Wednesday, 9th October 2024

ಪ್ರೇಮ ವಿವಾಹಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ ?

ಅಭಿಮತ

ಆಮಿರ್‌ ಬನ್ನೂರು

amirbannur93@gmail.com

ಪ್ರೇಮಿಗಳು ವಿಭಿನ್ನ ಧರ್ಮದವರಾದರೆ ಯಾರು ಯಾವ ಧರ್ಮವನ್ನು ಪಾಲನೆ ಮಾಡಬೇಕೆಂಬ ಜಂಜಾಟದಲ್ಲಿ ಸಿಲುಕಿರುತ್ತಾರೆ. ಅವರ ಮಕ್ಕಳಿಗೂ ಯಾವ ಧರ್ಮವನ್ನು ಪರಿಚಯಿಸಬೇಕು, ಯಾವ ಸಂಸ್ಕೃತಿಯನ್ನು ಕಲಿಸ ಬೇಕೆಂಬ ಚಿಂತೆ ಅವರನ್ನು ಕಾಡಲು ಶುರುವಾಗುವ ಎ ಸಾಧ್ಯತೆಗಳು ಇಲ್ಲಿ ಹೆಚ್ಚುತ್ತದೆ.

ವಾಟ್ಸಪ್ ಗ್ರೂಪ್ ಒಂದರಲ್ಲಿ ಮೇಲಿನ ಶೀರ್ಷಿಕೆ ನೀಡಿ ಲೇಖನಗಳನ್ನು ಆಹ್ವಾನಿಸಿದ ಒಂದು ಪತ್ರಿಕಾ ವರದಿ ನೋಡಲು ಸಾಧ್ಯ ವಾಯಿತು. ಜಾತಿ ವೈಷಮ್ಯ,ಜಾತಿ ಪದ್ಧತಿಗಳು, ಅಸ್ಪಶೃತೆ ಹಾಗೂ ಅಸಮಾನತೆಗಳಿಂದ ಸುಧಾ ರಣೆಗೊಳ್ಳಬೇಕಾದ ಪ್ರಸ್ತುತ ಸನ್ನಿವೇಶ ದಲ್ಲಿ ಹೀಗೊಂದು ಶೀರ್ಷಿಕೆ ಚರ್ಚೆಗೆ ಗ್ರಾಸವಾಗಿದೆ.

1960ರ ಆಸುಪಾಸಿನಲ್ಲಿ ಕೇರಳ ರಾಜ್ಯದ ಕಲ್ಲಿಕೋಟೆ ಜಿಲ್ಲೆ ಮುಕ್ಕಂ ಅನ್ನುವ ಪ್ರದೇಶ ದಲ್ಲಿ ಜೀವಿಸಿದ್ದ ಮೊಯ್ಯಿದೀನ್ ಹಾಗೂ ಕಾಂಚನಾಳು ನೆನಪಿಗೆ ಬಂದರು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೇಮ ಕಥೆಯನ್ನು ಆಧಾರವಾಗಿಟ್ಟು ಕೊಂಡು 2014ರಲ್ಲಿ ಮಲಯಾಳ ಸಿನಿಮಾ ಕೂಡ ಮಾಡಲಾಗಿದ್ದು, ಅದು ಎಷ್ಟೊ ಜನರ ಮನ ದಲ್ಲಿ ಒಂದು ರೀತಿಯ ಕ್ರಾಂತಿ ಯನ್ನು ಮಾಡಿತ್ತು. ಮಲಯಾಳಂ ಸಾಹಿತ್ಯದ ಪ್ರಮುಖ ಪಂಡಿತರ ವಿಶ್ಲೇಷಣೆಯ ಪ್ರಕಾರ ಲೈಲಾ ಮಜ್ನೂನ್ ನಂತರ ಅನೇಕ ಪ್ರೇಮ ಕಥೆಗಳು ಹಾಗೂ ವಾಸ್ತವಿಕ ಘಟನೆಗಳು ಇದೆ ಆದರೆ ಅವೆಲ್ಲವನ್ನು ಮೀರಿಸುವ ನಿಜ ವಾದ ಘಟನೆಯಾಗಿದೆ ಮೊಯ್ಯಿ ದೀನ್ ಮತ್ತು ಕಾಂಚನಾಳದ್ದು. ಅವರಿಬ್ಬರೂ ಕೂಡ ವಿವಿಧ ಧರ್ಮದವರಾಗಿದ್ದರು.

