ಯಶೋ ಬೆಳಗು
yashomathy@gmail.com
ಸತ್ಯಜಿತ್‌ರಿಂದ ದೂರಾದ ಮೇಲೆ ಮಾಧವಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಳು. ಬದುಕಿಕೊಂಡಳು. ಆಮೇಲೆ ಬೇರೆ ಚಿತ್ರಗಳಲ್ಲಿ ನಟಿಸತೊಡಗಿ ದಳು. ಹೆಸರಾಯಿತು. ದುಡ್ಡಾಯಿತು. ಅದೇ ಅನೇಕರ ಆಕರ್ಷಣೆಗೂ ಕಾರಣವಾಯಿತು. ಆ ಪೈಕಿ ನಿರ್ಮಲ್ ಮುಖರ್ಜಿ ಎಂಬಾತನನ್ನು ಮದುವೆ ಯಾದಳು. ಎಲ್ಲ ಹೇಳಿಯೇ ಮದುವೆಯಾಯಿತು! ಪ್ರೀತಿಸಿದ್ದು ಅವರೊಬ್ಬರನ್ನೇ. ಇವತ್ತಿಗೂ ಅದೇ ಸತ್ಯ.
ಸಾಮಾನ್ಯವಾಗಿ ನಮ್ಮಂಥ ಹೆಣ್ಣುಮಕ್ಕಳು ಒಂದು ಚೆಂದದ ಫೋಟೋ ಆರಿಸಿ ಫೇಸ್ ಬುಕ್ಕಿನಲ್ಲಿ share ಮಾಡಿದ ಕೂಡಲೇ ಸಾಕಷ್ಟು ಲೈಕು, ಕಾಮೆಂಟುಗಳ ಸುರಿಮಳೆಯಾಗುತ್ತದೆ. ಕೆಲವು ಕಾಮೆಂಟುಗಳು ಬಹಳ ವಿಭಿನ್ನವಾಗಿದ್ದು ಖುಷಿ ಕೊಟ್ಟರೆ, ಮತ್ತೆ ಕೆಲವು ಯಾವುದೇ ಏರಿಳಿತ ಗಳಿಲ್ಲದೆ ಏಕತಾನವಾಗಿರುತ್ತವೆ. ಮತ್ತೆ ಕೆಲವು ಎಮೋಜಿ ಚಿತ್ರಗಳ ಮೂಲಕ ತಮ್ಮ ಭಾವನೆ ಯನ್ನು ಹಂಚಿಕೊಳ್ಳುತ್ತವೆ. ಇನ್ನೂ ಕೆಲವು ಮೆಸೆಂಜರುಗಳಲ್ಲಿ ಮಾತಿಗೆ ಶುರು ಹಚ್ಚಿಕೊಳ್ಳುತ್ತವೆ.
ಈಗ ಒಬ್ಬ ಬರಹಗಾರಳಾಗಿರುವುದರಿಂದ ಹೆಚ್ಚೆಚ್ಚು ಜನರ ಒಡನಾಟದ ಅಗತ್ಯವಿರುತ್ತದೆ. ಕಾರಣ ಒಬ್ಬೊಬ್ಬರಲ್ಲೂ ತಿಳಿಯುವಂಥಾ, ಕಲಿಯು ವಂಥಾ, ಅಳವಡಿಸಿಕೊಳ್ಳುವಂಥಾ, ಚಿಂತನೆಗೆ ಹಚ್ಚುವಂಥಾ ಮಾತು, ವಿಷಯಗಳೇನಾದರೂ ವಿನಿಮಯವಾಗುತ್ತದೇನೋ ಎನ್ನುವ ಒಂದು ಸಣ್ಣ ಆಶಾಭಾವನೆಯೊಂದಿಗೇ ನಾನೂ ಕೂಡ ಪ್ರತಿಕ್ರಿಯಿಸುತ್ತೇನೆ. ಆದರೆ most of the people ಪ್ರಶ್ನೆ ಏನೆಂದರೆ ರವಿ ಸರ್ ನಿಮಗೇನೂ ಕೊಟ್ಟಿಲ್ವಾ? ಅನ್ನೋದು. ಹೆಸರು ಕೊಟ್ಟಿದ್ದಾರೆ. ಅಂಥಾ ಮುದ್ದಾದ ಮಗನನ್ನು ಕೊಟ್ಟಿದ್ದಾರೆ.
