Sunday, 15th December 2024

ಲಾಕ್’ಡೌನ್ ಹಾಗೂ ಯುವಶಕ್ತಿ ಭವಿಷ್ಯ

ಅಭಿಪ್ರಾಯ

ಶಾಂತಾರಾಮ ಚಿಬ್ಬುಲಕರ

ಕೋವಿಡ್-19 ಜಾಗತಿಕ ಮಟ್ಟದಲ್ಲಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಪ್ರಗತಿಶೀಲ ರಾಷ್ಟ್ರವಾದ ಭಾರತಕ್ಕೆ ಇದು ದೊಡ್ಡ ದುರಂತ. ಆರೋಗ್ಯದ ದೃಷ್ಟಿಯಿಂದ ಭಾರತ ನೇರವಾದ ತೊಂದರೆ ಎದುರಿಸುತ್ತಿದೆ. ಅರ್ಥವ್ಯವಸ್ಥೆಯಲ್ಲಿ ದೊಡ್ಡ ಸಂಕಷ್ಟವೇ ಎದುರಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಭಾರತಕ್ಕೆ ಇದು ಭಾರಿ ಹೊಡೆತ.
ಯುವಶಕ್ತಿಯೇ ಭಾರತದ ಜೀವಾಳ.

ಯುವ ಜನಾಂಗ ದೇಶದ ಹಾಗೂ ರಾಜ್ಯದ ಜನಸಂಖ್ಯೆಯಲ್ಲಿ ಮೂರನೆಯ ಒಂದು ಭಾಗದಷ್ಟಿದೆ. ಇದರಲ್ಲಿ ವಿದ್ಯಾರ್ಥಿಗಳು,
ನಿರುದ್ಯೋಗಿಗಳು, ಉದ್ಯೋಗಾವಕಾಶಿಗಳು ಹಾಗೂ ಉದೋಗ್ಯಸ್ಥ ಯುವಕರು ಸೇರಿzರೆ. ಈ ಯುವಕರಲ್ಲಿ ಕೋವಿಡ-19 ಲಾಕ್‌ಡೌನ್‌ನಿಂದ ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡ ಹಾಗೂ ಖಿನ್ನತೆ ಉಂಟಾಗಿವೆ. ಉದ್ಯೋಗ, ಶಿಕ್ಷಣ, ನೆಮ್ಮದಿ, ಜೀವನ ಹೀಗೆ ಅನೇಕ ಅಲೋಚನೆಗಳು ಅವರಿಗೆ ಕಾಡುತ್ತಿವೆ. ಇವು ಭಾರತದ ಯುವ ಮನಸ್ಸಿನ ಮೇಲೆ ಮಾನಸಿಕವಾಗಿ ಕೆಲವು ಸಹಜ ತೊಂದರೆಗಳು ಉಂಟುಮಾಡಿವೆ.

ಭಾರತದಲ್ಲಿ ಸುಮಾರು ಶೇ.30 ರಷ್ಟು ಯುವಕರಿದ್ದಾರೆ. ವಿಶ್ವದ ಶೇ.20ರಷ್ಟು ಯುವ ಜನತೆ ಭಾರತದಲ್ಲಿದೆ ಎಂಬುವುದು ಹೆಮ್ಮೆ. ಆದರೆ ಅತ್ಯಂತ ಗಂಭೀರವಾದ ವಿಷಯವೆಂದರೆ ಉದ್ಯೋಗ, ಶಿಕ್ಷಣ ಮತ್ತು ತರಬೇತಿ ಇಲ್ಲದ ನಿಷ್ಪಲವಾದ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಯುವಕರು ನುರಿತವರಾಗಿದ್ದರೆ ಹಾಗೂ ಮಾರುಕಟ್ಟೆಯಲ್ಲಿ ಲೀನವಾಗಿದ್ದರೆ, ಅದು ದೇಶದ ಉನ್ನತ ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಹಾಗೂ ಸಂಶೋಧಕರು ಹೇಳಿದ್ದಾರೆ.

