Thursday, 12th December 2024

ಕೇಕ್ ತಿನ್ಬೇಕು ಅನ್ಸಿರಬೇಕು, ಕಟ್ ಮಾಡಿದ್ದಾರೆ !

ತುಂಟರಗಾಳಿ

ಸಿನಿಗನ್ನಡ

ಕ್ರಾಂತಿ ಸಿನಿಮಾ ಯಾವಾಗ ಬಿಜುಗಡೆ ಆಯ್ತೋ ಅಂದಿನಿಂದ ಸ್ಯಾಂಡಲ್ ವುಡ್ ಅಸಹ್ಯಗಳ ಗೂಡಾಗಿದೆ. ದರ್ಶನ್ ಮತ್ತು ಅವರ
ಅಭಿಮಾನಿಗಳ ವರ್ತನೆ ಮಿತಿ ಮೀರಿದೆ. ಮೊದಲನೆಯದಾಗಿ ಇಲ್ಲ ಸಲ್ಲದ ಸುಳ್ಳು ಸುಳ್ಳು ಕಲೆಕ್ಷನ್ ಮಾಹಿತಿ ಹಾಕಿಕೊಂಡು ಸಕ್ಸಸ್ ಮೀಟ್ ಮಾಡಿ ಕೇಕ್ ಕಟ್ ಮಾಡಿದೆ ಚಿತ್ರತಂಡ.

ಸರಿ, ಹೋಗ್ಲಿ ಪಾಪ ಅವರಿಗೆ ಕೇಕ್ ತಿನ್ನಬೇಕು ಅನ್ನಿಸಿರಬೇಕು ಅದಕ್ಕೇ ಕಟ್ ಮಾಡಿದ್ದಾರೆ ಅಂದ್ಕೊಂಡ್ರೆ, ಅಲ್ಲಿ ಕಲೆಕ್ಷನ್ ಹೇಗಾಯ್ತು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಇದನ್ನು ನೋಡಿ. ಪಕ್ಕದ ತಮಿಳು ತೆಲುಗು ಚಿತ್ರರಂಗದ ಮಾಧ್ಯಮಗಳು ಕನ್ನಡ ಚಿತ್ರರಂಗ ದವರು ಸುಳ್ಳು ಕಲೆಕ್ಷನ್ ತೋರಿಸ್ತಾ ಇದ್ದಾರೆ. ಹಾಗಾದ್ರೆ ಇದಕ್ಕೂ ಮುಂಚೆ ಸೂಪರ್ ಹಿಟ್ ಅಂತ ಹೇಳಿದ ಕೆಜಿಎಫ್, ಕಾಂತಾರ ಚಿತ್ರಗಳಿಗೂ ಇದೇ ರೀತಿ ಫೇಕ್ ಕಲೆಕ್ಷನ್ ತೋರಿಸಿದ್ದೆ? ಅಂತ ಕನ್ನಡ ಚಿತ್ರರಂಗದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ.

ಇನ್ನು ಥಿಯೇಟರ್ ಬುಕ್ಕಿಂಗ್‌ನಲ್ಲೂ ಗೋಲ್ ಮಾಲ. ಕನಿಷ್ಟ ಪಕ್ಷ ೬ ಜನ ಇದ್ರೆ ಮಾತ್ರ ಶೋ ನಡೆಯುತ್ತೆ. ಇಂದರೆ ಕ್ಯಾನ್ಸಲ್ ಅನ್ನೋ ಕಾರಣಕ್ಕಾಗಿ ಖಾಲಿ ಹೊಡೆಯುತ್ತಿರುವ ಎಲ್ಲಾ ಥಿಯೇಟರ್‌ಗಳಲ್ಲೂ ಮಿನಿಮಮ್ ಆರರಿಂದ ೧೦ ಸೀಟುಗಳನ್ನು ಬುಕ್ ಮಾಡುವ ಚಿಲ್ಲರೆ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ತಮ್ಮ ಹೀರೋ ಬಗ್ಗೆ ಏನೋ ಮಾತಾಡಿದ್ರು ಅಂತ ನ್ಯೂಸ್ ಚಾನೆಲ್ ಒಂದರ ಬಳಿಗೆ ಹೋಗಿ ನಿನ್ನೆ ಘೇರಾವ್ ಹಾಕಿದ್ದಾರೆ ಅಭಿಮಾನಿ ಗಳು.

