ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ತಲೆನೋವಿನ ಸಮಸ್ಯೆಗಾಗಿ ಕಣ್ಣಿನ ವೈದ್ಯನಾದ ನನ್ನಲ್ಲಿ ಬರುವ ಸಾವಿರಾರು ರೋಗಿಗಳನ್ನು ಕಳೆದ 40 ವರ್ಷಗಳಿಂದ ಪರೀಕ್ಷಿಸಿದ್ದೇನೆ. ಅವರವರಿಗೆ ಸೂಕ್ತ ವಾಗಿ ಚಿಕಿತ್ಸೆ ಮಾಡಿ ಸಲಹೆ ಕೊಟ್ಟಿದ್ದೇನೆ. ತಲೆನೋವು ಮತ್ತು ಕಣ್ಣು ವಿಷಯದಲ್ಲಿ ಪ್ರತ್ಯೇಕವಾದ ಲೇಖನ ಮುಂದಿನ ಲೇಖನವಾಗಿ ಬರೆಯುತ್ತೇನೆ. ಇನ್ನೊಂದು ಮುಖ್ಯ ಕಾರಣ ನನ್ನ ಅನುಭವದಲ್ಲಿ ಬಂದದ್ದು ಮೈಗ್ರೇನ್ ತಲೆನೋವು.
ತಲೆನೋವು ಎಂದಾಕ್ಷಣ ಅದು ಮೈಗ್ರೇನೇ ಇರಬೇಕು ಎಂದು ಎಲ್ಲರೂ ಭಾವಿಸುವಷ್ಟು ಈ ಮೈಗ್ರೇನ್ ಪ್ರಚಲಿತದಲ್ಲಿದೆ. ಜಗತ್ತಿನಾದ್ಯಂತ ಸುಮಾರು 148-150 ಮಿಲಿಯನ್ ಜನರು ಈ ಮೈಗ್ರೇನ್‌ನಿಂದ ಬಳಲುತ್ತಿದ್ದಾರೆ ಎಂಬುದು ಒಂದು ಅಂದಾಜು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪುರುಷರಿಗಿಂತ ಮಹಿಳೆಯ ರಲ್ಲಿ ಎರಡು ಪಟ್ಟು ಜಾಸ್ತಿ ಇದೆ. ಮೈಗ್ರೇನ್‌ನ ಮುಖ್ಯ ಲಕ್ಷಣ ಎಂದರೆ ಸಾಮಾನ್ಯದಿಂದತೀವ್ರ ರೀತಿಯ ತಲೆನೋವು, ಅದರಲ್ಲಿ ಶೇ.85 ವ್ಯಕ್ತಿಗಳಿಗೆ ಸಿಡಿಯುವ (throbbing pain) ರೀತಿಯ ತಲೆನೋವು, ಶೇ.60 ವ್ಯಕ್ತಿಗಳಲ್ಲಿ ಒಂದೇ ಭಾಗದಲ್ಲಿ ತಲೆನೋವು, =೮೦ ಜನರಲ್ಲಿ ವಾಂತಿಯ ಪೂರ್ವದ ಲಕ್ಷಣ ( Nausea ) ಶೇ.30 ಜನರಲ್ಲಿ ವಾಂತಿ ಬರುತ್ತದೆ ಎಂದು ಒಂದು ಅಂದಾಜು.
