Friday, 22nd November 2024

ಕನ್ನಡ ಓದಲು ಬಾರದ ಮಧು ಬಂಗಾರಪ್ಪನವರಿಗೊಂದು ಪತ್ರ

ನೂರೆಂಟು ವಿಶ್ವ

ಆತ್ಮೀಯ ಮಧು ಬಂಗಾರಪ್ಪ ಅವರೇ,
ಸಪ್ರೇಮ ವಂದನೆಗಳು.
ಸಾಮಾನ್ಯವಾಗಿ ಪತ್ರಿಕೆಯ ಮೂಲಕ ನಾನು ಯಾರಿಗೂ ಪತ್ರ ಬರೆಯಲು ಹೋಗುವುದಿಲ್ಲ. ಈ ರೀತಿ ನಾನು ಪತ್ರ ಬರೆದಿದ್ದು ತೀರಾ ವಿರಳ. ಆದರೆ ಇತ್ತೀಚಿನ ನಿಮ್ಮ ಒಂದು ಹೇಳಿಕೆಯನ್ನು ನೋಡಿ, ಪತ್ರ ಬರೆಯಲೇ ಬೇಕು ಎಂದು ಅನಿಸಿತು. ಆಗ ಇನ್ನೊಂದು ಸಂದಿಗ್ಧ ಎದುರಾಗಿದೆ. ಅದೇನೆಂದರೆ, ನಾನು ಯಾವ ವಿಷಯದ ಬಗ್ಗೆ ನಿಮಗೆ ಪತ್ರ ಬರೆಯಬೇಕು ಎಂದು ಅಂದುಕೊಂಡಿದ್ದಾನೋ, ಆ ವಿಷಯವೇ ನಿಮಗೆ ಗೊತ್ತಿಲ್ಲ. ಹೀಗಿರುವಾಗ ನಾನು ಬರೆದ ಪತ್ರವನ್ನು ನೀವು ಓದುತ್ತೀರೋ ಇಲ್ಲವೋ ಎಂಬ ಅನುಮಾನ ಸಹ ನನ್ನನ್ನು ಕಾಡಲಾರಂಭಿಸಿದೆ.

ಅದೇನೇ ಇರಲಿ, ವಿಷಯ ನಿಮ್ಮ ಗಮನಕ್ಕೆ ಬರಬಹುದು ಎಂಬ ಭರವಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ಇತ್ತೀಚೆಗೆ ನೀವು ‘ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರುವುದಿಲ್ಲ, ಕನ್ನಡ ಉಚ್ಚಾರಣೆ ಸ್ವಲ್ಪ ತಪ್ಪಾಗುತ್ತದೆ’ ಎಂದು ಹೇಳಿದ್ದನ್ನು ಟಿವಿಯಲ್ಲಿ, ಪತ್ರಿಕೆಯಲ್ಲಿ ನೋಡಿದೆ. ನಿಮ್ಮ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ ಆಯಿತು. ನೆಟ್ಟಿಗರು ಅದನ್ನು ಸಕತ್ ಟ್ರೋಲ್ ಮಾಡಿದರು. ಇದು ನಿಮ್ಮ ಗಮನಕ್ಕೆ ಬಂದಿರಬಹುದು ಎಂದು ಭಾವಿಸುತ್ತೇನೆ.

ಕೆಲವರಂತೂ ನಿಮ್ಮ ಆ ಹೇಳಿಕೆಯನ್ನು ಅತ್ಯಂತ ಉಗ್ರ ಭಾಷೆಯಲ್ಲಿ ಖಂಡಿಸಿದರು. ‘ನೀವು ಮಂತ್ರಿಯಾಗಿರುವುದಕ್ಕಷ್ಟೇ ಅಲ್ಲ, ಕರ್ನಾಟಕದಲ್ಲಿ ಇರುವುದಕ್ಕೂ ಲಾಯಕ್ಕಲ್ಲ’ ಎನ್ನುವ ಧಾಟಿಯಲ್ಲಿ ಬೈದರು. ಅದು ನಿಮ್ಮ ಗಮನಕ್ಕೆ ಬಂತೋ, ಇಲ್ಲವೋ ಗೊತ್ತಿಲ್ಲ. ಅದು ಜನರ ಸಹಜ ಪ್ರತಿಕ್ರಿಯೆ. ನೀವು ಹೇಳಿದ್ದೀರಿ ಅಂತಲ್ಲ, ನಿಮ್ಮ ಜಾಗದಲ್ಲಿ ಆ ಮಾತನ್ನು ಯಾರೇ ಹೇಳಿದ್ದರೂ, ಅದು ಇಷ್ಟೇ ಟ್ರೋಲ್ ಆಗುತ್ತಿತ್ತು. ಹೀಗಾಗಿ ನಿಮ್ಮ ಬಗ್ಗೆ ಯಾರಿಗೂ ವೈಯಕ್ತಿಕ ದ್ವೇಷ, ತಿರಸ್ಕಾರ, bಜಿoಜಿhಛಿ ಇದ್ದಿರಲಾರದು. ನಾನೂ ಅಷ್ಟೇ, ಆ ಹೇಳಿಕೆಯನ್ನು ಯಾರೇ ಹೇಳಿದ್ದಿದ್ದರೂ, ಸುಮ್ಮನೆ ಇರುತ್ತಿರಲಿಲ್ಲ.

