ವೀಕೆಂಡ್ ವಿತ್ ಮೋಹನ್
camohanbn@gmail.com
ಒಂದು ಕಾಲದಲ್ಲಿ, ಮಾಧ್ಯಮಗಳು ಪ್ರಕಟಿಸುವ ಸುದ್ದಿಗಳು ಸಮಾಜದಲ್ಲಿ ನರೇಟಿವ್ ಸೃಷ್ಟಿ ಮಾಡುತ್ತಿದ್ದವು. ಆದರೆ ಸಾಮಾಜಿಕ ಜಾಲತಾಣ ಗಳು ಮಾಧ್ಯಮ ವನ್ನೂ ಮೀರಿ ಬೆಳೆದು ನಿಂತಿರುವ ಈ ಕಾಲದಲ್ಲಿ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯ ಗಳನ್ನು ಮಾಧ್ಯಮಗಳು ತಮ್ಮ ಸುದ್ದಿಯಾಗಿಸಿ ಕೊಳ್ಳುತ್ತಿವೆ.
ಸಾಮಾಜಿಕ ಜಾಲತಾಣಗಳು ಅಭಿಪ್ರಾಯಗಳ ಅಭಿವ್ಯಕ್ತಿಯ ಬಹಿರಂಗ ವೇದಿಕೆಗಳಾಗಿಬಿಟ್ಟಿದ್ದು, ಮಾಧ್ಯಮ ಗಳಲ್ಲಿ ವರದಿಯಾಗುವ ಮುನ್ನವೇ ಹಲವು ವಿಷಯಗಳು ಈ ವೇದಿಕೆಗಳಲ್ಲಿ ವರದಿಯಾಗಿಬಿಡುತ್ತವೆ. ಈ ವೇದಿಕೆಗಳಲ್ಲಿ ಚರ್ಚೆಯಾಗುವ ವಿಷಯಗಳ ಸತ್ಯಾಸತ್ಯತೆ ಆಧರಿಸಿ ಮಾಧ್ಯಮಗಳಲ್ಲಿ ಚರ್ಚೆಗಳು ಶುರುವಾಗುತ್ತವೆ.
ಹಲವೊಮ್ಮೆ ಈ ಚರ್ಚೆಗಳೇ ರಾಜಕೀಯ ಪಕ್ಷದ ನರೇಟಿವ್ ಆಗಿ ಬದಲಾಗಿದ್ದೂ ಇದೆ. ಉಡುಪಿಯ ಕಾಲೇಜಿ ನಲ್ಲಿ ಕೆಲ ದಿನಗಳ ಹಿಂದೆ ನಡೆದ, ಹಿಂದೂ ಹುಡುಗಿಯರ ಶೌಚಾಲಯದ ವಿಡಿಯೋ ರೆಕಾರ್ಡಿಂಗ್ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಬೆಳಕಿಗೆ ಬಂದಿತ್ತು. ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸುಮಂತ್ ಈ ಪ್ರಕರಣದ ಮಾಹಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಾಕ್ಷಣ ಸಿಕ್ಕ ಸ್ಪಂದನೆಯಿಂದಾಗಿ ಮುಚ್ಚಿ ಹೋಗಿದ್ದ ಪ್ರಕರಣ ಬಯಲಾಯಿತು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾಲೇಜು ಆಡಳಿತ ಮಂಡಳಿ ವಿಡಿಯೋ ಚಿತ್ರೀಕರಿಸಿದ ಮುಸ್ಲಿಂ ಹುಡುಗಿಯರನ್ನು ಅಮಾನತುಗೊಳಿಸಿ ಸುಮ್ಮನಾಗಿತ್ತು. ಪೊಲೀಸರು ಸದ್ದಿಲ್ಲದೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.