ಇರಲು ಬೆಚ್ಚಗಿನ ಮನೆ ಕೊಟ್ಟಿzರೆ. ಜೋಯಿಡಾದರಡು ಜಮೀನು ಕೊಟ್ಟಿದ್ದಾರೆ. ಒಂದು ಬದುಕು ಸಾಗಿಸಲು ಮತ್ತೇನು ಬೇಕು? ಎಂದರೆ ಅವರಿಗೆ ಸಮಾಧಾನವಾಗುವುದಿಲ್ಲ. ಜೀವನ ನಿರ್ವಹಣೆಗೆ ಏನು ಮಾಡುತ್ತಿದ್ದೀರಿ? ಶಾಲೆ? ಪತ್ರಿಕೆ? ಪುಸ್ತಕ? ಆಸ್ತಿ-ಪಾಸ್ತಿ? ಎಲ್ಲದರ ಮೇಲೂ ಪ್ರಶ್ನೆಗಳ ಸುರಿಮಳೆಯಾಗುತ್ತಾ ಹೋಗುತ್ತದೆ. ನಾನೂ ಬಹಳ ಸಮಾಧಾನದಿಂದಲೇ ಒಂದು ಹಂತದವರೆಗೂ ಅದು ನನ್ನ ಸಾಮಾಜಿಕ ಜವಾಬ್ದಾರಿ ಎಂದುಕೊಂಡೇ ಉತ್ತರಿಸುತ್ತೇನೆ. ಆದರೆ ಅವರಿಗೆ ಕೆಟ್ಟ ಕುತೂಹಲ.
ಅದನ್ನು ತಣಿಸುವ ಜರೂರತ್ತು ನನಗಿಲ್ಲ ಅನ್ನಿಸಿದ ಕೂಡಲೇ ಮಾತು ನಿಲ್ಲಿಸುತ್ತೇನೆ. ಅವರದು ಮುಂದುವರೆಯುತ್ತಾ ಹೋಗುತ್ತದೆ. ಕೊನೆಗೆ ಬ್ಲಾಕ್ ಮಾಡಿಡುತ್ತೇನೆ. ಅವರ್ಯಾರೂ ನಮ್ಮ ಅನುವಿಗೆ ಆಪತ್ತಿಗೆ ಆಗುವಂಥವರಲ್ಲ. ನಮ್ಮ ಹಿತೈಶಿಗಳಾದವರು ನಮ್ಮ ಕಷ್ಟಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಅನಗತ್ಯ ಪ್ರಶ್ನೆಗಳ ಸವಾಲೆಸೆಯದೆ ನಮ್ಮ ಕೆಲಸ ಕಾರ್ಯಗಳನ್ನು ಉತ್ತೇಜಿಸುತ್ತಾರೆ. ತಮ್ಮಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾರೆ. ಇದುವರೆಗೂ ಕಷ್ಟ ಎಂದು ನಾನ್ಯಾರ ಮನೆಬಾಗಿಲಿಗೂ ಹೋಗಿ ನಿಂತಿಲ್ಲ.
