Friday, 13th December 2024

ಕೆಕೆ…ಇಷ್ಟು ಬೇಗ ಅಗಲಿ ಹೋಗಿರುವಿರೇಕೆ ?

ಸ್ಮರಣೆ

ಡಾ.ಎಸ್.ಜಿ.ಹೆಗಡೆ, ಮುಂಬೈ

shiheg@gmail.com

ಗೆಳೆತನದ ಸವಿ, ಅಗಲಿಕೆಯ ವೇದನೆ, ಕ್ರೋಧ ಮತ್ತು ಪ್ರೀತಿಯ ಮಿಳಿತವನ್ನು ರೇಷ್ಮೆ ಎಳೆಯಂತೆ ಶುದ್ಧ ಮತ್ತು ಸೂಕ್ಷ್ಮವಾಗಿ ಹೆಣೆಯುವ ನಿರೂಪಣೆ ಅಲ್ಲಿದೆ. ಕೆಕೆ ಹಾಡುಗಳು ಯುವ ಜನಾಂಗಕ್ಕೆ ಹೊಸ ಉತ್ಸಾಹ ಮತ್ತು ಉಲ್ಲಾಸ ನೀಡಿವೆ. ವಯಸ್ಸಾದವರಲ್ಲಿಯೂ ತಾರುಣ್ಯವನ್ನು ಎಚ್ಚರಗೊಳಿಸುತ್ತದೆ. ಕೇಳುಗರ ಹೊಸ ಪೀಳಿಗೆಯನ್ನು ಸೃಷ್ಟಿಸಿದೆ.

2022 ರ ಮೇ 31 ರಂದು, ಭಾರತೀಯ ಸಂಗೀತ ಕ್ಷೇತ್ರದಂದು ಅಸಂಗತ ವಿಧಿಯಾಟದ ದಿವಸವಾಯಿತು. ಅಂದು ದಕ್ಷಿಣ ಕೋಲ್ಕೊತ್ತಾದ ನಾಜ್ರುಲ್ ಮಂಚದಡಿಯಲ್ಲಿ ಗುರು ದಾಸ್ ಕಾಲೇಜು ವತಿಯಿಂದ ಸಂಗೀತ ಕಛೇರಿಯನ್ನು ಹಮ್ಮಿಕೊಳ್ಳಲಾ ಗಿತ್ತು.

ಸಂಜೆ ಸುಮಾರು ಏಳು ಘಂಟೆಗೆ ಹಾಡಿನ ಲಹರಿ ಆರಂಭವಾಗುತ್ತದೆ. ಕಿಕ್ಕಿರಿದು ಸೇರಿದ್ದ ಜನರು ಸ್ವರದ ಮೋಡಿಗೆ ಕೇ ಕೇ ಹಾಕಿ ಕುಣಿಯುತ್ತಾರೆ. ಕಾರ್ಯಕ್ರಮದ ನಡುವೆ ಹಾಡು ಗಾರ ಆಗಾಗ ತೀವ್ರವಾಗಿ ಬೆವರುತ್ತಾನೆ. ಸೆಖೆ ಹೆಚ್ಚಿದ ಕುರಿತು ‘ಬಹುತ್ ಗರ್ಮಿ ಹೋಗಯಿ’ ಎಂದು ಸೂಚನೆ ನೀಡುತ್ತಾನೆ. ತನ್ನ ಮೇಲೆ ಚೆಲ್ಲುತ್ತಿದ್ದ ಸ್ಪಾಟಲೈಟಅನ್ನು ಡಿಮ್ ಮಾಡಲು ಕೇಳಿಕೊಳ್ಳುತ್ತಾನೆ. ಹಾಡಿನ ಸೆಲೆ ಒಂದರ ನಂತರ ಒಂದಂತೆ ಸುಮಾರು ತೊಂಭತ್ತು ನಿಮಿಷ ಅವಿರತವಾಗಿ ಹರಿಯುತ್ತದೆ. ಅಲ್ಲಿ ಸೇರಿದ ಜನರು ಸ್ವರ ಝರಿಯಲ್ಲಿ ಒಂದಾಗಿದ್ದಾರೆ.