ಆದರೆ, ಯಾವಾಗ ಪೊಲೀಸರು ಎಲ್ಲರನ್ನೂ ವ್ಯಾನ್‌ಗೆ ತುಂಬಲು ಶುರು ಮಾಡಿದ್ರೋ, ಆಗ, ವ್ಯಾನ್ ಗೆ ಹತ್ತಿಸಿದವರು, ಏರೋ ಪ್ಲೇನ್ ಹತ್ತಿಸದೇ ಇರ್ತಾರಾ ಅಂತ ಜೋಗಯ್ಯ ಹಾಡಿನ ಶೈಲಿಯಲ್ಲಿ ಓಡಲೇ… ಅಂತ ಅಲ್ಲಿಂದ ಕಂಬಿ ಕಿತ್ತಿದ್ದಾರೆ ಅನ್ನೋದು ಸದ್ಯದ ಸುದ್ದಿ..

ಲೂಸ್ ಟಾಕ್
ಸಾನಿಯಾ ಮಿರ್ಜಾ (ಕಾಲ್ಪನಿಕ ಸಂದರ್ಶನ)
ಏನ್ ಮೇಡಂ ರಿಟೈರ್ ಆಗ್ಬಿಟ್ರಲ್ಲ, ಆದರೂ ಮದ್ವೆ ಆದ್ಮೇಲೆ ಪ್ರೊಫೆಷನ್ ಡಲ್ ಆಗುತ್ತೆ ಅಂತಿದ್ರು, ಆದ್ರೆ ನೀವು ಮದುವೆ ಆದ್ಮೇಲೂ ಜಾಸ್ತಿ ಮಿಂಚಿಬಿಟ್ರಿ?

-ಡಲ್ ಯಾಕೆ ಆಗುತ್ತೆ. ಮದುವೆ ಆದ್ಮೇಲೆ ಡಬಲ್ಸ್ ಆಡೋದು ಸುಲಭ ಅಲ್ವಾ..

ನಿಜ ಬಿಡಿ, ಆದ್ರೆ, ಇಂಡಿಯಾದ ನಿಮಗೂ ಪಾಕಿಸ್ತಾನದ ಶೋಯೆಬ್ ಮಲ್ಲಿಕ್‌ಗೂ ಸಂಬಂಧ ಬೆಳೆದಿದ್ದು ಹೆಂಗೆ?
-ಅದೇನ್ ಮಹಾ, ‘ಲವ್’ ಮಾಡಿದ್ವಿ, ‘ಅಡ್ವಾಂಟೇಜ’ ತಗೊಂಡ್ವಿ, ಮದುವೆ ‘ಸೆಟ’ ಆಯ್ತು. ‘ಗೇಮ್’ ಓವರ್

ಕ್ರಿಕೆಟ್‌ನಲ್ಲಿ ನಿಮ್ಮ ಗಂಡ, ಗ್ರೌಂಡ್ ನಿಂದ ಆಚೆಗೆ ಬಾಲ್ ಹೊಡೆದ್ರೆ ಸಿಕ್ಸ್, ಅದೇ ನೀವು ಟೆನ್ನಿಸ್‌ನಲ್ಲಿ ಗ್ರೌಂಡ್ ನಿಂದ
ಆಚೆ ಹೊಡೆದ್ರೆ ಔಟ್, ಇದು ಮೋಸ ಅಲ್ವ?
-ನೋಡಿ, ಗಂಡ್ ಮಕ್ಳು ರಾತ್ರಿ ಮನೆಗೆ ಲೇಟಾಗಿ ಬಂದ್ರೆ, ಅಪ್ಪ ಅಮ್ಮ ಗೆಟ್ ಔಟ್ ಅಂತಾರೆ. ಅದೇ ಹೆಣ್ಮಕ್ಕಳು ಲೇಟ್ ಆಗಿ ಬಂದ್ರೆ, ಹೆಂಗೋ ಒಟ್ನಲ್ ಮನೆಗ್ ಬಂದ್ಳಲ್ಲ ಸಾಕು ಅಂತ ಒಳಗ್ ಕರ್ಕೊತಾರೆ. ಇದೂ ಒಂಥರಾ ಹಂಗೇ

ಓಹೋ, ಸರಿ, ಈಗ್ಲಾದ್ರೂ ಹೇಳಿ, ನಿಮ್ಮ ಮಗು ಕ್ರಿಕೆಟ್ ಬಾಲ್ ಹಿಡ್ಕೊಳ್ಳುತ್ತೋ, ಟೆನ್ನಿಸ್ ಬಾಲ್ ಹಿಡ್ಕೊಳ್ಳುತ್ತೋ?
-ರೀ, ಇಂಥಾ ‘ಬಾಲಿ’ಶ ಪ್ರಶ್ನೆ ಎಲ್ಲಾ ಕೇಳಬೇಡ್ರೀ.

