Sunday, 15th December 2024

ಮಹಾತ್ಮ ಗಾಂಧೀಜಿ: ಅದೆಷ್ಟು ದ್ವಂದ್ವ ?

ದಾಸ್ ಕ್ಯಾಪಿಟಲ್‌

dascapital1205@gmail.com

ಗಾಂಧಿಯವರ 3 ಧ್ಯೇಯಗಳಲ್ಲೊಂದು ಹಿಂದೂ-ಮುಸ್ಲಿಂ ಐಕ್ಯತೆ. ಯಾವ ಮತದಲ್ಲಿ ಸಮರಸದ ಬದುಕು ಸಾಧ್ಯ ವಾಗುತ್ತದೋ ಅಂಥಲ್ಲಿ ಐಕ್ಯತೆಗೆ ಮೌಲ್ಯವಿದೆ. ನನ್ನ ಮತವನ್ನು, ಅದರ ಸಿದ್ಧಾಂತವನ್ನು ಒಪ್ಪು, ಇಲ್ಲವಾದಲ್ಲಿ ನಿನ್ನನ್ನು ಸಹಿಸುವುದಿಲ್ಲ ಎಂಬ ವೈಚಾರಿಕ ಕಾಠಿಣ್ಯ ಹೊಂದಿರುವ ಮತಗಳೊಂದಿಗೆ ಹೇಗೆ ಐಕ್ಯತೆ ಸಾಧಿಸುವುದು?
ಮುಸಲ್ಮಾನರು ಹಿಂದೂಗಳನ್ನು ಮತಾಂತರಿಸುತ್ತಲೇ ಹೋಗಬೇಕು, ಆದರೆ ಹಿಂದೂಗಳು ಮುಸ್ಲಿಮರನ್ನು ಮರು ಮತಾಂತರಿಸಬಾರದು, ಅದರೊಂದಿಗೆ ಸೆಟೆದು ನಿಲ್ಲದೆ ಶಾಂತಿಮಂತ್ರ ಜಪಿಸಬೇಕು ಎಂಬ ಮೂರ್ಖಧ್ಯೇಯವನ್ನು ಸ್ವಾತಂತ್ರ್ಯಾ ನಂತರವೂ ಮುಂದುವರಿಸುತ್ತ ಬಂದಿರುವುದರ ಪ್ರತಿಫಲ ಗೊತ್ತೇ ಇದೆ.

ನಮ್ಮ ಹಿಂದೆ-ಮುಂದೆ ಈಗಲೂ ನಡೆಯುವ ಹುನ್ನಾರವನ್ನೂ ಅದು ನಮಗೆ ಚೆನ್ನಾಗಿಯೇ ಅರ್ಥಮಾಡಿಸುತ್ತಿವೆ. ಹೀಗಿರುವಾಗ ಯಾರು ಯಾರನ್ನು ಓಲೈಸಬೇಕು, ಒಪ್ಪಬೇಕು? ಆದ್ದರಿಂದ ಅವರನ್ನು ಅವರ ಮತದಲ್ಲಿಯ ಅಂಧಶ್ರದ್ಧೆ, ವೈಚಾರಿಕ ಕಾಠಿಣ್ಯ, ಅವೈಜ್ಞಾನಿಕತೆ, ಅಮಾನವೀಯತೆ, ದುಡಿಮೆಯಲ್ಲಿ ಅಶ್ರದ್ಧೆ, ಅಸಹಬಾಳ್ವೆಯ ತತ್ತ್ವದ ವಿದ್ಯಾಭ್ಯಾಸ, ಅಸಂಬದ್ಧ ಜೀವನದೃಷ್ಟಿ- ಇವುಗಳಿಂದ ಹೊರ ಬರುವಂತೆ ಮಾಡಬೇಕು.

