Friday, 20th September 2024

ಧಾವಂತದ ಜೀವನದಲ್ಲಿ ಮೌನದ ಮಹತ್ವ

ಅಭಿವ್ಯಕ್ತಿ

ಗಣಪತಿ ವಿ.ಅವಧಾನಿ

ಮಾತು ಬೆಳ್ಳಿ, ಮೌನ ಬಂಗಾರ. ನಾವೆ ಈ ಗಾದೆ ಮಾತು ಕೇಳಿಯೇ ಇದ್ದೇವೆ. ಈ ಗಾದೆಯು ಮಾತು ಮತ್ತು ಮೌನದ ನಡುವೆ ಇರುವ ಅಂತರವನ್ನು ತಿಳಿಸುತ್ತದೆ. ಮಾತಿನ ಮುಂದೆ ಮೌನದ ಮಹತ್ವವನ್ನು ಸಾರುವ ಗಾದೆ ಇದು. ವಿವೇಕಿಯಾದವನು ಮೌನಕ್ಕೆ ಮೊರೆ ಹೋದರೆ, ಅವಿವೇಕಿ ಮಾತಿನಲ್ಲಿ ಮರೆಸುತ್ತಾನೆ. ಮಾತಿಗೆ ಬೆಲೆ ಇದೆ.

ಆದರೆ ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ ಇದೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಮುಂತಾದ ಗಾದೆಗಳು ಮಾತಿನ ಬಗ್ಗೆಯೇ ನಿರ್ಮಾಣವಾಗಿವೆ. ಮೌನ ಎಂದರೆ ತಪಸ್ವಿಯಂತೆ ಧ್ಯಾನ ಮಾಡುತ್ತಾ ಕೂರುವುದು ಅಥವಾ ಮುಖ ಗಂಟಿಕ್ಕಿ ಪೆಚ್ಚು ಮೋರೆಯಿಂದ ಕುಳಿತುಕೊಳ್ಳುವದಲ್ಲ. ಮೌನ ಎಂದರೆ ಏನೂ ಮಾಡದೆ ವೇಳೆಯನ್ನು ಹಾಳು ಮಾಡುವುದು ಅಂತಲೂ ಅಲ್ಲ. ಒಬ್ಬನೇ ಮೊಬೈಲ್ ನೋಡುತ್ತಾ ಕೂರುವುದೂ ಅಲ್ಲ.

ಮೌನ ಎಂದರೆ ನನ್ನ ಜೊತೆಗಷ್ಟೇ ನಾನು ಮಾಡುವ ಸಂಭಾಷಣೆ. ಅದರಲ್ಲಿ ಪ್ರಾಮಾಣಿಕತೆ ಇದೆ. ಈಗಿನ ನಮ್ಮ ಧಾವಂತದ ಜೀವನದಲ್ಲಿ ಮೌನಕ್ಕೆ ಅರ್ಥವೇ ಇಲ್ಲವಾಗಿದೆ. ನಾವೆ ಮಾತಿನ ಕೋಟೆಯೊಳಗೆ ಬಂಧಿಯಾಗಿದ್ದೇವೆ. ಸೂರ್ಯೋದಯವನ್ನು ನೋಡುವುದ ರಗಲೀ, ಪ್ರಕೃತಿಯನ್ನು ಆಸ್ವಾದಿಸುವುದರಗಲೀ ನಮಗೆ ಆಸಕ್ತಿಯೇ ಇಲ್ಲ. ಹೊಸ ಜಾಗಕ್ಕೆ ಪ್ರವಾಸಕ್ಕೆ ಹೋದರೂ, ಸೆಲಿ ತೆಗೆಯುವ ಗಡಿಬಿಡಿಯ ನಡುವೆ, ಫೋಟೋಗಳನ್ನು ತೆಗೆದು ಅಪ್ಲೋಡ್ ಮಾಡುವುದರ ನಡುವೆ, ಮೌನದ ನೆನಪಾಗುವುದೇ ಇಲ್ಲ.