ಸಂಗೀತ ಸುಖವನ್ನು ಅನುಭವಿಸುತ್ತಾರೆ. ಇಂತಹ ಆಕರ್ಷಕ ಸಮ್ಮೇಳನ ಮುಗಿಯು ತ್ತಿದ್ದಂತೆ ಹಾಡುಗಾರನಿಗೆ ಒಮ್ಮೆಗೇ ಅಸ್ವಸ್ಥ ನಾದಂತೆ ಅನಿಸುತ್ತದೆ. ಕಛೇರಿಯ ವ್ಯವಸ್ಥಾ ಪಕರು ಹಾಡುಗಾರನನ್ನು ಉಳಿದುಕೊಂಡಿದ್ದ ಹೊಟೆಲಿಗೆ ಧಾವಿಸುತ್ತಾರೆ. ಹೊಟೆಲಿನ ಮೆಟ್ಟಿಲ ಮೇಲೇ ಕುಸಿದು ಬಿದ್ದ ಹಾಡು ಗಾರನನ್ನು ಆಸ್ಪತ್ರೆಗೆ ತಲುಪಿಸುವಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಫಿಲ್ಮೀ ಸಂಗೀತದ ಪ್ರಜ್ವಲ ದೀಪ ಆರಿ ಹೋಗಿತ್ತು. ಉತ್ಕೃಷ್ಟ ಗಾಯಕ ಕೆಕೆ ಇನ್ನಿರಲಿಲ್ಲ. ಕೆಕೆ ಇಹಲೋಕ ತ್ಯಜಿಸಿದ್ದರು. ಹೀಗೊಂದು ಘಟನೆ ನಡೆದು ಹೋಯಿತೆಂದು ನಂಬಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಸಂಗೀತಪ್ರಿಯ ಜಗತ್ತು ಶೋಕ ಸಮುದ್ರದಲ್ಲಿ ಮುಳುಗಿತ್ತು.

ನಾಜ್ರುಲ್ ಸ್ಟೇಡಿಯಂ ಸುಮಾರು ೨೫೦೦ ಜನರು ಸೇರುವಷ್ಟು ಸಾಮರ್ಥ್ಯ ಪಡೆದಿದೆ. ಆದರೆ ಅಂದು ಕೆಕೆ ಹಾಡು ಕೇಳಲು ಅದರ ಎರಡು ಪಟ್ಟು ಜನ ಸೇರಿದ್ದರು. ಸಭಾಂಗಣದ ಸಾಮರ್ಥ್ಯ ಮೀರಿ ಒಳಗೆ ಬರಲು ಬಿಡದಾಗ ಬೌಂಡರಿ ಜಿಗಿದು ಮತ್ತು ಗೇಟ್ ಮುರಿದು ಜನರು ಒಳ ನುಗ್ಗಿದ್ದರು. ಇನ್ನೂ ನುಗ್ಗುತ್ತಿದ್ದ ಜನಸಂದಣಿಯನ್ನು ಚದುರಿಸಲು ಪೊಲೀಸ್ ಸ್ಪ್ರೇ ಬಳಸುವ ಸನ್ನಿ ವೇಶವೂ ಉಂಟಾಗಿತ್ತು!.

ಸಭಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯೂ ಕೆಕೆ ಧ್ವನಿ ಸುರುಳಿಗೆ ಕೇಕೆ ಹಾಕಿ ಕುಪ್ಪಳಿಸಿದ್ದರು. ಮೈದಾನದ ಹೊರಗೆ ನೆರೆದಿದ್ದ ಜನ ಜಂಗುಳಿಯನ್ನು ಕಂಡ ಕೆಕೆ ತಮ್ಮ ಕಾರಿನಿಂದ ಇಳಿಯುವಾಗ ಒಮ್ಮೆ ಅಳುಕಿದ್ದುದಾಗಿ ವರದಿಯಿತ್ತು. ಕೆಕೆ ಸ್ವರ ಶಕ್ತಿಯೇ ಹಾಗಿತ್ತು. ಚುಂಬಕದ ಸೆಳೆತ ಅಲ್ಲಿತ್ತು. ಕೆಕೆ ನಡೆಸಿಕೊಟ್ಟ ದೇಶದ ಮತ್ತು ಹೊರದೇಶದ ಬಹುತೇಕ ಗಾನ ಗೋಷ್ಠಿಗಳಲ್ಲಿ ಯಾವಾ ಗಲೂ ಕಿಕ್ಕಿ ರಿದು ಜನ ಸೇರಿರುತ್ತಿದ್ದರು. ಹೀಗಾಗಿ ಇಂತಹ ಸಂದರ್ಭ ಕೆಕೆಗೆ ಹೊಸತೇನೂ ಇರಲಿಲ್ಲ. ನಾಜ್ರುಲ್ ಮಂಚದಲ್ಲಿ ಅಂದು ತೀವ್ರ ಸೆಖೆಯಾಗಿದ್ದು ನಿಜವೆಂದು ಅಲ್ಲಿಗೆ ಬಂದವರು ಹೇಳಿದ ವರದಿಯಿದೆ. ಆದರೆ ಅಂದಿನ ವ್ಯವಸ್ಥೆಯ ಅಥವಾ ನಿರ್ವಹಣೆಯಲ್ಲಿನ ಲೋಪದೋಷದಿಂದ ಸಾವು ಸಂಭವಿಸಿತೆಂದು ಹೇಳುವಂತಿಲ್ಲ.

ಇಂತಹ ದುರ್ದೈವದ ಘಟನೆ ಕುರಿತು ದೋ ಷಾರೋಪಣೆ ಸಲ್ಲ. ಹಾಗೆ ಅಂದು ನಡೆದ ದುರಂತವನ್ನು ವಿಧಿಯಾಟವೆಂದು ಹೇಳದೆ ಇನ್ನೇನು ಹೇಳಬಹುದು? ವಿಧಿ ವಶರಾದ ಕೆಕೆಯ ವಯಸ್ಸು ಬರೀ ಐವತ್ಮೂರು ವರ್ಷ. ಹಾಗೆ ನೋಡಿದರೆ ಕೆಕೆ ವಿಧಿಯ ಮಗುವೆಂದೇ ಹೇಳಬೇಕು. ಕೆಕೆ ಚಿಕ್ಕಂದಿನಲ್ಲಿ ವೈದ್ಯರಾಗುವ ಕನಸು ಕಂಡಿದ್ದಿತ್ತು. ಎರಡನೇ ತರಗತಿಯಲ್ಲಿರುವಾಗ ವೈದ್ಯನಾಗುವ
ಕುರಿತು ಯೋಚಿಸಿದ್ದರಂತೆ. ಸಂಗೀತ ಕಲಿಯಲು ಕ್ಲಾಸ್ ಸೇರಿದ ಕೆಕೆ ಮೂರು ದಿನಗಳಲ್ಲಿ ಸಂಗೀ ತ ಕ್ಲಾಸ್ ಬಿಟ್ಟಿದ್ದರು.

ಔಪಚಾರಿಕ ಸಂಗೀತ ಕಲಿಕೆ ಆತನಿಗೆ ಇಷ್ಟವಾಗಲಿಲ್ಲ, ಇತಿಮಿತಿ ಹಾಕಲಾಗದ ಸಂಗೀತವನ್ನು ಸೀಮೆ ಮೀರಿ ತಲುಪುವದು ಹುಡುಗನ ಹಂಬಲವಾಗಿತ್ತು. ಮುಂದೆಂದೂ ಔಪಚಾರಿಕವಾಗಿ ಸಂಗೀತ ಕಲಿಯದೆ ಕೆಕೆ ಕೇಳುಗರ ಮನ ಮಿಡಿದರು. ಸಂಗೀತ ತಜ್ಞರ ಹೃದಯ ತಟ್ಟಿದರು. ಅವರಲ್ಲಿದ್ದ ಸಂಗೀತದ ಬುಗ್ಗೆ ಅಷ್ಟು ಪ್ರಚಂಡವಾಗಿತ್ತು.