ವಿಶ್ವದೃಷ್ಟಿಯ ಜಾತಿ- ಮತಗಳಿಲ್ಲದ ಮನುಷ್ಯ ಮತದೊಳಗೆ ಬರುವಂತೆ ಅವಕಾಶಗಳನ್ನು ತೆರೆಯಬೇಕು. ಇದನ್ನು ಬಿಟ್ಟು ಹಿಂದೂ-ಮುಸ್ಲಿಂ ಏಕತೆಯೆಂದರೆ ಹಿಂದೂಗಳು ಗುಲಾಮರಾಗುವುದು ಎಂದಾಗಬಾರದು. ಇದು ಹಿಂದೂಸ್ತಾನ. ಹಿಂದೂ ಎಂಬುದು ರಾಷ್ಟ್ರವಾಚಕ, ಧರ್ಮವಾಚಕವಲ್ಲ. ಇಲ್ಲಿರುವವರೆಲ್ಲರೂ ಹಿಂದೂಗಳೇ. ಹಿಂದೂಗಳೆಲ್ಲರೂ ಒಟ್ಟಾಗಬೇಕೆಂಬುದು ಸಮರ್ಥನೀಯವೇ ಸರಿ! ನಮ್ಮದು ಸನಾತನ ಧರ್ಮ.

ಸನಾತನವೆಂಬುದು ಸಿರಿಯಾ, ರಷ್ಯಾದಿಂದ ಹಿಡಿದು ಜಪಾನ್, ಚೀನಾ ತನಕ ಇರುವಂಥದ್ದು. ಮೆಕ್ಸಿಕೋ, ದಕ್ಷಿಣ ಅಮೆರಿಕ ಗಳಲ್ಲೂ ‘ಭರತ ವರ್ಷ’ವೆಂಬ ವಿಸ್ತಾರ ಭಾಗದಲ್ಲಿ, ಅಂದಿನ ಮೆಸಪೊಟಾಮಿಯಾ, ಆನೆಟೋಲಿಯಂ, ಸುಮೇರಿಯಾ,
ಅಸೀರಿಯಾ, ಐಗುಪ್ತ (ಈಜಿಪ್ಟ್) ಮೊದಲಾದೆಡೆಗಳಲ್ಲೂ ಹರಡಿ ಗೌರವಾನ್ವಿತವಾಗಿದ್ದುದು ಸನಾತನ ಧರ್ಮ. ಇಸ್ಲಾಂ
ಹುಟ್ಟಿದ ಮೇಲೆ ಸಿಂಧೂನದಿಯ ಈಚೆಗೆ ಸುಭದ್ರವಾಗಿದ್ದ ಇದನ್ನೇ ‘ಹಿಂದೂ’ ಎಂದು ಕರೆದದ್ದು. ನಾವಲ್ಲ!

ಗಾಂಧಿಯವರ ಪ್ರಕಾರ ಹಿಂದೂ-ಮುಸ್ಲಿಂ ಐಕ್ಯತೆಯೆಂದರೆ ಮುಸ್ಲಿಮರನ್ನು ಓಲೈಸುವುದು. ಯಾವ ಮಟ್ಟಿಗೆ ಅಂದರೆ, ಅವರೆಲ್ಲರನ್ನೂ ಒಂದು ರಾಷ್ಟ್ರವಾಗಿ ಮಾಡಬಹುದಾದಷ್ಟು! ರಾಷ್ಟ್ರ ವಿಭಜನೆಗೆ 1942ರ ಅವರು ಬ್ರಿಟಿಷರಿಗೆ ನಿರಾಕ್ಷೇಪಣಾ ಪತ್ರ ಬರೆದುಕೊಟ್ಟಿದ್ದನ್ನು ಮಧುಲಿಮಯೆ ಉಖಿಸಿzರೆ. ಈ ವಿಷಯದಲ್ಲಿ ಗಾಂಧಿಯವರ ದ್ವಂದ್ವ, ಸ್ಪಷ್ಟಗೋಚರ. ಯಾರಿಗೂ ಯೋಗ್ಯವೂ ಮಾದರಿಯೂ ಆಗಲಾರದ ಆದರ್ಶವಿದು. ಇನ್ನು ಗಾಂಧಿಯವರ ರಾಷ್ಟ್ರಭಕ್ತಿ, ರಾಷ್ಟ್ರೀಯ ಧ್ಯೇಯವನ್ನು ಓದಿಕೊಂಡವರಿಗೆ ಭ್ರಮನಿರಸನವಾಗುತ್ತದೆ.

