Friday, 20th September 2024

ದೀರ್ಘ ವನವಾಸ ಮುಗಿಸಿ ಅಯೋಧ್ಯೆೆಗೆ ಮರಳಲಿರುವ ಶ್ರೀರಾಮ

 ಡಾ. ಸಿ.ಜಿ.ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು.
ಶಿವಮೊಗ್ಗ.
ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು ತನ್ನದೇ ಆದ ಪರಂಪರೆಯಿರುತ್ತದೆ. ರಾಮಾಯಣದ ಎಲ್ಲ ಪಾತ್ರಗಳು ನಮ್ಮ ಇಹಜೀವನದ ಅವಿಭಾಜ್ಯ ಅಂಗವಾಗಿವೆ.

ರಾಮಭಕ್ತರಾದ ಸನಾತನ ಧರ್ಮೀಯರ ಜೀವನ ಮೌಲ್ಯಗಳೇ ಹಾಗೆ. ಅದು ದೇಶ, ಕಾಲ, ವ್ಯಕ್ತಿಿ ಮೊದಲಾದ ಸೀಮಿತವಾದ ಎಲ್ಲ ತತ್ವಗಳಿಗೂ ಮೀರಿದ, ಶಾಶ್ವತ ಸತ್ಯದ ಬೆಳಕಿನಲ್ಲಿ, ವೈಜ್ಞಾನಿಕ ಚಿಂತನೆಗಳ ತಳಹದಿಯಲ್ಲಿ ಒಡಮೂಡಿದ ತತ್ವಗಳು. ವಾಲ್ಮೀಕಿ ಮಹರ್ಷಿಗಳು ಅಖಿಲ ನಿಖಿಲಗುಣಗಣಿ ಪುರುಷೋತ್ತಮ ಪ್ರಭು ರಾಮಚಂದ್ರನ ವರ್ಣನೆಯನ್ನು ಪರಿಪರಿಯಲ್ಲಿ ಮಾಡಿ ಕೊನೆಗೆ ಶಬ್ದಗಳೇ ಸೋತು ರಾಮೋ ವಿಗ್ರಹವಾನ್ ಧರ್ಮಃ ಎಂದು ಶರಣಾಗತರಾಗುತ್ತಾಾರೆ. ಧರ್ಮಕ್ಕೆೆ ಪರ್ಯಾಯವಾಗಿ ನಿಲ್ಲುವಷ್ಟು ಎತ್ತರದ ಆ ಅತಿಮಾನುಷ ವ್ಯಕ್ತಿಿತ್ವದ ಕಲ್ಪನೆಯೇ ನಮ್ಮಂತ ಅಲ್ಪಜ್ಞರ ಪಾಲಿಗೆ ತುಂಬು ರೋಮಾಂಚನವಲ್ಲವೇ!

ಧರ್ಮವೆಂದರೇನು? ಧಾರಣಾಯೋಗ್ಯಂ ಧರ್ಮಂ. ‘ಧರ್ಮ ಪದದ ಮೂಲಾರ್ಥ ಧಾರಣೆ’ ‘ಜೋಡಣೆ’ ಎಂದು. ಕಾಲು ಜಾರುವಾಗ ಬೀಳಗೊಡದೆ ಎತ್ತಿಿಹಿಡಿದು ನಿಲ್ಲಿಸುವುದೇ ಧರ್ಮ. ಎರಡಾಗಿದ್ದನ್ನು ಮತ್ತೆೆ ಜೋಡಿಸಿ ಒಂದಾಗಿಸುವುದೇ ಧರ್ಮ. ಅದು ವ್ಯಷ್ಟಿಿ ಸಮಷ್ಟಿಿ ಎರಡೂ ಹಂತದಲ್ಲೂ ನಿಜ. ಧರ್ಮಕ್ಕೇ ಪರಮ ಆದರ್ಶವಾದ ಶ್ರೀರಾಮನ ಘನ ವ್ಯಕ್ತಿಿತ್ವದ ಸಮ್ಮೋೋಹನಕ್ಕೆೆ ಒಳಗಾಗದವರು ಯಾರೂ ಇಲ್ಲ. ಇಂದಿನ ಭಾರತವಷ್ಟೇ ಅಲ್ಲ, ಪ್ರಪಂಚದ ಹತ್ತು ಹಲವು ದೇಶಗಳು (ಅಖಂಡ ಬೃಹದ್ಭಾಾರತದ ಅಂಗಗಳು) ಕೂಡಾ ರಾಮಾಯಣದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತವೆ. ಇಂಡೋನೇಶಿಯಾ ಮೊದಲಾದ ಮುಸ್ಲಿಿಂ ರಾಷ್ಟ್ರದಲ್ಲೂ ಜನರು ರಾಮನನ್ನು ತಮ್ಮ ಪೂರ್ವಜನೆಂದು ಹೆಮ್ಮೆೆಯಿಂದ ಹೇಳುತ್ತಾಾರೆ. 15,000 ವರ್ಷಗಳಿಗೂ ಮಿಕ್ಕು ಅತ್ಯಂತ ಪುರಾತನವಾದ ಭಾರತೀಯ ಇತಿಹಾಸದಲ್ಲಿ ವ್ಯಕ್ತಿಿಯೋರ್ವನು ಇಷ್ಟು ಉನ್ನತವಾದ ಧ್ಯೇಯವನ್ನು ನೆಚ್ಚಿಿ ತಾನು ಬದುಕಿ ತೋರಿಸುವುದರ ಮೂಲಕ ಸಮಸ್ತ ಮನುಕುಲಕ್ಕೆೆ ದಾರಿದೀಪವಾದ ಇನ್ನೊೊಂದು ಉದಾಹರಣೆಯಿಲ್ಲ. ಹಾಗಾಗಿ ರಾಮನಿಗೆ ರಾಮನೇ ಸಾಟಿ.