ರವಿಯ ದೊಡ್ಡ ಮಕ್ಕಳೆಲ್ಲರೂ ಅವರವರ ಜೀವನದಲ್ಲಿ settle ಆಗಿ ತಮ್ಮ ಪಾಲಿನ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಅದರ ಬಗ್ಗೆ ಸಂತೋಷವಿದೆ. ಅವರಿಗೆ ಎಲ್ಲ ರೀತಿಯ ಯಶಸ್ಸು ದೊರೆಯಲಿ. ಅವರ ಬದುಕುಗಳಲ್ಲಿ ನಾನು ಅಡ್ಡಗಾಲಾಗಬಾರದು. ರವಿ ನಮಗೆ ಕೊಟ್ಟಿರುವುದರಲ್ಲಿ ತೃಪ್ತಿ ಇದೆ. ಮಗನಿಗೆ ಒಳ್ಳೆಯ ವಿದ್ಯೆ ಬುದ್ಧಿ ಕಲಿಸುವುದರ ಜೊತೆಗೆ ಉತ್ತಮ ಪ್ರಜೆಯಾಗಿ ಬೆಳೆಸಿ ನಿಲ್ಲಿಸುವುದು ನನ್ನ
ಜವಾಬ್ದಾರಿ. ಸಾಂಗತ್ಯದ ಕೊರತೆ ಎದುರಾದಾಗಲೆಲ್ಲ ನಾನು ರವಿ ಹೇಳಿದ್ದ ಅವಳನ್ನು ನೆನಪಿಸಿಕೊಳ್ಳುತ್ತೇನೆ…. ಆಕೆಯ ಪೂರ್ತಿ ಹೆಸರು ಮಾಧವಿ ಮುಖರ್ಜಿ.
ಕಲ್ಕತ್ತಾದ ಜನರಿಂದ ಗುಮಿಗುಡುವ flat ಒಂದರಲ್ಲಿ ಆಕೆಯದು ಏಕಾಂಗಿ ಬದುಕು. ಕತ್ತಲಾದರೆ ಕಂದೀಲು ಹಚ್ಚುವುದೂ ಆಕೆಯೇ; ಸೂರ್ಯೋ ದಯ ವಾದರೆ ಕಿಟಕಿಯ ಪರದೆ ಸರಿಸುವವಳೂ ಆಕೆಯೇ. ಮಾಧವಿಗೆ ಬಡತನವಿಲ್ಲ. ಆಕೆ ಬಂಗಾಲಿ ಮತ್ತು ಹಿಂದಿ ಚಲನಚಿತ್ರಗಳು ಕಣ್ತೆರೆಯುತ್ತಿದ್ದ ಕಾಲದಲ್ಲಿ ನಾಯಕಿಯಾಗಿ ಬೆಳ್ಳಿ ತೆರೆಯನ್ನಾಳಿದ ಅಪರೂಪದ ಚೆಲುವೆ. ಬಯಸಿದ್ದಿದ್ದರೆ, ಮಾಧವಿ ಮುಖರ್ಜಿ ಹತ್ತು ಶರ್ಮಿಳಾ ಠಾಗೋರ್‌ಗಳು
ಗಳಿಸಬಹುದಾದಷ್ಟು ಗಳಿಸುತ್ತಿದ್ದಳು. ಬಯಸಲಿಲ್ಲ. ಹಠ ಮಾಡಿದ್ದಿದ್ದರೆ ಸಿನೆಮಾ ಜಗತ್ತಿನ ಸರ್ವಶ್ರೇಷ್ಠ ವ್ಯಕ್ತಿತ್ವವೊಂದನ್ನು ತನ್ನ ಸೆರಗಿಗೆ ಗಂಟು ಹಾಕಿಕೊಳ್ಳುತ್ತಿದ್ದಳು.
ಮಾಧವಿ ಹಠ ಮಾಡಲಿಲ್ಲ. ಎಂಬತ್ತು ವರ್ಷಗಳ ಕೆಳಗೆ ಆಕೆ ಒಂದು ಗೋರಿ ತೋಡಿದಳು. ಅದರಲ್ಲಿ ತನ್ನ ಹೂವಾಗಿ ಅರಳದ ಪ್ರೇಮವನ್ನಿಟ್ಟು ಅದರ ಮೇಲೊಂದು ಅಮೃತಶಿಲೆ ಹೊದಿಸಿಬಿಟ್ಟಳು. ಅಮೃತ ಶಿಲೆಯ ಮೇಲೆ ಯಾರಿಗೂ ಕಾಣದಷ್ಟು ಚಿಕ್ಕದಾಗಿ ಒಂದು ಹೆಸರು ಬರೆದಳು. ಸತ್ಯಜಿತ್ ರೇ!
