Friday, 22nd November 2024

ಮೆಕಾಲೆ ಶಿಕ್ಷಣಕ್ಕೆ ಎಳ್ಳು ನೀರು ಬಿಟ್ಟ ಎನ್‌ಇಪಿ

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಯೂರೋಪಿನ ಜನರು ಕಾಡಿನಲ್ಲಿ ಬೇಟೆಯಾಡಿ, ಮೈ ಮೇಲೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ಬರುತ್ತಿಲ್ಲದ ಕಾಲಘಟ್ಟದಲ್ಲಿ ಸರಸ್ವತಿ ನದಿ ತಟದ ನಾಗರಿಕತೆಯ ಡಿಯಲ್ಲಿ ನಗರಗಳನ್ನು ಕಟ್ಟಿಕೊಂಡು ಹಿಂದೂ ಸಂಪ್ರದಾಯಗಳನ್ನು ಆಚರಿಸಿಕೊಂಡು ಜೀವನ ನಡೆಸುತ್ತಿದ್ದಂತಹ  ದೇಶವಾಗಿತ್ತು ಭಾರತ.

4500 ವರ್ಷಗಳ ಹಿಂದೆಯೇ ಸತ್ತವರ ಅಂತ್ಯ ಸಂಸ್ಕಾರವನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬ ನಾಗರಿಕತೆಯನ್ನು ಬೆಳೆಸಿಕೊಂಡಿದ್ದಂತಹ ದೇಶ ಭಾರತ. ಕುದುರೆಯ ರಥ, ಶತ್ರುಗಳಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದಂತಹ ಆಯುಧಗಳು, ಆಕಾಶಕಾಯಗಳನ್ನು ನೋಡಲು ಬಳಸುತ್ತಿದ್ದಂತಹ ದೂರದರ್ಶಕಗಳು, ಹೆಣ್ಣು ಮಕ್ಕಳ ಆಭರಣಗಳು, ಹೀಗೆ ಹತ್ತು ಹಲವಾರು ಮುಂದುವರೆದ ನಾಗರಿಕತೆ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿತ್ತು. ರಾಮಾಯಣ ಹಾಗೂ ಮಹಾ ಭಾರತದ ಕಾಲದಲ್ಲಿ ಪಾಶ್ಚಾತ್ಯರ ಸುಳಿವೇ ಇರಲಿಲ್ಲ, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಅತ್ಯುನ್ನತ ಶಿಕ್ಷಣ ನೀತಿಯನ್ನು ಅನುಸರಿಸು ತ್ತಿದ್ದರು.

ಆದರೆ ಭಾರತಕ್ಕೆ ಭಂಡ ಬ್ರಿಟಿಷರು ಪುರಾತನ ಭಾರತೀಯ ಶಿಕ್ಷಣ ವ್ಯವಸ್ಥೆಯ ಬುನಾದಿಯನ್ನು ಅಲುಗಾಡಿಸಿ ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯ ಮುಂದೆ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ನಾಶಪಡಿಸುವುದು ಬ್ರಿಟಿಷರ ಸ್ಪಷ್ಟ ಉದ್ದೇಶವಾಗಿತ್ತು. 1835ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಮೆಕಾಲೆ ಭಾರತೀಯ ಶಿಕ್ಷಣ ಪದ್ದತಿಯನ್ನು ಕುರಿತ ವಿಷಯವೊಂದನ್ನು ಮಂಡಿಸಿದ್ದ, ಆತನ ವಿಷಯ ಮಂಡನೆಯಲ್ಲಿ ‘ಸಂಸ್ಕೃತ’ ಭಾಷಾ ಶಿಕ್ಷಣದ ಕಡೆಗಣನೆ ಸ್ಪಷ್ಟವಾಗಿತ್ತು. ಭಾರತೀಯರು ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿತರೆ ಉಪಯೋಗವಿಲ್ಲ, ಬದಲಾಗಿ ಬ್ರಿಟಿಷರ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯ ಬೇಕೆಂದು ಆತ ಸ್ಪಷ್ಟವಾಗಿ ಹೇಳಿದ್ದ.

