Wednesday, 11th December 2024

ಸ್ಪರ್ಶ ಪ್ರಜ್ಞೆ- ಜೀವ ವಿಸ್ಮಯ ೩

ಶಿಶಿರ ಕಾಲ

shishirh@gmail.com

ಕಚಗುಳಿ ದೇಹದ ಅತ್ಯಂತ ವಿಶೇಷ. ತೀರಾ ದುರ್ಬಲ ಮತ್ತು ವಿಶೇಷ ಭಾಗಗಳಲ್ಲಿ ನಮಗೆ ಕಚಗುಳಿಯಾಗುತ್ತದೆ. ಕಚಗುಳಿಗೆ ನಮ್ಮ ಪ್ರತಿಕ್ರಿಯೆ ಅತ್ಯಂತ ಬಿಸಿಮುಟ್ಟಿದಾಗಿನಂತೆಯೇ ಇರುತ್ತದೆ. ಆದರೆ ಇಲ್ಲಿ ಸ್ಪರ್ಶ ಸಹಜ, ಬಿಸಿಯಾದುದಲ್ಲ. ಇದು ಕಿವಿ, ಹೊಟ್ಟೆಯ ಭಾಗ ಹೀಗೆ ಸೂಕ್ಷ್ಮ ಜಾಗದಲ್ಲಿ ಕಚಗುಳಿ ಹೆಚ್ಚು.

ಕೆಲ ತಿಂಗಳ ಹಿಂದೆ (ಶಿಕಾಗೋದ) ಮನೆಯ ಹಿತ್ತಲ ಲಾನ್‌ನಲ್ಲಿ ಬೆಳಗ್ಗೆ ಎದ್ದು ಓಡಾಡುವಾಗ ಒಂದು ವಿಚಿತ್ರ ಕಾಣಿಸಿತು. ಸಮತಟ್ಟಾದ ಹುಲ್ಲು ಹಾಸಿನಲ್ಲಿ ನೆಲ ಸ್ವಲ್ಪ ಉಬ್ಬಿದ, ಮೂರಿಂಚಿನ ಅಗಲದ ಉದ್ದುದ್ದದ ರೇಖೆಗಳಿದ್ದವು.

ಯಾರೋ ನೆಲಕ್ಕೆ ಬಾಸುಂಡಿ ಬರುವಂತೆ ಹೊಡೆದ ರೀತಿಯಲ್ಲಿ. ಅಲ್ಲಿ ಹುಲ್ಲು ಮೇಲಕ್ಕೆ ಬಂದಿದ್ದು ನೆಲಕ್ಕೆ ಅಡ್ಡ ಮುಖ ಮಾಡಿ ನೋಡಿದಾಗ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಉಬ್ಬು ನೆರವಾಗಿತ್ತು – ಹತ್ತಿಪ್ಪತ್ತು ಮೀಟರ್‌ನಷ್ಟಿತ್ತು. ಮಾರನೆಯ ಬೆಳಗ್ಗೆಯೂ ನೆಲದ ಮೇಲೆ ಇನ್ನೊಂದೈದಾರು ಅದೇ ರೀತಿ ನೇರವಾದ ಉಬ್ಬು ಲೈನುಗಳು. ಇದು ಯಾವುದೋ ಖದೀಮ ಜೀವಿಯ ಕೆಲಸ ಎಂದು ತಿಳಿಯುವುದಕ್ಕೆ ಸಮಯ ಬೇಕಾಗಲಿಲ್ಲ. ಆ ಉಬ್ಬನ್ನು ಸ್ವಲ್ಪ ತೋಡಿ ನೋಡಿದಾಗ ಅದೆಲ್ಲವೂ ನೆಲದಿಂದ ನಾಲ್ಕೈದು ಇಂಚು ಕೆಳಗಿನ ಸುರಂಗಗಳು.

