ಸ್ಮರಣೆ
ಪ್ರೊ.ಆರ್.ಜಿ.ಹೆಗಡೆ
ಅಧಃಪತನ ಬಂದಿರುವುದು ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರಅಲ್ಲ. ಶ್ರೇಷ್ಟತೆಯ ಅವಶ್ಯಕತೆಯೇ ಇಲ್ಲದ್ದು ಸಿನಿಮಾ ಸಂಗೀತದಲ್ಲಿ ಅಷ್ಟೆ? ಅಲ್ಲ. ಎಲ್ಲ ಕಡೆಯೂ ಇಂದೂ ಕೂಡ. ಎ.ಆರ್.ರೆಹಮಾನ್ ಅಂತಹ ಅದ್ಭುತ ಸಂಗೀತ ನಿರ್ದೇಶಕರು, ಹಾಡುಗಾರರು ಇದ್ದಾರೆ. ಹರಿಹರನ್ ಇದ್ದಾರೆ. ಆದರೆ ಸಮಸ್ಯೆಯೆಂದರೆ ಅಂತವರ ಡುಗಳನ್ನುಬಳಸಿಕೊಳ್ಳಬಲ್ಲ ಸಿನಿಮಾಗಳು ಕಡಿಮೆ.
ತಮ್ಮ ಸಂಗೀತದಿಂದ ಕೋಟ್ಯಾಂತರ ಜನರನ್ನು ರಂಜಿಸಿದ್ದ, ಕುಣಿದು ಕುಪ್ಪಳಿಸಿದ್ದ ಖ್ಯಾತ ಸಂಗೀತಗಾರ್ತಿ ಲತಾ ಮಂಗೇಶ್ಕರ್ ಇಹಲೋಕವನ್ನು ತ್ಯಜಿಸಿದ್ದಾರೆ. ಯಾವ ಸೌಕರ್ಯಗಳು ಇಲ್ಲದ ಕಾಲದಲ್ಲಿ, ಎಲ್ಲವನ್ನೂ ಸಾಧಿಸಿ ಹೋದ ಅವರ ಕೀರ್ತಿ ಅಪಾರವಾದದ್ದು. ಹಿಂದಿನ ಸಿನಿಮಾಗಳ ಹಾಡನ್ನು ಕೇಳಲು ಇಂದಿನ ಯುವಕರು ಹಿಂಜರೆಯುತ್ತಾರೆ. ಕಾರಣ ಇಂದು ಎಲ್ಲರ ಅಭಿರುಚಿ ಬದಲಾಗಿದೆ.
– ಬ್ಲರ್ಬ್ ದೇಶದ ಸಂಗೀತದ ಆತ್ಮವಾಗಿದ್ದ ಲತಾ ಮಂಗೇಶ್ಕರ್ ಇಲ್ಲವಾಗಿದ್ದಾರೆ. ಆಕೆ ಇನ್ನು ಹೊಸ ಹಾಡು ಗಳನ್ನು ಹಾಡುವುದಿಲ್ಲ. ಈಗ ನಾವು ನೆನಪಿನಲ್ಲಿ, ರೆಕಾರ್ಡರ್ ಗಳಲ್ಲಿ ತುಂಬಿರುವ ಅವರ ಹಾಡುಗಳನ್ನು ಕೇಳುತ್ತಾ ಸಮಯ ಕಳೆಯಬೇಕು. ಲತಾ ದೀ ಅವರ ಹಾಡುಗಳು ನಮ್ಮ ಹಾಡುಗಳೇ ಆಗಿದ್ದವು. ಅಲ್ಲಿ ಸಾಮಾನ್ಯನ ಮನಸ್ಸಿನಲ್ಲಿ ಬರುತ್ತಿದ್ದ ಭಾವನೆಗಳಿದ್ದವು. ಪ್ರೀತಿ, ವಿರಹ, ದೇಶಭಕ್ತಿ, ದೈವಭಕ್ತಿ ಇತ್ಯಾದಿ. ಹಾಗಾಗೀ ಅವನ್ನು ಕೇಳಿದಾಗ ಜೀವನ ಹಾಡಾಗುತ್ತಿತ್ತು, ಹಾಡು ಜೀವನವಾಗುತ್ತಿತ್ತು. ನಮಗೆ ಗೊತ್ತಿದೆ, ದೇಶದ ಹಲವು ಪೀಳಿಗೆಗಳ ಪ್ರೇಮಿಗಳ, ವಿರಹಿಗಳ ಬಾಯಲ್ಲಿ ಅವರದೇ ಹಾಡುಗಳು ಗುನುಗುನಿಸುತ್ತಿದ್ದವು. ಪ್ರೇಮ ಪತ್ರಗಳು ಅವರ ಹಾಡುಗಳ ಸಾಲುಗಳಿಂದ ತುಂಬಿರುತ್ತಿದ್ದವು.
