Wednesday, 9th October 2024

ಬೇಡವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆ

ranjith.hoskere@gmail.com

ಆಡಳಿತ ರೂಢ ಬಿಜೆಪಿಗೆ ಚುನಾವಣೆ ನಡೆಯದಿದ್ದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಆತಂಕವಾದರೆ, ಪ್ರತಿಪಕ್ಷ  ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಡೆಸಬಾರದು ಎಂದರೂ ಸಮಸ್ಯೆ, ನಡೆಸಿದರೂ ಸಮಸ್ಯೆಯಾಗಲಿದೆ ಎನ್ನುವ ಆತಂಕದಲ್ಲಿ ದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯೇ  ಚುನಾವಣೆ ಗಳು. ಅದರಲ್ಲಿಯೂ ಆಡಳಿತ ವಿಕೇಂದ್ರಿಕರಣದಿಂದ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಭಾರತದಂತ ದೇಶದಲ್ಲಿ ಚುನಾವಣೆಗಳು, ರಾಜಕೀಯ, ಸಾಮಾಜಿಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಬಹುಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಆದರೆ ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಮಾತ್ರ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಕ್ಕೆ ಆಸಕ್ತಿಯಿಲ್ಲ ಎನ್ನುವಂತೆ ಭಾಸವಾಗುತ್ತಿದೆ.

ಹಾಗೇ ನೋಡಿದರೆ ಕರ್ನಾಟಕದಲ್ಲಿ ಬಿಬಿಎಂಪಿ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಹಲವು ಸ್ಥಳೀಯ ಸಂಸ್ಥೆ ಚುನಾವಣೆಗಳು ಎರಡು ವರ್ಷದ ಹಿಂದೆಯೇ ನಡೆಯಬೇಕಿತ್ತು. ಅದರಲ್ಲಿಯೂ ಬೆಂಗಳೂರು
ರಾಜಕೀಯದ ದೃಷ್ಟಿಯಿಂದ ಬಿಬಿಎಂಪಿ ಚುನಾವಣೆ ಬಹುಮುಖ್ಯವಾಗಿತ್ತು. ಆದರೆ ಅವಧಿ ಮುಗಿದು ಹತ್ತಿರ ಹತ್ತಿರ ಮೂರು ವರ್ಷ ಕಳೆಯುತ್ತಾ ಬಂದರೂ, ಚುನಾವಣೆ ನಡೆಸುವ ಮನಸ್ಥಿತಿಯಲ್ಲಿ ಮಾತ್ರ ಸರಕಾರವಿರಲಿಲ್ಲ. ಕೇವಲ ಆಡಳಿತರೂಢ ಬಿಜೆಪಿ ಮಾತ್ರವಲ್ಲದೇ ಪ್ರತಿಪಕ್ಷಗಳಿಗೂ ಈ ಚುನಾವಣೆಗಳು ಬೇಡವಾಗಿದೆ.

ಕರೋನಾ ಕಾರಣದಿಂದ ಎರಡು ವರ್ಷಗಳ ಕಾಲ ಚುನಾವಣೆ ಇಲ್ಲದೇ ‘ಅಧಿಕಾರಿಗಳ’ನ್ನು ಮುಂದಿಟ್ಟು ಕೊಂಡು ಬಿಬಿಎಂಪಿಯನ್ನು ನಡೆಸಿತ್ತು. ಇದೀಗ ಕೆಲ ವಾರಗಳ ಹಿಂದೆ ಬಿಬಿಎಂಪಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದರೂ, ಹಿಂದುಳಿದ ವರ್ಗಗಳಿಗೆ ಮೀಸಲು, ಬಿಬಿಎಂಪಿ ವಾರ್ಡ್ ಮರು ಹಂಚಿಕೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟು, ಮತ್ತೆ ಮೂರು ತಿಂಗಳ ಕಾಲ ಚುನಾವಣೆ ಘೋಷಣೆಯಾಗದಂತೆ ನೋಡಿಕೊಂಡಿದ್ದಾರೆ.

