Wednesday, 18th September 2024

ಶ್ರೀಕೃಷ್ಣ ಜನಾಷ್ಟಮಿ ಮಹತ್ವ

ತನ್ನಿಮಿತ್ತ

ವಿನೋದ್ ಕಾಮತ್

ಶ್ರೀ ಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ. ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರ ಸ್ಥಾನಗಳಾಗಿವೆ.

ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಉತ್ಸವವನ್ನು ವಿಶೇಷ ರೂಪ ದಲ್ಲಿ ಆಚರಿಸಲಾಗುತ್ತದೆ. ಈ ದಿನ ಬೃಂದಾವನದಲ್ಲಿ ಡೋಲೋತ್ಸವ ವಾಗುತ್ತದೆ ಮತ್ತು ನೋಡಲು ಇದು ಆನಂದದಾಯಕವಾಗಿರುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿಯೇ ಗೋಕುಲ-ಬೃಂದಾವನದ ಪ್ರತಿಕೃತಿಯನ್ನು ಮಾಡಿ ಶ್ರೀಕೃಷ್ಣ ನ ಜನ್ಮೋತ್ಸವವನ್ನು ಆಚರಿಸುತ್ತಾರೆ. ವೈಷ್ಣವ ಪಂಥೀಯರು ಈ ದಿನವನ್ನು ಅತೀವ ಭಕ್ತಿಭಾವದಿಂದ ಆಚರಿಸುತ್ತಾರೆ. ಅನೇಕ ವೈಷ್ಣವ ದೇವಾಲಯ ಗಳಲ್ಲಿ ದೀಪಾರಾಧನೆ, ಶೋಭಾಯಾತ್ರೆ, ಕೃಷ್ಣಲೀಲೆ, ಭಾಗವತ ಪಠಣ, ಕೀರ್ತನೆ, ಭಜನೆ, ನೃತ್ಯ-ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ. ಈ ಕಾರ್ಯಕ್ರಮಗಳು ಶ್ರಾವಣ ಕೃಷ್ಣಪಾಡ್ಯದಿಂದ ಶ್ರಾವಣ ಕೃಷ್ಣಾಷ್ಟಮಿಯವರೆಗೂ ನಡೆಯುತ್ತವೆ.

ಶ್ರೀಕೃಷ್ಣ ಜನ್ಮಾಷ್ಟಮಿ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ, ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನಗೊಳಿಸಲಾಗುತ್ತದೆ. ಇದು ಎಲ್ಲರೂ ಮಾಡುವಂಥ ವ್ರತವಾಗಿದ್ದು, ಮಕ್ಕಳು, ಯುವಕರು, ವೃದ್ಧರು, ಸೀಯರು ಇದರಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಪಾಪನಾಶ, ಸೌಖ್ಯವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ -ಲವಾಗಿದೆ. ವ್ರತದ ದಿನದಂದು ದಿನವಿಡೀ ಉಪವಾಸವನ್ನು ಮಾಡಲಾಗುತ್ತದೆ.

ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ, ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ, ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ. ಶ್ರೀಕೃಷ್ಣ ಜನಿಸಿದ್ದು ಮಧ್ಯರಾತ್ರಿ ಯಲ್ಲಿ, ಆದ್ದರಿಂದ ಶ್ರೀಕೃಷ್ಣ ಜಯಂತಿಯಂದು ಮಧ್ಯರಾತ್ರಿಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಈ ಪೂಜೆಯನ್ನು ಆರಂಭಿಸಲಾಗುತ್ತದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ: ನಿಮ್ಮ ಬಂಧು- ಮಿತ್ರರಿಗೆ ಕಿರುಸಂದೇಶಗಳನ್ನು ಕಳುಹಿಸಿ, ಶ್ರೀಕೃಷ್ಣನ ನಾಮಜಪ ಮಾಡುವಂತೆ ಅವರಿಗೆ ಸೂಚಿಸಿ. ಶ್ರೀಕೃಷ್ಣನ ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡಿ. ಶ್ರೀಕೃಷ್ಣನಿಗೆ ಅವಮಾನವಾಗುತ್ತಿರುವುದು ಕಂಡುಬಂದಲ್ಲಿ ಅದನ್ನು ತಡೆಗಟ್ಟಿ. ಇತರ ದಿನಗಳಿಗೆ ಹೋಲಿಸಿದಾಗ ಶ್ರೀಕೃಷ್ಣ ಜಯಂತಿಯಂದು ಕೃಷ್ಣತತ್ವವು ಹೆಚ್ಚು ಪ್ರಮಾಣದಲ್ಲಿ, ಅಂದರೆ ಒಂದು ಸಾವಿರ ಪಟ್ಟು ಹೆಚ್ಚು ಪ್ರಮಾಣ ದಲ್ಲಿ ಸಕ್ರಿಯವಾಗಿರುತ್ತದೆ, ಇದನ್ನು ಗ್ರಹಿಸಲು ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪವನ್ನು ಮಾಡಿ.

ಇದರಿಂದಾಗಿ ಶ್ರೀಕೃಷ್ಣನ ಚೈತನ್ಯದಾಯಕ ತತ್ವಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ‘ವ್ಯಾವಹಾ
ರಿಕ’ ಮತ್ತು ‘ಆಧ್ಯಾತ್ಮಿಕ’ ಈ ಎರಡೂ ಸ್ತರಗಳಲ್ಲೂ ಜೀವಕ್ಕೆ ಲಾಭ ವಾಗುತ್ತದೆ. ಇದರ ಜತೆಗೆ, ಈ ಕೃಷ್ಣಗಾಯತ್ರಿ ಮಂತ್ರವನ್ನೂ ಜಪಿಸಿದಲ್ಲಿ ಒಳಿತು: ‘ದೇವಕೀನಂದನಾಯ ವಿದ್ಮಹೇ | ವಾಸು ದೇವಾಯ ಧಿಮಹಿ | ತನ್ನೋ ಕೃಷ್ಣಃ ಪ್ರಚೋದಯಾತ್ ||’ (ಆರ್ಥ: ನಾವು ದೇವಕೀಪುತ್ರ ಕೃಷ್ಣನನ್ನು ಅರಿತಿದ್ದೇವೆ, ವಾಸುದೇವನ ಧ್ಯಾನ ಮಾಡು ತ್ತೇವೆ, ಆ ಕೃಷ್ಣನು ನಮ್ಮ ಬುದ್ಧಿಗೆ ಸತ್ ಪ್ರೇರಣೆ ನೀಡಲಿ).

(ಆಧಾರ: ಸನಾತನ ಸಂಸ್ಥೆಯ ಜಾಲತಾಣ.
ಲೇಖಕರು ರಾಜ್ಯ ವಕ್ತಾರರು, ಸನಾತನ ಸಂಸ್ಥೆ)

Leave a Reply

Your email address will not be published. Required fields are marked *