Sunday, 15th December 2024

ಸಜ್ಜೆ ಸವಿಯುತ ಇದ್ದುಬಿಡಿ; ಬೊಜ್ಜನ್ನು ದೂರವಿಡಿ

ಆಲೂರು ರವಿ

ಡಾ.ಅಶೋಕ್ ಆಲೂರು

alurashok@gmail.com

ಸಿರಿಧಾನ್ಯಗಳಲ್ಲಿ ಅತ್ಯಂತ ಪ್ರಮುಖ ಬೆಳೆ ಸಜ್ಜೆ. ಇದನ್ನು ಆರೋಗ್ಯ ಸಂಜೀವಿನಿಯೆಂದೇ ಕರೆಯಲಾಗುತ್ತದೆ. ಸಜ್ಜೆಯ ಬೆಳೆ ಪರಿಚಯಕ್ಕಿಂತ
ಆಹಾರವಾಗಿ ಸಜ್ಜೆಯ ಬಳಕೆ ಮತ್ತು ಅದರಲ್ಲಿರುವ ಆರೋಗ್ಯ ವೃದ್ಧಿ ಗುಣಗಳನ್ನು ಪರಿಚಯಿಸಿ ಪ್ರಚಲಿತಗೊಳಿಸುವುದೇ ಈ ವಾರದ ಅಂಕಣದ ವಿಶೇಷ.

ಸಜ್ಜೆಯು ಅತ್ಯುತ್ತಮ ಔಷಧಿಯ ಗುಣಗಳುಳ್ಳ ಧಾನ್ಯ ಮಾತ್ರವಲ್ಲ, ಹಲವಾರು ಪೋಷಕಾಂಶಗಳ ಮೂಲವೂ ಹೌದು. ಸಜ್ಜೆ ಒಂದು ಪ್ರಖ್ಯಾತ ಸಿರಿಧಾನ್ಯವಾಗಲು ಅದರಲ್ಲಿರುವ ನಾನಾ ಪ್ರಕಾರದ ಪೋಷಕಾಂಶಗಳು ಕಾರಣ. ಎಷ್ಟರಮಟ್ಟಿಗೆ ಅಂದರೆ ನಾನಾ ಪೋಷಕಾಂಶಭರಿತ ಆಹಾರವನ್ನು ಖರೀದಿಸಲು ಸಾಧ್ಯವಿರದವರು ಸಜ್ಜೆಯನ್ನು ಸೇವಿಸಬಹುದಾಗಿದೆ. ಆದ್ದರಿಂದಲೇ ಸಜ್ಜೆಗೆ ಬಡವರ ಪೌಷ್ಟಿಕ ಆಹಾರವೆಂದು ಕರೆಯುಲಾಗುತ್ತಿದೆ. ಅಷ್ಟಕ್ಕೂ ಸಜ್ಜೆಗೇಕೆ ಇಷ್ಟೊಂದು ಪ್ರಾಮುಖ್ಯವೆಂದರೆ, ಅದು ದೇಹಕ್ಕೆ ಪ್ರಮುಖವಾದ ಶಕ್ತಿ ನೀಡುವ ಬೆಳೆಯಾಗಿದೆ.

ಇದರಲ್ಲಿ ಹಲವಾರು ರೀತಿಯ ವಿಟ್‌ಮಿನ್ ಗಳು -ಟಿ ಆಸಿಡ್‌ಗಳು, ನಾರಿನಂಶ, ಹಾಗೂ ಪಾಲಿಫಿ ನಾಲ್‌ಗಳು ಹೇರಳವಾಗಿವೆ. ಸಜ್ಜೆಯಲ್ಲಿರುವ ವಿಶೇಷ ಪ್ರೋಟಿನ್‌ನಲ್ಲಿ ಅವಶ್ಯಕ ಅಮೈನೋ ಆಸಿಡ್‌ಗಳ ಪ್ರಮಾಣ ಹೇರಳ ವಾಗಿದೆ. ಅದರಲ್ಲೂ ಮುಖ್ಯವಾಗಿ ಗಂಧಕವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಮೀಥಿಲಿನ್ ಹಾಗೂ ಸಿಸ್ಟೀನ್ ಹೇರಳವಾಗಿವೆ. ಆದ್ದರಿಂದಲೇ ಸಜ್ಜೆಯನ್ನು ಸಸ್ಯಧಾರಿತ ಪ್ರೋಟಿನ್‌ಗಳ ಪ್ರಮುಖ ಮೂಲವೆಂದು
ಕರೆಯಲಾಗುತ್ತದೆ.