ವಾಲ್ಮೀಕಿ ವಿರಚಿತ ಮಹಾಕಾವ್ಯ ರಾಮಾಯಣದಲ್ಲಿ ರಾಮನಲ್ಲದೇ ಸೀತೆ, ಲಕ್ಷ್ಮಣ, ಭರತ ವಿಭೀಷಣ, ಜಟಾಯು ಹನುಮಂತ ಇವರೆಲ್ಲರೂ ಧರ್ಮಕ್ಕೆೆ ಕಟ್ಟು ಬಿದ್ದವರೇ. ಧರ್ಮದ ಕಟ್ಟುಪಾಡಿನಿಂದ ಹೊರತಾದವರು ವಾಲಿ, ರಾವಣ, ಶೂರ್ಪನಖಿ, ಮಾರೀಚ ಮೊದಲಾದವರು. ‘ರಾಮಾ ದಿವದ್ವರ್ತಿತವ್ಯಂ ನ ರಾವಣಾ ದಿವತ್’. ದೇವ ಮತ್ತು ದಾನವರ ನಡುವಣ ಭೇದವು ಅವರ ಧರ್ಮಾಚರಣೆಯನ್ನು ಅವಲಂಬಿಸಿದೆ. ದೇವಾಸುರ ಸಂಗ್ರಾಾಮದ ಕಲ್ಪನೆಯೂ ಹೀಗೇ, ದುಷ್ಟ ಶಿಷ್ಟ ಶಕ್ತಿಿಗಳ ನಡುವಿನ ನಿತ್ಯ ಸಂಘರ್ಷದ ದ್ಯೋೋತಕ. ಕೊನೆಯಲ್ಲಿ ಗೆಲುವು ಎಂದಿದ್ದರೂ ಸತ್ಯಕ್ಕೆೆ, ಧರ್ಮಕ್ಕೇ ಶತಸಿದ್ಧ. ಅದು ಕಟ್ಟಿಿಟ್ಟ ಬುತ್ತಿಿಯಂತೆ. ಅದಕ್ಕೇ ಶಾಸ್ತ್ರಗಳು ಹೇಳೋದು. ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ.

ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು ತನ್ನದೇ ಆದ ಪರಂಪರೆಯಿರುತ್ತದೆ. ರಾಮಾಯಣದ ಎಲ್ಲ ಪಾತ್ರಗಳು ನಮ್ಮ ಇಹಜೀವನದ ಅವಿಭಾಜ್ಯ ಅಂಗವಾಗಿವೆ. ರಾಮನು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಿಿದ್ದಾನೆ. ರಾಮನಂತ ಪುತ್ರ, ತಂದೆ, ಗಂಡ, ಅಣ್ಣ, ಸ್ನೇಹಿತ, ರಾಜ, ರಕ್ಷಕ ನಮಗೂ ದೊರೆಯಲಿ ಎಂಬುದೇ ಸಮಸ್ತ ಆಸ್ತಿಿಕರ ಸದಾಶಯ. ರಾಮನು ಸೀತಾ ಲಕ್ಷ್ಮಣರೊಡಗೂಡಿ ಸಂದರ್ಶಿಸಿದ ಕ್ಷೇತ್ರಗಳನ್ನು ನಾವು ಭಾರತ ಶ್ರೀಲಂಕಾದ ಉದ್ದಗಲಕ್ಕೂ ಕಾಣಬಹುದು. ಅವೆಲ್ಲಾ ನಮ್ಮ ಧಾರ್ಮಿಕ ಸಾಂಸ್ಕೃತಿಕ ಶ್ರದ್ಧಾಾಭಕ್ತಿಿಯ ಬತ್ತದ ಸ್ರೋೋತಗಳಾಗಿ ತೀರ್ಥಕ್ಷೇತ್ರಗಳೆನಿಸಿವೆ. ‘ರಾಮಸೇತು’ವನ್ನು ವಿಜ್ಞಾನವೂ ಇಂದು ಒಪ್ಪಿಿ ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ಅಚಲ ನಂಬಿಕೆಯನ್ನು ವೈಜ್ಞಾನಿಕವಾಗಿ ಪುಷ್ಟೀಕರಿಸಿದೆ. ರಾಮನು ಪ್ರಪಂಚಕ್ಕೇ ಮಾನವ ಜೀವನದ ಔನ್ನತ್ಯದ ಸಾರ್ವಕಾಲಿಕ ಸುಮೇರುವೆನ್ನುವುದನ್ನು ಇಂದು ಪಾಶ್ಚಾಾತ್ಯರೂ ಒಪ್ಪುುತ್ತಾಾರೆ.

ವಾಸ್ತವತೆ ಹೀಗಿರುವಾಗ ರಾಮನ ಅಸ್ತಿಿತ್ವವನ್ನೇ ಪ್ರಶ್ನಿಿಸುವುದು ಅಲ್ಲಗಳೆಯುವುದೆಂದರೆ ನಮ್ಮ ಮೂಲವನ್ನೇ ನಾವು ನಿರಾಕರಿಸಿದಂತೆ. ಈ ಎಡಬಿಡಂಗಿ ದುಷ್ಪ್ರಯತ್ನವನ್ನು ಕೂಡಾ ಹಿಂದೂ ಬಹುಸಂಖ್ಯಾಾತ ದೇಶದಲ್ಲಿ ಹಿಂದೆ ಕೆಲವರು ಮಾಡಿರುವುದು ಹಿಂದೂಗಳ ಸಹಿಷ್ಣುತೆಗೆ ನಿದರ್ಶನವಲ್ಲವೇ? ಎಲ್ಲೆಲ್ಲೂ ರಾವಣನ ಅಂಶಭೂತರು ಇರುವುದರಿಂದಾಗಿಯೇ ಇಂದಿಗೂ ನಮಗೆ ರಾಮನ ಅವಶ್ಯಕತೆಯಿರುವುದು. ಇವರಿಗೆಲ್ಲಾ ಮರ್ಯಾದಾಪುರುಷ ಶ್ರೀರಾಮನು ಸದ್ಬುದ್ಧಿಿಯನ್ನು ಕೊಡಲೆಂಬುದೇ ನಮ್ಮ ಹಾರೈಕೆ. ದುರ್ಜನಃ ಸಜ್ಜನೋ ಭೂಯಾತ್.. ಸಜ್ಜನಃ ಶಾಂತಿಮಾಪ್ನುುಯಾತ್ ಎಂದು ಋಷಿಗಳು ಹೇಳಿರುವುದು ಇಂಥವರಿಗಾಗಿಯೇ.