ಕೃಷ್ಣಕುಮಾರ್ ಕುನ್ನತ್ ನಿಜ ಹೆಸರು. ಕೆಕೆ ನಿಕ್ ನೇಮ್ ನಿಂದಲೇ ಬೆಳಕಿಗೆ ಬಂದಿದ್ದು. ಮಲೆಯಾಳಮ್ ಮೂಲ. ಹುಟ್ಟಿ, ಬೆಳೆದಿದ್ದು ದೆಹಲಿಯಲ್ಲಿ. ಶಾಲೆಗೆ ಹೋ ದಾಗ ಆರನೇ ತರಗತಿಯಲ್ಲಿ ಲಕ್ಷ್ಮಿ ಜ್ಯೋತಿ ಪರಿಚಯಕ್ಕೆ ಬಂದು ಪ್ರೇಮ ಕುದುರಿತು. ಕೃಷ್ಣಕುಮಾರ್ ಮನೆಯಿದ್ದ ಕಾಲೋನಿಯಲ್ಲಿ ನಡೆಯುತ್ತಿದ್ದ ಸಂಗೀತ ಸಭೆಯಲ್ಲಿ ‘ಪ್ಯಾರ್ ದಿವಾನಾ ಹೋತಾ ಹೈ ಮಸ್ತಾನಾ ಹೋತಾ ಹೈ, ಹರ್ ಖುಷಿ ಸೆ ಹರ್ ಗಮ್ ಸೆ ಭೀ ಗಾನಾ ಹೋತಾ ಹೈ’ ಹಾಡುತ್ತಿದ್ದ ಕೆಕೆಗೆ ‘ಈ ಹಾಡನ್ನು ಜ್ಯೋತಿಯನ್ನು ನೋಡಿ ಹಾಡುತ್ತಿದ್ದೆಯಾ’ ಎಂದು ಪ್ರಶ್ನೆ ಕೇಳಿದ್ದಕ್ಕೆ ‘ಹಾಗೆ ಹೇಗೆ ಸಾಧ್ಯವಿತ್ತು, ನನ್ನ ತಂದೆ ತಾಯಿಯರೂ ಅಲ್ಲಿ ಕುಳಿತಿದ್ದರು, ಹಾಡಿನ
ನಡುವೆ ಒಮ್ಮೊಮ್ಮೆ ಥಟ್ಟನೆ ಅವಳ ಕಡೆಯೂ ನೋಡಿದ್ದೆ, ಅವಳಿಗೆ ಅದು ಅರ್ಥವಾಗಿತ್ತು ಅಂದಿದ್ದ!’ ಪ್ರಸಿದ್ಧ ಕಿಶೋರ್
ಹಾಡನ್ನು ತನ್ನ ಪತ್ನಿಗೆ ಪ್ರೊಪೋಸ್ ರೂಪದಲ್ಲಿಯೂ ಹಾಡಿದ್ದಾಗಿ ಆತ ಹೇಳಿದ್ದಿದೆ. ಅದೇ ನೆನಪನ್ನು ಹಲವು ಕಾರ್ಯಕ್ರಮ ಗಳಲ್ಲಿ ಹಂಚಿಕೊಂಡಿದ್ದಿದೆ.