ಸೂರ್ಯಸ್ತವನ್ನು ಆಸ್ವಾದಿಸುವುದನ್ನು, ಕಡಲನ್ನು ಗಮನಿಸುವುದನ್ನು, ಕಾಡಿನಸೌಂದರ್ಯವನ್ನು ಸವಿಯುವದನ್ನು ಮರೆತೇ ಬಿಟ್ಟಿದ್ದೇವೆ. ಯಾರಾದರೂ ನಮಗೆ ಏನಾದರೂ ಅಂದಾಗ, ನಾವು ಪ್ರತಿಯಾಗಿ ಉತ್ತರ ಕೊಡದಿzಗ, ಅದರ ಅರ್ಥ ನಮಗೆ
ಅವರಿಗೆ ಉತ್ತರ ಕೊಡಲು ಗೊತ್ತಾಗುತ್ತಿಲ್ಲ ಅಥವಾ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದು ವ್ಯಾಖ್ಯಾನಿಸಬೇಕಿಲ್ಲ. ನಮಗೆ ಅಂದವರು ನಾವು ಗೌರವಿಸುವ ಹಿರಿಯರಾಗಿದ್ದರೆ, ಅವರು ತಪ್ಪಾಗಿ ಹೇಳಿದ್ದರೂ, ಅವರಿಗೆ ನಾವು ತಿರುಗಿ ಹೇಳದೇ ಇರುವುದು ಅವರ ಬಗ್ಗೆ ನಮಗೆ ಇರುವ ಗೌರವವನ್ನು ಅಥವಾ ಆ ಸಂಬಂಧಕ್ಕೆ ನಾವು ಕೊಡುವ ಬೆಲೆಯನ್ನು ಸೂಚಿಸುತ್ತದೆ ಅಷ್ಟೇ.

ಇನ್ನು ನಮಗೆ ಏನಾದರೂ ಅಂದವರು ನಮಗಿಂತ ಚಿಕ್ಕವರಾಗಿದ್ದರೆ, ಅವರದು ತಪ್ಪಾಗಿದ್ದರೆ, ಸುಮ್ಮನಿದ್ದು ನಮ್ಮ ದೊಡ್ಡತನ ವನ್ನು ತೋರಿಸುವುದೇ ಜಾಣತನ. ಅಂತಹ ಪರಿಸ್ಥಿತಿಯಲ್ಲಿ, ಮೌನವಾಗಿರುವುದರ ಮೂಲಕ ‘ನಾವು ಅವರ ಮಾತನ್ನು
ಒಪ್ಪುತ್ತಿಲ್ಲ’ ಎಂಬ ಸಂದೇಶವನ್ನು ಸುಲಭವಾಗಿ ತಲುಪಿಸಬಹುದು. ನಮ್ಮ ಮಾತಿಗೆ ಗೌರವ ಕೊಡದವರಿಗೆ ಮೌನವೇ
ಅತ್ಯುತ್ತಮ ಉತ್ತರ. ಯಾರಾದರೂ ಕಡಿಮೆ ಮಾತನಾಡುವ ವ್ಯಕ್ತಿಯನ್ನು ದಡ್ಡ ಎಂದು ಪರಿಗಣಿಸಬಾರದು. ಕಡಿಮೆ ಮಾತನಾ ಡುವವರು ಸಾಮಾನ್ಯವಾಗಿ ಹೆಚ್ಚೆಚ್ಚು ವಿಚಾರ ಮಾಡುತ್ತಿರುತ್ತಾರೆ.

ಕಡಿಮೆ ಮಾತನಾಡುವುದು ಮತ್ತು ಹೆಚ್ಚು ಕೇಳಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದೇ. ನಾವು ಮಾತಾಡುತ್ತಲೇ ಇದ್ದರೆ, ಬೇರೆಯವರಿಂದ ಕಲಿಯುವುದೇ ಇಲ್ಲ. ಈ ವಿಸ್ತಾರವಾದ ಜಗತ್ತಿನಲ್ಲಿ ನಾನೊಬ್ಬನೇ ಎಲ್ಲವನ್ನೂ ಬಲ್ಲವನು ಅಥವಾ ನಾನೊಬ್ಬನೇ ಎಲ್ಲವನ್ನೂ ಕಲಿಯುತ್ತೇನೆ ಎನ್ನವುದು ಮೂರ್ಖತನವೇ ಸರಿ. ನಾವು ಯಾವುದೇ ಕ್ಷೇತ್ರದಲ್ಲಿರಲಿ; ಬೇರೆಯವರಿಂದ ಕಲಿಯುವುದು ಸಾಕಷ್ಟಿರುತ್ತದೆ. ಕಡಿಮೆ ಮಾತನಾಡಿ ಹೆಚ್ಚು ಕೇಳಿಸಿಕೊಳ್ಳುವುದರಲ್ಲಿ ಸಾಕಷ್ಟು ಲಾಭ ಇದೆ. ಅನೇಕರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗುತ್ತಾರೆ.

