ಅದರದ್ದೇ ಆದ ಜನಪದೀಯ ಸ್ಪರ್ಶವಿರುವ ಗ್ರಾಾಂಥಿಕವಲ್ಲದ ಇಂಗ್ಲಿಿಷ್ ಇದೆ. ಇಂಗ್ಲಿಿಷ್‌ನಲ್ಲಿ ಬರೆದ ಕವನಗಳನ್ನು ಬಹಿರಂಗವಾಗಿ ಇಂಗ್ಲಿಿಷ್ ಕವಿಗಳೇ ಅಂಜುವ ಕಾಲವೊಂದಿತ್ತು. ಇಂದು ಇಂಗ್ಲಿಿಷಿನಲ್ಲಿ ಬರೆದರೆ ಮಾತ್ರ ವಿಶ್ವಮಾನ್ಯತೆ ಸಿಗುತ್ತದೆ. ಇಂಗ್ಲಿಿಷಿಗಿದ್ದ ಆ ಅಂಜುವ ಕಾಲ ಅಥವಾ ದುಸ್ಥಿಿತಿ ಈಗ ಕನ್ನಡಕ್ಕೊೊದಗಿದೆ. ಇದಕ್ಕೆೆ ಕಾರಣ, ಕನ್ನಡಿಗರಾಗಿ ಕನ್ನಡವನ್ನು ನಾವೇ ಕೀಳಾಗಿ ನೋಡಿ, ಇಂಗ್ಲಿಿಷಿನ ಹುಚ್ಚು ಹೆಚ್ಚಾಾಗಿ ಅದನ್ನೇ ನಿತ್ಯಜೀವನಕ್ಕೆೆ ಬಳಸಿದುದರ ಪರಿಣಾಮದಿಂದ. ಬಳಸಿದರಲ್ಲವೇ ಭಾಷೆಯೊಂದು ಬೆಳೆಯುವುದು, ತನ್ಮೂಲಕ ಉಳಿಯುವುದು!
ಪ್ರಾಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದವರು ಅನಂತರದಲ್ಲಿ ಇಂಗ್ಲಿಿಷ್ ಮಾಧ್ಯಮದಲ್ಲಿ ಓದಿ ಯಶಸ್ಸನ್ನು ಗಳಿಸಿದ್ದವರಲ್ಲಿ ಪ್ರಖ್ಯಾಾತ ಶ್ರೀ ಕೆ.ಎಸ್. ನಾರಾಯಣ ಆಚಾರ್ಯ, ಬನ್ನಂಜೆ, ಸಿ.ಎನ್.ಆರ್. ರಾವ್, ಇನ್ಫೋೋಸಿಸ್ ಸುಧಾ ಮೂರ್ತಿ, ಶತಾವಧಾನಿ ಆರ್. ಗಣೇಶ್, ಅನೇಕ ವಿದ್ವಾಾಂಸರು, ಬರೆಹಗಾರರು, ಪತ್ರಿಿಕಾ ಸಂಪಾದಕರು, ಚಿಂತಕರು, ಸಾಹಿತಿಗಳು, ಪ್ರಾಾಧ್ಯಾಾಪಕರು, ಉಪನ್ಯಾಾಸಕರುಗಳಿದ್ದಾರೆ. ಇವರೆಲ್ಲಾ ಕನ್ನಡವನ್ನು ಓದಲು, ಬರೆಯಲು ಸ್ಪಷ್ಟವಾಗಿ ಬಲ್ಲರು. ಒಂದು ಭಾಷೆಯಲ್ಲಿ ಪಡೆಯುವ ಪ್ರಭುತ್ವದಿಂದ ಮತ್ತೊೊಂದು ಭಾಷೆಯಲ್ಲಿ ನೈಪುಣ್ಯವನ್ನು ಗಳಿಸಬಹುದು. ಇಂಗ್ಲೆೆಂಡಿನ ಒಬ್ಬ ರಾಜಕೀಯ ಶಾಸ್ತ್ರಜ್ಞನಾಗಲಿ, ತತ್ತ್ವಶಾಸ್ತ್ರಜ್ಞನಾಗಲಿ, ಬ್ಲೇಕ್, ಲಾರ್ಸ್ೆ, ವ್ಸರ್‌ವರ್ತನಲ್ಲಿ ಅಭಿವ್ಯಕ್ತವಾದ ಜನಾಂಗದ ವಿಶೇಷ ಪ್ರಜ್ಞೆಯನ್ನು ಗಣನೆಗೆ ಹೊಸವಿಚಾರ ಮಾಡಲಾರ. ನಾವು ನಮ್ಮ ತತ್ವಜ್ಞಾನಿಗಳ, ಸಂತರ, ಚಿಂತಕರ, ದಾರ್ಶನಿಕರ, ಆಧುನಿಕ ಕನ್ನಡ ಸಾಹಿತ್ಯದ ದರ್ಶನದ ಪ್ರಭಾವವಿಲ್ಲದೆ ಇಂಗ್ಲಿಿಷಿನಲ್ಲೇ ಹೊಸತನ್ನು ಸೃಷ್ಟಿಿಸುವ ಸಾಹಸಕ್ಕೆೆ ಕೈಹಾಕುತ್ತೇವೆ. ಇದರಿಂದಾಗಿ ಕನ್ನಡದಲ್ಲಿ ಯಾವೊಂದು ಸೃಷ್ಟಿಿಶೀಲ ಕೃತಿಯೊಂದನ್ನು ರಚಿಸಲು ಸಾಧ್ಯವಾಗದೇ ಹೋಗುತ್ತಿಿದೆಯೆಂದು ಅನಿಸುತ್ತಿಿದೆಯೆಂದು ಅನಂತಮೂರ್ತಿ ಹೇಳುತ್ತಾಾರೆ.
