Saturday, 14th December 2024

ಕಾರ್ಯಕರ್ತರನ್ನು ಮಂಗ್ಯಾ ಮಾಡಿದ ರಾಜ್ಯ ಬಿಜೆಪಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಬಿಜೆಪಿ ಹೈಕಮಾಂಡ್ ಈ ರಾಜ್ಯ ನಾಯಕರ ನಡುವಿನ ‘ನಿದ್ದೆ ಮಾಡಲು ಬಿಡುವುದಿಲ್ಲ’ ಎಂಬ ಧೋರಣೆಗಳಿಂದ ಬೇಸತ್ತು ತಿಂಗಳು ಕಳೆದರೂ ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡುವುದೇ ಯಮಸಾಹಸವಾಗಿದೆ.

ರಾಜ್ಯ ಸರಕಾರದಲ್ಲಿ ಸಿಕ್ಕಾಪಟ್ಟೆ ಪ್ರಭಾವಿ ಹಾಗೂ ಬಹು ‘ಮುಖ್ಯ’ಮಂತ್ರಿಯಾಗಿ ಕೋಟೆ ಕಟ್ಟಿ ಕೊಂಡಂತೆ ಮೆರೆಯುತ್ತಿರುವ ಪ್ರಿಯಾಂಕ್ ಖರ್ಗೆ ಒಂದು ನುಡಿಮುತ್ತನ್ನು ಉದುರಿಸಿದ್ದರು. ಅದು ‘ವಾಟ್ಸಾಪ್ ಯುನಿವರ್ಸಿಟಿ’ ಎಂಬುದು. ಅಸಲಿಗೆ ಈ ಪದ ಹುಟ್ಟಿಕೊಂಡಿದ್ದೇ ಬಿಜೆಪಿ ಕಾರ್ಯ
ಕರ್ತರಿಂದ. ೨೦೧೪ರಲ್ಲಿ ಪ್ರಧಾನಿ ನರೇಂದ್ರಮೋದಿಯವರ ಸರಕಾರ ಸ್ಥಾಪನೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡ ಕಾರ್ಯಕರ್ತರ ಡಿಜಿಟಲ್ ಆಂದೋಲನವೇ ಈ ವಾಟ್ಸಾಪ್ ಯೂನಿವರ್ಸಿಟಿ.

ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದರಿಂದ ಆರಂಭಿಸಿ ಈವರೆಗೆ ಕಾಂಗ್ರೆಸ್ ಏನೇನು ಮಾಡಬಾರದ್ದು ಮಾಡಿತು, ಮುಂದೆಯೂ ಅದರಿಂದ ಏನೇನು ಆಗುತ್ತದೆ ಎಂಬುದನ್ನು ಅನಕ್ಷರಸ್ಥನಿಗೂ ಅರ್ಥ ವಾಗುವಂತೆ ವಿಶ್ಲೇಷಿಸಿ ತಿಳಿವಳಿಕೆ ಮೂಡಿಸಿ ದೇಶದ ದಿಕ್ಕು ಬದಲಾಗಲು ಕಾರ್ಯ ನಿರ್ವಹಿಸಿದ
ಸ್ವಯಂಪ್ರೇರಿತ ಕಾರ್ಯಕರ್ತರ ದೊಡ್ಡಪಡೆಯೇ ‘ಸೋಶಿಯಲ್ ಮೀಡಿಯಾ ಯೂನಿವರ್ಸಿಟಿ’.

