ಯಶೋಗಾಥೆ
ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ.
ಮುರುಗೇಶ ಆರ್. ನಿರಾಣಿ ಶಾಸಕರು, ಅಧ್ಯಕ್ಷರು ನಿರಾಣಿ ಉದ್ಯಮ ಸಮೂಹ
ಮುಂಬೈ ವಿಶ್ವವಿದ್ಯಾಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ನಮ್ಮ ಮಗ ‘ವಿಶಾಲ’ ಇತ್ತೀಚೆಗೆ *
ಮಿಲಿನಿಯರ್‌ಸ್-ದಲಿತ ಕೋಟ್ಯಾಾಧಿಪತಿಗಳು) ಇಂಗ್ಲಿಿಷ್ ಪುಸ್ತಕ ತಂದು ಇದನ್ನು ಓದಲೇಬೇಕು ಎಂದು ನನಗೆ ಆಜ್ಞೆಯನ್ನೇ ಮಾಡಿದ. ಬಡತನ, ಜಾತಿಯ ಕೀಳರಿಮೆ, ಉಳ್ಳವರ ದರ್ಪ ಅಧಿಕಾರಿಗಳ ಕಿರುಕುಳ ಎಲ್ಲವನ್ನು ಧೈರ್ಯವಾಗಿ ಗೆದ್ದ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆೆ ಸೇರಿದ 15 ಯುವ ಉದ್ಯಮಿಗಳ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ. ಈ ಕೃತಿಯ ಪ್ರತಿಯೊಂದು ಲೇಖನ ಹೊಸ ಜಗತ್ತನ್ನು ತೆರೆದಿಡುತ್ತದೆ. ಇನ್ಫೋೋಸಿಸ್‌ನ ನಂದನ್ ನಿಲೇಕಣಿ ಈ ಪುಸ್ತಕ ಮೆಚ್ಚಿಿ ಒಂದು ಟಿಪ್ಪಣಿ ಕೂಡ ಬರೆದಿದ್ದಾಾರೆ ಎಂದು ವಿಶಾಲ ವಿವರಿಸಿದ. ಅವನ ಮಾತು ಕೇಳಿ ತುಂಬಾ ಸಂತೋಷವಾಯಿತು. ಎಲ್ಲ ಒತ್ತಡಗಳನ್ನು ಪಕ್ಕಕ್ಕೆೆ ಸರಿಸಿ ಈ ಪುಸ್ತಕ ಬಹಳ ಆಸಕ್ತಿಿಯಿಂದ ಓದಿದೆ. ಮಹಾರಾಷ್ಟ್ರದ ಪತ್ರಿಿಕಾ ರಂಗ-ಟಿವಿ ಮಾಧ್ಯಮದ ಪ್ರಮುಖ ಮಿಲಿಂದ್ ಖಾಂಡೆಕರ ಈ ಕೃತಿಯ ಲೇಖಕರು. ಪುಸ್ತಕ ಸಿದ್ಧಪಡಿಸುವಲ್ಲಿ ಡಾ. ವಂದನಾಸಿಂಗ್, ರೇಣು ತಳವಾರ್ ನೆರವಾಗಿದ್ದಾಾರೆ. 210 ಪುಟಗಳ ಈ ಪುಸ್ತಕ ದಸರಾ ಹಬ್ಬದ ನಡುವೆ ಓದಿ ಮುಗಿಸಿದೆ. ನಿಜಕ್ಕೂ ಹಬ್ಬ ಅರ್ಥ ಪೂರ್ಣವಾಗಿ ಆಚರಿಸಿದ ಅನುಭವವಾಯಿತು.
ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಈ ಕೃತಿಯಲ್ಲಿವೆ. ಎರಡು ಹೊತ್ತಿಿನ ಊಟಕ್ಕೂ ಪರದಾಡುತ್ತಿಿದ್ದ ಈ 15 ಉದ್ಯಮಿಗಳು ಈಗ 55 ರಿಂದ 70 ವರ್ಷ ವಯಸ್ಸಿಿನ ಗಡಿಯಲ್ಲಿದ್ದಾಾರೆ. ಇವರೆಲ್ಲ 70-80 ರ ದಶಕದಲ್ಲಿ ಉದ್ದಿಮೆಗಳನ್ನು ಕಟ್ಟುವ ಕನಸು ಕಾಣತೊಡಗಿದವರು. ಆ ಅವಧಿಯಲ್ಲಿ ಸಾಮಾಜಿಕ ಕಟ್ಟಳೆಗಳು ಇನ್ನು ಬಿಗಿಯಾಗಿದ್ದವು. ಅಂಥಹ ಸೂಕ್ಷ್ಮ ಪರಿಸ್ಥಿಿತಿ ಎದುರಿಸಿ ಇವರೆಲ್ಲ ಬೆಳೆದಿದ್ದಾಾರೆ.
