Thursday, 19th September 2024

ಲಿವ್ ಆನ್ ಮತ್ತು ಲಿವ್ ಇನ್‌

ತುಂಟರಗಾಳಿ

ಸಿನಿಗನ್ನಡ

ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಎಲ್ಲರ ಪ್ರಶಂಸೆಗೆ ಪಾತ್ರವಾಗಿರೋದು ಗೊತ್ತಿರೋ ವಿಷಯ. ಜನ ಸಾಮಾನ್ಯರ ಜೊತೆಗೆ ಪ್ಯಾನ್ ಇಂಡಿಯಾ ನಟ ಪ್ರಭಾಸ್, ರಕ್ಷಿತ್ ಶೆಟ್ಟಿ, ರಮ್ಯಾ ಮುಂತಾದ ಸೆಲೆಬ್ರಿಟಿಗಳು ಸಹ ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ.

ಈಗ ನಟ ಸುದೀಪ್ ಅವರ ಸರದಿ. ಕಿಚ್ಚ ಸುದೀಪ್ ಕೂಡಾ ಕಾಂತಾರದ ಕಿಚ್ಚನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಅದನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡು ಒಂದು ಪತ್ರವನ್ನೇ ಬರೆದಿದ್ದಾರೆ. ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ.

ಇನ್ನು, ರಿಷಭ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ. ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಭ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ
ನಮನ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಪ್ರತಿಭೆ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಗೂ ನನ್ನ ಕೃತಜ್ಞತೆಗಳು. ಚಿತ್ರ ನೋಡಿ ದವರು ನೀಡಿದ ಪ್ರತಿಕ್ರಿಯೆಗಳಿಗೆ ತಕ್ಕ ಹಾಗೆ ಚಿತ್ರ ನಿಜಕ್ಕೂ ಅಷ್ಟೊಂದು ಅದ್ಭುತವಾಗಿ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ನನ್ನ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಒಟ್ಟಾರೆ ಕಾಂತಾರ ಚಿತ್ರವನ್ನು ನಮ್ಮ ಉದ್ಯಮದ ದೊಡ್ಡ ಸ್ಟಾರ್‌ಗಳೂ ಕೂಡ ಮನಸ್ಸು ಬಿಚ್ಚಿ ಹೊಗಳುತ್ತಿರೋದು ಸಂತಸದ ವಿಷಯ.

ಲೂಸ್ ಟಾಕ್
ಸಿದ್ದರಾಮಯ್ಯ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ರಾಹುಲ್ ಗಾಂಧಿ ಅವರ ಜೊತೆ ಪಾದಯಾತ್ರೆಯಲ್ಲಿ ಜೋರಾಗಿ ಓಡ್ತಾ ಇದ್ರಿ?
-ಹೌದು, ಎಲೆಕ್ಷನ್ ಹತ್ರ ಬರ್ತಾ ಇದೆ. ನಾನು ಈಗಲೂ ಓಡೋ ಕುದುರೆ ಅಂತ ತೋರಿಸಿಕೊಳ್ಳಬೇಕಲ್ವಾ ಅದಕ್ಕೇ

ಆದ್ರೂ ಯಾತ್ರೆಯಲ್ಲಿ ರಾಹುಲ್ ಗಾಂಧಿನೂ ನಾಚಿಸಿಬಿಟ್ರಿ ನೀವು, ಅಲ್ವಾ ?
-ಅಯ್ಯೋ, ಎಂತೆಂಥಾ ಜಾತ್ರೆಯಲ್ಲಿ ಡ್ಯಾ ನ್ನೇ ಮಾಡಿದೀನಂತೆ, ಈ ಯಾತ್ರೆಯಲ್ಲಿ ಓಡೋದೋನು ಮಹಾ..

ಸರಿ, ಈ ವಯಸ್ಸಲ್ಲೂ ನಿಮಗೆ ಇಷ್ಟೊದು ಎನರ್ಜಿ ಹೆಂಗೆ, ಯಾವುದಾದ್ರೂ ಮಾತ್ರೆ ತಗೋತೀರಾ?
-ಯಾಕ್ರೀ, ನಮ್ಮ ನೀರ್ ದೋಸೆ ವಿಜಯ್ ಪ್ರಸಾದ್ ಅವ್ರ್ ಥರ ಮಾತಾಡ್ತಾ ಇದ್ದೀರಾ?