ಒಬ್ಬ ಪುಟ್ ಬಾಲ್ ಆಟಗಾರನಾದ ಮೊಯ್ಯಿದೀನ್ ಕಾಂಚನಳನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿ ಭುಗಿಲೆದ್ದ ಅಪಸ್ವರ ಅಷ್ಟಿಷ್ಟಲ್ಲ. ಪ್ರತಿನಿತ್ಯ ಪತ್ರಗಳ ಮೂಲಕ ಪ್ರೀತಿ ಸಂದೇಶಗಳನ್ನು ರವಾನಿಸುತ್ತಿದ್ದ ವಿಷಯ ಮನೆ ಯಲ್ಲಿ ತಿಳಿಯಿತು ಮುಂದೆ ಇಬ್ಬರು ಭೇಟಿಯಾಗಲಾರದಷ್ಟು ತೀವೃವಾದ ಬಂಧನಕ್ಕೆ ಒಳಗಾದರು. ಸುಮಾರು 5 ವರ್ಷಗಳ ಕಾಲ ಪರಸ್ಪರ ಬೇಟಿ ಮಾಡಲು  ಸಾಧ್ಯವಾಗಿಲ್ಲ. ಇಬ್ಬರ ಸಮೀಪನಕ್ಕೆ ಇರುವ ಎಲ್ಲಾ ದಾರಿಗಳಿಗೆ ಬೀಗ ಜಡಿದರೂ ಕೂಡ ಇಬ್ಬರ ನಡುವಿನ ಸ್ನೇಹಕ್ಕೆ ಯಾವುದೇ ಧಕ್ಕೆ ಉಂಟಾಗಲಿಲ್ಲ, ಕೊರತೆಯೇ ಆಗಿಲ್ಲ.

ಮುಂದಿನ ದಿನಗಳಲ್ಲಿ ತಮ್ಮಿಬ್ಬರ ಸ್ನೇಹ ಸಪ ಮತ್ತೊಬ್ಬರಿಗೆ ತಿಳಿಯ ಕೂಡದೆಂದು ನಿರ್ಧರಿಸಿದ ಅವರು ಹೊಸ ಭಾಷೆ ಯೊಂದನ್ನು ಕಂಡು ಹಿಡಿದು ಅದರಲ್ಲಿ ವಿಚಾರ ವಿನಿಮಯ ಮಾತನಾಡಲು ಶುರು ಮಾಡುತ್ತಾರೆ. ಯಾವುದೇ ಸಂದಿಗ್ಧ ಘಟ್ಟದಲ್ಲೂ ಕೂಡ ಇಬ್ಬರು ಕೈ ಬಿಡದೆ ಪ್ರಮಾಣಿಕ ಪ್ರೀತಿ ಏನೆಂದು ತೋರಿಸಿ ಕೊಟ್ಟ ಆರ್ದಶ ಪ್ರೇಮಿಗಳಾಗಿದ್ದಾರೆ ಮೊಯ್ಯಿದ್ ಮತ್ತು ಕಾಂಚನ. ಆದರೆ ಇಲ್ಲಿರುವ ಖೇದಕರ ಸಂಗತಿ ಕಾಂಚನಳನ್ನು ಮೊಯ್ಯಿದೀನ್ ಎಷ್ಟು ಪ್ರೀತಿಸಿದ್ದರೂ ಅವಳನ್ನು
ವಿವಾಹ ವಾಗಲು ಸಾಧ್ಯವಾಗಿಲ್ಲ ಒಂದು ದಿನ ಅಚಾನಕವಾಗಿ ಕೊನೆ ಉಸಿರನ್ನೆಳೆದು ತನ್ನ ಪ್ರೀತಿ ಪ್ರಾಮಾಣಿಕವಾಗಿದೆ ಎಂಬುವು ದನ್ನು ಸಾಬೀತು ಪಡಿಸಿ ಭಾರದ ಲೋಕಕ್ಕೆ ಕಾಲಿಟ್ಟ.