ಮುಂಬೈಯಲ್ಲಿ ಬಹು ದೊಡ್ಡ ಉದ್ಯಮಿಯಾಗಿ ಬೆಳೆದ ಡಾ. ಅಶೋಕ ಖಾಂಡೆ ಕುರಿತ ಮೊದಲು ಲೇಖನ ಎಲ್ಲ ಯುವಕರು ಓದಲೇಬೇಕು. ಅಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಿ ಜಿಲ್ಲೆೆಯ ತಾಸಗಾಂವ್ ತಾಲೂಕಿನಲ್ಲಿ ಪೆಡ್ಡ ಎಂಬ ಒಂದು ಹಳ್ಳಿಿಯಿದೆ. ಇದು ಅಶೋಕ ಖಾಂಡೆಯವರ ಹುಟ್ಟೂರು. ಕರ್ನಾಟಕದ ಗಡಿಗೆ ಹೊಂದಿರುವ ಈ ಊರಿನಲ್ಲಿ ಅರ್ಧಕ್ಕೂ ಹೆಚ್ಚು ಕನ್ನಡ ಮಾತನಾಡುವ ಜನರಿದ್ದಾಾರೆ. ಈ ಗ್ರಾಾಮದ ಮಧ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಕಟ್ಟಿಿದ ಸಿದ್ದೇಶ್ವರ ದೇವಾಲಯವಿದೆ. ಬಾಗಲಕೋಟ ಜಿಲ್ಲೆೆಯ ನಮ್ಮ ಬೀಳಗಿ ಪಟ್ಟಣ ಸಿದ್ದೇಶ್ವರ ಗುಡಿಯ ಮಾದರಿಯಲ್ಲಿಯೇ ಪೆಡ್ಡ ಗ್ರಾಾಮದ ಗುಡಿ ನಿರ್ಮಿಸಿರುವುದು ಒಂದು ವಿಶೇಷ.
ಈ ಗುಡಿಯ ಕಟ್ಟಡ ತುಂಬ ಸಿಥಿಲಗೊಂಡಿದ್ದರಿಂದ ಜೀರ್ಣೋಧಾರ ಕೈಗೊಳ್ಳಲು ಗ್ರಾಾಮಸ್ಥರು ನಿರ್ಧರಿಸಿದರು. ಈ ಗ್ರಾಾಮದಲ್ಲಿಯೇ ಹುಟ್ಟಿಿ ಬೆಳೆದ ಅಶೋಕ ಖಾಡೆ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾಾರೆ. ಮುಂಬೈ ನಗರದಲ್ಲಿ ವಾರ್ಷಿಕ 1600 ಕೋಟಿ ರು. ವ್ಯವಹಾರ ನಡೆಸುವ ಬೃಹತ್ ಸಂಸ್ಥೆೆಯನ್ನು ಅವರು ಕಟ್ಟಿಿದ್ದಾಾರೆ. ಅವರು ಸ್ಥಾಾಪಿಸಿದ * ಈ ್ಛ್ಛಟ್ಟಛಿ ಉ್ಞಜಜ್ಞಿಿಛಿಛ್ಟಿಿಜ್ಞಿಿಜ ಇಟಞ್ಞ ಸಂಸ್ಥೆೆಯಲ್ಲಿ 4500 ಜನ ಕೆಲಸ ಮಾಡುತ್ತಿಿದ್ದಾಾರೆ. ಈ ಸಂಸ್ಥೆೆ ದೇಶ ವಿದೇಶಗಳಲ್ಲಿ ತೈಲ ಬಾವಿ ತೋಡುವುದು. ಮೇಲು ಸೇತುವೆ ನಿರ್ಮಾಣ, ಕಟ್ಟಡ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡುತ್ತಿಿದೆ. ಅವರಿಂದ ಗುಡಿಯ ಜೀರ್ಣೋದ್ಧಾಾರಕ್ಕೆೆ 10 ಲಕ್ಷ ರು. ದೇಣಿಗೆ ಕೇಳಲು ಜೀರ್ಣೋದ್ಧಾಾರ ಸಮಿತಿಯ ಕೆಲವು ಹಿರಿಯರು ಮುಂಬೈಗೆ ತೆರಳಿದ್ದರು.