ಹೇಳಬೇಕಾದುದನ್ನು ಹೇಳಿಯೇ ತೀರುತ್ತಿದ್ದೆ. ಆದ್ದರಿಂದ ಈ ವಿಷಯವನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ. ನಿಮ್ಮ ವಿರುದ್ಧ ಏನಾದರೂ ಬರೆದರೆ, ಬರೆದವರನ್ನು ನೀವು ಕುಮಾರ ಬಂಗಾರಪ್ಪನವರನ್ನು ನೋಡಿದ ಥರ ನೋಡಬೇಕಿಲ್ಲ. ಕನ್ನಡದ ಬಗ್ಗೆ ನಿಮ್ಮ ಹೇಳಿಕೆಯನ್ನು ಓದಿದ ನಂತರ ನಿಮಗೆ ಈ ವಿಷಯವನ್ನು ಹೇಳಲೇ ಬೇಕು ಎಂದು ಬಲವಾಗಿ ಅನಿಸಿತು. ಮಧು ಅವರೇ, ಮೊದಲನೆಯದಾಗಿ, ನೀವು ಆ ರಾಜ್ಯ ಕಂಡ ಒಬ್ಬ ಆಕರ್ಷಕ ಞZoo ಛಿZbಛ್ಟಿ ಮತ್ತು ಹಿಂದುಳಿದವರ ನಾಯಕ ಹಾಗೂ ನಾನು ಗೌರವಿಸುತ್ತಿದ್ದ ಬಂಗಾರಪ್ಪನವರ ಸುಪುತ್ರರು.

ಎರಡನೆಯದಾಗಿ, ನೀವು ಕರ್ನಾಟಕ ಸರಕಾರದ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರು. ನನ್ನ ದೃಷ್ಟಿಯಲ್ಲಿ ಇದು ಅತ್ಯಂತ ಜವಾಬ್ದಾರಿ ಮತ್ತು ಮಹತ್ವದ ಖಾತೆ. ಇಡೀ ರಾಜ್ಯದ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನೀಡುವ ಗುರುತರ ಹೊಣೆಗಾರಿಕೆ ನಿಮ್ಮದು.
ನಿಮ್ಮ ಖಾತೆ ಸಮಸ್ತ ಕನ್ನಡ ನಾಡನ್ನು ಆವರಿಸಿರುವ, ವ್ಯಾಪಿಸಿರುವ, ಹಳ್ಳಿ-ಹಳ್ಳಿಗರನ್ನು ತಲುಪಿರುವ ಬಹು ದೊಡ್ಡ ಮತ್ತು ವಿಶಾಲ ಖಾತೆ. ನೀವು ನೀಡುವ ಒಂದು ಹೇಳಿಕೆ, ಆದೇಶ ರಾಜ್ಯದ ಮುಂದಿನ ಪ್ರಜೆಗಳ ಭವಿಷ್ಯವನ್ನು ರೂಪಿಸಬಲ್ಲದು. ನಿಮ್ಮ ಸಚಿವ ಖಾತೆಗೆ ಅಷ್ಟೊಂದು ಪ್ರಾಮುಖ್ಯವಿದೆ.

ನೀವು ಯಾವುದೇ ಕ್ರಮ ಕೈಗೊಂಡರೂ ಅದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಭವಿಷ್ಯಕ್ಕೆ ಥಳಕು ಹಾಕಿಕೊಂಡಿರುತ್ತದೆ. ಬೇರೆ ಖಾತೆಗೂ, ನಿಮ್ಮ ಖಾತೆಗೂ
ಇರುವ ವ್ಯತ್ಯಾಸವೇ ಇದು. ಈ ಎಲ್ಲ ಕಾರಣಗಳಿಂದ ಪ್ರಾಥಮಿಕ ಶಿಕ್ಷಣ ಖಾತೆಗೆ ಎಲ್ಲಿಲ್ಲದ ಮಹತ್ವ. ಹೀಗಾಗಿ ಪ್ರಾಥಮಿಕ ಶಿಕ್ಷಣ ಸಚಿವರಾದವರು ಚಿಕ್ಕ
ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಆದರ್ಶರಾಗಿರಬೇಕು ಹಾಗೂ ಅವರ ಕಣ್ಣಲ್ಲಿ ರೋಲ್ ಮಾಡೆಲ್ ಥರಾಕಾಣಿಸಬೇಕು ಎಂದು ಇಡೀ ಸಮಾಜ ಬಯಸುವುದು  ಸರಿಯೇ. ಪ್ರಾಥಮಿಕ ಶಿಕ್ಷಣ ಸಚಿವರಿಗೇ ಪ್ರಾಥಮಿಕ ಶಿಕ್ಷಣ ಕೊಡಿಸಬೇಕಾದ ಪರಿಸ್ಥಿತಿ ಬಂದರೆ ಅದು ನಿಮ್ಮ ಕರ್ಮ ಅಲ್ಲ, ಅದು ನಮ್ಮ ಪ್ರಾರಬ್ಧ.