ಮೂರು ತಿಂಗಳ ಬಳಿಕವೂ, ಚುನಾವಣೆ ನಡೆಸಲು
ಪೂರ್ಣ ಮನಸಿನಲ್ಲಿ ಸರಕಾರ ಸಿದ್ಧವಿದೆಯೇ ಎನ್ನುವ
ಪ್ರಶ್ನೆಗೆ, ಈ ಹಂತದವರೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಹಾಗೇ ನೋಡಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೇವಲ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೂ ಸಹbಬೇಡವಾಗಿದೆ. ಈ ಹಿಂದೆ ೪೮ ದಿನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ನೊಟಿಫಿಕೇ ಷನ್ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದಾಗ, ಸರಕಾರ ಒಪ್ಪಿಕೊಂಡಿದ್ದರೂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇನ್ನಿತ್ತರರು ಹಿಂದುಳಿದ ವರ್ಗಗಳಿಗೆ ಮೀಸಲು ನೀಡದೇ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬಾರದು.

ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ಮನದಟ್ಟು ಮಾಡಬೇಕು. ಒಬಿಸಿ ರಾಜಕೀಯ ಮೀಸಲಿಗೆ ಸಂಬಂಽ

ಸಿದಂತೆ ರಾಜ್ಯ ಸರಕಾರ ರಚಿಸಿರುವ ಆಯೋಗದ ವರದಿ
ಬರುವ ತನಕ, ಚುನಾವಣೆ ನಡೆಸಬಾರದು. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೂ ಮೊದಲು ನಡೆದಿದ್ದ ಸರ್ವ ಪಕ್ಷ ಸಭೆಯ ಲ್ಲಿಯೂ ಸಹ, ಮೂರು ಪಕ್ಷದ ನಾಯಕರು ‘ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಇಲ್ಲದೇ ಚುನಾವಣೆ ನಡೆಸುವುದುbಬೇಡ’ ಎನ್ನುವ ಸ್ಪಷ್ಟ ಧೋರಣೆಯನ್ನು ಮುಟ್ಟಿಸಿದ್ದವು.

ಪ್ರಮುಖವಾಗಿ ಬಿಬಿಎಂಪಿ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿನ ರಾಜಕೀಯ ಭವಿಷ್ಯದ ಸ್ಪಷ ಚಿತ್ರಣವನ್ನು ನೀಡುತ್ತದೆ. ಆದ್ದರಿಂದ ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಚುನಾವಣೆ ನಡೆದರೆ, ಸಮಸ್ಯೆಯಾಗುತ್ತದೆ ಎನ್ನುವುದು ಬಹುತೇಕರ ವಾದ. ಅದರಲ್ಲಿಯೂ ಹಿಂದುಳಿದ ವರ್ಗದವರಿಗೆ ಮೀಸಲು ನೀಡದೇ, ಚುನಾವಣೆಗೆ ಹೋದರೆ,
ಬಹುತೇಕ ಶಾಸಕರಿಗೆ ಭಾರಿ ಸಮಸ್ಯೆಯಾಗುತ್ತದೆ.

ಒಬಿಸಿ ಮತಗಳು ಕೈಬಿಟ್ಟು ಹೋಗುವ ಸಾಧ್ಯತೆಯಿ ರುತ್ತದೆ. ಆದ್ದರಿಂದ ಇಂತಹ ನಿಲುವು ತಗೆದುಕೊಳ್ಳಲು ಯಾವೊಬ್ಬ ಶಾಸಕರು ಸಿದ್ಧರಿಲ್ಲ ಎನ್ನುವುದು ಮೂರು ಪಕ್ಷದ ಮಾತಾಗಿದೆ.

