Sunday, 15th December 2024

ಶಿವ ನಿಜವೆಂದರೆ ಗಣೇಶನನ್ನು ಒಪ್ಪಲೇಬೇಕು

ಪ್ರತಿರೋಧ

ಪ್ರಶಾಂತ್ ಸಂಬರಗಿ

ಶಿವನನ್ನು ನಂಬುವ ನೀವು ಶಿವನ ಮಗನನ್ನೇ ನಂಬುವುದಿಲ್ಲ ಎಂದರೆ ಹಾಸ್ಯಾಸ್ಪದವಲ್ಲವೇ? ಗಣೇಶನನ್ನು ನೀವು ಅರ್ಥ ಮಾಡಿಕೊಳ್ಳದೇ ಈ ರೀತಿ ಟೀಕಿಸುತ್ತಿರುವ ನೀವು ಹಿಂದೂ ಧರ್ಮವನ್ನೇ ಸರಿಯಾಗಿ ತಿಳಿದುಕೊಂಡಿಲ್ಲ. ನೀವು ಹಾಕುವ ವಿಭೂತಿಯಾಗಿರಬಹುದು, ಹಾಕುವ ಭಗವಾ ಬಟ್ಟೆ ಎಲ್ಲವೂ ಹಿಂದೂ ಧರ್ಮದ ಕೊಡುಗೆ. ಶಿವನನ್ನು ಒಪ್ಪಿಕೊಂಡಿದ್ದರೆ ಗಣೇಶನನ್ನು ಒಪ್ಪಿಕೊಳ್ಳಲೇಬೇಕು.

ಶತಮಾನಗಳ ಇತಿಹಾಸವಿರುವ ಸನಾತನ ಧರ್ಮದ ಆಚರಣೆ, ಪರಂಪರೆ ಹಾಗೂ ನಂಬಿಕೆಗಳನ್ನು ಪಾಶ್ಚಿಮಾತ್ಯರು ಒಪ್ಪಿಕೊಂಡಿದ್ದಾರೆ. ಆದರೆ
ಹಿಂದೂ ಧರ್ಮದಲ್ಲಿಯೇ ಇರುವ ಕೆಲವರು ‘ಬುದ್ಧಿಜೀವಿ’ಗಳು ಎನಿಸಿಕೊಳ್ಳಬೇಕು ಎನ್ನುವ ಧಾವಂತದಲ್ಲಿ ಹಿಂದೂ ಧರ್ಮದ ಆಚಾರ, ವಿಚಾರ, ಸಂಸ್ಕೃತಿ, ದೇವರು ಎಲ್ಲವನ್ನು ಟೀಕಿಸುವ ಕೀಳು ಮನಃಸ್ಥಿತಿಗೆ ಬಂದಿದ್ದಾರೆ. ಅದೇನೂ ಹೊಸತೂ ಅಲ್ಲ, ವಿಶೇಷವೂ ಅನಿಸುತ್ತಿಲ್ಲ. ಆದರೆ ಕಾವಿತೊಟ್ಟು, ವಿಭೂತಿ ಧರಿಸುವ ಸ್ವಾಮೀಜಿಗಳೇ ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ‘ಇನ್ನೊಬ್ಬರ’ ಓಲೈಕೆಗೆಮುಂದಾಗಿರುವುದು ದುರಂತ.

ಇತ್ತೀಚಿನ ದಿನದಲ್ಲಿ ಹಿಂದೂ ದೇವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಒಂದು ‘ಫ್ಯಾಷನ್’ ಆಗುತ್ತಿದೆ. ಜಾತ್ಯ ತೀತ, ಪ್ರಗತಿಪರ ಎನಿಸಿಕೊಳ್ಳಬೇಕು ಎನ್ನುವ ಭ್ರಮೆ ಆವರಿಸುತ್ತಿದ್ದಂತೆ ಇವರಿಗೆಲ್ಲ ಸಿಗುವ ಏಕೈಕ ಸುಲಭ ಮಾರ್ಗ ಹಿಂದೂ, ಸನಾತನ ಧರ್ಮವನ್ನು ಟೀಕಿಸುವುದು. ಇಂಥ ಭ್ರಮೆಯ ಮುಂದುವರಿದ ಭಾಗವೇ ‘ಗಣೇಶ ಎನ್ನುವುದೇ ಕಾಲ್ಪನಿಕ ದೇವರು’ ಎನ್ನುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ ಶಿವಾಚಾರ್ಯರ ಭಂಡ ಹೇಳಿಕೆ.