ಸುಮಾರು ಹತ್ತು ತಿಂಗಳುಗಳ ಹಿಂದೆ, ನೀವು ಪ್ರಾಥಮಿಕ ಶಿಕ್ಷಣ ಖಾತೆ ಸಚಿವರಾದ ಆರಂಭದಲ್ಲಿ ವಿಧಾನಸಭೆಯಲ್ಲಿ ನಿಂತು ಕನ್ನಡ ಓದುವಾಗಲೂ ನಿಮಗೆ ಕಷ್ಟವಾಗಿತ್ತು. ಆಗಲೂ ಕೆಟ್ಟದಾಗಿ ಪದಗಳ ಉಚ್ಚಾರಣೆ ಮಾಡಿದಿರಿ. ನಿಮ್ಮ ಓದಿನ ವೈಖರಿಯನ್ನು ನೋಡಿದ ನಿಮ್ಮ ಪಕ್ಷದ ಶಾಸಕರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡರು. ‘ಎಂಥ ತಂದೆ ಹೊಟ್ಟೆಯಲ್ಲಿ ಎಂಥ ಮಗ?’ ಎಂದು ನಿಮ್ಮ ಪಕ್ಷದ ಸಹೋದ್ಯೋಗಿಗಳೇ ಮೊಗಸಾಲೆಯಲ್ಲಿ ನಿಮ್ಮ ವಿರುದ್ಧ ಮಾತಾಡಿದರು.

ಇದು ಪತ್ರಿಕೆಗಳಲ್ಲಿ ವರದಿಯೂ ಆಯಿತು. ಆಗಲೂ ಕನ್ನಡ ಓದುವ ನಿಮ್ಮ ವೈಖರಿ ಟ್ರೋಲ್ ಆಯಿತು. ಆಗಲೇ ನೀವು ಎಚ್ಚೆತ್ತುಕೊಳ್ಳಬೇಕಿತ್ತು. ಅನ್ಯ ಭಾಷಿಕರು ಕನ್ನಡವನ್ನು ಆರು ತಿಂಗಳಲ್ಲಿ  ಕಲಿಯಬಹುದು. ಒಂದು ವರ್ಷದೊಳಗೆ ಓದಲು, ಬರೆಯಲು ಕಲಿಯಬಹುದು. ದಿನಾ ಒಂದು ತಾಸು ಸಮಯ ಕೊಟ್ಟರೂ ಸಾಕು. ಅಷ್ಟಕ್ಕೂ ನೀವೇನು ಆP-ರ್ಡ್, ಕೇಂಬ್ರಿq, ಸ್ಟ್ಯಾನ್ ಫೋರ್ಡ್, ಹಾರ್ವರ್ಡ್‌ನಲ್ಲಿ ಓದಿದವರಲ್ಲ. ಹುಟ್ಟಿನಿಂದಲೇ
ನೀವು ಥೇಮ್ಸ ನದಿಯಲ್ಲಿ ತಿಕ ತೊಳೆದವರೂ ಅಲ್ಲ. ನೀವು ಆರಿಸಿ ಬಂದಿದ್ದು ಕ್ಯಾಲಿಫೋರ್ನಿಯಾ ಸೆನೆಟ್‌ಗೂ ಅಲ್ಲ.

