ಅವಲೋಕನ
ಡಾ.ಸತೀಶ ಕೆ.ಪಾಟೀಲ
ದೇವರನಾಡು ಕೇರಳ ವಿಧಾನಸಭೆ ಚುನಾವಣೆಯತ್ತ ಗಮನಿಸಿದಾಗ ಒಟ್ಟು ೧೪೦ ವಿಧಾನಸಭೆ ಸ್ಥಾನಗಳಿರುವ ಕೇರಳದಲ್ಲಿ ಕಳೆದ ಸಲ ಎಲ್‌ಡಿಎಫ್ ಮೈತ್ರಿಕೂಟವು ೯೧ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎ-
೪೩ ಸ್ಥಾನಗಳನ್ನು, ಇತರ ೨ ಸ್ಥಾನಗಳನ್ನು ಗಳಿಸಿದ್ದವು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ.
ಅದಕ್ಕೆ ಕಾರಣ ವಾಗಿರುವ ಅಂಶಗಳತ್ತ ಗಮನಿಸಿದಾಗ ಮೊದಲನೆಯದು ಆಡಳಿತ ವಿರೋಧಿ ಅಲೆ. ಸಿ.ಎಂ.ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರವು ತೀವ್ರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಸಿ.ಎಂ. ಪಿಣರಾಯಿ ವಿಜಯನ್ ಸರಕಾರ ಚಿನ್ನ ಕಳ್ಳಸಾಗಾಣಿಕೆಯ ಆರೋಪ ಎದುರಿಸುತ್ತಿದೆ ಮತ್ತು ವ್ಯಾಪಕವಾಗಿರುವ ಭ್ರಷ್ಟಾಚಾರದ ಆರೋಪವಿದೆ.
ಇನ್ನು ಪ್ರವಾಹದಂಥ ನೈಸರ್ಗಿಕ ವಿಕೋಪವನ್ನು ನಿಭಾಯಿಸುವಲ್ಲಿ ಸಿ.ಎಂ ವಿಫಲವಾಗಿದ್ದಾರೆ ಎನ್ನುವ ಆರೋಪಗಳು ಕೇಳಿ
ಬರುತ್ತಿವೆ. ಇನ್ನು ಕರೋನಾ ರೋಗ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎನ್ನುವ ಆರೋಪವು ಕೇಳಿ ಬರುತ್ತಿದೆ. ಈ ಆಡಳಿತ ವಿರೋಧಿ ಅಂಶಗಳಿಂದ ಸಹಜವಾಗಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯು.ಡಿ.ಎಫ್. ಮೈತ್ರಿಕೂಟಕ್ಕೆ ಈ ಸಲದ
ಚುನಾವಣೆಯಲ್ಲಿ ಜಯ ಸಾಧಿಸುವ ಕನಸು ಕಾಣುವಂತೆ ಮಾಡಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ ಕೇರಳದಲ್ಲಿರುವ ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ನೇತೃತ್ವದ ಯುಡಿಎಫ್
ಪಡೆಯುವ ಸಾಧ್ಯತೆ ಹೆಚ್ಚಾಗಿರುವುದು ಕೂಡಾ ಯುಡಿಎಫ್ ಮೈತ್ರಿಕೂಟಕ್ಕೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕಳೆದ ಮೂರು ದಶಕಗಳಿಂದ ಕೇರಳದ ಮತದಾರರು ನಿರಂತರ ಬದಲಾವಣೆ ಮಾಡುತ್ತಾ ಬಂದಿದ್ದಾರೆ. ಈ ಅಂಶವು ಯುಡಿಎಫ್ಗೆ
ಅಽಕಾರದ ಕನಸು ಕಾಣುವಂತೆ ಮಾಡಿದೆ. ಇನ್ನು ಸಿ.ಎಂ. ಪಿಣರಾಯಿ ವಿಜಯನ್ ಅವರ ನೇತೃತ್ವದ ಎಲ್‌ಡಿಎಫ್ ಸರಕಾರ ಉತ್ತಮ ಅಭಿವೃದ್ಧಿ ಕಾರ್ಯ ಗಳನ್ನು ಕಳೆದ ಐದು ವರ್ಷದಲ್ಲಿ ಮಾಡಿದ್ದಾರೆ ಎನ್ನುವ ಅಭಿಪ್ರಾಯವು ಇದೆ.