ತಮ್ಮ ಹುಟ್ಟೂರಿನಿಂದ ಆಗಮಿಸಿದ ಹಿರಿಯರನ್ನು ಉದ್ಯಮಿ ಅಶೋಕ ಖಾಡೆ ತುಂಬ ಪ್ರೀತಿ ಗೌರವದಿಂದ ಸ್ವಾಾಗತಿಸಿದರು. ಸ್ವತಃ ಉಪಹಾರ, ಟೀ ಕೊಟ್ಟು ಅತಿಥಿ ಸತ್ಕಾಾರ ಮಾಡಿದರು. ಎಲ್ಲ ಶಿಷ್ಟಾಾಚಾರ ಮುಗಿದ ಮೇಲೆ ಹಿರಿಯರು ತಾವು ಬಂದ ಉದ್ದೇಶ ವಿವರಿಸಿ ದೇವಸ್ಥಾಾನ ಜೀರ್ಣೋದ್ಧಾಾರಕ್ಕೆೆ 10 ಲಕ್ಷ ರು. ದೇಣಿಗೆ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ‘ಅಶೋಕ ತಮ್ಮ ಚೆಕ್‌ಬುಕ್ ತಂದು 1 ಕೋಟಿ ರು. ಚೆಕ್ ಬರೆದು ಹಿರಿಯರ ಕೈಗೆ ನೀಡಿದರು’. ಹತ್ತು ಲಕ್ಷ ರು. ಕೇಳಿದರೆ ಐದು ಲಕ್ಷ ಆದರೂ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರಿಗೆ ತುಂಬ ಅಚ್ಚರಿಯಾಯಿತು. ‘ಸಿದ್ದೇಶ್ವರ ದೇವಸ್ಥಾಾನ ಜೀರ್ಣೋದ್ಧಾಾರ ಮಾಡಿ ಚೆನ್ನಾಾಗಿ ಕಟ್ಟಬೇಕು. ಇನ್ನು ಹೆಚ್ಚಿಿಗೆ ಹಣ ಬೇಕಾದರೆ ನಾನು ಕೊಡಲು ಸಿದ್ಧ’ ಎಂದು ಅಶೋಕ ಹೇಳಿದರು. ಸ್ವಲ್ಪ ತಡೆದು ‘ನನ್ನದೊಂದು ಸಲಹೆ ಇದೆ. ನೀವು ಹಿರಿಯರು ಮನಸಾರೆ ಪಾಲಿಸಬೇಕು’ ಎಂದು ಅಶೋಕ ಕೇಳಿ ಕೊಂಡರು.
ಖಂಡಿತವಾಗಿ ಪಾಲಿಸುತ್ತೇವೆ. ನಿಮ್ಮ ಸಲಹೆ ಹೇಳಿ ಎಂದು ಎಲ್ಲ ಹಿರಿಯರು ಒಂದೇ ಧ್ವನಿಯಲ್ಲಿ ಕೇಳಿದರು. ಅಶೋಕ ಒಂದು ಕ್ಷಣ ಮೌನವಾಗಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ನಿಧಾನವಾಗಿ ಹೇಳಿದರು. ನಮ್ಮದು ದಲಿತ ಕುಟುಂಬ. ನಾನು ಚಮ್ಮಾಾರನ ಮಗ ಎಂಬ ಕಾರಣಕ್ಕೆೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆೆ ಬಿಟ್ಟಿಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆೆಯಲ್ಲಿ ಬರಲೂ ಅವಕಾಶ ಸಿಕ್ಕಿಿಲ್ಲ. ‘ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ’ ಎಂದು ಬೋರ್ಡ್ ಹಾಕಿರಿ. ಹಾಗೆಯೇ ಎಲ್ಲರ ಪ್ರವೇಶಕ್ಕೆೆ ಮುಕ್ತ ಅವಕಾಶ ಮಾಡಿರಿ ಎಂದು ಅಶೋಕ ನಿಧಾನವಾಗಿ ಹೇಳಿದರು.