ಬರೀ ಕನ್ನಡಿಗರೇ ತುಂಬಿರುವ, ಅನ್ಯ ಭಾಷಿಕರಿಲ್ಲದ ಸೊರಬದಿಂದ. ಹೀಗಾಗಿ ನಿಮಗೆ ಕನ್ನಡ ಓದಲು, ಬರೆಯಲು, ಮಾತಾಡಲು ಬರಲೇಬೇಕು. ಕರ್ನಾಟಕದಲ್ಲಿ ಹುಟ್ಟಿದವರೆಲ್ಲರಿಗೂ ಕನ್ನಡ ಬರಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲ. ಅದರಲ್ಲೂ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಕರ್ನಾಟಕ ಸರಕಾರದಲ್ಲಿ ಸಚಿವರಾಗಿರುವವರಿಗೆ ಕನ್ನಡ ಓದಲು, ಬರೆಯಲು, ಮಾತಾಡಲು ಬರಲೇಬೇಕು. ಇದು ಕಡ್ಡಾಯ. ಈ ವಿಷಯದಲ್ಲಿ ವಿನಾಯತಿ, ರಿಯಾಯತಿ ಇಲ್ಲವೇ ಇಲ್ಲ. ಅನ್ಯ ರಾಜ್ಯಗಳ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕರ್ನಾಟಕದಲ್ಲಿ ಸೇವೆ ಸಲ್ಲಿಸಬೇಕು ಎಂದು ಬಯಸಿದರೆ ಅವರು ಕನ್ನಡ ಕಲಿಯಲೇಬೇಕು.

ಒಂದು ವೇಳೆ ನೀವು ಹೇಳಿದಂತೆ, ‘ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರುವುದಿಲ್ಲ, ಕನ್ನಡ ಉಚ್ಚಾರಣೆ ಸ್ವಲ್ಪ ತಪ್ಪಾಗುತ್ತದೆ’ ಎಂದು ಒಬ್ಬ ಅಧಿಕಾರಿ ಹೇಳಿದ್ದಿದ್ದರೆ, ಅವರನ್ನು ಮಾಧ್ಯಮಗಳು ಮತ್ತು ಕನ್ನಡ ಸಂಘಟನೆಗಳು ಉರಿದು, ಉಗಿದು ಉಪ್ಪಿನಕಾಯಿ ಸವರುತ್ತಿದ್ದವು. ನೀವು ಹೇಳಿದ ಹೇಳಿಕೆಯನ್ನು ಒಬ್ಬ ಪತ್ರಕರ್ತನೇನಾದರೂ ಸುದ್ದಿಮನೆ ಹೊಸ್ತಿಲಲ್ಲಿ ನಿಂತು ಹೇಳಿದ್ದಿದ್ದರೆ, ಸಂಪಾದಕನಾದವನು ಹಾಗೆ ಹೇಳಿದವನನ್ನು ಕತ್ತಿನ ಪಟ್ಟುಹಿಡಿದು ಹೊರಗೆ ದಬ್ಬುತ್ತಿದ್ದ. ನಿಮ್ಮ ಹೇಳಿಕೆ ಅಷ್ಟೊಂದು ಹೊಣೆಗೇಡಿತನದ್ದು ಮತ್ತು ಬೇಜವಾಬ್ದಾರಿತನದ್ದು. ಪ್ರಾಥಮಿಕ ಶಿಕ್ಷಣ ಸಚಿವರಾಗಿ
ಹಾಗೆ ಹೇಳುತ್ತಾರಾ? ಒಂದು ವೇಳೆ ನೀವು ‘ನನಗೆ ಇಂಗ್ಲಿಷ್ ಮತ್ತು ಹಿಂದಿ ಅಷ್ಟು ಶುದ್ಧವಾಗಿ ಓದಲುಬರುವುದಿಲ್ಲ, ಉಚ್ಚಾರಣೆ ಸ್ವಲ್ಪ ತಪ್ಪಾಗುತ್ತದೆ’ ಎಂದು ಹೇಳಿದ್ದರೆ ಸಹಿಸಿಕೊಳ್ಳಬಹುದಾಗಿತ್ತು.

ಆದರೂ ಹಾಗೆ ಹೇಳಿದ್ದರೆ, ಸ್ವತಃ ಕನ್ನಡಿಗರ ಕಣ್ಣ ನೀವು ಸಣ್ಣವರಾಗುತ್ತಿದ್ದಿರಿ. ಅದು ಬೇರೆ ಮಾತು. ಹಾಗಿರುವಾಗ, ‘ನನಗೆ ಕನ್ನಡ ಅಷ್ಟು ಶುದ್ಧವಾಗಿ
ಓದಲು ಬರುವುದಿಲ್ಲ, ಕನ್ನಡ ಉಚ್ಚಾರಣೆ ಸ್ವಲ್ಪ ತಪ್ಪಾಗುತ್ತದೆ’ ಎಂದು ಹೇಳಿದರೆ, ಅದನ್ನು ಸಹಿಸಿಕೊಳ್ಳುವುದುಂಟಾ? ಒಂದು ವೇಳೆ ನಿಮ್ಮ ತಂದೆ ಯವರೇನಾದರೂ ಬದುಕಿದ್ದಿದ್ದರೆ ನಿಮ್ಮ ಆ ಹೇಳಿಕೆ ನೋಡಿ ಹಣೆಹಣೆ ಚಚ್ಚಿಕೊಳ್ಳುತ್ತಿದ್ದರು. ಅವರೇನಾದರೂ ಮುಖ್ಯಮಂತ್ರಿಯಾಗಿದ್ದಿದ್ದರೆ ಖಂಡಿತವಾಗಿಯೂ ನಿಮ್ಮ ಖಾತೆ ಬದಲಿಸಿ, ಪಶುಸಂಗೋಪನೆಗೆ ಹಚ್ಚುತ್ತಿದ್ದರು. ಹಾಗಂತ ಕನ್ನಡದ ವ್ಯಾಕರಣ, ಸಂಧಿ-ಸಮಾಸ ಮತ್ತು ಭಾಷೆ ಗೊತ್ತಿರುವ ಸಿದ್ದರಾಮಯ್ಯನವರು ನಿಮ್ಮನ್ನು ಸಹಿಸಿಕೊಂಡಿzರೆ ಎಂದು ಭಾವಿಸಬೇಡಿ. ಅವರಿಗೂ ಒಳಗೊಳಗೇ ನಿಮ್ಮ ಆ ಹೇಳಿಕೆ ತೀವ್ರ ಮುಜುಗರ, ಕಿರಿಕಿರಿ ಹುಟ್ಟಿಸಿರಲಿಕ್ಕೂ ಸಾಕು.