ಹೆಚ್ಚಿನವರಿಗೆ ಬೆಳಕು ನೋಡಲು ಹಿಂಸೆಯಾಗುತ್ತದೆ (ಶೇ.90) ಮತ್ತೆ ಕೆಲವರಲ್ಲಿ (ಶೇ.80) ಶಬ್ದ ಕೇಳಲು ತೀವ್ರ ತೊಂದರೆಯಾಗುತ್ತದೆ. ಮೈಗ್ರೇನ್ ಬಗೆಗೆ ಸವಿಸ್ತಾರವಾಗಿ ವಿವರಿಸುವ ಲೇಖನ ಇದಲ್ಲ. ಮೈಗ್ರೇನ್ ಬಗೆಗೆ ಇರುವ ಕೆಲವು ತಪ್ಪು ಕಲ್ಪನೆಗಳು ಮತ್ತು ತಪ್ಪು ತಿಳಿವಳಿಕೆಗಳ ಬಗೆಗೆ ಅವಲೋಕಿಸುವ
ಲೇಖನ. ಆದರೂ ಮೈಗ್ರೇನ್ ಬಗ್ಗೆ ಹಲವಾರು ಮಾಹಿತಿಗಳು ಇಲ್ಲಿವೆ. ಮೂರು ಜನ ತಜ್ಞ ವೈದ್ಯರುಗಳು ತಮ್ಮಲ್ಲಿ ಚರ್ಚಿಸಿ ಕೆಳಗಿನ ಮಾಹಿತಿಗಳನ್ನು ಜನಪ್ರಿಯ
ಜಾಲತಾಣ MNTದಲ್ಲಿ ಹಂಚಿಕೊಂಡಿದ್ದಾರೆ. ಅವರುಗಳೆಂದರೆ ಡಾ.ವರ್ನನ್ ವಿಲಿಯಮ್ಸ – ಅಮೆರಿಕ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ Cedars –
Sinai Kerlan – Jobe Institute ನ Sports Neurologist ಮತ್ತು ವೈದ್ಯಕೀಯ ಅಧೀಕ್ಷಕರು.
ಡಾ.ಮೆಧಾಟ್ ಮಿಖಾಯಿಲ್ – ಕ್ಯಾಲಿಫೋರ್ನಿಯಾದ -ಂಡನ್ ವ್ಯಾಲಿಯ ಮೆಮೊರಿಯಲ್ ಕೇರ್ ಆರೆಂಜ್ ಕೋಸ್ಟ್ ವೈದ್ಯಕೀಯ ಸಂಸ್ಥೆಯ ನೋವು ನಿವಾರಕ ತಜ್ಞರು ಹಾಗೂ ವೈದ್ಯಕೀಯ ಅಕ್ಷಷಿಕರು. ಡಾ ಜೆನ್ನಿ-ರ್ ಮೆಕ್ ವಿಗೆ – ಈಕೆ ನ್ಯೂಯಾರ್ಕ್ ನ Amherst ನಲ್ಲಿನ DENT Neurology Institute ನ
Concussion center ನ ವಯಸ್ಕರ ಮತ್ತು ಮಕ್ಕಳ ತಲೆನೋವು ಮತ್ತು Neuro Imaging ಮತ್ತು Pediatric Neurology ಯ ತಜ್ಞ ವೈದ್ಯರು ಮತ್ತು ಆ ಸಂಸ್ಥೆಯ ಅಽಕ್ಷಕರು. ಸನರಶಾಸಕ್ಕೆ ಸಂಬಂಧಪಟ್ಟ ಈ ಮೈಗ್ರೇನ್ ಬಗೆಗೆ ಇಂಥ ತಜ್ಞರುಗಳು ಹೆಚ್ಚು