ದೇವಸ್ಥಾಾನ ಜೀರ್ಣೋದ್ಧಾಾರ ಕೆಲಸ ಸಕಾಲಕ್ಕೆೆ ಮುಗಿಯಿತು. ಈಗ ಗುಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಲಭ್ಯವಾಗಿದೆ. ಊರ ಹಿರಿಯರೆಲ್ಲ ಸೇರಿ ಅಶೋಕ ಅವರನ್ನು ಗ್ರಾಾಮಕ್ಕೆೆ ಆಮಂತ್ರಿಿಸಿ ಗುಡಿಯಲ್ಲಿಯೇ ಸನ್ಮಾಾನಿಸಿದರು. ವಿದ್ಯಾಾರ್ಥಿಯಾಗಿದ್ದಾಾಗ ಗುಡಿ ಪ್ರವೇಶ ನಿರಾಕರಿಸಿದವರೇ ಈಗ ಗುಡಿಯ ಒಳಗಡೆ ಕರೆದು ಸನ್ಮಾಾನಿಸಿದ್ದಕ್ಕೆೆ ಅಶೋಕ ಅವರಿಗೆ ಬಹಳ ಸಂತೋಷವಾಗಿದೆ. ಅಶೋಕ ಅವರು ಗ್ರಾಾಮದ ನೂರಾರು ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಿಿದ್ದಾಾರೆ. ಈ ಗ್ರಾಾಮದಲ್ಲಿ ಅಸ್ಪಶ್ಯತೆಯ ಆಚರಣೆ ಪೂರ್ಣ ತೊಡೆದು ಹಾಕಲಾಗಿದೆ.
‘ತಮ್ಮ ಗಳಿಕೆಯ ಸಂಪತ್ತನ್ನು ಸಾಮಾಜಿಕ ಕ್ರಾಾಂತಿ ಹಾಗೂ ಬದಲಾವಣೆಗೆ ಅಶೋಕ ಅವರು ಬಳಸುತ್ತಿಿರುವುದು ನಿಜಕ್ಕೂ ಶ್ಲಾಾಘನೀಯ’. ಅಶೋಕ ಅವರ ತಂದೆ ಮೋಚಿಯಾಗಿ ಕೆಲಸ ಮಾಡಿ ಬದುಕು ಸಾಗಿಸಿದರು. ಒಂದು ಮರದ ಕೆಳಗೆ ಕುಳಿತು ಅವರು ಕೆಲಸ ಮಾಡುತ್ತಿಿದ್ದರು. ಅಶೋಕ ಅವರು ಇಂದಿಗೂ ಆ ಮರವನ್ನು ಸ್ಮರಿಸುತ್ತಾಾರೆ ಮತ್ತು ಆರಾಧಿಸುತ್ತಾಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಾಾಹಂ ಲಿಂಕನ್ ಅವರ ತಂದೆ ಕೂಡ ಮೋಚಿಯಾಗಿ ಕೆಲಸ ಮಾಡುತ್ತಿಿದ್ದರು.
ಅಪಮಾನ ಮಾಡುವ ಉದ್ದೇಶದಿಂದ ಅಮೆರಿಕದ ಲೋಕಸಭೆಯಲ್ಲಿ ಕೆಲವು ಸದಸ್ಯರು ಲಿಂಕನ್ ಮೋಚಿಯ ಮಗ ಎಂದು ಹೀಯಾಳಿಸಿ ಮಾತನಾಡಿದರು. ಲಿಂಕನ್ ಸ್ವಲ್ಪವೂ ವಿಚಲಿತರಾಗದೆ ‘ಹೌದು ನಾನು ಮೋಚಿಯ ಮಗ. ನನ್ನ ತಂದೆ ಅತ್ಯಂತ ಶ್ರದ್ಧೆೆಯಿಂದ ಕಲಾತ್ಮಕವಾಗಿ ಚಪ್ಪಲಿ ಹೊಲಿಯುತ್ತದ್ದರು! ಇದು ನನಗೆ ಹೆಮ್ಮೆೆಯ ಸಂಗತಿ’ ಎಂದು ಉತ್ತರಿಸಿದರು. ವಿರೋಧಿಸಿದವರ ಧ್ವನಿ ಅಡಗಿತು.
