Sunday, 8th September 2024

ಲವ್‌ ಜಿಹಾದ್‌ನ ನರಕ ದರ್ಶನ ಕೇರಳ ಫೈಲ್ಸ್

ವೀಕೆಂಡ್ ವಿತ್ ಮೋಹನ್

camohanbn@gmail.com

‘ದೇವರ ನಾಡು’ ಎಂದೇ ಪ್ರಸಿದ್ಧವಾಗಿರುವ ಕೇರಳದಲ್ಲಿ ದೇವರನ್ನೇ ನಂಬದ ಕಮ್ಯುನಿಸ್ಟರು ಆಡಳಿತ ನಡೆಸುತ್ತಿದ್ದಾರೆ. ಶತಮಾನ ಗಳ ಹಿಂದೆ ಕೇರಳ ರಾಜ್ಯದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಯವರ ನಡುವಣ ತಾರತಮ್ಯ ತಾರಕಕ್ಕೇರಿತ್ತು. ಸ್ವಾಮಿ ವಿವೇಕಾ ನಂದರು ಕೇರಳದಲ್ಲಿದ್ದ ಅಸಮಾನತೆಯನ್ನು ಕಂಡು ಹುಚ್ಚರ ರಾಜ್ಯವೆಂದು ಕರೆದಿದ್ದರು. ಸತತವಾಗಿ ಜಾತಿ ತಾರತಮ್ಯಗಳಿಂದ ಬಳಲಿದ್ದ ಕೇರಳಕ್ಕೆ ಕಮ್ಯುನಿಸ್ಟರ ಆಗಮನ ಸುಲಭವಾಗಿತ್ತು.

ಅತ್ತ ಬ್ರಿಟಿಷರು ತಮ್ಮ ಮಿಷನರಿಗಳ ಮೂಲಕ ಕೇರಳದಲ್ಲಿ ಮತಾಂತರ ಪ್ರಕ್ರಿಯೆಯನ್ನು ಆರಂಭಿಸಿದರೆ ಇತ್ತ ಕಮ್ಯುನಿಸ್ಟರು ಸ್ಟಾಲಿನ್ ಸಿದ್ಧಾಂತವನ್ನು ನಿಧಾನವಾಗಿ ರಾಜ್ಯಾದ್ಯಂತ ವಿಸ್ತರಿಸತೊಡಗಿದ್ದರು. ಕಾಂಗ್ರೆಸ್ ಯಥಾ ಪ್ರಕಾರ ಮುಸ್ಲಿಂ, ಕ್ರಿಶ್ಚಿಯನ್ ಮತಗಳ ಮೂಲಕ ಕೇರಳದಲ್ಲಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡಿತ್ತು. ವಿಪರ್ಯಾಸವೆಂದರೆ ದೇವರ ನಾಡು ಕೇರಳದಲ್ಲಿ ಆದಿಗುರು ಶಂಕರಾಚಾರ್ಯರ ಜನ್ಮಸ್ಥಳವಿದೆ, ಸುಪ್ರಸಿದ್ಧ ಗುರುವಾ ಯೂರಿನಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ.

ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲವಿದೆ. ಹಿಂದೂ ಧರ್ಮದ ಆರಾಧ್ಯ ದೈವಗಳ ನಾಡು ಕೇರಳವಾಗಿದ್ದರೂ ಸಹ ಅಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು ಇಡೀ ಜಗತ್ತನ್ನೇ ಆತಂಕಕ್ಕೀಡು ಮಾಡುತ್ತಿದೆ. ದೇಶದಲ್ಲೇ ಅತೀ ಹೆಚ್ಚು  ಸಾಕ್ಷರತಾ ಪ್ರಮಾಣ ಕೇರಳ ರಾಜ್ಯದಲ್ಲಿದೆ. ಇಂತಹ ಸಾಕ್ಷರತಾ ರಾಜ್ಯದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಇತ್ತೀಚಿಗೆ ಬಿಡುಗಡೆಯಾದ ‘ಕೇರಳ ಫೈಲ್ಸ್’ ಚಲನಚಿತ್ರ ಕೇರಳ ದಲ್ಲಿ ನಡೆದ ಕರಾಳ ಕೃತ್ಯವನ್ನು ಎಳೆ ಎಳೆ ಯಾಗಿ ಬಿಚ್ಚಿಟ್ಟಿದೆ.