ತನ್ನ ಭಾಷೆಯಲ್ಲೇ ಏನನ್ನೂ ಸೃಷ್ಟಿಿಸಲು ಸಾಧ್ಯವಾಗದೆ ಅನ್ಯಭಾಷೆಯಿಂದ ಎರವಲು ಪಡೆದ ಜ್ಞಾನದಿಂದ ಪ್ರತಿಭಾಶೀಲ ಕೃತಿಯೊಂದನ್ನು ಸೃಷ್ಟಿಿಸಲು ಸಾಧ್ಯವೆಂಬುದೇ ಕನ್ನಡದ ಮಟ್ಟಿಿಗೆ ದೊಡ್ಡ ಪ್ರಶ್ನೆೆಯಾಗಿದೆ. ಇದು ಕನ್ನಡದ ಸಮಸ್ಯೆೆ ಎಲ್ಲಾ ದೇಶಭಾಷೆಗಳ ಜ್ವಲಂತ ಸಮಸ್ಯೆೆ. ಈ ಹಿನ್ನೆೆಲೆಯಲ್ಲಿ ಎಲ್ಲಾ ದೇಶಭಾಷೆಗಳು ಬ್ರಾಾಹ್ಮಣತ್ವವನ್ನು ಪಡೆಯಬೇಕಾಗಿದೆ ಇಂಗ್ಲಿಿಷಿನ ಹಂಗಿನಿಂದ ಹೊರಬಂದು. ಅಭಿವೃದ್ಧಿಿ ಹೊಂದಿದ ದೊಡ್ಡದೊಡ್ಡ ರಾಷ್ಟ್ರಗಳಲ್ಲಿ ಆರಂಭದ ಕಲಿಕೆ ದೇಶಭಾಷಾ ಮಾಧ್ಯಮದಲ್ಲಿದೆ. ತನ್ನ ಭಾಷೆಯನ್ನು ಉಳಿಸಿಕೊಳ್ಳುವುದರ ಜತೆಗೆ ಸಂಸ್ಕೃತಿಯನ್ನು ಜತನವಾಗಿಟ್ಟುಕೊಳ್ಳುವ ಜವಾಬ್ದಾಾರಿಯಿಂದ.
ಇಂಗ್ಲಿಿಷನ್ನು ಹೊರತುಪಡಿಸಿದ ಜಗತ್ತನ್ನು ಕಲ್ಪಿಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಭ್ರಮೆ ನಮ್ಮಲ್ಲಿದೆ. ಇದು ಸತ್ಯವೂ ಹೌದು. ಆಧುನಿಕ ಮತ್ತು ವಿಶ್ವಪಾರಂಪರಿಕ ಲೌಕಿಕ ಜ್ಞಾನವನ್ನು ಇಂಗ್ಲಿಿಷೂ ಸೇರಿ ಜಗತ್ತಿಿನ ಇತರ ಭಾಷೆಗಳಿಂದ ಸತ್ಯ. ಹಾಗೆ ಸಂಸ್ಕೃತದಲ್ಲಿರುವ ಜ್ಞಾನನಿಧಿಯನ್ನು ಪಡೆಯಲು ವಿಶ್ವವೇ ಸಂಸ್ಕೃತದ ಮೊರೆಹೋಗಬೇಕಾದುದೂ ಅಷ್ಟೇ ಸತ್ಯ. ಆದ್ದರಿಂದ ನಮ್ಮೊೊಳಗಿನ ಸೃಜನಶೀಲತೆಯನ್ನು ಪ್ರತಿಭಾವಂತಗೊಳಿಸಲು ಕನ್ನಡವೂ ಸೇರಿದಂತೆ ಸಂಸ್ಕೃತವನ್ನೂ ನಾವು ಬೋಧಿಸಬೇಕು. ಕನ್ನಡ ಮಾತ್ರ ಬಲ್ಲವರು ಶೂದ್ರರೆಂಬ ಭಾವವೂ, ಇಂಗ್ಲಿಿಷೊಂದೇ ಅನ್ನಕೊಡುವ ಭಾಷೆಯೆಂಬ ಮೇಲರಿಮೆಯೂ ತೊಲಗಬೇಕು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ವಾಹಕವಾಗಿ ಕನ್ನಡವು ನಮ್ಮ ಬದುಕನ್ನು ಜೀವಂತಗೊಳಿಸಿ ಅರ್ಥಪೂರ್ಣವಾಗಿಸುತ್ತದೆಂಬ ಅರಿವನ್ನು ಬೆಳೆಸಿ ಜಾಗೃತಗೊಳಿಸಬೇಕಿದೆ.