ಸಾಣೇಹಳ್ಳಿ ಶ್ರೀಗಳು ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದನ್ನು ಗಮನಿಸಿದಾಗ ಅವರು ತಮ್ಮ ಹೆಸರಿನೊಂದಿಗಿರುವ ‘ಪಂಡಿತಾರಾಧ್ಯ’ ಎಂದು ಕರೆಸಿಕೊಳ್ಳುವ ಅರ್ಹತೆ ಕಳೆದುಕೊಂಡಿದ್ದಾರೆ ಎನಿಸುತ್ತದೆ. ಹೀಗೆ ಅರ್ಹತೆ ಕಳೆದುಕೊಂಡವರ ಸಾಲಿನಲ್ಲಿ ಇವರೇನು ಮೊದಲಲ್ಲ. ಈ ಸ್ವಾಮಿ(ಜೀ) ಬಗ್ಗೆ ಮಾತನಾಡುವ ಮೊದಲು, ಹಿಂದೂ ಧರ್ಮದ ಬಗ್ಗೆ ಮಾತನಾಡುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.

ಸನಾತನ ಪರಂಪರೆಯ ಆಚರಣೆಯ ಬಗ್ಗೆ, ನಮ್ಮ ದೇವರುಗಳ ಬಗ್ಗೆ, ಹಬ್ಬದ ಬಗ್ಗೆ ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ತಾನೊಬ್ಬ  ‘ಜಾತ್ಯತೀತ ವಾದಿ’ ಎನಿಸಿಕೊಳ್ಳು ವ್ಯಾಧಿ ಹೆಚ್ಚಾಗುತ್ತಿದೆ. ಇದಿಷ್ಟ ಅಲ್ಲದೇ, ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡಿದರೆ ತಾನು ‘ಆಧುನಿಕ ಜಗತ್ತಿಗೆ’ ಸೇರಿದ ಜೀವಿ ಎನಿಸಿಕೊಳ್ಳುವ ಹಪಾಹಪಿ ಹೆಚ್ಚಾಗಿದೆ. ಮೊದಲಿಗೆ ಶಿವರಾತ್ರಿ ಹಬ್ಬಕ್ಕೆ ಅಭಿಷೇಕ ಮಾಡುವ ಬದಲು, ಆ ಹಾಲನ್ನು ಅನಾಥರಿಗೆ ನೀಡಿ ಎಂಬುದರಿಂದ ಆರಂಭಿಸಿ, ಬಳಿಕ ನಾಗರಹಬ್ಬಕ್ಕೆ ನಾಗರಕಲ್ಲಿಗೆ ಹಾಲು ಹಾಕುವುದು ಅಕ್ಷಮ್ಯ ಎನ್ನುವಂತೆ ಮಾತಾಡುವುದು, ಹೋಳಿ ಹಬ್ಬಕ್ಕೆ ನೀರನ್ನು ಉಳಿಸಿ; ಜನ್ಮಾಷ್ಟಮಿಯಂದು ಮಡಕೆ ಒಡೆಯಲು ಹೋಗಿ ಸಮಸ್ಯೆ ಏಕೆ ಮಾಡಿಕೊಳ್ಳುವಿರಿ? ಎನ್ನುವ ‘-ಕ್’ ಸಹಾನುಭೂತಿ ತೋರಿಸುವುದು, ದೀಪಾವಳಿಗೆ ಶಬ್ದ ಮಾಲಿನ್ಯ, ಗಣಪತಿ ವಿಸರ್ಜನೆಗೆ ಜಲ ಮಾಲಿನ್ಯ, ಗೌರಿ ಹಬ್ಬ ಮಾಡಿದರೆ ಹೆಣ್ಣುಮಕ್ಕಳು ಆಧುನಿಕ ಜಗತ್ತಿಗೆ ತೆರೆದುಕೊಳ್ಳಬೇಕು ಎನ್ನುವ ಬಿಟ್ಟಿ ಸಲಹೆ ನೀಡುವವರು ಸಂಖ್ಯೆ ಹೆಚ್ಚಾಗಿದೆ.

ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಿದರೆ, ಸಂಕ್ರಾಂತಿ ವೇಳೆ ಕಿಚ್ಚುಹಾಯಿಸಿದರೆ ಪ್ರಾಣಿಗೆ ಹಿಂಸೆ ಎನ್ನುವ ಮಾತುಗಳನ್ನು ಆಡುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ಮಹಿಷದಸರ ಎನ್ನುವ ಮೂಲಕ ಪ್ರತಿಹಂತದಲ್ಲಿಯೂ ಒಂದು ಕೊಂಕನ್ನು ತೆಗೆಯುವ ಮಾತಾಡುತ್ತಿದ್ದಾರೆ. ಬಹುಸಂಖ್ಯಾತ ಹಿಂದೂ ಗಳಿರುವ ಭಾರತದಲ್ಲಿ ಈ ರೀತಿಯ ಮಾತುಗಳು ದಿನದಿಂದ ದಿನಕ್ಕೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವನ್ನು ನೋಡಿದರೆ, ಒಂದು ಷಡ್ಯಂತ್ರವಿದೆ ಎನ್ನುವುದು ಸ್ಪಷ್ಟ. ಷಡ್ಯಂತ್ರವೇನೆಂದರೆ ಜನರ ಮನಸ್ಸಿನಲ್ಲಿ ಹಿಂದೂ ಧರ್ಮದ ಆಚರಣೆ, ದೇವರುಗಳೇ ಸುಳ್ಳು, ಧರ್ಮದ ಆಚರಣೆ ಬಗ್ಗೆ ತುಷ್ಟವಾಗಿ ಯೋಚಿಸಬೇಕು ಎನ್ನುವುದಾಗಿದೆ. ಇಂತಹ ಚಿಂತನೆಯನ್ನು ಬಿತ್ತಲು ಪ್ರಯತ್ನಿಸುತ್ತಿರುವುದು ಕ್ರೈಸ್ತ ಮಿಷಿನರಿ ಹಾಗೂ ಅದಕ್ಕೆ ನೆರವಾಗಿ ನಿಂತಿರುವ ಕಾಂಗ್ರೆಸ್ ಅಜೆಂಡಾ ಎನ್ನುವುದು ಸ್ಪಷ್ಟ.

ಈ ಅಜೆಂಡಾದ ಭಾಗವಾಗಿಯೇ ಶಿವಾಚಾರ್ಯರು ಗಣಪತಿಯನ್ನು ಕಾಲ್ಪನಿಕ ದೇವರು ಎನ್ನುವ ಮಟ್ಟಕ್ಕೆ ಇಳಿಸುವ ಮೂಲಕ ಕೋಟ್ಯಂತರ ಜನರ ನಿತ್ಯಪೂಜಿಪ ಗಣನಾಯಕನ ಭಕ್ತಗಣದ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲು ಮುಂದಾಗಿದ್ದಾರೆ. ಗಣೇಶನ ಬಗ್ಗೆ ಮಾತನಾಡುವ ಶ್ರೀಗಳು, ಶಿಲಬೆಗಳ ಬಗ್ಗೆಯಾಗಲಿ, ಮೆಕ್ಕಾದ ಖಬ್ಬ ಕಲ್ಲಿನ ಬಗ್ಗೆ ಮಾತನಾಡುವುದಿಲ್ಲವಲ್ಲ? ಈ ಬುದ್ಧಿಜೀವಿಗಳ ಸೋ ಕಾಲ್ಡ್
ಸಂಶೋಧನೆ ಕೇವಲ ಹಿಂದೂ ಧರ್ಮದ ದೇವರು, ಆಚರಣೆಗೆ ಮಾತ್ರ ಸೀಮಿತವೇ? ಕೆಲ ತಿಂಗಳ ಹಿಂದೆ ‘ಸನಾತನ ಧರ್ಮ ಎಂಬುದು ಡೆಂ, ಮಲೇರಿಯಾ ರೀತಿಯಲ್ಲಿ’ ಎಂದು ಡಿಎಂಕೆ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದ.