ಸಜ್ಜೆಯನ್ನು ತೊಗರಿಬೇಳೆ, ಕಡ್ಲಿಬೇಳೆ, ಉದ್ದಿನಬೇಳೆ, ಹೆಸರುಬೇಳೆ, ರಾಜಮಾದಂತಹ ದ್ವಿದಳ ಧಾನ್ಯಗಳ ಜತೆಗೆ ಸೇರಿಸಿ ಸೇವಿಸಿದಾಗ ಸಂಪೂರ್ಣ ಪ್ರಮಾಣದ ಪ್ರೋಟೀನ್ ದೊರೆಯಲು ಸಹಾಯವಾಗುತ್ತದೆ. ಇದು ಪ್ರಮುಖವಾಗಿ ಸಸ್ಯಹಾರಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇದಲ್ಲಕ್ಕಿಂತ ಮುಖ್ಯವಾಗಿ ಸಜ್ಜೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳಿಂದ ಸಂಪದ್ಭರಿತವಾಗಿದೆ. ಫಿನಾಲಿಕ್ ಕಂಪೌಂಡ್ ಸಹ ಇದರಲ್ಲಿ ಹೇರಳವಾಗಿದೆ. ಇವುಗಳಲ್ಲಿ ಪ್ರಮುಖವಾಗಿ -ವಿನಾಯಿಡ್‌ಗಳ ಪ್ರಮಾಣ ಹೆಚ್ಚಾಗಿದೆ.

-ವಿನಾಯಿಡ್‌ಗಳು ಪ್ರಮುಖವಾದ ಆಂಟಿ ಆಕ್ಸಿಡೆಂಟ್‌ಗಳಾಗಿವೆ. ಇವುಗಳು ದೇಹದ ರಕ್ಷಣಾವ್ಯವಸ್ಥೆಯನ್ನು ಬಲಪಡಿಸುತ್ತವೆ. ಇವು ಮುಖ್ಯವಾಗಿ ಕೋಶಗಳ ಏರೋಬಿಕ್ ಉಸಿರಾಟ ಪ್ರಕ್ರಿಯೆಯಿಂದ ಉತ್ಪನ್ನವಾಗುವ ಹಾನಿಕಾರಕ ಉಪಉತ್ಪನ್ನಗಳಾದ ರಿಯಾಕ್ಟಿವ್ ಆಕ್ಸಿಜನ್ ಸ್ಪೀಸಿಜ್‌ಗಳ ವಿರುದ್ಧ ಕಾರ‍್ಯನಿರ್ವಹಿಸುವದು. ಆಂಟಿಆಕ್ಸಿಡೆಂಟ್‌ಗಳು ಜನರ ಸಾಮಾನ್ಯ ಆರೋಗ್ಯ ರಕ್ಷಣೆಗೆ, ಹೃದಯದ ಆರೋಗ್ಯಕ್ಕೆ, ಮುಪ್ಪಾಗುವದನ್ನು ತಡೆಯುವಲ್ಲಿ ಹಾಗೂ ಚಯಾಪಚಯ ಕ್ರಿಯೆಯಿಂದ ಬರಬಹುದಾದ ನಾನಾ ರೋಗಗಳನ್ನು ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಸಜ್ಜೆಯಲ್ಲಿರುವ ಲಿಗಿನ್ ಹಾಗೂ -ಟೋ ನ್ಯೂಟ್ರಿಯಂಟ್‌ಗಳು ಅತ್ಯಂತ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ಗಳಾಗಿದ್ದು ಹೃದಯ ಸಂಬಂಧಿತ ರೋಗಗಳನ್ನು ತಡೆಯುವಲ್ಲಿ ಉಪಯುಕ್ತವಾಗಿವೆ.