‘ಕಾಶ್ಮೀರ್ ಫೈಲ್ಸ್’ ಅನ್ನೂ ಮೀರಿಸುವ ಆತಂಕಕಾರಿ ಅಂಶಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಕೇರಳದ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಮೋಸ ಮಾಡಿ ಜಗತ್ತಿನ ಕ್ರೂರ ಉಗ್ರ ಸಂಘಟನೆ ‘ಐಸಿಸ್’ಗೆ ಕಳುಹಿಸಲಾಗುತ್ತದೆಯೆಂಬುದನ್ನು ತೋರಿಸ ಲಾಗಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣ ಮಾಡಿರುವ ಚಿತ್ರದಲ್ಲಿ ದೇವರ ನಾಡಿನಲ್ಲಿ ನಡೆದಿರುವ ಅಮಾನುಷ ಕೃತ್ಯದ
ಅನಾವರಣವಾಗಿದೆ. ಹೆಣ್ಣು ಹೆತ್ತವರು ನೋಡಲೇ ಬೇಕಾದ ಸಿನಿಮಾ ಇದು. ಅಪ್ಪ ಅಮ್ಮಂದಿರ ಅಸಹಾಯಕತೆಯನ್ನು
ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.

ಸುಸಂಸ್ಕೃತ ಹಿಂದೂ ಕುಟುಂಬದಲ್ಲಿ ಜನಿಸಿರುವ ಹೆಣ್ಣೊಬ್ಬಳು, ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿರುವ ಹೆಣ್ಣು ಮಗಳೊಬ್ಬಳು, ದೇವರನ್ನೇ ನಂಬದ ಕಮ್ಯುನಿಸ್ಟ್ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳೊಬ್ಬಳ ಕಥೆಯನ್ನು ತೋರಿಸಲಾಗಿದೆ. ಈ ಮೂರು ಹೆಣ್ಣು ಮಕ್ಕಳು ‘ನಸಿಂಗ್’ ಪದವಿಗಾಗಿ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಇವರ ಜೊತೆಗೆ ‘ಮಲ್ಲಪುರಂ’ ಜಿಲ್ಲೆಯ ಮುಸ್ಲಿಂ ಹೆಣ್ಣು ಮಗಳೊಬ್ಬಳು ಹಾಸ್ಟೆಲ್ ಗೆಳತಿಯಾಗಿ ಬರುತ್ತಾಳೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಜಿಲ್ಲೆ ಕೇರಳದ ‘ಮಲ್ಲಪುರಂ’. ಇಂತಹ ಜಿಲ್ಲೆಯಿಂದ ಬಂದಂತಹ ಹೆಣ್ಣು ಮಗಳು ಮೂವರು ಗೆಳತಿಯರ ದಿನನಿತ್ಯದ ಆಚಾರ ವಿಚಾರಗಳನ್ನು ಠೀಕೆ ಮಾಡುತ್ತಾ ‘ಅಲ್ಲಾಹುವೇ’ ಜಗತ್ತಿನ ಏಕೈಕ ದೇವರೆಂಬಂತೆ ಹೇಳುತ್ತಾಳೆ. ಈಕೆಗೆ ಇಬ್ಬರು ಸ್ನೇಹಿತರಿರುತ್ತಾರೆ.