ಸಾಮಾಜಿಕ ನ್ಯಾಾಯದ ಪರಿಕಲ್ಪನೆ ಹಾಗೂ ಮನುಷ್ಯತ್ವದ ಚಿಂತನೆ, ಭಾರತಕ್ಕೆೆ ಇಡೀ ವಿಶ್ವವೇ ಮೆಚ್ಚುವಂತಹ ಬೃಹತ್ ‘ಸಂವಿಧಾನ’ ನೀಡಿದ ಮೇರು ಶಿಖರ ಡಾ. ಬಿ.ಆರ್.ಅಂಬೇಡ್ಕರ್‌ಯವರು ಹೇಳಿದ ಹಿತನುಡಿಗಳು ಅವರು ದಲಿತರು ಉದ್ಯಮಿಗಳಾಗಬೇಕು. ಆರ್ಥಿಕ ಸಬಲತೆ ಪಡೆಯಬೇಕು ಅವರೂ ಉದ್ಯೋೋಗ ನೀಡುವ ಶಕ್ತಿಿ ಗಳಿಸಬೇಕು. ಇದರಿಂದ ದಲಿತರು ಕೀಳರಿಮೆ ಗೆದ್ದು ಮುಖ್ಯ ವಾಹಿನಿಯೊಂದಿಗೆ ಬರುತ್ತಾಾರೆ ಎಂಬ ಆಶಯ ಹೊಂದಿದ್ದರು.
ದಲಿತ ಸಮಾಜಕ್ಕೆೆ ಸೇರಿದ ಇನ್ನೊೊಬ್ಬ ಉದ್ಯಮಿ ‘ಭಿಂಗರದೇವಯ್ಯ’ ಅವರು ಖಂಡೋಬಾ ಪ್ರಸನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿಿದ ಕತೆಯನ್ನು ಲೇಖಕರು ಸೊಗಸಾಗಿ ಕಟ್ಟಿಿ ಕೊಟ್ಟಿಿದ್ದಾಾರೆ. ಭಿಂಗರದೇವಯ್ಯಗೆ ಕಾರ್ಖಾನೆ ಕಟ್ಟುವುದಕ್ಕೆೆ ಮೊದಲು ಅನುಮತಿ ನಿರಾಕರಿಸಲಾಗುತ್ತದೆ. ಅವರು ಅರ್ಜಿಯನ್ನು ಹಿಡಿದುಕೊಂಡು ಅಧಿಕಾರಿಗಳ ಬಳಿ ಹೋದರೆ ಯಾರು ಮುಖ ಎತ್ತಿಿ ನೋಡಲಿಲ್ಲ. ‘ದಲಿತ’ ಎನ್ನುವ ಕಾರಣಕ್ಕೆೆ ಅವರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಭಿಂಗರದೇವಯ್ಯ ಒಪ್ಪಿಿಗೆ ಪಡೆಯದೇ ಸಕ್ಕರೆ ಕಾರ್ಖಾನೆಯ ಬದಲಾಗಿ ಒಂದು ಸಣ್ಣ ಡಿಸ್ಟಿಿಲರಿ ಕಟ್ಟಿಿದರು. ಈ ಸಾಧನೆಯನ್ನು ಗಮನಿಸಿದ ಸರಕಾರಿ ಅಧಿಕಾರಿಗಳು ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆೆ ಅನುಮತಿ ನೀಡಿದರು. ಭಿಂಗರದೇವಯ್ಯ ಅವರು ಈಗ ‘ಮಹಾರಾಷ್ಟ್ರದ ನಂಬರ್ ಒನ್ ಕೈಗಾರಿಕಾ ಉದ್ಯಮಿ’ಯಾಗಿ ಬೆಳೆದಿದ್ದಾಾರೆ. ಕಾರ್ಖಾನೆಯ ಸುತ್ತಮುತ್ತಲಿನ ಬಡ ಮಕ್ಕಳಿಗೆ ಶಿಕ್ಷಣಕ್ಕೆೆ ಉದಾರವಾಗಿ ನೆರವು ನೀಡುತ್ತಿಿದ್ದಾಾರೆ. 40 ದಲಿತ ಯುವತಿಯರನ್ನು ದತ್ತು ಪಡೆದು ಸ್ನಾಾತಕೋತ್ತರದ ವರೆಗೆ ಓದಿಸಿದ್ದಾಾರೆ.