ಸರಿ, ಸೀರಿಯಸ್ ಪ್ರಶ್ನೆ ಕೇಳ್ತೀನಿ, ನಿಮಗೆ ಕ್ರಿಕೆಟ್ ಬಾಲು, ಶೋಯೆಬ್‌ಗೆ ಟೆನ್ನಿಸ್ ಬಾಲು ಕೊಟ್ಟು ಆಡಿ ಅಂದ್ರೆ ಹೆಂಗಿರುತ್ತೆ?
-ಯಾರು ಏನು ಆಡಬೇಕೋ ಅದನ್ನೇ ಆಡಬೇಕು ಕಣ್ರೀ. ಇಂದ್ರೆ ‘ಬಾಲಾ’ಪರಾಧ ಆಗುತ್ತೆ.

ನೆಟ್ ಪಿಕ್ಸ್
ಖೇಮು ತನ್ನ ಕೋತಿಯೊಂದಿಗೆ ಪಬ್ಗೆ ಹೋದ. ಅವನು ಟೇಬಲ್ ಮೇಲೆ ಕೂತು ಎರಡು ಪೆಗ್‌ಗೆ ಆಡರ್ರ‍ ಮಾಡಿದ ಮೇಲೆ ಅವನ ಕೋತಿ ಎಂದರಲ್ಲಿ ಸುತ್ತುತ್ತಾ ಅಲ್ಲಿ ಫ್ರಿಜ್ ಮೇಲೆ ಇಟ್ಟಿದ್ದ ಸೌತೆಕಾಯಿ, ಕ್ಯಾರೆಟ್ ಎಲ್ಲಾ ತಿಂದುಬಿಡ್ತು. ಆ ಪಬ್‌ನಲ್ಲಿ ಸ್ನೂಕರ್ ಪಾಯಿಂಟ್ ಕೂಡ ಇತ್ತು, ಸ್ನೂಕರ್ ಟೇಬಲ್ ಮೇಲೆ ಹಾರಿದ ಕೋತಿ ಒಂದು ಸ್ನೂಕರ್ ಬಾಲ್ ತಗೊಂಡು ತಿಂದುಬಿಡ್ತು.

ಅಷ್ಟರಲ್ಲಿ ಸಪ್ಲೈಯರ್ ಬಂದು ‘ನಿಮ್ಮ ಕೋತಿ ಏನ್ ಮಾಡ್ತಾ ಇದೆ ನೋಡಿದ್ರಾ?’ ಅಂತ ಖೇಮುವನ್ನು ಕೆಳಿದ, ಅದಕ್ಕೆ ಟೀಮು ನಂಗೆಲ್ಲ ಗೊತ್ತು, ಅದು ಸ್ವಲ್ಪ ಹಂಗೆನೇ, ನಾನು ಎಲ್ಲದರ ಬಿಲ್ ಪೇ ಮಾಡ್ತೀನಿ, ಡೋಂಟ್ ವರಿ ಅಂದು ಕುಡಿತ ಮುಗಿಸಿ ಬಿಲ್ ಕೊಟ್ಟು ಮನೆಗೆ ಹೊರಟ. ಒಂದು ವಾರದ ನಂತರ ಮತ್ತು ಖೇಮು ಮತ್ತೆ ಕೋತಿಯೊಡನೆ ಪಬ್‌ಗೆ ಬಂದ, ಈ ಬಾರಿಯೂ ಕೋತಿ ಸಿಕ್ಕಸಿಕ್ಕದನ್ನೆ ತಿನ್ನುತ್ತಿತ್ತು, ಆದರೆ ಪ್ರತಿ ಬಾರಿ ಏನನ್ನಾದರೂ ತಿನ್ನುವ ಮುನ್ನ ಅದನ್ನು ತನ್ನ ಗುದದ್ವಾರದ ಒಳಗೆ ಇಟ್ಟು ಕೊಂಡು ನಂತರ ತೆಗೆದು ತಿನ್ನುತ್ತಿತ್ತು. ಅದನ್ನು ನೋಡಿ ವಿಚಿತ್ರ ಮತ್ತು ಅಸಹ್ಯ ಭಾವನೆಯೊಂದಿಗೆ ಸಪ್ಲೈಯರ್ ಹೇಳಿದ ‘ಸಾರ್, ನಿಮ್ ಕೋತಿ ಏನ್ ಮಾಡ್ತಾ ಇದೆ ನೋಡ್ತಾ ಇದೀರಾ?’ ಖೇಮು ಹೇಳಿದ ‘ಹೌದು, ಅದೇನಾಯ್ತು ಅಂದ್ರೆ, ಲಾಟೈಮ್ ಸ್ನೂಕರ್ ಬಾಲ್ ತಿಂದ ಮರುದಿನ ಬೆಳಗ್ಗೆ ಅದಕ್ಕೆ ಮೋಷನ್ ಟೈಮಲ್ಲಿ ಸಿಕ್ಕಾಬಟ್ಟೆ ಸಮಸ್ಯೆ ಆಯ್ತು. ಹಾಗಾಗಿ ಈಗ ಅದು ಏನು ತಿನ್ನಬೇಕಾದರೂ ಮೊದಲು ಸೈಜ್ ಟೆ ಮಾಡಿಕೊಂಡು ಆಮೇಲೆ ತಿನ್ನುತ್ತೆ!’