ಅವರಿಬ್ಬರೂ ಐಸಿಸ್ ಸಂಘಟನೆಗೆ ನೇರವಾಗಿ ಹೆಣ್ಣು ಮಕ್ಕಳನ್ನು ಕಳುಹಿಸುವ ಹೀನ ಕೃತ್ಯದಲ್ಲಿ ಭಾಗಿಯಾಗಿರುತ್ತಾರೆ. ಮುಸ್ಲಿಂ ಹೆಣ್ಣು ಮಗಳು ತನ್ನ ಮೂರೂ ಜನ ಗೆಳತಿಯರಿಗೆ ದೇವರ ಬಗ್ಗೆ ಸದಾ ಏನಾದರೊಂದು ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾಳೆ. ಹಿಂದೂ ಧರ್ಮದಲ್ಲಿ ನೂರಾರು ದೇವರಿರುವುದರಿಂದ ಕಷ್ಟ ಬಂದಾಗ ಯಾವ ದೇವರನ್ನು ನೆನೆಯುತ್ತೀರಿ? ಸಾವಿರಾರು ಹೆಣ್ಣುಮಕ್ಕಳ ಜೊತೆ ಕಾಲಕಳೆಯುತ್ತಿದ್ದ ಶ್ರೀಕೃಷ್ಣನ ಉಲ್ಲೇಖ ಮಾಡಿ ಹೆಣ್ಣುಮಕ್ಕಳ ಜೊತೆ ಇದ್ದ ಪರಮಾತ್ಮ ನಿಮ್ಮನ್ನು ಹೇಗೆ ತಾನೇ ಕಾಪಾಡುತ್ತಾನೆಂದು ಕೇಳುತ್ತಾಳೆ? ಮೂವರು ಗೆಳತಿಯರು ನಗರದ ಮಾಲ್ ಒಂದರಲ್ಲಿ ಸುತ್ತಾಡಲು ಹೋದಾಗ ಪೋಲಿ ಹುಡುಗರು ಅವರನ್ನು ಚುಡಾಯಿಸುತ್ತಾರೆ.

ಚುಡಾಯಿಸಿದ ನಂತರ ತಮ್ಮ ಹಾಸ್ಟೆಲ್ ರೂಮಿಗೆ ವಾಪಸ್ಸಾಗುತ್ತಾರೆ. ಆಗ ಮತ್ತೊಮ್ಮೆ ನಿಮ್ಮ ದೇವರು ನಿಮ್ಮನ್ನು ಕಾಪಾಡಲಿಲ್ಲ ವಲ್ಲವೆಂದು ಹೇಳುತ್ತಾಳೆ. ನಂತರ ತನ್ನ ಧರ್ಮದಲ್ಲಿ ‘ಹಿಜಾಬ್’ ಧರಿಸುವುದರಿಂದ ಯಾರು ತನ್ನ ತಂಟೆಗೆ ಬರುವುದಿಲ್ಲ. ಅದು
ಅಲ್ಲಾಹುವಿನ ಶ್ರೀರಕ್ಷೆ. ಹಾಗಾಗಿ ನೀವೂ ಸಹ ‘ಹಿಜಾಬ್’ ಧರಿಸಿ ಹೊರಗಡೆ ಓಡಾಡಿಯೆಂದು ಹೇಳಿ ಅವರ ಮನ ಒಲಿಸುತ್ತಾಳೆ. ನಂತರ ಮೂವರು ಗೆಳತಿಯರು ಹಿಜಾಬ್ ಧರಿಸಲು ಶುರುಮಾಡುತ್ತಾರೆ. ತಮ್ಮ ಮನೆಗೆ ರಜೆಗೆಂದು ಹೋದಾಗ ತಮ್ಮ ಮಕ್ಕಳು ಹಿಜಾಬ್ ಧರಿಸಿರುವುದನ್ನು ಕಂಡ ಪೋಷಕರು ದಂಗಾಗಿ ಬಿಡುತ್ತಾರೆ. ಹಿಂದೂ ಕುಟುಂಬದ ಹೆಣ್ಣುಮಗಳು ಪೋಷಕರು ನೀಡಿದ ಕುಂಕುಮವನ್ನೂ ತಿರಸ್ಕರಿಸಿ ‘ಹಿಜಾಬ್’ಧರಿಸಿ ಹೊರಗಡೆ ಓಡಾಡುತ್ತಿರುತ್ತಾಳೆ.