ಬಿಜೆಪಿಯ ಯಾವ ನಾಯಕನ ಸಂಪರ್ಕದಲ್ಲೂ ಇರದ ಮತದಾರರು ‘ನಾನು ಬಿಜೆಪಿಗನಲ್ಲ, ನನಗೆ ಬಿಜೆಪಿ ಒಂದು ಪೈಸೆಯೂ ಕೊಡುತ್ತಿಲ್ಲ. ನನಗದು ಬೇಕಾಗಿಯೂ ಇಲ್ಲ. ಆದರೆ ದೇಶ ಮತ್ತು ಪರಂಪರೆ ವಿಚಾರಕ್ಕೆ ಬಂದಾಗ ನಾನು ಬಿಜೆಪಿಯನ್ನೇ ಬೆಂಬಲಿಸುತ್ತೇನೆ, ಬಿಜೆಪಿಗೆ ಹಾಕುವ ಮತ ನೇರವಾಗಿ ನಮ್ಮ ಸೈನಿಕರನ್ನು ಬಲಪಡಿಸುತ್ತದೆ, ನಮ್ಮ ಕಾಶ್ಮೀರವನ್ನು ಕಾಪಾಡುತ್ತದೆ, ರಾಮಮಂದಿರ ಕಟ್ಟುತ್ತದೆ, ದೇಶದ ಘನತೆ ಗೌರವ ಭದ್ರತೆಯನ್ನು ಹೆಚ್ಚಿಸುತ್ತದೆ, ನನ್ನ ಖಾತೆಗೆ ಹದಿನೈದು ಲಕ್ಷ ಬೇಕಿಲ್ಲ, ಭಯೋತ್ಪಾದಕರ ಹುಟ್ಟಡಗಿಸಿದ್ದೇ ನನಗೆ ಕೋಟಿಗೆ ಸಮ…’ ಹೀಗೆಲ್ಲ ತಮ್ಮ ವಾಲ್‌ನಲ್ಲಿ ಬರೆದುಕೊಳ್ಳುತ್ತಾರೆ.

ಇಂಥ ನಿಸ್ವಾರ್ಥ, ದೇಶದ ಹಿತಚಿಂತನೆ ಬಯಸುವ ಕೋಟ್ಯಂತರ ಮತದಾರರು ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರಾಗಿ ನಿಂತು ೨೦೧೯ರಲ್ಲೂ ಮೋದಿ ಸರಕಾರ ಸ್ಥಾಪಿಸಲು ಕಾರಣರಾಗಿದ್ದಾರೆ. ದೇಶದಲ್ಲಿ ‘ಕಾಂಗ್ರೆಸ್ ಮುಕ್ತ’ ಭಾರತ ಪರಿಕಲ್ಪನೆ ಆರಂಭಗೊಂಡಿದ್ದರೆ ಅದಕ್ಕೆ ಕಾರ್ಯಕರ್ತರ
ವಾಟ್ಸಾಪ್ ಯೂನಿವರ್ಸಿಟಿ ಕಾರಣ. ಇಂಥ ಕಾರ್ಯಕರ್ತರಿಗೆ ದೇಶದ ಸುರಕ್ಷತೆಯ ಮುಂದೆ ಬಿಟ್ಟಿ ಭಾಗ್ಯಗಳ ಗ್ಯಾರಂಟಿಗಳ ಯಾವ ಮುಲಾಜು ಗಳಿರುವುದಿಲ್ಲ. ಇದಕ್ಕೆ ನಮ್ಮ ಮಂಗಳೂರಿನ ಕಾರ್ಯಕರ್ತರೇ ದೃಷ್ಟಾಂತ. ಇವರು ಬಿಜೆಪಿಯನ್ನು ಕಾಮಧೇನುವಿನಂತೆ ಭಾವಿಸುತ್ತಾರೆಯೇ ಹೊರತು ಹಾಲು ಕರೆಯಲು ಮುಂದಾಗುವುದಿಲ್ಲ.

ಹೀಗಾಗಿಯೇ ಅನೇಕ ರೋಲ್‌ಕಾಲ್ ಪೀಡಿತರು, ಪ್ರೀಪೇಡ್-ಪೋಸ್ಟ್‌ಪೇಡ್ ಗಿರಾಕಿಗಳು ಬಿಜೆಪಿಯನ್ನು ವಿರೋಧಿಸುತ್ತಾರೇಕೆಂದರೆ ಇಂಥವರ ಪಾಲಿಗೆ ಬಿಜೆಪಿ ಗೊಡ್ಡು ಹಸು. ಆದರೆ ಇವರಿಗೆ ‘ಸಗಣಿ’ ಸಿಕ್ಕುವುದಾದರೆ ಎಮ್ಮೆಯೂ ಓಕೆ ಕತ್ತೆ ಹಂದಿಯೂ ಓಕೆ. ಆದರೆ ಸಾಮಾಜಿಕ ಜಾಲತಾಣ ಗಳಲ್ಲಿ ಬಿಜೆಪಿ ಯನ್ನು ಬೆಂಬಲಿಸುವ ಅನೇಕ ಹೆಣ್ಣುಮಕ್ಕಳ ಪೋಸ್ಟ್‌ಗಳಿಗೆ ವಿರೋಽಗಳು ಅದೆಂತೆಂಥ ಅಸಹ್ಯ ಕರ, ಅಶ್ಲೀಲ ಪ್ರತಿಕ್ರಿಯೆ ಗಳನ್ನು ಹಾಕುತ್ತಾರೆಂದರೆ ಪಾಪ, ಆ ಹೆಣ್ಣುಮಕ್ಕಳು ಅದನ್ನೆಲ್ಲ ಪಕ್ಷಕ್ಕಾಗಿ ಸಹಿಸಿಕೊಳ್ಳುತ್ತಾರೆ. ಹೀಗೆ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಅದೆಷ್ಟೋ ಕಾರ್ಯಕರ್ತರ ಮೇಲೆ ಹಗಳು, ಹತ್ಯೆಗಳು ನಡೆದಿವೆ.