ಇತ್ತೀಚಿನ ಪರಿವರ್ತನಾ ಕಾಲದಲ್ಲಿ ಯುವಜನತೆ ಹಲವಾರು ಒತ್ತಡಗಳಿಗೆ ಒಳಗಾಗಿದ್ದಾರೆ. ಜಾಗತೀಕ, ತಂತ್ರಜ್ಞಾನದ ಪ್ರಗತಿ ಹಾಗೂ ಕ್ಷಿಪ್ರ ಸಾಂಸ್ಕೃತಿಕ ಮಿಶ್ರಣದಿಂದಾಗಿ ಯುವಜನರ ಬೇಡಿಕೆ ಮತ್ತು ಅದರ ತೊಂದರೆಗಳನ್ನು ಸಮರ್ಮಕವಾಗಿ ಅರ್ಥೈಸಿಕೊಳ್ಳಲು ಯುವಕರಿಗೆ ಸಾಧ್ಯವಾಗುತ್ತಿಲ್ಲ. ಸೂಕ್ತ ಪರಿಣಿತಿ ಹಾಗೂ ಅನುಭವದ ಕೊರತೆಯಿಂದಾಗಿ ಸಮಾಜ ಹಾಗೂ
ಕುಟುಂಬದಲ್ಲಿ ಯುವಕರಿಗೆ ಸಹಾಯ ಸಿಗುತ್ತಿಲ್ಲ. ಇದರ ನಡುವೆ ಮಾಹಾಮಾರಿ ಕೊರೋನಾ ಮತ್ತಷ್ಟು ಉಪಟಳ ನೀಡಿದೆ.

ಕೋವಿಡ್-19 ಒಂದನೆಯ ಅಲೆಯ ನಂತರ ಯುವಕರಿಗೆ ಬದಲಾವಣೆಯ ಹೊಸ ಆಶಾಭಾವನೆಗಳು ಮುಡಿದ್ದವು. ಆದರೆ ಎರಡನೇ ಅಲೆ ಯುವಕರ ನಿರಾಸೆಯ ಮೋಡ ತಂದೊಡ್ಡಿದೆ. ಸೂಕ್ತ ಅವಕಾಶ ಹಾಗೂ ಸಹಾಯ ಸಿಗದೆ ಯುವಜನತೆ ಸೂಕ್ತ ವಲ್ಲದ ಜೀವನ ಆಯ್ಕೆ ಹಾಗೂ ದುಷ್ಪರಿಣಾಮಗಳತ್ತ ವಾಲುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಂದ ಆದಿಯಾಗಿ ಮಧ್ಯವಯಸ್ಸಿ ನವರೆಗೂ ಇದರ ಪರಿಣಾಮ ಗಮನಿಸಬಹುದು.

ಪರೀಕ್ಷೆಯ ಭಯವೇ ನಮ್ಮ ಓದಿಗೆ ಕಾರಣ, ಇಂದು ಪರೀಕ್ಷೆಯು ಇಲ್ಲ, ಓದಿನ eನವು ಇಲ್ಲ ಇದು ಇಂದಿನ ವಿದ್ಯಾರ್ಥಿಗಳ ಮಾತು. ಇದು ನಗೆಯ ಮಾತಾದರು ವಾಸ್ತವ. ಅನೇಕ ವಿದ್ಯಾರ್ಥಿಗಳ ಪಾಡು ಇದರ ಹೊರತಾಗಿಲ್ಲ, ಎರಡು ಅವಳಿ ವರ್ಷ ಪರೀಕ್ಷೆ ಯಿಲ್ಲದೇ ಪಾಸಾದ ವಿದ್ಯಾರ್ಥಿಗಳಿಗೆ ಅಧ್ಯಯನದ ಪಥವೇ ತಪ್ಪಿಹೋಗಿದೆ. ಕರೋನಾ ಅಟ್ಟಹಾಸದಿಂದ ಜಾರಿಗೆ ಬಂದ
ಆನ್‌ಲೈನ್ ಶಿಕ್ಷಣ ವ್ಯವಸ್ಥೆ, ಮಕ್ಕಳ ಬೌದ್ಧಿಕ ಮಟ್ಟ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಅನೇಕ ಪಾಲಕರು ನಮ್ಮ ಮಗ ಈಗ ಐದನೇ ತರಗತಿ ಆದರೆ ಇನ್ನೊಮ್ಮೆ ಒಂದನೆಯ ತರಗತಿಗೆ ದಾಖಲಾತಿ ಮಾಡುವುದು ಉತ್ತಮ ಎಂದು ಗೊಣಗುತ್ತಿದ್ದಾರೆ. ಅಂತರ್ಜಾಲ ಶಿಕ್ಷಣ ಮಕ್ಕಳಿಗೆ ಭಾರತಕ್ಕೆ ಹೊಸ ಪ್ರಯೋಗ ಸದ್ಯ ಇದು ಅರಗಿಸಿಕೊಳ್ಳುವುದು ಕಷ್ಟ. ಅಧ್ಯಯನದ ಪ್ರಾಮುಖ್ಯತೆಯಿಂದ ಇಂದಿನ ಮಕ್ಕಳು ವಿಮುಖತೆಯತ್ತ ಮುಖ ಮಾಡಿದ್ದಾರೆ. ಶೈಕ್ಷಣಿಕವಾಗಿ ಶೂನ್ಯ ವರ್ಷವೆಂದು ಘೋಷಣೆಯಾಗದಿದ್ದರೂ ಜ್ಞಾನಾರ್ಜನೆಯ ದೃಷ್ಟಿಯಿಂದ ಈ ಅವಳಿ ವರ್ಷಗಳು ಶೂನ್ಯ ವರ್ಷವೆಂದು ಕೆಲವರು
ಅಭಿಪ್ರಾಯ. ಹೀಗೆ ವಿದ್ಯಾರ್ಥಿಗಳ ಮೇಲೆ ಕೋವಿಡ್-19 ಲಾಕ್‌ಡೌನ್ ಅನೇಕ ರೀತಿಯ ತೊಂದರೆಗಳನ್ನು ನೀಡಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಅಧ್ಯಯನದಲ್ಲಿ ತೊಡಗಿಸುವುದೇ ಶಿಕ್ಷಕರಿಗೆ ಒಂದು ಸವಾಲು.