‘ಐಸಿಸ್’ ಜೊತೆ ಸಂಪರ್ಕದಲ್ಲಿದ್ದ ತನ್ನ ಗೆಳೆಯರನ್ನು ಮೂರೂ ಗೆಳತಿಯರಿಗೆ ಪರಿಚಯ ಮಾಡಿಸಿ ಅವರ ನಡುವೆ ಸ್ನೇಹ ಬೆಳೆಯುವಂತೆ ಮಾಡುತ್ತಾಳೆ. ಸ್ನೇಹ ನಿಧಾನವಾಗಿ ಪ್ರೇಮವಾಗುತ್ತದೆ. ಅತ್ತ ಮಸೀದಿಯ ಮೌಲ್ವಿಗಳು ಈಕೆಗೆ ನೀಡಿದ್ದ ಕೆಲಸ ನಿಧಾನವಾಗುತ್ತಿದೆಯೆಂದು ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರೇಮವಾದ ನಂತರ ದೈಹಿಕ ಸಂಪರ್ಕದ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಮದುವೆಗೂ ಮುಂಚಿನ ದೈಹಿಕ ಸಂಪರ್ಕವನ್ನು ಇಸ್ಲಾಂ ಒಪ್ಪುತ್ತದೆಯಾ ಎಂಬ ಪ್ರಶ್ನೆಯನ್ನು ಹೆಣ್ಣು ಮಕ್ಕಳು ಕೇಳುತ್ತಾರೆ. ಹಿಂದೂ ಹೆಣ್ಣು ಮಗಳ ಜೊತೆ ದೈಹಿಕ ಸಂಪರ್ಕವಾದ ನಂತರ ಆಕೆ ಗರ್ಭವತಿಯಾಗುತ್ತಾಳೆ. ಆ ವಿಷಯವನ್ನು ಗೆಳೆಯನಿಗೆ ಹೇಳಿದಾಗ ಮದುವೆಗೆ ಒಪ್ಪುವುದಿಲ್ಲ.

ಮದುವೆಯಾಗ ಬೇಕಾದರೆ ‘ಇಸ್ಲಾಂ’ ಧರ್ಮಕ್ಕೆ ಮತಾಂತರವಾಗಬೇಕೆಂದು ಹೇಳುವ ಸತ್ಯವನ್ನು ಚಲನಚಿತ್ರದ ಮೂಲಕ ಹೇಳಲಾಗಿದೆ. ಮಾಧ್ಯಮಗಳಲ್ಲಿ ಹಲವು ಮುಸ್ಲಿಂ ನಾಯಕರು ಬಹಿರಂಗ ವಾಗಿ ತಮ್ಮ ಧರ್ಮದಲ್ಲಿ ಮದುವೆಯಾಗುವ ಮುನ್ನ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದ ಇಸ್ಲಾಂ ಧರ್ಮಕ್ಕೆ ಆಕೆ ಮತಾಂತರವಾಗ ಬೇಕಾಗುತ್ತದೆ. ಆಕೆ ಮತಾಂತರವಾದ ನಂತರ ‘ಬುರ್ಖಾ’ ಧರಿಸುವ ದೃಶ್ಯವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಆಕೆ ಮತಾಂ
ತರವಾದ ನಂತರ ಮದುವೆಯ ಸಮಯದಲ್ಲಿ ಗೆಳೆಯ ಕಾಣೆಯಾಗಿಬಿಡುತ್ತಾನೆ. ಮಸೀದಿಯ ಮೌಲ್ವಿ ಆಕೆಯನ್ನು ಒಪ್ಪಿಸಿ
ಮತ್ತೊಬ್ಬನನ್ನು ಆಕೆಗೆ ಮದುವೆ ಮಾಡಿಸುತ್ತಾನೆ. ಅಲ್ಲಿಯೂ ಅಷ್ಟೇ ಆಕೆ ಇಸ್ಲಾಂ ಧರ್ಮದಲ್ಲಿನ ಎರಡನೇ ಮದುವೆಯ
ಬಗ್ಗೆ ಪ್ರಶ್ನಿಸಿದಾಗ ಇಲ್ಲಸಲ್ಲದ ಸಬೂಬು ನೀಡುತ್ತಾನೆ.