ಅಯ್ಯೋ, ಹಂಗೇನಿಲ್ಲ, ಹೋಗ್ಲಿ ಬಿಡಿ, ಆದ್ರೆ, ರಾಹುಲ್ ಗಾಂಧಿ ನೂರಾರು ಕಿಲೋಮೀಟರ್ ದೂರ ನಡಿತಾ ಇರೋದಕ್ಕೆ ಜನ ಏನಂತಿದ್ದಾರೆ?
-ಅಯ್ಯೋ, ಏನ್ ಮಾಡೋದು, ನಮ್ ಜನ ವಿರಾಟ್ ಕೊಹ್ಲಿ ಸೆಂಚುರಿ ಹೊಡೆದ್ರೆ ಮಾತ್ರ ಬೆಲೆ ಕೊಡ್ತಾರೆ. ರಾಹುಲ್ ಗಾಂಧಿ ನೂರು ಕಿಲೋಮೀಟರ್ ನಡೆದರೂ ಅದು ಬರೀ ‘ಕಾಲ’ ಸೆಂಚುರಿ ಅಂತಿದ್ದಾರೆ.

ಪಾಪ ರಾಹುಲ್ ಗಾಂಧಿ, ಸರಿ, ನಿಮ್ಮ ಮತ್ತು ಡಿಕೆಶಿ ಅವರ ಮಧ್ಯೆ ಎಲ್ಲವೂ ಸರಿಹೋಗಿದೆಯಾ?
-ಅಯ್ಯೋ, ಕೂತ್ಕಂಡು ಮಾತಾಡೋಣ ಅಂದ್ರೆ ನಂಗೆ, ಈ ಕಡೆ ಒಂದ್ ಕಡೆ ಕಾಲೇ ನಿಲ್ಲಲ್ಲ, ಆ ಕಡೆ ಪಾಪ ಡಿಕೆಶಿ ಅವರಿಗೆ ಇಡಿ, ಸಿಬಿಐ ಇಂದ ಬರೋ ‘ಕಾಲೇ’ ನಿಲ್ತಾ ಇಲ್ಲ.

ನೆಟ್ ಪಿಕ್ಸ್
ಸೈಕಾಲಜಿ ಕ್ಲಾಸ್ ನಡೆದಿತ್ತು. ಮೇಷ್ಟ್ರು ಏನೋ ಹೇಳೋಕ್ ಹೊರಟಿದ್ದರು. ಬರೀ ಬಾಯ್ ಮಾತಲ್ಲಿ ಹೇಳಿದೆ ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುವ ಬಾಯ್‌ಗೆ ಅರ್ಥ ಆಗೊಲ್ಲ ಎನ್ನುವಂಥ ವಿಷಯ ಅದು, ಜೀವನದಲ್ಲಿ ಬರೀ ಹೆಗ್ಡೆ ಮುಖ್ಯ ಅಲ್ಲ,
ಹುಡುಗಿಯರ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಅನ್ನೋ ಪಾಠವನ್ನು ಹುಡುಗರಿಗೆ ಕಲಿಸುವ ಉದ್ದೇಶ ಮೇಸ್ಟ್ರದ್ದು. ಹಾಗಾಗಿ ಒಂದು ಉದಾಹರಣೆ ಸಮೇತ ಹೇಳೋಣ ಅಂತ ಮೇಷ್ಟರು ಟೇಬಲ್ ಮೇಲೆ ಮಧ್ಯದಲ್ಲಿ ಒಂದು ಗಂಡು ಇಲಿ ಇಟ್ಟರು.