ಕನ್ನಡನಾಡಿನಲ್ಲಿ, ಕನ್ನಡನಾಡಿನ ಮುಖ್ಯಮಂತ್ರಿಯಾಗಿದ್ದವರ ಮನೆಯಲ್ಲಿ ಹುಟ್ಟಿದ ನೀವು ‘ನನಗೆ ಕನ್ನಡ ಓದಲು ಬರುವುದಿಲ್ಲ’ ಎಂದು ಹೇಳುತ್ತೀ ರಲ್ಲ? ಇದರಂಥ ಅಸಹ್ಯದ, ಅವಮಾನಕರ ಹೇಳಿಕೆ ಮತ್ತೊಂದಿದೆಯಾ? ಸ್ವಲ್ಪ ಯೋಚಿಸಿ. ನಿಮ್ಮ ಆ ಹೇಳಿಕೆ ಮೂಲಕ ನೀವು ಈ ರಾಜ್ಯದ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಾವ ಸಂದೇಶ ಕೊಡುತ್ತಿದ್ದೀರಿ ಎಂಬ ಸಾಮಾನ್ಯ ಕಲ್ಪನೆ ನಿಮಗೆ ಇದೆಯಾ? ಆ ಮಕ್ಕಳ ಮನಸ್ಸಿನಲ್ಲಿ ನೀವು ಎಷ್ಟು ಕುಬ್ಜರಾದಿರಿ ಎಂದು ಯೋಚಿಸಿದ್ದೀರಾ? ನಿಮ್ಮ ಖಾತೆಯ ಅಧಿಕಾರಿಗಳು ನಿಮ್ಮನ್ನು ಎಷ್ಟು ತಿರಸ್ಕಾರದಿಂದ ನೋಡಿರಬಹುದು ಎಂಬ ಅಂದಾಜಿದೆಯಾ? ‘ಪ್ರಾಥಮಿಕ ಶಿಕ್ಷಣ ಮಂತ್ರಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಿ’, ‘ಕನ್ನಡ ಗೊತ್ತಿಲ್ಲದ ಸಚಿವನಿಗೆ ಕನ್ನಡ ಹೇಳಿಕೊಡಿ’, ‘ಇಂಥ ಸಚಿವನನ್ನು ಸಂಪುಟದಕೆ ಇಟ್ಟುಕೊಂಡಿ ದ್ದೀರಿ?’ ಎಂದು ಧಾರವಾಡದಲ್ಲಿ ಕೆಲವರು ಫಲಕ ಹಿಡಿದು ಲೇವಡಿ ಮಾಡಿದ್ದನ್ನು ನೋಡಿ ನಿಮಗೆ ಏನೂ ಅನಿಸಲೇ ಇಲ್ಲವಾ? ಅಷ್ಟೇ ಅಲ್ಲ, ಟ್ರೋಲಿಗರು, ‘ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಅವರಿಗೆ ಬಿಟ್ಟಿದ್ದು.