ಆಕೆಯನ್ನು ಮೋಸದಿಂದ ‘ಐಸಿಸ್’ ಉಗ್ರನೊಂದಿಗೆ ಮದುವೆ ಮಾಡಿಸಲಾಗುತ್ತದೆ. ಒಂದು ದೃಶ್ಯದಲ್ಲಿ ಆಕೆ ಮದುವೆಯಾದ ಐಸಿಸ್ ಉಗ್ರನ ಕರಾಳ ಮನಸ್ಥಿತಿಯನ್ನು ತೋರಿಸಲಾಗಿದೆ. ಗರ್ಭವತಿಯಾಗಿರುವ ಸಮಯದಲ್ಲಿ ಆಕೆಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆಕೆಯ ಜೊತೆ ಸೆಕ್ಸ್ ಮಾಡುತ್ತಾನೆ. ಆಕೆ ಅಳುತ್ತಿದ್ದರೂ ಸಹ ತಲೆಕೆಡಿಸಿಕೊಳ್ಳದ ಆಕೆಯ ಜೊತೆ ಲೈಂಗಿಕ ಸಂಪರ್ಕದಲ್ಲಿ ತೊಡಗಿರುತ್ತಾನೆ. ಆಕೆಯ ಮದುವೆಯ ಸಂದರ್ಭದಲ್ಲಿ ಅವಳ ಅಮ್ಮ ಮಸೀದಿಯ ಬಳಿ ಬಂದು ಪರಿಪರಿಯಾಗಿ ಅಂಗಲಾಚಿ ಬೇಡಿ, ಮೌಲ್ವಿಯನ್ನು ಬೇಡಿಕೊಳ್ಳುತ್ತಾಳೆ ಆ ವ್ಯಕ್ತಿ ಆಕೆಯ ಮಾತನ್ನು ಕೇಳುವುದಿಲ್ಲ. ಮೂವರು ಗೆಳತಿಯರಿಗೆ ನಿರಂತರ ವಾಗಿ ಮಾದಕ ವಸ್ತುಗಳನ್ನು ನೀಡಿ ಸದಾ ನಶೆಯಲ್ಲಿರುವಂತೆ ನೋಡಿಕೊಳ್ಳಲಾಗಿರುತ್ತದೆ. ಹಾಗಾಗಿ ಅವರಿಗೆ ಏನೇ ಹೇಳಿದರೂ ತಲೆಗೆ ತಟ್ಟುವುದಿಲ್ಲ. ಅದರಲ್ಲೂ ಹಿಂದೂ ಹೆಣ್ಣು ಮಗಳ ತಲೆಯಲ್ಲಿ ಇಸ್ಲಾಂ ಬಿಟ್ಟರೆ ಬೇರೇನೂ ಇರುವುದಿಲ್ಲ ವೆಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಸಿನಿಮಾದ ದೃಶ್ಯವೊಂದರಲ್ಲಿ ಗೋಡೆಯ ಮೇಲೆ ‘ನ್ಯಾಷನಲಿಸಂ ಈಸ್ ಹರಾಮ್’ ಎಂಬ ಪೋಸ್ಟರ್ ಪ್ರಿಯತಮನ ಮನೆಯಲ್ಲಿ
ಕಾಣಿಸುತ್ತದೆ. ಸಂವಿಧಾನ ಮತ್ತು ಧರ್ಮದ ನಡುವಣ ಆಯ್ಕೆಯಲ್ಲಿ ಧರ್ಮವನ್ನೇ ಆಯ್ಕೆ ಮಾಡುಕೊಳ್ಳುತ್ತೇವೆಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದ್ದ ಹಲವು ಮುಸ್ಲಿಂ ಮುಖಂಡರ ಮನಸ್ಥಿತಿ ಈ ಪೋಸ್ಟರ್ ಮೂಲಕ ನೆನಪಾಗುತ್ತದೆ. ಕಮ್ಯುನಿಸ್ಟ್ ಕುಟುಂಬದ ಹೆಣ್ಣು ಮಗಳಿಗೆ ಮಾದಕ ವಸ್ತು ನೀಡಿ ಆಕೆಯ ಮೊಬೈಲ್ ಇಂದ ನಗ್ನ ಫೋಟೋ ಗಳನ್ನು ಕಳಿಸಿಕೊಂಡು ಆಕೆಯನ್ನು ಹೆದರಿಸುವ ದೃಶ್ಯ ಸಿನಿಮಾದಲ್ಲಿದೆ.