ಸಂಸ್ಕೃತದಲ್ಲಿ ಕಲಿತ ವಿದ್ಯಾರ್ಥಿಯನ್ನು ಪಾಶ್ಚಿಮಾತ್ಯ ಜಗತ್ತು ಕೀಳರಿಮೆಯಿಂದ ನೋಡುತ್ತದೆಯೆಂಬ ಸುಳ್ಳನ್ನು ಆತ ಹೇಳಿದ್ದ. ಕೇವಲ ಇಂಗ್ಲಿಷ್ ಶಿಕ್ಷಣ ಮಾಧ್ಯಮ ವೊಂದೇ ಭಾರತೀಯರಿಗೆ ಉತ್ತಮ ಭವಿಷ್ಯ ರೂಪಿಸಿ ಕೊಡುತ್ತದೆಯೆಂಬುದು ಆತನ ವಾದವಾಗಿತ್ತು. ಭಾರತದಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ಮುಂದುವರೆಸಿದರೆ ಶಿಕ್ಷಣ ಪದ್ಧತಿಯು ಸರಿಯಾದ ದಾರಿ ಯಲ್ಲಿರುವುದಿಲ್ಲವೆಂದು ಮೆಕಾಲೆಯ ವಾದ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಶಾಲಾ ಶಿಕ್ಷಣದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ತಲೆಯಲ್ಲಿ ತುಂಬಿ, ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯನ್ನು ಹೊಸಕಿ ಹಾಕುವುದು ಆತನ ಸ್ಪಷ್ಟ ಉದ್ದೇಶವಾಗಿತ್ತು.

ಬ್ರಿಟಿಷರು ಮೈ ಮೇಲೆ ಬಟ್ಟೆ ಹಾಕಿಕೊಳ್ಳಲು ಬರದಂತಹ ಕಾಲದಲ್ಲಿ ಚಿನ್ನದ ಆಭರಣಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಂತಹ ದೇಶ ಭಾರತ, ಇಂತಹ ವರು ಭಾರತೀಯ ಶಿಕ್ಷಣ ಪದ್ದತಿಯನ್ನು ಸರಿಯಿಲ್ಲವೆಂದು ತೆಗಳಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯನ್ನು ಹೊಸಕಿ ಹಾಕಿದ್ದರು. ಬ್ರಿಟಿಷರಿಗೆ ಸದಾ ಬೆಂಬಲ ಸೂಚಿಸುತ್ತಿದ್ದಂತಹ ಕಮ್ಯುನಿಸ್ಟರು ಸ್ವಾತಂತ್ರ್ಯಾ ನಂತರ ಈ ವಿಷಯದಲ್ಲಿಯೂ ತಮ್ಮ ಬೆಂಬಲ ಸೂಚಿಸಿದ್ದರು, ಅದರ ಫಲವಾಗಿಯೇ ರೋಮಿಲಾ ಥಾಪರ್‌ ರಂತಹ ಕಮ್ಯುನಿ ಇತಿಹಾಸಕಾರರು ಭವ್ಯ ಭಾರತದ ಇತಿಹಾಸವನ್ನು ಮುಚ್ಚಿ ಹಾಕಿ ತಮಗಿಷ್ಟ ಬಂದಂತ ಇತಿಹಾಸವನ್ನು ಬರೆದರು.

ಅಂದಿನಿಂದ ಶುರುವಾದಂತಹ ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಗೆ ಆಗಾಗ ಅಲ್ಪ ಸ್ವಲ್ಪ ಬದಲಾವಣೆಗಳಾಗಿದ್ದರೂ ಸಹ ಅಮೂಲಾಗ್ರ ಬದಲಾವಣೆಯೇನು ಆಗಿರ ಲಿಲ್ಲ. ಪೀಳಿಗೆಗಳಿಗೆ ತಕ್ಕಂತೆ ಆಗಬೇಕಿದ್ದಂತಹ ಬದಲಾವಣೆಗಳನ್ನು ಆಡಳಿತ ನಡೆಸಿದ ಸರಕಾರ ಮಾಡಿರಲಿಲ್ಲ, ಕಮ್ಯುನಿಸ್ಟರ ಸಿಂಡಿಕೇಟ್ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ತಮಗಿಷ್ಟ ಬಂದಂತೆ ಬದಲಾಯಿಸಿದ್ದರು. ಶಿಕ್ಷಣ ಪದ್ದತಿಯಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಪರಿಚಯಿಸಲಿಲ್ಲ, ಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗೆ ವಿಜ್ಞಾನದ ಪರಿಚಯ ಮಾಡಲಿಲ್ಲ, ವ್ಯವಹಾರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗೆ ವಿeನದ ಪರಿಚಯ ಮಾಡಿಸಲಿಲ್ಲ, ವಿಜ್ಞಾನದ ವಿದ್ಯಾರ್ಥಿಗೆ ಸರಿಯಾದ ಭೂಗೋಳದ ಪರಿಚಯ ಮಾಡಿಸಲಿಲ್ಲ.