ಬೆಳಕು ಚೆಲ್ಲಬಲ್ಲರು. ತಪ್ಪು ತಿಳಿವಳಿಕೆ 1 – ಮೈಗ್ರೇನ್ ತುಂಬಾ ಗಂಭೀರವಲ್ಲ. ಹೆಚ್ಚಿನ ಮೈಗ್ರೇನ್ ತಲೆನೋವು ತುಂಬಾ ಗಂಭೀರವಲ್ಲ ನಿಜ. ಆದರೆ ಅದು ದೀರ್ಘ ಕಾಲ ಕಾಡಿಸುವ ತಲೆನೋವು. ಸರಿಯಾಗಿ ಚಿಕಿತ್ಸೆ ಕೈಗೊಳ್ಳದಿದ್ದರೆ ಅಂಥ ವ್ಯಕ್ತಿಯನ್ನು ದುರ್ಬಲ ಅಥವಾ ನಿತ್ರಾಣ ಮಾಡುತ್ತದೆ, ನ್ಯೂನತೆ (Disability) ಉಂಟು ಮಾಡುತ್ತದೆ. ಮನುಷ್ಯನ ಜೀವನದ ಗುಣಮಟ್ಟದ ಮೇಲೆ ಹಲವು ಸಮೀಕ್ಷೆಗಳು ಹಾಗೂ ಅಧ್ಯಯನಗಳನ್ನು ಮಾಡಲಾಗಿದೆ. ಆತನ ಕೆಲಸದ ವೇಳೆಯಲ್ಲಿ , ಕೌಟುಂಬಿಕ, ಸಾಮಾಜಿಕ ಅಥವಾ ಬಿಡುವಿನ ಸಮಯ ಗಳಲ್ಲಿ ಅಂದರೆ ಹೆಚ್ಚಿನ ಸಮಯಗಳಲ್ಲಿ ಆತನ productivity ಕಡಿಮೆ ಮಾಡುತ್ತದೆ. ಇಲ್ಲಿ ಗಮನಿಸ ಬೇಕಾದ ವಿಷಯ ಎಂದರೆ ಎಲ್ಲಾ ತರಹದ ಮೈಗ್ರೇನ್‌ಗಳೂ ಒಂದೇ ರೀತಿಯವಲ್ಲ. ಒಂದು ಪ್ರಬೇಧ Hemiplegic migraine ಸ್ವಲ್ಪ ಭಿನ್ನವಾಗಿದೆ. ಇದು ಕುಟುಂಬದ ಹಿಂದಿನವರಿಂದ ಮುಂದಿನ ತಲೆಮಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ನೋವಿನ ಮೊದಲು ಅಸಹಜತೆಯ ಲಕ್ಷಣ (aura symptoms) ಮತ್ತು ನರಮಂಡಲಕ್ಕೆ ಸಂಬಂಧಪಟ್ಟ ಹಲವು ಲಕ್ಷಣಗಳು ಕಾಣಿಸಿಕೊಳುತ್ತವೆ. ಹಾಗೆಯೇ ಈ ಲಕ್ಷಣಗಳು ಮುಂದುವರಿದು ಪಾರ್ಶ್ವವಾಯು ಆಗಬಹುದು. ಆದರೆ ಈ ರೀತಿಯ hemiplegic migraine ತುಂಬಾ ತುಂಬಾ ವಿರಳ.
ಜಗತ್ತಿನ ಕೇವಲ ಶೇ.0.01 ಜನರಲ್ಲಿ ಮಾತ್ರ ಈ ರೀತಿಯ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರಲ್ಲಿ ಈ ಪಾರ್ಶ್ವವಾಯುವಿನ ಲಕ್ಷಣ ಕೆಲವೇ ಗಂಟೆಗಳು
ಅಥವಾ ದಿನಗಳಲ್ಲಿ ಮಾಯವಾಗಬಹುದು. ಕೆಲವರಲ್ಲಿ ಒಂದೆರೆಡು ತಿಂಗಳುಗಳೂ ಇರಬಹುದು. ತೀರಾ ಅಪರೂಪವಾಗಿ ಕೆಲವರಲ್ಲಿ ಪಾರ್ಶ್ವವಾಯು ಶಾಶ್ವತ ವಾಗಿ ಉಳಿದುಕೊಳ್ಳಬಹುದು.