ಅಲ್ಲಿಯವರೆಗೆ ‘ಸ್ಟಾರ್ ನೋಸ್ಡ್ ಮೋಲ’ ಎನ್ನುವ ಚಿಕ್ಕ ಇಲಿ ಜಾತಿಯ ಪ್ರಾಣಿ ನೆಲದಲ್ಲಿ ಸುರಂಗ ತೋಡುತ್ತದೆ ಎಂದು ಕೇಳಿ ತಿಳಿದಿz. ಈಗ ನೋಡಿದರೆ ಅವು ಹಿತ್ತಲಲ್ಲಿ ಅಂಡರ್‌ಗ್ರೌಂಡ್ ಸರಳ ರೇಖಾ ಚಿತ್ರಗಳನ್ನು ಬಿಡಿಸಿದ್ದವು. ಅದರ ಲ್ಲಿಯೂ ದಿನಕ್ಕೆ ಸುಮಾರು ಐವತ್ತು ಮೀಟರ್‌ನಷ್ಟು ಉದ್ದದ ಸುರಂಗಗಳು. ಇದು ಸಹಜವಾಗಿ ಆ ಜೀವಿಯ ಬಗ್ಗೆ ಕುತೂಹಲ ಹೆಚ್ಚಿಸಿತ್ತು.

ಮೋಲ್ ನೋಡಲು ಥೇಟ್ ಇಲಿಯಂತೆ. ಆದರೆ ಅವುಗಳ ಸುಂಡಿ ಸ್ವಲ್ಪ ಉದ್ದ (ಸುಂಡಿಲಿಯಂತೆ), ಅದಕ್ಕೊಂದಿಷ್ಟು ಟಾಂಟ ಕಲ್ಸ (ಆಕ್ಟೊಪಸ್‌ನ ಕೈಗಳಂತೆ ಆದರೆ ಇಂಚಿಗಿಂತ ಚಿಕ್ಕದು). ಅವುಗಳ ಕೈಗಳ ಆಕಾರ ಒಂದು ರೀತಿಯ ವೆಬ್‌ ನಂತಿರುತ್ತದೆ ಮತ್ತು ಅದರ ಅಳತೆ ಇಲಿಯ ಕೈರಚನೆಗಿಂತ ನಾಲ್ಕು ಪಟ್ಟು ದೊಡ್ಡದು.

ಅಲ್ಲದೆ ಉಗುರು ಕೂಡ ಉದ್ದಕ್ಕೆ ಬೆಳೆದಿರುತ್ತದೆ. ಇದು ಅವುಗಳು ಮಣ್ಣಿನೊಳಕ್ಕೆ ಸುರಂಗ ತೊಡಲು ಬೇಕಾದ ಮಾರ್ಪಾಡು. ಇವು ನೆಲದಡಿಯಲ್ಲಿಯೇ ಬದುಕುವ ಜೀವಿ. ನೆಲದೊಳಕ್ಕೆ ನೋಡಲಿಕ್ಕೇನಿದೆ – ಬರೀ ಮಣ್ಣು. ಹಾಗಾಗಿ ಅವುಗಳ ಕಣ್ಣು
ಚಿಕ್ಕ ಬಿಂದುವಿನಷ್ಟು ಇದ್ದು, ಬಹುತೇಕ ಕುರುಡು – ತೀರಾ ಮಂದ ದೃಷ್ಟಿ. ಅವು ಸಂಪೂರ್ಣ ಕುರುಡಲ್ಲ – ಕೇವಲ ಬೆಳಕನ್ನು ಸ್ವಲ್ಪ ಪ್ರಮಾಣದಲ್ಲಿ ಗ್ರಹಿಸಬಲ್ಲದು. ಆದರೆ ಅವುಗಳ ಒಂದಿಷ್ಟು ವಿಶೇಷ ದೇಹ ಮಾರ್ಪಾಡುಗಳು ಈ ಕಣ್ಣಿನ ಕೊರತೆಯನ್ನು ನೀಗಿಸುತ್ತವೆ. ಆ ವಿಶೇಷವೇ ಅವುಗಳ ಸ್ಪರ್ಶeನ.