ಅಗತ್ಯ ಇದ್ದಷ್ಟೇ ಮಾತಾಡುವುದು ಯಾವಾಗಲೂ ಒಳ್ಳೆಯದೇ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಕ್ಕಿಂತ ಕೆಲವು ಸಲ
ಸಂವಹನಕ್ಕೆ ಪ್ರಾಮುಖ್ಯ ಜಾಸ್ತಿ. ಸಂವಹನ ಎಂದರೆ ಮುಖ್ಯವಾಗಿ ಮಾತು. ಅನೇಕ ಸಂದರ್ಭಗಳಲ್ಲಿ ಚೆನ್ನಾಗಿ ಮಾತನಾಡಲು ಬಲ್ಲವರು, ಉಳಿದವರು ಅವರಿಗಿಂತ ನೈಪುಣ್ಯತೆ ಹೊಂದಿದ್ದರೂ, ಉಳಿದವರಿಗಿಂತ ಬುದ್ಧಿವಂತರು ಅನ್ನಿಸಿಕೂಳ್ಳುತ್ತಾರೆ. ಕಂಪನಿಗಳಲ್ಲಿ ಇಂತಹವರಿಗೆ ಮಣೆ ಹಾಕಲಾಗುತ್ತದೆ. ಮಾತೇ ಬಂಡವಾಳ ಮಾಡಿಕೊಂಡವರು ಅದರಿಂದ ಪ್ರಯೋಜನ ಪಡೆಯುತ್ತಾರೆ.

ವಿಪರ್ಯಾಸವೆಂದರೆ ಇದನ್ನು ಗುರುತಿಸಲು ಹೆಚ್ಚಿನ ಸಂದರ್ಭಗಳಲ್ಲಿ ಕಂಪನಿಯ ಮಾಲೀಕರು, ಉನ್ನತ ದರ್ಜೆಯಲ್ಲಿರುವ
ಅಽಕಾರಿಗಳು ವಿ-ಲರಾಗುತ್ತಾರೆ. ಅಥವಾ ಅವರು ಗುರುತಿಸುವ ಕಾಲಕ್ಕೆ ತುಂಬಾ ತಡವಾಗಿರುತ್ತದೆ. ಇದು ದೌರ್ಭ್ಯಾಗ್ಯವೇ ಸರಿ.
ಮೌನ ಎನ್ನುವುದು ಖಾಲಿತನವಲ್ಲ. ನಮ್ಮ ಸಿಟ್ಟು, ಮನಸ್ಸಿನ ತಳಮಳ, ಬೇಸರ ಎಲ್ಲವನ್ನೂ ನಿವಾರಿಸುವ ತಾಕತ್ತು ಮೌನಕ್ಕಿದೆ. ಯಾರಾದರೂ ನಮಗೆ ಬೈದಾಗ ಮಾತಿನಿಂದಲೇ ಉತ್ತರ ಕೊಡಬೇಕೆಂದೇನೂ ಇಲ್ಲ.