ಅದನ್ನು ಕತ್ತರಿಸಲಿ, ಬಿಡಲಿ, ಆದರೆ ಕೆಟ್ಟ ಕನ್ನಡ ಮಾತಾಡಿದರೆ ನಾಲಗೆಯನ್ನು ಕತ್ತರಿಸದೇ ಬಿಡಬೇಡಿ’ ಎಂದು ಹೇಳಿ ವೈರಲ್ ಮಾಡಿದರು. ನೀವು ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ ನಿಮಗೆ ಕನ್ನಡ ಓದಲಿಕ್ಕೇ ಬರುವುದಿಲ್ಲ. ಕನ್ನಡ ಓದಲು ಬಾರದಿರುವುದೇ ನಿಮ್ಮ ನೆಮ್ಮದಿಗೆ ಕಾರಣವಾದಂತಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಗ್ರಂಥಾಲಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ದವರನ್ನು ಕನ್ನಡದ ಪ್ರಮುಖ ಪ್ರಕಾಶಕರು, ಪುಸ್ತಕ ಮಾರಾಟಗಾರರು ಔಪಚಾರಿಕವಾಗಿ ಭೇಟಿ ಮಾಡುವುದು ಸೌಜನ್ಯ ಮತ್ತು ಸಂಪ್ರದಾಯ. ಆ ಪ್ರಕಾರ ಕನ್ನಡದ ಪ್ರಮುಖ ಪ್ರಕಾಶಕರು ನಿಮ್ಮ ನಿವಾಸದಲ್ಲಿ ನಿಮ್ಮನ್ನು ಭೇಟಿ ಮಾಡಿದರು.

ಆ ಸಂದರ್ಭದಲ್ಲಿ ಅವರು ಕನ್ನಡದ ಖ್ಯಾತನಾಮ ಲೇಖಕರ ಕೆಲ ಪ್ರಮುಖ ಪುಸ್ತಕಗಳನ್ನು ನಿಮಗೆ ಉಡುಗೊರೆಯಾಗಿ ನೀಡಿದರು. ಆ ಸಂದರ್ಭದಲ್ಲಿ ನೀವು, ‘ಬೇಡ ಬೇಡ.. ನನಗೆ ಈ ಪುಸ್ತಕಗಳು ಬೇಡ. ಈ ಪುಸ್ತಕಗಳನ್ನಿಡಲು ನನ್ನ ಮನೆಯಲ್ಲಿ ಜಾಗವೂ ಇಲ್ಲ ಮತ್ತು ಅವುಗಳನ್ನುಓದಲು ನನಗೆ
ಸಮಯವೂ ಇಲ್ಲ’ ಎಂದು ಹೇಳಿ, ಉಡುಗೊರೆಯಾಗಿ ನೀಡಿದ ಆಪುಸ್ತಕಗಳನ್ನು ಕೈಯಲ್ಲೂ ಮುಟ್ಟದೇ ವಾಪಸ್ ಕೊಟ್ಟುಬಿಟ್ಟಿರಿ.

ಈ ಪ್ರಸಂಗವನ್ನು ಒಬ್ಬರು ನನಗೆ ಹೇಳಿದಾಗ, ತೀವ್ರ ಸಂಕಟವಾಯಿತು. ನಿಮ್ಮನ್ನು ಭೇಟಿ ಮಾಡಲು ಬಂದ ಪ್ರಕಾಶಕರು ಆ ಪುಸ್ತಕಗಳನ್ನು ನೀಡಿzದರೂ ಏಕೆ ಎಂದು ಯೋಚಿಸುವ ವಿವೇಚನೆ ನಿಮ್ಮಲ್ಲಿ ಇಲ್ಲದೇ ಹೋಯಿತು. ನೀವು ಬರೀ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಿದ್ದರೆ ಅವರು
ನಿಮ್ಮನ್ನು ಭೇಟಿ ಮಾಡುತ್ತಿರಲಿಲ್ಲ. ಆದರೆ ನೀವು ಗ್ರಂಥಾಲಯ ಸಚಿವರೂ ಆಗಿದ್ದರಿಂದ ನಿಮ್ಮನ್ನು ಭೇಟಿಯಾದರು. ಆದರೆ ನಿಮ್ಮ ಬಾಯಿಂದ ಉದುರಿದ ಆಣಿಮುತ್ತುಗಳನ್ನು ಕೇಳಿ ಅವರ ಜಂಘಾಬಲವೇ ಉಡುಗಿ ಹೋಯಿತು. ನಿಮ್ಮನ್ನು ಮತ್ತೊಮ್ಮೆ ಭೇಟಿ ಮಾಡುವ ಪ್ರಯತ್ನವನ್ನೇ ಅವರು
ಮಾಡಿದಂತಿಲ್ಲ.

ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿವರಾದವರು ನನಗೆ ಕನ್ನಡ ಓದಲು ಬರುವುದಿಲ್ಲ ಎಂದು ರಾಜಾರೋಷವಾಗಿ ಹೇಳುವುದು, ಗ್ರಂಥಾಲಯ ಖಾತೆ ಉಸ್ತುವಾರಿ ಹೊತ್ತವರು ತಾನು ಪುಸ್ತಕಗಳನ್ನೇ ಓದುವುದಿಲ್ಲ ಎಂದು ಹೇಳುವುದು bಜಿoಜ್ಟZಛಿ … ನಾಚಿಕೆಗೇಡು! ಇದು ಯಾವ ಕನ್ನಡಿಗನಿಗೂ ಶೋಭೆ ತರುವಂಥದ್ದಲ್ಲ. ಅದರಲ್ಲೂ ಮಂತ್ರಿಯೊಬ್ಬನ ಬಾಯಿಂದ ಇಂಥ ಮಾತು ಉದುರಿದರೆ ಅದನ್ನು ಸಹಿಸಿಕೊಳ್ಳುವುದುಂಟಾ? ಮಧು ಬಂಗಾರಪ್ಪ ನವರೇ, ಇಂಥ ಹುಡುಗಾಟಿಕೆ ಅಥವಾ ಉಡಾ- ನಡವಳಿಕೆ ನಿಮಗೆ ಶೋಭೆ ತರುವಂಥದ್ದಲ್ಲ. ಪಕ್ಕದ ತಮಿಳುನಾಡಿನಲ್ಲಿ ನೀವು ಹುಟ್ಟಿದ್ದಿದ್ದರೆ ಈ ಮಾತನ್ನು ಹೇಳಿ ನೀವು ದಕ್ಕಿಸಿಕೊಳ್ಳಲು ಸಾಧ್ಯವಿರಲಿಲ್ಲ. ‘ನನಗೆ ತಮಿಳು ಅಷ್ಟು ಶುದ್ಧವಾಗಿ ಓದಲು ಬರುವು ದಿಲ್ಲ, ತಮಿಳು ಉಚ್ಚಾರಣೆ ಸ್ವಲ್ಪ ತಪ್ಪಾಗುತ್ತದೆ’ ಎಂದು ಹೇಳಿದ್ದಿದ್ದರೆ, ಅದೇದಿನ ರಾಜೀನಾಮೆ ಕೊಡಬೇಕಾಗುತ್ತಿತ್ತು.

ಅಸಲಿಗೆ, ತಮಿಳು ಬಾರದ ನಿಮ್ಮನ್ನು ಅಲ್ಲಿ ಸಚಿವರನ್ನಾಗಿಯೇ ಮಾಡುತ್ತಿರಲಿಲ್ಲ ಬಿಡಿ. ನಿಮಗೆ ಗೊತ್ತಿರಲಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಕರುಣಾನಿಧಿಯವರು ದಿಲ್ಲಿಗೆ ಹೋದಾಗ, ಇಂಗ್ಲಿಷ್ ಪತ್ರಕರ್ತರು ಅವರಿಗೆ ಇಂಗ್ಲಿಷಿನಲ್ಲಿ ಪ್ರಶ್ನೆಗಳನ್ನು ಕೇಳಿದರೆ ಅವರು ತಮಿಳಿನಲ್ಲಿ ಉತ್ತರಿಸುತ್ತಿದ್ದರು. ಪತ್ರಕರ್ತ ಶೇಖರ್ ಗುಪ್ತ ಅವರು ತಮ್ಮ ಜನಪ್ರಿಯ UZh Seಛಿ SZh ಕಾರ್ಯಕ್ರಮಕ್ಕೆ ಕರುಣಾನಿಽಯವರನ್ನು ಸಂದರ್ಶಿಸಿದಾಗ, ಕರುಣಾನಿಧಿಯವರು ಪೂರ್ತಿ ತಮಿಳಿನಲ್ಲಿಯೇ ಉತ್ತರಿಸಿದ್ದರು. ಕರುಣಾನಿಧಿಯವರ ತಮಿಳನ್ನು ಅವರ ಪುತ್ರಿ ಇಂಗ್ಲಿಷಿಗೆ ಅನುವಾದ ಮಾಡಿ ಹೇಳಿದರು. ತಮಿಳಿನಲ್ಲಿ
ಮಾತಾಡದ ಸಚಿವರನ್ನು ಕರುಣಾನಿಽಯವರು ಪಕ್ಕಕ್ಕೆ ನಿಲ್ಲಿಸುತ್ತಿದ್ದರು.