ಟೇಬಲ್‌ನ ಈ ಬದಿಯಲ್ಲಿ ಒಂದು ಹೆಣ್ಣು ಇಲಿ ಇಟ್ಟರು. ಅದೇ ಟೇಬಲ್‌ನ ಇನ್ನೊಂದು ಬದಿಯಲ್ಲಿ ಒಂದಷ್ಟು ಕಡಲೇ ಕಾಯಿ ಬೀಜಗಳನ್ನಿಟ್ಟರು. ಕೈ ತೆಗೆದ ಕೂಡಲೇ, ಗಂಡು ಇಲಿ, ಕಡಲೇ ಕಾಯಿ ಬೀಜ ಇರುವ ಕಡೆ ನುಗ್ಗಿತು. ಮೇಷ್ಟರು ಅದನ್ನೇ ನೋಡ್ತಾ ಇದ್ದ ಹುಡುಗರನ್ನು ಗಮನಿಸುತ್ತಿದ್ದರು. ನಂತರ ಕಡಲೇ ಕಾಯಿ ಬೀಜ ತೆಗೆದು ಒಂದಷ್ಟು ಹಳ ಮುಪ್ಪಡಿ ಇಟ್ಟರು. ಆಗಲೂ ಇಲಿ ಹುಳಗಳ ಕಡೆಗೆ ನುಗ್ಗಿತು. ಅನಂತರ ಅದನ್ನೂ ತೆಗೆದು ಸಣ್ಣ ಮಾರಿಸದ ಚೂರುಗಳನ್ನು ಬಿಟ್ಟರು, ಮತ್ತೆ ಇಲಿ ಮಾಂಸದ ಕಡೆಗೆ ನುಗ್ಗಿತು. ಈ ಎಲ್ಲದರ ನಂತರ ಮೇಸ್ಟರು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು ‘ನೋಡಿ, ಈಗಲಾದರೂ
ಅರ್ಥ ಮಾಡಿಕೊಳ್ಳಿ, ಜೀವನದಲ್ಲಿ ಗಂಡಸಿಗೆ ಹೆಣ್ಣಿಗಿಂತ ಹೊಟ್ಟೆಪಾಡು ಮುಖ್ಯ, ಆಹಾರ ಮುಖ್ಯ’, ಎಲ್ಲರಿಗಿಂತ ಹಿಂದೆ ನಿಂತಿದ್ದ ಖೇಮು ಮೆಲ್ಲನೇ ಹೇಳಿದ ‘ಸರ್, ಯಾವುದಕ್ಕೂ ಒಂದು ಆ ಹೆಣ್ಣು ಇಲಿ ತೆಗೆದು, ಬೇರೆ ಹೆಣ್ಣು ಇಲಿ ಇಟ್ಟು ನೋಡಿ, ಯಾರಿಗೊತ್ತು? ನೀವಿಟ್ಟಿರೋ ಈ ಹೆಣ್ಣು ಇಲ್ಲಿ ಆ ಗಂಡು ಇಲಿಯ ಹೆಂಡತಿ ಇದ್ದರೂ ಇರಬಹುದು’

ಲೈನ್ ಮ್ಯಾನ್

ಕೊಳಚೆ ನಿರ್ಮೂಲನ ಮಂಡಳಿಯ ಅವ್ಯದಹಾರವನ್ನು ಟಿವಿ ಚಾನೆಲ್‌ನವರು ಸ್ಟಿಂಗ್ ಆಪರೇಷನ್ ಮಾಡಿ ಬಯಲಿಗೆಳೆದರೆ ಅದು -ಸ್ಟಿಂಕ್ ಆಪರೇಶನ್

ಕಿವಿಮಾತು
-ನಿಮ್ಮ ಕೂದಲಿನಲ್ಲಿ ಸಿಕ್ಕುಗಳಿದ್ದರೆ ‘ಲಿವ್, ಆನ್’ ಟ್ರೈ ಮಾಡಿ,
-ನಿಮ್ಮ ವೈವಾಹಿಕ ಸಂಬಂಧದಲ್ಲಿ ಸಿಕ್ಕುಗಳಿದ್ದರೆ ‘ಲಿವ್ ಇನ್’ ಟ್ರೈ ಮಾಡಿ.

ಸಿನಿಮಾ ಬಿಡುಗಡೆಯ ದಿನ ಮಾರ್ನಿಂಗ್ ಶೋ ಮುಗಿದ ಮೇಲೆ ಪಟಾಕಿ ಹೊಡೆದಿದ್ದು ನೋಡಿದ ಜಗ್ಗೇಶ್ ಅಭಿಮಾನಿ ಹೇಳಿದ್ದು
-ಸಿನಿಮಾ ಮೊದಲ ದಿನಾನೇ ಥಿಯೇಟರ್ ಮುಂದೆ ಹೊಗೆ ಹಾಕಿಸ್ಕೊಂತು.

ಓಬಿರಾಯನ ಕಾಲದ ಕಂಪ್ಯೂಟರ್ ಮೌಸ್
-ಮೌಸೀ

ಭಾಷಾ ಪ್ರಯೋಗ
ಗುಂಡ: ಮದುವೆಗೆ, ಬಟ್ಟೆ ತೆಗೆಯೋಕೆ ಅಂಗಡಿಗೆ ಹೋಗಿದ್ದೆ
ಖೇಮು: ಎಲ್ಲರ ಮುಂದೆ ಬಟ್ಟೆ ತೆಗೆಯೋದಾ? ಅದೂ ಅಂಗಡೀಲಿ, ಸಂಕೋಚ ಆಗಲಿಲ್ವಾ
ಅತಿಥಿ ಪಾತ್ರಗಳನ್ನು ಮಾಡುವ ನಟಿ ಬಿ.ಸಿ.ಪಾಟೀಲ್ ಅವರನ್ನು ಏನೆಂದು ಕರೆಯಬಹುದು?
-‘ಕೌರವ’ ನಟ