ಸಾಹಿತ್ಯದ ಅಭಿರುಚಿ ಬದುಕನ್ನು ಢಾಳಾಗಿ ಅನುಭವಿಸುವುದಕ್ಕೆೆ ಕಲಿಸುತ್ತದೆ ಮಾತ್ರವಲ್ಲ ಎಲ್ಲ ಅನುಭವವನ್ನೂ ದಕ್ಕಿಿಸಿಕೊಳ್ಳುವ ತಾಕತ್ತನ್ನು ನೀಡುತ್ತದೆ. ಕಲ್ಪನಾಲೋಕವನ್ನು ಅನನ್ಯಗೊಳಿಸುತ್ತದೆ. ಭಾವಲೋಕವನ್ನು ಶುದ್ಧಗೊಳಿಸುತ್ತದೆ. ಎಲ್ಲ ಬಗೆಯ ಚಿಂತನೆಗಳನ್ನು ಸ್ವೀಕರಿಸುವಂತೆ ಮಾಡುತ್ತದೆ. ಸಮೂಹವೊಂದು ಸ್ವೀಕರಿಸುವ ಸಂವೇದನೆಯ ಮನಸ್ಸನ್ನು ಬೆಳೆಸುತ್ತದೆ. ಈ ಸಂವೇದನೆಯೆಂಬುದು ವಿಸ್ತಾಾರವಾದ ಮನುಷ್ಯ ಪ್ರಪಂಚದ ಅನನ್ಯತೆಯ ಮುಖಗಳನ್ನು ಪರಿಚಯಿಸುತ್ತದೆ. ಪುಸ್ತಕ ಲೋಕದ ಸಾಂಗತ್ಯವನ್ನು ಬೆಳೆಸುತ್ತದೆ. ಇವೆಲ್ಲವೂ ಆಗೋದು ಮನೆಯ ವಾತಾವರಣ ಹುಟ್ಟಿಿಸುವ ಸನ್ನಿಿವೇಶಗಳಿಂದ. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಈ ಕಾರಣದಿಂದ. ಮನೆಯಲ್ಲಿದ್ದವರ ಮಾತು, ವರ್ತನೆ, ಅಭಿವ್ಯಕ್ತಿಿ ಸರಿಯಾಗಿರುವುದರ ಯತೆಯಲ್ಲಿ ಪ್ರಾಾಮುಖ್ಯವನ್ನು ನೀಡಬೇಕು. ಪ್ರತಿ ಮನೆಯೂ ದಿನಪತ್ರಿಿಕೆಗಳನ್ನು, ವಿಶೇಷಾಂಕಗಳನ್ನು, ಸಾಹಿತ್ಯದ ಪುಸ್ತಕಗಳನ್ನು ತರುವಂತಾದರೆ ಮಕ್ಕಳ ಅಭಿವ್ಯಕ್ತಿಿಯ ವಿಕಾಸಕ್ಕೆೆ ಅಂತ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಈಗಂತೂ ಪ್ರತಿ ದಿನ ಮತ್ತು ವೃತ್ತಪತ್ರಿಿಕೆಗಳು ಮಕ್ಕಳ ಪ್ರತಿಭೆಗೆ ಅವಕಾಶ ನೀಡುತ್ತಿಿದೆ. ಸಂಗೀತದ, ನಾಟ್ಯಪ್ರಾಾಕಾರದ ಡಿವಿಡಿಗಳನ್ನು ತಂದುಕೊಟ್ಟರೆ ಮನರಂಜನೆಯ ಜತೆಗೆ ಉತ್ತಮ ಹವ್ಯಾಾಸಗಳನ್ನು ಮಕ್ಕಳಲ್ಲಿ ಬೆಳೆಸಬಹುದು. ಸಾವಿರ ರುಪಾಯಿಗಳನ್ನು ಮೊಬೈಲಿಗೆ, ಶೂಗೆ, ಬಟ್ಟೆೆಗೆ, ಜಂಕ್ ತಿಂಡಿ ತಿನಿಸುಗಳಿಗೆ ಮತ್ತು ಆರೋಗ್ಯ ಕೆಡಿಸುವಂಥದ್ದನ್ನು ತಿಂದು ಮಜಾ ಅಂತ ಹಣವನ್ನು ವ್ಯಯಿಸುವ ಬದಲು ಇಂಥವುಗಳಿಗೆ ಹಣ ವ್ಯಯಿಸುವುದೊಳಿತು. ಪ್ರತಿ ಮಕ್ಕಳು ತಮ್ಮ ಹುಟ್ಟುಹಬ್ಬಕ್ಕೆೆ ಕನಿಷ್ಟ ಅಂದರೂ ಒಂದು ಕನ್ನಡದ ಪುಸ್ತಕವನ್ನು ಕೊಂಡು ಓದಿದರೆ ಕನ್ನಡದ ಏಳ್ಗೆೆಗೆ ಶ್ರಮಿಸಿದಂತೆ.