ಕರ್ನಾಟಕದಲ್ಲಿ ಸಚಿವರಾಗಿರುವ ನೀವು, ಅದರಲ್ಲೂ ಪ್ರಾಥಮಿಕ ಶಿಕ್ಷಣಸಚಿವರಾಗಿರುವ ನೀವು, ಚೆನ್ನಾಗಿ, ಸ್ಪಷ್ಟವಾಗಿ, ಶುದ್ಧವಾಗಿ ಕನ್ನಡದಲ್ಲಿ ಮಾತಾಡುವುದು ಹೆಚ್ಚುಗಾರಿಕೆ ಅಲ್ಲ. ಅದು ತೀರಾ ಸಹಜ. ಅದು ಅಪೇಕ್ಷಣೀಯ. ಆದರೆ ಪ್ರಾಥಮಿಕ ಶಿಕ್ಷಣ ಸಚಿವರಿಗೇ ಕನ್ನಡ ಓದಲು ಬರದಿದ್ದರೆ
ಅದು ಕರ್ಮಕರ್ಮ! ಅದು ನಿಮಗೆ ಸುತಾರಾಂ ಶೋಭೆ ತರುವಂಥದ್ದಲ್ಲ. ಮಧು ಅವರೇ, ಕನ್ನಡ ಓದಲು ಬರುವುದಿಲ್ಲ ಅಂದರೆ ಕನ್ನಡ ಬರೆಯಲು ಬರುವುದಿಲ್ಲ ಎಂದೂ ಅರ್ಥ. ನಿಮ್ಮ ಮಂತ್ರಿ ಸ್ಥಾನಕ್ಕೆ ಕಳಂಕ ತರಬೇಡಿ. ಆ ಸ್ಥಾನದ ಪಾವಿತ್ರ್ಯ, ಘನತೆಯನ್ನು ಹಾಳುಮಾಡಬೇಡಿ.

ಮೊದಲು ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತೆಗೆದುಕೊಳ್ಳಿ. ಕನ್ನಡದಲ್ಲಿ ಸರಿಯಾಗಿ ಓದಲು, ಬರೆಯಲು, ಸರಿಯಾದ ಉಚ್ಚಾರಣೆಯೊಂದಿಗೆ ಮಾತಾಡುವುದನ್ನು ಕಲಿತುಕೊಳ್ಳಿ. ಮನಸ್ಸು ಮಾಡಿದರೆ ಮೂರು ತಿಂಗಳಲ್ಲಿ ನಿಮ್ಮ ಕನ್ನಡವನ್ನು ಸುಧಾರಿಸಿಕೊಳ್ಳಬಹುದು. ಅದು ಕಷ್ಟವೇನೂ ಅಲ್ಲ. ನಿಮ್ಮ ಮುಂದೆ ಸುದೀರ್ಘ ರಾಜಕೀಯ ಹಾದಿಯಿದೆ. ನಿಮ್ಮ ತಂದೆಗಿಂತ ಮಿಗಿಲಾದ ರೋಲ್‌ಮಾಡೆಲ್ ನಿಮಗೆ ಬೇರೆ ಯಾರೂ ಬೇಡ. ರಾಜಕೀಯದ ಜತೆಗೆ ಅವರು ಭಾಷೆ, ಸಂಸ್ಕೃತಿ, ಕಲೆ, ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ. ತಿಂಗಳಿಗೋ, ವರ್ಷಕ್ಕೋ ಒಂದಾದರೂ ಕನ್ನಡ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ.

ಕನ್ನಡ ಓದುವುದನ್ನು ಕಲಿಯದೇ ಮಂತ್ರಿಯಾಗಿ ಮುಂದುವರಿಯಬಹುದು ಎಂಬ ಉಡಾಫೆ ಒಳ್ಳೆಯದಲ್ಲ. ಮಧು ಅವರೇ, ಇವಿಷ್ಟನ್ನೂ ಸಕಾರಾತ್ಮಕ ಭಾವದಿಂದ ಸ್ವೀಕರಿಸಿ. ಸಾರ್ವಜನಿಕ ಜೀವನದಲ್ಲಿ, ಇದ್ದಿದ್ದನ್ನು ಇದ್ದ ಹಾಗೆ, ನೇರವಾಗಿ ಮುಖಕ್ಕೆ ಹೇಳುವವರೂ ನಮ್ಮವರು ಎಂದು ಭಾವಿಸಿದರೆ, ನನ್ನ ಮಾತಿನ ಅಂತರಂಗ, ಕಾಳಜಿ ಅರ್ಥವಾಗಬಹುದು. ತಮ್ಮ ಕನ್ನಡ ಚೆನ್ನಾಗಿಲ್ಲ ಎಂದು ಮಧು ಅವರು ಬಹಿರಂಗವಾಗಿ ಒಪ್ಪಿಕೊಂಡಿzರೆ, ಅವರ
ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳಬೇಕು ಎಂದು ಯಾರಾದರೂ ಹೇಳಿದರೆ ಅಂಥವರ ಮಾತಿಗೆ ಕಿಮ್ಮತ್ತುಕೊಡ ಬೇಡಿ. ಹಾಗೆ ಹೇಳುವವರು ನಿಮ್ಮ ಹಿತ ಚಿಂತಕರಲ್ಲ. ನಿಮ್ಮಿಂದ ಕನ್ನಡಕ್ಕೆ, ಕನ್ನಡನಾಡಿಗೆ ಒಳ್ಳೆಯದಾಗಲಿ.

ತಮ್ಮವ,

ವಿಶ್ವೇಶ್ವರ ಭಟ್