Sunday, 15th December 2024

ಆತ್ಮಾವಲೋಕನದಿಂದ ರಾಜ್ಯ ಬಿಜೆಪಿ ಎಚ್ಚೆತ್ತುಕೊಳ್ಳುವುದೇ ?1

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಯಡಿಯೂರಪ್ಪನವರು ರಾಜ್ಯಾದ್ಯಂತ ಸುತ್ತುತ್ತೇನೆ, ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಅವರಿಗೆ ಏರಬೇಕಾದ ಕುದುರೆಯನ್ನೇ ಒದಗಿಸಿಲ್ಲ. ಮೋದಿ ಅಮಿತ್‌ಶಾ ಸೇರಿದಂತೆ ಅನೇಕರು ಇಲ್ಲಿನ ನಾಯಕರು ಪಕ್ಷದ ತಳಪಾಯವನ್ನು ಬಲಿಷ್ಠವಾಗಿಸಿದ್ದಾರೆಂದು ಭಾವಿಸಿ ಅದರ ವಿಶ್ವಾಸದ ಮೇಲೆ ಮತಯಾಚನೆಗೆ ಬರುತ್ತಿದ್ದಾರೆ.

ಅಂದು ಗುತ್ತಿಗೆದಾರ ಕೆಂಪಣ್ಣ ಬಿಜೆಪಿ ಸರಕಾರದ ಮೇಲೆ ೪೦% ಕಮಿಷನ್ ಸರಕಾರ ಎಂದು ಆರೋಪಿಸಿದಾಗ ಪಂಚೆ ಅಂಚಿಗೆ ಬೆಂಕಿ ಬಿದ್ದ ಕೂಡಲೇ ಎದ್ದು ಪಂಚೆ ಕೊಡವಿದಂತೆ ಕೆಂಪಣ್ಣನ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ದಾಖಲೆಗಳನ್ನು ಮಡಗುವಂತೆ ಸರಕಾರ ಅಬ್ಬರಿಸಲಿಲ್ಲ. ಕೊನೆಗೆ ಮಂತ್ರಿ ಮುನಿರತ್ನಂನಾಯ್ಡು ತನ್ನ ಮೇಲಿನ ವೈಯಕ್ತಿಕ ಆರೋಪಕ್ಕೆ ಮಾನ ನಷ್ಟ ಮೊಕದ್ದಮೆ ಹೂಡಿದ ಮೇಲೆ ಕೆಂಪಣ್ಣನ ಬಂಧನವಾಯಿತು.

ಕೆಂಪಣ್ಣನಿಗೆ ಯಾರ‍್ಯಾರಿಂದ ಪ್ರಚೋದನೆ ಇದೆಯೆಂದು ತಿಳಿದಿದ್ದರೂ ಬೊಮ್ಮಾಯಿ ಯವರು ಸದ್ಯ ನೇರ ನನ್ನ ಮೇಲೆ ಆರೋಪ ಮಾಡಲಿಲ್ಲವಲ್ಲ ಎಂದು ನಿರ್ಲಕ್ಷಿಸಿದರು. ಆದರೆ ಕಾಂಗ್ರೆಸ್ ಇದನ್ನೇ ೪೦% ಕಮಿಷನ್ ಸರಕಾರವೆಂದು ಬೊಮ್ಮಾಯಿಯವರ ಮುಖವನ್ನೇ ಬಳಸಿಕೊಂಡು ಪೇಸಿಎಂ ಎಂದು ಗೋಡೆಗಳ ಮೇಲೆ ಅಂಟಿಸುತ್ತಾ ಬಂದರೂ ಬಿಜೆಪಿ ನಾಯಕರಿಗೆ ಅಂಥದ್ದೇನೂ ಅನಿಸಲೇ ಇಲ್ಲ. ಈಗ ನೋಡಿ ಹರಿಶ್ಚಂದ್ರನ ವಂಶದವರಂತೆ ನಲಪಾಡ್‌ನಿಂದ ಹಿಡಿದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿ ಸಿಕ್ಕಸಿಕ್ಕವರೆಲ್ಲಾ ೪೦ ಪರ್ಸೆಂಟ್ ಸರಕಾರವೆಂದು ಬಿಜೆಪಿಯ ಪಂಚೆ ಎಳೆಯುತ್ತಿದ್ದಾರೆ.