ಈ ಘಟನೆ ಪಕ್ಕದಲ್ಲಿರಲಿ. ನಾವಿನ್ನು ವಿಷಯಕ್ಕೆ ಬಂದರೆ ಪ್ರೇಮ ವಿವಾಹಗಳಿಂದ ಸಾಮಾಜಿಕ ಬದಲಾವಣೆ ಖಂಡಿತ ಸಾಧ್ಯವೇ ಇಲ್ಲ. ಅದಕ್ಕೂ ಕಾರಣಗಳಿವೆ ಪ್ರೇಮ ವಿವಾಹಗಳು ನಮ್ಮ ಸಾಂಸ್ಕೃತಿಕ, ಕೌಟುಂಬಿಕ ನೆಲೆಗಟ್ಟನ್ನು ಮೀರಿದ ಒಂದು ಸಂಬಂಧ ವಾಗಿದೆ. ಈ ಬಂಧ ಯಾವುದೋ, ಎಲ್ಲಿಯದೋ ಅಪರಿಚಿತ ಹೆಣ್ಣು ಮತ್ತು ಗಂಡು ಪರಸ್ಪರ ಕಣ್ಸೆಳತಕ್ಕೆ ಒಳಗಾಗಿ ಅಥವಾ ಪರಿಚಿತರೆಡೆಯ ಒಂದೇ ನೋಟಕ್ಕೆ ಪ್ರೇಮವಾಗುವುದು ಇಲ್ಲ ಮೊದ ಮೊದಲು ಗೆಳೆಯರಾಗಿ ನಂತರ ಅದು ಪ್ರೇಮವಾಗುವುದು, ದೈಹಿಕ ಆಕರ್ಷಣೆಯ ಜೊತೆಗೆ ಸಂಬಧವೇರ್ಪಟ್ಟು ನಂತರ ಅದು ಭಾವನೆಯಾಗಿ, ಕಾಮನೆಯಾಗಿ ಪ್ರೇಮವಾಗುತ್ತದೆ.

ಇದಕ್ಕೆ ಕುಟುಂಬದ, ಈ ಸಮಾಜ ಹಾಗೂ ವಿಶೇಷವಾಗಿ ಧಾರ್ಮಿಕ ನೆಲೆಗಟ್ಟಿನ ಒಪ್ಪಿಗೆ ಇರುವುದಿಲ್ಲ. ಇಂತಹ ಸಂಬಂಧಗಳು ಅನೈತಿಕವಾಗಿರುತ್ತದೆ ಎಂಬುವುದನ್ನು ಸಮಾಜವೇ ಏಕಕಂಟದಲ್ಲಿ ಹೇಳಿದೆ. ಇಂತಹ ಸಂಬಂಧಗಳ ಮೂಲಕ ಜೀವನ ನಡೆಸಲು ಯಾರು ಶುರು ಮಾಡುತ್ತಾರೋ ಅವರಿಬ್ಬರ ನಡುವೆ ಒಂದೊಳ್ಳೆಯ ಬಾಂಧ್ಯವನ್ನು ಕಂಡುಕೊಳ್ಳಲು ಸಾಧ್ಯವಿದೆ ಹೊರತು ಕೌಟುಂಬಿಕವಾಗಿ ಪ್ರೇಮ ವಿವಾಹಗಳಿಂದ ಬಾಂಧವ್ಯ ಸೃಷ್ಟಿಯಾಗುವುದು ಬಹುತೇಕ ವಿರಳ.

ಕಾರಣ ಪ್ರೇಮ ವಿವಾಹದ ಸಂದರ್ಭದಲ್ಲಿ ಕೌಟುಂಬಿಕ ಸಮಸ್ಯೆಗಳು ಶುರುವಾಗುವ ಸಾಧ್ಯತೆಗಳು ಹೆಚ್ಚು. ಇದರಿಂದಾಗಿ ಕುಟುಂಬದ ವರ್ಚಸ್ಸನ್ನು ಕಳೆದುಕೊಂಡು ಕುಟುಂಬದ ಸಾಂಸ್ಕೃತಿಕ ನೆಲೆಗಟ್ಟು ಹಾಳಾಗುವಾಗ ಪ್ರೇಮ ವಿವಾಹ ಯಾರಿಗೂ ಸಮ್ಮತಾರ್ಹವಾಗಲು ಸಾಧ್ಯವಿಲ್ಲ. ಸಮ್ಮತಾರ್ಹವಲ್ಲದ ವಿಚಾರಗಳಿಂದ ಸಮಾಜ ದಲ್ಲಿ ಸುಧಾರಣೆ ಅಥವಾ ಬದಲಾವಣೆ ಹೇಗೆ
ಸಾಧ್ಯ!? ಎಲ್ಲಾ ಧರ್ಮಗಳ ದೃಷ್ಟಿಕೋನದಲ್ಲಿ ವಿವಾಹವೆನ್ನುವುದು ಪುಣ್ಯ ಕರ್ಮ.