ಆ ಹೇಳಿಕೆಯ ವಿರುದ್ಧ ಯಾವ ನ್ಯಾಯಾಲಯದಲ್ಲಿಯೂ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೇ ಇದ್ದಾಗ ಸುಪ್ರೀಂ ಕೋರ್ಟ್ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿತ್ತು. ಆದರೆ ಗಣಪತಿ ಬಗ್ಗೆ ಶಿವಾಚಾರ್ಯರು ಮಾತನಾಡಿದರೂ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವು ದರಿಂದ ಎಫ್ ಐಆರ್ ಆಗು ವುದು ಕಷ್ಟ. ಇದು ಗೊತ್ತಿದ್ದೇ ಶ್ರೀಗಳು ನಮ್ಮ ಭಾವನೆಗಳಿಗೆ, ನಂಬಿಕೆಗಳಿಗೆ ಘಾಸಿಗೊಳಿಸುವ ಮಾತುಗಳನ್ನು ಆಡಿದ್ದಾರೆ; ಆಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಹಿಂದೂಗಳಿಗೆ ಬಸವಣ್ಣನ ವಚನಗಳನ್ನು ಉಲ್ಲೇಖಿಸುವ ಸ್ವಾಮೀಜಿಗಳು ಇದೇ ತತ್ವವನ್ನು ಇಸ್ಲಾಂ ಸಮುದಾಯಕ್ಕೆ ಬೋಧಿಸಲು ಸಾಧ್ಯವೇ? ಸಾಮಾ ಜಿಕ ಕಾಂತ್ರಿಯ ಹರಿಕಾರ ನಾಗಿದ್ದ ಬಸವಣ್ಣವರು, ‘ಅಲ್ಲಾ’ ಬರುವ ಮೊದಲೇ ಇದ್ದರು. ಆದರೂ ಸ್ವಾಮಿಗಳೇಕೇ ಸೌದಿ ಅರೇಬಿಯಾಕ್ಕೆ ಹೋಗಿ ಬಸವಣ್ಣನ ವಚನಗಳ ಪ್ರಚಾರ ಮಾಡುವುದಿಲ್ಲ? ಸಮಾನತೆಯ ಬಗ್ಗೆ ಆ ನೆಲದಲ್ಲಿ ನಿಂತು ಮಾತನಾಡುವುದಿಲ್ಲ? ಅದೆಲ್ಲ ಹೋಗಲಿ, ಅವರ ಧರ್ಮದಲ್ಲಿಯೇ ವಿರೋಧಿಸುವ ಷರಿಯಾ ಕಾನೂನಿನ ಬಗ್ಗೆ ಮುಸ್ಲಿಂ ದೇಶಗಳಿಗೆ ಹೋಗಿ ಅಲ್ಲಿನ ನೆಲದಲ್ಲಿ ನಿಂತು ಏಕೆ ವಿರೋಧಿಸುವುದಿಲ್ಲ? ಅದೇ ರೀತಿ ಕ್ರೈಸ್ತ ಸಮುದಾಯದಲ್ಲಿರುವ ಮೂಢನಂಬಿಕೆ, ಆಚರಣೆ ಬಗ್ಗೆ ಟೀಕೆ ಮಾಡುವುದಕ್ಕೆ ಏಕೆ ಶ್ರೀಗಳು ಮುಂದಾಗಿಲ್ಲ? ಪಂಡಿತಾರಾಧ್ಯರು ಒಂದು ವೇಳೆ ನಿಜವಾಗಿಯೂ ಬಸವಣ್ಣನ ವಚನಗಳನ್ನು ಅರ್ಥ ಮಾಡಿಕೊಂಡಿದ್ದರೆ, ಈ ರೀತಿಯ ಮಾತನ್ನು ಹೇಳುತ್ತಿರಲಿಲ್ಲ.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿ, ಎಲ್ಲರ ನಂಬಿಕೆಗಳಿಗೆ ಗೌರವಿಸುವ ಬಸವಣ್ಣದ ಮೂಲತತ್ತ್ವವನ್ನೇ ನೀವು ಪಾಲಿಸುತ್ತಿಲ್ಲ. ಬಸವಣ್ಣನವರ ವಚನಚಳವಳಿಯಷ್ಟೇ ಅಲ್ಲದೇ ಜೈನ, ಸಿಖ್, ಬೌದ್ಧ ಧರ್ಮಗಳೆಲ್ಲವೂ ಹುಟ್ಟಿದ್ದು ಹಿಂದೂ ಧರ್ಮದ ನೆರಳಿನಲ್ಲಿಯೇ ಎನ್ನುವುದನ್ನು ಮರೆಯ ಬಾರದು. ಗಣೇಶನನ್ನು ‘ಕಾಲ್ಪನಿಕ’ ಎನ್ನುವ, ಸನಾತನ ಧರ್ಮವೇ ಸರಿಯಿಲ್ಲ ಎಂದು ಹೇಳುವ ಸ್ವಾಮಿಗಳೇ ಮೊದಲು, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಹಣೆಯಲ್ಲಿ ವಿಭೂತಿ, ಕಾವಿ ಬಟ್ಟೆಯನ್ನು ತೊಡುವುದು ಹಿಂದೂತ್ವದ ಧರ್ಮದ ಒಂದು ಕ್ರಮ. ಇನ್ನು ನೀವು ಬಸವಣ್ಣನವರ ಇಷ್ಟ ಲಿಂಗ ಪೂಜೆ, ಶಿವನನ್ನು ನಂಬುವ, ಅದನ್ನೇ ಒಪ್ಪಿಕೊಂಡಿರುವ ನೀವು ಶಿವನ ಮಗನನ್ನೇ ನಂಬುವುದಿಲ್ಲ ಎಂದರೆ ಹಾಸ್ಯಾಸ್ಪದವಲ್ಲವೇ? ಗಣೇಶನನ್ನು ನೀವು ಅರ್ಥ ಮಾಡಿಕೊಳ್ಳದೇ ಈ ರೀತಿ ಟೀಕಿಸುತ್ತಿರುವ ನೀವು ಹಿಂದೂ ಧರ್ಮವನ್ನೇ ಸರಿಯಾಗಿ ತಿಳಿದುಕೊಂಡಿಲ್ಲ.