ತನ್ನ ಮದುವೆಯ ಕುರಿತೂ ತಿಳಿ ಹಾಸ್ಯವನ್ನು ಕೆಕೆ ಅಲ್ಲಲ್ಲಿ ಹಂಚಿಕೊಂಡಿದ್ದ. ‘ಪದವಿ ಓದಿದ ನಂತರ ಅಲ್ಪ ಕಾಲ ಹೋಟೆಲ್
ಉದ್ಯಮದಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡಿದ್ದೆ, ಹಾಗೆ ಸೇರಿದ್ದು ಮದುವೆಯ ಅರ್ಹತೆ ಪಡೆಯಲಿಕ್ಕಷ್ಟೆ, ಹುಡುಗ ಏನು ಮಾಡುತ್ತಾನೆ ಎಂದು ಹುಡುಗಿಯವರು ಕೇಳಿದರೆ ಹಾಡು ಹಾಡುತ್ತೇನೆ ಅನ್ನುವುದು ಸಾಧ್ಯವಿತ್ತೇ!’ ಎಂದು ನಗುತ್ತ ಕೇಳಿದ್ದ! ಶೀಘ್ರವೇ ನೌಕರಿ ತೊರೆದು ಮತ್ತೆ ತನ್ನ ಪ್ಯಾಶನೆಟ್ ಜಗತ್ತಿಗೆ ಧುಮುಕಿದ್ದ.

ಕೆಕೆಯಲ್ಲಿ ಗೂಡು ಕಟ್ಟಿದ್ದು ಸಂಗೀತ ಪಕ್ಷಿಯೇ ಆಗಿತ್ತು. ಸಣ್ಣವಯಸ್ಸಿನಲ್ಲಿಯೇ ಕೆಕೆ ಹಲವು ಸಂಗೀತ ಸ್ಪರ್ಧೆ ಮತ್ತು ಕಾರ್ಯ ಕ್ರಮದಲ್ಲಿ ಭಾಗಿಯಾಗುತ್ತಿದ್ದ. ಅಜ್ಜಿ ಸಂಗೀತ ಶಿಕ್ಷಕಿಯಾಗಿದ್ದು ಕೆಕೆ ತಾಯಿಯೂ ಹಾಡುವ ಕಾರ್ಯಕ್ರಮದಲ್ಲಿ ಭಾಗಿಯಾದ ವಳು. ಕೆಕೆ ಎಂದೂ ಔಪಚಾರಿಕ ಸಂಗೀತ ಕಲಿಯಲಿಲ್ಲ. ಎಲ್ಲ ಬಗೆಯ ಹಾಡನ್ನು ಸುಲಲಿತವಾಗಿ ಹಾಡಿದ್ದ ಕಿಶೋರ ಕುಮಾರ್ ಹಾಡುಗಳಿಂದ ಕೆಕೆ ಪ್ರಭಾವಿತನಾಗಿದ್ದ. ಶಾಲೆಯ ದಿನಗಳಲ್ಲಿ ಕೆಕೆ ರಾಕ್ ಬ್ಯಾ ಂಡ್ ಒಂದರ ಸದಸ್ಯನಾಗಿದ್ದ. ಒಂಭತ್ತನೆಯ ವಯಸ್ಸಿನಲ್ಲಿ Fernando by ABBA ಎಂಬ ತನ್ನ ಮೊದಲ ವೇದಿಕೆ ಪ್ರದರ್ಶನ ನೀಡಿದ್ದ.

ದೆಹಲಿಯಲ್ಲಿ ಮೊದಲ ಜಿಂಗಲ್ ‘ಉಷಾ ದಿ ನಂಬರ್ ವನ್’ ರೆಕಾರ್ಡ್ ಆಗಿತ್ತು. ಸಾಧಕನ ದಾರಿ ಎಂದೂ ಸುಗಮವಲ್ಲ. ಕೆಕೆ ನಡೆದ ದಾರಿಯೂ ಅಷ್ಟೇ ಕ್ಲಿಷ್ಟವಾಗಿತ್ತು. ಶಾದಿಯ ನಂತರ ಕೆಲವು ತಿಂಗಳು ಖರ್ಚು ನಿರ್ವಹಿಸಲು ಹೋಟೆಲ್ ಒಂದರ
ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡಿದ್ದ. ಕೆಲಸ ಬಿಟ್ಟ ನಂತರ ತನ್ನ ನಿರಂತರ ದಾರಿ ಹುಡುಕಿಕೊಂಡು ಮುಂಬೈಗೆ ಬಂದ. ಮುಂಬೈ ಆರಂಭದ ದಿವಸಗಳು ಪರೀಕ್ಷೆಯ ದಿನಗಳಾಗಿ ಹೋದವು. ಹೋಟೆಲ್‌ಗಳಲ್ಲಿ ಕಾರ್ಯಕ್ರಮ ನೀಡಿ ಜೀವನಾ ಧಾರ ಪಡೆದಿದ್ದ. ಜಿಂಗಲ್ ಹಾಡುಗಳಲ್ಲಿ ತೊಡಗಿಕೊಂಡ.