ಸರ್ಕಸ್ಸಿನಲ್ಲಿ ಸೈಕಲ್ ಮೇಲೆ ಕುಳಿತು ಟ್ಯೂಬ್‌ಲೈಟ್ ಒಡೆಯುವುದು ಇತ್ಯಾದಿ ಮಾಡುತ್ತಿದ್ದ ಯುವಕ ಓಮೇರೆ ಸನಮ್ ಹಾಡುತ್ತಿದ್ದ. ಪಿಯುಸಿಯಲ್ಲಿಯೇ ತೀವ್ರ ಪ್ರೀತಿಯೊಳಗೆ ಬಿದ್ದಿದ್ದ, ಕಾಲೇಜನ್ನೇ ಮುಗಿಸದೆ ಪ್ರಿಯಕರ ನೊಂದಿಗೆ ಓಡಿ ಹೋದ ಕರಿಜಾನಕಿ ಸತ್ಯಂ ಶಿವಂ ಸುಂದರಂ ಹಾಡನ್ನು ಅದ್ಬುತವಾಗಿ ಹಾಡುತ್ತಿದ್ದಳು. ಲತಾ ಮಂಗೇಶ್ಕರ್ ಹಾಡುಗಳ ಜನಪದ ಹಾಡುಗಳಾಗಿ ಹೋಗಿದ್ದವು. ಹಿಂದಿ ಭಾಷೆಯ ಕಾಳಕ್ಷರ ಬರದ, ತಮ್ಮ ಇಡೀ ಜನ್ಮದಲ್ಲಿ ಸಿನಿಮಾ ನೋಡದ ಜನ ಅವರ ಹಾಡುಗಳನ್ನು ಹಾಡುತ್ತಿದ್ದರು. ಹೀಗೆ ಲತಾ ಇಡೀ ದೇಶದ ಸಂಸ್ಕೃತಿಯ ಒಂದು ಭಾಗವಾಗಿ ಹೋಗಿದ್ದರು.
ಒಂದು ಅರ್ಥದಲ್ಲಿ ಲತಾ ಅವರ ಹಾಡುಗಳನ್ನು ಜನ ಹಾಡುತ್ತಿರಲಿಲ್ಲ. ಜನರ ಹಾಡುಗಳನ್ನು ಆಕೆ ಹಾಡುತ್ತಿದ್ದರು. ಜನ ಬರೇ ಕೇಳುಗರು. ಹೀಗಾಗಿ ಆಕೆ
ದೇಶದಧ್ವನಿಯಾಗಿ ಹೋಗಿದ್ದರು. ಅವರ ಸಿನಿಮಾ ಗೀತೆಗಳನ್ನು ಕೇಳದವರು ಅವರ ರಾಮಭಜನೆಗಳು ಶ್ರೀರಾಮಚಂದ್ರ ಕೃಪಾಳು ಭಜಮನ ಇತ್ಯಾದಿ ಕೇಳಿ
ದಿವ್ಯತೆ ಅನುಭವಿಸುತ್ತಿದ್ದರು. ಲತಾ ಅಂತಹ ಹಾಡುಗಾರ್ತಿ ಮತ್ತೆ ಹುಟ್ಟಿ ಬರುವುದಿಲ್ಲ. ಇನ್ನೂ ಒಂದು ಒಂದು ದೃಷ್ಟಿಯಿಂದಲೂ ಕೂಡ ಆಕೆಯಂತಹ ಹಾಡು ಗಾರ್ತಿ ಮತ್ತೆ ಬರುವುದಿಲ್ಲ.
ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾಗಿದ್ದ ಸ್ವಾತಂತ್ರ್ಯೋತ್ತರ ಭಾರತದಲ್ಲಿಉಚ್ರಾಯಕ್ಕೆ ಬಂದಿದ್ದ ಆಕೆ ಬಹುಶಃ ಅದ್ರಷ್ಟಶಾಲಿಯಾಗಿದ್ದರು ಕೂಡ. ಏಕೆಂದರೆ
ಅವರ. ಸುತ್ತಮುತ್ತ ಅಂತಹ ಸಾಂಸ್ಕೃತಿಕ ವಾತಾವರಣ ಇತ್ತು. ಹಾಡುಗಳಿಗಾಗಿ ಶ್ರೇಷ್ಠ ಸಾಹಿತ್ಯ ಸೃಷ್ಟಿಸುತ್ತಿದ್ದ ಕವಿಗಳು ಇದ್ದರು. ಗಟ್ಟಿಯಾದ ಸಾಹಿತ್ಯ ಅದು. ಅಂತಹ ಕೆಲವು ಸಾಲುಗಳನ್ನು ಗಮನಿಸಿ. ಆಂಖೋಮೆ ಸಮಂದರ್ ಆಶಾ ವೋಂಕಾ ಪಾನೀಹೈ. ಜಿಂದಗಿ ಔರ್ ಕುಚ್ ಭೀ ನಹೀ, ತೇರಿ ಮೇರಿ ಕಹಾನಿ ಹೈ ಅಂತಹ ಸಾಲುಗಳು ಸಾಹಿತ್ಯವಾಗಿಯೂ ಸಾವಿರಾರು ವರ್ಷ ಬದುಕಬಲ್ಲವು.
ಮತ್ತೆ ಅಂತಹ ಹಾಡುಗಳಿಗೆ ರಾಗ ಸಂಯೋಜನೆ ಮಾಡಲು ಶ್ರೇಷ್ಠ ಸಂಗೀತ ನಿರ್ದೇಶಕರು ಇದ್ದರು. ಲತಾ ಮಂಗೇಶ್ಕರ್ ಹಾಡುಗಳ ಅವಶ್ಯಕತೆ ಇದ್ದ
ಸಿನಿಮಾಗಳು ಇದ್ದವು. ಅಂತಹ ಹಾಡುಗಳನ್ನು ಸಿನಿಮಾದೊಳಗೆ ಜೋಡಿಸಬಲ್ಲ ನಿರ್ದೇಶಕರು ಇದ್ದರು. ಅಂತಹ ಸಿನಿಮಾಗಳಿಗೆ ದುಡ್ಡು ಹಾಕುವ ನಿರ್ಮಾಪಕರು
ಇದ್ದರು. ಮುಖ್ಯವಾಗಿ ಆ ಸಿನಿಮಾಗಳನ್ನು ಅಂತಹ ದುಡ್ಡಿಲ್ಲದ ಸಮಯದಲ್ಲಿಯೂ ನೋಡುವವರು ಇದ್ದರು.
ಹಾಡುಗಳನ್ನು ಆಸ್ವಾದಿಸುವವರು ಇದ್ದರು. ಲತಾ ಮಂಗೇಶ್ಕರ್ ಅವರ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಬಲ್ಲ ಸಾಮಾಜಿಕ, ರಾಜಕೀಯ ನಾಯಕರು ಇದ್ದರು.
ನೆಹರೂ, ಇಂಽರಾಗಾಂಽ, ವಾಜಪೇಯಿ ಹಾಗೂ ನರಸಿಂಹರಾವ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಲತಾಗೆ ಬೆಂಬಲವಾಗಿ ನಿಂತಿದ್ದರು. ಲತಾ
ಮುಕ್ಕಾಲು ಶತಮಾನಕ್ಕೂ ಹೆಚ್ಚು ಕಾಲ ದೇಶದ ಸಾಂಸ್ಕೃತಿಕ ಐಕಾನ್ ಆಗಿ ಹೋಗಿದ್ದು ಈ ಕಾರಣದಿಂದ. ಅಂದರೆದೆ ಶದಲ್ಲಿದ ಒಂದು ಇಡೀ ಸಾಂಸ್ಕೃತಿಕ
ವಾತಾವರಣವೇ ಲತಾ ಅವರನ್ನು ಪೋಷಿಸಿದ್ದು. ಮತ್ತೆ ತಿರುಗಿ ಆಕೆ ಆ ಸಂಸ್ಕೃತಿಗೆ ಅಪಾರ ದೇಣಿಗೆ ನೀಡಿ ಹೋದರು.