ಲೈನ್ ಮ್ಯಾನ್

ಮೋದಿ ಅವರು ಮುನ್ನೂರ ವರ್ಷಗಳ ಬಗ್ಗೆ ಯೋಚನೆ ಮಾಡಿ ಈ ಬಜೆಟ್ ಮಾಡಿದ್ದಾರೆ: ಸಿಟಿ ರವಿ
-ಹಂಗಾದ್ರೆ ಮುಂದಿನ ಬಜೆಟ್ ೩೦೦ ವರ್ಷಗಳ ನಂತರ

ಸದ್ಯಕ್ಕೆ LIC ಹೇಗಿದೆ?
-ICU ನಲ್ಲಿದೆ.

ಇಷ್ಟು ದಿನ ತಮಗೆ ಸಹಾಯ ಮಾಡಿದ ಪ್ರಧಾನಿ ಮೋದಿಗೆ ಅದಾನಿ ಹೇಳಿದ್ದೇನು?
-ಆ ಕರ್ಣನಂತೆ ನೀ ಅದಾನಿ ಆದೆ.

ರಾಜಕಾರಣಿಗಳ ಸಿಡಿಗಳು ಯಾಕೆ ಅಷ್ಟು ಸದ್ದು ಮಾಡ್ತವೆ?
-ಯಾಕಂದ್ರೆ, ಅವಕ್ಕೆ ಆನ್ ಲೈನ್ ಡಿಸ್ಟ್ರಿಬ್ಯೂಟರ‍್ಸ್ ಸಂಖ್ಯೆ ಜಾಸ್ತಿ

ಕ್ರಾಂತಿ ಸಿನಿಮಾ ಟ್ಯಾಗ್ ಲೈನ್
-‘ಬಡವರ ಮಕ್ಳನ್ನ ಓದೋಕ್ ಬಿಡ್ರೀ’

ಟೆನ್ನಿಸ್ ಆಟದಲ್ಲಿ ಬಳಸುವ ನೆಟ್‌ನ ಬೆಲೆ
-ನೆಟ್ ಅಮೌಂಟ್

ಪೊರ್ಕಿ ಹುಡುಗರ ಪಾಲಿಸಿ
-‘ಒಬ್ಬಳು ಸೈಟ್’ ಕೊಡ್ತಾಳೆ ಅಂತ ಅವಳನ್ನ ಲವ್ ಮಾಡೋದು, ಅವರಪ್ಪ ‘ಸೈಟ್’ ಕೊಡ್ತಾನೆ ಅಂತ ಇನ್ನೊಬ್ಬಳನ್ನ ಮದುವೆ ಆಗೋದು

‘ಒನ್ ಡೇ’ ಮ್ಯಾಚಲ್ಲಿ ಡಬಲ್ ಸೆಂಚುರಿ ಹೊಡೆದು ಆಮೇಲೆ ಡಲ್ ಆಗಿರೋ ಇಶಾನ್ ಕಿಶನ್
-‘ಒನ್ ಡೇ’ ಸ್ಪೆಷಲಿಸ್ಟ್

ರಾಖಿ ಹಬ್ಬದ ದಿನ ಯಾವ ಹುಡುಗಿಯರಿಂದಲೂ ಕೈಗೆ ರಾಖಿ ಕಟ್ಟಿಸಿಕೊಳ್ಳದೇ ತಪ್ಪಿಸಿಕೊಂಡು ಓಡಾಡುವವನು
-ಕ್ಲೀನ್ ಹ್ಯಾಂಡ್

ಮಂಜು ಹೆಚ್ಚಾಗಿ ಆಗುವ ಅನಾಹುತಗಳಿಗೆ ಕಾರಣ
-ಸ್ನೋ ಪಾಯಿಸನ್

Read E-Paper click here