ಆದರೆ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿರುವುದರಿಂದ ಈ ಸಲ ಕೇರಳ ರಾಜ್ಯದಲ್ಲಿ ಕಾಂಗೆಸ್ ನೇತೃತ್ವದ ಯುಡಿಎಫ್
ಮೈತ್ರಿಕೂಟವು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ರಾಜ್ಯದಲ್ಲಿ ಬಿಜೆಪಿ ನಿಧಾನವಾಗಿ ಬೆಳವಣಿಗೆ ಹೊಂದುತ್ತಿದೆ. ಮೆಟ್ರೊಮ್ಯಾನ್ ಶ್ರೀಧರ ಅವರು ಈ ಪಕ್ಷಕ್ಕೆ ಎಷ್ಟು ಮತಗಳನ್ನು ತರುತ್ತಾರೆ ಎನ್ನುವ ಕುತೂಹಲ ಮಾತ್ರ ಇದ್ದೆ ಇದೆ. ಇನ್ನು ಇನ್ನೊಂದು ಪ್ರಮುಖ ರಾಜ್ಯವಾದ ಅಸ್ಸಾಂನತ್ತ ದೃಷ್ಟಿ ಹರಿಸಿದಾಗ ಒಟ್ಟು ೧೨೬ ವಿಧಾನ ಸಭೆಯ ಸ್ಥಾನ ಗಳಿರುವ ಈ ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ೬೦ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು.
ಕಾಂಗ್ರೆಸ್ ೧೯, ಎಜಿಪಿ ೧೩, ಎಐಯುಡಿಎಫ್ ೧೪, ಬಿಪಿಎಫ್ ೧೧, ಇತರ ೧೨ ಸ್ಥಾನಗಳನ್ನು ಗಳಿಸಿದ್ದವು. ಆದರೆ ಈ ಸಲದ
ಚುನಾವಣೆಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೂ ಈ ಸಲವು ಸಿಎಂ ಸರ್ಬಾನಂದ ಸೋನು ವಾಲ್ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾದರೆ ಇದಕ್ಕೆ ಕಾರಣ ವಾಗಿರುವ ಅಂಶಗಳತ್ತ ಗಮನಿಸಿದಾಗ
ಮೊದಲನೆಯದು ಸಿ.ಎಂ. ಸರ್ಬಾನಂದ ಸೋನು ವಾಲ್‌ರ ಜನಪ್ರಿಯತೆಯು ಬಿಜೆಪಿಗೆ ಕೈ ಹಿಡಿಯುವ ಸಾಧ್ಯತೆಯಿದೆ. ಏಕೆಂದರೆ ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ನಾಯಕತ್ವದ ಸಮಸ್ಯೆ ಕಾಡುತ್ತಿದೆ.
ಕಾಂಗ್ರೆಸ್ ನಾಯಕ ೧೫ ವರ್ಷಗಳ ಕಾಲ ನಿರಂತರ ಆಡಳಿತ ನಡೆಸಿದ ತರುಣ ಗೋಗೇಯ ನಿಧನದ ನಂತರ ಪಕ್ಷವನ್ನು ಮುನ್ನಡೆಸುವ ನಾಯಕನ ಕೊರತೆಯನ್ನು ಕಾಂಗೆಸ್ ಪಕ್ಷವು ಎದುರಿಸುತ್ತಿದೆ. ತರುಣ ಗೋಗೇಯ ಪುತ್ರ ಸಂಸದರಾಗಿರುವ ಗೌರವ
ಗೋಗೇಯ ತಕ್ಕಮಟ್ಟಿನ ಜನಪ್ರಿಯತೆಯನ್ನು ಹೊಂದಿದ್ದರೂ ತಂದೆಯಂತೆ ಇಡೀ ರಾಜ್ಯದ ತುಂಬಾ ಪ್ರಭಾವ ಹೊಂದಿಲ್ಲದಿರು ವುದು ಈ ಅಂಶವು ಬಿಜೆಪಿ ಪಕ್ಷಕ್ಕೆ ವರವಾದರೆ ಇದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಗಬಹುದು.
ಇನೊಂದು ಪ್ರಮುಖ ಅಂಶವೆಂದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎನ್ನುವ ವಿಚಾರ ಮತ್ತು ನರೇಂದ್ರ ಮೋದಿ ಅವರ ಜನಪ್ರಿಯತೆಯು ತಮ್ಮ ನೆರವಿಗೆ ಬರುತ್ತದೆ ಎನ್ನುವ
ಲೆಕ್ಕಾಚಾರ ಬಿಜೆಪಿಯದ್ದು. ಈ ಮೇಲಿನ ಅಂಶಗಳಿಂದ ಮತ್ತೆ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಅನುಕೂಲಕರ ಅಂಶಗಳತ್ತ ಗಮನ ಹರಿಸಿದಾಗ ಮೊದಲನೆಯದು
ಕೇಂದ್ರ ಸರಕಾರದ ವಿರುದ್ಧ ಜನರ ಮುನಿಸು ಅಗತ್ಯ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿ ಇತರ ವಸ್ತುಗಳ ಬೆಲೆ ಏರಿಕೆಯಿಂದ ಜನರ ಅಸಮಾಧಾನ ಹೆಚ್ಚುತ್ತಿದೆ.