ಆಕೆಗೆ ಈ ಯುವಕರ ಸಂಚು ತಿಳಿಯುತ್ತಲೇ ಹಾಸ್ಟೆಲ್ ಬಿಟ್ಟು ತನ್ನ ಮನೆಗೆ ವಾಪಸಾಗುತ್ತಾಳೆ. ತನ್ನ ತಂದೆಯೆಡೆಗೆ ಮುಖ ಮಾಡಿ ತನಗೆ ಇಷ್ಟೆಲ್ಲಾ ಹೇಳಿಕೊಟ್ಟ ನೀವು ನಿಮ್ಮ ಸ್ವಾರ್ಥಕ್ಕಾಗಿ ಯಾಕೆ ಹಿಂದೂ ಧರ್ಮದ ದೇವರುಗಳ ಬಗ್ಗೆ ಹೇಳಿಕೊಡಲಿಲ್ಲ? ಧರ್ಮ ರಕ್ಷಕರ ವಿಷಯಗಳನ್ನು ಯಾಕೆ ತನಗೆ ಚಿಕ್ಕಂದಿನಿಂದಲೂ ಹೇಳಿಕೊಡಲಿಲ್ಲ? ಕೇರಳದಲ್ಲಿ ನಡೆಯುತ್ತಿರುವ ಲವ್
ಜಿಹಾದ್ ಎಲ್ಲರ ನಿದ್ದೆ ಕೆಡಿಸಿದೆ. ಅತ್ತ ಮತಾಂತರ ಮಾಡುತ್ತಿದ್ದಂತಹ ಕ್ರಿಶ್ಚಿಯನ್ ಮಿಷನರಿಗಳ ಮನೆಯ ಹೆಣ್ಣು ಮಕ್ಕಳನ್ನೂ ಉಗ್ರರು ಬಿಡುತ್ತಿಲ್ಲ. ಕಮ್ಯುನಿಸ್ಟರ ಮನೆಯ ಹೆಣ್ಣು ಮಕ್ಕಳನ್ನೂ ಉಗ್ರರು ಬಿಡುತ್ತಿಲ್ಲ.