ತಪ್ಪು ತಿಳಿವಳಿಕೆ 2 – ಮೈಗ್ರೇನ್ ಕೇವಲ ತಲೆನೋವು: ಇದು ಸಂಪೂರ್ಣವಾಗಿ ಸರಿಯಲ್ಲ. ಹಾಗೆಂದು ಎಲ್ಲಾ ರೀತಿಯ ಮೈಗ್ರೇನ್‌ಗಳಲ್ಲಿ ತಲೆನೋವು ಇರಲೇ ಬೇಕು ಅಂತೇನಿಲ್ಲ. ಮೈಗ್ರೇನ್ ಮೂಲಭೂತವಾಗಿ ತಲೆನೋವಿಗೆ ಸಂಬಂಧಪಟ್ಟ ಕಾಯಿಲೆ. ಆದರೆ ಅದು ಸಾಮಾನ್ಯ ತಲೆನೋವಿಗಿಂತ ತೀರಾ ಭಿನ್ನ. ತಲೆ ನೋವು ಮೈಗ್ರೇನ್‌ನ ಒಂದು ಲಕ್ಷಣ. ಕೆಲವು ಮೈಗ್ರೇನ್‌ಗಳಲ್ಲಿ ತಲೆನೋವೇ ಇರುವುದಿಲ್ಲ ಎಂದು ಡಾ ಮೆಕ್ ವಿಗೆ ಅಭಿಪ್ರಾಯ ಪಡುತ್ತಾರೆ. ಡಾ.ವಿಲಿಯಮ್ಸ ಅವರ ಪ್ರಕಾರ ಒಬ್ಬ ವ್ಯಕ್ತಿ ತೀವ್ರವಾಗಿ ಅನುಭವಿಸುವ ನಿರ್ದಿಷ್ಟ ರೀತಿಯ ತಲೆನೋವು, ಅದರ ಜತೆಗೆ ಹಲವಾರು ಲಕ್ಷಣಗಳಿರುತ್ತವೆ.
ಮೊದಲೇ ತಿಳಿಸಿದಂತೆ ಇದರ ನೋವು ತುಂಬಾ ತೀವ್ರವಾಗಿರಬಹುದು. ಒಬ್ಬ ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಮೇಲೆ ಪ್ರಭಾವ ಬೀರುತ್ತವೆ. ಸಾಮಾನ್ಯ
ತಲೆನೋವಿನಂತೆ ಕೆಲವು ಗಂಟೆಗಳಿರ ಬಹುದು. ಅಥವಾ ಹಲವಾರು ದಿನಗಳವರೆಗೆ ನೋವು ಮುಂದುವರಿಯ ಬಹುದು. ವಿಲಿಯಮ್ಸ ಅವರ ಪ್ರಕಾರ ಈ ಕೆಳಗಿನ
ಲಕ್ಷಣಗಳಲ್ಲಿ ಕೆಲವು ಇರಬಹುದು, ಅಥವಾ ಎಲ್ಲವೂ ಇರಬಹುದು. (ಸಾಮಾನ್ಯ ತಲೆನೋವಿನಲ್ಲಿ ಇವು ಇರುವುದಿಲ್ಲ.) ಮಧ್ಯಮ ರೀತಿಯ ಅಥವಾ ತೀವ್ರ ಸಿಡಿಯುವ ರೀತಿಯ ನೋವು – ಕೆಲವೊಮ್ಮೆ ಇಡೀ ತಲೆಯನ್ನೇ ಕಬಳಿಸುತ್ತದೆಯೇ ಅಥವಾ ನುಂಗುತ್ತದೆಯೇ ಎಂಬ ತೀವ್ರ ರೀತಿಯ ಅನುಭವ. ಹೆಚ್ಚಿನ ಸಂದರ್ಭಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ( ಎಡ – ಬಲ ) ಚಲಿಸುತ್ತಿರುತ್ತದೆ. ಶಬ್ದ, ವಾಸನೆ ಮತ್ತು ಬೆಳಕಿಗೆ ತೀವ್ರ ರೀತಿಯಲ್ಲಿ sensitivity ಇರುತ್ತದೆ.