ಅಂದು ಭೂಗೋಳದ ಪರಿಚಯ ಮಾಡಿಸಿದ್ದರೆ, ಬಹುಷ್ಯ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದ ಭೂ ಭಾಗ ಎಂದೋ ಭಾರತದ ವಶವಾಗುತ್ತಿತ್ತು, ಚೀನಾ ದೇಶಕ್ಕೆ ನೆಹರು ಬಿಟ್ಟುಕೊಟ್ಟಂತಹ 36000 ಚ.ಕಿಮೀ ಭೂಭಾಗದ ವಿರುದ್ಧ ಪ್ರತಿಭಟನೆಗಳು ಅಂದೇ ದೇಶಾದ್ಯಂತ ನಡೆಯುತ್ತಿದ್ದವು. ದಶಕಗಳ ಕಾಲದ ಬೇಡಿಕೆ ಯಾಗಿದ್ದಂತಹ ಶಿಕ್ಷಣದಲ್ಲಿನ ಬಹುಮುಖ್ಯ ಬದಲಾವಣೆ ಈಗ ಆಗುತ್ತಿರುವುದು ಸಂತೋಷದ ವಿಷಯ, ನೂತನ ಶಿಕ್ಷಣ ಪದ್ದತಿಗೆ ಚಾಲನೆ ನೀಡಿರುವ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದೆ.

ನೂತನ ಪದ್ದತಿಯಲ್ಲಿ 5+3+3=4 ಸೂತ್ರದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ರೂಪಿಸಿದೆ. ಮಗುವಿನ ಮೂರನೇ ವರ್ಷದಿಂದ ಎಂಟನೇ ವರ್ಷದವರೆಗೆ ಮೊದಲ ಹಂತದ 5  ವರ್ಷದ ಶಿಕ್ಷಣ, ನಂತರ ಎಂಟರಿಂದ ಹನ್ನೊಂದರವರೆಗೂ ಮೂರು ವರ್ಷಗಳ ಕಾಲ ಮಧ್ಯಮ ಶಿಕ್ಷಣ, ಹನ್ನೊಂದರಿಂದ ಹದಿನಾಲ್ಕರವರೆಗೂ ಪ್ರೌಢ ಶಿಕ್ಷಣ, ಹದಿನಾಲ್ಕರಿಂದ ಹದಿನೆಂಟರವರೆಗೂ ಉನ್ನತ ಪ್ರೌಢ ಶಿಕ್ಷಣ ಪದ್ಧತಿಯನ್ನು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಮೊದಲ ಐದು ವರ್ಷದಲ್ಲಿ ಮಕ್ಕಳಿಗೆ ಹೆಚ್ಚಾಗಿ ಆಟದಿಂದ ಪಾಠ ಹೇಳಿಕೊಡುವ ನೀತಿಯನ್ನು ರೂಪಿಸಲಾಗಿದೆ. ಮೂರನೇ ವರ್ಷದಿಂದ ಆರಂಭವಾಗುವ ಮೊದಲ 5 ವರ್ಷಗಳ ಶಿಕ್ಷಣದ ನೀತಿಯಿಂದ ಅಂಗನವಾಡಿಗಳು ಸರಕಾರಿ ಶಾಲೆಗಳ ಜತೆಗೆ ವಿಲೀನಗೊಳ್ಳಲಿವೆ.

ಮೂರು ವರ್ಷ ತುಂಬಿದ ನಂತರ ನೇರವಾಗಿ ಶಾಲೆಯಲ್ಲಿಯೇ ಮೊದಲ ಐದು ವರ್ಷದ ವಿದ್ಯಾಭ್ಯಾಸವು ಮಕ್ಕಳಿಗೆ ಶುರುವಾಗುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ಅಂಗನವಾಡಿಯನ್ನು ಕೈಬಿಡುವ ಯೋಜನೆಯಿದ್ದು, ಇದರಿಂದ ಮಕ್ಕಳ ಬೆಳವಣಿಗೆಗೆ ನೀಡುತ್ತಿರುವ ಹಾಲು, ಮೊಟ್ಟೆಯಂತಹ ಸೌಲಭ್ಯಗಳಿಗೆ ಕತ್ತರಿ ಬೀಳುತ್ತದೆ ಯೆಂದು ಇತ್ತೀಚಿಗೆ ಮಂಗಳೂರಿನ ವಿದ್ಯಾರ್ಥಿ ಸಂಘಟನೆಯೊಂದು ಪ್ರತಿಭಟನೆ ಮಾಡಿತ್ತು. ಆದರೆ ನೂತನ ಶಿಕ್ಷಣ ನೀತಿಗೂ ಮಕ್ಕಳಿಗೆ ನೀಡುತ್ತಿದಂತಹ
ಸೌಲಭ್ಯಗಳಿಗೆಯೂ ಯಾವ ಸಂಬಂಧವೂ ಇಲ್ಲ, ನೂತನ ಶಿಕ್ಷಣ ನೀತಿಯಡಿಯಲ್ಲಿ ಅಂಗನವಾಡಿಯಲ್ಲಿ ಸಿಗುತ್ತಿದ್ದಂತಹ ಸೌಲಭ್ಯಗಳು ನೇರವಾಗಿ ಶಾಲೆಗಳಲ್ಲಿ
ಸಿಗುತ್ತದೆ ಹಾಗು ಅಂಗನವಾಡಿ ಶಿಕ್ಷಕರು ಶಾಲಾ ಶಿಕ್ಷಕರಾಗುತ್ತಾರೆ. ನೂತನ ಶಿಕ್ಷಣ ನೀತಿಯಲ್ಲಿ ಕಡ್ಡಾಯವಾಗಿ ಐದನೆಯ ತರಗತಿಯವರೆಗೂ ‘ಮಾತೃ ಭಾಷೆ’ಯಲ್ಲಿಯೇ ಶಿಕ್ಷಣ ಕಲಿಸಬೇಕಂತಿದೆ, ಉರ್ದು ಹೇರಿಕೆಯನ್ನು ಬದಿಗೊತ್ತಿ ಕೇವಲ ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಮಾಡುತ್ತಿದಂತಹ ಕನ್ನಡ ಹೋರಾಟಗಾರರು ಕೇಂದ್ರದ ಈ ನೀತಿಯ ಬಗ್ಗೆ ಒಂದು ಸಣ್ಣ ಪ್ರಶಂಸೆಯನ್ನೂ ಸಹ ಮಾಡಿಲ್ಲ.