ಅದರಲ್ಲೂ ಒಂದುವರೆ ಲಕ್ಷಕೋಟಿ ಅವ್ಯವಹಾರ ನಡೆದಿದೆ ಎಂಬುದನ್ನು ಪ್ರಿಯಾಂಕ ಗಾಂಧಿಯಿಂದಲೂ ಹೇಳಿಸುತ್ತಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ನವರ ತಲೆದಂಡವೇನೋ ಆಯ್ತು. ಆದರೆ ಬಿಜೆಪಿ ಶಾಸಕ ಮಾಡಾಳ್ ಸನ್ಸ್ ಲೋಕಾಯುಕ್ತರಿಗೆ ಹಸಿಹಸಿ ಎಂಜಲು ಕೈಯಲ್ಲಿ ಸಿಕ್ಕಿಬಿದ್ದರೂ ಬಿಜೆಪಿ ಸರಕಾರ ಥೂ ನಿನ್ನ ಎಂದು ಕೂಡಲೇ ಪಕ್ಷದಿಂದ ಉಚ್ಚಾಟಿಸಿ ಕೈತೊಳೆದುಕೊಳ್ಳುವ ಕೆಲಸವನ್ನೂ ಮಾಡಲಿಲ್ಲ. ಈಗ ನೋಡಿ ಕಾಂಗ್ರೆಸ್ ಇವೆಲ್ಲವನ್ನೂ ದೊಡ್ಡಮಟ್ಟದಲ್ಲಿ ಬಳಸಿಕೊಂಡು ರಾಜ್ಯದ ಇತಿಹಾಸದಲ್ಲೇ ಬಿಜೆಪಿಯೇ ಮೊದಲ ಭ್ರಷ್ಟ ಸರಕಾರ ಎಂಬಂತೆ ಬಿಂಬಿಸುವುದರಲ್ಲಿ ಯಶಸ್ಸಾಗುತ್ತಿದೆ.

ಆದರೆ ಮೊನ್ನೆ ಸಿದ್ದರಾಮಯ್ಯ, ಬೊಮ್ಮಾಯಿ ಎಂಬ ಲಿಂಗಾಯಿತರೇ ಭ್ರಷ್ಟಾಚಾರದಿಂದ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಇಡೀ ಲಿಂಗಾಯಿತ ಸಮುದಾಯವನ್ನು ಜರಿದರೂ ಬೊಮ್ಮಾಯಿ ಯವರು ನನ್ನ ಮೇಲೆ ಒಂದು ಸಣ್ಣ ಕಪ್ಪುಚುಕ್ಕೆ
ಇದ್ದರೆ ಕಾಂಗ್ರೆಸ್‌ನವರು ತೋರಿಸಲಿ ಎಂದು ತಮ್ಮನ್ನಷ್ಟೇ ರಕ್ಷಣೆ ಮಾಡಿಕೊಳ್ಳುತ್ತಿದ್ದಾರಷ್ಟೆ. ಅಸಲಿಗೆ ಸರಕಾರವನ್ನು ಪಕ್ಷ ವನ್ನು ಅಭಿಮಾನಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ. ರವಿ. ಬಸವನಗೌಡ ಯತ್ನಾಳ್ ಪಾಟೀಲ್, ಡಾ. ಕೆ. ಸುಧಾಕರ್, ಆರ್. ಅಶೋಕ್ ಹೊರತು ಪಡಿಸಿದರೆ ಉಳಿದವರೆಲ್ಲರೂ ಅಯ್ಯೋ ನಾನು ನನ್ನ ಕ್ಷೇತ್ರದಲ್ಲಿ ಗೆದ್ದರೆ ಸಾಕಪ್ಪ ಎನ್ನುವ ಸ್ಥಿತಿಯಲ್ಲಿದ್ದಾರೆ.