ಮಾಧವಿಯ ಒಟ್ಟು ಬದುಕಿನ greatness ಇರುವುದೇ ಆಕೆಯ ಅಖಂಡ ಮೌನದಲ್ಲಿ. ಬರೋಬ್ಬರಿ ಐವತ್ತು ವರ್ಷ ಆಕೆ ತನ್ನ ಪ್ರೇಮದ ಬಗ್ಗೆ ಒಂದೇ ಒಂದು ಮಾತಾಡಲಿಲ್ಲ. ಸತ್ಯಜಿತ್ ರೇ ಸತ್ತು, ಆತನ ಬಗ್ಗೆ ಜಗತ್ತಿನಾದ್ಯಂತ ಉತ್ಸವಗಳು ನಡೆಯುತ್ತಿದ್ದಾಗ ಕಲ್ಕತ್ತಾದ ಹಚ್ಚ ಹಳೆಯ ಜರ್ನಲಿ ಒಬ್ಬ ಕೇಳಿದ ಪ್ರಶ್ನೆಗೆ ತುಂಬ ಪ್ರಾಮಾಣಿಕವಾಗಿ ಉತ್ತರಿಸಿದಳು; ಹೌದು! ನಾನು ಸತ್ಯಜಿತ್ ಬಾಬು ಅವರನ್ನು ಪ್ರೀತಿಸಿದ್ದೆ.
ಹಾಗಂತ ಜಗತ್ತಿಗೆ ಮೊದಲೇ ಏಕೆ ಹೇಳಲಿಲ್ಲ? ಸತ್ಯಜಿತ್ ದೊಡ್ಡವರು. ಅವರ ಹೆಸರಿಗೆ ಕಳಂಕ ಬರಬಾರದು ಅಂತ… ಅದು ಮಾಧವಿಯ ಅಸಲಿ ಸಂಕಟ, ಅವಳೊಬ್ಬಳದೇ ಅಲ್ಲ; ಪ್ರತಿಷ್ಠಿತರನ್ನ, ದೊಡ್ಡ ಹೆಸರಿನ ಶ್ರೇಷ್ಠ ಜೀವಿಗಳನ್ನು ಪ್ರೀತಿಸಿದ ಎಲ್ಲ ಹೆಣ್ಣುಮಕ್ಕಳ ಸಂಕಟವೂ ಅದೇ. ೧೯೬೨
ರಲ್ಲಿ ಸತ್ಯಜಿತ್ ರೇ ‘ಚಾರುಲತಾ’ ಚಿತ್ರಕ್ಕೆ ಮಾಧವಿಯನ್ನು ಆಯ್ಕೆ ಮಾಡುವುದರೊಂದಿಗೇ ಅವರಿಬ್ಬರ ಪ್ರೀತಿ ಆರಂಭವಾಯ್ತು. ನನಗೆ ಗೊತ್ತಿತ್ತು. ಸತ್ಯಜಿತ್‌ರ ಮದುವೆ ಯಾಗಿತ್ತು. ಅವರ ಹೆಂಡತಿ ವಾತ್ಸಲ್ಯಮಯಿ. ಒಂದು ಮಗುವಿತ್ತು.
ಎತ್ತಲಿಂದ ನೋಡಿದರೂ, ಅದು ಸುಖೀ ಸಂಸಾರ. ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿನ ಮನೆ ಮುರಿಯುವ ಮನಸ್ಸಾಗಲಿಲ್ಲ. ಆದರೆ ರೇ ಅವರನ್ನು ಪ್ರೀತಿಸದೆ ಇರುವುದೂ ನನ್ನಿಂದ ಸಾಧ್ಯವಾಗಲಿಲ್ಲ. ಆ ದಿನಗಳು ಅದ್ಭುತವಾಗಿದ್ದವು. ಸತ್ಯಜಿತ್ ಬಾಬು ನನ್ನನ್ನು ಆಯ್ಕೆ ಮಾಡಿಕೊಂಡು ‘ಮಹಾ ನಗರ್’ ಚಿತ್ರ ನಿರ್ದೇಶಿಸಿದ್ದರು. ಆಮೇಲೆ ‘ಚಾರುಲತಾ’ ಸಿದ್ಧವಾಯಿತು. ಇದು ನನ್ನ ಬದುಕಿನ ಸರ್ವಶ್ರೇಷ್ಠ ಚಿತ್ರ ಎಂದು ಸ್ವತಃ ಅವರೇ ದೇಶಕ್ಕೆಲ್ಲ ಹೇಳಿಕೊಂಡು ಬಂದರು. ಅದರ ಬೆನ್ನ ಹಿಂದೆಯೇ ‘ಕಾಪುರುಷ್’ ನಿರ್ದೇಶನಕ್ಕೆ ನಿಂತರು. ನಾನವರ ಕಾಲ ಬಳಿಯ ಇದ್ದೆ.