ಯುಟಿವಿಯಿಂದ ಸಂಟೋಜೆನ್ ಸೂಟಿಂಗೆ ಜಿಂಗಲ್ ಹಾಡುವ ಮೊದಲ ಅವಕಾಶ ಸಿಕ್ಕಿತ್ತು. ಮ್ಯೂಸಿಕ್ ಡೈರೆಕ್ಟರ್ ಅದಕ್ಕೆ ಕೊಡುವ ಹಣವು ಎಷ್ಟೆಂದು ಕೇಳಿದಾಗ, ಐದು ಬೆರಳು ತೋರಿದ್ದರಂತೆ. ಕೆಕೆ ಐವತ್ತು ರುಪಾಯಿ ಕೊಡುತ್ತಾರೆಂದು ತಿಳಿದಿದ್ದ ರಂತೆ. ಆದರೆ ಐದು ನೂರು ಸಿಕ್ಕಿತ್ತು! ಆರಂಭದ ಅಂದಿನ ದಿನಗಳು ಹಾಗಿದ್ದವು!

ಅಲ್ಲಿಂದ ಕೆಕೆ ಸಾಗಿದ ದಾರಿ ಮತ್ತು ಏರಿದ ಎತ್ತರ ಅಚ್ಚರಿ ಹುಟ್ಟಿಸುತ್ತದೆ. ಯೋ ಫಟಿ, ಪೆಪ್ಸಿಸ್ ‘ಯೇ ದಿಲ್ ಮಾಂಗೇ ಮೊರ್’ ಸೇರಿ ಸುಮಾರು 3500 ಜಿಂಗಲ್ಸ್ ಕೊಡುಗೆ ಅವರದ್ದು. 1999ರಲ್ಲಿ ತಮಿಳ್ ಫಿಲ್ಮಿಗೆ ಹಾಡುವ ಅವಕಾಶ ಸಿಕ್ಕಿತ್ತು. ಅವರ ಅಲ್ಬಮ್ ಪಲ್ ಮತ್ತು ಯಾರೂನ್ ಯುವ ಜನಾಂಗವನ್ನು ಕಿಚ್ಚೇಳಿಸಿತ್ತು. ‘ಹಮ್ ದಿಲ್ ದೇ ಚುಕೇ ಸನಮ’ ಸಿನೆಮಾಕ್ಕೆ ಎಆರ್ ರೆಹಮಾನ್‌ರ ಸಂಗೀತಕ್ಕೆ ಹಾಡಿದ್ದ ‘ತಡಪ್ ತಡಪ್’ ಹಾಡು ದೊಡ್ಡ ಹಿಟ್ ಆಗಿತ್ತು.

