Saturday, 14th December 2024

ನಿಮ್ಮ ಮೇಲೆ ನಂಬಿಕೆಯಿದ್ದರೆ ಸಾಮ್ರಾಜ್ಯವನ್ನೂ ಗೆಲ್ಲಬಹುದು

ಪರಿಶ್ರಮ

ಪ್ರದೀಪ್ ಈಶ್ವರ್‌

parishramamd@gmail.com

ಗೆಲುವಿನ ಫಾರ್ಮುಲಾ ನಾಳೆ ಬಗ್ಗೆ ಮಾತ್ರ ಯೋಚಿಸುವುದು, ಸೆಕೆಂಡ್ ಫಾರ್ಮುಲಾ ನಿನ್ನೆ ಬಗ್ಗೆ ಯೋಚಿಸದಿರುವುದು. ಶತ್ರು ಗಳಾಗಲಿ, ಸ್ನೇಹಿತರಾಗಲಿ, ಯಾರು ಶಾಶ್ವವಾತವಲ್ಲ, ಗೆಲುವೊಂದೇ ಶಾಶ್ವತ. ಈ ಪ್ರಪಂಚದಲ್ಲಿ ಬದಲಾಗದೆ ಇರುವುದು ‘ಬದಲಾ ವಣೆ’ ಮಾತ್ರ.

ನಿನ್ನೆ ಸೋಲನ್ನ ಪದೇ ಪದೇ ನೆನಪಿಸಿಕೊಂಡರೆ ಇನ್ನೊಂದು ಸೋಲಿಗೆ ನಾವು ಆಹ್ವಾನ ಕೊಟ್ಟಂತೆ. ಹಾಗಂತ ನಿನ್ನೆಗೆದ್ದಿರೋ ಗೆಲುವಿನ ಅಹಂಕಾರದಲ್ಲೇ ತೇಲಿಹೋದ್ರೆ ಮತ್ತೊಂದು ಗೆಲುವನ್ನು ಬಲಿಕೊಟ್ಟಂತೆ ಸರಿ. so just focus on tomorrow ಜೀವನ ದಲ್ಲಿ ಏನೇ ಮಾಡಬೇಕು ಅಂದರೂ we have to be more focused.

ಎ 5 ವರ್ಷದ ಹಿಂದೆ, 10 ವರ್ಷದ ಹಿಂದೆ ಆದ ಸಂಭವಿಸಿದ ಘಟನೆಗೆ ಇನ್ನೂ ಹಗೆ ಸಾಧಿಸಿ ದರೆ, ಶತ್ರುತ್ವವನ್ನು ಹಾಗೆ ಮುಂದು ವರೆಸಿದರೆ ಮಾಡಿದ್ರೆ ಆತನು ಬೆಳಿಯೋದಿಲ್ಲ ನೀನು ಬೆಳಿಯೋದಿಲ್ಲ. ಕುಟುಂಬದಲ್ಲಿ ಆಗೋ ಚಿಕ್ಕ ಚಿಕ್ಕ ಘಟನೆಗಳಿಗೆ ಹಗೆ ಸಾಧಿಸಿದರೆ ಅವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ, ನೀವೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ನಾಳೆ ಬಗ್ಗೆ ಯೋಚಿಸಿದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸೋಕೆ ಸಾಧ್ಯ. ಗೆಕೆ ಹೊರಟಾಗ, ಸಿಂಹದಂತಹ ಹೆಜ್ಜೆ ಇಡೋವಾಗ ನಾಯಿಗಳು ನೋಡಿ ಬೊಗಳುತ್ತದೆ.

ಆನ್ಸರ್ ಮಾಡಿಕೊಂಡು ಕುತ್ಕೊಂಡ್ರೆ ಬಹಳ ಕಷ್ಟ ಇರುತ್ತೆ. ಸೋ ಎಲ್ಲರಿಗೂ ಹೇಳೋಕೆ ಇಷ್ಟಪಡ್ತೀನಿ ನೀವೇನಾದರೂ ಒಂದು ಬ್ಯುಸಿನೆಸ್ ಮಾಡ್ತೀರಾ, ಒಂದು ಪರೀಕ್ಷೆಗೆ ತಯಾರಿ ನಡೆಸುತ್ತಿದೀರಾ, ಇಲ್ಲ ನ್ಯೂ ಸ್ಟಾರ್ಟ್‌ಅಪ್ ಮಾಡಿದಿರಾ, ಇಲ್ಲ ಹೊಸ ದಾಂಪತ್ಯಕ್ಕೆ ಕಾಲನ್ನ ಇಟ್ಟಿದೀರಾ. Just focus on tomorrow, ಬಹಳಷ್ಟು ಸಂಗತಿಗಳಲ್ಲಿ ನಿಮ್ಮ ಬದುಕು ಡಿಸೈನ್ ಆಗಿರುತ್ತೆ. ನೋಡಿ ಲೈಫ್ ಏನ್ ಏನ್ ಆಗಿದ್ಯೋ ಅದೆಲ್ಲ ಒಳ್ಳೇದಕ್ಕೆ ಅಂದುಕೊಂಡು ಬಿಟ್ಟಿಬಿಡ್ಬೇಕು. ತಲೆಕೆಡಿಸಿಕೊಳ್ಳಬಾರದು.