ಇನ್ನು ಚುನಾವಣೆಯ ಹತ್ತಿರವಿದ್ದಾಗಲೇ ಗುಜರಾತ್‌ನ ಅಮೂಲ್-ನಂದಿನಿ ವಿಚಾರದಲ್ಲೂ ರಾಜ್ಯದ ಜನರ ಕೆಂಗೆಣ್ಣಿಗೆ ಗುರಿ ಯಾಗುವಂಥ ಪರಿಸ್ಥಿತಿಯನ್ನು ಬಿಜೆಪಿ ತಂದುಕೊಂಡಿತು. ನಂದಿನಿ ಎಂಬುದು ಕನ್ನಡಿಗರ ಅಸ್ಮಿತೆ ಅದರಲ್ಲೂ ಗ್ರಾಮೀಣ
ಭಾಗದ ರೈತರು ಸಹಕಾರ ಸಂಘಗಳ ಒಡನಾಡಿಯಾಗಿದೆ. ಅಮೂಲ್‌ನ ಅಪ್ರಸ್ತುತ ಅನವಶ್ಯಕ ವಿಷಯಕ್ಕೆ ಬಲಿಯಾದ ಬಿಜೆಪಿ ಇದರಲ್ಲೂ ಖಡಕ್ ಆಗಿ ನಂದಿನಿ ನಮ್ಮದು ಅಮೂಲ್ ಅನವಶ್ಯಕ ಎಂದು ಎದೆಬಡಿದುಕೊಂಡು ಹೇಳಲಿಲ್ಲ. ಹಾಗೆ
ನೋಡಿದರೆ ಗುಜರಾತ್‌ನ ಮುಖ್ಯಮಂತ್ರಿಯೇ ಮೇಲು ಅಯ್ಯೋ ನಮಗೆ ನಂದಿನಿಯೊಂದಿಗೆ ಪೈಪೋಟಿಗಿಳಿಯುವುದು ಬೇಕಿಲ್ಲ ಎಂದು ವಿವಾದಕ್ಕೆ ತೆರೆ ಎಳೆದರು.

ಹಳೇ ಮೈಸೂರು ಭಾಗದಲ್ಲಿ ಮತಗಳನ್ನು ಸೆಳೆಯುವ ಉದ್ದೇಶವಿದ್ದಾಗ ನಂದಿನಿಯ ಹಾಲಿಗೆ ಇಂಥ ಹುಳಿಹಿಂಡುವ ಪ್ರಯತ್ನಕ್ಕೆ ಯಾವ ಮೂರ್ಖನೂ ಇಳಿಯುವುದಿಲ್ಲ. ಆದರೆ ಬಿಜೆಪಿ ಇಲ್ಲೂ ಯಡವಟ್ಟು ಮಾಡಿಕೊಂಡು ವಿರೋಧ ಪಕ್ಷಗಳೂ ಸೇರಿ ಪೋಸ್ಟ್‌ಪೇಡ್-ಪ್ರೀಪೇಡ್ ಹೊಟ್ಟೆ ಪಾಡಿನ ಗಿರಾಕಿಗಳಿಂದಲೂ ರಾಹುಲ್‌ಗಾಂಧಿ, ಪ್ರಿಯಾಂಕ ಗಾಂಧಿಯಂಥ ಆಜನ್ಮ ನಂದಿನಿ ಅಭಿಮಾನಿಗಳಿಂದಲೂ ಛೀಮಾರಿಗೆ ಒಳಗಾಯಿತು.