ನೀವು ಹಾಕುವ ವಿಭೂತಿಯಾಗಿರಬಹುದು, ಹಾಕುವ ಭಗವಾ ಬಟ್ಟೆ ಎಲ್ಲವೂ ಹಿಂದೂ ಧರ್ಮದ ಕೊಡುಗೆ. ಶಿವನನ್ನು ಒಪ್ಪಿಕೊಂಡಿದ್ದರೆ ಗಣೇಶನನ್ನು ಒಪ್ಪಿಕೊಳ್ಳಲೇಬೇಕು. ಇಷ್ಟೆಲ್ಲ ಮಾತನಾಡುವ ಶಿವಾಚಾರ್ಯರೇ, ನೀವು ಅನ್ಯಧರ್ಮದ ಬಗ್ಗೆ ಏಕೆ ಮಾತನಾಡುವುದಿಲ್ಲ ಎನ್ನುವುದು ಗೊತ್ತಿದೆ. ಕೇವಲ ನೀವಷ್ಟೇ ಅಲ್ಲ, ಹಿಂದೂ ಧರ್ಮ ದೇವರು, ಆಚರಣೆ, ನಂಬಿಕೆಗಳ ಬಗ್ಗೆ ಮಾತನಾಡುವುದು ಎಂದರೆ ನಿಮ್ಮಂತವರಿಗೆಲ್ಲ ‘ಸೇಫ್’ ಎನಿಸುತ್ತದೆ.

ಜಾತ್ಯತೀತ, ಪ್ರಗತಿಪರ ಸೇರಿದಂತೆ ಸೋಕಾಲ್ಡ್ ‘ಬಿರಿದು’ ಪಡೆಯುವ ಪ್ರತಿಯೊಬ್ಬರಿಗೂ ಗೊತ್ತಿದೆ, ಹಿಂದೂ ಧರ್ಮೀಯರು ‘ಸಹಿಷ್ಣುಗಳು’ ಎನ್ನುವುದು. ಅವರ ಬಗ್ಗೆ ಏನೇ ಮಾತನಾಡಿದರೂ, ತಲೆಕೆಡಿಸಿಕೊಳ್ಳುವುದಿಲ್ಲ. ಅವರಲ್ಲಿ ಬಹುತೇಕತರು ನಾನ್ಯಾಕೆ ಪ್ರತಿಕ್ರಿಯಿಸಲಿ ಎನ್ನುವ ಮನೋಭಾವದಲ್ಲಿ ಮುಂದಕ್ಕೆ ಸಾಗುತ್ತಾರೆ ಎನ್ನುವುದು ನಿಮಗೆ ಸ್ಪಷ್ಟವಾಗಿ ಗೊತ್ತಿದೆ. ಇದರೊಂದಿಗೆ ನೀವೆಲ್ಲ ಪದೇಪದೆ ಹಿಂದೂಗಳನ್ನೇ ಟಾರ್ಗೆಟ್ ಮಾಡುವುದು
ಏಕೆಂದರೆ, ‘ಸವಕಲು ನಾಣ್ಯ’ದ ಬಗ್ಗೆ ಮಾತನಾಡಿದಾರೆ ನಿಮಗೆ ಪ್ರಚಾರ ಸಿಗುವುದಿಲ್ಲ ಎನ್ನುವ ಕಾರಣಕ್ಕೆ. ಆದ್ದರಿಂದ ಹಿಂದೂ ಧರ್ಮವನ್ನು ವಿರೋಧಿಸುವ ಮೂಲಕ ಬಹುಸಂಖ್ಯಾತರ ಲಕ್ಷ್ಯವನ್ನು ನಿಮ್ಮತ್ತ ಸೆಳೆಯುವ ಮೂಲಕ ನಾನಿನ್ನು ಇದ್ದೇನೆ ಎನ್ನುವುದನ್ನು ಸಾರುವ ಲೆಕ್ಕಾಚಾರ.