ಮಾತೃಭಾಷೆಯಲ್ಲಿ ಶಿಕ್ಷಣ ಬೇಡ ’ಇಂಗ್ಲಿಷ್’ನಲ್ಲಿಯೇ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದ ಮೆಕಾಲೆಯ ಪಟಾಲಂಗಳಿಗೆ ಸರಕಾರದ ಈ ನೀತಿ ಮೆಣಸಿನಕಾಯಿ
ಇಟ್ಟುಕೊಂಡಂತಾಗಿದೆ. ಆದರೆ ಒಂದು ಸಣ್ಣ ಸಮಸ್ಯೆಯೆಂದರೆ ಕರ್ನಾಟಕದಲ್ಲಿ ಮಾತೃಭಾಷೆಯೆಂದರೆ ಕನ್ನಡ, ತುಳು, ಕೊಂಕಣಿ, ಕೂರ್ಗಿ ಭಾಷೆಗಳಿವೆ, ಸರಕಾರ
ಯಾವ ರೀತಿಯಲ್ಲಿ ಈ ನೀತಿಯನ್ನು ಎಲ್ಲ ಭಾಷೆಗಳನ್ನು ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿ ಅಳವಡಿಸುತ್ತದೆಯೆಂದು ಕಾಯ್ದು ನೋಡಬೇಕಿದೆ.

ನೂತನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ಓದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ, ಮಗುವಿನ ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ೬ನೆಯ ತರಗತಿಯ ಮಗು ತಾನು ಕಲಿತಿರುವ ವಿಷಯಗಳ ಪ್ರಾಯೋಗಿಕ ಬಳಕೆಯ ಬಗ್ಗೆ ತಿಳಿದುಕೊಳ್ಳಲು, ಕಂಪನಿಯೊಂದರ ಬಳಿ ತರಬೇತಿ ಪಡೆಯಬಹುದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿಯು ಪ್ರಾಯೋಗಿಕ ತರಬೇತಿಯನ್ನು ಪಡೆದರೆ ಶಾಲಾ ಶಿಕ್ಷಣ ಮುಗಿದ ಮೇಲೆ ಕೆಲಸಕ್ಕಾಗಿ ಅಲೆಯುವ ಪ್ರಮೇಯಗಳು ಕಡಿಮೆ ಯಾಗಲಿವೆ. ಈಗಿನ ಮಾಹಿತಿ ಹಾಗೂ ತಂತ್ರಜ್ಞಾನ ಯುಗದಲ್ಲಿ ಕ್ಷಣಕ್ಕೊಂದೆಂಬಂತೆ ತಂತ್ರಜ್ಞಾನಗಳು ಬದಲಾಗುತ್ತಿರುತ್ತವೆ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಣ್ಣ ವಯಸಿನಲ್ಲಿಯೇ ಮಕ್ಕಳಿಗೆ ಈ ವಿಷಯದಲ್ಲಿ ಅಧ್ಯಯನದ ಅವಶ್ಯಕತೆ ಇದೆ, ಹಾಗಾಗಿ ೬ನೆಯ ತರಗತಿಯಿಂದಲೇ ಮಕ್ಕಳು ವಿವಿಧ ಸಾಫ್ಟ್ ವೇರ್ ಅಭಿವೃದ್ಧಿಯ ಶಿಕ್ಷಣವನ್ನು ಪಡೆಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಹತ್ತನೇ ವಯಸ್ಸಿಗೇ ವಿದ್ಯಾರ್ಥಿಗಳು ಸಾಫ್ಟ್ ವೇರ್ ಅಭಿವೃದ್ಧಿಕಾರರಾಗಿ ಕೆಲಸಕ್ಕೆ ಸೇರಿದರೆ ಆಶ್ಚರ್ಯಪಡಬೇಕಿಲ್ಲ. ನೂತನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಯ ಮೌಲ್ಯ ಮಾಪನವು ಪರೀಕ್ಷೆಯಲ್ಲಿನ ಅಂಕ, ಆತನ ಬುದ್ಧಿಶಕ್ತಿ, ಆತನ ಸಂವಹನ ಕೌಶಲ್ಯ, ಆತನ ವ್ಯಕ್ತಿತ್ವ, ಆತನಲ್ಲಿನ ಮೌಲ್ಯಗಳ ನ್ನೊಳಗೊಂಡಿರುತ್ತದೆ. ಪ್ರತಿಯೊಂದಕ್ಕೂ ಗ್ರೇಡಿಂಗ್ ಆಧಾರದ ಮೇಲೆ ಮೌಲ್ಯ ಮಾಪನ ಮಾಡಲಾಗುತ್ತದೆ. ಶಿಕ್ಷಕ, ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರ ನ್ನೊಳಗೊಂಡಂತೆ ಮೂರು ಜನರು ಒಬ್ಬ ವಿದ್ಯಾರ್ಥಿಯ ಮೌಲ್ಯಮಾಪನ ಮಾಡುತ್ತಾರೆ.

ಪದವಿಪೂರ್ವ ಶಿಕ್ಷಣವೆಂಬ ಬೇರೆಯದ್ದೇ ವ್ಯವಸ್ಥೆಯಿಲ್ಲ,ಬದಲಾಗಿ ಶಾಲಾ ಶಿಕ್ಷಣದಲ್ಲಿಯೇ ಇದನ್ನು ಸೇರಿಸಲಾಗಿದೆ. ನಂತರ ಶಾಲೆಯನ್ನು ಮುಗಿಸಿದಂತಹ
ವಿದ್ಯಾರ್ಥಿಯು ಪದವಿಯನ್ನು ಪಡೆಯಲು ಕಾಲೇಜಿಗೆ ಸೇರುವುದಾದರೆ ಆತನಿಗೆ ಬಹಳಷ್ಟು ಸ್ವಾತಂತ್ರ್ಯವನ್ನು ನೀಡಲಾಗಿದೆ, ಈಗಿರುವ ಪದ್ಧತಿಯಂತೆ ಕಲಾ
ವಿಭಾಗವೆಂದರೆ ಮೂರು ವರ್ಷಗಳು ಆತ ಕೇವಲ ಕಲೆಗೆ ಸಂಬಂಧ ಪಟ್ಟಂತಹ ವಿಷಯವನ್ನೇ ಓದಬೇಕಂತಿಲ್ಲ ಅಥವಾ ಕೇವಲ ವಿeನಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನೇ ಓದಬೇಕಂತಿಲ್ಲ, ಬದಲಾಗಿ ತಾನು ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರೆ ಅದರ ಜೊತೆಗೆ ಇತಿಹಾಸವನ್ನೂ ಸಹ ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಅಥವಾ ವಾಣಿಜ್ಯವನ್ನೂ ಸಹ ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು.