ಸತ್ಯಜಿತ್ ಬಾಬು ಆಕಾಶದೆತ್ತರಕ್ಕೆ ಬೆಳೆದಿದ್ದರು. ನಾನು ಅವರನ್ನು ಪ್ರೀತಿಸುವ ಹುಲ್ಲುಕಡ್ಡಿ. ಹುಲ್ಲುಕಡ್ಡಿಗೂ ಸಿಡಿಲು ಬಡಿಯುತ್ತದೆ ಗೊತ್ತೆ? ನನ್ನ
ಮತ್ತು ಸತ್ಯಜಿತ್ ಸಂಬಂಧದ ಬಗ್ಗೆ ಮಾತಾಡತೊಡಗಿದರು ಜನ! ಜಗತ್ತನ್ನೆದುರಿಸಲಾಗದೆ ತತ್ತರಿಸಿ ಹೋಗಿರಬೇಕು ಮಾಧವಿ. ಅದೊಂದು ದಿನ ಕಾಪುರುಷ್‌ನ ಬಿಡುಗಡೆ ಸಮಾರಂಭ ಮುಗಿದು ಮನೆಗೆ ಮರುಳುತ್ತಿದ್ದಾಗ ಫಕ್ಕನೆ ಒಂದೆಡೆ ಕಾರು ನಿಲ್ಲಿಸಲು ಹೇಳಿದಳು. ಇನ್ನು ಸಾಕು.
ನಿಮ್ಮನ್ನು ಭೇಟಿಯಾಗುವುದಿಲ್ಲ. ನಿಮ್ಮ ಚಿತ್ರಗಳಲ್ಲಿ ನಟಿಸುವುದಿಲ್ಲ. ನಿಮ್ಮ ಹೆಸರಿಗೆ ಕಳಂಕ ಬಂದರೆ, ಉಹುಂ- ನನ್ನಿಂದ ಅಂಥ ಅನಾಹುತ ವಾಗಕೂಡದು ಅಂದುಬಿಟ್ಟಳು. ಮಾಧವಿ, ನಾನು ಇಷ್ಟೆಲ್ಲ ಸಾಧಿಸಿದ್ದೇನೆ. ಹೆಸರು ಮಾಡಿದ್ದೇನೆ. ಹಗಲಿರುಳು ಜನರ ರಂಜನೆಗಾಗಿ, ನೆಮ್ಮದಿಗಾಗಿ ಚಿಂತನೆಗಾಗಿ ದುಡಿದಿದ್ದೇನೆ. ಇಂಥ ನಾನು, ಎರಡನೇ ಮದುವೆ ಮಾಡಿಕೊಂಡರೆ, ನನ್ನ ಈ ಚಿಕ್ಕದೊಂದು ತಪ್ಪನ್ನು ಜನ ಕ್ಷಮಿಸಲಾರರೇ? ಮಾಧವಿ ಉತ್ತರಿಸಲಿಲ್ಲ. ಕಾರಿಳಿದು ನಡೆದು ಹೋದಳು.
