ವಿತ್ತ ಮಾತು
ರಮಾನಂದ ಶರ್ಮ
ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯವರು ಈ ವಿಲೀನದ ಸಮಯದಲ್ಲಿ ಧ್ವನಿ ಎತ್ತಲಿಲ್ಲ. ಒಂದು ಸಾಂಕೇತಿಕ ಹೋರಾಟವೂ ಕಾಣಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಈ ವಿಲೀನವನ್ನು ಪ್ರಸ್ತಾಪಿಸುತ್ತಿದ್ದಾರೆ. ಆಡಳಿತಾರೂಢ ಪಕ್ಷಕ್ಕೆ ಪಕ್ಷದ ಶಿಸ್ತು ಮುಷ್ಟಿ ಎತ್ತದಂತೆ ಮಾಡಿರಬೇಕು. ಈ ವಿಲೀನ ಇನ್ನು ಕೇವಲ ೩-೪ ದಿನಗಳು ಬಾಕಿ ಇವೆ ಎನ್ನುವಾಗ ಒಂದೆರಡು ಸಂಸದರು ಆಗಿನ ವಿತ್ತ ಮಂತ್ರಿ ಜೇಟ್ಲಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿ ತಮ್ಮ ಮತದಾರರಿಗೆ ಸಂದೇಶ ಕಳಿಸಿದರು.
೨೦೧೬ ರಲ್ಲಿ ಕರ್ನಾಟಕದ ಹೆಮ್ಮೆಯ, ಸರ್ ಎಂ. ವಿಶ್ವೇಶ್ವಯ್ಯನವರು ಸ್ಥಾಪಿಸಿದ ಮೈಸೂರು ಬ್ಯಾಂಕ್ ಎಂದೇ ಜನಮನದಲ್ಲಿ ಆಳವಾಗಿ ಬೇರೂರಿದ್ದ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಅನ್ನು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ ವಿಲೀನಗೊಳಿಸಲಾಯಿತು. ಕನ್ನಡಿಗರು ಈ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಂತೆ ೨೦೧೯ರಲ್ಲಿ ಕರ್ನಾಟಕದ ಇನ್ನೊಂದು ಜನಪ್ರಿಯ ಬ್ಯಾಂಕ್ ಆದ ಕರ್ನಾಟಕದ ಕರಾವಳಿ ಮೂಲದ ಸದಾ ಲಾಭ ಗಳಿಸುತ್ತಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಲಾಯಿತು.
ಇದನ್ನೂ ಹೇಗೋ ಕನ್ನಡಿಗರು ಸಹಿಸಿಕೊಳ್ಳುತ್ತಿರುವಂತೆ, ಕರ್ನಾಟಕದ ಕರಾವಳಿ ಮೂಲದ ಇನ್ನೊಂದು ಬ್ಯಾಂಕ್ ಆದ ‘ಕಾರ್ಪೋರೇಷನ್ ಬ್ಯಾಂಕ್’ ಅನ್ನು ೨೦೨೨ರಲ್ಲಿ ಮುಂಬೈ ಮೂಲದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಸದ್ಯ ಕರ್ನಾಟಕದ ಇನ್ನೊಂದು
ಕರಾವಳಿ ಮೂಲದ ಸಿಂಡಿಕೇಟ್ ಬ್ಯಾಂಕ್ ಅನ್ನು ಕನ್ನಡಿಗರದ್ದೇ ಆದ ಕೆನರಾ ಬ್ಯಾಂಕ್ ನಲ್ಲಿ ವಿಲೀನಗೊಳಿಸಿ ಕನ್ನಡಿಗರ ಅತೃಪ್ತಿ ಮತ್ತು ಅಸಂತೋಷಕ್ಕೆ ಸ್ವಲ್ಪ ಬ್ರೇಕ್ ಹಾಕಲಾಗಿದೆ. ಬ್ಯಾಂಕಿಂಗ್ ಉದ್ಯಮದ ಮಹಾತಾಯಿ ಮತ್ತು ಜನ್ಮಭೂಮಿ ಎಂದು ಕರೆಯಲ್ಪಡುತ್ತಿದ್ದ, ಕರ್ನಾಟಕದಲ್ಲಿ ಕನ್ನಡಿಗರು ಹೆಮ್ಮೆ ಪಡುವ ಬ್ಯಾಂಕ್‌ಗಳ ಸಂಖ್ಯೆ ಕೇವಲ ಕೆನರಾ ಮತ್ತು ಕರ್ನಾಟಕ ಬ್ಯಾಂಕುಗಳಿಗೆ ಇಳಿದಿದೆ.
ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಬೇಕು, ಬ್ಯಾಂಕುಗಳ ಶೇರು ಬಂಡವಾಳವನ್ನು ಅಂತಾರಾಷ್ಟ್ರೀಯ ಬ್ಯಾಂಕುಗಳ ಮಟ್ಟಕ್ಕೆ ತರಬೇಕು, ಇನ್ನೊಂದು ಬ್ಯಾಂಕಿನ ನೆರವಿಲ್ಲದೆ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಸಾಲವನ್ನು ನೀಡುವಷ್ಟು ಕ್ಯಾಪಿಟಲ್ ಬೇಸ್ ಇರಬೇಕು ಎನ್ನುವ ಉದ್ದೇಶದಲ್ಲಿ ಬ್ಯಾಂಕುಗಳ ವಿಲೀನಗೊಳಿಸಲಾಗಿದೆ ಎಂದು ಹೇಳಲಾದರೂ, ಕರ್ನಾಟಕ ಮೂಲದ ಬ್ಯಾಂಕುಗಳು ಈ ನಿಟ್ಟಿನಲ್ಲಿ ಮೊದಲ ಪಟ್ಟಿಯಲ್ಲಿ ಬಂದಿರುವುದು ಕನ್ನಡಿಗರಿಗೆ ಆಘಾತವಾಗಿದೆ ಮತ್ತು ಅತಂಕವೂ ಅಗಿದೆ.
ಬ್ಯಾಂಕಿಗ್ ಸುಧಾರಣೆಯ ಹೆಸರಿನಲ್ಲಿ ಈ ಸದ್ಯ ಇರುವ ಕೆನರಾ ಮತ್ತು ಕರ್ನಾಟಕ ಬ್ಯಾಂಕುಗಳಾದರೂ ಕರ್ನಾಟಕದ ಬ್ಯಾಂಕುಗಳಾಗಿ ಉಳಿಯಬಹುದೇ ಎನ್ನುವ ಸಂದೇಹ ಕನ್ನಡಿಗರನ್ನು ಕೊರೆಯುತ್ತಿದೆ. ಕರ್ನಾಟಕದ ಈ ಬ್ಯಾಂಕುಗಳ ವಿಲೀನದ ನೋವನ್ನು ಮರೆಯುತ್ತಿರುವಾಗಲೇ, ಇತ್ತೀಚೆಗೆ ಮೌನವಾಗಿ
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಜಿqಛ್ಟಿoಜಿಠಿqs ಜ್ಟZಠಿ ಟಞಞಜಿooಜ್ಞಿ) ಬೆಂಗಳೂರು ಕಚೇರಿಯನ್ನೂ ದೆಹಲಿಗೆ ಸ್ಥಳಾಂತರಿಸಲಾಗಿದೆ.
ಈ ವಿಲೀನ ಮತ್ತು ಮುಚ್ಚುವಿಕೆಗೆ ಕರ್ನಾಟಕದಲ್ಲಿ ಉದ್ದ ಪಟ್ಟಿಯೇ ಇದೆ.
ಇಡೀ ರಾಜ್ಯಕ್ಕೆ ಬಲ್ಬ್ ಮತ್ತು ಟ್ಯೂಬ್‌ಗಳಿಂದ ಬೆಳಕು ನೀಡುತ್ತಿದ್ದ ಮೈಸೂರು ಲ್ಯಾಂಪ್ ಉದ್ಯಮವನ್ನು ನಷ್ಟದ ಹೆಸರಿನಲ್ಲಿ ೨೦೦೩ರಲ್ಲಿ ಮುಚ್ಚ ಲಾಯಿತು. ಸರಕಾರಿ ಕಚೇರಿಗಳಿಗೆ ಮತ್ತು ರಾಜ್ಯಾದ್ಯಂತ ಬೀದಿ ದೀಪಗಳಿಗೆ ಮೈಸೂರು ಲ್ಯಾಂಪ್‌ನ ಬಲ್ಬ್ ಮತ್ತು ಟ್ಯೂಬ್‌ಗಳನ್ನೇ ಬಳಸಬೇಕು ಎನ್ನುವ ಕಟ್ಟಳೆ ಮಾಡಿದ್ದರೆ ಮೈಸೂರು ಲ್ಯಾಂಪ್ ಇನ್ನೂ ಉರಿಯುತ್ತಿತ್ತು ಎಂದು ಕೆಲವು ಪ್ರeವಂತರು ಅಭಿಪ್ರಾಯ ಪಡುತ್ತಾರೆ.