ಕೊಬ್ಬು, ಮಧುಮೇಹ: ಇನ್ನು ಸಜ್ಜೆಯಲ್ಲಿ ಹೇರಳವಾಗಿ ದೊರೆಯುವ ಮೆಗ್ನೀಷಿಯಮ್ ಪ್ರಮಾಣದಿಂದಾಗಿ ರಕ್ತದೊತ್ತಡವನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಇದು ಮಾನಸಿಕ ಒತ್ತಡವನ್ನು ಪರಿಣಾಮಕಾರಿಯಾಗಿ ತಡೆಯಲು ಸಹಕಾರಿಯಾಗುತ್ತದೆ. ಈಗಾಗಲೇ ನಾವು ಅರಿತಿರುವಂತೆ ಸಿರಿಧಾನ್ಯಗಳೆಲ್ಲವೂ ಗುಕೋಸ್ ಅನ್ನು ರಕ್ತದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಅದು ಸಜ್ಜೆಗೂ ಅನ್ವಯ.

ಸಜ್ಜೆಯ ಗ್ಲೈಸಿಮಿಕ್ ಸೂಚ್ಯಂಕ ೫೪ ಆಗಿರುವುದರಿಂದ ಸಜ್ಜೆಯು ಮಧ್ಯಮ ಗ್ಲೈಸಿಮಿಕ್ ಸೂಚ್ಯಂಕ ಆಹಾರವೆಂದು ಗುರುತಿಸಲಾಗಿದೆ. ಸಜ್ಜೆಯಲ್ಲಿರುವ ಹೆಚ್ಚಿನ ನಾರಿನಂಶ ಹಾಗೂ ಪೋಷಕಾಂಶ ಮೌಲ್ಯ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ಆದ್ದರಿಂದ ಸಕ್ಕರೆ ಕಾಯಿಲೆ ಯಿಂದ ಬಳಲುವವರಿಗೆ ಸಜ್ಜೆಯು ತುಂಬಾ ಸೂಕ್ತ ಆಹಾರ. ಇದು ರಕ್ತ ಪದ್ಧತಿಯಲ್ಲಿ ಗ್ಲೊಕೋಸ್ ಹೀರುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಇದರಿಂದ ಸಹಜಾಗಿ ದೇಹದ ಕೊಲೆಸ್ಟ್ರಾಲ್ ಮಟ್ಟ ರಕ್ಷಣೆಯಾಗುತ್ತದೆ. ಸಜ್ಜೆಯಲ್ಲಿರುವ ಪ್ಟೆಟಿಕ್ ಆಸಿಡ್ ಎಂಬ ಸಸ್ಯರಾಸಾಯನದಿಂದಾಗಿ ಕೊಬ್ಬಿ ನಂಶದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ನಾರಿನಂಶವನ್ನು  ಹೇರಳವಾಗಿ ಹೊಂದಿರುವುದರಿಂದ ಕೆಟ್ಟ ಕೊಬ್ಬಿನಂಶ (ಎಲ್‌ಡಿಎಲ್ ಕೊಬ್ಬಿನಂಶ) ಕಡಿಮೆ ಮಾಡುತ್ತದೆ ಹಾಗೂ ಒಳ್ಳೆಯ ಕೊಬ್ಬಿನಾಂಶ (ಎಚ್‌ಡಿಎಲ್) ಪರಿಣಾಮವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕೊಬ್ಬಿನಂಶದ ಪ್ರಮಾಣ ಸಕ್ಕರೆ ರೋಗ, ಹೆಚ್ಚಿನ ರಕ್ತದೊತ್ತಡದಂತಹ ನಾನಾ ರೋಗಳಿಗೆ ಕಾರಣವಾಗಿದೆ, ಆದ್ದರಿಂದ ನಮ್ಮ ಆಹಾರ ಪದ್ಧತಿಯಲ್ಲಿ ಸಜ್ಜೆಯನ್ನು ಸೇರಿಸುವದರ ಮೂಲಕ ಈ ಸಮಸ್ಯೆಗೆ ಸಮಾಧಾನ ಕಂಡುಕೊಳ್ಳಬಹುದು.

ಮಹಿಳೆಯರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಸಜ್ಜೆಯಲ್ಲಿ ದೊರೆಯುವ ಹೇರಳವಾದ ಕಬ್ಬಿಣ ಹಾಗೂ ಸತುವಿನ ಅಂಶಗಳು ರಕ್ತಹೀನತೆಯಿಂದ ಮುಕ್ತಿ ನೀಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುವವರು ದಿನನಿತ್ಯ ಸಜ್ಜೆಯ ಆಹಾರ ಸೇವಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಹೆಚ್ಚಿನ ತೂಕ ಹೊಂದಿ ಹಲವಾರು ರೀತಿಯ ತೊಂದರೆಗಳನ್ನು ಎದುರಿಸುವವರ ಸಂಖ್ಯೆ
ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ ಅಧಿಕ ತೂಕದ ಸಮಸ್ಯೆಯಿಂದ ಬಳಲುವರು ತಮ್ಮ ನಿತ್ಯದ ಆಹಾರದಲ್ಲಿ ಸಜ್ಜೆಯನ್ನು ಉಪಯೋಗಿಸಬಹುದಾಗಿದೆ.

ಸಜ್ಜೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶವು ಇದಕ್ಕೆ ಪರಿಹಾರ ನೀಡಬಲ್ಲದು. ಆಹಾರವನ್ನು ಸೇವಿಸಿದಾಗ ಆಹಾರದ ಚಲನೆಯ ಪ್ರಕ್ರಿಯೆ ಯಲ್ಲಿ ಉದರದಿಂದ ಕರುಳಿಗೆ ಬರುವ ಅವಧಿ ಅಧಿಕವಾಗಿರುವದರಿಂದ ಹೆಚ್ಚಿನ ಆಹಾರ ಸೇವನೆ ಸಾಧ್ಯವಾಗುವದಿಲ್ಲ.

ಕರುಳಿನ ಆರೋಗ್ಯ: ಉದರದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಜ್ಜೆ ಒಂದು ಅತೀ ಉತ್ತಮ ಆಹಾರ, ಗ್ಲುಟೆನ್‌ಮುಕ್ತ ಆಹಾರ ಒದಗಿಸುವ ಸಜ್ಜೆ ಸಣ್ಣಕರುಳಿನ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತವಾದ ಆಹಾರವಾಗಿದೆ. ಉದರ ಕಾಯಿಲೆ ಹೊಂದಿದ ರೋಗಿಗಳು ಗ್ಲುಟೆನ್‌ಮುಕ್ತ ಆಹಾರ ಸೇವಿಸುವುದು ತುಂಬಾ ಅವಶ್ಯಕ. ಏಕೆಂದರೆ ಉದರ ಕಾಯಿಲೆಯಿಂದ ಬಳಲುವ ರೋಗಿಗಳು ಗ್ಲುಟೆನ್ ಹೊಂದಿದ ಆಹಾರ ಸೇವಿಸಿದರೆ ಅದು ಸಣ್ಣಕರುಳಿನಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳು ಇರುವ ವಿಲ್ಲೈಗಳನ್ನು ಮುಚ್ಚಿ, ದೇಹವು ಬೇರೆ ಆಹಾರದಲ್ಲಿ ದೊರೆಯುವ ಪೋಷಕಾಂಶಗಳನ್ನು
ಹೀರಲು ಸಾಧ್ಯವಾಗುವುದಿಲ್ಲ, ಸಜ್ಜೆಯಲ್ಲಿ ಇರುವ ಪ್ರೋಟಿನ್ ಗ್ಲುಟೆನ್ ಮುಕ್ತವಾಗಿರುವುದರಿಂದ ಸೆಲಿಯಾಕ್ ರೋಗಿಗಳಿಗೆ ಅತ್ಯಂತ ಸೂಕ್ತ ಆಹಾರ ವಾಗಿದೆ.