ಕಮ್ಯುನಿಸ್ಟರ ಮನೆಯ ಹೆಣ್ಣುಮಕ್ಕಳಿಗೆ ಹಿಂದೂ ಧರ್ಮದ ಆಚರಣೆ ಮತ್ತು ದೇವರ ಬಗ್ಗೆ ಹೇಳಿ ಕೊಟ್ಟಿದ್ದರೆ ಆಕೆ ಮುಸ್ಲಿಂ ಹೆಣ್ಣುಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು. ಒಂದು ಅಂದಾಜಿನ ಪ್ರಕಾರ ಕೇರಳ ರಾಜ್ಯದಲ್ಲಿ ಸುಮಾರು ೩೨,೦೦೦ ಹೆಣ್ಣು ಮಕ್ಕಳು ಮತಾಂತರ ಗೊಂಡಿದ್ದಾರಂತೆ. ಈ ಕುರಿತು ಚಿತ್ರ ತಂಡ ಮಾಹಿತಿ ಹಕ್ಕು ಆಯೋಗದ ಅಡಿಯಲ್ಲಿ ಸರ್ಕಾರವನ್ನು ಕೇಳಿದಾಗ ’ಡಿಡಿಡಿ.ಜಿqsZಞoZಚಿeZ.ಟ್ಟಜ’ ವೆಬ್ ಸೈಟ್ ವಿಳಾಸವನ್ನು ನೀಡಿ ಅಲ್ಲಿ ಮಾಹಿತಿ ಪಡೆಯಿರಿ ಎಂದು ಹೇಳಲಾಗಿದೆ.
ಆದರೆ ಚಿತ್ರ ತಂಡದ ಪ್ರಕಾರ ಈ ವೆಬ್ ಸೈಟ್ ಅಸ್ತಿತ್ವದಲ್ಲೇ ಇಲ್ಲ.

ಈ ಕುರಿತು ಕೇರಳ ಸರ್ಕಾರ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಕಿರಿಕ್ ಮಾಡಿತ್ತು. ಐಸಿಸ್ ಉಗ್ರರಿಗೆ ‘ಸೆಕ್ಸ್ ಸ್ಲೇವ್’ಗಳಾಗಿ ಬೇಕಿರುವ ಹೆಣ್ಣು ಮಕ್ಕಳನ್ನು ಯೂರೋಪಿನ ಹಲವು ದೇಶಗಳಿಂದ ಇದೇ ರೀತಿ ಮೋಸ ಮಾಡಿ ಮತಾಂತರ ಮಾಡಿ ಕರೆತರಲಾಗುತ್ತಿತ್ತು. ಅಲ್ಲಿನ ಯುವತಿಯರನ್ನು ಮರುಳು ಮಾಡುವುದು ಬಹಳ ಸುಲಭ. ಭಾರತೀಯ ಸೈನಿಕರು ತಮ್ಮ ಕುಟುಂಬದವರನ್ನು ಬಿಟ್ಟು ತಿಂಗಳುಗಳ ಕಾಲ ಗಡಿಯಲ್ಲಿ ದೇಶ ಸೇವೆ ಮಾಡುತ್ತಿರುತ್ತಾರೆ. ಐಸಿಸ್ ಉಗ್ರರು ಜಗತ್ತಿನಲ್ಲಿ ಬಾಂಬ್ ಸೋಟಿಸಲು ಸಿದ್ಧರಾ ಗಿರುತ್ತಾರೆ.

ಬಾಂಬ್ ಸೋಟಿಸಲು ಸಿದ್ಧರಾಗಿರುವ ಉಗ್ರರಿಗೆ ಸುಖ ನೀಡಲು ಹೆಣ್ಣು ಮಕ್ಕಳ ಅವಶ್ಯಕತೆಯಂತೆ, ತಮ್ಮನ್ನು ತಾವು ಸೋಟಿಸಿಕೊಂಡು ಸಾಯುವವರಿಗೆ ಲೈಂಗಿಕ ತೃಷೆ. ದೇವರ ನಾಡಿನಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ ಪ್ರಕರಣಗಳ ಒಂದು ಪ್ರಕರಣದ ಸತ್ಯಾಸತ್ಯತೆಯ ಮೇಲೆ ‘ಕೇರಳ ಫೈಲ್ಸ್’ ಚಿತ್ರ ನಿರ್ಮಾಣ ಮಾಡಲಾಗಿದೆ. ಈ ರೀತಿಯ ಹಲವು ಪ್ರಕರಣಗಳು ಕೇರಳ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆಯೆಂಬುದು ಸತ್ಯ. ಈ ಪ್ರಕರಣದಲ್ಲಿ ಐಸಿಸ್ ಉಗ್ರರ ಕೈಗೆ ಸಿಕ್ಕು ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಹಿಂದೂ ಹೆಣ್ಣು ಮಗಳು ಉಗ್ರರಿಂದ ತಪ್ಪಿಸಿಕೊಂಡು, ಅಮೆರಿಕಾದ ನಿಯಂತ್ರಣದಲ್ಲಿರುವ ಇರಾನಿನ ಸ್ಥಳವೊಂದಕ್ಕೆ ಬಂದು, ವಿಚಾರಣೆಯ ಸಂದರ್ಭದಲ್ಲಿ ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾಳೆ.