ಖಿಲಾಫತ್ ಚಳವಳಿಯಲ್ಲಿ ಅನಗತ್ಯವಾಗಿ ದೇಶವನ್ನು ತೊಡಗಿಸಿದ ಗಾಂಧಿ, ತುರ್ಕಿಯ ಮುಸ್ಲಿಮರ, ಅರಬ್ಬಿಯವರ, ಇತರರ ಉತ್ಸಾಹಕ್ಕಿಂತ ಮುಂದೆ ಹೋಗಿ, ‘ಭಾರತ ಸ್ವಾತಂತ್ರ್ಯಕ್ಕಿಂತ ಮುಸ್ಲಿಮರಿಗೆ ಖಲೀಫರ ಅಧಿಪತ್ಯ, ಪ್ರತಿಷ್ಠಾಪನೆ ಹೆಚ್ಚು ಮುಖ್ಯ’ ಎಂಬ ‘ತಲೆಕೆಳಗಾದ ಆದ್ಯತೆ’ಯ ಸ್ಥಾನ ನೀಡಿದರು! ಪರಿಣಾಮವಾಗಿ ಕೇರಳದಲ್ಲಿ ಮೋಪ್ಲಾ ನರಮೇಧ, ಸ್ತ್ರೀರ ಮಾನಭಂಗ ವಾದಾಗ ಮುಸ್ಲಿಮರು ತಮ್ಮ ಧರ್ಮದಂತೆಯೇ ನಡೆಯುತ್ತಿದ್ದಾರೆ, ತಪ್ಪಲ್ಲ ಎಂಬ ಸಮರ್ಥನೆ ನೀಡಿದರು!

೨ನೇ ಮಹಾಯುದ್ಧದ ವೇಳೆ ಗಾಂಽಯವರು ಬ್ರಿಟಿಷ್ ಪ್ರಧಾನಿಗೆ ‘ಹಿಟ್ಲರ್ ದುಷ್ಟ. ಆದರೆ, ನೀವು ಅವನೊಡನೆ ಕಾದುವು ದಕ್ಕಿಂತ ಅಹಿಂಸಾತ್ಮಕವಾಗಿ ಬ್ರಿಟಿಷ್ ನೆಲವನ್ನು ಅವನಿಗೆ ಬಿಟ್ಟುಕೊಡಿ. ಅದೇ ಗೌರವ’ ಎಂದು ಪತ್ರ ಬರೆದಿದ್ದರು. 1947ರ ಏಪ್ರಿಲ್ ೬ ರಂದು ಗಾಂಧಿ ಹೇಳಿದ್ದು: ‘ಹಿಂದೂಗಳನ್ನು ಸಾಮೂಹಿಕವಾಗಿ ಇಲ್ಲವಾಗಿಸಲು ಮುಸ್ಲಿಮರು ಸಂಕಲ್ಪಿಸಿ ಯತ್ನಿಸಿ ದರೂ, ಹಿಂದೂಗಳು ಮುಸ್ಲಿಮರ ವಿರುದ್ಧ ಕೋಪಗೊಳ್ಳಬಾರದು. ಅವರ ಕತ್ತಿಯ ಬಾಯಿಗೆ ಒಡ್ಡಿ ಕೊಂದರೂ ನಾವು ವೀರರಾಗಿ ಮರಣವನ್ನಪ್ಪಬೇಕು.