ಆ ಭಾಗದಲ್ಲಿ ಈಗ ರೈತರಿಗೆ ಬಿಜೆಪಿ ಅಮೂಲ್ ಪರ ಎಂಬ ಆತಂಕವಿದೆ. ಇನ್ನು ಅಂಥ ಮತಗಳು ಬಿಜೆಪಿಗೆ ಬೀಳುತ್ತವೆಯೇ?
ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹೀಗೆ ಜಾತಿಗೊಬ್ಬರು ಮುಖ್ಯಮಂತ್ರಿ ಪದವಿಯ ಆಕಾಂಕ್ಷಿತರಾಗಿದ್ದಾರೆ. ಇದು ಆ ಪಕ್ಷದ
ಕಾರ್ಯಕರ್ತರಲ್ಲಿ ಗೊಂದಲ ಮತ್ತು ಅಸಮಧಾನಕ್ಕೆ ಕಾರಣವಾಗಿದೆ. ಹೀಗಿರುವಾಗ ಬಿಜೆಪಿಗೆ ನಿಜಕ್ಕೂ ರಾಜಕೀಯ ಚಾಣಾಕ್ಷತೆ ಇದ್ದಿದ್ದರೆ ಗೋಡೆಗೆ ಮೊಳೆ ಹೊಡೆದಂತೆ ಬಸವರಾಜ ಬೊಮ್ಮಾಯಿಯವರೇ ಮುಂದಿನ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಿಸಿದ್ದರೆ ಇಷ್ಟೊತ್ತಿಗೆ ಲಿಂಗಾಯಿತ ಸಮುದಾಯ ಮತಗಳ ಪಾಕ ಇಳಿಯುತಿತ್ತು.

ಶೆಟ್ಟರ್ ಸವದಿಯ ಪಾಪವೂ ತಟ್ಟುತ್ತಿರಲಿಲ್ಲ. ಇಲ್ಲೂ ಯಡವಟ್ಟು ಮಾಡಿಕೊಂಡ ಬಿಜೆಪಿ ಈಗ ಲಿಂಗಾಯಿತರಲ್ಲಿ ಒಂದೊಮ್ಮೆ ಬಿಜೆಪಿ ಬಹುಮತ ಪಡೆದರೆ ಲಿಂಗಾಯತ ನಾಯಕರಿಗೆ ಯಾವ ದಾರಿ ತೋರಿಸುತ್ತಾರೋ ಎಂಬ ಅನುಮಾನ ಬಿತ್ತಿದೆ. ಸಾಲದೆಂಬಂತೆ ಸಿ.ಟಿ. ರವಿ, ಆರ್. ಅಶೋಕ್ ಮುಂದಿನ ಮುಖ್ಯಮಂತ್ರಿ ಹೇಳಿಕೆಗಳಿಂದ ಲಿಂಗಾಯಿತರ ಅನುಮಾನಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಇನ್ನು ಅನ್ಯಪಕ್ಷಗಳಲ್ಲಿ ಜೈಲಿಗೆ ಹೋಗಿಬಂದವರು, ಯಾವಾಗ ಬೇಕಾದರೂ ಜೈಲಿಗೆ ಹೋಗಬಹು ದಾದವರೇ ಇರುವಾಗ ಒಂದು ಕಾಲದಲ್ಲಿ ಬಿಜೆಪಿಯ ಸೇನಾಧಿಪತಿಯಂತಿದ್ದ ಜನಾರ್ದನರೆಡ್ಡಿಗೆ ಕಂಕಣಕಟ್ಟಿ ಗೆದ್ದು ಬಾ ಮಗನೇ ಒಂದಿಪ್ಪತ್ತು ಕ್ಷೇತ್ರಗಳನ್ನು ಎಂದು ಕುದುರೆ ಏರಿಸಿದ್ದರೆ ಬಳ್ಳಾರಿ ಸುತ್ತಲಿನ ಅನೇಕ ಕ್ಷೇತ್ರಗಳು ದಕ್ಕುತಿದ್ದವು.