ಹೀಗಿದ್ದರು ಪಾಲಕರು, ಶಿಕ್ಷಕರು ಹಾಗೂ ಸರಕಾರಗಳು ತಮ್ಮ ಭಗೀರಥ ಪ್ರಯತ್ನ ಮಾತ್ರ ಮುಂದುವರೆಸಿವೆ. ಶಿಕ್ಷಣ ಪೂರೈಸಿ ಉದ್ಯೋಗ ಹುಡುಕುವ ಆಲೋಚನೆಯಲ್ಲಿರುವ ಯುವಕರಿಗೂ ಇದು ಅಸ್ಪಷ್ಟ ಕಾಲವಾಗಿ ಗೋಚರಿಸುತ್ತಿದೆ. ಪ್ರತ್ಯಕ್ಷ ಹಾಗೂ ಪ್ರಾಯೋಗಿಕ eನವಿಲ್ಲದೆ, ಅಂತರ್ಜಾಲದ ಮೂಲಕ ಶಿಕ್ಷಣ ಪೂರೈಸಿ ಉದ್ಯೋಗಕ್ಕೆ ಸಜ್ಜಾಗುವುದು ಹೇಗೆ ಎಂಬ ಪ್ರಶ್ನೆ
ಅವರಲ್ಲಿದೆ. ಪ್ರಾಯೋಗಿಕ ಜ್ಞಾನ ಪಡೆಯಲು ಮತ್ತೆ ಕೆಲವು ವರ್ಷ ಕಳೆಯುವ ಅತಂಕವು ಇದೇ.

ಉದ್ಯೋಗ ನೀಡುವ ಕಂಪನಿಯವರು ಸಹ ಕರೋನಾ ಬ್ಯಾಚ್ ಎಂದು ದೂರಿದರೆ ಹೇಗೆ ಎಂಬ ಭಯವು ಇದೇ. ಒಟ್ಟಾರೆಯಾಗಿ
ಉದ್ಯೋಗದ ಹೊಸ್ತಿಲಲ್ಲಿ ಇರುವ ಯುವಜನತೆಗೆ ಮುಂಬರುವ ಸವಾಲನ್ನು ಹೇಗೆ ಎದುರಿಸಬೇಕು ಎಂಬುದೇ ದೊಡ್ಡ ಸವಾಲು.
ನಿರುದ್ಯೋಗ ಎಂಬ ಭೂತ ಭಾರತ ಮೊದಲಿಂದಲು ಎದುರಿಸುತ್ತಿದೆ. 2018-19ರ ಪಿಎಲ್‌ಎಫ್ಎಸ್ ವರದಿ ಪ್ರಕಾರ ಶೇ. 5.80ರಷ್ಟು ನಿರುದ್ಯೋಗ ಇತ್ತು. ಅದರೆ ಈ ಕೋವಿಡ್-19 ಸಂಕಷ್ಟ ಕಾಲದಲ್ಲಿ ಮತ್ತಷ್ಟು ಭಯಂಕರವಾಗಿ ನರ್ತಿಸುತ್ತಿದೆ.