ವಿವಾಹವು ಸಮಾಜಕ್ಕೆ ಸಾರುವ ಅಮೂಲ್ಯ ಸಂದೇಶ ಬಾಂಧವ್ಯವಾಗಿದೆ. ಹೊಸತನಕ್ಕೆ ನಾಂದಿಯಾಗಿ ಒಂದು ಕುಟುಂಬ
ಕಲ್ಪನೆ ಮೂಡಲು ಸಹಕಾರಿಯಾಗಿದೆ. ವಿವಾಹದಲ್ಲಿ ಎರಡು ರೀತಿ ಅರೇಂಜ್ ಮ್ಯಾರೇಜ್ ಹಾಗೂ ಲವ್ ಮ್ಯಾರೇಜ್. ಗಂಡ ಮತ್ತು ಹೆಂಡತಿ ನಡುವೆ ಏನಾದರೂ ಸಮಸ್ಯೆಗಳು ಕಾಣಿಸಿಕೊಂಡರೆ ಮದುವೆ ಅರೇಂಜ್ ಮ್ಯಾರೇಜ್ ಆದರೆ ಪರಸ್ಪರ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಕುಟುಂಬದ ಹಿರಿಯರು ಹಾಗೂ ಸಂಬಂಧಪಟ್ಟವರು ತಾವಾಗಿಯೇ ಮುಂದೆ ಬರುತ್ತಾರೆ,

ಅದೇ ಪಕ್ಷ ಪ್ರೇಮ ವಿವಾಹವಾದರೆ ರಕ್ತ ಸಂಬಂಧಿಕರೇ ಮುಂದೆ ಬರಲು ಹಿಂಜರಿಕೆ ವ್ಯಕ್ತಪಡಿಸುತ್ತಾರೆ. ನಿರ್ವಾಹವಿಲ್ಲದೆ ಯಾರಾದರೂ ಬಂದರೆ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಇಷ್ಡವಿಲ್ಲ ದಿದ್ದರೂ ಒಪ್ಪಿಕೊಂಡು ಬದುಕಬೇಕಾಗುತ್ತದೆ. ಕೆಲವೊಮ್ಮೆ ಬದುಕೇ ಉಸಿರು ಕಟ್ಟಿಸಬಹುದು. ಕಾರಣ ಆವಾಗಲೇ ಎರಡು ಕುಟುಂಬದ ನಡುವೆ ಬಿರುಕುಂಟಾಗಿ ಬಾಂಧ್ಯವನ್ನು ಕಳೆದುಕೊಂಡಿರುತ್ತಾರೆ. ಪದೇ ಪದೇ ತಾಳ್ಮೆ ಕಳೆದುಕೊಂಡು ದಂಪತಿಗಳ ನಡುವೆ ಜಗಳವಾಗಬಹುದು.

ಇನ್ನು ಪ್ರೇಮಿಗಳು ವಿಭಿನ್ನ ಧರ್ಮದವರಾದರೆ ಯಾರು ಯಾವ ಧರ್ಮವನ್ನು ಪಾಲನೆ ಮಾಡಬೇಕೆಂಬ ಜಂಜಾಟದಲ್ಲಿ ಸಿಲುಕಿ ರುತ್ತಾರೆ. ಅವರ ಮಕ್ಕಳಿಗೂ ಯಾವ ಧರ್ಮವನ್ನು ಪರಿಚಯಿಸಬೇಕು, ಯಾವ ಸಂಸ್ಕೃತಿಯನ್ನು ಕಲಿಸಬೇಕೆಂಬ ಚಿಂತೆ ಅವರನ್ನು ಕಾಡಲು ಶುರುವಾಗುವ ಎಲ್ಲಾ ಸಾಧ್ಯತೆಗಳು ಇಲ್ಲಿ ಹೆಚ್ಚುತ್ತದೆ. ಧರ್ಮ ಪ್ರತಿಯೊಬ್ಬರ ಆಧ್ಯಾತ್ಮಿಕತೆಯ ಅಭಿವೃ
ದ್ಧಿಗೆ ಅನಿವಾರ್ಯವಾದದ್ದು. ಕುಟುಂಬವು ಕುಟುಂಬದ ಪೂರ್ಣ ಸ್ವರೂಪವನ್ನು ತಾಳಲು ಅಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಪಾತ್ರ ಹೆಚ್ಚಿದೆ.

ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪಡೆಯಬೇಕೆಂದರೆ ಧರ್ಮ ಅಗತ್ಯ ಇದ್ದೇ ಇರುತ್ತದೆ. ಇಲ್ಲಿಯಾದರೆ ಇಬ್ಬರು ಕೂಡ ಅವರವರ ಧರ್ಮವನ್ನು ಬಿಟ್ಟು ಕೊಡಲು ಸಾಧ್ಯತೆ ಕಮ್ಮಿ. ಇಬ್ಬರಲ್ಲಿ ಒಬ್ಬರು ಪ್ರೀತಿಗಾಗಿ ಧರ್ಮವನ್ನು ಬಿಟ್ಟುಕೊಟ್ಟರೆ ಅವರ ಆತ್ಮಶಾಕ್ಷಿ ಬಿಡಲು ಹೇಗೆ ಸಾಧ್ಯ. ಧಾರ್ಮಿಕತೆಯ ಗಂಧಗಾಳಿ ಇಲ್ಲದ ಕುಟುಂಬದೊಳಗೆ ಸಮಾಜಕ್ಕೆ ಅನಿವಾರ್ಯವಾದ ಸಂಸ್ಕೃತಿ ಮತ್ತು
ಸಂಸ್ಕಾರವನ್ನು ಮಕ್ಕಳಿಗೆ ಕಲಿಸಲು ತಂದೆ ತಾಯಿಗೆ ಹೇಗೆ ಸಾಧ್ಯವಾಗುತ್ತದೆ? ನಾನು ಮೇಲೆ ತಿಳಿಸಿದ ಮೊಯ್ಯಿದ್ದೀನ್ ಮತ್ತು
ಕಾಂಚನ ಅವರು ಪರಸ್ಪರ ಮದುವೆ ಆಗದೆ ಪ್ರೀತಿಯ ಗೌರವವನ್ನು ಕಾಪಾಡಲು ಸಾಧ್ಯವಾಗಿದೆ.

ಇಂತಹ ಪ್ರೇಮಿಗಳಿಂದ ಸಮಾಜದಲ್ಲಿ ಅವರ ಆರ್ದಶ ಪ್ರೇಮ ಕಥೆ ಶಾಶ್ವತ ನೆನಪಾಗಿ ಗತಕಾಲಕ್ಕೂ ಒಂದು ಉತ್ತಮ ಸಂದೇಶ ವನ್ನು ನೀಡುತ್ತಲೇ ಇರುತ್ತದೆ. ಹಳೇ ಕಾಲದ ಪ್ರೇಮಿಗಳ ಪ್ರೇಮ ಕಥೆಗಳನ್ನು ಅವಲೋಕನ ಮಾಡುವುದಾದರೆ ಪ್ರಮಾಣಿಕ ಪ್ರೇಮಿಗಳಿಗೆ ಜೀವನದಲ್ಲಿ ಒಂದಾಗಲು ಸಾಧ್ಯವಾಗಿರಲಿಲ್ಲ. ಇನ್ನು ಬೆರಳೆಣಿಕೆಯ ಜೀವನದಲ್ಲಿ ನಮಗೆ ಅತೀ ಹೆಚ್ಚು ಪ್ರೀತಿ ನೀಡಲು ಸಾಧ್ಯವಾಗುವ ತಂದೆ ತಾಯಿ ಮತ್ತು ರಕ್ತ ಸಂಬಂಧಿಗಳ ನಿಶ್ಕಲ್ಮಷ ಪ್ರೀತಿಯನ್ನು ತ್ಯಜಿಸಿ, ಸಮಾಜದ ಕೆಂಗಣ್ಣಿಗೆ ಗುರಿ ಯಾಗಿ ಮದುವೆಯಾಗುವುದು ಎಷ್ಟು ಸರಿ? ಪ್ರೀತಿ ಪ್ರೇಮ ಕ್ಕಿಂತಲೂ ಮಿಗಿಲಾದ್ದಾಗಿದೆ ಈ ಕುಟುಂಬ ವ್ಯವಸ್ಥೆ. ಕುಟುಂಬ ಎಂಬ ಮಹಾ ವ್ಯವಸ್ಥೆಯ ಘನತೆಯನ್ನು ಕಾಪಾಡಲು ಸಾಧ್ಯವಾಗುವುದು ಕುಟುಂಬದ ಸರ್ವ ಸದಸ್ಯರ ಸಮ್ಮತಿಯೊಂದಿಗೆ
ನಡೆಯುವ ವಿವಾಹಗಳಿಂದ ಮಾತ್ರ ಸಾಧ್ಯ.