ಆದರೆ ಬಿಜೆಪಿಯ ಒಳಸಂಚುಕೋರರು ಸೇರಿಕೊಂಡು ರೆಡ್ಡಿಯನ್ನು ಅದೆಷ್ಟು ನಿರ್ಲಕ್ಷಿಸಿದರೆಂದರೆ ಆತ ಪಕ್ಷಕಟ್ಟಿ ಬಿಜೆಪಿಯ ಮತಗಳನ್ನೇ ಸೆಳೆಯುವಂತಾಗಿದೆ. ಇನ್ನು ಸಂಘಟನೆಯಲ್ಲಿ ಬಲಿಷ್ಠರಾಗಿದ್ದ ಶ್ರೀರಾಮುಲು, ಸೋಮಶೇಖರ್‌ರೆಡ್ಡಿ, ಕರುಣಾಕರ ರೆಡ್ಡಿ, ಆನಂದ್‌ಸಿಂಗ್ ಅವರಿಗಿದ್ದ ಗರಿಗಳನ್ನು ತರಿದು ಹಾಕಿ ಅವರನ್ನು ಕೇವಲ ಅಭ್ಯರ್ಥಿಗಳನ್ನಾಗಿ ನಿಲ್ಲಿಸಿರುವುದೂ ಪಕ್ಷದ್ರೋಹ ಕೆಲಸವೇ!

ಇನ್ನು ಸಂಘ-ಬಿಜೆಪಿ ಸಿದ್ಧಾಂತದಲ್ಲೇ ಬೆಳೆದ ಪ್ರಮೋದ್ ಮುತಾಲಿಕ್‌ಗಿಂತ ನಾಗಮಂಗಲದಲ್ಲಿ ಶಿವರಾಮೇಗೌಡ ಸಭ್ಯಸ್ಥ ನಾಗಿ ಕಂಡನೇ ಬಿಜೆಪಿಗೆ. ಎಲ್ಲಾ ಪಕ್ಷಗಳಲ್ಲೂ ಎಂತೆಂಥ ಹರಾಮಿಗಳೇ ಟಿಕೆಟ್ ಪಡೆದಿರುವಾಗ ಪ್ರಮೋದ್‌ ಮುತಾಲಿಕ್ ಅವರಿಗೆ ಒಂದು ಕ್ಷೇತ್ರನ್ನು ನೀಡಿದ್ದರೆ ಅದರಿಂದ ಸುತ್ತಮುತ್ತಲಿನ ಕ್ಷೇತ್ರಗಳಲ್ಲೂ ಪರಿಣಾಮ ಬೀರಿ ಮತದಾರ ರಲ್ಲಿ ಸ್ವಾಭಿಮಾನವನ್ನು ಹಿಮ್ಮಡಿಗೊಳಿಸುತ್ತಿತ್ತು. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮುಖಂಡರ ಆದೇಶದಂತೆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನಿರಾಕರಿಸಿರುವುದನ್ನು ಡಿಕೆಶಿಯೇ ಹೇಳಿಕೊಂಡಿದ್ದಾರೆ.

ಅದೇ ಆರ್‌ಎಸ್ ಎಸ್ ಮಾತುಕೇಳಿ ಬಿಜೆಪಿ ದಲಿತರೊಬ್ಬರಿಗೆ ಟಿಕೆಟ್ ಕೊಡದಿದ್ದರೆ ಇವರು ಏನು ಮಾಡುತ್ತಿದ್ದರು? ನಾವು
ಅಽಕಾರಕ್ಕೆ ಬಂದರೆ ಮುಸಲ್ಮಾನರಿಗೆ ಹತ್ತುಸಾವಿರ ಕೋಟಿ ಕೊಡುತ್ತೇವೆ, ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆಗಳನ್ನು ಕಿತ್ತೆಸೆಯುತ್ತೇವೆ ಎಂದು ಮುಸ್ಲಿಂ ಓಲೈಕೆಯ ಧರ್ಮ ರಾಜಕಾರಣ ಮಾಡುತ್ತಿರುವಾಗ ಹಿಂದೂಗಳಿಗಾಗಿಯೇ ಇರುವ
ಬಿಜೆಪಿಯ ರಾಜಕಾರಣ ಮಾತ್ರ ಕೋಮುವಾದ ಹೇಗಾಗುತ್ತದೆ? ಹೀಗೆ ಬಿಜೆಪಿಯ ಹಿಂದುತ್ವಕ್ಕಿಂತ ಕಾಂಗ್ರೆಸ್ ಜೆಡಿಎಸ್ ಪಕ್ಕಾ ಇಸ್ಲಾಂ ಪರವೆಂಬುದು ಪ್ರಕಾಶಮಾನವಾಗಿ ಗೋಚರಿಸುತ್ತಿದೆ.