ಇಂಥ ಹಲವು ವಿಷಯಗಳು ಸಾಮಾಜಿಕ ಜಾಲತಾಣಗಳಿಂದ ಮಾಧ್ಯಮದ ಮುಖ್ಯವಾಹಿನಿಗೆ ಬರುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ಒಳ್ಳೆಯ ವಿಷಯಗಳು ಮಾಧ್ಯಮಗಳನ್ನು ತಲುಪುವಂತೆ ಸುಳ್ಳುಸುದ್ದಿಗಳೂ ತಲುಪುತ್ತವೆ. ಚರ್ಚೆಯಾಗುವ ವಿಷಯಗಳ ಸತ್ಯಾಸತ್ಯತೆ ತಿಳಿಸಲು ಸತ್ಯಶೋಧನಾ ಸಂಸ್ಥೆ ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಮಾಡುತ್ತಿವೆ. ಭಾರತೀಯ ಇತಿಹಾಸದ ವಿಷಯಗಳು ಎಡಚರರ ಹತೋಟಿಗೆ ಸಿಕ್ಕಾಕ್ಷಣ ಶಾಲಾಪಠ್ಯಗಳಲ್ಲಿ ತಿರುಚಿದ ಇತಿಹಾಸದ ಅನಾವರಣವಾಗಿತ್ತು.
ನಂತರ ಮಾಧ್ಯಮ ಗಳನ್ನು ತೆಕ್ಕೆಗೆ ತೆಗೆದುಕೊಂಡ ಎಡಚರರು ಅಲ್ಲೂ ಸುಳ್ಳು ವಿಷಯಗಳನ್ನು ಚರ್ಚಿಸುತ್ತ ಸಮಾಜವಿರೋಧಿ ನರೇಟಿವ್ ಗಳನ್ನು ಸಿದ್ಧಪಡಿಸು ತ್ತಿದ್ದರು. ಈಗ ಸಾಮಾಜಿಕ ಜಾಲತಾಣ ಗಳನ್ನು ಬಳಸಿಕೊಂಡು ಹೀಗೇ ಮಾಡಿ ಹಲವು ಗಲಭೆಗಳಿಗೆ ಕಾರಣರಾಗಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಸತ್ಯಶೋಧನೆಯ ಹೆಸರಲ್ಲಿ ಚರ್ಚಾವಿಷಯದ ಆಯ್ದ ಭಾಗಗಳನ್ನಷ್ಟೇ ಬಳಸಿಕೊಂಡು ಒಂದು ಕೋಮಿನ ಪರ ನಿಲ್ಲುವ ಅಥವಾ ಎರಡು ಕೋಮುಗಳ ನಡುವೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಸರಕಾರದ ಪ್ರತಿ ವಿಷಯಕ್ಕೂ ಮೂಗುತೂರಿಸಿ ಮಾಧ್ಯಮಗಳಲ್ಲಿ ಮಾತಾಡುವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಪತ್ರಿಕೆ ಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ, ‘ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುವ ಕರ್ನಾಟಕದ ವಿಷಯಗಳ ಸತ್ಯಾಸತ್ಯತೆ ತಿಳಿಯಲು ಅಔS ನ್ಯೂಸ್ ಸಂಸ್ಥೆಯನ್ನು ಬಳಸಿಕೊಳ್ಳುತ್ತೇವೆ’ ಎಂದಿದ್ದರು.
ಈ ಸಂಸ್ಥೆಯ ಪಾಲುದಾರಮೊಹಮ್ಮದ್ ಜುಬೈರ್, ಸತ್ಯಶೋಧನೆ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಿರುವ ಉದಾಹರಣೆಗಳಿವೆ. ೨೦೦೮ರಲ್ಲಿ ಈತ ಹನುಮಂತನಿಗೆ ಅವಮಾನಿಸಿ ಮಾಡಿದ್ದ ಟ್ವೀಟ್ನಲ್ಲಿ ಒಂದು ಹೋಟೆಲ್ನ ನಾಮಫಲಕದಲ್ಲಿದ್ದ ‘ಹನಿಮೂನ್ ಹೋಟೆಲ್’ ಹೆಸರನ್ನು
‘ಹನುಮಾನ್ ಹೋಟೆಲ್’ ಎಂದು ಎಡಿಟ್ ಮಾಡಿದ್ದ. ಹಿಂದಿ ಚಲನಚಿತ್ರವೊಂದರ ಸನ್ನಿವೇಶವನ್ನು ಟ್ವೀಟ್ನಲ್ಲಿ ಲಗತ್ತಿಸಿ ತಾನು ಮಾಡಿದ್ದು ಸರಿಯೆಂದು ಹೇಳಿಕೊಂಡಿದ್ದ.
ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ ಸುಳ್ಳುಸುದ್ದಿ ಹಬ್ಬಿಸುವ ಈತ ಕಾಂಗ್ರೆಸ್ನ ಸತ್ಯಶೋಧನಾ ಸಮಿತಿಯ ಸದಸ್ಯ. ಉಡುಪಿ ಪ್ರಕರಣಕ್ಕೆ ಸಂಬಂಽಸಿ ರಶ್ಮಿ ಸುಮಂತ್ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆಂದು ಟ್ವೀಟ್ ಮಾಡಿ, ವಿಡಿಯೋ ಮಾಡಿದವರ ಪರವಾಗಿ ಈತ ನಿಂತಿದ್ದ. ಮಾಧ್ಯಮಗಳಿಗೆ ಪೊಲೀಸರು ಹೇಳಿದ್ದ ಹೇಳಿಕೆಯ ಪತ್ರಿಕಾ ತುಣುಕನ್ನು ಲಗತ್ತಿಸಿ ತಾನು ಸತ್ಯಶೋಧನೆ ಮಾಡಿದ್ದಾಗಿ ಬಿಂಬಿಸಿಕೊಂಡಿದ್ದ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಸುಳ್ಳು
ಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮನಾದ ಜುಬೈರ್ ಮೇಲೆ ದೆಹಲಿ ಮತ್ತು ಉತ್ತರಪ್ರದೇಶದ ವಿವಿಧೆಡೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಹಲವು ಕೇಸುಗಳು ವಿಚಾರಣೆ ಹಂತದಲ್ಲಿದ್ದು ಈತ ಜಾಮೀನಿನ ಮೇಲೆ ಹೊರಗಿದ್ದಾನೆ (ಕಾಂಗ್ರೆಸ್ಸಿಗೂ ಜಾಮೀನಿಗೂ ಅವಿನಾಭಾವ ಸಂಬಂಧ; ಅದು ಜಾಮೀನಿನ ಮೇಲಿರುವವರನ್ನೇ ತನ್ನ ತಂಡದಲ್ಲಿರಿಸಿಕೊಳ್ಳುತ್ತದೆ). ಒಮ್ಮೆ ಈತನ ಮೇಲೆ ‘ಸುದರ್ಶನ್ ಟಿವಿ’ ಲಖಿಂಪುರ ಖೇರಿಯಲ್ಲಿ ಪೊಲೀಸರಿಗೆ ದೂರಿತ್ತಿತ್ತು; ಆ ಟಿವಿಯಲ್ಲಿ ಬಿತ್ತರವಾದ ಕಾರ್ಯಕ್ರಮದಲ್ಲಿ ಬಳಸಿದ್ದ ಚಿತ್ರವನ್ನು ಜುಬೈರ್ ಟ್ವೀಟಿಸಿ ಎರಡು ಕೋಮಿನ ನಡುವೆ ದ್ವೇಷ ಹಬ್ಬಿಸುವ ಕೆಲಸ ಮಾಡಿದ್ದ. ಈತ ನೈಜ
ಸತ್ಯಶೋಧಕನಾಗಿದ್ದರೆ ಹಿಂದೂ ದೇವರುಗಳನ್ನು ಅಥವಾ ಏಸುಕ್ರಿಸ್ತನನ್ನು ಅವಮಾನಿಸುವವರ ವಿರುದ್ಧ ದನಿಯೆತ್ತ ಬೇಕಿತ್ತು. ಆದರೆ ಮುಸ್ಲಿಂ ಧರ್ಮದ ವಿಚಾರಗಳನ್ನಷ್ಟೇ ಬಳಸಿಕೊಂಡು ಸುಳ್ಳುಸುದ್ದಿ ಹಬ್ಬಿಸುವ ಈತ ಕರ್ನಾಟಕ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣಗಳ ಸುದ್ದಿಗಳ ಸತ್ಯಾಸತ್ಯತೆಯ ಸಲಹೆಗಾರ. ಉತ್ತರಪ್ರದೇಶದ ರಾಯ್ ರೇಲಿಯಲ್ಲಿ ಗಂಗಾಜಲ ತರಲು ತೆರಳುತ್ತಿದ್ದ ಭಕ್ತರ ಮೇಲೆ, ಮಸೀದಿಯ ಬಳಿಯಿದ್ದ ಕೆಲ ದುಷ್ಕರ್ಮಿಗಳು ಕಲ್ಲುತೂರಿದ್ದರ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು.