ದೃಷ್ಟಿಯ ತೊಂದರೆಗಳು – ಕಣ್ಣು ಮಂಜಾಗುವುದು, ಕಣ್ಣಿನ ಎದುರು ಭಾಗದಲ್ಲಿ ಚುಕ್ಕೆಯ ರೀತಿಯಲ್ಲಿ ಅಥವಾ ಓರೆಕೋರೆಯಾದ ಸಾಲು ಅಥವಾ ರೇಖೆಗಳ ರೀತಿಯಲ್ಲಿ ಕಾಣಿಸಬಹುದು. ಹಸಿವು ಕಡಿಮೆಯಾಗುವುದು, ವಾಂತಿಯ ಪೂರ್ವದ ಲಕ್ಷಣ (Nausea), ವಾಂತಿಯಾಗುವುದು ಅಥವಾ ಹೊಟ್ಟೆಯ ಭಾಗದಲ್ಲಿ ತೀವ್ರ ರೀತಿಯ ಅಸಹಜ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ಡಾ.ವಿಲಿಯಮ್ಸ ಅವರು ಮೈಗ್ರೇನ್‌ಗೂ ಮತ್ತು ಉಳಿದ ತಲೆನೋವಿಗೂ ಇರುವ ವ್ಯತ್ಯಾಸವನ್ನು ಗುರುತಿಸಿದ್ದಾರೆ. ಕೆಲವರಲ್ಲಿ ನೋವಿನ ಪೂರ್ವದ ಹಂತವಿರಬಹುದು (Prodrome Stage). ಕೆಲವು ವ್ಯಕ್ತಿಗಳಲ್ಲಿ ಮೈಗ್ರೇನ್ ಆರಂಭವಾಗುವ ಒಂದು ಅಥವಾ ಎರಡು ದಿನಗಳ ಮೊದಲು ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಒಂದು ರೀತಿಯ ಸಣ್ಣ ಬದಲಾವಣೆ ಆಗುತ್ತದೆ.
ಇದನ್ನು ಅಪಾಯದ ಅವಧಿ ಎಂದು ಹೇಳಬಹುದು. ಮೈಗ್ರೇನ್ ಪೂರ್ವದ ಹಂತದ ಲಕ್ಷಣಗಳು ಒಬ್ಬರಿಗೂ ಮತ್ತೊಬ್ಬರಿಗೂ ವ್ಯತ್ಯಾಸ ಇರುತ್ತದೆ. ಹೆಚ್ಚು
ಸಾಮಾನ್ಯದ ಲಕ್ಷಣಗಳೆಂದರೆ ವ್ಯಕ್ತಿ ಉತ್ಸಾಹರಹಿತನಾಗಿ ಆಕಳಿಸಲು ಆರಂಭಿಸುತ್ತಾನೆ. ಅಸಹನೆಯ ಭಾವನೆ ಹುಟ್ಟುತ್ತದೆ. ಕುತ್ತಿಗೆ ಸೆಟೆದುಕೊಳ್ಳಬಹುದು ಅಥವಾ ಒಂದು ರೀತಿಯಲ್ಲಿ ಬಿರುಸು ಅನಿಸಬಹುದು. ಕುತ್ತಿಗೆಯನ್ನು ಆಚೀಚೆ ಅಲುಗಾಡಿಸಲೂ ತುಂಬಾ ಕಷ್ಟವಾಗುತ್ತದೆ. ಇವೆಲ್ಲಾ ಸೇರಿ ಕೆಲವರಲ್ಲಿ ಮಾನಸಿಕ ಖಿನ್ನತೆ (Depression) ಉಂಟಾಗಬಹುದು. ಕೆಲವರಲ್ಲಿ ನಿರ್ದಿಷ್ಟವಾದ ಮೈಗ್ರೇನ್ aura ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಮೈಗ್ರೇನ್ aura ತಲೆನೋವಿನ ಪೂರ್ವದಲ್ಲಿ ಕಾಣಿಸಿಕೊಳ್ಳುವ ನರಮಂಡಲದ ಲಕ್ಷಣಗಳು. ಅವು ಕೆಲವರಲ್ಲಿ ದೃಷ್ಟಿಯ ತೊಂದರೆಯ ರೀತಿ ಕಾಣಿಸಬಹುದು.
