ನಾರಾಯಣ ರಾಯಚೂರ್
ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೆಲವು ನಿಮಿಷಗಳಾದರೂ ನಗೆ,ಹಾಸ್ಯ, ತುಂಟತನದಿಂದ ಕೂಡಿದ್ದರೆ ಗಂಭೀರ ಬದುಕಿನ ಒತ್ತಡ ದೂರವಾಗಿ, ದೇಹ-ಮನಸ್ಸುಗಳು ಹಗುರಗೊಂಡು ಉಸಕ್ಕೆಡೆ ಮಾಡಿಕೊಡುತ್ತವೆ, ಆರೋಗ್ಯ ಭಾಗ್ಯವನ್ನು ಒದಗಿಸುತ್ತವೆ.
ವಿಶ್ವ -ಸಾಮ್ರಾಟರೆಂದು ಮೆರೆಯುತ್ತಿದ್ದ ಬ್ರಿಟೀಷರನ್ನು ಎದುರಿಸಿ ಗೆದ್ದ ಗಾಂಧೀಜಿ ಹೇಳುತ್ತಾರೆ- ಹಾಸ್ಯಪ್ರಜ್ಞೆ ಎಂಬುದು ಇರದೇ ಹೋಗಿದ್ದರೆ, ನಾನೆಂದೋ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ… ಸಾಕಲ್ಲವೆ ಇಷ್ಟು-ಹಾಸ್ಯದ ಮಹತ್ವ ಸಾರಲು.! ಇಂದಿನ ಪೀಳಿಗೆ ಯಂತೂ ಒತ್ತಡದ ಬದುಕಿಗೇ ಒಗ್ಗಿ ಹೋಗಿದ್ದಾರೆ.
247 ಸೂತ್ರಕ್ಕೆ ತಲೆಬಾಗಿ, ವಿಕೆಂಡ್ ಬಂದರೂ ಇನ್ನೇನೋ ಅಂಟಿಸಿಕೊಂಡು ಆಕಾಶವೇ ಕಳಚಿ ಬಿದ್ದಂತೆ ಅಲೆದಾಡುತ್ತಿರುತ್ತಾರೆ. ಕೊಂಚ ನಗು, ತುಸು ಚೇಷ್ಟೆ,ಮೃದು- ಹಾಸ್ಯ ಗಳಿಗೆ ಗಳಿಗೆಯೂ ಸಮಯವಿಲ್ಲ. ಅದರ ಫಲವೇ ಲಾಫ್ಟರ್ ಕ್ಲಬ್, ನಗೆಹಬ್ಬಗಳು, ಹಾಸ್ಯೋತ್ಸವ ಇತ್ಯಾದಿಗಳು. ಮುಂಬೈನ ಖ್ಯಾತ ವೈದ್ಯ ಮದನ್ ಕಟಾರಿಯಾ ಅವರು ಮಹಾನಗರಿಯ, ಒತ್ತಡ ಬದುಕಿಗೆ ವಿದಾಯ ಹೇಳಲಾಗದಿದ್ದರೂ, ತುಸು ವಿರಾಮವನ್ನಾ ದರೂ ಹೇಳಲು, ನಗೆ- ಯೋಗಕ್ಕೆ ಒತ್ತು ಕೊಡುವ ಲಾಫ್ಟರ್ ಕ್ಲಬ್ಗಳ ಆರಂಭ ಮಾತ್ರ ವಲ್ಲ, 1998 ರಿಂದ ಮೇ ತಿಂಗಳ ಮೊದಲ ಭಾನುವಾರ ದಂದು ವಿಶ್ವ ನಗೆ ದಿನಾಚರಣೆ ಯನ್ನೂ ಪ್ರಾರಂಭಿಸಿ ದರು.
ಈಗ ಅದಕ್ಕೆ ಬೆಳ್ಳಿ- ಹಬ್ಬದ ಸಂಭ್ರಮ. ಸುಮಾರು ನೂರೈದಕ್ಕೂ ಹೆಚ್ಚು ದೇಶಗಳು ವಿಶ್ವ ನಗೆ ದಿನವನ್ನು ನಗು-ನಗುತ್ತ ಆಚರಿಸಿ ಕೊಂಡು ಬರುತ್ತಿವೆ. ಅಮೆರಿಕದ ಪ್ರತಿಷ್ಠಿತ ಲಾಸೆಂಜಿಲೀಸ್ ನಗರವೂ ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ವಿಶ್ವ ನಗೆ ದಿನ ಅತ್ಯುತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಲಾ-ಟ್ ಕ್ಲಬ್ಗಳು ಕೇವಲ ತಮಾಷೆ, ನಗೆಗಷ್ಟೇ ಸೀಮಿತವಾಗದೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿ ನಗುವಿಂದ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳು ದೇಹ -ಮನಸ್ಸುಗಳ ಉಸಕ್ಕೆ ಪೂರಕ ಎಂಬುದನ್ನು ಧೃಡೀಕರಿಸಿವೆ.