ಬಹುತೇಕ ವಿಜ್ಞಾನದ ವಿದ್ಯಾರ್ಥಿಗಳಿಗೆ ವಾಣಿಜ್ಯದ ಅರಿವಿರುವುದಿಲ್ಲ. ವಾಣಿಜ್ಯದ ಅರಿವಿಲ್ಲವೆಂದರೆ ವಿeನದ ವಿದ್ಯಾರ್ಥಿಗಳು ಯಾವ ಸಂಶೋಧನೆ ಮಾಡಿದರೂ ಪ್ರಯೋಜನವಿರುವುದಿಲ್ಲ. ಬಹುತೇಕ ’ಸ್ಟಾರ್ಟ್ ಅಪ್’ಗಳ ವೈಫಲ್ಯಕ್ಕೆ ಮುಖ್ಯ ಕಾರಣ ವಾಣಿಜ್ಯ ಜ್ಞಾನದ ಅರಿವಿನ ಕೊರತೆ. ಆದರೆ ನೂತನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಯು ತನ್ನ ಸಂಶೋಧನೆಯ ಜೊತೆಗೆ ವಾಣಿಜ್ಯವನ್ನೂ ಸಹ ಆಯ್ಕೆ ಮಾಡಿಕೊಳ್ಳುವುದರಿಂದ ಆತನಿಗೆ ತನ್ನ ಸಂಶೋಧನೆಯ ಸಂಪೂರ್ಣ ಲಾಭ ಸಿಗುತ್ತದೆ. ಅದೇ ಸಮಯದಲ್ಲಿ ವಾಣಿಜ್ಯದ ವಿದ್ಯಾರ್ಥಿಯು ವಿಜ್ಞಾನದ ವಿಷಯವೊಂದನ್ನು ಆಯ್ಕೆ ಮಾಡಿಕೊಂಡರೆ ಸಂಶೋಧನೆಯ ಜ್ಞಾನ ಸಿಕ್ಕು ಆತನ
ವ್ಯವಹಾರಕ್ಕೆ ಅನುಕೂಲವಾಗುತ್ತದೆ.

ಇತಿಹಾಸ ತಿಳಿಯದವನು, ಇತಿಹಾಸವನ್ನು ಸೃಷ್ಟಿಸಲಾರನೆಂಬ ಮಾತಿದೆ, ಕೇವಲ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದಂತಹ ಇತಿಹಾಸ ನೂತನ ಶಿಕ್ಷಣ ನೀತಿಯಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೂ ಕಲಿಯಲು ಲಭ್ಯವಿದೆ. ನೂತನ ಶಿಕ್ಷಣ ಪದ್ದತಿಯಲ್ಲಿ ಪದವಿ ಶಿಕ್ಷಣವು ಅರ್ಧಕ್ಕೆ ಮೊಟಕಾಯಿತೆಂಬ ಆತಂಕವೇ ಇಲ್ಲ, ಅರ್ಧದಲ್ಲಿ ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ನಾಲ್ಕು ವರ್ಷಗಳ ಪದವಿ ಶಿಕ್ಷಣದಲ್ಲಿ, ಮೊದಲನೇ ವರ್ಷಕ್ಕೆ ವಿದ್ಯಾರ್ಥಿ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿದರೆ ಆತನಿಗೆ ಪ್ರಮಾಣಪತ್ರ ಸಿಗುತ್ತದೆ, ಎರಡನೇ ವರ್ಷದಲ್ಲಿ ಮೊಟಕುಗೊಳಿಸಿದರೆ ಡಿಪ್ಲೋಮೊ ಸಿಗುತ್ತದೆ, ಮೂರನೇ ವರ್ಷಕ್ಕೆ ಸಂಪೂರ್ಣ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ.

ನಾಲ್ಕನೆಯ ವರ್ಷದಲ್ಲಿ ಸಂಶೋಧನೆಯಲ್ಲಿ ಆಸಕ್ತಿಯಿದ್ದರೆ ಮುಂದುವರಿಸಬಹುದು. ಕೆಲವು ವಿದ್ಯಾರ್ಥಿಗಳಿಗೆ ಮೊದಲನೇ ವರ್ಷದಲ್ಲಿಯೇ ಕಲಿತ ವಿಷಯಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಕಾಗಿರುತ್ತದೆ, ಹಾಗಾಗಿ ಆತನು ಮತ್ತೆರಡು ವರ್ಷ ವ್ಯರ್ಥ ಮಾಡಲು ಇಚ್ಛಿಸುವುದಿಲ್ಲ, ಇಂತಹವರಿಗೆ ನೂತನ ಶಿಕ್ಷಣ
ಪದ್ಧತಿ ಸಹಾಯವಾಗಲಿದೆ. ತನ್ನ ಓದಿಗೆ ತಾತ್ಕಾಲಿಕ ವಿರಾಮವನ್ನು ನೀಡಿ ವಿದ್ಯಾರ್ಥಿಯು ಪುನಃ ತನ್ನ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಯ್ಕೆ ಯನ್ನು ನೂತನ ಪದ್ಧತಿಯಲ್ಲಿ ನೀಡಲಾಗಿದೆ. ಕೆಲವರು ಈ ಪದ್ಧತಿಯಿಂದ ಅರ್ಧದಲ್ಲಿ ಓದನ್ನು ಬಿಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆಯೆಂದು ವಾದ
ಮಾಡುತ್ತಿzರೆ, ಆದರೆ ನೂತನ ಶಿಕ್ಷಣ ನೀತಿಯಿಂದ ಅರ್ಧದಲ್ಲಿ ಓದನ್ನು ಬಿಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ.