ಒಂದು ಭಾಷೆಯನ್ನು ಜೀವಂತವಾಗಿ ಉಳಿಸಿಕೊಳ್ಳುವುದರಲ್ಲೇ ಆ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿದೆ. ಭಾಷೆಯನ್ನು ಸಾಯಲು ಬಿಟ್ಟು ಸಾಹಿತ್ಯದ ವಿಕಾಸವೆಂಬುದು ವಾಸ್ತವ ಮತ್ತು ಅನುಭವವೇ ಇಲ್ಲದ ಪ್ರಪಂಚದಲ್ಲಿ ಕನಸಿನ ವಿನ್ಯಾಾಸಗಳನ್ನು ಕಲ್ಪಿಿಸಿಕೊಂಡಂತೆ. ಮಕ್ಕಳಲ್ಲಿ ಭಾಷೆಯ ಪ್ರಭುತ್ವವನ್ನು ಮನೆಯಿಂದಲೇ ಸರಿಯಾಗಿ ಶಾಲೆಯಲ್ಲಿ ಅದು ವಿಸ್ತೃತರೂಪವನ್ನು ಪಡೆದುಕೊಳ್ಳುತ್ತದೆ. ಮುಂದೆ ಅದು ಸೃಜನಶೀಲವಾಗಿ ಮೈದುಂಬಿಕೊಳ್ಳುತ್ತದೆ. ಹಿರಿಯರು ಬೆಳೆಸಿ ಉಳಿಸಿದ ಶ್ರೀಮಂತವಾದ ಕನ್ನಡಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬಾಳಿಸುವಂತಾಗಲು ಅದರ ಸಂಸ್ಕಾಾರವನ್ನು ನಮ್ಮ ಕನ್ನಡದ ಮಕ್ಕಳಿಗೆ ಅವರ ಬಾಲ್ಯದಲ್ಲೇ ಶ್ರೀಮಂತವಾಗಿ ಎರೆಯಬೇಕಾಗಿದೆ.
ಅಧ್ಯಾಾಪಕರಾಗಿ, ಎಲ್ಲಾ ಅಧ್ಯಾಾಪಕರಿಗೂ ಒಳತೋಟಿಯಲ್ಲಿ ಅನಿಸಿ ಅನ್ವಯಿಸಿ ಬರೆದ ಅನಂತಮೂರ್ತಿಯವರ ಈ ಮಾತು ಬಹುಮಹತ್ವದ್ದು: ಮೂಲಗ್ರಂಥವನ್ನು ಓದುವಷ್ಟು ಇಂಗ್ಲಿಿಷ್ ಭಾಷೆಯ ವ್ಯಾಾಕರಣ ಇತ್ಯಾಾದಿಗಳನ್ನು ವಿದ್ಯಾಾರ್ಥಿಗಳಿಗೆ ಕಲಿಸೋಣ. ಆದರೆ ಅವರು ಇಂಗ್ಲಿಿಷ್ ಸಾಹಿತ್ಯವನ್ನು ಪಡೆದ ಅನುಭವವನ್ನು ತಮ್ಮ ಭಾಷೆಯಲ್ಲಿಯೇ ವ್ಯಕ್ತಪಡಿಸಲು ಅವಕಾಶ ಕಲ್ಪಿಿಸೋಣ. ಪರೀಕ್ಷೆಯಲ್ಲಿ ಅವರ ಇಂಗ್ಲಿಿಷ್ ಭಾಷೆಯನ್ನು ಅಳೆಯುವುದು ನಮ್ಮ ಗುರಿಯಾದರೆ ವ್ಯಾಾಕರಣ, ವಾಕ್ಯರಚನೆಯ ಪ್ರಶ್ನೆೆಗಳನ್ನು ಕೇಳೋಣ. ಅಥವಾ ಅವರ ಸಾಹಿತ್ಯಾಾನುಭವವನ್ನು, ಸಂವೇದನಾ ಶಕ್ತಿಿಯನ್ನು ಅಭಿರುಚಿಯನ್ನು ಪರೀಕ್ಷಿಸುವುದು ನಮ್ಮ ಗುರಿಯಾದರೆ ತಮ್ಮ ಅನುಭವವನ್ನು ಸಹಜವಾಗಿ ವ್ಯಕ್ತಪಡಿಸಲು ಸಾಧ್ಯವಾದ ಭಾಷೆಯಲ್ಲಿಯೇ ಅವರಿಗೆ ಬರೆಯಲು ಬಿಡೋಣ.