ಅಷ್ಟೇ ಏಕೆ? ರಾಷ್ಟ್ರೀಯ ಚಿಂತನೆ ಪ್ರತಿಪಾದಿಸುತ್ತ ಬಂದಿದ್ದ ಒಂದೇ ಕಾರಣಕ್ಕೆ ‘ವಿಜಯ ಕರ್ನಾಟಕ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಅವಧಿಯಲ್ಲಿ ವಿಶ್ವೇಶ್ವರಭಟ್, ಅಂಕಣಕಾರ ಪ್ರತಾಪ್‌ಸಿಂಹ ಅವರ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು. ಮುಂದೆ ಪ್ರತಾಪಸಿಂಹ ಭಯೋ ತ್ಪಾದಕರ ಬೆದರಿಕೆಗೆ ಕುಗ್ಗದೆ ನೇರವಾಗಿ ಬಿಜೆಪಿ ಬೆಂಬಲಿಸಿ ಬರಿಯ ಅಕ್ಷರಗಳ ಖ್ಯಾತಿಯಿಂದಲೇ ಸಂಸದರಾಗಿ ಆಯ್ಕೆಯಾದರು. ಅದಕ್ಕೇ ಹೇಳುವುದು ಅನ್ಯಪಕ್ಷಗಳಂತೆ ಸ್ವಜಾತಿ ರೋಗಗ್ರಸ್ಥ, ರಾಜಕಾರಣಿಗಳ ‘ಸಗಣಿ’ ಅವ ಲಂಬಿತ, ಗುಲಾಮಗಿರಿ ಪ್ರೇರಿತ, ಸ್ವಾರ್ಥ ಆಧರಿತವಾಗಿ ನಾಯಕರನ್ನು ಹಿಂಬಾಲಿಸುವ ಕಾರ್ಯಕರ್ತರಂತೆ ಬಿಜೆಪಿಯ ಕಾರ್ಯಕರ್ತರಿಲ್ಲ.

ಕರ್ನಾಟಕ ರಾಜ್ಯ ‘ಲಾಟರಿ’ ಹೊಡೆದಂತೆ ದಿಢೀರ್ ರಾಜಕೀಯ ಪ್ರವೇಶಿಸಿ ಆಕಸ್ಮಿಕವಾಗಿ ಗೆದ್ದು ತಾನೊಬ್ಬ ಪ್ರಬುದ್ಧ ರಾಜಕಾರಣಿ ಎಂಬಂತೆ ಸಮ್ಮೋಹನಕ್ಕೊಳಗಾಗಿ ನಾಗವಲ್ಲಿಯಂತೆ ವರ್ತಿಸುವ ರೆಡಿಮೆಡ್ ರಾಜಕಾರಣಿಗಳನ್ನು ನೋಡಿತ್ತಿದ್ದೇವೆ. ಆದರೆ ದೇಶದ ಹಿತಚಿಂತನೆಯಿಂದಲೇ ಹುಟ್ಟಿ ಕೊಂಡ ಬಿಜೆಪಿಯನ್ನು ಬೆಂಬಲಿಸುವ ಕಾರ್ಯ ಕರ್ತರು, ಮತದಾರರು, ಸ್ಥಳೀಯ ಅಭ್ಯರ್ಥಿ ಯಾವನೇ ಇರಲಿ ಆತನನ್ನು ಒದ್ದು ತಿದ್ದಬಹುದು,
ಮೊದಲು ಪಕ್ಷ ಆನಂತರ ಅಭ್ಯರ್ಥಿ ಎಂದು ಪರಿಭಾವಿಸಿ ಬಿಜೆಪಿ ಪಕ್ಷವನ್ನು ಸೈದ್ಧಾಂತಿಕವಾಗಿ ಬೆಂಬಲಿಸುತ್ತ ಬಂದಿದ್ದಾರೆ.