ಸಿಟ್ಟಿನಿಂದ ಉತ್ತರ ಕೊಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡುವದರ ಬದಲು ಆ ಕ್ಷಣದಲ್ಲಿ ಮೌನವಾಗಿರುವುದೇ
ಲೇಸು. ಕೆಲವು ಕ್ಷಣಗಳ ಮೌನ ನಮ್ಮಲ್ಲಿ ಬಂದ ಕೋಪವನ್ನು ಶಮನ ಮಾಡುತ್ತದೆ. ನಮ್ಮಲ್ಲಿ ನವ ಚೈತನ್ಯ ತುಂಬುವ ಶಕ್ತಿ ಮೌನಕ್ಕೆ ಇದೆ. ಮೌನದಲ್ಲಿ ಕಲ್ಮಶವಿಲ್ಲ. ಕೆಲವೊಮ್ಮೆ ಮಾತು ಸುಳ್ಳಾಗಬಹುದು ಅಥವಾ ಅರ್ಧ ಸತ್ಯವಾಗಬಹುದು. ಆದರೆ
ಮೌನ ಯಾವಾಗಲೂ ಪೂರ್ಣ ಸತ್ಯ. ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮೌನ ಬೇಕೇ ಬೇಕು.

ಮೌನ ಇದ್ದಲ್ಲಿ ಜಗಳ ಇರಲು ಸಾಧ್ಯವಿಲ್ಲ. ನಾವು ಎಲ್ಲಾ ಇರಲಿ, ಒಂದಷ್ಟು ಕೆಲಸ ಮಾಡಿ ಒತ್ತಡ ಅನ್ನಿಸಿದಾಗ, ಕೆಲಸ
ಚೂರು ನಿಲ್ಲಿಸಿ ಒಮ್ಮೆ ಮೌನವಾಗಿರಲು ಕಲಿಯಬೇಕು. ಸುತ್ತಲಿನ ಪ್ರಕೃತಿಯನ್ನೋ, ಚಿಕ್ಕ ಮಕ್ಕಳ ಆಟವನ್ನೋ ಗಮನಿಸುತ್ತಿದ್ದರೆ, ಒಂದಿಷ್ಟು ನಿರಾಳವಾಗಬಹುದು. ನಮ್ಮೆಲ್ಲ ಪ್ರಶ್ನೆಗಳಿಗೂ ಮಾತ ಉತ್ತರ ಸಿಗದಿರಬಹುದು; ಆದರೆ ಮೌನದಲ್ಲಿ ಖಂಡಿತಾ ಉತ್ತರ ವಿರುತ್ತದೆ. ಒಂದಿಷ್ಟು ಹೊತ್ತಿನ ಮೌನಕ್ಕೆ, ನಮ್ಮಲ್ಲಿ ಜೀವನೋತ್ಸಾಹವನ್ನು ಮರಳಿ ತುಂಬುವ ಶಕ್ತಿ ಇದೆ.

ಮಾತಿಗಿಂತ ಮೌನ ಮಹತ್ವ ಅಂದಾಕ್ಷಣ, ಯಾರೂ ಈ ಜಗತ್ತಿನಲ್ಲಿ ಮಾತೇ ಆಡಬಾರದು ಎಂದಲ್ಲ. ಆದರೆ ಮಾತನ್ನು
ಹಿತಮಿತ ವಾಗಿ ಬಳಸುವದರಿಂದ, ನಮಗೆ ಮತ್ತು ನಮ್ಮ ಸುತ್ತಮುತ್ತಲಿನವರಿಗೆ ಒಳ್ಳೆಯದು. ಸರ್ವಜ್ಞನು ‘ಆಡದಲೆ
ಮಾಡುವನು ರೂಢಿಯೊಳಗುತ್ತಮನು’ ಎಂದು ಹೇಳಿದ್ದಾನೆ.

ಮಾತಾಡಿ ಮಾನ ಕಳೆದುಕೊಳ್ಳುವುದಕ್ಕಿಂತ, ಮೌನವಾಗಿದ್ದುಕೊಂಡು ಕೆಲಸ ಮಾಡುವುದು ಮೇಲು. ಸಾಧಕರು ಹೆಚ್ಚು
ಮಾತಾಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತಾರೆ. ಮಾತು ಮತ್ತು ಮೌನದ ನಡುವೆ ಸಮತೋಲನ ಮಾಡಿ ಜೀವನ
ನಡೆಸುವು ದರಲ್ಲಿ ಅರ್ಥವಿದೆ. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದಾಗ, ನಮ್ಮ ಮಾತಿನ ಬೆಲೆಯೂ ಹೆಚ್ಚುತ್ತದೆ.