ಆದರೆ ನಾವು ಈಗ ಪರೀಕ್ಷೆಯಲ್ಲಿ ಅವರ ಇಂಗ್ಲಿಿಷ್ ಭಾಷಾಜ್ಞಾನವನ್ನು ಪರೀಕ್ಷಿಸದೆ, ಅವರ ಸಾಹಿತ್ಯಾಾನುಭವವನ್ನೂ ತೂಗದೆ ನೂರರಲ್ಲಿ ಎಂಬತ್ತು ಇಂಗ್ಲಿಿಷಿನಲ್ಲಿ ಫೇಲ್ ಮಾಡುತ್ತಿಿದ್ದೇವೆ. (ಈಗ ಇಷ್ಟು ಪ್ರಮಾಣದಲ್ಲಿ ಫೇಲ್ ಮಾಡಲಾಗುತ್ತಿಿಲ್ಲ ಎಂಬ ಸಮಾಧಾನವಿದೆ) ಇದರ ಪರಿಣಾಮ: ನಮ್ಮ ವಿದ್ಯಾಾರ್ಥಿಗಳು ಶೇಕ್ಸಪಿಯರ್‌ನ ಪರಮಶತ್ರುಗಳೋ ಅಥವಾ ಶೇಕ್ಸಪಿಯರ್‌ನ ಬಗ್ಗೆೆ ನೋಟ್‌ಸ್ ಬರೆದವನೊಬ್ಬನ ಮಿತ್ರರೊ ಅಥವಾ ಪಾಸಾಗಲಾರದ ತಾವು ಅಪ್ರಯೋಜಕರೆನ್ನುವ ಹತಮತಿಗಳು ಆಗುತ್ತಿಿದ್ದಾರೆ. ಅಂದರೆ, ಗ್ರಹಿಕೆಗೆ ಮೂಲಭಾಷೆ, ಅಭಿವ್ಯಕ್ತಿಿಗೆ ನಮ್ಮ ಭಾಷೆ ಎಂಬ ಸೂಕ್ತವಾದ ಮಾರ್ಗ ಇವರದ್ದು. ಕೊಡುಕೊಳ್ಳುವಿಕೆಯು ಭಾಷಾಭಿವೃದ್ಧಿಿಯ ಯತ್ನದಲ್ಲಿ ತುಂಬಾ ಪ್ರಯೋಜನಕಾರಿ. ಬೆಳೆಯುತ್ತಿಿರುವ ಭಾಷೆಗೆ ಮೃದುಹಿತವನ್ನು ಇದು ನೀಡುತ್ತದೆ. ಆಗ ಮುಂದೆ ಇಂಗ್ಲಿಿಷನ್ನು ಶೂದ್ರವಾಗಿ ದಕ್ಕಿಿಸಿಕೊಳ್ಳಬಹುದು. ಇಂಗ್ಲಿಿಷಿನ ಪ್ರಭಾವದಿಂದಾಗಿ ಕನ್ನಡವು ಇಂದು ಅನುಭವಿಸಿರುತ್ತಿಿರುವ ಅಸಡ್ಡೆೆ, ಅವಮಾನ, ತಿರಸ್ಕಾಾರ, ನಿರ್ಲಕ್ಷ್ಯವನ್ನು ಇಂಗ್ಲಿಿಷ್ ಕೂಡ ಲ್ಯಾಾಟಿನ್ ಭಾಷೆಯಿಂದ ಅನುಭವಿಸಿತ್ತು.
ಆಗೆಲ್ಲಾ ಶೇಕ್ಸಪಿಯರ್‌ನಂಥವರು ತಾವು ಬರೆದುದನ್ನು ಮುಚ್ಚಿಿಟ್ಟುಕೊಳ್ಳುತ್ತಿಿದ್ದರಂತೆ. ಅಂಥದ್ದರಲ್ಲಿ ಕೇವಲ ಕನ್ನಡಿಗರು ಮಾತ್ರ ಮಾತಾಡುವ ಕನ್ನಡಕ್ಕೆೆ ಆಧುನಿಕತೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು, ಶಕ್ತಿಿಯನ್ನು ಕನ್ನಡಿಗರು ಕೊಡಬೇಕೇ ವಿನಾ ಅನ್ಯತ್ರ ಮಾರ್ಗವಿಲ್ಲ. ಇಂಗ್ಲಿಿಷನ್ನೊೊಳಗೊಂಡಂತೆ ಅದರಲ್ಲಿರುವ ಜ್ಞಾನವನ್ನು ಓದುವಂತೆ ಸಾಧ್ಯವಾಗಿಸಿದ ದೊಡ್ಡಸ್ತಿಿಕೆಯನ್ನು ತುಂಬಿದವರು ಇಂಗ್ಲಿಿಷನ್ನು ಚೆನ್ನಾಾಗಿಬಲ್ಲ ನಮ್ಮ ಹಿರಿಕಿರಿಯರು. ಜಿ ಚಿಟ ತಪ್ಪುು, *ಐ ಞ ಚಿಟ ಸರಿಯೆಂಬಷ್ಟು ಇಂಗ್ಲಿಿಷನ್ನು ಹಳ್ಳಿಿಯವನೊಬ್ಬ ಕಲಿತಿದ್ದಾನೆಂದರೆ ಅದು ಅವರು ಕನ್ನಡದಲ್ಲಿ ಹೊಂದಿರುವ ಪ್ರಭುತ್ವದಿಂದ ಸಾಧ್ಯವಾದದ್ದು. ಚಿಂತಿಸುವ ಹಾಗೇ ತನ್ನೊೊಳಗೆ ಅರಗಿಸಿಕೊಳ್ಳುವ ಶಕ್ತಿಿ ಭಾಷೆಗೆ ಬರುವುದು ಹೀಗೆಯೇ. ಒಂದು ಭಾಷೆಯಲ್ಲಿ ನಾವು ಪಡೆಯುವ ಸಾಮಾನ್ಯ ಅರ್ಹತೆಯು ಉಳಿದ ಭಾಷಿಕ ರಚನೆಯನ್ನು ಅರಗಿಸಿಕೊಳ್ಳಲು ಪ್ರೇರಕವಾಗಿರುತ್ತದೆ.