ಖ್ಯಾತ ಬ್ರಿಟಿಷ್ ಕಾದಂಬರಿಕಾರ್ತಿ ವರ್ಜಿನಿಯಾ ವುಲ ಹೇಳಿದ ಒಂದು ಮಾತನ್ನುಇಲ್ಲಿ ನೆನಪಿಸಿಕೊಳ್ಳಬೇಕು. ಏನೆಂದರೆ ಇಪ್ಪತ್ತನೇಯ ಶತಮಾನದ ಆರಂಭ ದಲ್ಲಿ ಬ್ರಿಟಿಷ್ ಜನರ ಮನಸ್ಸು ಏಕಾಏಕಿಯಾಗಿ ಬದಲಾಗಿ ಹೋಯಿತು. ಬ್ರಿಟಿಷರು ಅಲ್ಲಿ ಬದಲಾದರೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ನಮ್ಮ ದೇಶದಲ್ಲಿ ಇಪ್ಪತ್ತೊಂದನೇಯ ಶತಮಾನದಲ್ಲಿ ಜನರ ಗುಣ ಒಮ್ಮೆಲೇ ಬದಲಾಗಿ ಹೋಗಿದ್ದು ಹೌದು ಅನ್ನಿಸುತ್ತದೆ. ಜನರ ಅಸಕ್ತಿಗಳು, ನಡವಳಿಕೆಗಳು ಬದಲಾಗಿ
ಹೋದಂತಿದೆ. ಸಾಂಸ್ಕೃತಿಕ ವಾತಾವರಣ ಒಮ್ಮೆಲೇ ಬದಲಾಗಿ ಹೋದಂತಿದೆ. ಗಮನಿಸಬೇಕು, ಇಂದು ಒಳ್ಳೆಯ ಹಾಡುಗಳನ್ನು ಬರೆಯುವವರು ಕಡಿಮೆ.
ಅಂತಹ ಹಾಡುಗಳು ಜನರಿಗೂ ಬೇಕಿದ್ದಂತಿಲ್ಲ. ಈಗೀನ ಹಾಡುಗಳನ್ನು ಉದಾಹರಣೆಗೆ ಈ ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು. ನೀ ಮಾಡು ಅಥವಾ
’ಅಲ್ಲಾಡ್ಸು ,ಅಲ್ಲಾಡ್ಸು, ಮೇಲೆ ಕೆಳಗೆ ಅಲ್ಲಾಡ್ಸು ..ಆಚೆ ಈಚೆ ಅಲ್ಲಾಡ್ಸು’ ಇಂತಹ ಹಾಡುಗಳನ್ನು ಹಾಡಲು ಆಕೆಗೆ ಸಾಧ್ಯವಾಗುತ್ತಿತ್ತೇ? ಹಾಡಿದ್ದರೆ ಹೇಗಿರುತ್ತಿತ್ತು? ಅಥವಾ ಚೋಲಿಕೇ ಪೀ ಛೆಕ್ಯಾಹೆ ಎನ್ನುವ ಹಾಡನ್ನುಅವರಿಂದ ಹಾಡಿಸಿದ್ದರೆ ಹೇಗಿರುತ್ತಿತ್ತು. ಇಂದಿನ ಸಾಹಿತ್ಯವನ್ನು ಹಾಡಲು ಲತಾಗೆ ಸಾಧ್ಯವಾಗುತ್ತಿರಲಿಲ್ಲ. ಮತ್ತೆ ಅಂತಹ ಹಾಡನ್ನುಒಮ್ಮೆ ಹಾಡಿದರೆ ಆಕೆ ಲತಾ ಮಂಗೇಶ್ಕರ್ ಅಗಿ ಉಳಿಯುತ್ತಲೂ ಇರಲಿಲ್ಲ. ನಮ್ಮ ಸಂಸ್ಕೃತಿಯ ಕೇಂದ್ರ ಬಿಂದು, ದೇಶದ ಸಾಂಸ್ಕೃತಿಕ ಆತ್ಮ ಆಗುತ್ತಿರಲೂ ಇಲ್ಲ. ಇಂದು ಕೂಡ ಒಳ್ಳೆಯ ಹಾಡುಗಾರರು ಇರಬಹುದು.