ಉಳಿದ ಮದುವೆಗಳಿಂದ ಕುಟುಂಬಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಕುಟುಂಬಕ್ಕೆ ಮಾರಕವಾದದ್ದು ಸಮಾಜಕ್ಕೂ ಕಂಟಕ ವಾಗಿದೆ. ಕಾರಣ ಸಮಾಜ ಅನ್ನುವುದು ಒಂದು ಕುಟುಂಬ ಇದ್ದ ಹಾಗೆ. ಒಂದು ಕುಟುಂಬದಲ್ಲಿ ಬಿರುಕುಂಟಾದರೆ ಅದರ ಪರಿಣಾ ಮವನ್ನು ಸಮಾಜ ಎದುರಿಸಬೇಕಾಗುತ್ತದೆ. ಸಮಾಜ ಸುಧಾರಣೆಗೆ ಪ್ರತಿಯೊಂದು ಕುಟುಂಬದ ಆವಶ್ಯಕತೆಯಿದೆ. ಒಂದು ಕುಟುಂಬದ ನಾವಿಕರಾದ ತಂದೆ ತಾಯಿ ಅವರ ಸಮ್ಮತಿಯೊಂದಿಗೆ ಪ್ರೇಮ ವಿವಾಹವಾದರೆ ಅದರಿಂದ ಯಾವುದೇ ತೊಂದರೆ ಗಳು ಇರುವು ದಿಲ್ಲ, ಇದು ಇಲ್ಲದಿರುವಾಗ ಬಾಧಕಗಳು ಅಧಿಕ.

ಇದಕ್ಕೆ ಸಾವಿರಾರು ಪುರಾವೆಗಳಿವೆ ಅದರಲ್ಲಿ ಕೆಲ ದಿನಗಳ ಹಿಂದೆ ಉತ್ತರ ಭಾರತದಲ್ಲಿ ನಡೆದ ಘಟನೆ ದಲಿತ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಾನೆ ಆಕ್ಷೇಪಗಳ ನಡುವೆ ಮದುವೆ ಕೂಡ ಮಾಡಿಕೊಳ್ಳುತ್ತಾರೆ ಆದರೇನಂತೆ ಮದುವೆಯ ಮೂರನೇ ದಿನ ಅವಳನ್ನು ಬೈಕಿನಲ್ಲಿ ಕರೆದುಕೊಂಡು ಬರುವಾಗ ಬೈಕನ್ನು ತಡೆದು ನಡು ರಸ್ತೆಯಲ್ಲಿಯೇ ಹಾಡ ಹಗಲು ಅವಳ
ಮುಂದೆಯೇ ಅವನನ್ನು ಅವಳ ಅಣ್ಣಂದಿರ ಗುಂಪು ಕೊಂದು ಹಾಕುತ್ತಾರೆ. ಇಂತಹ ಘಟನ ಪ್ರತೀ ನಿತ್ಯ ಈ ಸಮಾಜದಲ್ಲಿ ನಡೆಯುತ್ತಿರುತ್ತದೆ. ಕೆಲವು ಬೆಳಕಿಗೆ ಬರುವುದಿಲ್ಲ. ಇಂತಹ ಪ್ರಕರಣಗಳಿಂದಾಗಿ ಸಮಾಜ ಇಂದು ತನ್ನ ನೆಮ್ಮದಿಯನ್ನು ಕಳೆದು ಕೊಳ್ಳಬೇಕಾಗಿ ಬಂದಿದೆ