ಭಾಷೆಯ ಜೀವಂತಿಕೆಯ ಗಟ್ಟಿಿಬೇರಿರುವುದು ಆಡುಭಾಷೆಯಲ್ಲಿ. ಶಿಷ್ಟಸಾಹಿತ್ಯಕ್ಕೆೆ ಆಡುಭಾಷೆಯೇ ಮೂಲ. ಇಂಗ್ಲಿಿಷಿನ ಜ್ಞಾನರಾಶಿಯನ್ನು ಕನ್ನಡದ ತೆಕ್ಕೆೆಗೆ ತಂದುಕೊಳ್ಳುವ ಕನ್ನಡದ ಸಿರಿಯನ್ನು ಸಂಪನ್ನಗೊಳಿಸುತ್ತದೆ. ಬಲ್ಲವರು ಮಾರ್ಗದರ್ಶನ ನೀಡಿದಾಗ ಕನ್ನಡದ ಮಕ್ಕಳು ಅವುಗಳನ್ನು ಓದಿ ಅರಗಿಸಿಕೊಂಡು ಕನ್ನಡತನಕ್ಕೆೆ ಹೊಂದಿಸಿ ಉದ್ದೀಪಿಸಬಲ್ಲರು. ಕಾನ್ವೆೆಂಟ್ ಶಾಲೆಗಳಲ್ಲಿಯಂತೆ ಇಂಗ್ಲಿಿಷನ್ನು ಮಾತಾಡುವುದರಿಂದ ಯಾವ ಲಾಭವಿಲ್ಲ. ಇಂಗ್ಲಿಿಷಿನ ಜ್ಞಾನನಿಧಿಯನ್ನು ಕನ್ನಡದ ಕಣ್ಣಿಿನಲ್ಲಿ ಓದುವುದರಿಂದ ದ್ವಿಿಭಾಷೆಯಲ್ಲೂ ಪರಿಣತಿಯನ್ನು ಗಳಿಸಬಹುದು. ಮಾತೃಭಾಷೆಗಿರುವ ಅನನ್ಯವಾದ ಶಕ್ತಿಿಯಿದು. ಕೌಶಲ ಮತ್ತು ಸಾಮರ್ಥ್ಯಾಾಧಾರಿತ ಕಲಿಕೆ ಸಾಧ್ಯವಾಗುವುದು ಹೀಗೆ.
ಇಬ್ಬರು ಕನ್ನಡಿಗರ ಸಂಭಾಷಣೆಯಲ್ಲಿ ಭಾಷಿಕರಚನೆಯ ವಿನ್ಯಾಾಸದ ಜತೆಯಲ್ಲಿ ಸಿಗುವ ವಿಷಯಜ್ಞಾನ ಕೃತಕ ಇಂಗ್ಲಿಿಷಿನ ಸಂಭಾಷಣೆಯಲ್ಲಿ ಸಿಗುವುದಿಲ್ಲ. ವಸ್ತುನಿಷ್ಠ ವಿಚಾರಗಳು ಪರಸ್ಪರ ವಿನಿಮಯವಾಗುವುದೇ ಹೊರತು ಜೀವನಿಷ್ಠಮೌಲ್ಯಗಳಲ್ಲ. ಇದು ಬೌದ್ಧಿಿಕ ವಿಸ್ತಾಾರವನ್ನು, ಭಾವನಾತ್ಮಕ ಸಂಬಂಧವನ್ನು ಗಟ್ಟಿಿಯಾಗಿ ಬಂಧಿಸದ ಸಾಧ್ಯತೆಯಿರುತ್ತದೆ. ಹೊರಗಿನ ಶುದ್ಧಹವೆಯನ್ನು ಪಡೆದೇ ಸಸ್ಯಗಳು ಆಕಾಶಮುಖಿಯಾಗಿ ಬೆಳೆಯುತ್ತದೆ, ಬೆಳೆಯಬೇಕು. ಎಲ್ಲ ಚಿಂತನೆಗಳು ಅಭಿವ್ಯಕ್ತಿಿಯಾಗುವುದು ಮಾತೃಭಾಷೆಯಲ್ಲೇ. ಇಂಗ್ಲಿಿಷ್ ಕೂಡ ಇದಕ್ಕೆೆ ಹೊರತಾಗಿಲ್ಲ. ಇದು ಪ್ರತಿಭಾಷೆಯ ಮೂಲಭೂತವಾದ ಬದ್ಧತೆ, ಅನಿವಾರ್ಯತೆಯೂ ಹೌದು.