ಮೈಸೂರು ಲ್ಯಾಂಪ್ ಅರಿ, ಆ ಬೆಳಕನ್ನು ಕನ್ನಡಿಗರು ನೆನೆಸಿಕೊಳ್ಳುತ್ತಿರುವಂತೆ, ದಶಕಗಳ ಕಾಲ ಸಾವಿರಾರು ಕನ್ನಡಿಗರಿಗೆ ಬದುಕು ನೀಡಿದ ಕರ್ನಾಟಕದ ಇನ್ನೊಂದು ಮಹತ್ವದ ಉದ್ಯಮವಾದ ಎನ್‌ಜಿಇಎಪ್ ೨೦೦೪ರಲ್ಲಿ ಉತ್ಪಾದನೆಯನ್ನು ನಿಲ್ಲಿಸಿ ಕೊನೆ ಉಸಿರು ಎಳೆದು ಸಾವಿರಾರು ಕುಟುಂಬಗಳು ತಮ್ಮ ಬದುಕಿನ ಆಸರೆಯನ್ನು ಕಳೆದುಕೊಂಡವು. ಹಾಗೆಯೇ ದೇಶಾದ್ಯಂತ ಬಹುಜನರ ಡ್ಟಿಜಿoಠಿ ಮೇಲೆ ಸಮಯ ತೋರಿಸುತ್ತಿದ್ದ ಬೆಂಗಳೂರು ಮೂಲದ ಎಚ್‌ಎಮಟಿ ಕೈ ಗಡಿಯಾರಗಳು ಟಿಕ್-ಟಿಕ್ ಎನ್ನುವುದನ್ನು ನಿಲ್ಲಿಸಿದ್ದಲ್ಲದೇ, ೨೦೧೬ರ ಹೊತ್ತಿಗೆ ಈ ಕಂಪನಿಯ ಟ್ರ್ಯಾಕ್ಟರ್‌ಗಳು ಉಳುವುದನ್ನೂ ಬಿಟ್ಟಿತು.
ಈ ಕಂಪನಿ ಇಂದು ಇತಿಹಾಸದ ಪುಟವನ್ನು ಸೇರಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಉತ್ತುಂಗದಲ್ಲಿದ್ದ ಮತ್ತು ಸಾವಿರಾರು
ಕನ್ನಡಿಗರಿಗೆ ಉದ್ಯೋಗ ನೀಡಿದ ಬಿಪಿಎಲ್ ಕಂಪನಿ ೨೦೦೭ರಲ್ಲಿ ಬಾಗಿಲು ಮುಚ್ಚಿದೆ. ೧೯೩೬ರಲ್ಲಿ ಅಂದಿನ ಮಹಾರಾಜರು ಸ್ಥಾಪಿಸಿದ ಭದ್ರಾವತಿಯ ಇನ್ನೆರಡು ಬೃಹತ್ ಉದ್ಯಮಗಳಾದ ಮೈಸೂರು ಪೇಪರ್ ಮಿಲ್ಸ್ ಮತ್ತು ಸಕ್ಕರೆ ಕಾರ್ಖಾನೆಗಳು ಕೂಡ ಮುಚ್ಚಿದ ಉದ್ಯಮಗಳ ಲಿಸ್ಟ್‌ಗೆ ಸೇರಿದ್ದು, ಈಗ
೧೯೨೩ರಲ್ಲಿ ಸ್ಥಾಪಿತವಾದ ಇಲ್ಲಿನ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ಕೂಡ ಮುಚ್ಚುವ ಸಾಧ್ಯತೆಯಲ್ಲಿ ಇದೆ.