ಕಲ್ಪನಾ ಸರೋಜ ಮತ್ತು ಸಾವಿತ್ರಿಿಬೇನ್ ಪರಮಾರ ಎಂಬ ಇಬ್ಬರು ಮಹಿಳೆಯರು ಮುಂಬೈ ನಗರದ ಪ್ರಮುಖ ಉದ್ದಿಮೆಗಳಾಗಿ ಬೆಳೆದಿರುವುದು ಕಥೆ ನನ್ನ ಮನಸ್ಸಿಿನಲ್ಲಿ ಅಚ್ಚಳಿಯದೇ ಉಳಿದಿದೆ. ‘ಕಲ್ಪನಾ ಅಂಕೋಲಾದವರು 13 ನೇಯ ವಯಸ್ಸಿಿಗೆ ವಿವಾಹವಾಗಿ ಮುಂಬೈ’ಗೆ ಆಗಮಿಸಿದರು. ಕೌಟುಂಬಿಕ ಕಿರುಕುಳ ತಾಳಲಾರದೆ ವಿಚ್ಛೇಧನ ಪಡೆದರು. ಮುಂದೆ ಒಂದು ದಿನಕ್ಕೆೆ 2 ರು. ಪಗಾರ ಪಡೆದು ಗಾರ್ಮೆಂಟ್ ಫ್ಯಾಾಕ್ಟರಿಯಲ್ಲಿ ಕೆಲಸ ಮಾಡಿದರು. ಮುಂಬೈ ನಗರದ ಕಲ್ಯಾಾಣದಲ್ಲಿ 2.50 ಲಕ್ಷ ರು. ಕೊಟ್ಟು ಒಂದು ಸಣ್ಣ ನಿವೇಶನ ಖರೀದಿಸಿದರು. ಸಹೋದರ ನೆರವಿನಿಂದ ಬ್ಯಾಾಂಕ್‌ಗಳಲ್ಲಿ ಸಾಲ ಪಡೆದು ಕಟ್ಟಡ ನಿರ್ಮಿಸಿದರು. ವಿಚಿತ್ರ ಎಂದರೆ ಅದು 4.5 ಕೋಟಿ ರು. ಮಾರಾಟವಾಯಿತು. ಇದೇ ಅವರ ಟರ್ನಿಂಗ್ ಪಾಯಿಂಟ್ ಆಯಿತು. ಅವರಿಗೆ ಮುಂಬೈ ನಗರದ ಭೂಗತ ಪಾತಕಿಗಳು ಕಿರುಕುಳ ಕೊಡತೊಡಗಿದರು. ಕಲ್ಪನಾ ನೇರವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಮಾಡಿದರು. ನಂತರ ಅವರು ‘ಕಮಾನಿ ಟ್ಯೂಟ್‌ಸ್ ಕಂಪನಿ’ ಕಟ್ಟಿಿದ್ದು. ಅಹಮದ್ ನಗರ ಜಿಲ್ಲೆೆಯಲ್ಲಿ ಎರಡು ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿಿದ್ದಾಾರೆ. ಹೆಚ್ಚಿಿನ ಷೇರು ಹಣ ಅವರೇ ಹೂಡಿದ್ದಾಾರೆ. ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಿ ಬಂದಿದೆ.