ಏನ್ಮಾಡೋಕೆ ಆಗುತ್ತೆ ನಿನ್ನೆ ಆಗಿರೋ ಸೋಲನ್ನೇ ಆಗ್ಲಿ, ಗೆಲುವನ್ನೇ ಆಗ್ಲಿ, ಯಾರು ಏನು ಮಾಡೋಕೆ ಆಗುತ್ತೆ. ಆದರೆ, ನಾಳೆ ಯನ್ನ ಬದಲಿಸಬಹುದು, ನೆನೆಯನ್ನಾ ಬದಲಿಸೋ ಶಕ್ತಿ ನಮ್ಮ ಯಾರಲ್ಲೂ ಇಲ್ಲ. But tomorrow is in your hand.
Expectation is a mother of frustration. Frustration ತಾಯಿಯ ಹೆಸರೇ ನಿರೀಕ್ಷೆಗಳು. ಕಡಿಮೆ expect ಮಾಡಿ, ನಿಮ್ಮ ತಾಕತ್ತಿನ ಬಗ್ಗೆ ಒಂದು ಅಂದಾಜು ಇರಲಿ. ನಿಮ್ಮ ಕ್ಯಾಪಾಸಿಟಿ ಬಗ್ಗೆ ಒಂದು ಅಂದಾಜು ಇರಲಿ. ದಿನಕ್ಕೆ ಎದ್ದು 4 ಕಿ.ಮೀ ಓಡೋಕೆ ಆಗಲ್ಲ, ಒಲಂಪಿಕ್‌ನಲ್ಲಿ ಗೋಲ್ಡ್ ಮೆಡಲ್ ಗೆದ್ದು ಬಿಡ್ತೀನಿ ಅಂದ್ರೆ? Just think your Self. ತಿಂಗಳಿಗೆ 50 ಸಾವಿರ ದುಡಿಯೋಕೆ ಆಗಲ್ಲ.

ನಾನು ಮಿಲಿಯನೇಯರ್ ಆಗ್ಬಿಡ್ತೀನಿ ಅಂದ್ರೆ? ಹತ್ತುಇಪ್ಪತ್ತು ವರ್ಷ ಆದರೂ ಟೂ ವಿಲ್ಹರ್‌ನಿಂದ ಫಾರ್ ವಿಲ್ಹರ್ ತಗೋಳೊಕೆ ಆಗದೇ Lamborgni ತಗೋತಿನಿ ಅಂದ್ರೆ, ತಾಕತ್ತಿನ ಬಗ್ಗೆ ಅಂದಾಜಿರಬೇಕು. ಮನುಷ್ಯ ಮನಸ್ಸು ಮಾಡಿದ್ರೆ ಏನ್ಬೇಕಾದರೂ ಆಗೋ ಗ್ತಾನೆ. ಅಂದ್ರೆ ಏನ್ ಏನೋ ವಂಡರ್ಸ್ ಆಗಲ್ಲ. ಆದರೆ, ಅದಕ್ಕೆ ಸೂಕ್ತ ತಯಾರಿ, ನಿರಂತರ ಪ್ರಯತ್ನ, ವರ್ಷಗಳಗಟ್ಟಲೆ ಕಷ್ಟ ಪಡಬೇಕು. ಸೋಲನ್ನ ಸ್ವೀಕರಿಸುವ ಶಕ್ತಿಯಿರಬೇಕು.