ಅಸಲಿಗೆ ನಾವು ರಾಮಜನ್ಮಭೂಮಿ ವಿವಾದದ ಬಗ್ಗೆೆ ತಿಳಿಯೋಣ. 1528ರಲ್ಲಿ ಶ್ರೀರಾಮ ಜನ್ಮಸ್ಠಳವಾದ ಅಯೋಧ್ಯೆೆಯಲ್ಲಿದ್ದ ಭವ್ಯ ರಾಮಮಂದಿರವನ್ನು ಕೆಡವಿ ಅದರ ಮೇಲೆ ಬಾಬರನು ಮಸೀದಿಯ ನಿರ್ಮಾಣವನ್ನು ಮಾಡಿದನು. ನಂತರವೂ ದೇಗುಲದ ಹೊರ ಆವರಣದಲ್ಲಿ ಹಿಂದೂಗಳು ನಿರಂತರವಾಗಿ ಭಕ್ತಿಿಯಿಂದ ಪ್ರಾಾರ್ಥನೆಯನ್ನು ಮಾಡಿಕೊಂಡು ಬರುತ್ತಿಿದ್ದು ಮಂದಿರದ ಪುನರ್‌ನಿರ್ಮಾಣಕ್ಕಾಾಗಿ ಸೂಕ್ತ ಸಮಯದ ನಿರೀಕ್ಷೆಯಲ್ಲಿದ್ದರು. 1853ರಲ್ಲಿ ಬ್ರಿಿಟಿಷ್ ಭಾರತದಲ್ಲಿ ಹಿಂದೂ ಮುಸಲ್ಮಾಾನರ ನಡುವೆ ಮೊಟ್ಟ ಮೊದಲ ಕೋಮುಗಲಭೆಯು ಅಯೋಧ್ಯೆೆಯಲ್ಲಿ ದಾಖಲಾಯಿತು. 1859ರಲ್ಲಿ ವಿವಾದಿತ ಸ್ಥಳದ ಸುತ್ತ ತಂತಿಬೇಲಿ ಹಾಕಿಸಿದ್ದ ಬ್ರಿಿಟಿಷ್ ಸರಕಾರ ಒಳಾಂಗಣವನ್ನು ಮುಸ್ಲಿಿಮರಿಗೂ, ಹೊರಾಂಗಣವನ್ನು ಹಿಂದೂಗಳಿಗೂ ನೀಡಿ ಕೈತೊಳೆದುಕೊಂಡಿತ್ತು.

1949ರಲ್ಲಿ ಬಾಬ್ರಿಿ ಮಸೀದಿಯೊಳಗೆ ದಿಢೀರನೆ ಶ್ರೀರಾಮನ ವಿಗ್ರಹವು ಕಾಣಿಸಿಕೊಂಡಿತ್ತು. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿಿದ್ದಂತೆ ಎಚ್ಚೆೆತ್ತ ಸರಕಾರವು ವಿವಾದಿತ ಸ್ಥಳಕ್ಕೆೆ ಬೀಗ ಜಡಿದಿತ್ತು. 1950-61ರ ನಡುವೆ ರಾಮ್ ಲಲ್ಲಾನ ಪೂಜೆ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆೆ ಅನುಮತಿ ಕೋರಿ ನಾಲ್ಕು ಪ್ರತ್ಯೇಕ ಅರ್ಜಿಗಳು ಕೋರ್ಟ್ ಮೆಟ್ಟಿಿಲೇರಿದವು. 1984ರಲ್ಲಿ ರಾಮ ಜನ್ಮಭೂಮಿ ವಿಮೋಚನೆಗಾಗಿ ಹಿಂದೂ ಸಭಾವು ಅಸ್ತಿಿತ್ವಕ್ಕೆೆ ಬಂತು. ಮಂದಿರ ನಿರ್ಮಾಣದ ಗುರಿಯೊಂದಿಗೆ ವಿಶ್ವ ಹಿಂದೂ ಪರಿಷತ್ ಎಲ್.ಕೆ.ಅಡ್ವಾಾಣಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಮ ಮಂದಿರ ಅಭಿಯಾನವು ಆರಂಭವಾಯಿತು. 1986ರಲ್ಲಿ ಮಸೀದಿ ಬಾಗಿಲು ತೆರವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಿಸುವಂತೆ ನ್ಯಾಾಯಾಲಯ ತೀರ್ಪು ನೀಡಿದಾಗ ಪ್ರತಿಭಟಿಸಿದ ಮುಸ್ಲಿಿಮರಿಂದ ಬಾಬ್ರಿಿ ಮಸೀದಿ ಕಾರ್ಯಕಾರಿ ಸಮಿತಿಯ ಸ್ಥಾಾಪನೆಯಾಯಿತು.