ಮುಂದಿನ ಸಾಧನೆಗಳು ಅಳಿಯದ ಇತಿಹಾಸವಾಗಿದೆ. ಡೋಲಾರೆ ಡೋಲಾ, ಖುದಾ ಜಾನೇ , ಆಂಖೊ ಮೇ ತೇರಿ ,ಬಸ್ ಬಹಾನೆ, ಕ್ಯಾ ಮುಝೆ ಪ್ಯಾರ್ ಹೈ, ಪಿಯಾ ಆಯೆ ನಾ ಮುಂತಾದ ಹಾಡುಗಳು ಕಾಲಕ್ಕೂ ಮೀರಿ ಮೆರೆದಿವೆ. ಅವರ ಧ್ವನಿ ಹಿಂದಿ ಸಿನಿಮಾಗೆ ಅಷ್ಟೇ ಮೀಸ ಲಿರಲಿಲ್ಲ. ತಮಿಳ್, ತೆಲಗು, ಮಲಯಾಳಮ, ಗುಜರಾತಿ, ಬೆಂಗಾಲಿಯಲ್ಲಿಯೂ ಹಾಡಿ ಜನರ ಮನ ಮಿಡಿದ ಬಹು ಭಾಷಾ ಹಾಡುಗಾರನಾಗಿ ಕೆಕೆ ಸದಾ ನೆನಪಿರುತ್ತಾರೆ. ಕನ್ನಡದಲ್ಲಿ ಕೆಕೆ ಹಾಡಿದ ಲವ್ ಸಿನೆಮಾದ ‘ಏಳು ಬಣ್ಣದ ಪ್ರೀತಿಯದು’,
‘ಮನಸಾರೆಯ ಕಣ್ಣಹನಿಯೊಂದಿಗೆ’, ‘ಆರ್ಯ ನ್ನಿನ ಒಂದು ಹಾಡು’ ಇತ್ಯಾದಿ ಹಾಡುಗಳು ಮನ ಮುಟ್ಟಿವೆ.

ಸಲ್ಮಾನ್ ಖಾನ್ ನಿರ್ಮಿತ ‘ಭಜರಂಗಿ ಭಾಯಿಜಾನ್’ ಫಿಲ್ಮಿನ ಹಂತದಲ್ಲಿ ನಡೆದ ಪ್ರಸಂಗವಿದು. ಕೆಕೆ ಕುಟುಂಬದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಸಂಗೀತ ನಿರ್ದೇಶಕ ಪ್ರೀತಮ್ ಕರೆ ಮಾಡಿ ಕೂಡಲೇ ಬಂದು ಹಾಡಿ ಹೋಗುವಂತೆ ಕೇಳಿ ಕೊಂಡರು. ತಾನು ಅಲ್ಲಿ ಕುಟುಂಬದ ಜತೆ ಹಾಲಿಡೇಯಲ್ಲಿರುವುದಾಗಿ ಹೇಳಿದರೂ ಪ್ರೀತಮ್ ಅಲ್ಲಿಯೇ ಹಾಡಿಗೆ ಧ್ವನಿ ಕೊಡು ವಂತೆ ಕೇಳಿಕೊಂಡಿದ್ದರು.

ನಿರಾಕರಿಸಲಾಗದೆ ಅಲ್ಲಿಂದಲೇ ಧ್ವನಿ ನೀಡಿದ್ದರು. ಹಾಡು ಪ್ರೀತಮ್ ಮತ್ತು ಸಲ್ಮಾ ನ್ ಮೇಲೆ ಇಷ್ಟು ಪ್ರಭಾವ ಬೀರಿತ್ತೆಂದರೆ ಹಾಡಿಗೆ ಇನ್ನೂ ಕೆಲ ಸಾಲುಗಳನ್ನು ಸೇರಿಸಿ ಕೆಕೆ ಮುಂಬೈಗೆ ಮರಳಿದ ನಂತರ ಹಾಡಿಸಿಕೊಂಡರು. ಸಿನಿಮಾದುದ್ದಕ್ಕೂ ಹಾಡಿನ ಮ್ಯೂಸಿಕ್ ಮತ್ತು ಧ್ವನಿ ಸುರುಳಿ ತೇಲುತ್ತಿರುತ್ತದೆ. ಸಿನಿಮಾದ ಅಂತರಾತ್ಮದ ಭಾಗವಾಗಿ ಹೋಗಿದೆ. ‘ತು ಜೋ ಮಿಲಾ’ ಎನ್ನುವ ಹಾಡೇ ಅದು. ಕೆಕೆ ಹಾಡುಗಳಲ್ಲಿ ತಾರುಣ್ಯ ಭರಿತ ಸಂವೇದನೆಯಿದೆ. ರೋಮ್ಯಾಂಟಿಕ್ ಹಾಡುಗಳು ವಯಸ್ಸಿನ ಮಿತಿ ಮೀರಿ
ಜನತೆಯನ್ನು ಮುಟ್ಟಿವೆ. ಗೆಳೆತನದ ಸವಿ, ಅಗಲಿಕೆಯ ವೇದನೆ, ಕ್ರೋಧ ಮತ್ತು ಪ್ರೀತಿಯ ಮಿಳಿತವನ್ನು ರೇಷ್ಮೆ ಎಳೆಯಂತೆ ಶುದ್ಧ ಮತ್ತು ಸೂಕ್ಷ್ಮವಾಗಿ ಹೆಣೆಯುವ ನಿರೂಪಣೆ ಅಲ್ಲಿದೆ. ಕೆಕೆ ಹಾಡುಗಳು ಯುವ ಜನಾಂಗಕ್ಕೆ ಹೊಸ ಉತ್ಸಾಹ ಮತ್ತು ಉಸ ನೀಡಿವೆ. ವಯಸ್ಸಾದವರಲ್ಲಿಯೂ ತಾರುಣ್ಯವನ್ನು ಎಚ್ಚರಗೊಳಿಸುತ್ತದೆ. ಕೇಳುಗರ ಹೊಸ ಪೀಳಿಗೆಯನ್ನು ಸೃಷ್ಟಿಸಿದೆ.