ಹೇಗೂ ನಾವು ಪುನರ್ಜನ್ಮ ಪಡೆಯುವುದು ನಿಶ್ಚಿತ. ಹುಟ್ಟು-ಸಾವು ವಿಧಿನಿಯಮ. ಇದಕ್ಕೇಕೆ ದುಃಖ? ಸಾಯುವಾಗಲೂ ನಗು
ನಗುತ್ತಲೇ ಸತ್ತರೆ ನಮಗೆ ನವಜೀವನಕ್ಕೆ ಪ್ರವೇಶ ಸಿಗುತ್ತದೆ. ಹೊಸ ಹಿಂದೂಸ್ತಾನವನ್ನು ಹೀಗೆ ಹುಟ್ಟುಹಾಕೋಣ’. ಕಾಶ್ಮೀರ, ಬಂಗಾಳ, ಪಾಕಿಸ್ತಾನದಲ್ಲಿ ಅಮಾಯಕ ಹಿಂದೂಗಳನ್ನು ಮುಸ್ಲಿಮರು ನಿರ್ದಯವಾಗಿ ಕೊಲ್ಲುತ್ತಿದ್ದರು. ಆದರೆ ಅವರೆಲ್ಲ ಗಾಂಧಿ ಯವರಿಗೆ ‘ವೀರ ಮುಸಲ್ಮಾನರು’, ‘ದೈವಭಕ್ತರು’ ಎನಿಸಿದರೆ, ದೇಶಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ್, ಆಜಾದ್, ರಾಜಗುರು, ಸುಖದೇವ್, ಧಿಂಗ್ರಾ, ಉದಮ್ ಸಿಂಗರು ಭಯೋತ್ಪಾದಕರಾಗಿ ಕಂಡರು. ಇದೆಂಥ ಹುಚ್ಚುತನ!

ಭಾರತದಲ್ಲಿರುವ ಮುಸ್ಲಿಮರು ಅತಂತ್ರರಾಗಿದ್ದಾರೆಂದು ಪಾಕಿಗಳ ಮನಕ್ಕೆ ಎಂದೂ ಅನಿಸುವುದಿಲ್ಲವೇನೋ! ಏಕೆಂದರೆ ನಾವು ಸೆಕ್ಯುಲರಿಸಂ ಅನ್ನು ಪಾಲಿಸುತ್ತೇವೆ. ಆದರೆ, ಪಾಕ್‌ನಲ್ಲಿರುವ ‘ಹಿಂದೂಗಳು’ ಅತಂತ್ರರು ಎಂದು ನಮಗೆ ಅನಿಸುವು ದಿಲ್ಲ. ಯಾಕೆಂದರೆ ನಮ್ಮ ಸೆಕ್ಯುಲರಿಸಂ ಅಲ್ಲಿಯೂ ಮುಸ್ಲಿಮರನ್ನು ಕಾಪಾಡುತ್ತದೆ. ಸೋಗಲಾಡಿ ಸೆಕ್ಯುಲರಿಸಮ್ಮಿನ
ದುರಂತವಿದು! ಈ ಚಿಂತನೆ ನಮ್ಮ ದಾರಿಯನ್ನು ತಪ್ಪಿಸುತ್ತಲೇ ಇದೆ!

ನಾವು ಭಾರತೀಯರಾಗೋದು ಯಾವಾಗ? ಗಾಂಧಿಯವರ ಅಸಹಕಾರ ಚಳವಳಿಯ ಬಿರುಸು ನೇತಾಜಿಯವರ ವಿರುದ್ಧ ಇದ್ದಷ್ಟೇ ಬ್ರಿಟಿಷರ ವಿರುದ್ಧ ಇರಲಿಲ್ಲವೆನಿಸುತ್ತದೆ! ಏನೂ ಮಾಡದಂತೆ ನೇತಾಜಿಯವರನ್ನು ಕಟ್ಟಿಹಾಕುವುದೇ ಇವರ ಎಲ್ಲ ಕೃತ್ಯಗಳ ಧ್ಯೇಯೋದ್ದೇಶವಾಗಿತ್ತು. ನೇತಾಜಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಯಾವ ಸಭೆಗೂ ಹೋಗದೆ ಅಸಹಕಾರ ಮಾಡಿದವರು ಗಾಂಧಿ.