ಇಂಥ ಕಾರ್ಯಕರ್ತರಿಗೆ ರಾಜ್ಯ ಬಿಜೆಪಿ ಮಾಡುತ್ತಿರುವ ಅವಮಾನ ಅಕ್ಷಮ್ಯ. ಯಾರೋ ಹಾದಿಬೀದಿಯಲ್ಲಿ ನಿಂತು ಮಾತನಾಡಿದ್ದಲ್ಲ. ಸಂಸದರಾದ ಪ್ರತಾಪಸಿಂಹ, ಹಿರಿಯ ನಾಯಕ ಸಿ.ಟಿ.ರವಿ, ಬಿಜೆಪಿಯ ‘ಅಂತರ್ಜಾಲ’ವನ್ನು ಅರಿತಿರುವ ಸಿ.ಪಿ.ಯೋಗಿಶ್ವರ್, ಸಂಘಟನಾ ಚತುರ ವಿ.ಸೋಮಣ್ಣ ಅವರೇ ಹೇಳಿರುವಂತೆ ಬಿಜೆಪಿಯ ಇಂದಿನ ಸೋಲಿಗೆ ಪ್ರಮುಖ ಕಾರಣ ಪಕ್ಷದೊಳಗಿನ ‘ಹಿರಿಯರ ಒಳಒಪ್ಪಂದ’ ಮತ್ತು ‘ಒಳಸಂಚು’. ಹಾಗೆ
ನೋಡಿದರೆ ಇದು ಪಕ್ಷದ ‘ದೇವರಂಥ’ ಕಾರ್ಯ ಕರ್ತರಿಗೆ ನಾಯಕರೇ ಮಾಡಿದ ನಂಬಿಕೆ-ದೇಶ ದ್ರೋಹ. ಮೇಲಿನ ನಾಯಕರು ಒಳಒಪ್ಪಂದದ
ಕುರಿತು ಬಾಯಿಬಿಡುವ ಮೊದಲೇ ಜನರ ಅನೇಕ ರೀತಿಯ ಒಳಒಪ್ಪಂದಗಳ ಹೊಗೆ ಮೇಲೆದ್ದಿತ್ತು.

ಒಬ್ಬ ಎಕ್ಸ್, ಇನ್ನೊಬ್ಬ ವೈ ಗೆ ಹೇಳುತ್ತಾನೆ ‘ನಾನು ನಿನಗೆ ಬೇಕಾದ ಒಂದಷ್ಟು ಮಂದಿಯನ್ನು ಕಳಿಸುತ್ತೇನೆ, ನೀನು ಅವರ ಕೈಬಿಡದೆ ಹಿತಕಾಪಾಡಿ
ಕೊಂಡು ಮೂರೂವರೆ ವರ್ಷ ರಾಜನಾಗು, ಆ ನಂತರ ಐದುವರ್ಷ ನಾನು ರಾಜನಾಗುತ್ತೇನೆ. ನೀನು ಅದಕ್ಕೆ ಬೇಕಾದ ಎಲ್ಲ ಏರ್ಪಾಡು ಮಾಡಿ
ಕೊಡಬೇಕು’ ಎಂಬ ಒಳಒಪ್ಪಂದವಾಗುತ್ತದಂತೆ. ಆ ನಂತರ ಆ ‘ಝಡ್’ ಅಽಕಾರದಿಂದ ಬಿದ್ದುಹೋಗಿ ‘ವೈ’ ರಾಜನಾಗುತ್ತಾನೆ. ಈ ಒಳಒಪ್ಪಂದ ವನ್ನು ಅರಿತ ರಾಜಾಽರಾಜರ ಕೆಂಗೆಣ್ಣಿಗೆ ಗುರಿಯಾದ ‘ವೈ’ನನ್ನು ಕೆಳಗಿಳಿಸಲಾಗುತ್ತದೆ. ಮುಂದೆ ಆ ಒಳಒಪ್ಪಂದ ನೆರವೇರುವುದರ ಮೂಲಕ ‘ಎಕ್ಸ್’ಮತ್ತೊಮ್ಮೆ ರಾಜನಾಗುತ್ತಾನಂತೆ. ಇದನ್ನೇ ಕುಮಾರ ಸ್ವಾಮಿ ಹೇಳಿದ್ದು ‘ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು’ ಎಂದು. ಒಟ್ಟಿನಲ್ಲಿ ಇಂಥ ಅನೇಕ ನಿಗೂಢ-ಭೂಗತ ‘ಎಕ್ಸ್-ವೈ-ಝಡ್’ ಒಪ್ಪಂದಗಳೇ ಬಿಜೆಪಿ ಹೀನಾಯವಾಗಿ ಸೋಲು ವಂತಾಗಿ ಕಾರ್ಯಕರ್ತರನ್ನು ಮಂಗ್ಯಾ ಮಾಡಿದೆ.