ಕನ್ನಡಕ್ಕೆೆ ಸದ್ಯ ಒದಗಬೇಕಾದುದು ಇಂಥ ಅನಿವಾರ್ಯತೆ ಮತ್ತು ಬದ್ಧತೆ. ಕನ್ನಡದ ಆರ್ಷೇಯ ಜ್ಞಾನಸಂಪತ್ತು ಉಳಿದುಬಂದಿರುವುದು ಪೂರ್ವಿಕರಲ್ಲಿದ್ದ ಇಂಥ ಅನಿವಾರ್ಯತೆ ಬದ್ಧತೆಯಿಂದಾಗಿ. ಇವು ಕನ್ನಡವನ್ನು ಸದ್ಯ ಮತ್ತು ಶಾಶ್ವತವಾದ ನೆಲೆಯಲ್ಲಿ ಉಳಿಸುತ್ತಿಿದೆ. ಮಾತೃಭಾಷೆಯ ಶಿಕ್ಷಣದ ತಳಹದಿಯಿಲ್ಲದೆ ಇಂಗ್ಲಿಿಷನ್ನು ಇಂಗ್ಲಿಿಷ್‌ನಲ್ಲಿ ಓದಲು ಸಾಧ್ಯವಾಗುವುದಾದರೂ ‘ತನ್ನದೆಂಬ ಸ್ವಂತಿಕೆ’ ಯ ಕಲ್ಪನೆಯ ಕಲಿಕಾಂಶಗಳಿಗೆ ಹೊರತಾಗಿಬಿಡುವ ಸಂಭವವೇ ಹೆಚ್ಚು. ಆಗ ಬೋಧನೆ ಯಾಂತ್ರಿಿಕವಾಗಿಯೂ, ಕಲಿಕೆ ಅಪೂರ್ಣವಾಗಿಯೂ, ಅಲ್ಲದೇ ಪರಿಸ್ಥಿಿತಿ ಹಿಂಸೆಯಾಗಿಯೂ ಪರಿವರ್ತನೆಯಾಗುತ್ತದೆ. ಮಕ್ಕಳನ್ನು ನಿಯಂತ್ರಿಿಸಬೇಕೆಂಬ ಬಲವಂತದ ಪ್ರಯತ್ನದಲ್ಲಿ ಶಿಕ್ಷಕರು ಕೊನೆಗೂ ಮೊರೆಹೋಗುವುದು ಕನ್ನಡದ ಪದಗಳಿಗೇ!
ಹೊಸಭಾಷೆಯ ಕಲಿಕೆಯ ಮೊದಲು ಮಾತೃಭಾಷೆಯನ್ನು ವ್ಯವಸ್ಥಿಿತವಾಗಿ ಕಲಿತಿರಬೇಕು. ಅಂದಾಗ ಇಂಗ್ಲಿಿಷ್ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಇಲ್ಲವಾದಲ್ಲಿ ‘ರೆಡಿಮೇಡ್ ಉಡುಪುಗಳ’ ಹಾಗೆ ಸಿದ್ಧ ವಾಕ್ಯಗಳಂತೆ ಪುನರುಕ್ತಿಿಯಾಗುತ್ತಲೇ ಇರುತ್ತದೆ. ಆಂಗ್ಲಮಾಧ್ಯಮಕ್ಕೆೆ ಸೇರಿಸಿ ಮಕ್ಕಳನ್ನು ಅತೀ ಬೇಗ ವಿದ್ಯಾಾವಂತರಾಗಿಸುವುದರಲ್ಲೇ ಪೋಷಕರು ಆಸಕ್ತಿಿವಿದೆಯೇ ವಿನಾ ಪ್ರತಿಭಾವಂತರನ್ನಾಾಗಿಸಲು ಪ್ರಯತ್ನಿಿಸುವುದಿಲ್ಲ. ಕೊನೆಪಕ್ಷ ಚಿಂತಿಸುವುದೂ ಇಲ್ಲ. ಅಂಕಗಳಿಕೆಯ ಎಲ್ಲ ಕಸರತ್ತುಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತಿಭಾವಂತರಿಲ್ಲದ ಕೇವಲ ವಿದ್ಯಾಾವಂತರು, ಬುದ್ಧಿಿವಂತರಿರುವ ಸಮಾಜ ನಿರ್ಮಾಣವಾದೀತು! ಈಗಲೇ ಆಗುತ್ತಿಿದೆ.
ಕನಸುಗಳು, ಅನುಭವಗಳು ಇಲ್ಲದ ಸಮಾಜಕ್ಕೆೆ ಯಾವ ಭವಿಷ್ಯವೂ ಇರಲಾರದು. ಇಂಗ್ಲಿಿಷಿನ ದಟ್ಟ ಪ್ರಭಾವದಲ್ಲೂ ಮಕ್ಕಳು ಪಡೆಯುವ ಜ್ಞಾನ ಮತ್ತು ವಿಷಯಾನುಭವಗಳು ಬದುಕಿನ ಅಂತರಂಗಕ್ಕೆೆ ತಲುಪಬೇಕಾದರೆ ಕನ್ನಡ ಬ್ರಾಾಹ್ಮಣವಾಗಿ ಶೂದ್ರ ಇಂಗ್ಲಿಿಷಿನಲ್ಲಿಯೂ ಪರಿಣತಿಯನ್ನು ಪಡೆಯುತ್ತ ಆಲದಮರದಂತೆ ಕನ್ನಡ ಬೃಹದಾಕಾರವಾಗಿ ಬೆಳೆಯಬೇಕು. ಹಾಗಾದಾಗ ಮಾತ್ರ ಕನ್ನಡದಲ್ಲಿ ಸಾರ್ವಕಾಲಿಕ ಚಿಂತನೆಗಳು ಸೃಜಿಸಬಹುದು. ಹೊರಗಿನ ಗೊಬ್ಬರವನ್ನು ಹಾಕಿ ಬೆಳೆಸಿದ ಇಂಗ್ಲಿಿಷಿನ ಪ್ರಭುತ್ವದಿಂದ ಕನ್ನಡದ ಗಿಡವು ಕ್ಷೀಣಿಸುವುದನ್ನು ತಪ್ಪಿಿಸಲು ಇಂಗ್ಲಿಿಷನ್ನು ಚೆನ್ನಾಾಗಿ ಬೋಧಿಸುವ ಕನ್ನಡ ಮಾಧ್ಯಮ ಶಾಲೆಗಳು ಎಲ್ಲಾ ದೃಷ್ಟಿಿಯಿಂದಲೂ ಹಿತವಾದುದ್ದಾಗಿದೆ.