ಮಣ್ಣಿನಲ್ಲಿ ಸುರಂಗ ತೋಡುತ್ತ ಹೋಗುವಾಗ ಅವುಗಳ ಮೂಗಿನ ಟೆಂಟಕಲ್ಸಗೆ ಮಣ್ಣಿನ ಮಧ್ಯೆ ಹುಳು ತಗುಲಿದರೆ -ಕ್ಕನೆ ತಿಳಿಯುತ್ತದೆ. ಈ ಮೂಲಕ ಸುರಂಗ ತೋಡುತ್ತ ದಾರಿಯುದ್ದಕ್ಕೂ ಸಿಗುವ ಎರೆಹುಳುಗಳನ್ನು, ಅನ್ಯ ಹುಳುಗಳನ್ನು ಗಬಕ್ಕನೆ ನುಂಗುತ್ತ ಹೋಗುತ್ತವೆ. ಅವುಗಳ ಮೂತಿಯ ಟಾಂಟಕಲ್ಸನ ಸ್ಪರ್ಶeನ ಬಹಳ ವಿಶೇಷ. ಸ್ಪರ್ಶದಿಂದಲೇ ತಮ್ಮ ಸುತ್ತಲನ್ನು ಗ್ರಹಿಸಬಲ್ಲವು, ಮ್ಯಾಪ್ ಮಾಡಬಲ್ಲವು. ಅವುಗಳ ಸ್ಪರ್ಶ ಪ್ರe ಅದೆಷ್ಟು ವೇಗzಂದರೆ ಮುಟ್ಟಿದ 120 ಮಿಲಿ ಸೆಕೆಂಡಿನಲ್ಲಿ ಅವು ಮುಟ್ಟಿದ್ದು ಇಂಥದ್ದೇ ಎಂದು ಗ್ರಹಿಸಬಲ್ಲವು. ಹೋಲಿಕೆಗೆ ಹೇಳುವುದಾದರೆ ನಮ್ಮ ಕಣ್ಣಿಗೆ ಒಂದು ವಸ್ತು ಕಾಣಿಸಿಕೊಂಡು
ಅದನ್ನು ಮೆದುಳು ಗ್ರಹಿಸಿ ನಾವು ಪ್ರತಿಕ್ರಿಯಿಸಲು 250 ಮಿಲಿ ಸೆಕೆಂಡ್ ಬೇಕು.

ಈ ರೀತಿಯ ಸ್ಪರ್ಶದಿಂದಲೇ ಜಗತ್ತನ್ನು ಗ್ರಹಿಸುವ ಹಲವಾರು ಜೀವಿಗಳಿವೆ. ಉತ್ತರ ಕನ್ನಡದ ಪಶ್ಚಿಮ ಘಟ್ಟದಲ್ಲಿ ಅಂಗಾಂಗ ಗಳೇ ಇಲ್ಲದ ಸಿಸಿಲಿಯನ್ (ನೋಡಲು ಏರೆ ಹುಳುವಿನಂತೆ ಕಾಣಿಸುತ್ತದೆ) ಈಗ ಕೆಲವು ವರ್ಷಗಳ ಹಿಂದೆ ಪತ್ತೆಯಾದದ್ದು ಸುದ್ದಿಯಾಗಿತ್ತು. ಅವನ್ನು ಅಸಲಿಗೆ ನಾವು ಚಿಕ್ಕವರಿzಗ ಸೋಗೆ ಅಟ್ಟದ ಕೆಳಗೆ ಹಲವಾರು ಬಾರಿ ನೋಡಿzವು. ಅವು ಬೇರೆ ರೀತಿಯ ಏರೆ ಹುಳುಗಳೆಂದು ಅಂದುಕೊಂಡಿzವು. ಅಮೆರಿಕದ ಮಿಸ್ಸೋರಿಯ ಕಗ್ಗತ್ತಲ ಗುಹೆಗಳಲ್ಲಿ ವಾಸಿಸುವ ಕ್ರೆ ಮೀನು, ಅಮೆಜಾನ್ ಕೊಳ್ಳದಲ್ಲಿ ಪತ್ತೆಯಾದ ಅತ್ರೆಟೊಕೋನಾ ಎನ್ನುವ ಸರೀಸೃಪ (ಇದಕ್ಕಂತೂ ಶ್ವಾಸಕೋಶಗಳೂ ಇಲ್ಲ), ಮೆಕ್ಸಿಕೋದ ಗುಹೆಯೊಳಕ್ಕೆ ನೀರಿನಲ್ಲಿ ಬದುಕುವ ಮೆಕ್ಸಿಕನ್ ಟೆಟ್ರಾ ಮೀನು – ಹೀಗೆ ಹಲವು ಜೀವಿಗಳಿಗೆ ಕಣ್ಣೇ ಇಲ್ಲ – ಇದ್ದರೂ
ತೀರಾ ತೀರಾ ಮಂದ.