ಇಂಥ ಹೊಡೆತಕ್ಕೆ ತೀವ್ರವಾಗಿ ನಲುಗಿರುವ ವಿ.ಸೋಮಣ್ಣ ಮತ್ತೊಮ್ಮೆ ಸೆಟೆದು ನಿಂತಿದ್ದಾರೆ. ಅವರು ಯಾವ ಮಟ್ಟದಲ್ಲಿ ಕೆರಳಿದ್ದಾರೆಂದರೆ
‘ನಾನು ನಿz ಮಾಡುವುದಿಲ್ಲ, ಬೇರೆಯವರನ್ನೂ ನಿದ್ದೆ ಮಾಡಲು ಬಿಡುವುದಿಲ್ಲ’ ಎಂದಿದ್ದಾರೆ. ಮೇಲ್ನೋಟಕ್ಕೆ ಇದು ಸಂಘಟನೆಯ ಸಂಕಲ್ಪವಿರ
ಬಹುದು. ಆದರೆ ಬಿಜೆಪಿಯಲ್ಲಿ ಎಂಥ ‘ನಿದ್ದೆಗೇಡಿತನ’ ಜಾರಿಯಲ್ಲಿದೆಯೆಂದರೆ ಸೋಮಣ್ಣ ರಾಜ್ಯಾಧ್ಯಕ್ಷರಾದರೆ ಯಡಿಯೂರಪ್ಪನವರ ಬಣ ‘ನಿz
ಮಾಡುತ್ತದೆಯೇ’ ಎಂಬುದು ಅನುಮಾನ. ಹಾಗೆಯೇ ವಿಜಯೇಂದ್ರ ಅಧ್ಯಕ್ಷರಾದರೆ ಇನ್ನು ಯಾರ್ಯಾರು ಕೆಟ್ಟಕನಸು ಕಂಡು ನಿದ್ದೆ ಮಾಡುವು
ದಿಲ್ಲವೋ ಎಂಬ ಆತಂಕದ ವಾತಾವರಣ.

ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಕ್ಷದ ನಾಯಕರಾಗಿ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡಲು ನಿಲ್ಲುತ್ತಾರೆ. ಜತೆಗೆ ಮುಂದೆ ಅವರು ಪರ್ಯಾಯ
ಪ್ರಭಾವಿ ವೀರಶೈವ ಲಿಂಗಾಯಿತ ನಾಯಕನಾದರೆ ಮತ್ತೊಂದು ಬಣಕ್ಕೆ ತಮ್ಮ ಅಸ್ತಿತ್ವವೇನು ಎಂಬ ಚಿಂತೆಯೇ ‘ನಿದ್ದೆ’ ಮಾಡದಂತಾಗಿದೆ. ಜತೆಗೆ
ನಿರಾಣಿ ಗುರಾಣಿಗಳನೇಕರು ನಿದ್ರಾಹೀನರಾಗುತ್ತಾರೆ. ಇನ್ನು ಸಿ.ಟಿ.ರವಿ ಅಧ್ಯಕ್ಷರಾದರೆ ಮತ್ತೆ ಇನ್ನಾರಾರು ‘ನಿದ್ದೆ ಮಾಡುವುದಿಲ್ಲ’ ಎಂಬುದೇ
ಅವರ ಚಿಂತೆಯಾಗುತ್ತದೆ. ಇನ್ನು ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ್ ನಾಯಕನಾದರೆ ‘ಏಕದಿನ ಪಂದ್ಯ’ದಲ್ಲೂ ಟೆಸ್ಟ್‌ಮ್ಯಾಚ್ ಆಡುತ್ತಾರೆ. ಇನ್ನು ಬಸವರಾಜ ಬೊಮ್ಮಾಯಿ ನಾಯಕರಾದರೆ ಬಿಜೆಪಿ ಕಾರ್ಯಕರ್ತರು ‘ರಣಜಿ ಮ್ಯಾಚ್’ ನೋಡಬೇಕಾಗುತ್ತದೆ.