ಕೆಲಸಕ್ಕಾಗಿ ಅಲೆದು ಅಲೆದು ಸಾಕಾಗಿ ಸ್ವಯಂ ಉದ್ಯೋಗ ಮಾಡುವ ಆಶೆ ಹೊಂದಿದ್ದರು. ಸಾಲ ಮಾಡಿ ಸಣ್ಣ ಪುಟ್ಟ ವ್ಯಾಪಾರ ಹಾಗೂ ಸ್ವಯಂ ಉದ್ಯೋಗ ಮಾಡಿಕೊಂಡಿದ್ದ ಯುವಜನತೆಗೆ ವ್ಯಾಪಾರ ವಹಿವಾಟು ಇಲ್ಲದೇ ಸ್ತಬ್ಧವಾದ ಈ ಕಾಲ ನುಂಗಲಾ ರದ ತುತ್ತಾಗಿದೆ. ಅಂಗಡಿ, ಮಾಲ, ಹೋಟೆಲ, ಕಾಲ್‌ಸೆಂಟರ್, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಅಸಂಖ್ಯಾತ ಯುವಕರಿಗೆ
ಲಾಕ್‌ಡೌನ್ ಬದುಕು ದುರಂತವಾಗಿದೆ. ಇನ್ನೂ ಎರಡು ವರ್ಷಗಳಲ್ಲಿ ನನ್ನ ವ್ಯಾಪಾರ ಸರಿಹೊಗುತ್ತೆ, ನನ್ನ ವೇತನ ಹೆಚ್ಚಳ ವಾಗುತ್ತೆ, ನನಗೆ ಬಡ್ತಿಯಾಗುತ್ತೆ ಎಂಬ ಕನಸುಗಳು ಹೊತ್ತ ಜೀವನ ಸಾಗಿಸುತ್ತಿದ ಯುವಕರಿಗೆ ಕೋವಿಡ್ ಶಾಪವಾಗಿ ಪರಿಣಮಿ ಸಿದೆ. ಈ ರೋಗ ಸೃಷ್ಟಿಸಿದ ಆವಾಂತರ ದಿಂದ ನಮ್ಮ ಜೀವನದ ಬಹುಪಾಲು ಯೋಜನೆಗಳು ನಶಿಸಿದವು ಎಂದು ಯುವಜನತೆ ಕೊರಗುವಂತಾಗಿದೆ.

ಸರಕಾರ ನಿರುದ್ಯೋಗ ನಿವಾರಣೆಗಾಗಿ ಖಾಸಗಿ ವಲಯದ ಆರ್ಥಿಕತೆ ಉತ್ತೇಜಿಸಿತು. ಆದರೆ ಕರೋನಾ ಆವಾಂತರದ ಎರಡು ವರ್ಷಗಳಲ್ಲಿ ಅನೇಕ ಸಣ್ಣಪುಟ್ಟ ಖಾಸಗಿ ಕಂಪನಿಗಳು, ಸಂಸ್ಥೆಗಳು ನಷ್ಟದ ಕಾರಣ ಅಥವಾ ನೆಪದಿಂದ ಸಿಲ್ಡೌನ್ ಆಗಿವೆ. ಇವುಗಳಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುವ ಕಾರ್ಮಿಕರು ಇಂದು ಉದ್ಯೋಗ ಕಳೆದುಕೊಂಡು ಮನೆ ಸೇರಿದ್ದಾರೆ. ಅನೇಕ ಕಟ್ಟಡ ಕಾಮಗಾರಿಗಳು ನಿಂತು ಅಲ್ಲಿರುವ ಕಾರ್ಮಿಕ ವರ್ಗ ದಿನದ ಊಟಕ್ಕಾಗಿ ಹವಣಿಸುವಂತಾಗಿದೆ. ಒಂದು ದಿನ ಕೆಲಸವಿಲ್ಲವೆಂದರೆ ಕಷ್ಟಪಡುವ ಜನತೆ ಎರಡು ವರ್ಷಗಳ ನಿರಂತರ ತೊಂದರೆಯಿಂದ ಕುಗ್ಗಿಹೋಗಿದ್ದಾರೆ.