ಒಂದು ಕ್ಷಣ ವಿಚಾರಮಾಡಿ. ಸ್ಪರ್ಶವೆಂದರೆ ಒಂದು ಸೋಜಿಗ. ಮುಟ್ಟುವುದು ಎಂದರೆ ಅದು ದೃಷ್ಟಿಯ ಆಚೆ ವಸ್ತುವನ್ನು ಗ್ರಹಿಸುವುದು. ದೃಷ್ಟಿಗೆ ನಿಲುಕದ್ದು ಸ್ಪರ್ಶ ಪೂರ್ಣಗೊಳಿಸುತ್ತದೆ. ಸ್ಪರ್ಶ ಪ್ರತಿ ಜೀವಿಗಳ ನಡುವಿನ ಸಂಬಂಧಕ್ಕೆ ಅತ್ಯಂತ ಅವಶ್ಯಕ ಕೂಡ ಹೌದು. ಅಮೆರಿಕದಲ್ಲಿ (ಉಳಿದ ಕಡೆಯೂ ಇರಬಹುದು) ಹುಟ್ಟಿದ ಮಗುವನ್ನು ತಕ್ಷಣ ತಾಯಿಯ ನಗ್ನ ಎದೆಯ ಮೇಲೆ ಒಂದಿಷ್ಟು ಹೊತ್ತು ಮಲಗಿಸುವ ಪರಿಪಾಠಕ್ಕೂ ಕಾರಣವಿದೆ.

ಆಟದ ಸೋಲು, ಗೆಲುವಿನ ಸಂದರ್ಭ, ಸಂತಸವಾದಾಗ ಪರಸ್ಪರ ಬೆನ್ನುತಟ್ಟುವುದಿದೆ. ಒಟ್ಟಾರೆ ಒಳ್ಳೆಯ ಸಂಬಂಧಕ್ಕೆ ಸ್ಪರ್ಶ
ಅತ್ಯಂತ, ತೀರಾ ಅವಶ್ಯಕ. ಇದು ಮನುಷ್ಯನಾಚೆ ಎಲ್ಲ ಪ್ರಾಣಿಗಳಿಗೂ ಲಾಗು ಆಗುತ್ತದೆ. ಅಮೆರಿಕನ್ ಬರಹಗಾರ್ತಿ ಹೆಲೆನ್ ಕೆ. ಆಕೆ ಹತ್ತೊಂಬತ್ತು ತಿಂಗಳ ಮಗುವಾಗಿರುವಾಗ ಒಂದು ರೋಗಕ್ಕೆ ತುತ್ತಾಗಿದ್ದಳು. ಇದರಿಂದಾಗಿ ಆಕೆ ಸಂಪೂರ್ಣ ದೃಷ್ಟಿ ಮತ್ತು ಶ್ರವಣ ಶಕ್ತಿ ಕಳೆದುಕೊಂಡುಬಿಟ್ಟಳು. ಅಂತಹ ಆಕೆ ಬರೆದ ಪುಸ್ತಕ ‘ದಿ ಸ್ಟೋರಿ ಆ- ಮೈ ಲೈ-’ ಓದಿದರೆ ಹೊಸತೊಂದು ಲೋಕವೇ ನಮ್ಮೆದುರು ತೆರೆದುಕೊಳ್ಳುತ್ತದೆ.