ಸಮಯಕ್ಕೆ ಸರಿಯಾಗಿ ಆಧುನಿತೆಯನ್ನು ಅಳವಡಿಸಿಕೊಳ್ಳದಿರುವುದು, ಸರಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ, ಸರಕಾರದ ಅನುದಾನದ ಅಸರ್ಮಪಕ ಬಳಕೆ, ಪರಿಸರದ ಹೆಸರಿನಲ್ಲಿ ಕೆಮ್ಮಣ್ಣ ಗುಂಡಿ ಅದಿರು ಪೂರೈಕೆ ನಿಲ್ಲಿಸುವಿಕೆ, ಅವಷ್ಯಕತೆಗಿಂತ ಹೆಚ್ಚು ಸಿಬ್ಬಂದಿ, ಸರಕಾರಿ ಕಚೇರಿಗಳಲ್ಲಿ ಎಮ್‌ಪಿಎಮ್ ಕಾಗದ ಬಳಸದಿರುವುದು ಮುಂತಾದವುಗಳನ್ನುಈ ಕಾರ್ಖಾನೆಗಳ ಮುಚ್ಚುವಿಕೆಯ ಹಿಂದಿನ ಕಾರಣಗಳು ಎಂದು ಉಖಿಸಲಾಗುತ್ತದೆ. ಈ
ಮುಚ್ಚುವಿಕೆಯ ಹಿಂದಿನ ಸತ್ಯವೇನೇ ಇರಲಿ, ಮುಚ್ಚಿದ್ದು ಮತ್ತು ಮುಚ್ಚುತ್ತಿರುವುದು ಇತಿಹಾಸ ಸತ್ಯ.
ಭಿಲಾಯಿ ಉಕ್ಕಿನ ಕಾರ್ಖಾನೆ ೨೧೬೦೩ ಕೋಟಿ, ದುರ್ಗಾಪೂರ ೪೬೬೫, ಬೊಕಾರೋ ೮೭೭೯, ಬರ್ನಾಪೂರ ೧೭೦೦೮ ಮತ್ತು ಸೇಲಂ ೨೭೮೩ ಕೋಟಿ ಹೂಡಿಕೆ ಪಡೆಯುತ್ತಿದ್ದು, ಭದ್ರಾವತಿ ಉಕ್ಕಿನ ಕಾರ್ಖಾನೆ ಕೇವಲ ೧೫೭ ಕೋಟಿ ಅನುದಾನ ಪಡೆಯುತ್ತಿದೆ. ಜನಪ್ರತಿನಿಧಿಗಳ ಮತ್ತು ಕರ್ನಾಟಕ ಸರಕಾರದ ವೈಫಲ್ಯದಿಂದಾಗಿ ಕೊನೆ ಉಸಿರು ಎಳೆಯುತ್ತಿದೆ ಎಂದು ಹೇಳಲಾಗುತ್ತಿದೆ.
ವಿಪರ್ಯಾಸವೆಂದರೆ ೪೧೯ ಕೋಟಿ ನಷ್ಟ ಅನುಭವಿಸುತ್ತಿರುವ ಸೇಲಂ ಕಾರ್ಖಾನೆಯನ್ನು ಬಿಟ್ಟು ೨೦೦ ಕೋಟಿ ರು. ನಷ್ಟದಲ್ಲಿರುವ ಭದ್ರಾವತಿ ಕಾರ್ಖಾನೆಯನ್ನು ಮುಚ್ಚಲಾಗುತ್ತಿದೆ. ಉಕ್ಕಿನ ನಗರಿ, ಕಾಗದದ ನಗರಿ, ಸಿಮೆಂಟ್ ನಗರಿ, ಸಕ್ಕರೆ ನಗರಿ ಮತ್ತು ಗಂಧದೆಣ್ಣೆ ನಗರಿ ಎಂದೆಲ್ಲ ಕರೆಯಲ್ಪಡುತ್ತಿರುವ ಶಿವಮೊಗ್ಗ – ಭದ್ರಾವತಿ ಅವಳಿ ನಗರಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿದ್ದು, ಈಗ ಇದು ಕನಸಷ್ಟೇ: ನಷ್ಟದ ಹೆಸರಿನಲ್ಲಿ ಒಂದು ಉದ್ಯಮವನ್ನು ಮುಚ್ಚುವುದು ಅಥವಾ ಅದನ್ನುಇನ್ನೊಂದರಲ್ಲಿ ವಿಲೀನ ಗೊಳಿಸುವುದು ಸರಿ. ಆದರೆ, ಸದೃಢವಾದ ಮತ್ತು ಸರಕಾರಕ್ಕೆ ಲಾಭವನ್ನು ನೀಡುತ್ತಿರುವ ಒಂದು ಕಂಪನಿಯನ್ನು