ಇಂತಹ ಪ್ರಯೋಜನಕಾರಿ ಅಂಶಗಳಿದ್ದಾಗಲೂ ನಗುವನ್ನು ನಾವು ಅಷ್ಟೇನೂ ಸುಲಭವಾಗಿ ರೂಢಿಸಿಕೊಂಡಿಲ್ಲ. ಖ್ಯಾತ ನಗೆಗಾರ /ದಾರ್ಶನಿಕ ಬೀಚಿ ಅವರ ಈ ಮಾತುಗಳನ್ನೇ ಗಮನಿಸಿ – ನಮ್ಮ ಜನ ಬಾಯಿಬಿಡುವುದು, ಹಲ್ ಕಿರಿಯುವುದು ಟೂಥ್
ಬ್ರಷ್ಗೆ ಮಾತ್ರ!’ ಹಾಗೆಯೇ ವಿಶ್ವಮಾನ್ಯ ಹಾಸ್ಯ ಲೇಖಕ ಮಾರ್ಕ್ ಟ್ವೈನ್ ಹೇಳುವಂತೆ -‘ಮಾನವ ಜನಾಂಗಕ್ಕಿರುವ ಏಕೈಕ ಪ್ರಬಲ ಅಸವೆಂದರೆ -ಹಾಸ್ಯ ಪ್ರಜ್ಞೆ.’
ಲಾಫ್ಟರ್ ಕ್ಲಬ್ನ ರೂವಾರಿ ಡಾಕ್ಟರ್ ಮದನ್ ಕಟಾರಿಯಾ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ ‘ನಕ್ಕು ನಕ್ಕು ಸತ್ತ ಒಬ್ಬನನ್ನೂ ನಾನೆಂ ದೂ ಕಂಡಿಲ್ಲ; ನಗದೇ ಸತ್ತ ಲಕ್ಷಾಂತರ ಜನರನ್ನು ಕಂಡಿದ್ದೇನೆ’. ಪ್ರತಿ ವರ್ಷ ನಗೆ ದಿನ ಆಚರಣೆಗೆ ಒಂದು ನಿರ್ದಿಷ್ಟ ವಿಷಯವನ್ನು ನಿಗದಿಗೊಳಿಸಲಾಗಿರುತ್ತದೆ, ಆದರೆ ಈ ಬಾರಿ ಅಂತಹ ಯಾವುದೇ ವಿಷಯ ಘೋಷಣೆ ಆಗಿಲ್ಲ. ಮೇ ಮೊದಲ ಭಾನುವಾರ ಸಾರ್ವಜನಿಕ ಉದ್ಯಾನ, ಮೈದಾನ, ಮನೆಯಂಗಳಗಳಲ್ಲಿ ಸೇರಿ ಸುಲಭದ ಮೈ -ಸಡಿಲಿಸುವ ವ್ಯಾಯಾ ಮದ ನಂತರ ಗಟ್ಟಿಯಾಗಿ ಸಾಮೂಹಿಕವಾಗಿ ನಗುತ್ತ, ಚಪ್ಪಾಳೆ ತಟ್ಟುತ್ತ ಬೆರೆಯುವುದು, ನಂತರ ಹಾಸ್ಯ ಪ್ರಸಂಗ, ಹಾಡು, ಹಾಸ್ಯ ಚಿತ್ರ / ಕಿರುತೆರೆ ಕಾರ್ಯಕ್ರಮ /ಪತ್ರಿಕೆ, ಪುಸ್ತಕ, ವಾಟ್ಸಪ್ ಇತ್ಯಾದಿಗಳಲ್ಲಿ ಸ್ನೇಹಿತರು, ಮನೆ -ಮಂದಿಯೆಲ್ಲ ಭಾಗಿಯಾಗಿ ನಲಿ ಯುವುದು ವಿಶ್ವ ನಗೆ ದಿನಾಚರಣೆಯ ಪರಿಪಾಠ.
ಅಂತೆಯೇ ಮಂಕುತಿಮ್ಮನ ಹಿತವಚನಗಳಂತೆ ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ; ನಗುತ ನಗಿಸುವುದು
ಅತಿಶಯದ ಧರ್ಮ ಎನ್ನುತ್ತಾ ನಿತ್ಯ ನಗು ನಗುತ್ತ ಇರುವ ಸದಾಶಯವನ್ನು ನಮ್ಮದಾಗಿಸಿಕೊಳ್ಳೋಣ.