ಮುಖ್ಯವಾಗಿ ಕಣ್ಣೆದುರಿಗೆ ಬೆಳಕಿನ ರೇಖೆಗಳು ಅಥವಾ ಚುಕ್ಕೆಗಳು ಕಾಣಿಸಬಹುದು. ಕೆಲವರಲ್ಲಿ ದೃಷ್ಟಿ ಸ್ವಲ್ಪ ಕಡಿಮೆಯಾದಂತೆ ಅನಿಸಬಹುದು. ಇದು ನಮ್ಮ ದೃಷ್ಟಿಯ ವಿಸ್ತಾರ ಅಥವಾ ಒಂದೇ ಭಾಗದಲ್ಲಿ ಕಾಣಿಸಬಹುದು. (Partial loss of vision in Visual field). ನಂತರ ಅದು ಬೇರೆಯ ಭಾಗಕ್ಕೂ ವಿಸ್ತರಿಸಬಹುದು. ಕೆಲವರಲ್ಲಿ ಮುಖದ ಒಂದು ಭಾಗದಲ್ಲಿ ಮರಗಟ್ಟಿದ ಅನುಭವ ( Numbness) ಆಗಬಹುದು. ಅದು ನಂತರ ಮುಖದ ಕೆಳಭಾಗಕ್ಕೆ ಅಥವಾ ಕೈಯ ಭಾಗಕ್ಕೆ ಪಸರಿಸಬಹುದು. ಈ ಮೇಲಿನ ಎಲ್ಲಾ ಋಣಾತ್ಮಕ (Negative) ಲಕ್ಷಣಗಳ ಮಧ್ಯೆಯೂ ಇದರಲ್ಲಿ ಧನಾತ್ಮಕ (Positive) ವಿಷಯವಿದೆ. ಈ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಮೈಗ್ರೇನ್‌ನ ಆರಂಭದ ಹಂತದ ಚಿಕಿತ್ಸೆಯನ್ನು ಆರಂಭಿಸಲು ಸಾಧ್ಯ.
ಹಾಗೆ ಮಾಡಿದಾಗ ಚಿಕಿತ್ಸೆ ಫಲಪ್ರದವಾಗುವ ಸಂಭವ ಜಾಸ್ತಿ. ನಿಜವಾದ ಮೈಗ್ರೇನ್‌ನ ಲಕ್ಷಣಗಳು ಆರಂಭವಾಗುವ ಮೊದಲೇ ಚಿಕಿತ್ಸೆ ಆರಂಭಿಸಿದರೆ ಅದು
ತುಂಬಾ ಪರಿಣಾಮಕಾರಿಯಾಗುತ್ತದೆ.
ತಪ್ಪು ತಿಳಿವಳಿಕೆ 3; ಮೈಗ್ರೇನ್ ಕೆಫೀನ್‌ನಿಂದ ಬರುತ್ತದೆ: ಇದು ಸಂಪೂರ್ಣ ತಪ್ಪು ಕಲ್ಪನೆ. ಕೆಫೀನ್ ಮೈಗ್ರೇನ್ ಬರುವ ಹಾಗೇನೂ ಮಾಡುವುದಿಲ್ಲ. ಆದರೆ
ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮೈಗ್ರೇನ್ ಬರಲು ಕಾರಣವೂ ಆಗಬಹುದು. (ಆಗಬೇಕು ಅಂತೇನಿಲ್ಲ). ಕೆಫೀನ್ ಮತ್ತು ಮೈಗ್ರೇನ್‌ಗಳ ಸಂಬಂಧ ತುಂಬಾ ಸಂಕೀರ್ಣವಾದದ್ದು. (Complex) ಕೆಫೀನ್ ಸಾಮಾನ್ಯವಾದ ತಲೆನೋವನ್ನು ಹಾಗೂ ಮೈಗ್ರೇನ್ ತಲೆನೋವನ್ನು ಕೂಡ ಕಡಿಮೆಮಾಡುತ್ತದೆ. ಆದರೆ ಕೆಫೀನ್ ತುಂಬಾ ಜಾಸ್ತಿ ಸೇವಿಸಿದರೆ ಅದು ವಿರುದ್ಧ ಪರಿಣಾಮ ಬೀರಿ ಮೈಗ್ರೇನ್ ಬರುವಂತೆ ಮಾಡುತ್ತದೆ ಎಂದು ಡಾ ಮಿಖಾಯಿಲ್ ನುಡಿಯುತ್ತಾರೆ.