ಪ್ರಸ್ತುತ ಇರುವ ಪದ್ಧತಿಯಲ್ಲಿ ಒಂದು ಅಥವಾ ಎರಡು ವಿಷಯದಲ್ಲಿ ಆಳವಾದ eನವಿಲ್ಲದ ಕಾರಣಕ್ಕಾಗಿ ವಿದ್ಯಾರ್ಥಿಗಳು 6 ವಿಷಯಗಳ ಪರೀಕ್ಷೆಯಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಉದಾಹರಣೆಗೆ ಮೊದಲನೇ ವರ್ಷದಲ್ಲಿ ಮೂಲ ಗಣಿತದಲ್ಲಿ ಉತ್ತೀರ್ಣನಾದಂತಹ ವಿದ್ಯಾರ್ಥಿಗೆ ಎರಡನೇ ವರ್ಷದಲ್ಲಿ ಓದಬೇಕಿರುವ ಸುಧಾರಿತ ಗಣಿತದಲ್ಲಿನ ಜ್ಞಾನ ಕಡಿಮೆಯಿರಬಹುದು, ಹಾಗಾಗಿ ಎರಡನೇ ವರ್ಷದಲ್ಲಿ ಸುಧಾರಿತ ಗಣಿತದಲ್ಲಿ ಅನುತ್ತೀರ್ಣ ನಾಗಿ, ಕೇವಲ ಒಂದೇ ಒಂದು ವಿಷಯದಿಂದ ಪದವಿ ಶಿಕ್ಷಣವನ್ನು ಅರ್ಧದಲ್ಲಿಯೇ ಬಿಟ್ಟಿರುವ ಲಕ್ಷಾಂತರ ಉದಾಹರಣೆಗಳಿವೆ.

ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ವಿದ್ಯಾರ್ಥಿ ಜೀವಶಾಸದಲ್ಲಿ ದುರ್ಬಲನಾಗಿರುವ ಕಾರಣಕ್ಕೆ ಅರ್ಧದಲ್ಲಿಯೇ ಪದವಿಯನ್ನು ಬಿಟ್ಟಿರುವ
ಉದಾಹರಣೆಗಳಿವೆ. ಇಷ್ಟು ದಿವಸ ಇಂತಹ ವಿದ್ಯಾರ್ಥಿಗಳಿಗೆ ವಾಣಿಜ್ಯದ ವಿಷಯ ಅಥವಾ ಕಲಾ ವಿಭಾಗದ ವಿಷಯವನ್ನು ಕಲೆತು ಪದವಿಯನ್ನು ಪೂರ್ಣ ಗೊಳಿಸುವ ಅವಕಾಶವೇ ಇರಲಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಒಂದು ವಿಭಾಗದ ವಿದ್ಯಾರ್ಥಿಯು ಮತ್ತೊಂದು ವಿಭಾಗದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುವುದರಿಂದ ಅರ್ಧದಲ್ಲಿ ಓದನ್ನು ನಿಲ್ಲಿಸುವವರ ಸಂಖ್ಯೆಯು ಗಣನೀಯವಾಗಿ ಇಳಿಯುತ್ತದೆ.

ನೂತನ ಶಿಕ್ಷಣ ನೀತಿಯಲ್ಲಿ ಒಂದು ವರ್ಷ ಪದವಿ ಪೂರೈಸಿದವನಿಗೂ ಪ್ರಮಾಣಪತ್ರ ಸಿಗುವ ಕಾರಣದಿಂದಾಗಿ ಅರ್ಧದಲ್ಲಿ ಶಿಕ್ಷಣವನ್ನು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಬದಲಾಗಿ ಅರ್ಧದಲ್ಲಿ ಪದವಿಯನ್ನು ಬಿಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ಹಲವು ದಶಕಗಳ ನಂತರ ಭಾರತೀಯ ಶಿಕ್ಷಣ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವ ಮೂಲಕ ಕೇಂದ್ರ ಸರಕಾರ ಬ್ರಿಟಿಷ್ ಶಿಕ್ಷಣ ನೀತಿಗೆ ತಿಲಾಂಜಲಿಯನ್ನಿಟ್ಟಿದೆ. ಪ್ರತಿಯೊಂದು ವಿಷಯವನ್ನೂ ವಿರೋಧಿಸುವ ವಿರೋಧ ಪಕ್ಷಗಳು ನೂತನ ಶಿಕ್ಷಣ ನೀತಿಯಲ್ಲಿನ ಹಲವು ಅಂಶಗಳನ್ನು ವಿರೋಧಿಸುತ್ತಿವೆ.

ನೂತನ ಶಿಕ್ಷಣ ನೀತಿಯನ್ನು ರಚಿಸುವ ಸಂದರ್ಭದಲ್ಲಿ ಕಮ್ಯುನಿಸ್ಟರನ್ನು ಮೂಲೆಗೆ ತಳ್ಳಿರುವುದರಿಂದ ಮೈ ಮೇಲೆ ಹುಳು ಬಿಟ್ಟುಕೊಂಡವರಂತಾಗಿದೆ ಅವರ ಪರಿಸ್ಥಿತಿ, ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗದೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ತಮ್ಮ ಸಿದ್ಧಾಂತವನ್ನು ಶಿಕ್ಷಣದ ಮೂಲಕ ಹೇಳಿ, ಹಲವಾರು ಸುಳ್ಳುಗಳನ್ನು ತುಂಬಿದ್ದ ಕಮ್ಯುನಿಸ್ಟರ ಬಂಡವಾಳ ನೂತನ ಶಿಕ್ಷಣ ನೀತಿಯಿಂದ ಬಯಲಾಗಿದೆ. ಮೊನ್ನೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನ ವೊಂದರಲ್ಲಿ ವಿದ್ಯಾರ್ಥಿ ನಾಯಕನೊಬ್ಬ ನೂತನ ಶಿಕ್ಷಣ ನೀತಿಯಲ್ಲಿ ಹೆಚ್ಚಾಗಿ ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ 5ಜಿ ಇಂಟೆರ್‌ನೆಟ್ ಬರಲಿದ್ದು ಅದರ ಸಾರಥ್ಯವನ್ನು ರಿಲಯ ಸಂಸ್ಥೆಯೂ ಹೊಂದಲಿರುವ ಕಾರಣ ಅವರಿಗೆ ಉಪಯೋಗವಾಗಲೆಂದು ನರೇಂದ್ರ ಮೋದಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಾರೆಂದು ಹೇಳುತ್ತಿದ್ದನ್ನು ಕೇಳಿ, ಅದೆಷ್ಟು ನಕ್ಕಿದ್ದಾನೆಂದರೆ, ವಿರೋದಿಸುವ ಭರದಲ್ಲಿ ಈ ಮಟ್ಟಕ್ಕಿಳಿಯುವುದೇ ? ಇನ್ನು ಕೆಲವು ಅತೃತ್ಪ ಆತ್ಮಗಳು ನೂತನ ಶಿಕ್ಷಣ ನೀತಿಯನ್ನು ಕೇಸರೀಕರಣದ ಹೇರಿಕೆಯೆಂದು ಬೊಗಳುತ್ತಿವೆ, ಟಿಪ್ಪು ಸುಲ್ತಾನನ ಕಾಲದ ಉರ್ದು ಹೇರಿಕೆ, ಹಸಿರೀಕರಣದ ಹೇರಿಕೆಯ ಬಗ್ಗೆ ತಮ್ಮ ತುಟಿಗಳಿಗೆ ಬೀಗ ಹಾಕಿಕೊಂಡಿರುವವರು ಕಂಡ ಕಂಡಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ವನ್ನು ದೂರುವ ಕೆಲಸ ಮಾಡುತ್ತಿರುತ್ತಾರೆ.

ನೂತನ ಶಿಕ್ಷಣ ನೀತಿಯನ್ನು ಮೊಟ್ಟಮೊದಲಿಗೆ ಅಳವಡಿಸಿಕೊಳ್ಳುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹೆಮ್ಮೆಯ ರಾಜ್ಯ ಕರ್ನಾಟಕ, ನೂತನ ವಿಚಾರಗಳನ್ನು
ಅಳವಡಿಸಿಕೊಳ್ಳುವುದರಲ್ಲಿ ಸದಾ ಮುಂದಿರುವ ಕರ್ನಾಟಕ ರಾಜ್ಯ ಈ ವಿಷಯದಲ್ಲಿಯೂ ನಂಬರ್ ಒನ್. ಭಾರತದಂತಹ ದೇಶದಲ್ಲಿ ಕ್ರಾಂತಿಯೊಂದನ್ನು ಮಾಡ
ಬಯಸಿದಾಗ ವಿರೋಧಿಗಳು ಬೊಗಳುವುದು ಸಹಜ, ತಲೆಬುಡವಿಲ್ಲದೆ ಮಾತನಾಡುವ ವಿರೋಧಿಗಳ ಬಗ್ಗೆ ಹೆಚ್ಚು ಗಮನ ಹರಿಸದೆ ನೂತನ ಶಿಕ್ಷಣ ನೀತಿಯನ್ನು
ಅಳವಡಿಸಿಕೊಂಡು ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿಗೆ ತಿಲಾಂಜಲಿ ಇಟ್ಟಾಗಿದೆ.