ಒಬ್ಬ ಹುಡುಗ ಒಂದು ಪರೀಕ್ಷೆಯನ್ನು ಪಾಸ್ ಮಾಡಬೇಕು ಅಂದ್ರೆ, ಮೂರು ತಾಸು ಪರೀಕ್ಷೆಗೆ ಮುನ್ನೂರು ದಿನ ಕಷ್ಟಪಡಬೇಕು. ಹಾಗೆ ಕಾಂಪಿಟೇಷನ್ ಸಿಕ್ಕಾಪಟ್ಟೆ ಇರುತ್ತೆ. ಸೊ Just focus on tomorrow. ಯಾರ ಜತೆನೂ ಕಿತ್ತಾಡಬೇಡಿ, ನಿಮ್ಮನ್ನು ನೀವೇ ಕಳೆದು ಕೊಳ್ಳಬೇಡಿ. ಗೆಕೆ ಹೊರಟಾಗ ಬೇಕಾದ್ರೆ ಬೈಸ್ಕೊಳ್ಳಿ, ವಿಮರ್ಷಿಸಿದರೆ ವಿಮರ್ಷಿಸಲಿ. ಬೇಜಾರಾದ್ರೆ ಸುಮ್ಮನೆ ಇದ್ದು ಬಿಡಿ. ನೀವು ಗೆಲುವಿನ ಜರ್ನಿಯಲ್ಲಿದ್ದಾಗ, ಗೆಕೆ ಹೊರಟಾಗ ಕಿವಿಮುಚ್ಚಿಕೊಳ್ಳಬೇಕು.

ಗೆದ್ದ ಮೇಲೆ ಬಾಯಿ ಮುಚ್ಚಿಕೊಳ್ಳಬೇಕು. ಗೆಕೆ ಹೊರಟಾಗ ಕಿವಿಮುಚ್ಚಿಕೊಳ್ಳಲ್ಲಿಲ್ಲ ಅಂದ್ರೆ ಒಂದೊಂದು ಹೆಜ್ಜೆಗೂ ಕಾಲು ಎಳೆದು ಬಿಸಾಕ್ತಾರೆ. ಗೆದ್ದ ಮೇಲೆ ಬಾಯಿ ಮುಚ್ಚಿಕೊಳ್ಳಲ್ಲಿಲ್ಲ ಅಂದ್ರೆ ನಿಮ್ಮ ಗೆಲುವೇ ನಿಮ್ಮನ್ನ ಪಾತಾಳಕ್ಕೆ ತಳ್ಳಿ ಬಿಸಾಕುತ್ತೇ. ಸೋ ಬಿ ಕ್ಲಿಯರ್ ಅಹಂಕಾರ ನಾ ಹತ್ರ ಬರಕೂ ಬಿಡಬೇಡಿ. ದುರಹಂಕಾರನೂ ಹತ್ರ ಬರಕ್ಕೂ ಬಿಡಬೇಡಿ. ಏನೇ ಆಗಲಿ ಆತ್ಮ ವಿಶ್ವಾಸ ಇರಲಿ. ಅಟ್ ದ ಎಂಡ್ ಆಫ್ ದ ಡೇ ಪ್ರಪಂಚದಲ್ಲಿ ನಿನ್ನನ್ನ ನೀನು ನಂಬಿ ಕೊಂಡ್ರೆನೇ ಉದ್ಧಾರ ಆಗೋದು.

ಯಾರೋ ಬರ್ತಾರೆ ಏನೋ ಮಾಡ್ತಾರೆ. ಬದಲಾವಣೆ ಆಗುತ್ತೆ. ನೋ, ಪ್ರತಿಯೊಬ್ಬ ಓದೋ ಸ್ಟೂಡೆಂಟ್ ಆಗಬಹುದು, ನ್ಯೂ ಸ್ಟಾಫ್ ಆಗಬಹುದು, ಬ್ಯುಸಿನೆಸ್ ತೆರೆಯಬಹುದು, ತಮ್ಮ ತಮ್ಮ ಕ್ಷೇತ್ರದಲ್ಲಿ ಯಾರು ಬೇಕಾದರೂ ಆಗಬಹುದು. ನಿಮ್ಮನ್ನ ನೀವು ನಂಬಿಕೊಳ್ಳಿ. Be focused. ಓದೋಕೆ ಕುಳಿತು ಕೊಳ್ಳೋ ಸ್ಟೂಡೆಂಟೆಗೆ ನಮ್ಮ ನೆಂಟ್ರು ಅಂದ್ರು, ನೀನು ಡಾಕ್ಟರ್ ಆಗ್ತೀಯ? ಇಂಜಿನಿಯರ್ ಆಗ್ತೀಯ? ಸಾವಿರ ಡೌಟ್ಸ್‌ಗಳು, ಬೆಂಗಳೂರಿಗೆ ಲಗೇಜೆತ್ತಿಕೊಂಡು ಚಂದ್ರ ಲೇಔಟ್‌ಗೋ ವಿಜಯನಗರಕ್ಕೋ ಬಂದು ಯಾರೋ ನಮ್ಮ ನೆಂಟ್ರು ಅಂದ್ರು ನನ್ನ ಕೈಯಲ್ಲಿ ಆಗಲ್ಲ ಅಂತ ಯೋಚನೆ ಮಾಡಿಕೊಂಡು ಕುಳಿತು ಕೊಂಡ್ರೆ ಆಗೋಲ್ಲ.