ಆದರೆ ಅವರ ಸಂಕಟಗಳನ್ನು ಗಮನಿಸಿ. ಅವರಿಗಿರುವ ಹಾಡುಗಳು ಇಂಥವು. ಮೊದಲಿನಂತಹ ಹಾಡುಗಳು ಏಕೆ ಇಲ್ಲವೆಂದರೆ ಅಂತಹ ಸಿನಿಮಾಗಳು ಇಲ್ಲ. ಅಂತಹ ಸಿನಿಮಾಗಳು ಯಾಕಿಲ್ಲವೆಂದರೆ ಅಂತಹ ಸಿನಿಮಾಗಳಿಗೆ ದುಡ್ಡು ತೊಡಗಿಸುವವರು ಇಲ್ಲ.ಮುಖ್ಯವಾಗಿ ಅಂತಹ ಸಿನಿಮಾಗಳನ್ನು ನೋಡುವವರು ಇಲ್ಲ.ಮೂರು ತಾಸು ಸಿನಿಮಾವನ್ನು ನೋಡುವ ಸಹನೆ ಅಥವಾ ಪುರುಸೊತ್ತು ಈಗ ಯಾರಿಗೂ ಇಲ್ಲ. ಅಂಥ ಹಾಡುಗಳನ್ನು ಕೇಳುವವರೂ ಈಗ ಬಹಳ ಜನ ಉಳಿದಿಲ್ಲ ಎಂದೇ ಭಾವನೆ. ಮತ್ತು ಇಂದಿನ ಸಿನಿಮಾಗಳಲ್ಲಿ ಬಹುಶಃ ಭಾವನೆಗಳ ಅಗತ್ಯವೇ ಇಲ್ಲ.
ಪ್ರೀತಿ, ಪ್ರೇಮ ವಿರಹ, ತ್ಯಾಗ, ಸಂಕಟ, ಸಾಮಾಜಿಕ ಮೌಲ್ಯಗಳು ಯಾವುದೂ ಅಲ್ಲಿ ಇಲ್ಲವೇ ಇಲ್ಲ. ಗಮನಿಸಬೇಕು. ಇಂದಿನವು ಸಾಂಸ್ಕೃತಿಕವಾಗಿ ನ್ಯೂಟ್ರಲ್ ಆಗಿ ಹೋದ ಸಿನಿಮಾಗಳು. ಹೆಚ್ಚಿನ ಸಿನಿಮಾಗಳಿಗೆ ಒಂದು ಸಾಂಸ್ಕೃತಿಕ ಚೌಕಟ್ಟು ಇಲ್ಲವೇ ಇಲ್ಲ. ಹುಡುಗ ಹುಡುಗಿ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿ ಸಮುದ್ರಕ್ಕೆ ಬೀಳುವುದು ಅಥವಾ ಚಿಕ್ಕ ಬಟ್ಟೆ ಹಾಕಿಕೊಂಡು ಕುಣಿಯುವುದು ಇಂದಿನ ಕಥೆಗಳು. ಈ ಸಿನಿಮಾಗಳು ಸಂಸ್ಕೃತಿಗಳ ಕಥೆ ಹೇಳುವುದೇ ಇಲ್ಲ. ಏಕೆಂದರೆ ಸಾಂಸ್ಕೃತಿಕವಾದ ಸಿನಿಮಾಗಳು ಇಂದು ಜನರಿಗೆ ಮನರಂಜನೆ ನೀಡುವುದಿಲ್ಲ.
ಭಾವನಾತ್ಮಕವಾದ ಹಾಡುಗಳು ಬೇಡ. ಯಾಕೆಂದರೆ ಯಾರಿಗೂ ಈಗ ತೀವ್ರ ಪ್ರೀತಿಯಲ್ಲಿ ಬೀಳಲು ಇಷ್ಟವಿರುವಂತಿಲ್ಲ. ಇಂದಿನವೆಲ್ಲ ಗೆಳೆತನಗಳು, ಪ್ರೀತಿ ಯಲ್ಲ. ಕೇವಲ ಹಿಂದಿ ಭಾಷೆಗೆ, ಸಿನಿಮಾಗಳಿಗೆ, ಹಾಡುಗಳಿಗೆ ಇಂಥದುರ್ಗತಿ ಒದಗಿದೆ ಎಂದೇನೂ ಅಲ್ಲ. ಎಲ್ಲ ಭಾಷೆಗಳಿಗೂ, ಸಿನಿಮಾಗಳಿಗೂ, ಹಾಡುಗಳಿಗೂ ಅದೇಗತಿ. ವಯಸ್ಸಿನ ಕಾರಣದಿಂದಾಗಿ ಲತಾ ಮಂಗೇಶ್ಕರ್ ಹಾಡು ನಿಲ್ಲಿಸಿ ಕೆಲ ಸಮಯವಾಗಿತ್ತು. ಅದಿಲ್ಲದಿದ್ದರೂ ಕೂಡ ಈಗ ಅವರು ಬಹುಶಃ ಹಾಡುವುದನ್ನು ನಿಲ್ಲಿಸಬೇಕಾಗುತ್ತಿತ್ತೇನೋ, ತಮ್ಮಗೌರವ ಇಟ್ಟುಕೊಳ್ಳಲು.