ಯುವ ಶಕ್ತಿಯೇ ತನ್ನ ಶಕ್ತಿ ಎಂದು ಬಿಂಬಿಸುವ ಭಾರತ ಯುವಜನತೆಗೆ ಉತ್ತಮವಾದ ಭವಿಷ್ಯ ಒದಗಿಸಬೇಕಾಗಿದೆ. ಮಹಾಮಾರಿ ಕರೋನಾದಿಂದ ವಿಚಲಿತವಾದ ಯುವಜನತೆ ಹೊಸ ಶಕ್ತಿಯಾಗಿ ಚೇತರಿಸಿಕೊಳ್ಳುವ ಅವಶ್ಯಕತೆ ಇದೆ. ಈ ಸಮಯಕ್ಕೆ ಪರ್ಯಾಯವಾಗಿ ಸಾಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿ ಬದಲಾವಣೆ ಅನಿವಾರ್ಯವಾಗಿದೆ. ಸರಕಾರವು ಕೆಲವು ವಿಶೇಷ
ಯೋಜನೆಗಳನ್ನು ಜಾರಿಗೆ ತರುವುದು. ಶ್ರೀಮಂತರು, ರಾಜಕಾರಣಿಗಳೂ, ಶಿಕ್ಷಕರು, ಸಾಮಾಜ ಮುಖಂಡರು ಸಾಮಾಜಿಕ ಹೊಣೆಗಾರಿಕೆಯಲ್ಲಿ ಕೆಲವು ಕಾರ್ಯ ಮಾಡಬೇಕಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣವನ್ನು ಸರಿದುಗಿಸುವುದು. ಸ್ವಯಂ ಉದ್ಯೋಗ ಮಾಡುವ ಯುವಕರಿಗೆ ವಿಶೇಷ ಸವಲತ್ತು, ನಿರುದ್ಯೋಗ ಯುವಕರಿಗಾಗಿ ಕೌಶ್ಯಲ್ಯಾಭಿವೃದ್ಧಿ ಜತೆಗೆ ಉದ್ಯೋಗ ನೀಡುವುದು. ಬಾಲಕಾರ್ಮಿಕತೆಯನ್ನು
ತಡೆಯುವುದು, ಉದ್ಯೋಗಾಕಾಂಕ್ಷಿ ಯುವಜನತೆಗೆ ಎರಡು ವರ್ಷ ಉದ್ಯೋಗಗಳು ತೆರೆದುಕೊಳ್ಳದೇ ವಯೋಮಿತಿ ಅನರ್ಹತೆ ಯಾಗಬಹುದು ಆದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಯಮಾವಳಿಯಂತೆ ವಿಶೇಷ ಸಡಿಲಿಕೆ ನೀಡುವುದು ಅವಶ್ಯಕ ವಾಗಬಹುದು.

ಯುವಜನತೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸರಕಾರ ಹಾಗೂ ಸಾಮಾಜದ ಕೆಲವು ಶಕ್ತಿಗಳು ಕಾರ್ಯ ಪ್ರವೃತ್ತರಾಗ ಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಚ್ಚುತ್ತಿರುವ ನಿರುದ್ಯೋಗಿಗಳು, ನಿಷ್ಪಲ ಯುವಕರು, ಉನ್ನತವಾದ ಶಿಕ್ಷಣ, ಕೌಶಲ್ಯಾ ಭಿವೃದ್ಧಿ, ಜನಸಂಖ್ಯಾ ಲಾಭಾಂಶ ಮತ್ತು ಭಾರತದ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ, ಯೋಗ್ಯ ಕೆಲಸ, ವೇತನ, ಆಕಾಂಕ್ಷೆಗಳು, ಸೀಮಿತ ಉದ್ಯೋಗದಿಂದ ಉಂಟಾಗುವ ಸ್ಪರ್ಧೆ, ಕೆಲಸದ ಸ್ವರೂಪ, ಮಾನಸಿಕ ಆರೋಗ್ಯ, ಉದ್ಯಮಶೀಲತೆಯ ಅವಕಾಶಗಳ ಸೃಷ್ಟಿ ಮತ್ತು ಯುವ ಮನಸ್ಸುಗಳಲ್ಲಿ ಅವಿಸ್ಕಾರದ ಗುಣಗಳನ್ನು ಬೆಳೆಸುವುದು ಮುಂತಾದವುಗಳ ಬಗ್ಗೆ ಕಾಳಜಿ ವಹಿಸುವುದು.

ಕೋವಿಡ್-19 ಸಂದರ್ಭ ದಲ್ಲಿ ದೇಶ ಹೊಸ ಭಾರತ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಯತ್ತ ಸಾಗುವುದು. ಕಳವಳ ಹಾಗೂ ಒತ್ತಡದಲ್ಲಿರುವ ಯುವಶಕ್ತಿಯ ಆತ್ಮವಿಶ್ವಾಸ ಬಲಪಡಿಸುವ ಅತ್ಯಂತ ಮಹತ್ವದಾಗಿದೆ.