ಕೆಲವರಲ್ಲಿ ಮೈಗ್ರೇನ್ ಅಟ್ಯಾಕ್ ಆಗುವ ಆರಂಭದಲ್ಲಿಯೇ ಕಾಫಿ ಸೇವಿಸಿದರೆ ನೋವಿನ ತೀವ್ರತೆ ಕಡಿಮೆ ಆಗಬಹುದು. ಆದರೆ ನಿಯಮಿತವಾಗಿ ಮೈಗ್ರೇನ್
ಗೆ ಚಿಕಿತ್ಸೆಗಾಗಿ ಕೆಫೀನ್ ಅನ್ನು ಸಲಹೆ ಮಾಡಲು ಬರುವುದಿಲ್ಲ ಎಂದು ಡಾ ಮೆಕ್ ವಿಗೆ ಅವರ ಅಭಿಪ್ರಾಯ. ಇದರಲ್ಲಿ ಇನ್ನೊಂದು ಸಂಕೀರ್ಣವಾದ ವಿಷಯವಿದೆ.
ಕೆಫೀನ್ ಇರುವ ಪಾನೀಯಗಳನ್ನು ಸೇವಿಸಿದಾಗ ಅದು ಮೈಗ್ರೇನ್ ಅಟ್ಯಾಕ್ ಆರಂಭವಾಗುವಂತೆ ಮಾಡಬಹುದು. ಆದರೆ ನಿಯಮಿತವಾಗಿ ಕಾಫಿ ಸೇವಿಸು ವವರು ಒಮ್ಮೆಲೇ ಅದನ್ನು ನಿಲ್ಲಿಸಿದರೆ ಅದು ಪುನಃ ಪುನಃ ಮೈಗ್ರೇನ್ ಬರಲು ಕಾರಣವೂ ಆಗಬಹುದು.
ಹಳೆಯ ಎಲ್ಲಾ ಅಧ್ಯಯನ ಮತ್ತು ಸಂಶೋಧನೆಗಳನ್ನು ಇತ್ತೀಚಿನ ಒಂದು ಸಮೀಕ್ಷೆಯಲ್ಲಿ ಮೇಲಿನ ಮೂವರು ತಜ್ಞರು – ಮೈಗ್ರೇನ್ ಅನುಭವಿಸುತ್ತಿರುವ ಎಲ್ಲಾ
ವ್ಯಕ್ತಿಗಳು ಕಾಫಿ ಸೇವಿಸಬೇಡಿ ಎಂದು ಸಲಹೆ ಮಾಡಲು ಸಾಕಷ್ಟು ಪುರಾವೆಗಳಿಲ್ಲ. ಆದರೆ ಕಾಫಿ ತುಂಬಾ ಜಾಸ್ತಿಯಾಗಿ ಸೇವಿಸಿದರೆ ಮೈಗ್ರೇನ್ ದೀರ್ಘ ಕಾಲದ
ಮೈಗ್ರೇನ್ ಆಗಿ ಉಳಿಯುವ ಸಾಧ್ಯತೆ ಜಾಸ್ತಿ. ಹಾಗೆಂದು ಒಮ್ಮೆಲೇ ಕಾಫಿ ನಿಲ್ಲಿಸಿದರೆ ಮೈಗ್ರೇನ್ ಒಮ್ಮೆಲೇ ಆರಂಭವಾಗಿ ಬಿಡಬಹುದು ಎಂದು ಅಭಿಪ್ರಾಯ
ಪಡುತ್ತಾರೆ.
ತಪ್ಪು ತಿಳಿವಳಿಕೆ 4: ತಲೆನೋವಿನ ಔಷಧಗಳು ಮೈಗ್ರೇನ್ ಗುಣಪಡಿಸುತ್ತವೆ. ಪ್ರಸ್ತುತ ಮೈಗ್ರೇನ್‌ಗೆ ಸಂಪೂರ್ಣವಾದ ಚಿಕಿತ್ಸೆಯಿಲ್ಲ. ಆದರೆ ಔಷಧಿಗಳು ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತವೆ. ಮೇಲಿನ ತಜ್ಞರ ಪ್ರಕಾರ ಮೈಗ್ರೇನ್ ಗುಣವಾಗುತ್ತದೆ, ವಾಸಿಯಾಗುತ್ತದೆ ಎಂಬ ಶಬ್ದ ಉಪಯೋಗಿಸಬಾರದು. ಕಾಯಿಲೆಯ ಲಕ್ಷಣಗಳನ್ನು ನಿಯಂತ್ರಿಸುವುದು, ಮೈಗ್ರೇನ್ ಬರದಂತೆ ಮಾಡುವ ಕ್ರಮಗಳು ಈ ಶಬ್ದಗಳು ಉಪಯೋಗವಾಗಬೇಕು. ಪ್ರಸ್ತುತ ಉಪಯೋಗದಲ್ಲಿರುವ ಮೈಗ್ರೇನ್ ಔಷಧಗಳು ಹೆಚ್ಚಾಗಿ ಮೈಗ್ರೇನ್ ಪುನಃ ಪುನಃ ಬರದಿರುವಂತೆ ಮಾಡುವ ಔಷಧಗಳು.