ಮನುಷ್ಯ ಸಂವೇದನೆಯೆಂಬುದು ದೇಶ-ಕಾಲ-ಭಾಷೆಯನ್ನು ಮೀರಿರುವಂಥದ್ದು. ಜೀವನ ಮೌಲ್ಯಗಳನ್ನು ಪಡೆಯುವ ಶಿಕ್ಷಣದಿಂದಲೇ ಗಳಿಸಬೇಕೆಂಬುದು ಸತ್ಯವಾದರೂ ಮನೆ, ಸಮಾಜ, ಶಾಲೆಯ ಪಾತ್ರವೂ ಮುಖ್ಯವಾಗಿಯೇ ಇದೆ. ಮಾತೃಭಾಷೆಯ ಮಹತ್ವದ ಅರಿವಾಗುವುದು ಕಲಿಯುವ ಸಂದರ್ಭ ಸನ್ನಿಿವೇಶಗಳಲ್ಲಿ. ಕರ್ನಾಟಕದಲ್ಲಿ ಈ ತರದ ಬೆಳವಣಿಗೆಗಳು ಈಗೀಗ ಬೆಳಕಿಗೆ ಬಂದುದಕ್ಕೆೆ ಶ್ರೀ ಬರಗೂರರು ಬರೆದ ತುಮಕೂರಿನ ಸಿರಾದ ಕಳ್ಳಂಬೆಳ್ಳದಂಥ ಶಾಲೆಗಳು ನಿದರ್ಶನವಾಗಿದೆ. ಆಂಗ್ಲಮಾಧ್ಯಮದ ಶಾಲೆಗಳೇ ಹೆಚ್ಚುತ್ತಿಿರುವ ಕನ್ನಡದ ನೆಲದಲ್ಲಿ ಕನ್ನಡದಂಥ ಮಾತೃಭಾಷೆಯೊಂದು ಹುಟ್ಟಿಿಸಬಹುದಾದ ಸಂವೇದನೆಯನ್ನು ಕನ್ನಡದ ಮಕ್ಕಳು ಬಾಲ್ಯದಿಂದಲೇ ಕಳೆದುಕೊಳ್ಳುವುದನ್ನು ತಪ್ಪಿಿಸಬೇಕು. ಒಂದು ಜೀವಂತಭಾಷೆ ಮತ್ತು ಸಂಸ್ಕೃತಿಯನ್ನು ಜವಾಬ್ದಾಾರಿಗೆ ನಾವೆಲ್ಲ ಹೊಣೆಗಾರರಾಗಿದ್ದೇವೆ.
ಉನ್ನತ ವಿದ್ಯಾಾಭ್ಯಾಾಸದಲ್ಲಿ ವಿಜ್ಞಾನ, ಗಣಿತವೇ ಮುಂತಾದ ವಿಷಯಗಳನ್ನು ಆಂಗ್ಲಮಾಧ್ಯಮದಲ್ಲೇ ಕಲಿಯಬೇಕೆಂಬ ವಾದವಿದ್ದರೂ ಅದು ನಿಜವೇ ಇದ್ದರೂ- ಈ ಜವಾಬ್ದಾಾರಿಯನ್ನು ಹೊರಲಾರದ ಹೇಡಿತನವಾಗಕೂಡದು. ಸಾಹಸವಿಲ್ಲದೆ, ಶ್ರಮವಿಲ್ಲದೆ ಯಾವ ಹೊಸ ಸೃಷ್ಟಿಿಯೂ ಸಾಧ್ಯವಿಲ್ಲ. ಇದು ಬರೀ ಕನ್ನಡದ ಮಮತೆಯ ಪ್ರಶ್ನೆೆಯಲ್ಲ. ನಮ್ಮ ಭಾಷೆಗಳು ಎಷ್ಟೊೊಂದು ಹೀನ ಅವಸ್ಥೆೆಯಲ್ಲಿದ್ದಿರಲಿ-ನಮ್ಮ ಪರಿಸ್ಥಿಿತಿಯನ್ನು ಸಂಪೂರ್ಣ ಅರಿತುಕೊಂಡು, ಸದಾ ವಿಮರ್ಶಾತ್ಮಕ ದೃಷ್ಟಿಿ ತಾಳಿದವರಾಗಿ ನಾವು ಈ ಸಾಹಸಕ್ಕೆೆ ಕೈಹಾಕಬೇಕು. ಅಂದರೆ ಇಂಗ್ಲಿಿಷಿಗೆ ಆತುಕೊಂಡಿರುವುದನ್ನು ಎನ್ನುತ್ತಾಾರೆ ಅನಂತಮೂರ್ತಿ. ಕನ್ನಡ ಬ್ರಾಾಹ್ಮಣವಾಗಬೇಕೆಂದರೆ ಇಂಗ್ಲಿಿಷ್ ಶೂದ್ರವಾಗಬೇಕು.