‘ಗಾಂಧಿಯವರ ಸಮ್ಮತಿಯಿಲ್ಲದೆ ಅಧ್ಯಕ್ಷರು ಏನನ್ನೂ ಮಾಡಬಾರದು’ ಎಂಬ ನಿರ್ಧಾರವನ್ನು ನೆಹರೂ ಪರಿವಾರದ
ಗೋವಿಂದ ವಲ್ಲಭ ಪಂಥರು ವಿಽಸಿದರು. ಗಾಂಧಿಯವರಿಲ್ಲದ ಸಭೆಗಳಲ್ಲಿ ಅವರ ಪಟವನ್ನಿಟ್ಟು ಅವರ ಭಕ್ತರು ಅಧಿಕಾರ
ಚಲಾಯಿಸಿದರು. ಇಂಥ ವಾತಾವರಣದಲ್ಲಿರಲು ಒಪ್ಪದ ಸ್ವಾಭಿಮಾನಿ ಬೋಸರು ರಾಜೀನಾಮೆ ನೀಡಿ ಹೊರಬಂದು
‘ಇಂಡಿಯನ್ ನ್ಯಾಷನಲ್ ಆರ್ಮಿ’ (ಐಎನ್‌ಎ) ಕಟ್ಟಿದ್ಧರು. ಪರಿಣಾಮ ಮತ್ತೆ ಚುನಾವಣೆ. ಪೂರ್ವಯೋಜನೆಯಂತೆ
ನೆಹರು ಗೆದ್ದರು, ಪೂರ್ವಯೋಜಿತ ಕಾರ್ಯಸೂಚಿ ಗೆದ್ದಿತು. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿ ಹಳಿತಪ್ಪಿತು!

ಗಾಂಧೀಜಿ ಹೆಜ್ಜೆಹೆಜ್ಜೆಗೂ ಸುಭಾಸರನ್ನು ಕಾಡಿದರು. ವಿಮಾನಾಪಘಾತದಲ್ಲಿ ನೇತಾಜಿ ನಿಧನರಾದರು ಎಂಬ ಸುದ್ದಿಗೆ ಗಾಂಧೀಜಿ ಪ್ರತಿಕ್ರಿಯಿಸಿದ್ದು ಹೀಗೆ: ‘ಯಾರಾದರೂ ಅವರ ಶವಭಸ್ಮವನ್ನು ತೋರಿಸಿದರೂ ಅದನ್ನು ನಂಬಲಾರೆ..!
ಅವರೆ ಅಡಗಿರಬೇಕು. ಮತ್ತೆ ಬರುವ ಚೇತನವದು, ಸಕಾಲಕ್ಕಾಗಿ ಕಾಯುತ್ತಿರಬೇಕು. ಹಾಗೆ ದುರಂತದಲ್ಲಿ ಸಾಯುವ ಜೀವ ಅದಲ್ಲ. ಅವರ ‘ಐಎನ್‌ಎ’ ಸಮ್ಮೋಹಿನಿ ನಮ್ಮೆಲ್ಲರ ಮೇಲೆ ಪರಿಣಾಮ ಬೀರಿದೆ.

ನೇತಾಜಿ ಹೆಸರಿಗೆ ಮಾಂತ್ರಿಕ ಶಕ್ತಿಯಿದೆ. ಸುಭಾಷ್ ಸತ್ತಿಲ್ಲ. ಹಾಗೆ ಸಾಯುವ ವರಲ್ಲ ಅವರು’. ಇದೆಂಥ ದ್ವಂದ್ವ ನಿಲುವು ನೋಡಿ ಗಾಂಧಿಯವರದು! ಅಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಯಲ್ಲಿ ‘ಪಟ್ಟಾಭಿ ಸೋತರೆ ಅದು ನನ್ನ ರಾಜಕೀಯ ಜೀವನದ ಸೋಲು’ ಎಂದು ಸುಭಾಷರ ಗೆಲುವಿಗೆ ಅಡ್ಡಿಮಾಡಿ, ಕೊನೆಗೆ ಕಾಂಗ್ರೆಸ್ಸಿನಿಂದಲೇ ಅವರು ಹೊರಹೋಗುವಂತೆ ಮಾಡಿ, ಅವರಿಲ್ಲದ ಸಂದರ್ಭದಲ್ಲಿ ಅವರ ಬಗ್ಗೆ ಹೀಗೆ ಮಾತನಾಡಿದ ಗಾಂಧಿಯವರ ಮಾತಿನಲ್ಲಿ ‘ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ’ ಕಾಣುತ್ತದೆಯೇ? ಅಥವಾ ನೈತಿಕವಾದ ನಿಷ್ಠುರ ಸತ್ಯಗಳನ್ನು ಮರೆಮಾಚಿದ ಅತಿಸೌಜನ್ಯ ಕಾಣುತ್ತದೆಯೇ?
ಬ್ರಿಟಿಷರೊಡನೆ ಅಸಹಕಾರಾತ್ಮಕ, ಅಹಿಂಸಾತ್ಮಕ ಚಳವಳಿಗೆ ನಾಂದಿ ಹಾಡಿದರು ಗಾಂಧಿ.