ಇನ್ನು ಕಟೀಲು ಅಧ್ಯಕ್ಷರಾಗಿಯೇ ಮುಂದುವರಿದರೆ ಕಾರ್ಯಕರ್ತರು ರೇಡಿಯೋದಲ್ಲಿ ಕೇವಲ ಕಾಮೆಂಟರಿ ಕೇಳಬೇಕಾಗುತ್ತದೆ. ಇನ್ನು ಮೊನ್ನೆ ಟಿಕೆಟ್ ಸಿಗದಿದ್ದರೂ ಈಶ್ವರಪ್ಪನವರು ಈಗೇನೋ ಪಕ್ಷದ ನಿಷ್ಠಾವಂತರಾಗಿ ಮಾತನಾಡುತ್ತಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರ ಮಗನಿಗೆ ಟಿಕೆಟ್ ಸಿಗದಿದ್ದರೆ ಅವರೂ ನಿದ್ದೆ ಮಾಡುತ್ತಾರೋ ಅಥವಾ ನಿದ್ದೆ ಗೆಡಿಸುತ್ತಾರೋ ನೋಡಬೇಕಿದೆ. ಇನ್ನು ವಲಸಿಗರಲ್ಲಿ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಮುನಿರತ್ನ ನಾಯ್ಡು ಗೆದ್ದು ಬಂದಿರುವುದು ಅವರ ಯೋಗ್ಯತೆಗಳಿಂದಲೇ. ಅಂಥವರ ಮೇಲೂ ಗೂಬೆ
ಕೂರಿಸುವ ಮಾತುಗಳನ್ನಾಡುತ್ತಿರುವುದು ಅವರೂ ನಿದ್ರಾಭಂಗದಿಂದ ಎದ್ದು ಕೂರುವಂತಾಗಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಯಾರೇ ಪ್ರಮುಖ ಸ್ಥಾನ ಗಳಿಸಿದರೂ ‘ನಿz ಮಾಡಲು ಬಿಡುವುದಿಲ್ಲ’ ಎಂಬುದು ಮಾತ್ರ ‘ಕಾಮನ್ ಫ್ಯಾಕ್ಟರ್’ ಆಗಿ
ಹೋಗಿದೆ. ಇನ್ನೆಲ್ಲಿ ಒಗ್ಗಟ್ಟು ಸಂಘಟನೆಯ ಮಂತ್ರ? ಇದು ರಾಜ್ಯ ಬಿಜೆಪಿಗೆ ತಟ್ಟಿರುವ ಶಾಪ! ಬಿಜೆಪಿ ಹೈಕಮಾಂಡ್ ಈ ರಾಜ್ಯ ನಾಯಕರ
ನಡುವಿನ ‘ನಿದ್ದೆ ಮಾಡಲು ಬಿಡುವುದಿಲ್ಲ’ ಎಂಬ ಧೋರಣೆಗಳಿಂದ ಬೇಸತ್ತು ತಿಂಗಳು ಕಳೆದರೂ ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಸ್ಥಾನಕ್ಕೆ
ಸಮರ್ಥರನ್ನು ಆಯ್ಕೆ ಮಾಡುವುದೇ ಯಮ ಸಾಹಸವಾಗಿದೆ. ಇನ್ನೇನು ವಿಧಾನಸಭೆ ಅಧಿವೇಶನ ಆರಂಭಗೊಳ್ಳುತ್ತಿದೆ.

