ಪ್ರಸ್ತುತ
ಭಾರತ್ ಜಿ.ವಿ
ಹಿತವಾದ ಆಹಾರ, ಯೋಗ್ಯವಾದ ವ್ಯಾಯಾಮ, ಮಾಡಬಹುದಾದ ವ್ಯಾಯಾಮ ಮತ್ತು ಅದಕ್ಕೆ ತಕ್ಕಂತೆ ಆಹಾರ ಎನ್ನುತ್ತದೆ. ನಾವು ತಿನ್ನುವ ಆಹಾರವು ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳನ್ನು ಮತ್ತು ಸತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಗುಣಗಳನ್ನೂ ಸಮತೋಲನದಲ್ಲಿಡಬೇಕು. ಇವುಗಳ ಅಸಮತೋಲ ನದಿಂದ ಕಾಯಿಲೆ ಮತ್ತು ಅಹಿತ ಉಂಟಾಗುತ್ತದೆ. ಅನೇಕ ಸಹಸ್ರ ಮಾನಗಳಿಂದ ಆಯುರ್ವೇದದ ತತ್ವಗಳು ನಮ್ಮ ದೇಶದ ಪದ್ಧತಿಯಾಗಿಬಿಟ್ಟಿವೆ.
ವೈಯಕ್ತಿಕ ಶೌಚ ಮತ್ತು ಸಾಮಾಜಿಕ ಅಂತರವು ನಮ್ಮ ಸಂಸ್ಕೃತಿಯ ಭಾಗವಾಗಿ ನಮಗೆ ಹರಿದು ಬಂದಿದೆ. ಆಚಾರ ಎಂದರೆ ಉತ್ತಮವಾದ ಅಭ್ಯಾಸ ನಮ್ಮ ಪದ್ಧತಿಗಳಾದ ಮನೆಯ ಹೊರಗೆ ಚಪ್ಪಲಿಯನ್ನು ಬಿಡುವುದು, ಒಂದೇ ಪಾತ್ರೆಯಿಂದ ಎಲ್ಲರೂ ತಿಂದು, ನೀರು ಕುಡಿಯದಿರುವುದು, ಪಯಣ
ಮಾಡುವಾಗ ನಮ್ಮ ಊಟವನ್ನೇ ಕೊಂಡೊಯ್ಯುವುದು, ಭಾರತದ ಎಡೆಯೂ ಅಭ್ಯಾಸ ಮಾಡುವಂ ತಹ ಆಚಾರಗಳು. ಇದರೊಂದಿಗೆ ಪ್ರತಿಯೊಂದು ಪ್ರಾಂತವೂ ತನ್ನದೇ ಆದ ಸ್ಥಳೀಯ ಪದ್ಧತಿಗಳನ್ನು, ಆಹಾರವನ್ನು, ಜೀವನಶೈಲಿಯನ್ನು ಹೊಂದಿದ್ದವು ಮತ್ತು ಅದನ್ನು ದೇಶಾಚಾರ ಎಂದು ಕರೆಯ ಲಾಗುತ್ತಿತ್ತು. ಈ ದೇಶಾಚಾರವು ಆಯಾ ಪ್ರದೇಶದ ಸ್ವಭಾವ, ವಾತಾವರಣ ಮತ್ತು ಭೂಗೋಳಕ್ಕೆ ಅನುಗುಣವಾಗಿ ಇರುತ್ತಿತ್ತು.