ಇದನ್ನೇ ಬೋಸರು ಮುಂದುವರಿಸಿದರು: ಒಳಗಿಂದ ಬ್ರಿಟಿಷರಿಗೆ ಅಸಹಕಾರ ಮತ್ತು ಹೊರಗಿಂದ ಬ್ರಿಟಿಷರ ಶತ್ರುರಾಷ್ಟ್ರಗಳ ಸಹಾಯ ಪಡೆದು ವಿಮೋಚನೆಗೆ ಯತ್ನ- ಇದು ಭೋಸರ ನಡೆ. ಗಾಂಧಿಯವರಿಗೆ ಇದು ರುಚಿಸಲಿಲ್ಲ. ನೇತಾಜಿ ಗೆದ್ದರೆ ತನ್ನ ನಂಬಿಕೆಯ ‘ಅಹಿಂಸೆ’ ಗೆ ಸೋಲಾಗಿಬಿಡುತ್ತೆಂಬ ಭಯ. ಬೋಸರ ಅಹಿಂಸೆಯ ನಿರ್ವಚನ ಗಾಂಧೀಜಿಗೆ ಅರಿವಾಗಲೇ ಇಲ್ಲ! ಬೌದ್ಧಿಕ ಮತ್ತು ವೈಚಾರಿಕ ಚಿಂತನೆಯ ಮಟ್ಟಿಗೆ ತನಗೆ ಸತ್ಯವೆಂದು ತಿಳಿದುದದನ್ನು ಜಾರಿಗೆ ತರಲೇಬೇಕು, ಮತ್ತು ಎಲ್ಲರೂ
ಅದನ್ನು ಸಮ್ಮತಿಸಲೇಬೇಕೆಂಬ ಹಠಪ್ರವೃತ್ತಿಯ ಗಾಂಧಿಯವರಿಗೆ, ತೀರಾ ಕುತ್ತಿಗೆಗೆ ಬರುವಂಥ ವಿಪತ್ತೊಂದು ಭವಿಷ್ಯ
ದಲ್ಲಿ ಹುಟ್ಟಬಹುದು ಎಂಬುದರ ಸ್ಪಷ್ಟ ಅರಿವು ಇಲ್ಲವಾದ್ದರಿಂದ ಭಾರತದ ಒಟ್ಟೂ ನಡೆ ಆಗಲೂ ಈಗಲೂ ಹಳಿತಪ್ಪಿತು.

ಭಾರತದ ರಾಜಕಾರಣದಲ್ಲಿ ಇವರು ಪ್ರವೇಶಿಸಿ ಪಟೇಲರು ಪ್ರಧಾನಿಯಾಗುವುದನ್ನು ತಪ್ಪಿಸಿ ನೆಹರುರನ್ನು ಆ ಗಾದಿಯಲ್ಲಿ
ಕೂರಿಸಿದರು. ‘ಇದುವರೆಗೂ ಮಾಡಿರದ ತಪ್ಪನ್ನು ಮಾಡುತ್ತಿರುವಿರಿ’ ಎಂದು ಆಗಲೇ ಪಟೇಲರು ಗಾಂಧಿಯವರಿಗೆ
ಹೇಳಿದ್ದರು. ಗಾಂಧಿಯವರ ಜಿನ್ನಾ, ನೆಹರು ಪ್ರೇಮ, ಮುಸ್ಲಿಂ ಓಲೈಕೆಯ ತುಷ್ಟೀಕರಣ ನೀತಿ- ಇವೆಲ್ಲ ರಾಷ್ಟ್ರೀಯತೆಗೆ
ಮಾರಕವಾಗಿಲ್ಲ ಅಂದರೆ ಹೇಗೆ ನಂಬುವುದು? ಗಾಂಧಿಯವರ ಒಟ್ಟೂ ರಾಜಕೀಯ ನಿಲುವು, ಅಪ್ರಬುದ್ಧ ಸಿದ್ಧಾಂತಗಳು,
ಸೂತ್ರಗಳಿಂದಾಗಿಯೇ ಸ್ವಾತಂತ್ರ್ಯಪೂರ್ವದ ಭಾರತದ ರಾಜಕಾರಣದ ಹಳಿತಪ್ಪಿತು ಎಂದರೆ ತಪ್ಪೇ? ರಾಜಕೀಯದಲ್ಲಿ ಆಸಕ್ತಿಯಿಲ್ಲದ, ಆದರೆ ರಾಜಕಾರಣವನ್ನು ಬಿಟ್ಟು ಬದುಕಲಾಗದ ನನ್ನಂಥ ಸಾಮಾನ್ಯರು ಇಂಥವುಗಳ ಮಧ್ಯೆ ಹೇಗೆ ಏಗುವುದು? ಹಿಂದೂ-ಮುಸ್ಲಿಂ ಐಕ್ಯತೆ ರಾಜಕೀಯ ಬಂಡವಾಳವಾಗಿ, ದೇಶಕ್ಕೆ ಕಂಟಕವೂ ಸಂಸ್ಕೃತಿಗೆ ಕಳಂಕವೂ ಆಗಬಾರದೆಂಬ ಕಾಳಜಿಯಿಂದ ಈ ಮಾತನ್ನು ಬರೆಯುತ್ತಿದ್ದೇನೆ.

Islam is our religion, but Ramayana is our culture&- ಇದು ಇಂಡೋನೇಷ್ಯಾದವರ ಮಾತು. ಇದು ಇಲ್ಲಿಯ ಮುಸ್ಲಿಮರ ಮಾತೂ ಆದರೆ ಭಾರತ ಗೆದ್ದಂತೆ. ನಾವು ಭಾರತವನ್ನು ಗೆಲ್ಲಿಸಬೇಕು. ಭಾರತದಂಥ ರಾಷ್ಟ್ರದ ರಾಜಕೀಯದಲ್ಲಿ
ಗಾಂಧಿವಾದದ ಒಟ್ಟೂ ಮಿತಿಯೇ ನಮ್ಮನ್ನು ಅಸಹಾಯಕ ಸ್ಥಿತಿಗೆ ತಂದುಬಿಟ್ಟಿದೆ. ಕೇವಲ ಬ್ರಿಟಿಷರ ನಿಷ್ಠೆಯಾಗಿಯೇ ಉಳಿದು ಬಿಟ್ಟಿದೆ. ನಾವು ಸ-ಲತೆಯನ್ನು, ಸಬಲ ಪ್ರಜೆಗಳನ್ನು ಹೊಂದಲು ಸ್ವತಂತ್ರರಾಷ್ಟ್ರವಾಗಿ ಇನ್ನೂ ಪ್ರಯತ್ನಿಸುತ್ತಿದ್ದೇವೆ. ದಾಸ್ಯ ಮನೋಭಾವದಿಂದ ಹೊರಬಂದು ನಮ್ಮನ್ನು ನಾವು ಆಳಿಕೊಳ್ಳುವುದರಲ್ಲಿ ಮುತ್ಸದ್ದಿಗಳಾಗಲೇ ಇಲ್ಲ.

Right means for the right end-ಎಂಬ ಶುಕ್ರನೀತಿ ಆಗಲೂ ಬೇಕಿತ್ತು. ಈಗಲೂ ಬೇಕಿದೆ.