ಅದು ಅಲ್ಲದೆ ಕೇಂದ್ರದ ನೀತಿಗಳಾದ ಸಿಎಎ, ಎನ್‌ಆರ್‌ಸಿ ಈ ಅಂಶಗಳ ಜತೆಗೆ ಸ್ವಲ್ಪ ಮಟ್ಟಿನ ಆಡಳಿತ ವಿರೋಧಿ ಅಲೆ ಈ ಅಂಶಗಳು ತಮ್ಮ ನೆರವಿಗೆ ಬರುತ್ತವೆ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ಪಕ್ಷವು ಮಹಾ ಮೈತ್ರಿಕೂಟವನ್ನು ರಚಿಸಿಕೊಂಡಿದ್ದು, ಎಐಯುಡಿಎಫ್, ಎಡಪಕ್ಷಗಳು, ಅಂಚಲಿಕ ಗಣ ಮೋರ್ಚಾ ಪಕ್ಷಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ಈ ಮೈತ್ರಿಕೂಟವು ತಮಗೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ವನ್ನು ಕಾಂಗ್ರೆಸ್ ಪಕ್ಷವು ಹಾಕಿಕೊಂಡಿದೆ.
ಇನ್ನು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿ ನೀಡುತ್ತೇವೆ ಎನ್ನುವ ಭರವಸೆಯನ್ನು ಕಾಂಗ್ರೆಸ್ ಪಕ್ಷವು ನೀಡಿದೆ. ಈ ಎಲ್ಲಾ ಅಂಶಗಳು ಈ ಚುನಾವಣೆ ಯಲ್ಲಿ ತಮ್ಮ ನೆರವಿಗೆ ಬರುತ್ತವೆ ಎನ್ನುವ ಆಶಾಭಾವನೆಯನ್ನು ಕಾಂಗ್ರೆಸ್ ಪಕ್ಷವು
ಇಟ್ಟುಕೊಂಡಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅಸ್ಸಾಂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ೩೦ ಸ್ಥಾನಗಳ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ೧೫, ಎಐಎಡಿಎಂಕೆ ೪, ಎಐಎನ್‌ಆರ್ ೭, ಡಿಎಂಕೆ ೩, ಇತರ ೧ ಸ್ಥಾನಗಳನ್ನು ಗಳಿಸಿದ್ದವು. ಈ ರಾಜ್ಯದಲ್ಲಿ ೫ ವರ್ಷಗಳ ಕಾಲ ಆಡಳಿತ ನಡೆಸಿದ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಪಕ್ಷವು ಈ ಸಲದ ಚುನಾವಣೆಯಲ್ಲಿ ನಾರಾಯಣ ಸ್ವಾಮಿ ಅವರ ಜನಪ್ರಿಯತೆಯಿಂದ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಕಾಂಗ್ರೆಸ್ ಪಕ್ಷದ ಆಸೆಗೆ ಪಕ್ಷಾಂತರ ಭಂಗ ತರುವ ಸಾಧ್ಯತೆ ಇದೆ.
ಕೆಲ ಕಾಂಗ್ರೆಸ್ ಪಕ್ಷದ ಶಾಸಕರು ಎಐಎಡಿಎಂಕೆ ಪಕ್ಷವನ್ನು ಸೇರುತ್ತಿರುವುದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಗುತ್ತದೆ ಎನ್ನುವ ಪ್ರಶ್ನೆ ಉಂಟಾಗುತ್ತಿದೆ. ಆದರೂ ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದೊಂದಿಗೆ ಮೈತ್ರಿಕೂಟ ರಚನೆ ಮಾಡಿದ್ದು ತಮಗೆ ವರವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದೆ. ಇನ್ನು ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿಕೂಟ ರಚನೆ ಮಾಡಿಕೊಂಡಿರುವ ಬಿಜೆಪಿ ತಾವು ಈ ರಾಜ್ಯದಲ್ಲಿ ಆಧಿಪತ್ಯ ಸ್ಥಾಪಿಸುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿ ಇದೆ. ನಿಧಾನವಾಗಿ ಹೆಚ್ಚುತ್ತಿರುವ ಬಿಜೆಪಿ ವರ್ಚಸ್ಸಿನಿಂದ ಅದು ಅಧಿಕಾರದ ಆಸೆಯನ್ನಿಟ್ಟು ಕೊಂಡಿದೆ.
ಈ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟ ಗಳ ನಡುವೆ ನೇರ ಸ್ಪರ್ಧೆಯು ಈ ಕೇಂದ್ರಾಡಳಿತ ಪ್ರದೇಶದಲ್ಲಿ ಏರ್ಪಟ್ಟಿದೆ. ಒಟ್ಟಿನಲ್ಲಿ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಪಂಚರಾಜ್ಯಗಳ
ವಿಧಾನಸಭೆಯ ಚುನಾವಣೆಯಲ್ಲಿ ಮತದಾರ ಪ್ರಭು ಯಾವ ಪಕ್ಷ, ಯಾವ ಮೈತ್ರಿಕೂಟಕ್ಕೆ ಜೈಕಾರ ಹಾಕುತ್ತಾನೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಮೇ ೨ರವರೆಗೆ ಕಾಯಲೇಬೇಕು.