ಬ್ರಿಟಿಷ್‌ನ ಡಾ. ಜಾನ್ ಝೆಡ್ ಹೊಲ್ವೆಲ್ ಓರ್ವ ಶಸಚಿಕಿತ್ಸ ಕರಾಗಿದ್ದರು ಮತ್ತು ಈ ಇಂಡಿಯಾ ಕಂಪನಿಯಲ್ಲಿ ಸೇವೆ ಸಲ್ಲಿಸು ತ್ತಿದ್ದರು. ಇವರು ಭಾರತದ
ಲಸಿಕೆಯ ಪದ್ಧತಿಯನ್ನು ಗಮನಿಸಿ ದಾಖಲಿಸಿzರೆ. ಅವರ ದಾಖಲೆಗಳಲ್ಲಿ ಒಂದು ನಿರ್ದಿಷ್ಟವಾದ ಜನರಿದ್ದರು ಮತ್ತು ದೂರದ ಪ್ರಾಂತಗಳಿಂದ ಜನರು ವರ್ಷಕ್ಕೊಮ್ಮೆ ಬಂದು, ತಮ್ಮನ್ನು ಎರಡು ಅಥವಾ ಮೂರು ಜನರ ಸಣ್ಣ ಗುಂಪುಗಳಾಗಿ ವಿಭಜಿಸಿಕೊಂಡು ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು. ಅಲ್ಲಿಂದ ವೈದ್ಯರು ಗೋವಾಸುರಿಯೆಂಬ ಔಷಧವನ್ನು ಎಲ್ಲರಿಗೂ ಕೊಡುತ್ತಿದ್ದರು. ಈ ವ್ಯವಸ್ಥೆ ಬಹಳ ಸುಸೂತ್ರವಾಗಿ ಸಾಗುತ್ತಿದ್ದು, ಬ್ರಿಟಿಷರು ಬಂದು ಇದನ್ನು ನಿಲ್ಲಿಸುವವರೆಗೂ ಸಣ್ಣ ಸಿಡುಬು ಬಂದಿರಲೇ ಇಲ್ಲ. ಜೆನ್ನರ್ ಸಣ್ಣ ಸಿಡುಬಿನ ಲಸಿಕೆ ಕಂಡುಹಿಡಿದಿದ್ದರಿಂದ ನಿಲ್ಲಿಸಿಬಿಟ್ಟರು.
ಭಾರತೀಯ ಪದ್ಧತಿಯ ಅಧ್ಯಯನ ನಡೆಸಿ, ಜೆನ್ನರ್ ಲಸಿಕೆಯನ್ನು ಕಂಡುಹಿಡಿದ. ಹಿಂದಿನ ಜನರು ಅಗೋಚರವಾದ ಬ್ಯಾಕ್ಟೀರಿಯ ಮತ್ತು ವೈರಸ್
ಗಳ ಇರುವಿಕೆಯ ಬಗ್ಗೆ ತಿಳಿದಿದ್ದರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅದರ ಸ್ವಭಾವವನ್ನು ತಿಳಿದಿದ್ದ ಅವರು, ಅದರ ಪ್ರಭಾವವನ್ನು ತಡೆಗಟ್ಟುವ ಬಗ್ಗೆಯೂ ತಿಳಿದಿದ್ದರು. ಆಸಕ್ತಕರವಾಗಿ, ಅಥರ್ವ ವೇದದಲ್ಲಿ ಕ್ರಿಮಿಗಳನ್ನು ನೋಡಲಾಗುವುದಿಲ್ಲವೆಂದೂ ಮತ್ತು ಅದನ್ನು ಕ್ರಿಮಿ ಎಂದೂ ಕರೆಯ ಲಾಗಿದೆ. ವೈದ್ಯಕೀಯ ಗ್ರಂಥವಾದ ಚರಕ ಸಂಹಿತದಲ್ಲಿ ಕ್ರಿಮಿಗಳು ಅಗೋಚರವಾದವೆಂದೂ ಮತ್ತು ಅವುಗಳ ಬಣ್ಣ ಮತ್ತು ಆಕಾರವನ್ನೂ ವಿವರಿಸಿದೆ. ಅವುಗಳನ್ನು ನೋಡಲು ಅವರ ಬಳಿ ದೂರದರ್ಶಕದ ಯಂತ್ರವಿತ್ತೆ? ಅಷ್ಟು ಸವಿಸ್ತಾರವಾಗಿ ವಿವರಿಸಿದೆ. ಗೌತಮನ ನ್ಯಾಯ ಸಂಹಿತೆಯಲ್ಲಿದೆ.