ಕಲ್ಲುತೂರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದ ಎಡಿಟೆಡ್ ಭಾಗದ ತುಣುಕನ್ನು ಜುಬೈರ್ ಟ್ವೀಟಿಸಿ, ಹಿಂದೂಗಳು ಕಲ್ಲುಹಿಡಿದು ನಿಂತಿದ್ದಾರೆಂದು
ಸುಳ್ಳು ಹೇಳಿದ್ದ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದ ವೇಳೆ ಕಾಯ್ದೆಯಲ್ಲಿದ್ದ ಸತ್ಯವನ್ನು ಮುಸ್ಲಿಮರಿಗೆ ಹೇಳದೆ, ಇದು ಅವರ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯೆಂದು ಸುಳ್ಳುಸುದ್ದಿ ಹಬ್ಬಿಸಿ ರಸ್ತೆಗಿಳಿದು ಪ್ರತಿಭಟಿಸಲು ಅವರನ್ನು ಪ್ರಚೋದಿಸಲಾಗಿತ್ತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಮಾನಿಸ ಲಾಗಿತ್ತು. ಕಾಶ್ಮೀರ ಕಣಿವೆಯಲ್ಲಾದ ಪಂಡಿತರ ಮಾರಣಹೋಮದ ಸತ್ಯವನ್ನು ಜನರ ಮುಂದಿಟ್ಟ ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ವಿರುದ್ಧ ಸತ್ಯಶೋಧನೆಯ
ಹೆಸರಲ್ಲಿ ಸುಳ್ಳು ಆರೋಪಿಸಲಾಗಿತ್ತು.
ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ, ವಿದೇಶದಲ್ಲಿರುವ ಕಪ್ಪು ಹಣದ ಪ್ರಮಾಣವನ್ನು ಉಲ್ಲೇಖಿಸಿ ಮಾತಾಡಿದ್ದರೇ ವಿನಾ, ಭಾರತೀಯರ ಖಾತೆಗಳಿಗೆ ೧೫ ಲಕ್ಷ ಜಮಾ ಮಾಡುತ್ತೇವೆ ಎಂದಿಲ್ಲ. ಆದರೆ ಹಾಗೆ ಹೇಳಲಾಗಿದೆಯೆಂದು ಮೋದಿ ವಿರೋಧಿಗಳು ಈಗಲೂ ಸುಳ್ಳು ಹೇಳುತ್ತಿದ್ದಾರೆ. ಸತ್ಯಶೋಧನೆ ಮಾಡುತ್ತೇವೆನ್ನುವವರು ಮೊದಲು ಈ ವಿಷಯದಲ್ಲಿನ ಸತ್ಯವನ್ನು ಜನರ ಮುಂದಿಡಬೇಕು. ‘ಮಹಾತ್ಮ ಗಾಂಧಿಯವರ ಹೆಸರು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ನೆಹರು ಕುಟುಂಬಸ್ಥರಿಗೂ ಽಜಿಗೂ ಯಾವ ಸಂಬಂಧವಿಲ್ಲ, ಅಖಂಡ ಭಾರತವನ್ನು ವಿಭಜಿಸಿದ್ದು ಕಾಂಗ್ರೆಸ್ಸಿನವರು, ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಆರೋಪಿ ಭಯೋತ್ಪಾದಕ’ ಎಂಬ ಸತ್ಯಗಳನ್ನು ಹೇಳಬೇಕು.