ಐವತ್ಮೂರು ವಯಸ್ಸಿಗೆ ಇಹಲೋಕ ತ್ಯಜಿಸಿದ ಕೆಕೆ ಮಖ ಬಾಲಿಶವಾಗಿಯೇ ಇತ್ತು. ನಗುವಿನಲ್ಲಿ ಇನ್ನೂ ಹದಿಹರೆಯದ ಮುಗ್ಧತೆ ಯಿತ್ತು. ಕೆಕೆ ಒಬ್ಬ ಸರಳ ಸ್ವಭಾವದ, ವಿನಮ್ರ, ಮರೆಯಲಾಗದ ಸ್ನೇಹ ಜೀವಿಯಾಗಿದ್ದರೆಂದು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಇಷ್ಟು ಕಡಿಮೆ ವಯಸ್ಸಿನಲ್ಲಿ ಎಷ್ಟೆಲ್ಲ ಸಾಧಿಸಿದ ಕೆಕೆ ಸಾಧನೆ ಬೆರಗು ಮೂಡಿಸುಸತ್ತದೆ. ಕೆಕೆ ಶರೀರವನ್ನು ಅಂತಿಮ ಕ್ರಿಯೆಗಾಗಿ ಕೊಲ್ಕೋತ್ತಾದಿಂದ ಮುಂಬೈಗೆ ತರಲಾಯಿತು.

ಕೆಕೆ ಅಕಾಲಿಕ ಸಾವಿಗೆ ಎಡೆ ಕಂಬನಿ ಸುರಿದಾಗ ಕೊಲ್ಕೋತ್ತದಲ್ಲಿ ಕೆಕೆ ನೆನಪಿನಲ್ಲಿ ಎರಡುನೂರು ಹಾಡುಗಾರರು ಮತ್ತು ಗಿಟಾರ್
ವಾದಕರು ಸೇರಿ ಭಾವನಾತ್ಮಕ ವಿದಾಯ ಹೇಳಿದ್ದು ಹೀಗೆ. ಹಮ್ ರಹೇ ಯಾ ನಾ ರಹೆ ಕಲ, ಕಲ್ ಯಾದ್ ಆಯೆಂಗೆ ಯೇ ಫಲ್,
…… ಚಲ್ ಸೋ ಚೇ ಕ್ಯಾ , ಛೋಟಿಸಿ ಹೈ ಜಿಂದಗಿ, ಕಲ್ ಮಿಲ್ ಜಾಯೆ ತೊ , ಹೋ ಗಿ ಖುಷ್ ನಸೀ ಬಿ ??