ಅವರ ಹಿಂದೂ ವಿರೋಧಿ ನಡೆಗಳ ಲಾಭ ಪಡೆದುಕೊಂಡು ಅದನ್ನು ಜನರ ಮುಂದಿಡುವ ತಂತ್ರಗಾರಿಕೆಯಲ್ಲೂ ಬಿಜೆಪಿ ಸೋಂಬೇರಿಯಾಗಿದೆ. ಹೀಗೆ ಹಿಂದೂಗಳ ನಂಬಿಕೆ ಉಳಿಸಿಕೊಳ್ಳುವಂಥ ಯಾವ ಪ್ರಯತ್ನ ವನ್ನೂ ರಾಜ್ಯ ಬಿಜೆಪಿ ಮಾಡದೆ ಹಿಂದುತ್ವವನ್ನು ಕೇವಲ ಬೀಸಣಿಗೆಯಂತೆ ಬಳಸಿಕೊಳ್ಳುತ್ತಿದೆಯಷ್ಟೇ! ಇದರ ಜತೆಗೆ ಈಗ ಮುಸ್ಲಿಂ ಮೀಸಲಾತಿ ವಿಚಾರ
ದಲ್ಲೂ ನ್ಯಾಯಾಲಯದಿಂದ ಬಿಜೆಪಿಗೆ ಹಿನ್ನಡೆ ಯಾಗಿದೆ. ಜತೆಗೆ ಬಿಲಗಳಿಂದ ಹೊರಬಂದ ಹೆಗ್ಗಣ ಗಳೆಂಬ ಲದ್ದಿಜೀವಿಗಳೆಂಬ ಸಮಯಸಾಧಕರು ಒಂದಾಗಿ ಜಾತ್ಯತೀತ ಸರಕಾರವನ್ನು ಸ್ಥಾಪಿಸೋಣ ವೆಂದು ಮುಂದಿನ ಗಂಜಿಗಾಗಿ ಬಕೇಟು ಸಮೇತರಾಗಿ ನಿಂತಿದ್ದಾರೆ.

ಇನ್ನು ಕಾಂಗ್ರೆಸ್ ಜಾಹಿರಾತುಗಳ ಮೂಲಕ ಬಿಜೆಪಿಗೆ ಸರಿಯಾಗಿ ಬಾರಿಸುತ್ತಿದೆ. ಇಂಥ ಜಾಹಿರಾತಿನಲ್ಲೂ ತೀಕ್ಷ್ಣವಾದ ಕೌಂಟರ್ ಕೊಡುವುದರಲ್ಲೂ ಬಿಜೆಪಿ ಅಸಡ್ಡೆ ತೋರಿದೆ. ಒಟ್ಟಾರೆ ಬಿಜೆಪಿಯ ನಾಯಕರು ಯಾರದೋ ಮದುವೆಗೆ ಬಂದು ಧಾರೆ ಹುಯ್ದು ಹೊರಡುವಂಥ ಅತಿಥಿ ಗಳಾಗಿದ್ದಾರೆ ಹೊರತು ತಾವೇ ಖುದ್ದು ಮದುವೆ ಮಾಡಿಸಿ ಸಂಸಾರ ಮಾಡುವಂಥ ಸೈದ್ಧಾಂತಿಕ ಹಠ ಛಲ ಯಾವ ನಾಯಕನಿಗೂ ಇದ್ದಂತಿಲ್ಲ. ಇದರ ಒಟ್ಟಾರೆ ಪರಿಣಾಮವೆಂಬಂತ್ತೆ ಮೊನ್ನೆ ಕನ್ನಡದ
ಸುದ್ದಿವಾಹಿನಿಗಳು ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ೧೦೦ ದಾಟುವುದು ಪಕ್ಕಾ ಆಗಿದ್ದು ಬಿಜೆಪಿ ೯೦ ಏರುವುದೇ ಅನುಮಾನದಲ್ಲಿದೆ.