ಎಡಚರರು ತಮ್ಮ ಸುಳ್ಳುಗಳನ್ನೇ ಸರಿಯೆಂದು ಪ್ರತಿಪಾದಿಸಲು ತಮ್ಮದೇ ಸತ್ಯಶೋಧನಾ ತಂಡಗಳನ್ನು ಮಾಡಿಕೊಂಡಿರುತ್ತಾರೆ. ತಮ್ಮವರು ಹೇಳಿದ ವಿಷಯಗಳ ಬಗ್ಗೆ ಅವರೇ ಚರ್ಚಿಸಿ ಶಭಾಶ್ಗಿರಿ ನೀಡುವ, ಹಿಂದೂಪರರ ವಿರುದ್ಧ ಪ್ರಶಸ್ತಿ ವಾಪಸ್ ಚಳವಳಿ ನಡೆಸುವ, ತಮ್ಮ ಹತೋಟಿಯಲ್ಲಿರುವ ಪತ್ರಿಕೆಗಳಲ್ಲಿ ತಮ್ಮವರು ಬರೆದಿರುವ ವಿಷಯಗಳ ಬಗ್ಗೆ ಹೊಗಳುವ, ಹೊಸ ಪದಪುಂಜಗಳನ್ನು ಸೃಷ್ಟಿಸಿ ಜನರಿಗೆ ಮಂಕುಬೂದಿ ಎರಚುವ ಕೆಲಸವನ್ನು ಇವರು ಮಾಡಿಕೊಂಡು ಬಂದಿದ್ದಾರೆ. ಒಮ್ಮೆಯೂ ಆರೆಸ್ಸೆಸ್ ಶಾಖೆಯ ಮೆಟ್ಟಿಲನ್ನೇ ಹತ್ತಿಲ್ಲದಿದ್ದರೂ, ಆರೆಸ್ಸೆಸ್ ವಿರುದ್ಧ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ
ವಿಷಯಗಳನ್ನು ಒಂದೆಡೆ ಸೇರಿಸಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಳ ಮತ್ತು ಅಗಲ’ ಎಂಬ ಪುಸ್ತಕವನ್ನು ದೇವನೂರು ಮಹಾದೇವರು ಬರೆದಿದ್ದರು. ಈ ಸುಳ್ಳಿನ ಪುಸ್ತಕದ ಸತ್ಯಶೋಧನೆಯನ್ನು ಜುಬೈರ್ರಂಥ ಶೋಧಕರು ಮಾಡಲಿಲ್ಲ. ಈ ಪುಸ್ತಕದ ಪ್ರತಿಗಳನ್ನು ತಮ್ಮದೇ ಜಾಲ ದವರು ಹೆಚ್ಚೆಚ್ಚು ಖರೀದಿಸುವಂತೆ ಮಾಡಿದ ಎಡಚರರು, ಅದು ಅತಿಹೆಚ್ಚು ಮಾರಾಟವಾಗುತ್ತಿದೆಯೆಂದು ಬಿಂಬಿಸಿದರು, ಪುಸ್ತಕವನ್ನು ಹೊಗಳಿ ತಮ್ಮದೇ ವಿಮರ್ಶಕರಿಂದ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆಸಿದರು.
ಪುಸ್ತಕದ ಮಾರ್ಕೆಟಿಂಗ್ ತಂತ್ರಗಾರಿಕೆಯ ಭಾಗವಾಗಿ ಒಬ್ಬೊಬ್ಬರೂ ೩-೪ ಪುಸ್ತಕ ಕೊಂಡು ಕೃತಕ ಅಭಾವ ಸೃಷ್ಟಿಸಿ ದ್ದರು. ಇವರ ಕಾರ್ಯಕ್ರಮಗಳಲ್ಲಿ ಜನರೇ ಇರುವುದಿಲ್ಲ, ದೇಶದ ಯಾವ ಮೂಲೆಗೆ ಹೋದರೂ ಅದೇ ಮುಖಗಳು ಕಾಣುತ್ತಿರುತ್ತವೆ. ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾ ಗಲಿಲ್ಲ’ ಎಂಬ ಜಾತಿಯ ಇವರು ಒಂದಾದ ಮೇಲೊಂದು ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ತಾವು ಅನುಸರಿಸುವ ಮಾರ್ಗಗಳಲ್ಲಿ ಎಷ್ಟೇ ಸೋಲಾದರೂ ಸುಮ್ಮನೆ ಕೂರುವುದಿಲ್ಲ, ತಮ್ಮ ಜಾಲ ಬಳಸಿಕೊಂಡು ಸುಳ್ಳುಸುದ್ದಿ ಹಬ್ಬಿಸುತ್ತಲೇ ಇರುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬರುವ ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವ ಒಂದು ಕೋಮಿನವರ ಪರ ನಿಲ್ಲಲು ಇವರು ಬಳಸಿಕೊಳ್ಳು ತ್ತಿರುವ ಅಸ್ತ್ರ ‘ಸತ್ಯಶೋಧನೆ’. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಸಾರಿಗೆ ಸಂಸ್ಥೆಗಳು ಲಾಭಕ್ಕೆ ತಿರುಗುತ್ತಿವೆಯೆಂದು ವರದಿ ಮಾಡಿದ್ದ ಕನ್ನಡ ಪತ್ರಿಕೆ ಯೊಂದು ಆಯ್ದಭಾಗವನ್ನಷ್ಟೇ ನೀಡಿ ಸತ್ಯವನ್ನು ಮುಚ್ಚಿ ಹಾಕಿತ್ತು. ಉಚಿತ ಪ್ರಯಾಣದಿಂದ ಸಾರಿಗೆ ಸಂಸ್ಥೆಗಾಗುವ ನಷ್ಟವನ್ನು ಸರಕಾರವೇ ಭರಿಸಬೇಕು, ಸರಕಾರವು ಆ ನಷ್ಟವನ್ನು ಜನರಿಂದ ಸಂಗ್ರಹಿಸಿದ ತೆರಿಗೆ ಹಣದಿಂದಲೇ ಡಬೇಕೆಂಬ ಸತ್ಯವನ್ನು ಮುಚ್ಚಿಹಾಕಿತ್ತು. ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿದೆಯೆಂದು ವರದಿಮಾಡಿದ್ದ ಅದೇ ಪತ್ರಿಕೆ, ಸಂವಿಧಾನದ ಪ್ರಕಾರವೇ ರಾಜ್ಯಗಳ ತೆರಿಗೆ ಹಂಚಿಕೆಯ ಸೂತ್ರ ಹೆಣೆದು ೭೦ ವರ್ಷಗಳು ಕಳೆದಿದೆ ಯೆಂಬ, ನೆಹರು ಪ್ರಧಾನಿಯಾಗಿದ್ದಾಗ ರಚಿಸಿದ್ದ ಸೂತ್ರ ದಂತೆಯೇ ಇಂದಿಗೂ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಯಾಗಿದೆಯೆಂಬ ಸತ್ಯವನ್ನು ಮುಚ್ಚಿಹಾಕಿತ್ತು.
ಇದೇ ಮಾದರಿಯಲ್ಲಿ, ಸುಳ್ಳುಗಳ ಮೂಲಕವೇ ಸಮಾಜದಲ್ಲಿ ನರೇಟಿವ್ ನಿರ್ಮಿಸುತ್ತಾ ಬಂದಿರುವ ಎಡಚರರ ನೂತನ ಪ್ರಯತ್ನವೇ ಸಾಮಾಜಿಕ ಜಾಲತಾಣ
ದಲ್ಲಿ ಚರ್ಚೆಯಾಗುವ ವಿಷಯಗಳ ಸತ್ಯಶೋಧನೆ. ಇದರ ಹೆಸರಿನಲ್ಲಿ ಸತ್ಯ ಮುಚ್ಚಿಟ್ಟು, ಸುಳ್ಳನ್ನು ಮತ್ತಷ್ಟು ವೈಭವೀಕರಿಸಿ, ತಾವು ಹಬ್ಬಿಸುವ ಸುಳ್ಳುಗಳಿಗೆ ತಮ್ಮವ ರಿಂದಲೇ ಪ್ರಮಾಣಪತ್ರ ಕೊಡಿಸುವುದು ಇವರ ಕೆಲಸ. ಕಳೆದ ೭೫ ವರ್ಷಗಳಿಂದಲೂ ಇವರ ಸುಳ್ಳುಗಳನ್ನು ಬೆಂಬಲಿಸಿಕೊಂಡು ಬಂದಿರುವ ಕಾಂಗ್ರೆಸ್, ಈಗಲೂ ಅದೇ ಕೆಲಸವನ್ನು ಮಾಡುತ್ತಿದೆ!