ತಪ್ಪು ತಿಳಿವಳಿಕೆ 5: ಮೈಗ್ರೇನ್‌ಗೆ ಯಾವ ಔಷಧಗಳೂ ಪ್ರಯೋಜನವಾಗುವುದಿಲ್ಲ: ಇದು ಸಂಪೂರ್ಣವಾಗಿ ಸುಳ್ಳು ಹೇಳಿಕೆ. ಮೈಗ್ರೇನ್ ನಿಯಂತ್ರಿಸುವ ಹಲವು
ಔಷಧಗಳು ಪ್ರಸ್ತುತ ಇವೆ. ಮೈಗ್ರೇನ್‌ನಲ್ಲಿ ಉಪಯೋಗವಾಗುವ ಹಲವು ಔಷಧಗಳನ್ನು ಡಾ ಮೆಕ್ ವೀಗೆ ಹೀಗೆ ಪಟ್ಟಿ ಮಾಡುತ್ತಾರೆ. ಸಾಮಾನ್ಯ ತಲೆನೋವಿಗೆ
ಉಪಯೋಗಿಸುವ ನೋವು ನಿವಾರಕ ಔಷಧಗಳು, ಪ್ಟಾನ್‌ಗಳು, Calcitonin Gene receptor antagonists, Gepants, ಮಾನಸಿಕ ಖಿನ್ನತೆಗೆ
ಉಪಯೋಗಿಸುವ ಔಷಧಗಳು, ನಡುಕ (Seizures) ಬರದಿರುವಂತೆ ಮಾಡುವ ಔಷಧಗಳು ಹಾಗೂ ಬೀಟಾ ಬ್ಲಾಕರ್ಸ್ (ಇವನ್ನು ಏರುರಕ್ತದೊತ್ತಡ ಕಾಯಿಲೆ ಯಲ್ಲಿ ಕೆಲವೊಮ್ಮೆ ಉಪಯೋಗಿಸಲಾಗುತ್ತದೆ.)
ಔಷಧಗಳೇ ಅಲ್ಲದೆ ಮೈಗ್ರೇನ್ triggers ಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಜೀವನ ಶೈಲಿಯ ಬದಲಾವಣೆಗಳು ಬಹಳ ಮಹತ್ವ ಪಡೆಯುತ್ತವೆ ಎಂದು ಡಾ.
ವಿಲಿಯಮ್ಸ ಅವರ ಅಭಿಪ್ರಾಯ. ಪ್ರತಿದಿನ ರಾತ್ರಿ 7-8 ಗಂಟೆಗಳ ನಿದ್ರೆ, ಪ್ರತಿನಿತ್ಯ ೮ ಲೋಟ ನೀರು ಕುಡಿಯುವುದು, ದೇಹಕ್ಕೆ ಉತ್ತಮ ಗುಣಮಟ್ಟದ ಆಹಾರ
ಸೇವಿಸುವುದು, ದೇಹಕ್ಕೆ ಅನಗತ್ಯವಾದ ಒತ್ತಡದ ಅಂಶಗಳನ್ನು ತಪ್ಪಿಸುವುದು – ಈ ಎಲ್ಲವುಗಳಿಂದ ಮೈಗ್ರೇನ್‌ಗೆ ಒಳಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಯಾಗುತ್ತದೆ.