ನಿರ್ಮಾಪಕನೊಬ್ಬ ನಿರ್ದೇಶಕನಿಗಿಂತ ಪ್ರೊಡಕ್ಷನ್ ಮ್ಯಾನೇಜರ್‌ನ ಮಾತನ್ನು ಕೇಳುತ್ತಾ ಹೋದರೆ ಎಂಥ ಡಬ್ಬ ಸಿನಿಮಾ ಆಗುತ್ತದೋ ಹಾಗಿದೆ ಬಿಜೆಪಿಯ ಸ್ಥಿತಿ. ನಿರ್ದೇಶಕ ಯಡಿಯೂರಪ್ಪನವರು ಮಾತ್ರ ರಾಜ್ಯಾದ್ಯಂತ ಸುತ್ತುತ್ತೇನೆ, ಬಿಜೆಪಿಯನ್ನು
ಅಽಕಾರಕ್ಕೆ ತರುತ್ತೇನೆ ಎಂಬ ಸಾಂಪ್ರದಾಯಕ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಅವರಿಗೆ ಏರಬೇಕಾದ ಕುದುರೆಯನ್ನೇ ಒದಗಿಸಿಲ್ಲ. ಕೇಂದ್ರ ದಿಂದ ಮೋದಿ ಅಮಿತ್‌ಶಾ ಸೇರಿದಂತೆ ಅನೇಕರು ಇಲ್ಲಿನ ನಾಯಕರು ಪಕ್ಷದ ತಳಪಾಯವನ್ನು
ಬಲಿಷ್ಠವಾಗಿಸಿದ್ದಾರೆಂದು ಭಾವಿಸಿ ಅದರ ವಿಶ್ವಾಸದ ಮೇಲೆ ಮತಯಾಚನೆಗೆ ಬರುತ್ತಿದ್ದಾರೆ.

ಆದರೆ ಬುಡವೇ ಗಟ್ಟಿಯಿಲ್ಲದಾದಾಗ ಯಾರು ಬಂದು ಭಾಷಣ ಮಾಡಿಹೋದರೇನು? ದೇವೇಗೌಡರನ್ನು ನೋಡಿ, ಇಳಿವಯಸ್ಸು ಅನಾರೋಗ್ಯದಲ್ಲೂ ರಣರಂಗಕ್ಕಿಳಿದು ನಮಗೆ ಕಣ್ಣೀರಾಕಿಸಿದವರಿಗೆಲ್ಲಾ ಕಣ್ಣೀರು ಹಾಕಿಸಿ ಎಂದು ರಣವೀಳ್ಯೆ ನೀಡುತ್ತಿದ್ದಾರೆ. ಅದೇನೇ ಪ್ರಳಯ ಭೂಕಂಪವಾದರೂ ಪಕ್ಷ ಕಟ್ಟುತ್ತೇನೆ ತಮ್ಮ ಕುಟುಂಬದವರು ಅಧಿಕಾರಕ್ಕೆ ಬರುತ್ತಾರೆ ಎಂಬ ಅಚಲ ಹೋರಾಟ ಸ್ವಾಭಿಮಾನ ರಾಜ್ಯ ಬಿಜೆಪಿಯ ಯಾವ ಮುಖಗಳಲ್ಲೂ ಗೋಚರಿಸುತ್ತಿಲ್ಲ. ಯುಪಿ ಮಾಡಲ್ ಎನ್ನುವ ಬದಲು ಕಳೆದ ಎರಡು ವರ್ಷಗಳಿಂದ ಯೋಗಿಜೀ, ಹಿಮಂತ ಬಿಸ್ವಾ ಶರ್ಮರಂತೆ ಸಂವಿಧಾನದ ಚೌಕಟ್ಟಿನಲ್ಲೇ ಪ್ರಜಾಪ್ರಭುತ್ವ ಪೂರಕ ಮೊಣಚಿನ ಆಡಳಿತ ನೀಡದಿದ್ದರೆ ಇಂದು ಅವರನ್ನೆಲ್ಲಾ ಪ್ರಚಾರಕ್ಕೆ ಕರೆಸುವ ಅಗತ್ಯವೇ ಇರುತ್ತಿರಲಿಲ್ಲ.