ವಿಶ್ವ ಹಿಂದು ಪರಿಷತ್ ವಿವಾದಿತ ಸ್ಥಳದಲ್ಲಿ 1989ರಲ್ಲಿ ಮಸೀದಿಯ ಪಕ್ಕದಲ್ಲೇ ಮಂದಿರಕ್ಕೆೆ ಶಂಕು ಸ್ಥಾಾಪನೆಯನ್ನು ಮಾಡಿತು. ಆಗ ಇದ್ದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟಿಗೆ ವರ್ಗಾಯಿಸಲಾಯಿತು. ಸೆಪ್ಟೆೆಂಬರ್ 1990ಕ್ಕೆೆ ಗುಜರಾತಿನ ರಾಮನಾಥಪುರದಿಂದ ಅಯೋಧ್ಯೆೆವರೆಗೆ ಎಲ್.ಕೆ.ಅಡ್ವಾಾಣಿಯವರು ರಾಮ ರಥಯಾತ್ರೆೆಯನ್ನು ಕೈಗೊಂಡರು. 1990ರಲ್ಲಿ ವಿ.ಹಿಂ.ಪ. ಕಾರ್ಯಕರ್ತರಿಂದ ಮಸೀದಿಯ ಪಾರ್ಶ್ವಭಾಗವು ಧ್ವಂಸವಾಯಿತು. ಸಮಸ್ಯೆೆ ಬಗೆಹರಿಸಲು ಪ್ರಧಾನಿ ಚಂದ್ರಶೇಖರ್ ನಡೆಸಿದ ಯತವೂ ವಿಫಲವಾಯಿತು.

ಕರ್ನಾಟಕ ಸೇರಿದಂತೆ ರಾಷ್ಟ್ರದ ನಾನಾ ಮೂಲೆಗಳಿಂದ ಡಿಸೆಂಬರ್ 05, 1992ರಂದು ವಿವಾದಿದ ಸ್ಥಳಕ್ಕೆೆ ಆಗಮಿಸಿದ ಸಹಸ್ರಾಾರು ಕರಸೇವಕರು ಸರಕಾರದ ವಿಳಂಬನೀತಿ ಮಲತಾಯಿ ಧೋರಣೆಯಿಂದ ಬೇಸತ್ತು ಆಕ್ರೋೋಶಗೊಂಡಿದ್ದರು. ಡಿಸೆಂಬರ್ 06, 1992ರಂದು ಕರಸೇವಕರಿಂದ ಬಾಬರಿ ಮಸೀದಿಯು ಅನಾಮತ್ತಾಾಗಿ ಧ್ವಂಸಗೊಂಡು, ರಾಷ್ಟ್ರವ್ಯಾಾಪಿಯಾಗಿ ಹರಡಿದ ಕೋಮು ಗಲಭೆಗೆ ಸುಮಾರು 2000 ಮಂದಿ ಬಲಿಯಾದರು. ಪಾಕಿಸ್ತಾಾನ, ಬಾಂಗ್ಲಾಾದೇಶಕ್ಕೂ ವ್ಯಾಾಪಿಸಿದ ಕೋಮು ಗಲಭೆಯಿಂದ ಅಲ್ಲಿನ ಹಿಂದೂಗಳು ತತ್ತರಗೊಂಡು ಅನೇಕ ಹಿಂದೂ ದೇವಾಲಯಗಳು ನೆಲಕ್ಕುರುಳಿದವು.

ಉತ್ತರಪ್ರದೇಶ ಸರಕಾರವು 1993ರಲ್ಲಿ ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶವನ್ನು (67 ಎಕರೆ) ತನ್ನ ತೆಕ್ಕೆೆಗೆ ತೆಗೆದುಕೊಂಡಿತು. 1994ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ಲಕ್ನೋೋ ವಿಭಾಗೀಯ ಪೀಠವು ಇಸ್ಲಾಾಂ ಧರ್ಮದ ಪ್ರಕಾರ ನಮಾಜ್ ಮಾಡಲು ಮಸೀದಿಯೇ ಅಗತ್ಯವಿಲ್ಲ, ಹೊರಬಯಲಿನಲ್ಲೂ ಮಾಡಬಹುದು ಎಂದು ಅಭಿಪ್ರಾಾಯಪಟ್ಟಿಿತು. ಡಿಸೆಂಬರ್ 6, 2001ರಲ್ಲಿ ವಿ.ಎಚ್.ಪಿ.ಯಿಂದ ಮತ್ತೆೆ ರಾಮ ಮಂದಿರ ಸ್ಥಾಾಪನೆಯ ಸಂಕಲ್ಪ ಮಾಡಲಾಯಿತು. ಫೆಬ್ರವರಿ 2002ರಲ್ಲಿ ಗೋಧ್ರಾಾದಲ್ಲಿ ಅಯೋಧ್ಯೆೆಯಿಂದ ರೈಲಿನಲ್ಲಿ ಹಿಂದಿರುಗು ತ್ತಿಿದ್ದ 58ಜನ ಅಮಾಯಕ ಹಿಂದೂಗಳ ಬರ್ಬರ ಹತ್ಯೆೆಯು ಮಾರ್ಚ್‌ನಲ್ಲಿ ಕೋಮುಗಲಭೆಗೆ ನಾಂದಿಯಾಯಿತು.