ಕೇರಳ ರಾಜ್ಯ ಸರ್ಕಾರ ೨೦೧೪ ರಲ್ಲಿ ತನ್ನ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆ ’Pಊಐ’ ಸಂಘಟನೆಯ ಕೈವಾಡವಿದೆಯೆಂದು ನ್ಯಾಯಾಲಯದಲ್ಲಿ ಹೇಳಿತ್ತು. ಕೇರಳದ ಪಾದ್ರಿಗಳು ತಮ್ಮ ಧರ್ಮದ ಹೆಣ್ಣುಮಕ್ಕಳ ಮೇಲಾಗು ತ್ತಿರುವ ‘ಲವ್ ಜಿಹಾದ್’ ಪ್ರಕರಣಗಳ ಬಗ್ಗೆ ಹೇಳಿದ್ದರು. ಕೇರಳದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗುತ್ತಿವೆ.
ಐಸಿಸ್ ಉಗ್ರ ಸಂಘಟನೆ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಅಲ್ಲಲ್ಲಿ ತನ್ನ ಬೇರುಗಳನ್ನು ಇನ್ನೂ ಉಳಿಸಿಕೊಂಡಿದೆ.

ಚಿತ್ರದ ದೃಶ್ಯವೊಂದ ರಲ್ಲಿ ಕ್ರಿಶ್ಚಿಯನ್ ಹೆಣ್ಣು ಮಗಳು ಪೋಲೀಸರ ಎದುರು, ಕೆಲವು ವರ್ಷದಲ್ಲಿ ಕೇರಳ ಇಸ್ಲಾಮಿಕ್
ರಾಜ್ಯವಾಗುತ್ತದೆ ಯೆಂದು ಹೇಳುವಾಗ ಒಂದು ರೀತಿಯ ಭಯದ ವಾತಾವರಣ ಕಣ್ಣ ಮುಂದೆ ಬರುತ್ತದೆ. ಕೇರಳದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಗಳ ವಿಷಯವನ್ನು ಈ ಸಿನಿಮಾ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿರುವ ಚಿತ್ರ ತಂಡಕ್ಕೆ ಅಭಿ ನಂದನೆಗಳು. ಈ ಸಿನಿಮಾ ೩೭ ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಯೂರೋಪಿನ ಸಾವಿರಾರು ಯುವತಿಯರು ಇದೇ ಮಾದರಿ ಯಲ್ಲಿ ಐಸಿಸ್ ಉಗ್ರರ ‘ಸೆಕ್ಸ್ ಸ್ಲೇವ್’ ಗಳಾ ಗಿರುವ ವಿಷಯ ಚಿತ್ರದಲ್ಲಿದೆ. ದೇವರ ನಾಡಿನಲ್ಲಿ ಸದ್ದಿಲ್ಲದೇ ನಡೆದ ನರಕ ಸದೃಶ ಘಟನೆಗಳನ್ನು ಚಿತ್ರದಲ್ಲಿ ತೋರಿಸುವ ಮೂಲಕ ನಿರ್ಮಾಪಕರು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!