ಅಧಃಪತನ ಬಂದಿರುವುದು ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರಅಲ್ಲ. ಶ್ರೇಷ್ಟತೆಯ ಅವಶ್ಯಕತೆಯೇ ಇಲ್ಲದ್ದು ಸಿನಿಮಾ ಸಂಗೀತದಲ್ಲಿ ಅಷ್ಟೆ? ಅಲ್ಲ. ಎಲ್ಲ ಕಡೆಯೂ ಇಂದೂ ಕೂಡ. ಎ.ಆರ್. ರೆಹಮಾನ್ ಅಂತಹ ಅದ್ಭುತ ಸಂಗೀತ ನಿರ್ದೇಶಕರು, ಹಾಡುಗಾರರು ಇದ್ದಾರೆ. ಹರಿಹರನ್ ಇದ್ದಾರೆ. ಆದರೆ ಸಮಸ್ಯೆಯೆಂದರೆ
ಅಂತವರ ಹಾಡುಗಳನ್ನುಬಳಸಿಕೊಳ್ಳಬಲ್ಲ ಸಿನಿಮಾಗಳು ಕಡಿಮೆ. ಒಳ್ಳೆಯ ಸಂಗೀತವಿದ್ದ ಜೋಧಾ ಅಕ್ಬರ್ -ಪ್ ಆಯಿತು. ದೇವದಾಸ್‌ಗೆ ಕೂಡ ಅದೇ ಗತಿ ಆಯಿತು.
ಈಗ ಬಹುಶಃ ಯಾವ ನಿರ್ಮಾಪಕನೂ ಅಂತಹ ಸಿನಿಮಾಗಳಿಗೆ ಕೈ ಹಾಕುವುದಿಲ್ಲ. ಅಂತಹ ಹಾಡುಗಳನ್ನು ಕೇಳುವರೂ ಅಷ್ಟಾಗಿ ಇಲ್ಲ. ಇಂದು ಜನ ಕೇಳುವ
ಹಾಡುಗಳೇ ಬೇರೆ. ಇಂದು ಹೆಚ್ಚು ಮಾರಾಟವಾಗುವ ಶಬ್ದಗಳು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯ. ಅಂದರೆ ರಾಜಕೀಯ. ಹಾಗಾಗಿ ಶ್ರೇಷ್ಠತೆ ಒಂದು ವ್ಯಸನವಾಗಿ ಉಳಿದೇ ಇಲ್ಲ. ಕುಲಪತಿಗಳು, ಅಕಾಡೆಮಿಗಳ ಅಧ್ಯಕ್ಷರು ಎಲ ಹೇಗಿದ್ದರೂ ಸಾಕು. ಮೌಲ್ಯ ನಿರ್ಧಾರವಾಗುವುದು ಶ್ರೇಷ್ಠತೆಯನ್ನು ಆಧರಿಸಿ ಅಲ್ಲ. ಮತಗಟ್ಟೆಯ ರಾಜಕೀಯದಲ್ಲಿ ಅವರ ಮೌಲ್ಯವನ್ನು ಅವಲಂಬಿಸಿ.
ಹೀಗಾಗಿ ಶ್ರೇಷ್ಠತೆ ಒಂದು ವಿಷಯವೇ ಆಗಿರದ ನಮ್ಮ ಸಮಾಜ ಅಂತಹ ವ್ಯಕ್ತಿಗಳನ್ನು ಸೃಷ್ಟಿಸುವುದು ಕೂಡಾ ಕಡಿಮೆ ಎಂದೇ ಭಾವನೆ. ಹೀಗಾಗಿಯೂ ಬಹುಶಃ ಲತಾ ಮಂಗೇಶ್ಕರ್ ಮತ್ತೆ ಹುಟ್ಟಿ ಬರುವುದಿಲ್ಲ.