ಬೆಂಗಳೂರಿಗೆ ಬರೋಕೆ ಯಾರು ಹೇಳಿದ್ರು ನಿಮಗೆ? ಅಷ್ಟು ಮಾತ್ರಕ್ಕೆ ಪ್ರಯತ್ನ ಪಡೋದು ಯಾಕೆ? ಬಹಳಷ್ಟು ಜನ ಸಾರಿ ನೀನು
ಡಾಕ್ಟರ್ ಆಗಲ್ಲ ಅಂದರೂ, ಐಐಟಿ ಹೋಗ್ತೀಯ ಅಂದ್ರು? ಐಎಎಸ್ ಆಗ್ತೀಯ ಅಂದ್ರು? ಬ್ಯುಸಿನೆಸ್ ಮಾಡಿ ಏನ್ ಮಾಡ್ತಿಯಾ? ಅಂದರೂ ಓದೋನು ನೀನು ಪರೀಕ್ಷೆ ಬರೆಯೋನು, ನೀನು ಫಲಿತಾಂಶ ನಿನ್ನದು. ಗೆದ್ದರು ಸೋತರು ನಿನ್ನದು. ಟೈಮಿಂಗ್
ನಮ್ಮದಾದ್ರೆ ನೀವು ಅಂದು ಕೊಂಡಂತೆ ನಡೆಯುತ್ತೆ.

ಕಷ್ಟಪಟ್ಟು ಕೆಲಸ ಮಾಡಿ. ನಾವು ಬಡವರು ಕನ್ನಡ ಮಾಧ್ಯಮದಲ್ಲಿ ಓದಿದವರು, ನಮಗೆ ಏನು ಬರಲ್ಲ ಎಂದು ಅಂದುಕೊಳ್ಳ ಬೇಡಿ. ನಾವೆಲ್ಲ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ೪ ಜನರನ್ನ ಬದುಕಿಸೋ ಶಕ್ತಿಯಿದೆ. ನಮ್ಮ ಕನ್ನಡ ಮಾಧ್ಯಮ ಶಾಲೆ ನಮಗೆ ಧೈರ್ಯ ಕಲಿಸಿದೆ. ಬದುಕೋ ಭರವಸೆ ಕೊಟ್ಟಿದೆ. ಬಿದ್ದಾಗ ಹೇಗೆ ಎದ್ದೇಳಬೇಕು ಅನ್ನೋ ದನ್ನ ಕಲಿಸಿದೆ, ಹೇಗೆ ನಡೆಯಬೇಕು ಅನ್ನೋದನ್ನ ಕಲಿಸಿದೆ, ನಮ್ಮ ಕನ್ನಡ ಮಾಧ್ಯಮ ಶಾಲೆ ನಮ್ಮ ಶಕ್ತಿ. ಕನ್ನಡ ಅನ್ನೋದು ನಮ್ಮ ಉಸಿರು.

ಬಹಳಷ್ಟು ಜನ ಸರ್, ನಾನು ಕನ್ನಡ ಮಧ್ಯಮದಲ್ಲಿ ಓದಿದ್ದಿನಿ ಅಂತಾರೆ. ಅದು ನಿಮ್ಮ ಅದೃಷ್ಟ. ಮಾತೃ ಭಾಷೆಯಲ್ಲಿ ಓದಿ ದಿರಾ! ನಮ್ಮ ನಾಡಿನ ಬಗ್ಗೆ ಸಂಸ್ಕೃತಿ ಬಗ್ಗೆ ನಿಮಗೆ ಪ್ರೀತಿ ಇದೆ. ಏಕೆಂದರೆ ತುಂಬ ಜನ, ನಾನು ಹಳ್ಳಿಯಲ್ಲಿ ಓದುಬಿಟ್ಟೆ, ಕನ್ನಡ ಮಾಧ್ಯಮದಲ್ಲಿ ಓದು ಬಿಟ್ಟೆ ಅಂತಾರೆ. ಸರಕಾರಿ ಶಾಲೆಯಲ್ಲಿ ಓದಿರೋ ಮಕ್ಕಳು ಆ ಕಾರಣ ಹೇಳಬಾರದು. ನಿಮಗೆ ಪಾಠ ಮಾಡೋಕೆ ಬರೋ ಟೀಚರ್‌ಗಳು ಸರಕಾರಿ ಎಕ್ಸಾಮ್ ಪಾಸ್ ಮಾಡಿ ಬಂದವರೆ ಅವರೂ ಬುದ್ಧಿವಂತರೆ.