ಅಥವಾ ಸಂಸ್ಥೆಯನ್ನು ಇನ್ನೊಂದು ಸಂಸ್ಥೆ ಅಥವಾ ಕಂಪನಿಯಲ್ಲಿ ವಿಲೀನಗೊಳಿಸುವುದು ಯಾವ ನ್ಯಾಯ? ಕನ್ನಡಿಗರಿಗೆ ಮತ್ತು ಹೊರರಾಜ್ಯದವರಿಗೂ ದಶಕಗಳಿಂದ ಹಾಲು ಕುಡಿಸುತ್ತಿರುವ ಕರ್ನಾಟಕದ ನಂದಿನಿಯನ್ನು ಗುಜರಾತ್ ಮೂಲದ ಅಮುಲ್‌ನಲ್ಲಿ ವಿಲೀನಗೊಳಿಸುವ ಬಗೆಗೆ ವದಂತಿಗಳು ಹರಿಯುತ್ತಿದ್ದು, ಈ
ನಿಟ್ಟಿನಲ್ಲಿ ಸಾಲು ಸಾಲು ವಿಲೀನಗಳನ್ನು ನೋಡಿದ ಕನ್ನಡಿಗರು ಗುಜರಾತ್‌ನ ಅಮುಲ್ ಕರ್ನಾಟಕದ ನಂದಿನಿಯನ್ನು ತನ್ನೊಳಗೆ ಸೇರಿಸಿಕೊಳ್ಳುವ ಭಯದಲ್ಲಿದ್ದಾರೆ.
ಕರ್ನಾಟಕ ಮೂಲದ ಬ್ಯಾಂಕುಗಳನ್ನು ಉತ್ತರ ರಾಜ್ಯಗಳ ಬ್ಯಾಂಕುಗಳಲ್ಲಿ ವಿಲೀನ ಮತ್ತು ಹಲವಾರು ದೊಡ್ಡ ಉದ್ಯಮಗಳ ಮಚ್ಚುವಿಕೆ ಏನೇ ಇರಲಿ, ಈ ಪ್ರಕ್ರಿಯೆಗೆ ರಾಜ್ಯದಲ್ಲಿ ಪ್ರತಿರೋಧ ಕಾಣದಿರುವುದು ತೀರಾ ಆಶ್ಚರ್ಯ. ಜನತೆಯಾಗಲಿ ಅಥವಾ ಜನಪ್ರತಿನಿಧಿಗಳಾಗಲೀ ಧ್ವನಿ ಎತ್ತದಿರುವುದು ವಿಪರ್ಯಾಸ. ಹೊಸ ಸಂಸ್ಥೆಗಳು ಮತ್ತು ಉದ್ಯಮಗಳು ಕರ್ನಾಟಕಕ್ಕೆ ಬರದಿರುವುದು ಬೇರೆ ಮಾತು. ಕಳೆದು ಒಂದೆರಡು ದಶಕಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡುವ ಯಾವುದೇ ಹೊಸ ಉದ್ಯಮ ರಾಜ್ಯದಲ್ಲಿ ಸ್ಥಾಪಿತವಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ್ಕೆ ಬರಬೇಕಾದ ಒಂದೆರಡು ಬೃಹತ್ ಉಧ್ಯಮಗಳು ಬೇರೆ ರಾಜ್ಯಗಳಿಗೆ ಹೋಗಿವೆ ಎನ್ನುವ ಆರೋಪ ಕೇಳುತ್ತಿತ್ತು.
ಬಳ್ಳಾರಿಯ ವಿಜಯ ನಗರ ಉಕ್ಕಿನ ಕಾರ್ಖಾನೆಯೊಂದೇ ಕಳೆದ ಎರಡು ರು ದಶಕಗಳಲ್ಲಿ ಕರ್ನಾಟಕದಲ್ಲಿ ಸ್ಥಾಪಿತವಾದ ಬೃಹತ್ ಉದ್ಯಮ
ಎನ್ನಬಹುದೇನೋ? ಎಪ್ಪತ್ತರ ದಶಕದಲ್ಲಿ ನಿರಂತರ ಹೋರಾಟದ ನಂತರ ಕೇಂದ್ರ ಸರಕಾರವು ಬಳ್ಳಾರಿ, ಸೇಲಂ ಮತ್ತು ವಿಶಾಪಟ್ಟನಂ ನಲ್ಲಿ ಉಕ್ಕಿನ ಕಾರ್ಖಾನೆಗಳಿಗೆ ಅನುಮತಿ ನೀಡಿತ್ತು. ವಿಶಾಖ ಪಟ್ಟನಂ ಮತ್ತು ಸೇಲಂ ಈ ಕಾರ್ಖಾನೆಗಳು ಶರವೇಗದಲ್ಲಿ ಸ್ಥಾಪಿತವಾದವು.