ಇದು ಬಹಿರಂಗವಾಗಿ ಶಾಸಕರು ಹೇಳಿಕೊಳ್ಳುತ್ತಿರುವ
ಅಳಲು. ಆದರೆ ಆಂತರಿಕವಾಗಿ ನಡೆಯುತ್ತಿರುವ ಸಂಘರ್ಷವೇ ಬೇರೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಅದರಲ್ಲಿಯೂ ಬೆಂಗಳೂರು ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಿರುವ ೧೯೮ ವಾರ್ಡ್ ಸೇರಿದಂತೆ ಮರುವಿಂಗಡಣೆಯಾದರೆ ೨೪೩ ವಾರ್ಡ್ಗಳಾಗಲಿದೆ. ಈ ೨೪೩ ವಾರ್ಡ್‌ಗಳಲ್ಲಿಯೂ, ಆಕಾಂಕ್ಷಿಗಳ ದಂಡು ದೊಡ್ಡ ಪ್ರಮಾಣದಲ್ಲಿಯೇ ಇದೆ ಎನ್ನುವುದರಲ್ಲಿbಎರಡನೇ ಮಾತಿಲ್ಲ. ಒಂದೊಂದು ವಾರ್ಡ್‌ನಲ್ಲಿ ಕನಿಷ್ಠ ಎಂಟರಿಂದ ೧೦ ಆಕಾಂಕ್ಷಿಗಳು, ಸ್ಥಳೀಯ ಮುಖಂಡರಿಗೆ ಹಾಗೂ ಶಾಸಕರಿಗೆ ಟಿಕೆಟ್ ತನಗೇ ನೀಡಬೇಕೆಂದು ‘ಟವೆಲ್’ ಹಾಕಿದ್ದಾರೆ.

ಬಹುತೇಕರು, ಎಲ್ಲ ಆಕಾಂಕ್ಷಿಗಳಿಗೂ ಟಿಕೆಟ್ ನೀಡುವ
ಭರವಸೆಯನ್ನು ನೀಡಿ ದಿನದೂಡುತ್ತಿದ್ದಾರೆ. ಆದರೀಗ ಒಂದು ವೇಳೆ ಚುನಾವಣೆ ಘೋಷಣೆಯಾದರೆ, ಈ ೧೦ರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗಲಿದೆ. ಇದರಿಂದ ಉಳಿದ ಒಂಬತ್ತುbಮಂದಿಯ ವಿರೋಧ, ಬಂಡಾಯ ವನ್ನು ಆ ಭಾಗದ ಶಾಸಕ ಅನುಭವಿಸಲೇಬೇಕು.

ಒಂದು ವೇಳೆ ಬಂಡಾಯವೇಳದಿದ್ದರೂ, ಚುನಾವಣಾ ಸಮಯದಲ್ಲಿ ತಟಸ್ಥ ನಿಲುವು ತಾಳಿದರೂ ಹೊಡೆತ ಬೀಳುವುದು ಸ್ಪಷ್ಟ. ಆದ್ದರಿಂದ ಆರೇಳು ತಿಂಗಳಲ್ಲಿ ಎದುರಾಗಲಿರುವ ಚುನಾವಣೆಯ ಹೊಸ್ತಿಲಲ್ಲಿ ಈ
ರೀತಿಯ ‘ರಿಸ್ಕ್’ ತಗೆದುಕೊಳ್ಳಲು ಯಾವ ಶಾಸಕರು ಸಿದ್ಧರಿಲ್ಲ.