ಆಕೆಯ ಬದುಕು ಸಂಪೂರ್ಣ ಕಗ್ಗತ್ತಲು ಮತ್ತು ನಿಶ್ಯ. ಆಕೆಯ ನೋಟದಲ್ಲಿ (!) ಈ ಜಗತ್ತು ಸಂಪೂರ್ಣ ಬೇರೆ ತೆರನಾಗಿಯೇ ಕಾಣಿಸುತ್ತದೆ(!). ಆಕೆ ಸುತ್ತಲಿನ ಜಗತ್ತನ್ನು ಗ್ರಹಿಸುವುದೇ ಸ್ಪರ್ಶದಿಂದ. ಅದನ್ನು ಆಕೆ ತನ್ನ ಪುಸ್ತಕದಲ್ಲಿ ವಿವರಿಸುತ್ತಾಳೆ. ಆಕೆಯ ಮೇಲೆ ಒಂದು ಪ್ರಯೋಗ ನಡೆಯುತ್ತದೆ. ಅಲ್ಲಿ ಕಾಣಿಸಿಕೊಂಡ ವಿಶೇಷವೆಂದರೆ ಆಕೆಯ ಮೆದುಳು ದೃಷ್ಟಿಗೆ ಬಳಸುವ ಭಾಗವನ್ನು ಸಂಪೂರ್ಣ ಸ್ಪರ್ಶಕ್ಕೆ ಬಳಸುತ್ತಿತ್ತು. ಆಕೆ ‘ನಾನು ಕುರುಡಿಯಲ್ಲ- ನಾನು ನೋಡುವ ರೀತಿ ಮಾತ್ರ ಬೇರೆ ಎಂದು ಒಂದು ಕಡೆ ಹೇಳುತ್ತಾಳೆ. ಅದು ವೈeನಿಕವಾಗಿ ಕೂಡ ಅಷ್ಟೇ ಸತ್ಯ. ಈ ರೀತಿ ಕಣ್ಣಿಲ್ಲದೇ ಏನೇನೇನೋ ಸಾಽಸಿದವರಿzರೆ.
ನಮ್ಮೂರಬ್ಬ ಅಡುಗೆ ಭಟ್ಟರು ಇzರೆ.

ಸುತ್ತಲಿನ ಹಲವು ಹಳ್ಳಿಗಳಲ್ಲಿ ಅವರ ಅಡುಗೆ -ಮಸ್. ಅವರು ಅಡುಗೆಮಾಡುವುದನ್ನು ನೋಡುವುದೇ ಒಂದು ಮಜ. ಬಿಸಿ
ಬಂಡಿಯನ್ನು ಬೆಂಕಿಯಿಂದ ಬರಿಗೈ ಅಲ್ಲಿ ಇಳಿಸಿ ಇನ್ನೊಂದನ್ನು ಒಲೆಯ ಮೇಲೆ ಇಡುತ್ತಿದ್ದರು. ಅದೆಂತಹ ಬಿಸಿಯೇ
ಇರಲಿ – ಬರಿಗೈ ಅಲ್ಲಿ ಮುಟ್ಟುತ್ತಿದ್ದರು. ಅವರಿಗೆ ಸ್ಪರ್ಶeನವೇ ಇಲ್ಲವೆ ಎಂದೆನಿಸುತ್ತಿತ್ತು. ಸಾಮಾನ್ಯವಾಗಿ ಬಿಸಿಯ
ಜತೆ ಕೆಲಸ ಮಾಡುವವರ ಸ್ಪರ್ಶ ಸೂಕ್ಷ್ಮ ಕ್ರಮೇಣ ಕ್ಷೀಣಿಸುತ್ತದೆ. ಇದಕ್ಕೆ ಮೆದುಳು ಉಷ್ಣತೆ ಕಡಿಮೆ ಹಾನಿಕಾರಕ ಎಂದು ಕ್ರಮೇಣ ಒಗ್ಗಿಸಿಕೊಳ್ಳುವುದು ಕಾರಣ. ಇದು ಉಳಿದೆಲ್ಲ ಸ್ಪರ್ಶ ಪ್ರeಗೆ ಕೂಡ ಲಾಗು ಆಗುತ್ತದೆ.