ಈಗ ಉಳಿದಿರುವುದು ಹತ್ತೇ ದಿನ, ಎಚ್ಚೆತ್ತುಕೊಳ್ಳದಿದ್ದರೆ ಐದುವರ್ಷ ವಿರೋಧ ವಾಸ!

ಇನ್ನು ವ್ಯಕ್ತಿ ಶಕ್ತಿ ಯುಕ್ತಿ ಸಂವಿಧಾನಕ್ಕಿಂತ ಮತದಾರರಿಗೆ ಜಾತಿಯೇ ಎಲ್ಲಕ್ಕಿಂತ ಮೊದಲು ಎನ್ನುವುದಾದರೆ ಸಾಕ್ಷಾತ್
ಲಿಂಗಾಯಿತ ಮಠಾಧೀಶರೊಬ್ಬರನ್ನೇ ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಿಯಾದರೂ ರಾಜ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕಿಳಿಯಲಿ. ಇಲ್ಲದಿದ್ದರೆ ಹಿಂದುತ್ವವನ್ನು ವಿರೋಧಿಸುತ್ತಾ, ಮುಸಲ್ಮಾನರನ್ನೇ ಓಲೈಸುತ್ತಾ ಅವರನ್ನು ಬೇಕಾದಂತೆ ಬಳಸಿಕೊಳ್ಳುತ್ತಾ ಶುದ್ಧ ಚಾರಿತ್ರ್ಯೆ ಇಲ್ಲದ ಮಾಡಬಾರದ್ದೆಲ್ಲಾ ಮಾಡಿ ರಣಚಂಡಿ ಯಾಗ ಹೋಮಹವನಗಳನ್ನು ಮಾಡಿ ಕೇವಲ
ಮದಮತ್ಸರ ತಣಿಸಿಕೊಳ್ಳಲು ಶೋಕಿಗಾಗಿ ಪ್ರಜಾ ಪ್ರಭುತ್ವವನ್ನು ಕುದುರೆ ಸವಾರಿಯಂತೆ ಭಾವಿಸಿರುವ ಅಯೋಗ್ಯರಿದ್ದಾರೆ.

ಪಶ್ಚಿಮಬಂಗಾಳ ಕೇರಳದಂತೆ ಕರ್ನಾಟಕವೂ ಆಗುವುದನ್ನು ನೋಡಬೇಕಾಗುತ್ತದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದೆ. ಈಗಾಗಲೇ ದೇಶದೊಳಗಿನ ಅಪಾಯಕಾರಿ ಆಕೃತಿಗಳು ಅಧಿಕಾರ ದಾಹದಿಂದ ಸೀಳುನಾಯಿ ಗಳಂತೆ ದೇಶವನ್ನು ಕಿತ್ತು ತಿನ್ನಲು ಕಾಯುತ್ತಿದ್ದಾರೆ. ಇಂಥವರಿಗೆ ದೇಶವನ್ನು ಕೊಟ್ಟರೆ ಪಾಕಿಸ್ತಾನ ಬಾಂಗ್ಲದೇಶ ದಲ್ಲಿರುವ ಆತಂಕವಾದ ಭಯೋತ್ಪಾದಕ ವಾತಾವರಣ ಭಾರತಕ್ಕೆ ಕಟ್ಟಿಟ್ಟ ಬುತ್ತಿ.