ಆದ್ದರಿಂದ ಸಾಧ್ಯವಾದಷ್ಟು, ಬಿಬಿಎಂಪಿ ಚುನಾವಣೆ ಯನ್ನು ಮುಂದಕ್ಕೆ ಹಾಕಬೇಕು ಎನ್ನುವ ಒತ್ತಡವನ್ನು ಪಕ್ಷಗಳ ಮೇಲೆ ಶಾಸಕರು ಹೇರುತ್ತಿದ್ದಾರೆ. ಇದು ಚುನಾವಣಾ ವಿಷಯದಲ್ಲಿ ಆಗುತ್ತಿರುವ ಸಮಸ್ಯೆ.
ಇದರೊಂದಿಗೆ ಬೆಂಗಳೂರು ವ್ಯಾಪ್ತಿಯಲ್ಲಿ ಬಹುತೇಕ
ಕಾಮಗಾರಿಗಳು ನಡೆಯುವುದು ಬಿಬಿಎಂಪಿ ಸದಸ್ಯರ ನೆರಳಿನಲ್ಲಿಯೇ. ವಾರ್ಡ್ ಮಟ್ಟದ ಅಭಿವೃದ್ಧಿಯ ನೆಪದಲ್ಲಿ ವಾರ್ಷಿಕವಾಗಿ ಕನಿಷ್ಠ ೨೦ರಿಂದ ೨೫ ಕೋಟಿ ರು. ಮೌಲ್ಯದ ಕೆಲಸಗಳು ನಡೆಯುತ್ತವೆ. ಒಂದು ವೇಳೆ ಬಿಬಿಎಂಪಿ ಸದಸ್ಯರು ಇಲ್ಲದಿದ್ದರೆ, ಆ ಭಾಗದ ಶಾಸಕರು ಈ ಕಾಮಗಾರಿಗಳ ಮೇಲೆ ಹಿಡಿತ ಸಾಧಿಸಬಹುದು.

ಈ ವೇಳೆ ಟೆಂಡರ್ ಪ್ರಕ್ರಿಯೆಯಲ್ಲಿ ‘ಮಾಮೂಲಿ’ ಪ್ರಕ್ರಿಯೆಗಳು ನಡೆಸಲು ಬಿಬಿಎಂಪಿ ಸದಸ್ಯರಿದ್ದರೆ, ಶಾಸಕರಿಗೆ ಈ ಪ್ರಕ್ರಿಯೆಯಲ್ಲಿ ಕೈಹಾಕಲು ಸಾಧ್ಯವಿಲ್ಲ. ಆದ್ದರಿಂದ ಚುನಾವಣಾ ವರ್ಷದಲ್ಲಿ, ಸದಸ್ಯರು ಇಲ್ಲದಿ
ದ್ದರೆ ಸುಗಮವಾಗಿ ಕೆಲಸ ಕಾರ್ಯಗಳು ನಡೆಯುತ್ತವೆ
ಎನ್ನುವುದು ಬಹುತೇಕ ಅಭಿಪ್ರಾಯವಾಗಿದೆ. ಆದ್ದರಿಂದ ಈ ಚುನಾವಣೆ ನಡೆಯುವುದಕ್ಕಿಂತ ವಿಧಾನಸಭಾ ಚುನಾವಣೆ ಮುಗಿಯುವ ತನಕವಾದರೂ, ಮುಂದಕ್ಕೆ ಹೋದರೆ ಸಾಕೆಂದು ಶಾಸಕರು ಲೆಕ್ಕ ಹಾಕುತ್ತಿದ್ದಾರೆ.

ಆದರೆ ಚುನಾವಣೆ ನಡೆಯದಿದ್ದರೂ ಒಂದು ಸಮಸ್ಯೆಯಿದೆ. ಅದೇನೆಂದರೆ ಕಳೆದ ಎರಡು ವರ್ಷಗಳಿಂದ ಚುನಾವಣೆಗಳು ‘ನಾಳೆ ಬಾ’ ಎನ್ನುವಂತಾಗಿರುವುದು ಬಹುತೇಕ ಆಕಾಂಕ್ಷಿಗಳಿಗೆ ಬೇಸರ ತರಿಸಿದ್ದು, ಚುನಾವಣೆ ಘೋಷಣೆಯಾಗುವ ತನಕ ‘ಖರ್ಚಿ’ ಸಹವಾಸವೇ ಬೇಡ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ. ಚುನಾವಣೆಗಳು ನಡೆಯದಿದ್ದರೆ,
ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಯ ಪರವಾಗಿಯೂ ‘ಖರ್ಚು’ ಮಾಡಲು ಹಿಂದೇಟು ಹಾಕುವ ಸಾಧ್ಯತೆಯಿದೆ.