ಸಾವಿತ್ರಿಿ ಬೇನ್ ಪರಮಾರ ಅವರ ಕಥೆ ಮನೆ ಕೆಲಸ ಮಾಡಿ ಬದುಕುವವರಿಗೆ ಒಂದು ಸ್ಫೂರ್ತಿಯ ಸಂದೇಶವಾಗಿದೆ. ಪರಮಾರವರ ಪತಿ ಅಹಮದಾಬಾದ್ ಸಣ್ಣ ವಾಹನ ಚಾಲಕರಾಗಿ ದುಡಿಯುತ್ತಿಿದ್ದರು. ಅವರ ಅಲ್ಪ ಸಂಬಳದಲ್ಲಿಯೇ ಸಾವಿತ್ರಿಿ ಬೇನ್ ಕುಟುಂಬವನ್ನು ಸಲುಹುತ್ತಿಿದ್ದರು. ಅವರ ಅಕ್ಕ ಉರುವಲ ಕಟ್ಟಿಿಗೆ ಮತ್ತು ಅಡಿಗೆಯ ಒಲೆಗೆ ಬಳಸುವ ಕಲ್ಲಿದ್ದಲು ವ್ಯಾಾಪಾರ ಮಾಡುತ್ತಿಿದ್ದರು. ಸಾವಿತ್ರಿಿ ಬೇನ್ ಅವರಿಂದ ಕಟ್ಟಿಿಗೆ ಮತ್ತು ಕಲ್ಲಿದ್ದಲು ಕೈಗಡ ಪಡೆದು ಮಾರಾಟ ಮಾಡತೊಡಗಿದರು. ಬ್ಯಾಾಂಕಿನಿಂದ ಸಾಲ ಪಡೆದು ಕಲ್ಲಿದ್ದಲು ಮಾರಾಟ ಪ್ರಮಾಣವನ್ನು ವಿಸ್ತರಿಸಿದರು. ಇವರ ಪರಿಶ್ರಮವನ್ನು ಗಮನಿಸಿದ ‘ದಲಿತ ವರ್ಗ’ಕ್ಕೆೆ ಸೇರಿದ ಕೆಲವು ಹಿರಿಯರು ಕಲ್ಲಿದ್ದಲು ಆಮದು ಮತ್ತು ರಫ್ತುು ವ್ಯವಹಾರ ಮಾಡಲು ಸಲಹೆ ಮಾಡಿದರು. ಬ್ಯಾಾಂಕಿನವರು ಸಾಲ ನೀಡಲು ನಿರಾಕರಿಸಿದರು. ಖಾಸಗಿ ವ್ಯಕ್ತಿಿಗಳ ಬಳಿ ಹೆಚ್ಚು ಬಡ್ಡಿಿದರದಲ್ಲಿ ಸಾಲ ಪಡೆದು ವ್ಯವಹಾರ ಅಭಿವೃದ್ಧಿಿ ಪಡಿಸಿದರು. ಈ ಉದ್ಯಮಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದರೆ ಇಂದು ಅವರ ಬಳಿ 200 ಯುವಕರು ದುಡಿಯುತ್ತಿಿದ್ದಾಾರೆ. ಇತ್ತೀಚೆಗೆ ಅವರು ಶಿರಾಮಿಕ್‌ಸ್ ಕಾರ್ಖಾನೆ ಸ್ಥಾಾಪಿಸಿದ್ದಾಾರೆ. ಈ ಕಾರ್ಖಾನೆಯ ಉದ್ಘಾಾಟನೆ ಸಂದರ್ಭದಲ್ಲಿ ನೀವು ಉದ್ಯಮಿಯಾಗಿ ಬೆಳೆಯುವುದಕ್ಕೆೆ ಯಾವ ಸ್ಫೂರ್ತಿ ನೀಡುತ್ತಿಿದ್ದಾಾರೆ ಎಂದು ಕೇಳಿದರು. ಸುಮಾರು 72 ವರ್ಷದ ಈ ಅಜ್ಜಿಿ ಬಾಯ್ತುಂಬಾ ನಗುತ್ತ ಆ ಹೇಳಿದರು. ನನಗೆ ನಾನೇ ಸ್ಫೂರ್ತಿ. ಹೊರಗೆ ಸ್ಫೂರ್ತಿಯನ್ನು ಹುಡುಕಿದರೆ ಸಿಗುವುದಿಲ್ಲ. ಅದು ಅಂತರಂಗದ ಆಸ್ತಿಿ ಎಂದು ಹೇಳಿದರು. ಈ ಮಾತು ಉದ್ಯಮಿಯಾಗುವ ಬಯಸುವವರಿಗೆಲ್ಲ ಅನ್ವಯಿಸುತ್ತದೆ.
ಹರಿಯಾಣದ ಉದ್ಯಮಿಯಾದ ಜೆ.ಎಸ್ ಪುಲೈ ಅವರ ಕಥೆ ತೀರ ಭಿನ್ನವಾಗಿದೆ. ಅವರು ಒಂದು ಆಟೋಮೋಬೈಲ್ ಕಂಪನಿಯ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿಿದ್ದು ‘ದಲಿತ’ ಎನ್ನುವ ಕಾರಣಕ್ಕೆೆ ಇವರನ್ನು ಕೆಲಸದಿಂದ ಕಿತ್ತು ಹಾಕಿದರು. ಅಂದು ಪ್ರತಿಜ್ಞೆ ಮಾಡಿ ಹೊರಬಿದ್ದ ಇಂದು ಬಹುದೊಡ್ಡ ಉದ್ಯಮಿಯಾಗಿ ಬೆಳೆದು ಕೆಲಸದಿಂದ ಕಿತ್ತು ಹಾಕಿದವರು ನಾಚುವಂತೆ ಮಾಡಿದ್ದಾಾರೆ.