ಕೋರ್ಟಿನ ಆದೇಶದಂತೆ 2003ರಲ್ಲಿ ವಿವಾದಿತ ಸ್ಥಳದಲ್ಲಿ ಭೂಗರ್ಭಶಾಸ್ತ್ರಜ್ಞರಿಂದ ಉತ್ಖನನವು ಆರಂಭವಾಯಿತು. ಮಸೀದಿಯ ಕೆಳಗೆ ಪ್ರಾಾಚೀನ ಹಿಂದೂ ದೇವಾಲಯ ಇತ್ತು ಎನ್ನುವುದಕ್ಕೆೆ ಅನೇಕ ಕುರುಹುಗಳು ಸಿಕ್ಕು ಪ್ರಕರಣಕ್ಕೆೆ ಮಹತ್ವದ ತಿರುವು ದೊರೆಯಿತು. ಜೂನ್ 2009ರಲ್ಲಿ ಲೆಬ್ರಹಾನ್ ಸಮಿತಿಯಿಂದ ಬಾಬ್ರಿಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆಯಾಯಿತು. ಸೆಪ್ಟೆೆಂಬರ್ 2010ರಲ್ಲಿ ವಿವಾದಿತ ಭೂಮಿಯನ್ನು ಸಮನಾಗಿ ಮೂರೂ ಪ್ರತಿವಾದಿಗಳಿಗೆ ಹಂಚಿಕೆ ಮಾಡಿಕೊಡುವಂತೆ ಅಲಹಾಬಾದ್ ಹೈಕೋರ್ಟ್‌ನಿಂದ ತೀರ್ಪು ಬಂತು. ಇದನ್ನು ಪ್ರಶ್ನಿಿಸಿ ಸುಪ್ರೀಂಕೋರ್ಟಿನ ಮೊರೆ ಹೋಗಲಾಗಿ ಹೈಕೋರ್ಟಿನ ತೀರ್ಪು ರದ್ದಾಯಿತು. ಡಿಸೆಂಬರ್ 05 ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಿಸಿ ಸಲ್ಲಿಕೆಯಾದ 13 ಅರ್ಜಿಗಳನ್ನು ಸುಪ್ರೀಂ ಕೋರ್ಟಿನ ತ್ರಿಿಸದಸ್ಯ ಪೀಠವು ಕೈಗೆತ್ತಿಿಕೊಂಡಿತು. ಸೆಪ್ಟೆೆಂಬರ್ 27, 2018ರಂದು, ನಮಾಜಿಗೆ ಸಂಬಂಧಿಸಿದ 1994ರ ಅಲಹಾಬಾದ್ ಹೈಕೋರ್ಟಿನ ತೀರ್ಪನ್ನೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಾಯಮೂರ್ತಿ ದೀಪಕ್ ಮಿಶ್ರಾಾ ನೇತೃತ್ವದ ತ್ರಿಿಸದಸ್ಯ ಪೀಠವು ಎತ್ತಿಿ ಹಿಡಿಯಿತು. 135 ವರ್ಷಗಳ ಕಾಲ ತಾಳ್ಮೆೆಯಿಂದ ಕಾದಿರುವ ಹಿಂದೂಗಳ ಭಾವನೆಗೆ ಸ್ಪಂದಿಸಿದ ನ್ಯಾಾಯಾಲಯವು ಅಕ್ಟೋೋಬರ್ 2018ರಿಂದ ನಿರಂತರ ತ್ವರಿತ ವಿಚಾರಣೆಯನ್ನು ನಡೆಸಲೊಪ್ಪಿಿತು. *ಒ್ಠಠಿಜ್ಚಿಿಛಿ ಛ್ಝಿಿಛಿ ಜಿ ಒ್ಠಠಿಜ್ಚಿಿಛಿ ಛ್ಞಿಿಜಿಛಿ ಅಲ್ಲವೇ?