ಔಷಧಿಯೇ ಆಹಾರ ಎಂಬುದೇ ನಮ್ಮ ತತ್ವ. ಆಯುರ್ವೇದ ಶೇ.೮೦ರಷ್ಟು ತಡೆಗಟ್ಟುವ ಮತ್ತು ಶೇ.೨೦ರಷ್ಟು ಚಿಕಿತ್ಸೆ ನೀಡುವ ಪದ್ಧತಿಯಾಗಿದೆ. ವಿಚಿತ್ರ ವಾದ ಆಹಾರ ಪದ್ಧತಿ, ನಮ್ಮದಲ್ಲದ ಆಹಾರ, ಡಬ್ಬಿಯಲ್ಲಿ ಕೂಡಿಡಲಾದ ಆಹಾರ, ದಿಢೀರೆಂದು ತಿನ್ನುವ ಆಹಾರ, ಹೊರಗೆ ತಿನ್ನುವ ಆಹಾರ ಒಂದು ರೂಢಿಯಾಗಿಬಿಟ್ಟಿದೆ ಮತ್ತು ಜೀವನಶೈಲಿಯ ರೋಗಗಳಿಗೆ ಕಾರಣವಾಗಿದೆ. ಈಗ ಸ್ವಲ್ಪ ನಿಂತು ಆಲೋಚಿಸಿ ಪ್ರಕೃತಿಯೊಡನೆ ಸಂಯೋಜಿಸಿ ಕೊಳ್ಳುವ ಕಾಲ ಬಹುಶಃ ಬಂದಾಗಿದೆ. ಋತುಗಳಿಗೆ ಅನುಗುಣವಾದ ಆಹಾರವನ್ನು ಮತ್ತು ಸ್ಥಳೀಯವಾಗಿ ಬೆಳೆಯಲಾದ ತರಕಾರಿಗಳನ್ನು ತಿನ್ನುವುದರಿಂದ ಆರಂಭಿಸಬಹುದು.
ಅವುಗಳು ಬಹಳ ಸ್ವಾದಿಷ್ಟವಾಗಿರುತ್ತವೆ, ಸ್ಥಳೀಯ ಆರ್ಥಿಕತೆಗೆ ಬೆನ್ನೆಲುಬಾಗಿರುತ್ತದೆ. ಇದನ್ನು ಬೆಳೆದ ರೈತನಿಗೆ ನೇರ ಲಾಭವಾಗುತ್ತದೆ. ಮಾನವರಾಗಿ ಈ ಭೂಮಿಯನ್ನು ಆಸ್ತಿ ಯಾಗಿ ಪಡೆದುಕೊಂಡಿದ್ದೇವೆ. ಇತರ ಜೀವಿಗಳಿಗೂ ಇದರ ಸಂಪನ್ಮೂಲಗಳ ಸಮಾನ ಹಕ್ಕಿದೆ. ನಮ್ಮ ಪ್ರeಪೂರ್ವಕವಾದ ಮತ್ತು ನೈತಿಕ ಆಯ್ಕೆಗಳು ಪರಿಸರದ ಮೇಲೆ ದೀರ್ಘ ಕಾಲದ ಪ್ರಭಾವವನ್ನು ಬೀರುತ್ತದೆ. ತಮ್ಮನ್ನೇ ಪೋಷಿಸುವ ಪ್ರಕೃತಿಯನ್ನು ವಿಪರೀತವಾಗಿ ಬಳಸಿ ಮಾನವ ನಾಶ ಮಾಡುತ್ತಿzನೆ. ಅರಣ್ಯಗಳ ನಾಶ , ಕುಡಿಯುವ ನೀರಿನ ಅತೀ ವೇಗವಾದ ಬತ್ತಿಹೋಗುವಿಕೆ ನಮಗೆಲ್ಲರಿಗೂ ಎಚ್ಚರಿಕೆಯ ಕರೆಯಾಗಿದೆ. ನಾವೆಲ್ಲರೂ ಮತ್ತೆ ನಮ್ಮ ನಿಜ ಸ್ವಭಾವಕ್ಕೆ ಮರಳಿ ಬರಬೇಕಾಗಿದೆ ಮತ್ತು ಭೂತಾಯಿ ನಮ್ಮನ್ನು ಸಂರಕ್ಷಿಸುವಂತಾಗಬೇಕು.