ಆದ್ದರಿಂದ ಚುನಾವಣೆ ನಡೆದರೆ ಒಂದು ಸಮಸ್ಯೆ,
ನಡೆಯದಿದ್ದರೆ ಮತ್ತೊಂದು ಸಮಸ್ಯೆ ಎನ್ನುವ ಜಿಗ್ನಾಸೆಯಲ್ಲಿ ಕೆಲ ಶಾಸಕರಿದ್ದಾರೆ. ಈ ರೀತಿಯ ಸಮಸ್ಯೆ ಕೇವಲ ಬಿಬಿಎಂಪಿಯಲ್ಲಿ ಮಾತ್ರವಲ್ಲ, ಬಹುತೇಕ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ ನಲ್ಲಿಯೂ ಇದೆ. ಆದ್ದರಿಂದ ‘ಅತ್ತ ಧರಿ-ಇತ್ತ
ಪುಲಿ’ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ.

ಆಡಳಿತ ರೂಢ ಬಿಜೆಪಿಗೆ ಚುನಾವಣೆ ನಡೆಯದಿದ್ದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಆತಂಕವಾದರೆ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಡೆಸಬಾರದು ಎಂದರೂ ಸಮಸ್ಯೆ,
ನಡೆಸಿದರೂ ಸಮಸ್ಯೆಯಾಗಲಿದೆ ಎನ್ನುವ ಆತಂಕದಲ್ಲಿದ್ದಾರೆ.

ಆದರೆ ಈ ಎಲ್ಲ ಸಾಲು ಸಾಲು ಸಮಸ್ಯೆಗಳು ಸರಕಾರ
ಹಾಗೂ ಪಕ್ಷಗಳ ಮುಂದಿದ್ದರೂ, ಸುಪ್ರೀಂ ಕೋರ್ಟ್ ಮಾತ್ರ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸೂಚನೆ ನೀಡಿರುವುದರಿಂದ ಪಕ್ಷದ ನಾಯಕರಿಗೆ ಭಾರಿ ಸಮಸ್ಯೆಯಾಗಿದೆ.

ಸದ್ಯ ಬಿಬಿಎಂಪಿ ಚುನಾವಣೆ ನಡೆಸಲು ಮೂರು
ತಿಂಗಳ ಕಾಲಾವಕಾಶ ಕೇಳಿರುವ ಸರಕಾರ ಅದಾದ ಬಳಿಕ, ಏನು ಮಾಡಬೇಕು ಎನ್ನುವ ಗೊಂದಲದಲ್ಲಿದೆ. ಒಂದು ವೇಳೆ ಚುನಾವಣೆ ಮುಂದಕ್ಕೆ ಹಾಕಲು ಸಾಧ್ಯವಾದರೆ ಅದಕ್ಕೆ ಬೇಕಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ‘ಪಕ್ಷಾತೀತ’ವಾಗಿ ಅಲಿಖಿತ ನಿಯಮ ಸಜ್ಜಾಗಿದೆ. ಪಕ್ಷಗಳಿಗೆ ಬೇಡವಾಗಿದ್ದರೂ, ಸಂವಿಧಾನ ಹಾಗೂ ಕಾನೂನಿನಲ್ಲಿರುವ ಪ್ರಕಾರ ಸುಪ್ರೀಂ ಕೋರ್ಟ್ ಒಂದು ವೇಳೆ ಚುನಾವಣೆ ನಡೆಸಲೇಬೇಕು ಎನ್ನುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದರೆ,
ಏನಾಗಲಿದೆ ಎನ್ನುವುದು ಈಗಿರುವ ಪ್ರಶ್ನೆ.