ರತಿಲಾಲ ಮಕ್ವಾಾನ್, ಮಲ್ಕಿಿತ ಚಂದ, ಭಗವಾನ್ ಗಾವಿ, ಹರ್ಷ ಭಾಸ್ಕರ್, ದೇವಜಿಭಾಯಿ ಮಕ್ವಾಾನ್, ಹರಿಕೃಷ್ಣ ಪಿಪ್ಪಲ, ಅತುಲ್ ಪಾಸ್ವಾಾನ್ ದೇವಕಿನಂದನ, ಜೆ.ಎಸ್ ಫಲಿಯಾ, ಶರತ್‌ಬಾಬು ಮತ್ತು ಸಂಜಯ ಕ್ಷೀರಸಾಗರ ಉದ್ದಿಮೆಗಳಾಗಿ ಬೆಳೆದ ಕಥೆಗಳು ತುಂಬ ರೋಚಕವಾಗಿವೆ. ದಲಿತ ವರ್ಗಕ್ಕೆೆ ಸೇರಿದ ಉದ್ದಿಮೆಗಳೆಲ್ಲ ಸೇರಿ ‘ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆೆ’ ಕಟ್ಟಿಿರುವುದು ಒಂದು ಉತ್ತಮ ಬೆಳವಣಿಗೆ ಈ ಸಂಸ್ಥೆೆ ದೇಶದ ದಲಿತ ವರ್ಗದ ಯುವಕರು ಉದ್ಯಮಿಗಳಾಗಿ ಬೆಳೆಯುವುದಕ್ಕೆೆ ನೆರವಾಗುತ್ತಿಿದೆ. ಬ್ಯಾಾಂಕಗಳನ್ನು, ಶಿಕ್ಷಣ ಸಂಸ್ಥೆೆಗಳನ್ನು, ದವಾಖಾನೆಗಳನ್ನು ದಲಿತ ಉದ್ಯಮಿಗಳು ಕಟ್ಟಿಿದ್ದಾಾರೆ. ಇವುಗಳ ಮೂಲಕ ಜಾತಿ ಮತ್ತು ಧರ್ಮದ ಪರಿಗಣನೆ ಇಲ್ಲದೆ ಎಲ್ಲರಿಗೂ ನೆರವಾಗುತ್ತಿಿದ್ದಾಾರೆ.
ಕೈಗಾರಿಕೆಗಳು ಜಾತ್ಯತೀತ ಸಂಸ್ಥೆೆಗಳು ಕೌಶಲ ಇದ್ದವರಿಗೆ ಕಾರ್ಖಾನೆಗಳ ಬಾಗಿಲುಗಳು ಸದಾ ತೆರೆದಿರುತ್ತವೆ. ಈ ಕೃತಿಯಲ್ಲಿ ಮೂಡಿ ಬಂದ ನಾಯಕರೆಲ್ಲ ಹುಟ್ಟಿಿನಿಂದ ಶ್ರೀಮಂತರಲ್ಲ. ಆದರೆ, ಅವರಿಗೆ ಕನಸುಗಳಿದ್ದವು. ಹಣ ಒಂದೇ ಬಂಡವಾಳ ಅಲ್ಲ. ಅದಮ್ಯ ಉತ್ಸಾಾಹ, ಸಾಧಿಸುವ ಹಂಬಲ. ಕನಸುಗಳು ಬಹಳ ಮುಖ್ಯ ಎಂಬುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಹೇಳುತ್ತದೆ. ಇವೆಲ್ಲಕ್ಕಿಿಂತ ಮುಖ್ಯವಾಗಿ ತಾವು ಗಳಿಸಿದ ಸಂಪತ್ತನ್ನು ಸಮಾಜದ ಉನ್ನತಿಗೆ ಬಳಸುತ್ತಿಿರುವುದು ಹೆಮ್ಮೆೆಯ ಸಂಗತಿ.