ವೈಸ್ ವೈಫ್
ಹೆಂಡ್ತಿ, ಗಂಡನಿಗೆ ಅಂತ ಒಂದೇ ಬಣ್ಣದ ಹತ್ತು ಅಂಡರ್‌ವೇರ್ ತಗೊಂಡ್ ಬಂದ. ಅದನ್ನು ನೋಡಿದ ಗಂಡ ಹೇಳಿದ, ಏನಿದು ಡಾರ್ಲಿಂಗ್, ಎಲ್ಲ ಒಂದೇ ಕಲರ್ ಅಂಡರ್ವೇರ್ ತಂದಿದೀಯ, ನೋಡಿದ್ ಜನ ನಾನು ಅಂಡರ್‌ವೇರೇ ಬದಲಾಯಿಸೋದಿಲ್ಲ
ಅಂತ ತಪ್ಪು ತಿಳ್ಕೊಳಲ್ವಾ. ಹೆಂಡ್ತಿ ಗರಂ ಆಗಿ ಕೇಳಿದ್ದು, ‘ಯಾವ ಜನಾ?’, ಗಂಡ ಗಪ್‌ಚುಪ್!

ಲೈ ಡಿಟೆಕ್ಟರ್ ಪ್ರಶ್ನೆ
ಅಪ್ಪ: ಪುಟ್ಟ ನಿಂಗೆ ಯಾರಿಷ್ಟ. ಅಪ್ಪನೋ, ಅಮ್ಮನೋ?
ಪುಟ್ಟ: ನಂಗೆ ಇಬ್ರೂ ಇಷ್ಟ.
ಅಪ್ಪ: ಅವೆ ಇಲ್ಲ. ಇಬ್ರಲ್ಲಿ ಒಬ್ಬ ಹಸ್ರು ಹೇಳು
ಪುಟ್ಟ: ಹಂಗೆಲ್ಲ ಆಗಲ್ಲ.
ಅಪ್ಪ: ಸರಿ ನಿಮ್ಮಮ್ಮ ಗುರುಶಿಷ್ಯರು ಸಿನಿಮಾಗೆ ಹೋಗ್ತಾಳೆ, ನಾನು ಕಾಂತಾರ ಸಿನಿಮಾಕ್ಕೆ ಹೋಗ್ತಿನಿ, ಆಗ ನೀನು ಯಾವ ಸಿನಿಮಾಕ್ಕೆ ಹೋಗ್ತೀಯ
ಪುಟ್ಟ: ನಾನು ಗುರು ಶಿಷ್ಯರು ಸಿನಿಮಾಗೆ ಹೋಗ್ತಿನಿ
ಅಪ್ಪ: ಹಾ, ನೋಡು ನಿಂಗೆ ಅಮ್ಮ ಅಂದ್ರೆ ಇಷ್ಟ.
ಪುಟ್ಟ: ಹಂಗಲ್ಲ, ನಂಗೆ ಶರಣ್ ಅಂದ್ರೆ ನಷ್ಟ ಅಷ್ಟೆ.
ಅಪ್ಪ: ಸರಿ, ಹಾಗಾದ್ರೆ ನಾನು ಗುರು ಶಿಷ್ಯರು ಸಿನಿಮಾಕ್ಕೆ ಹೋಗ್ತೀನಿ,. ನಿಮ್ಮಮ್ಮ ಕಾಂತಾರಕ್ಕೆ ಹೋಗ್ತಾಳೆ. ಆಗ ನೀನು ಯಾವ ಪಿಕ್ಚರ್‌ಗೆ ಹೋಗ್ತಿಯಾ.
ಪುಟ್ಟ: ಕಾಂತಾರಕ್ಕೆ ಹೋಗ್ತಿನಿ
ಅಪ್ಪ: ನೋಡಿದ್ಯಾ..ಸಿಕ್ ಹಾಕ್ಕೊಂಡೆ ನೀನು. ಈಗ್ಲಾದ್ರೂ ಅಮ್ಮ ಅಂದ್ರೆ ಇಷ್ಟ ಅಂತ ಒಪ್ಕೋ.
ಪುಟ್ಟ: ಅದು ಹಂಗಲ್ಲ. ಗುರು ಶಿಷ್ಯರು ಸಿನಿಮಾ ಅಮ್ಮನ ಜೊತೆ ಆಗ್ಲೇ ನೋಡಿರ್ತೀನಲ್ಲ ಅದಕ್ಕೆ ಕಾಂತಾರಕ್ಕೆ ಹೋಗ್ತೀನಿ ಅಂತ ಹೇಳಿದ್ದು.