ಮತ್ತೆಂದೂ ಸತ್ಯಜಿತ್‌ರ ಬಳಿಗೆ ಹಿಂತಿರುಗಲಿಲ್ಲ. ತೀರ ಸಾಯುವ ಮೊದಲು, ಮೂವತ್ತು ವರ್ಷಗಳ ನಂತರ ಸ್ವತಃ ಸತ್ಯಜಿತ್ ರೇ ಅವಳಿಗೆ ಹೇಳಿ ಕಳಿಸಿದರು. ಸಾವಿನ ಪಲ್ಲಂಗದ ಮೇಲಿದ್ದ ಸತ್ಯಜಿತ್‌ರ ಎದುರಿಗೆ ಬಂದು ನಿಂತಳು ಮಾಧವಿ. ಮಾತನಾಡುವುದಕ್ಕೆ ಏನೂ ಉಳಿದಿರಲಿಲ್ಲ. ಎರಡು ಹನಿ ಕಣ್ಣೀರು ಇಬ್ಬರ ಕೆನ್ನೆಗಳ ಮೇಲೂ ಹರಿದವು. ಒಂದು ಚಿತ್ರ ಅಳಿಸಿಹೋಯಿತು. ಅವಳ ಪ್ರಕಾರ, ಪ್ರೀತಿಸಬೇಕು ನಿಜ. ಸುಮ್ಮನೆ ದೂರ ನಿಂತು, ಅಲ್ಲಿಂದಲೇ ಪ್ರೀತಿಸಬೇಕು. ಪೂಜಿಸಬೇಕು. ನಾವು ಪ್ರೀತಿಸಿದ್ದೆಲ್ಲ, ಇಷ್ಟಪಟ್ಟಿದ್ದೆಲ್ಲ ನಮಗೇ ಸಿಗಬೇಕು ಎಂಬ ಬಯಕೆ ಸರಿಯಲ್ಲ. ಸಿಗದುದಕ್ಕೆ
ದುಃಖವಿಲ್ಲ. ಅದು ಸಿಗಲೇಬೇಕೆಂದುಕೊಂಡು ಪ್ರೀತಿಸಿದ್ದೂ ಅಲ್ಲ. ಪ್ರೀತಿಯ ಅಂತಿಮ ಉದ್ದೇಶ; ಕೇವಲ ಪ್ರೀತಿ!
ನಿಮಗೂ ಸತ್ಯಜಿತ್ ಬಾಬುವಿಗೂ ದೈಹಿಕ ಸಂಬಂಧವಿತ್ತೆ? ಮಾಧವಿಯನ್ನು ರೇ ಸತ್ತ ಎಷ್ಟೋ ದಿನಗಳ ನಂತರ ಪತ್ರಕರ್ತರು ಕೇಳಿದರು. ಪ್ರೀತಿ ಇದ್ದದ್ದು ನಿಜ. ದೈಹಿಕ ಸಂಬಂಧ ಇತ್ತೆ, ಇಲ್ಲವೇ ಎಂಬುದು ಅಪ್ರಸ್ತುತ. ಅಂಥ ಸಂಬಂಧದ ಆಯಸ್ಸು ತೀರ ಚಿಕ್ಕದಾಗಿರುತ್ತದೆ. ಆದರೆ ಪ್ರೀತಿ ಮಾತ್ರ ಪ್ರಾಮಾಣಿಕವಾಗಿತ್ತು! ಅಂದು ಸುಮ್ಮನಾದಳು ಮಾಧವಿ. ಸತ್ಯಜಿತ್‌ರಿಂದ ದೂರಾದ ಮೇಲೆ ಮಾಧವಿ ಒಮ್ಮೆ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಳು. ಬದುಕಿಕೊಂಡಳು.