ಇದು ಮಾನಸಿಕ ಅಳವಡಿಕೆ. ಮೆದುಳು ಪದೇ ಪದೇ ತೆರೆದುಕೊಳ್ಳುವ ಅನುಭವಕ್ಕೆ ಕ್ರಮೇಣ ಅವಶ್ಯಕತೆಯೆಂದು ತನ್ನ ಸೂಕ್ಷ್ಮತೆ ತಗ್ಗಿಸುವುದು. ಇರಲಿ. ಈ ಕುರುಡರಾದವರು ಸ್ಪರ್ಶ ಗ್ರಹಿಕೆಗೆ ಬಳಸಿಕೊಳ್ಳುವುದು ಸಾಮಾನ್ಯದ ಬದಲಾವಣೆಯಲ್ಲ. ದೃಷ್ಟಿ ಕಳೆದುಕೊಳ್ಳುವುದೆಂದರೆ ಅದೊಂದು ಮಹಾನ್ ಮಾನಸಿಕ ಶಿ-. ಅದನ್ನು ತಿಳಿಯಲು ಒಂದು ಪ್ರಯೋಗವನ್ನು ಇಂಗ್ಲೆಂಡಿನಲ್ಲಿ ಸುಮಾರು ಹದಿನೈದು ಸ್ವಯಂ ಸೇವಕರ ಮೇಲೆ ಮಾಡಲಾಯಿತು. ಅವರಿಗೆ ಒಂಚೂರೂ ಬೆಳಕು ಹಾಯದ ಕಣ್ಣು ಮುಚ್ಚುವ ಪಟ್ಟಿ ಹಾಕಲಾಯಿತು. ಜತೆಗೆ ಕಿವಿಯನ್ನು ಕೂಡ ಸಂಪೂರ್ಣ ಬಂದ್ ಮಾಡಲಾಯಿತು.

ಇದೊಂದು ರೀತಿಯ ಒತ್ತಾಯದ ಬದಲಾವಣೆ. ಮೊದಲ ದಿನ ಎಲ್ಲ ಸರಿಯಿತ್ತು. ಎರಡನೇ ದಿನ ನಿಧಾನಕ್ಕೆ ಅವರಿಗೆಲ್ಲ
ಈ ಪ್ರಯೋಗ ಸಾಕೆನ್ನಿಸಲು ಶುರುವಾಯಿತು. ಮೂರನೇ ದಿನ ಅವರೆಲ್ಲರಿಗೆ ಬೇರೆ ಬೇರೆ ರೀತಿಯ ಭ್ರಮೆಗಳು ಅವರಿಸ ತೊಡಗಿದವು. ಸುತ್ತಲಿನದನ್ನು ದೃಷ್ಟಿಯ ಮೂಲಕ ಗ್ರಹಿಸುವ ನರಗಳು ಕೆಲಸವಿಲ್ಲದಂತಾದಾಗ ಆ ಎಲ್ಲ ನರ
ಸಂವಾಹಕಗಳನ್ನು ಜೀವಂತವಾಗಿರಿಸಿಕೊಳ್ಳಲು, ಜಾಗೃತವಾಗಿಸಿಕೊಳ್ಳಲು ಮೆದುಳು ಕಾಲ್ಪನಿಕ ಚಿತ್ರಗಳನ್ನು ಕಣ್ಣಿನಲ್ಲಿ ಬಿಂಬಿಸಲು ಶುರು ಮಾಡಿದವು.