ಆದರೆ ಹಿಂದೂ ಧರ್ಮವನ್ನು ಹೊರತುಪಡಿಸಿ ಇನ್ಯಾವುದೇ ಧರ್ಮದ ಬಗ್ಗೆ ನೀವು ಈ ರೀತಿ ಮಾತುಗಳನ್ನು ಆಡುವುದು ಹೋಗಲಿ, ಒಂದು ಶಬ್ದ ಬಂದರೂ ನಿಮ್ಮ ವಿರುದ್ಧ ಫತ್ವಾ ಹೊರಡಿಸುವ, ತಲೆ ಕತ್ತರಿಸುವ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತವೆ. ಆದ್ದರಿಂದ ಸಂಪೂರ್ಣ ಸೈಡ್‌ ಲೈನ್ ಆದ ಸಮಯದಲ್ಲಿ  ಪ್ರಚಾರಕ್ಕೆ ಬರಬೇಕು ಎಂದರೆ ಹಿಂದೂ ಧರ್ಮದ ಬಗ್ಗೆ ಏನೋ ಒಂದು ಟೀಕಿಸುವುದು. ಅದರಿಂದ ಒಂದಿಷ್ಟು ಪ್ರಚಾರ ಹಾಗೂ ಕೆಲ ಪಟ್ಟಭದ್ರ ಅಜೆಂಡಾಗಳಿಂದ ‘ಕಾಣಿಕೆ’ಯನ್ನು ಪಡೆಯುವುದೇ ನಿಮ್ಮ ಉದ್ದೇಶವಲ್ಲವೇ? ಕಾಂಗ್ರೆಸ್ ಅಥವಾ ಆ ರೀತಿಯ ರಾಜಕೀಯ ಪಕ್ಷಗಳಿಗೆ ನಾವಿನ್ನೂ ಇದ್ದೇವೆ ಎನ್ನುವುದನ್ನು ತೋರಿಸಲು ಈ ರೀತಿಯ ಹೇಳಿಕೆ ನೀಡುತ್ತೀರಾ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಒಂದು ವೇಳೆ ನಿಮಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿಯಿದ್ದರೆ ‘ಕಾವಿ’ ಬಿಚ್ಚಿಟ್ಟು, ಖಾದಿ ಧರಿಸಿ ನೇರವಾಗಿ ರಾಜಕೀಯಕ್ಕೆ ಬನ್ನಿ. ಆದರೆ ರಾಜಕೀಯ
ಲಾಭ ಪಡೆಯುವುದಕ್ಕಾಗಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ಬಿಡಿ. ನೀವು ಟೀಕಿಸಿರುವ ಗಣೇಶ ಕರ್ನಾಟಕದ ಪ್ರತಿ ಯೊಂದು ಲಿಂಗಾಯತ ಮನೆಯಲ್ಲಿಯೂ ಪೂಜಿತನಾಗಿದ್ದಾನೆ. ಈ ಬಗ್ಗೆ ಪರೀಕ್ಷೆ ಮಾಡಬೇಕು ಎನ್ನುವ ಹುಚ್ಚು ಸಾಹಸವಿದ್ದರೆ, ‘ಲಿಂಗಾಯತರು ಗಣೇಶನನ್ನು ಪೂಜಿಸಬಾರದು’ ಎನ್ನುವ ಸಂದೇಶ ಕೊಡಿ. ನಿಮ್ಮ ಮಾತಿಗೆ ಎಷ್ಟು ಕಿಮ್ಮತ್ತು ಸಿಗಲಿದೆ ಎನ್ನುವುದನ್ನು ನೀವೇ ನೋಡಿ.