ಆಮೇಲೆ ಬೇರೆಬೇರೆ ಚಿತ್ರಗಳಲ್ಲಿ ನಟಿಸತೊಡಗಿದಳು. ಹೆಸರಾಯಿತು. ದುಡ್ಡಾಯಿತು. ಅದೇ ಅನೇಕರ ಆಕರ್ಷಣೆಗೂ ಕಾರಣವಾಯಿತು. ಆ ಪೈಕಿ ನಿರ್ಮಲ್ ಮುಖರ್ಜಿ ಎಂಬಾತನನ್ನು ಮದುವೆಯಾದಳು. ಎಲ್ಲ ಹೇಳಿಯೇ ಮದುವೆಯಾಯಿತು! ಪ್ರೀತಿಸಿದ್ದು ಅವರೊಬ್ಬರನ್ನೇ. ಇವತ್ತಿಗೂ ಅದೇ ಸತ್ಯ. ಎಂದು ಅಗತ್ಯಕ್ಕಿಂತ ಸ್ಪಷ್ಟವಾಗಿ ಹೇಳಿಯೇ ಮದುವೆಯಾದಳು. ಅದು ಎರಡನೇ ಆತ್ಮ ಹತ್ಯೆಯ ಪ್ರಯತ್ನದಂತಿತ್ತು. ನಿರ್ಮಲ್ ಮುಖರ್ಜಿ
ಪರಮ ಸ್ಯಾಡಿಸ್ಟು. ಸರಿಸುಮಾರು ೨೫ ವರ್ಷ ಅವನ ಎಲ್ಲ ಹಿಂಸೆಗಳನ್ನೂ ಸಹಿಸಿಕೊಂಡಳು. ಇಬ್ಬರು ಹೆಣ್ಣುಮಕ್ಕಳಾದರು. ಅವರೆದುರಿಗೇ ತನ್ನ ಮತ್ತು ಸತ್ಯಜಿತ್‌ರ ಸಂಬಂಧವನ್ನು ಹೀಯಾಳಿಸಿ ಮಾತಾಡತೊಡಗಿದಾಗ, ಕೊನೆಗೊಂದು ದಿನ enough is enough! ಎಂದು ಎದ್ದು ನಿಂತುಬಿಟ್ಟಳು. ಗಂಡನಿಂದ ಬೇರೆಯಾದಳು.
ಮಕ್ಕಳು ಗಂಡನ ಪಾಲಾದರು. ಮಾಧವಿ ಉಳಿಸಿಕೊಂಡದ್ದು ಅದೇ ಏಕಂ ಆದಿತ್ಯಂ ಎಂಬ ಪ್ರೇಮ ಮಂತ್ರ! ಒಬ್ಬಳೇ ಒಂದು ಫೈಟ್ ನಲ್ಲಿ ಬದುಕ ತೊಡಗಿದಳು. ಚಿತ್ರಗಳಲ್ಲಿ ನಟಿಸುತ್ತಿದ್ದಳು. ಅದರಿಂದ ಬಿಡುವು ಸಿಕ್ಕಾಗ ಕಲ್ಕತ್ತಾದ ಸ್ಲಮ್ ಗಳಿಗೆ ಹೊಗಿ ಸಮಾಜ ಸೇವೆ ಮಾಡತೊಡಗಿ ದಳು. ಬೇಸರವಾದಾಗ? ಜರ್ನಲಿಸ್ಟು ಕೇಳಿದ. ಸತ್ಯಜಿತ್ ರನ್ನು ಪ್ರೀತಿಸುತ್ತೇನೆ! ಅವರಿಲ್ಲವಲ್ಲ? ಅವರು ಯಾವಾಗಲೂ ಇರಲಿಲ್ಲ. ಮತ್ತು ಸದಾ ಕಾಲ
ಇದ್ದರು. ಇರುತ್ತಾರೆ!
ಖ್ಯಾತಿಯ ಬೆಟ್ಟವೇರಿ ನಿಂತ ದೊಡ್ಡ ಮನುಷ್ಯರನ್ನು ಪ್ರೀತಿಸಿದ ಹೆಣ್ಣುಮಕ್ಕಳೆಲ್ಲರದೂ ಇದೇ ವರಸೆ. ಸಂಗಾತಿಯ ಕೈ ಹಿಡಿಯಬೇಕೆಂಬ ಅವಸರದಲ್ಲಿ ದೇವರ ಕೈ ಹಿಡಿದು ಬಿಡುತ್ತಾರೆ. ದೇವರಿಗೆ ಕಳಂಕ ಹತ್ತಬಾರದು. ಅತ್ತ ದೇವರು ಕೂಡ ಒಬ್ಬಂಟಿಯಾಗಿಯೇ ಉಳಿದು ಹೋಗುತ್ತಾನೆ!
Read E-Paper click here