ಇದರಿಂದ ಅವರಿಗೆ ಕತ್ತಲಲ್ಲಿಯೇ ಏನೇನೋ ಕಾಣಿಸಲು ಶುರುವಾದವು. ನೀವು ಕಾಲಾಪಾನಿ ಮೊದಲಾದ ಅತ್ಯಂತ ಕಠೋರ ಶಿಕ್ಷೆಯ ಬಗ್ಗೆ ಕೇಳಿರುತ್ತೀರಿ. ಇತಿಹಾಸದಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಹೋರಾಟಗಾರರನ್ನು ಬೆಳಕಿಲ್ಲದ, ಸದ್ದಿಲ್ಲದ ಕೋಣೆಯಲ್ಲಿ ಕೂಡಿ ಹಾಕಿಡಲಾಗುತ್ತಿತ್ತಲ್ಲ. ಆ ಸಮಯದಲ್ಲಿ ಅವರನ್ನೆಲ್ಲ ಅತ್ಯಂತ ಕಾಡಿದ್ದು ಈ ಭ್ರಮೆಗಳು. ಅತ್ಯಂತ ನೀರವದಲ್ಲಿ ಅವರೆಲ್ಲರಿಗೆ ಅದೇನೇನೋ ಶಬ್ಧಗಳು ಕೇಳುತ್ತಿದ್ದವು – ಕಗ್ಗತ್ತ ಲೆಯಲ್ಲಿ ಏನೇನೋ ಕಾಣಿಸುತ್ತಿತ್ತು ಎನ್ನುವ ದಾಖಲೆಗೆ ಈಗ ವೈeನಿಕ ಕಾರಣ ಸಿಕ್ಕಿದೆ. ಇದೆಲ್ಲ ಮೆದುಳು ಆ ಗ್ರಾಹಕಗಳನ್ನು ಜಾಗೃತವಾಗಿರಿಸಿಕೊಳ್ಳಲು ನಡೆಸುವ ಕಸರತ್ತು.

ಈ ಸಮಯದಲ್ಲಿ ಇನ್ನೊಂದು ಹೇಳಲೇಬೇಕು. ಕಚಗುಳಿಯ ಬಗ್ಗೆ. ಕಚಗುಳಿ ಕೂಡ ದೇಹದ ಅತ್ಯಂತ ವಿಶೇಷ. ತೀರಾ ದುರ್ಬಲ ಮತ್ತು ವಿಶೇಷ ಭಾಗಗಳಲ್ಲಿ ನಮಗೆ ಕಚಗುಳಿಯಾಗುತ್ತದೆ. ಕಚಗುಳಿಗೆ ನಮ್ಮ ಪ್ರತಿಕ್ರಿಯೆ ಅತ್ಯಂತ ಬಿಸಿಮುಟ್ಟಿದಾಗಿ ನಂತೆಯೇ ಇರುತ್ತದೆ. ಆದರೆ ಇಲ್ಲಿ ಸ್ಪರ್ಶ ಸಹಜ, ಬಿಸಿಯಾದುದಲ್ಲ. ಇದು ಕಿವಿ, ಹೊಟ್ಟೆಯ ಭಾಗ ಹೀಗೆ ಸೂಕ್ಷ್ಮ ಜಾಗದಲ್ಲಿ ಕಚಗುಳಿ ಹೆಚ್ಚು. ಇದು ಒಂದು ವೇಳೆ ಇರದಿರುತ್ತಿದ್ದರೆ ನಮ್ಮ ಕಿವಿಗೆ ಹುಳ ಹೊಕ್ಕಿದರೂ ತಿಳಿಯುತ್ತಿರಲಿಲ್ಲ ಎಂದು ಸೂಕ್ಷ್ಮವಾಗಿ ಹೇಳಿ ಇದನ್ನು ಮುಗಿಸುತ್ತೇನೆ.

ಒಟ್ಟಾರೆ ಸ್ಪರ್ಶವೆಂದರೆ ಅದು ಜಗತ್ತನ್ನು ಗ್ರಹಿಸುವ ಇನ್ನೊಂದು ಬಗೆ. ಇದು ಕಣ್ಣಿನ ಮತ್ತು ಉಳಿದ ಇಂದ್ರೀಯಗಳ ಜತೆ ಕೆಲಸ ಮಾಡಿದಾಗ ಮಾತ್ರ ಜಗತ್ತಿನ ಗ್ರಹಿಕೆ ಪೂರ್ಣವಾದzಗುತ್ತದೆ. ಅಂತೆಯೇ ಮೆದುಳು ಜಗತ್ತನ್ನು ಸಮಗ್ರವಾಗಿ ಗ್ರಹಿಸಬೇಕೆಂದರೆ ಸ್ಪರ್ಶeನ ಕೂಡ ಅಷ್ಟೇ ಮುಖ್ಯವಾದದ್ದು. ಸ್ಪರ್ಶ ಪ್ರeಯೆನ್ನುವುದು ಇನ್ನೊಂದು ಅಸಾಮಾನ್ಯ ಜೀವ ವಿಸ್ಮಯ.