ಸುಪ್ರೀಂ ಕೋರ್ಟಿನ ದಿಕ್ಕುತಪ್ಪಿಿಸಿ ನ್ಯಾಾಯ ದೇವತೆಯ ಕಣ್ಣಿಿಗೆ ಮಣ್ಣೆೆರಚುವ ಹಾಗೂ ಸಮಯವನ್ನು ಪೋಲುಮಾಡಿ ವಿವಾದವು ಎಂದಿಗೂ ಬಗೆಹರಿಯದಂತೆ ಮಾಡುವ ನೂರಾರು ಕುಯುಕ್ತಿಿಗಳು ರಾಜಕೀಯ ಷಡ್ಯಂತ್ರಗಳು ನಿರಂತರವಾಗಿ ನಡೆದೇ ಇತ್ತು. ತುಷ್ಟೀಕರಣದ ರಾಜಕೀಯ ಸೆಕ್ಯುಲರಿಸಂ ಸಿದ್ಧಾಾಂತಗಳ ಕಪಿಮುಷ್ಟಿಿಯಲ್ಲಿ ಸಿಲುಕಿದ ದೇಶದ ಸ್ಥಿಿತಿಯು ಅಕ್ಷರಶಃ ಬೂದಿ ಮುಚ್ಚಿಿದ ಕೆಂಡದಂತಾಗಿತ್ತು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯಿ ಅವರಿದ್ದ ಪಂಚಸದಸ್ಯಪೀಠವು ಮಾರ್ಚ್ 08, 2019ದಂದು ಈ ವಿವಾದವನ್ನು ನ್ಯಾಾಯಾಲಯದ ಹೊರಗಡೆ ಮಾತುಕತೆಯ ಮೂಲಕ ವ್ಯಾಾಜ್ಯ ಬಗೆಹರಿಸಿಕೊಳ್ಳುವುದಕ್ಕೆೆ ಮಧ್ಯಸ್ಥಿಿಕೆಗಾಗಿ ನಿವೃತ್ತ ನ್ಯಾಾಯಮೂರ್ತಿ ಎಫ್.ಎಂ. ಕಲೀಫುಲ್ಲಾ ನೇತೃತ್ವದಲ್ಲಿ ಎರಡೂ ಕೋಮಿನ ಮುಖಂಡರನ್ನೊೊಳಗೊಂಡ ತ್ರಿಿಸದಸ್ಯ ಸಮಿತಿಯನ್ನು ರಚಿಸಿತು. ಆದರೆ ಪಟ್ಟಭದ್ರ ಹಿತಾಸಕ್ತಿಿಗಳ ಕೈವಾಡದಿಂದ ಅದು ವಿಫಲವಾಯಿತು.

ಅಂತೂ ಇಂತೂ ವನವಾಸ ಮುಗಿಸಿ ಅಯೋಧ್ಯೆೆಗೆ ರಾಮನು ಮತ್ತೆೆ ಮರಳಿ ಬರಲಿದ್ದಾನೆ. ಸ್ವಾಾತಂತ್ರ್ಯ ಬಂದು ಏಳು ದಶಕಗಳ ತರುವಾಯ ನವಂಬರ್ 09, 2019ರಂದು ಕೊನೆಗೂ ವಿವಾದಿತ ಸ್ಥಳವನ್ನು ಶ್ರೀರಾಮನ ಜನ್ಮಸ್ಠಳವೆಂದು ಒಪ್ಪಿಿ ಅಲ್ಲಿ ದೇಗುಲ ನಿರ್ಮಾಣಕ್ಕೆೆ ಸುಪ್ರೀಂ ಕೋರ್ಟಿನ ಪಂಚಸದಸ್ಯ ಪೀಠವು ಅಸ್ತು ಎನ್ನುವ ಒಮ್ಮತದ ತೀರ್ಪು ನೀಡಿದೆ. ದೇರ್ ಆಯೇ, ದುರ್ತ್‌ು ಆಯೇ ಎನ್ನುವಂತೆ. ಕೋರ್ಟಿನಲ್ಲಿ ಜಯ ಗಳಿಸಿದ್ದು ಹಿಂದೂ, ಮುಸ್ಲಿಿಂ ಯಾರೂ ಅಲ್ಲ. ಏನಿದ್ದರೂ ಅದು ಕೇವಲ ರಾಮಲಲ್ಲಾನ ಜಯ. ಸಮಸ್ತ ಭಾರತೀಯರ ವಿಜಯ. ಸತ್ಯ ಧರ್ಮದ ವಿಜಯ. ನ್ಯಾಾಯದ ವಿಜಯ. ಧಾರ್ಮಿಕ ಸಹಿಷ್ಣುತೆಯ, ಸರ್ವಧರ್ಮ ಸದ್ಭಾಾವನೆಯ ವಿಜಯ. ಏಕಂ ಸತ್ ವಿಪ್ರಾಾಃ ಬಹುಧಾಃ ವದಂತಿ ಎಂದು ನಂಬಿದ ಸನಾತನ ಮೌಲ್ಯಕ್ಕೆೆ ದಕ್ಕಿಿದ ವಿಜಯ. ಭಾವನೆಗೆ, ನಂಬಿಕೆಗೆ, ತಾಳ್ಮೆೆಗೆ ಬೆಲೆಯಿದೆಯೆಂದಾಯಿತು. ಹೀಗೆ ಸಹಸ್ರಾಾರು ವರ್ಷಕಾಲ ಅವಿಚ್ಛಿಿನ್ನವಾಗಿ ಭಾರತೀಯ ಪರಂಪರೆಯನ್ನು ತನ್ನ ಅತುಲ್ಯ ಸ್ಫೂರ್ತಿಯಿಂದ ಶ್ರೀಮಂತಗೊಳಿಸಿದ ಈ ಶಕಪುರುಷನು ಕೊನೆಗೂ ಸಾಧಿಸಿದ್ದು ಧರ್ಮವಿಜಯದ ಚರಮ ಧ್ಯೇಯವನ್ನೇ.