ಆದರೆ, ಬಳ್ಳಾರಿಯ ಕಾರ್ಖಾನೆ ನನೆಗುದಿಗೆಗೆ ಬಿದ್ದಿತು. ಆರ್.ವೈ. ಘೋರ್ಪಡೆ ಎನ್ನುವ ಸಂಸದರು ಕಾರ್ಖಾನೆ ಅನುಷ್ಠಾನಕ್ಕಾಗಿ ಆಗಿನ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದರಂತೆ. ಆಮೇಲೆ ದಶಕಗಳ ನಂತರ ಬಳ್ಳಾರಿಯ ಉಕ್ಕಿನ ಕಾರ್ಖಾನೆ ಸರಕಾರಿರಂಗದ ಬದಲಿಗೆ ಖಾಸಗಿ ರಂಗದಲ್ಲಿ ಸ್ಥಾಪಿತವಾಗಿದ್ದು ಈಗ ಇತಿಹಾಸ. ಇದರ ಬಗೆಗೆ ಕರ್ನಾಟಕದ ಸಂಸದರು ಸಂಘಟಿತರಾಗಿ ಹೋರಾಡಿದ್ದರೆ ಇದು ಸರಕಾರಿ ರಂಗದಲ್ಲಿಯೇ ಆಗುತ್ತಿತ್ತೇನೊ? ಪ್ರತಿ ಎರಡು ವರ್ಷಕ್ಕೊಮ್ಮೆ ಹೊಸ ಉದ್ಯಮಗಳ ಸ್ಥಾಪನೆಗಾಗಿ ಹೂಡಿಕೆದಾರರ ಸಮ್ಮೇಳನಗಳು ಜರುಗುತ್ತವೆ. ಆದರೆ, ಹೊಸ ಉದ್ಯಮಗಳು ತಲೆ ಎತ್ತುವುದು ಗೋಚರಿಸುತ್ತಿಲ್ಲ. ವಿಚಿತ್ರವೆಂದರೆ, ರಾಜ್ಯವು ಇರುವ ಉದ್ಯಮಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಿದೆಯೇನೋ ಅನಿಸುತ್ತಿದೆ.
ಇಷ್ಟಾದರೂ ಕರ್ನಾಟಕದ ಜನಪ್ರತಿನಿಧಿಗಳು ತಮ್ಮ ದಿವ್ಯಮೌನವನ್ನು ಕಡಿದು ಹೊರ ಬರುತ್ತಿಲ್ಲ. ದಿಟ್ಟವಾಗಿ, ನೇರವಾಗಿ ಇದನ್ನು ಪ್ರಶ್ನಿಸುತ್ತಿಲ್ಲ. ವಿಚಿತ್ರವೆಂದರೆ ಕರ್ನಾಟದ ಬ್ಯಾಂಕುಗಳು ವಿಲೀನವಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿರುವಾಗ ಮಹಾರಾಷ್ಟ್ರ ಮೂಲದ ಬಾಂಕ್ ಆಫ್
ಮಹಾರಾಷ್ಟ್ರ, ತಮಿಳುನಾಡು ಮೂಲದ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಪಂಜಾಬ್ ಮೂಲದ ಪಂಜಾಬ್ ಮತ್ತು ಸಿಂಧ್‌ಬ್ಯಾಂಕ್ ಮತ್ತು ಕೋಲ್ಕತಾ ಮೂಲದ ಯುಕೋ ಬ್ಯಾಂಕುಗಳು ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡಿವೆ. ಈ ರಾಜ್ಯಗಳು ತಮ್ಮ ಅಸ್ಮಿತೆಯನ್ನು ಈ ನಿಟ್ಟಿನಲ್ಲಿ ಉಳಿಸಿಕೊಳ್ಳಬೇಕಾದರೆ ಕರ್ನಾಟಕಕ್ಕೆ ಇದು ಏಕೆ ಸಾಧ್ಯವಾಗಿಲ್ಲ ಎನ್ನುವ ಕನ್ನಡಿಗರ ಪ್ರಶ್ನೆಗೆ ನಮ್ಮ ಜನಪ್ರತಿನಿಽಗಳು ಮತ್ತು ಸರಕಾರ ಉತ್ತರಿಸಬೇಕಾಗಿದೆ.
ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿಯವರು ಈ ವಿಲೀನದ ಸಮಯದಲ್ಲಿ ಧ್ವನಿ ಎತ್ತಲಿಲ್ಲ. ಒಂದು ಸಾಂಕೇತಿಕ ಹೋರಾಟವೂ ಕಾಣಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಈ ವಿಲೀನವನ್ನು ಪ್ರಸ್ತಾಪಿಸುತ್ತಿದ್ದಾರೆ. ಆಡಳಿತಾರೂಢ ಪಕ್ಷಕ್ಕೆ ಪಕ್ಷದ ಶಿಸ್ತು ಮುಷ್ಟಿ ಎತ್ತದಂತೆ ಮಾಡಿರಬೇಕು. ಈ ವಿಲೀನ ಇನ್ನು ಕೇವಲ ೩-೪ ದಿನಗಳು ಬಾಕಿ ಇವೆ ಎನ್ನುವಾಗ ಒಂದೆರಡು ಸಂಸದರು ಆಗಿನ ವಿತ್ತ ಮಂತ್ರಿ ಜೇಟ್ಲಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿ ತಮ್ಮ ಮತದಾರರಿಗೆ ಸಂದೇಶ ಕಳಿಸಿದರು.
ವಿಲೀನದಿಂದ ಈ ಬ್ಯಾಂಕ್ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಾಣಲಿಲ್ಲ. ಗ್ರಾಹಕರಿಗೆ ಬ್ಯಾಂಕುಗಳ ಕೊರತೆ ಕಾಣಲಿಲ್ಲ. ಆದರೆ, ನಮ್ಮತನ ಮತ್ತು ನಮ್ಮವರ ಸಂಖ್ಯೆ ಇಳಿಯಿತು. ಇಂದು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವಾಗ ಪ್ರತಿಯೊಬ್ಬ ಕನ್ನಡಿಗನೂ ತಾನೆಷ್ಟು ಪರಾವಲಂಬಿ ಮತ್ತು ತನ್ನ ರಾಜ್ಯದಲ್ಲಿ, ತನ್ನ ಭಾಷಾ ಪ್ರದೇಶದಲ್ಲಿ ಪರಕೀಯ ಎಂದು ವ್ಯಾಕುಲಗೊಳ್ಳುತ್ತಾನೆ. ಜನರ ಭಾವನೆಗಳಿಗೆ ಸ್ಪಂದಿಸುವ ಮತ್ತು ಬ್ಯಾಂಕುಗಳಲ್ಲಿ ನಮ್ಮ ಹಿಡಿತ ಜಾರದಂತೆ ನೋಡಿಕೊಳ್ಳುವಲ್ಲಿ ನಮ್ಮ ಜನಪ್ರತಿನಿಽಗಳು ನಿರೀಕ್ಷೆಯಷ್ಟು ಯತ್ನಿಸಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತದೆ. ಬಹುತೇಕ ಜನಪ್ರತಿನಿಧಿಗಳು ತಮಗೂ ಈ ವಿಲೀನಕ್ಕೂ ಸಂಬಂಧ ಇಲ್ಲದಂತೆ ನಡೆದು ಕೊಂಡರು.
ಬ್ಯಾಂಕುಗಳಲ್ಲಿ ಮೊದಲು ಕನ್ನಡ ಭಾಷೆ ಕಳೆದುಹೋಯಿತು, ನಂತರ ಕನ್ನಡಿಗರು ಕಳೆದುಹೋದರು, ಈಗ ನಾವು ಕಟ್ಟಿ ಬೆಳೆಸಿದ ಬ್ಯಾಂಕುಗಳ ಹೆಸರೇ
ಮಾಯವಾಯಿತು ಎಂದು ಕನ್ನಡಿಗರು ಮೌನವಾಗಿ ರೋಧಿಸುತ್ತಾರೆ. ಈ ಅಳುವಿನ ಧ್ವನಿಯನ್ನು ಕೇಳಿಸಬೇಕಾದಲ್ಲಿ ಕೇಳಿಸುತ್ತಿಲ್ಲ. ಅದನ್ನು ಕೇಳಿಸುವವರು ಕೇಳಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ.