Saturday, 14th December 2024

ಮಂಡಲ್‌ ಎಂಬ ಅಜ್ಞಾತ ನಾಯಕನಿಗಾದ ಅನ್ಯಾಯ

ಅವಲೋಕನ

ಮಣ್ಣೆಮೋಹನ್

mohan68micropower@gmail.com

ನೆಹರು ಅವರೆಂದೂ ತಮ್ಮ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಬಿಡಲಿಲ್ಲ. ಪಾಕ್‌ನಿಂದ ಅಪಮಾನಿತರಾಗಿ ಬಂದ ದಲಿತ ನಾಯಕ ಮಂಡಲ್ ವಿಚಾರದಲ್ಲೂ ಹೀಗೇ ಮಾಡಿದರು. ಅಲ್ಪಸಂಖ್ಯಾತರೆಡೆಗೆ ಈ ಪರಿಯ ಕುರುಡು ಪ್ರಿತಿ ನೆಹರುಗೆ ಹುಟ್ಟಲು ಕಾರಣ ಒಗಟಾಗಿದೆ. ಎಷ್ಟಾದರೂ ಮೂಲದಲ್ಲಿ ನೆಹರು ಕೂಡ ಮುಸ್ಲಿಮರೇ!

ಭಾರತದಲ್ಲಿ ಎಲ್ಲಿಯವರೆಗೆ ಜಾತೀಯತೆ ಇರುತ್ತದೆಯೋ ಅಲ್ಲಿಯವರೆಗೂ ಭಾರ ತೀಯತೆ ಇರುವುದಿಲ್ಲ. ಎಲ್ಲಿವರೆಗೂ ಭಾರತೀಯತೆ ಇರುವುದಿಲ್ಲವೋ ಅಲ್ಲಿಯವರೆಗೂ ನಾವು ಈ ದೇಶವನ್ನು ಆಳಲು ಅಡ್ಡಿಯಿಲ್ಲ ಎಂಬುದು ಬ್ರಿಟಿಷ್ ಸರಕಾರದ ಸ್ಪಷ್ಟ ನಿಲುವಾಗಿತ್ತು. ಹಾಗಾಗಿಯೇ ಜಾತೀಯತೆ ಪೋಷಿ ಸಲು ಅವರು ಇನ್ನಿ ಲ್ಲದ ಸರ್ಕಸ್ ಮಾಡಿದರು. ಅದರಲ್ಲಿ ಯಶ ಕಂಡರು ಕೂಡ.

ಅವರು ದೇಶ ಬಿಟ್ಟು ಹೋಗಿ 75 ವರ್ಷಗಳಾದರೂ, ಅವರ ಒಡೆದಾಳುವ ನೀತಿಯೇ ಇನ್ನೂ ಚಾಲ್ತಿಯಲ್ಲಿರು ವುದು ದುರಂತ. ಇದೀಗ ದಲಿತ ಮತ್ತು ಮುಸ್ಲಿಮರನ್ನು ಒಟ್ಟುಗೂಡಿಸಿ, ಇತರರಿಗೆ ಮುಖಾಮುಖಿಯಾಗಿಸುವ ಅತಿರೇಕದ ಪ್ರಯತ್ನವೂ ನಡೆದಿದೆ. ಆದರೆ ಕಳೆದ 75 ವರ್ಷಗಳಿಂದ ಇವರ ಆಟ ನೊಡಿಕೊಂಡು ಬಂದಿರುವ ದಲಿತ ಮತ್ತು ಮುಸ್ಲಿಂ ಪ್ರಬುದ್ಧ ಮನಸ್ಸುಗಳು, ಇವರ ಕಪಟ ನಾಟಕಕ್ಕೆ ಸೊಪ್ಪು ಹಾಕಿಲ್ಲ.

ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಅಚಾತುರ್ಯದಿಂದ ಇಂಥ ಪ್ರಯತ್ನ ಆರಂಭಿಸಿದ ದಲಿತ ಮುಖಂಡರೊಬ್ಬರ ದುರಂತ ಬದುಕು ಈ ಸನ್ನಿವೇಶದಲ್ಲಿ ಎಲ್ಲರಿಗೂ ಪಾಠವಾಗಬೇಕಿದೆ. ಅದು ಅಂಬೇಡ್ಕರ್‌ರಷ್ಟೇ ಪ್ರತಿಭಾವಂತ ದಲಿತ ನಾಯಕರಾಗಿದ್ದ ಜೋಗೇಂದ್ರನಾಥ್ ಮಂಡಲ್ ಅವರದು. ಮಂಡಲ್ ಅವರಿಗಾದ ಭ್ರಮನಿರಸನ ಮತ್ತು ಅವರನ್ನು ತೆರೆಮರೆಗೆ ಸರಿಸಿದವರು ಯಾರು ಎನ್ನುವ ಸತ್ಯ ಇದೀಗ ಅನಾವರಣಗೊಳ್ಳಬೇಕಿದೆ. ಆ ಮೂಲಕ ದಲಿತೋ ದ್ಧಾರದ ಮುಖವಾಡ ಧರಿಸಿರುವ ಕಾಂಗ್ರೆಸ್‌ನ ನಿಜ ಸಂಸ್ಕೃತಿಯ ಬಣ್ಣ ಕೂಡ.

ಆಗಿನ ಬಂಗಾಳ ಪ್ರೆಸಿಡೆನ್ಸಿಯ ಇಂದಿನ ಬಾಂಗ್ಲಾದೇಶದ ಬಾರಿಸಾಲ್‌ನಲ್ಲಿ 1904, ಜ.29ರಲ್ಲಿ, ಹಿಂದುಳಿದ ಅಸ್ಪೃಶ್ಯ ಜನಾಂಗದ ನಾಮಶೂದ್ರ ಸಮು ದಾಯದಲ್ಲಿ ಜನಿಸಿದ ಜೋಗೇಂದ್ರನಾಥ್ ಮಂಡಲ್, ಅಂಬೇಡ್ಕರ್ ಅನುಯಾಯಿಯಾಗಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದವರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದಸ್ಯರಾಗಿದ್ದ ಮಂಡಲ್, ಅಂಬೇರ್ಡ್ಕ ಜತೆ ಗೂಡಿ ಬಂಗಾಳದಲ್ಲಿ ಪರಿಶಿಷ್ಟರ ಒಕ್ಕೂಟ ಸ್ಥಾಪಿಸಿದರು. ಈ ಒಕ್ಕೂಟವು, ಮೇಲ್ಜಾತಿಯವರಿಂದ ತುಳಿತಕ್ಕೊಳಗಾಗಿದ್ದೇವೆಂದು ಆರೋಪಿಸಿ, ಹಿಂದೂ ಮಹಾಸಭಾದ ವಿರುದ್ಧ ಸಂಘರ್ಷಕ್ಕಿಳಿಯಿತು.

ಬಂಗಾಳ ದಲ್ಲಿ ಸಾಮಾಜಿಕ ಕ್ಷೋಭೆಗೆ ಕಾರಣವಾಗಿದ್ದ ಹಿಂದೂ- ಮುಸ್ಲಿಂ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಶತ್ರುವಿನ ಶತ್ರು ಮಿತ್ರ ಎಂಬಂತೆ, ಮಂಡಲ್ ಮೇಲ್ಜಾತಿಯವರ ವಿರುದ್ಧದ ದ್ವೇಷದಿಂದ, ಮುಸ್ಲಿಮರೊಂದಿಗೆ ಬಾಂಧವ್ಯ ಬೆಳೆಸಿದರು. ಆ ಪ್ರಾಂತ್ಯದ ರಾಜಕೀಯ ಅಧಿಕಾರಕ್ಕಾಗಿ ಮುಸ್ಲಿಂ ಲೀಗನ್ನು ಬೆಂಬಲಿಸಿದರು. 1937ರಲ್ಲಿ ಭಾರತೀಯ ಪ್ರಾಂತೀಯ ಅಸೆಂಬ್ಲಿ ಚುನಾವಣೆಯಲ್ಲಿ ಬಖರ್‌ಗಂಜ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಶಾಲಿಯಾಗಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದರು. 1940ರಲ್ಲಿ ಅವರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ವಜಾ ಗೊಳಿಸಲಾಯಿತು.

ಕೂಡಲೇ ಮುಸ್ಲಿಂಲೀಗ್ ಸೇರಿದ ಅವರು ಆಗಿನ ಪೂರ್ವ ಬಂಗಾಳದ ಮುಸ್ಲಿಂ ಲೀಗ್ ಸರಕಾರದ ಹುಸೇನ್ ಶಹೀದ್ ಸುಹ್ರವರ್ದಿ ಸಂಪುಟದಲ್ಲಿ ಸಚಿವ ರಾದರು. 1946ರ ಅಕ್ಟೋಬರ್‌ನಲ್ಲಿ ರಚನೆಯಾದ ಭಾರತದ ಮಧ್ಯಂತರ ಸರಕಾರದಲ್ಲಿ ಮುಸ್ಲಿಂಲೀಗ್ ಭಾಗಿಯಾದಾಗ, ಅದರ ಅಧ್ಯಕ್ಷರಾಗಿದ್ದ ಜಿನ್ನಾ, ಲೀಗ್‌ನ ಐದು ಪ್ರತಿನಿಧಿಗಳಲ್ಲಿ ಮಂಡಲ್ ಅವರನ್ನೂ ನಾಮನಿರ್ದೇಶನ ಮಾಡಿದರು. ಕಾನೂನು ಖಾತೆ ನೀಡಯಿತು. ಅದೇ ವೇಳೆಗೆ ಆರಂಭವಾದ ಹಿಂದೂ- ಮುಸ್ಲಿಂ ಕೋಮು ಸಂಘರ್ಷದಲ್ಲಿ, ಮುಸ್ಲಿಮರ ವಿರುದ್ಧ ಹೋರಾಡಬಾರದೆಂದು ದಲಿತರಲ್ಲಿ ತಿಳಿವಳಿಕೆ ಮೂಡಿಸಲು ಮಂಡಲ್ ಪೂರ್ವ ಬಂಗಾಳದಾದ್ಯಂತ ಪ್ರವಾಸ ಕೈಗೊಂಡರು.

ಅಷ್ಟರಲ್ಲಿ, 15, ಆಗಸ್ಟ್ 1947ರಂದು ಭಾರತ ಸ್ವತಂತ್ರವಾಯಿತು. ಅಂಬೇಡ್ಕರ್ ವಿರೋಧದ ನಡುವೆಯೂ ನೆಹರು ಕುತಂತ್ರದಿಂದ ‘ಜಾತ್ಯತೀತ ಭಾರತ’ ವಾಯಿತು. ಆದರೆ ನಮ್ಮಿಂದ ವಿಭಜಿತ ಪಾಕಿಸ್ತಾನ ಧರ್ಮಾಧಾರಿತ ದೇಶವಾಯಿತು. ಮೊದಲೇ ನಿರ್ಧಾರಿತವಾದಂತೆ ಪಾಕ್ ಪ್ರಧಾನಿಯಾಗಿ ಲಿಯಾಖತ್ ಅಲಿ ಖಾನ್ ಆಯ್ಕೆಯಾದರು. ಮಂಡಲ್ ಅವರನ್ನು ಪಾಕಿಸ್ತಾನದ ಮೊದಲ ಕಾನೂನು ಮತ್ತು ಕಾರ್ಮಿಕ ಖಾತೆ ಮಂತ್ರಿಯಾಗಿ ನೇಮಿಸಲಾಯಿತು. ಆ ಮೂಲಕ ಒಂದು ದಶಕದ ಭಾರತದ ರಾಜಕೀಯ ವೃತ್ತಿಜೀವನ (1937-1947) ತೊರೆದು, ಪಾಕಿಸ್ತಾನದ ಪೌರತ್ವ ಪಡೆದು, ಅಲ್ಲಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದರು. ಪಾಕಿಸ್ತಾನದ 96 ಸಂಸ್ಥಾಪಕ ರಲ್ಲಿ ಒಬ್ಬರಾಗಿ ಸೇರ್ಪಡೆಗೊಂಡರು.

ಕ್ರಮೇಣ ಪಾಕ್‌ನ ನಿಜ ಬಣ್ಣ ಬಯಲಾಗ ತೊಡಗಿತು. ತಾವು ಮೋಸಕ್ಕೊಳಗಾದ ವಿಚಾರ ಮಂಡಲ್ ಅರಿವಿಗೆ ಬರತೊಡಗಿತು. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಅಲ್ಲಿನ ಮುಸ್ಲಿಮರು ದೌರ್ಜನ್ಯ ನಡೆತೊಡಗಿದರು. ಮಂಡಲ್, ಇದನ್ನು ಪ್ರಧಾನಿ ಲಿಯಾಖತ್ ಗಮನಕ್ಕೆ ತಂದರು. ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ಸಿಕ್ಕರೂ ಕಾರ್ಯರೂಪಕ್ಕೆ ಬರಲಿಲ್ಲ. ದೌರ್ಜನ್ಯ ಹೆಚ್ಚಾಗುತ್ತಿದಂತೆ, ಮಂಡಲ್ ಒತ್ತಾಯವೂ ಹೆಚ್ಚುತ್ತ ಹೋಯಿತು. ಪರಿ
ಣಾಮ ಮಂಡಲ್‌ರ ಖಾತೆ ಬದಲಾಯಿತು. ಪ್ರತಿಷ್ಠಿತ ಕಾನೂನು ಮತ್ತು ಕಾರ್ಮಿಕ ಖಾತೆಯಿಂದ ಅವರನ್ನು ತೆಗೆದು, 1 ಅ. 1949ರಂದು ಕಾಮನ್‌ವೆಲ್ತ್ ಮತ್ತು ಕಾಶ್ಮೀರ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಯಿತು.

ಇದು ದಲಿತ ನಾಯಕ ಮಂಡಲ್ ಅವರಿಗೆ ಪಾಕಿಸ್ತಾನ ಸರಕಾರ ಮಾಡಿದ ಘನಘೋರ ಅಪಮಾನ. ಮಂಡಲ್‌ಗೆ ಇದೀಗ ಉಸಿರುಗಟ್ಟಿದ ಅನುಭವ.
ಮುಸ್ಲಿಂ ದೌರ್ಜನ್ಯಕ್ಕೆ ಅಲ್ಲಿನ ಪೊಲೀಸರೇ ಬೆಂಗಾವಲಾಗಿರುವ ವಿಚಾರ ಮಂಡಲ್ ಗಮನಕ್ಕೆ ಬಂತು. ಅಲ್ಲಿಯವರೆಗೂ ಆಕಸ್ಮಿಕವಾಗಿ ಎಂದು ಭಾವಿ ಸಿದ್ದ ಮಂಡಲ್‌ಗೆ ಇದು ಪೂರ್ವನಿಯೋಜಿತ ಸಂಚಿನ ಭಾಗವೆಂಬ ಅರಿವಾಯಿತು. ಪೂರ್ವ ಬಂಗಾಳದಲ್ಲಿ ಹಿಂದೂ- ಮುಸ್ಲಿಮರ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ, ದಲಿತರು ಯಾವ ಮುಸ್ಲಿಮರ ವಿರುದ್ಧ ಭಾಗಿಯಾಗಬಾರದೆಂದು ಹೋರಾಟ ಮಾಡಿದ್ದರೋ, ಅದೇ ಮುಸ್ಲಿಮರು ಇಂದು ತಮಗೆ ರಕ್ಷಣೆ ನೀಡಿದ್ದ ದಲಿತರ ಮೇಲೆಯೇ ತಮ್ಮ ದೇಶದಲ್ಲಿ ದೌರ್ಜನ್ಯ ಎಸಗುತ್ತಿದ್ದರು.

ಮುಸ್ಲಿಂ ವ್ಯಕ್ತಿತ್ವದ ವಿರಾಟ್ ರೂಪ ಮಂಡಲ್‌ಗೆ ಪರಿಚಯವಾಗಿತ್ತು. ಬೇರೆ ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ತಗ್ಗಿಬಗ್ಗಿ ನಡೆಯುವಂತೆ ವರ್ತಿಸುವ ಮುಸ್ಲಿಮರು, ತಾವೇ ಸಾರ್ವಭೌಮರಾದಾಗ ಇತರ ಧರ್ಮೀಯರ ಮೇಲೆ ಮಾನವೀಯ ಲವಲೇಶವನ್ನೂ ತೋರದೆ ನಿರ್ಲಜ್ಜ ವಾಗಿ,
ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ಎಸಗುತ್ತಿದ್ದದ್ದು ಮಂಡಲ್ ಅವರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿತು. ತಮ್ಮ ಜೀವನದುದ್ದಕ್ಕೂ ದಲಿತರ ಹಿತಕ್ಕಾಗಿ ಹೋರಾಡಿದ ಮಂಡಲ್‌ಗೆ ಇದೀಗ ಸುಮ್ಮನಿರಲಾಗಲಿಲ್ಲ. ಬಲವಾದ ಪ್ರತಿಭಟನೆ ದಾಖಲಿಸಿದರು.

ಅದು ಅವರ ಮತ್ತು ಪ್ರಧಾನಿ ಲಿಯಾಖತ್ ನಡುವೆ ಕಲಹಕ್ಕೆ ಕಾರಣವಾಯಿತು. ಸಾಮಾಜಿಕ ಅನ್ಯಾಯ ಮತ್ತು ಮುಸ್ಲಿಮೇತರ ಹಿಂದೂ ಅಲ್ಪ ಸಂಖ್ಯಾತರ ವಿರುದ್ಧದ ಪಕ್ಷಪಾತ ಧೋರಣೆಯನ್ನು ಖಂಡಿಸಿ ಮಂಡಲ್ ಅವರು 8, ಅಕ್ಟೋಬರ್ 1950ರಂದು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸರಕಾರ ಮಂಡಲ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿತು. ಇದರಿಂದ ತಪ್ಪಿಸಿಕೊಳ್ಳಲು ಮಂಡಲ್ ಭಾರತಕ್ಕೆ ಪಲಾಯನ ಮಾಡಬೇಕಾಯಿತು. ಆ ಮೂಲಕ ಪಾಕ್ ತೊರೆದು ಭಾರತಕ್ಕೆ ಬಂದ 5 ಪ್ರಸಿದ್ಧ ವ್ಯಕ್ತಿಗಳಲ್ಲಿ ಮಂಡಲ್ ಒಬ್ಬರಾದರು. ಪಾಕಿಸ್ತಾನ
ಸರಕಾರ ಅವರನ್ನು ‘ದೇಶಭ್ರಷ್ಟ’ ಎಂದು ಘೋಷಿಸಿತು.

ಇದೆಲ್ಲವೂ ಭಾರತ ಸರಕಾರದ ಗಮನಕ್ಕೆ ಬಂದರೂ ಪ್ರಧಾನಿ ನೆಹರು ತುಟಿಪಿಟಿಕ್ಕೆನ್ನದೆ ಮೌನವಹಿಸಿದ್ದರು. ಹಿಂದೂಗಳ ವಿರುದ್ಧದ ದೌರ್ಜನ್ಯಕ್ಕೆ ಪ್ರತಿಭಟನೆ ರೂಪದಲ್ಲಿ ಎಚ್ಚರಿಕೆ ಸಂದೇಶವನ್ನು ಅವರು ಕಳಿಸಲಿಲ್ಲ. ದಲಿತ ನಾಯಕ ಮಂಡಲ್ ಅವರನ್ನು ದೇಶಭ್ರಷ್ಟಗೊಳಿಸಿದ್ದಕ್ಕೆ ಪ್ರತಿಯಾಗಿ
ತಮ್ಮ ಮಂತ್ರಿಮಂಡಲದಲ್ಲಿರುವ ಅಲ್ಪ ಸಂಖ್ಯಾತ ಸಚಿವರನ್ನು ಕೈಬಿಡುವ ಬೆದರಿಕೆಯನ್ನೊಡ್ಡಿದ್ದರೆ, ಪಾಕಿಸ್ತಾನ ಸರಕಾರ ತಂತಾನೇ ದಾರಿಗೆ ಬರುತ್ತಿತ್ತು. ಆದರೆ ಎಲ್ಲದಕ್ಕೂ ನೆಹರು ಕಡೆಯಿಂದ ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತಾಗಿತ್ತು. ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಏರಿಕೆ
ಅನುಪಾತಕ್ಕೆ ಹೋಲಿಸಿದರೆ ಶೇ.15ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾಗಿದೆ ಎಂಬುದೇ, ಪಾಕಿಸ್ತಾನದಲ್ಲಿ ಹಿಂದು ಗಳ ಮೆಲಿನ ಘನಘೋರ ದೌರ್ಜನ್ಯಕ್ಕೆ ಕೈಗನ್ನಡಿ.

ನೆಹರು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ನೇಮಿಸಿದರು. ಇದಿಷ್ಟೇ ಅಲ್ಲದೆ 1947-77ರ ನಡುವಿನ 30 ವರ್ಷಗಳ ಅವಽಯಲ್ಲಿ ೨೦ ವರ್ಷ(ಮೌಲಾನಾ ಅಬುಲ್ ಕಲಾಂ ಆಜಾದ್, ಹುಮಾಯೂನ್ ಕಬೀರ್, ಮೊಹಮ್ಮದಾಲಿ ಕರೀಮ್ ಚಾಗ್ಲಾ, ಫಕ್ರುದ್ದೀನ್ ಅಲಿ ಅಹ್ಮದ್, ಸೈಯಿದ್ ನೂರುಲ್ ಹಸನ್)ಗಳು ಅಲ್ಪಸಂಖ್ಯಾತರೇ ನಮ್ಮ ದೇಶದ ಶಿಕ್ಷಣ ಮಂತ್ರಿಗಳಾಗಿದ್ದರು. ನೆರೆ ರಾಷ್ಟ್ರ ಹಿಂದೂ ಮಂತ್ರಿಯೊಬ್ಬರನ್ನು ಇನ್ನಿಲ್ಲದಂತೆ ಅಪಮಾನಿಸಿ ದೇಶಭ್ರಷ್ಟರನ್ನಾಗಿ ಮಾಡಿದರೂ, ನೆಹರುಗೆ ಅದೇನೂ ಮಹತ್ವದ ವಿಚಾರವಾಗಿ ಕಾಣಿಸ ಲಿಲ್ಲ.

ಇಷ್ಟೆಲ್ಲದರ ನಡುವೆಯೂ ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೊಂದಿದೆ. ದೇಶಭ್ರಷ್ಟರಾಗಿ ಭಾರತಕ್ಕೆ ಮರಳಿದ ಮಂಡಲ್ ಅವರನ್ನು, ಪ್ರಧಾನಿ ನೆಹರು ಗೌರವ ಪೂರ್ಣವಾಗಿ ಸ್ವಾಗತಿಸಿ, ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಪಾಕ್‌ಗೆ ಸ್ಪಷ್ಟ ಸಂದೇಶ ಏಕೆಕೊಡಲಿಲ್ಲ? ಹಾಗೇ ದಲಿತ ಜನಾಂಗದ ಬಗ್ಗೆ ನೆಹರುಗಿದ್ದ ಒಲವೆಷ್ಟು? ಅಷ್ಟೇ ಏಕೆ? ಜೋಗೇಂದ್ರನಾಥ ಮಂಡಲ್ ಎಂಬ ಅಪ್ರತಿಮ ದಲಿತ ಹೋರಾಟಗಾರನನ್ನು ಇತಿಹಾಸದ ಅಜ್ಞಾತ
ನಾಯಕನನ್ನಾಗಿಸಿದ್ದು ಏಕೆ? ಕೂಡ.

ನೆಹರು ಸಣ್ಣತನ, ಗೋಸುಂಬೆತನ ನಮಗೆಲ್ಲರಿಗೂ ವೇದ್ಯ. ಈ ಎಲ್ಲ ನೋವುಗಳಲ್ಲಿ ಕೊರಗುತ್ತಲೇ ಮಂಡಲ್ ಅವರು 5 ಅಕ್ಟೋಬರ್ 1968 ರಂದು ಭಾರತದ ಪಶ್ಚಿಮ ಬಂಗಾಳದಲ್ಲಿ ದೇಶಭ್ರಷ್ಟರಾಗಿ ನಿಧನರಾದರು. ಸ್ವಾತಂತ್ರಾ ನಂತರ ಭಾರತದ ದುರಂತ ರಾಜಕಾರಣದ ಅಣಕವಾಗಿ ಇತಿಹಾಸದಿಂದ ಮರೆಮಾಚಲ್ಪಟ್ಟರು. ಸ್ವಾತಂತ್ರ್ಯ ಪಡೆದು 75 ವರ್ಷಗಳ ನಂತರವೂ ಇಂದಿಗೂ ದಲಿತ- ಮುಸ್ಲಿಂ ಸಮೀಕರಣದ ಸೂತ್ರ ಪಠಿಸುತ್ತಿರುವ ಕೆಲವು ಕುತಂತ್ರಿ
ಕಾಂಗಿ-ಕಮ್ಯುನಿಸ್ಟ್ ರಾಜಕಾರಣಿಗಳಿಗೆ, ಬುದ್ಧಿಜೀವಿ ಗಳಿಗೆ ಮಂಡಲ್ ಜೀವನಗಾಥೆ ಪಾಠವಾಗುವುದೆಂದು?