ಇಲ್ಲಿ ಯಾರಿಗೂ ನೋವಾಗದಂತೆ ದೇಶದ ಪರಮೋಚ್ಚ ನ್ಯಾಾಯಾಲಯವು ತುಂಬು ಜವಾಬ್ದಾಾರಿಯಿಂದ ಅತ್ಯಂತ ಕಾಳಜಿಯಿಂದ ವರ್ತಿಸಿ ನ್ಯಾಾಯವ್ಯವಸ್ಥೆೆಯ ಮೇಲೆ ಜನರ ನಂಬಿಕೆಯನ್ನು ಸ್ಥಿಿರಗೊಳಿಸಿದೆ.ಸಾಂವಿಧಾನಿಕ ಚೌಕಟ್ಟಿಿನಲ್ಲಿ ಕಾನೂನು ಸುವ್ಯವಸ್ಥೆೆಯನ್ನು ಕಾಪಿಟ್ಟ ಸರಕಾರವೂ, ಶಾಂತವಾಗಿ ಬಂದಿರುವ ತೀರ್ಪಿಗೆ ತಲೆಬಾಗಿದ ಸಮಸ್ತ ದೇಶವಾಸಿಗಳೂ ಸ್ತುತ್ಯಾಾರ್ಹರೇ. ಹಳೇ ಗಾಯವನ್ನು ಪದೇಪದೇ ಕೆದಕುತ್ತಿಿದ್ದರೆ ಅದು ಗುಣವಾಗಲು ಅಸಾಧ್ಯ. ಆದ್ದರಿಂದ ಮುಂದೆ ದೇಶವಾಸಿಗಳೆಲ್ಲಾ ಹಳೆಯ ಕಹಿನೆನಪುಗಳನ್ನು ಮರೆತು, ಒಗ್ಗಟ್ಟಿಿನಿಂದ ರಾಷ್ಟ್ರನಿರ್ಮಾಣದ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾದರಿಯ ಪ್ರಗತಿಪಥದಲ್ಲಿ ಮುಂದಾಗೋಣ. ಇನ್ನಾಾದರೂ ರಾಮನ ಆದರ್ಶಗಳ ದಾರಿಯಲ್ಲಿ ನಾವು ಜೀವನವನ್ನು ನಡೆಸಿ ಬದುಕನ್ನು ಸಾರ್ಥಕವಾಗಿಸೋಣ. ಯಥೋ ಧರ್ಮಃ ತಥೋ ಜಯಃ. ಗಾಂಧೀಜಿಯವರ ರಾಮರಾಜ್ಯದ ನಿರ್ವ್ಯಾಾಜ್ಯ ಕನಸನ್ನು ನಾವೆಲ್ಲಾ ಜತೆಗೂಡಿ ನನಸಾಗಿಸೋಣ.