ಒಂದು ಊರಲ್ಲಿ ಒಂದು ಬಾವಿ ಇತ್ತಂತೆ. ಆ ಬಾವಿ ಹೊಳಗೆಯಾರಾದ್ರೂ ಬಿದ್ರೆ ಬದುಕ್ಕಿದ್ದೇ ಇಲ್ಲ. ಒಂದು ಸಾರಿ ಇಬ್ಬರು ಹುಡುಗರು ಬಿದ್ದಾಗ್ಬಿಡ್ತಾರೆ. ಆ ಊರಲ್ಲಿ ಇರೋರೆಲ್ಲ ಸಿಂಪತಿ ತೋರಿಸ್ತಾರೆ. ಈ ಬಾವಿಯಿಂದ ಎದ್ದೇಳೋಕೆ ಆಗಲ್ಲ. ಇವರ ಕಥೆ
ಮುಗಿತು ಪಾಪ, ಸತ್ತು ಹೋದ್ರೆ ಅಂತ. ಸುತ್ತ ಇರೋ ಜನ ಎಲ್ಲ ಕೂಗ್ತಾ ಇರ್ತಾರೆ. ಒಬ್ಬ ವ್ಯಕ್ತಿ ಆ ಭಯಕ್ಕೆ ಸತ್ತು ಹೋಗ್ತಾನೆ. ಇನ್ನೊಬ್ಬ ವ್ಯಕ್ತಿ ಬಾವಿಯನ್ನ ಹತ್ತೇ ಬಂದೇ ಬಿಡ್ತಾನೆ. ಊರ ಜನಕ್ಕೆಲ್ಲ ಆಶ್ಚರ್ಯ ಆಗುತ್ತೆ.

ಇಷ್ಟು ವರ್ಷಗಳಿಂದ ಈ ಬಾವಿಯಲ್ಲಿ ಬಿದ್ದಿರೋರು ಯಾರು ಹತ್ತಿ ಬಂದಿರೋ ಚರಿತ್ರೆನೇ ಇಲ್ಲ. ಅದು ಹೇಗೆ ಹತ್ತು ಬಂದೆ ಅಂತ
ಕೇಳಿದ್ರೆ, ಅಬ್ಬ ವ್ಯಕ್ತಿ ಹೇಳ್ತಾನೆ, ಅವನು ಕಿವುಡಸರ್ ಅವನಿಗೆ ಕಿವಿ ಕೇಳಿಸಲ್ಲ. mostly ನಾವೆಲ್ಲ ಹೇಳಿದ್ದು ನೋಡಿ ಹತ್ತು ಬಾ, ಹತ್ತು ಬಾ ಅಂತ encourage ಮಾಡ್ತಾ ಇದ್ದೀವಿ ಅಂತ ಹತ್ತು ಬಂದು ಬಿಟ್ಟ ಅಂತ.ನಿಮ್ಮ ಬಗ್ಗೆ ನಿಮಗೆ ವಿಶ್ವಾಸ ಇದ್ರೆ ಇನ್ಯಾರು ಹೇಳಬೇಕಿಲ್ಲ, ನೀವು ಏನು ಬೇಕಾದರೂ ಸಾಧಿಸಬಹುದು.

ಯಾವುದೂ ಶಾಶ್ವತವಲ್ಲ. ನಿಮ್ಮ ಗೆಲುವು, ನಿಮ್ಮ ನಂಬಿಕೆ, ಮೇಲೆ ಧೈರ್ಯವಿರಲಿ. ಆಗಿದ್ದು ಆಗಲಿ, ಗೆಲ್ಲುವುದು ಖಚಿತ. ಯಶಸ್ಸಿನ ಸಾಮ್ರಾಜ್ಯವೇರುವುದು ನಿಶ್ಚಿತ. All the best.