ಇರುವಷ್ಟರಲ್ಲಿ ಮಿ.ಕ್ಲೀನ್ ಆಗಿರುವ ಮತ್ತು ಸಮಸ್ತ ಕಾರ್ಯಕರ್ತರ ಒತ್ತಾಸೆಯಂತೆ ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಪ್ರತಿಪಕ್ಷದ ನಾಯಕರಾದರೆ ಬಿಜೆಪಿಗೆ ಒಂದಷ್ಟು ಮರ್ಯಾದೆ ಉಳಿಯುತ್ತದೆ. ಇದು ನಿಜಕ್ಕೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಉತ್ಸಾಹಕ್ಕೆ ಕಾರಣವಾಗುತ್ತದೆ. ಇನ್ನು ರಾಜ್ಯಾಧ್ಯಕ್ಷರಾಗಿ ಸಂಸದ ಪ್ರತಾಸಿಂಹ, ಶೋಭಾ ಕರಂದ್ಲಜೆ, ಸಿ.ಟಿ.ರವಿ, ವಿ.ಸೋಮಣ್ಣರಂಥ ಸಂವೇದನಶೀಲ
ಸದಾ ಪ್ರeಯಲ್ಲಿರುವ ವ್ಯಕ್ತಿಗಳನ್ನು ಕೂರಿಸಿದರಷ್ಟೇ ಬಿಜೆಪಿ ಮುಂದಿನ ಸಂಸತ್ ಚುನಾವಣೆಗೆ ಬೇಕಾದ ‘ಪವರ್‌ಪ್ಲೇ’ ಆಡಲು ಸಾಧ್ಯ.

ಮೊದಲೇ ಹೇಳಿದಹಾಗೆ ಬಿಜೆಪಿ ಪುಢಾರಿಗಳ ಬೆಂಬಲಿತ ಪಕ್ಷವಲ್ಲ. ರಾಷ್ಟ್ರ ಬೆಂಬಲಿತ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರ ದನಿಗೆ ಕಿವಿಗೊಟ್ಟು ಸ್ಪಂದಿಸಿ ನಡೆದರೆ ಒಳಿತು. ಅದನ್ನು ಬಿಟ್ಟು ವೀರಶೈವ ಒಕ್ಕಲಿಗ ಎಂದೆಲ್ಲ ಕೆಲಸಕ್ಕೆ ಬಾರದ ಜಾತಿ ತಕ್ಕಡಿ ಹಿಡಿದು ಮಂಗನಂತೆ ಕೂತರೆ ಕಾರ್ಯ
ಕರ್ತರು ಕರಗಿ ಹೋಗುತ್ತಾರಷ್ಟೆ. ಮೊನ್ನೆಯ ಚುನಾವಣೆಯಲ್ಲಿ ಅಸ್ವಾಭಾವಿಕ ಗ್ಯಾರಂಟಿಗಳ ಮೂಲಕ ಕೃತಕವಾಗಿ ಗೆದ್ದಿರುವ ಕಾಂಗ್ರೆಸ್, ಇಂಥ
ಜಾತಿಗಳ ಮತಗಳಿಂದಲೇ ಗೆದ್ದಿದೆ ಎಂದು ಹೇಳಲು ಸಾಧ್ಯವೇ? ಜಾತಿ, ಮಠಗಳನ್ನು ಮೀರಿದ್ದು ಈ ಪುಗಸಟ್ಟೆ ಘೊಷಣೆಗಳು. ಜಾತಿ ನೋಡದೆ
ಹಿಂದುಳಿದ ವರ್ಗದ ಮೋದಿಯವರನ್ನು ಇಡೀ ವಿಶ್ವವೇ ಆಧರಿಸುತ್ತಿದೆ.

ಅಂಥ ಒಂದಷ್ಟು ಯೋಗ್ಯತೆ ಅರ್ಹತೆಯನ್ನಾದರೂ ರಾಜ್ಯ ಬಿಜೆಪಿ ನಾಯಕರು ಸಿದ್ಧಿಸಿಕೊಳ್ಳಲಿ. ‘ಕಾರ್ಯಕರ್ತರು ಎಸಿ ರೂಮಿನಲ್ಲಿ ಕೂರುವವರಲ್ಲ, ಯಾವುದೇ ಪ್ರತಿಕೂಲ ಪರಿಸ್ಥಿತಿ ಯಲ್ಲೂ ಎದೆಗುಂದದೆ ಪಕ್ಷವನ್ನು ಕಟ್ಟಲು ಹಗಲಿ ರುಳು ಶ್ರಮಿಸುವ ಸಿಪಾಯಿಗಳು’ ಎಂದು ಮೋದಿ ಯವರೇ ಕಾರ್ಯಕರ್ತರನ್ನು ಅಭಿಮಾನಿಸಿದ್ದಾರೆ. ಆದರೆ ರಾಜ್ಯ ಬಿಜೆಪಿಗರೇ ನೀವು ಮಾಡುತ್ತಿರುವುದೇನು?