ಸಾಮಾನ್ಯವಾಗಿ ಉದರದಲ್ಲಿರುವ ಹುಣ್ಣುಗಳ(ಸ್ಟಮಕ್ ಅಲ್ಸ್‌ರ್) ಉಪಚಾರದಲ್ಲಿ ಸಜ್ಜೆ ಅತೀ ಸೂಕ್ತವಾದ ಆಹಾg, ಉದರದಲ್ಲಿ ಉಂಟಾಗುವ ಹುಣ್ಣು ಗಳು ಪ್ರಮುಖವಾಗಿ ಅಲ್ಲಿರುವ ಹೆಚ್ಚಿನ ಆಮ್ಲತೆಯಿಂದ ಉಂಟಾಗುತ್ತವೆ. ಸಜ್ಜೆಯನ್ನು ಆಹಾರ ರೂಪದಲ್ಲಿ ಸ್ವೀಕರಿಸಿದ ನಂತರ ಉದರವು ಆಮ್ಲೀಯ ವಾಗದೆ ಕ್ಷಾರೀಯ (ಅಲ್ಕಲೈನ್‌ಗೆ) ವಾಗುವದರಿಂದ ಅದು ಹುಣ್ಣುಗಳಾಗುವದನ್ನು ಪರಿಣಾಮಕಾರಿಯಾಗಿ ತಡೆಯುವದು ಒಂದುವೇಳೆ ಈಗಾಗಲೇ ಉದರದಲ್ಲಿ ಹುಣ್ಣುಗಳು ಆಗಿದ್ದರೆ ಅವುಗಳ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

ಗಾಲ್‌ಬ್ಯ್ಲಾಡರ್ ಕಲ್ಲು: ಪಿತ್ತಕೋಶದಲ್ಲಿ ಉಂಟಾಗುವ ಕಲ್ಲುಗಳು ಹಲವಾರು ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಸಜ್ಜೆಯಲ್ಲಿರುವ ಅಧಿಕ ನಾರಿನಂಶದ ಪರಿಣಾಮದಿಂದಾಗಿ ಪಿತ್ತಕೋಶದಲ್ಲಿ ಉಂಟಾಗಬಹುದಾದ ಕಲ್ಲುಗಳ ಸಮಸ್ಯೆಯನ್ನು ನೀಗಿಸಲು ಇದು ಉಪಕಾರಿ. ಸಜ್ಜೆಯಲ್ಲಿರುವ ಕರಗಲಾರದ ನಾರಿನಂಶ ಪ್ರಭಾವದಿಂದಾಗಿ ಪಿತ್ತಕೋಶದಲ್ಲಿ ಹೆಚ್ಚಿನ ಪ್ರಮಾಣದ ಪಿತ್ತರಸವನ್ನು ಉತ್ಪಾದಿಸುವದನ್ನು ನಿಯಂತ್ರಿಸುತ್ತದೆ. ಹೀಗೆ ಹೆಚ್ಚಿನ
ಪ್ರಮಾಣದ ಪಿತ್ತರಸ ಸ್ರವಿಕೆ ಕಡಿಮೆಯಾಗುವದರಿಂದ ಗಾಲ್‌ಬ್ಲ್ಯಾಡ್‌ರ್ ಸ್ಟೋನ್‌ನ್ ತೊಂದರೆಯನ್ನು ತಡೆಯುತ್ತದೆ.

ಸಜ್ಜೆಯಲ್ಲಿ ಹೇರಳವಾಗಿ ದೊರೆಯುವ ನಾರಿನಂಶದ ಪರಿಣಾಮವಾಗಿ ಮಲಬದ್ಧತೆಯನ್ನು ನಿವಾರಿಸುವ ಸಾಮರ್ಥ್ಯ ಇದೆ. ಮಲಬದ್ಧತೆಯ ತೊಂದರೆ ಯಿಂದ ಬಳಲುವ ರೋಗಿಗಳು ಸಜ್ಜೆಯನ್ನು ಆಹಾರದಲ್ಲಿ ಉಪಯೋಗಿಸುವದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಅತಿಸಾರ ಅಥವಾ ಡೈಯರಿಯಾ ಉಪಚಾರ ದಲ್ಲಿ ಸಜ್ಜೆ ಅತ್ಯಂತ ಪರಿಣಾಮಕಾರಿ ಆಹಾರವಾಗಬಲ್ಲದು, ಸಜ್ಜೆಯ ಆಹಾರ ಸೇವಿಸಿದ ನಂತರ ಕರುಳಿನಲ್ಲಿ ಉತ್ಪತ್ತಿ
ಯಾಗುವ ಲ್ಯಾಕ್ಟಿಕ್‌ಆಸಿಡ್ ಬ್ಯಾಕ್ಟೀರಿಯಾನಂತಹ ಪ್ರೋಬೈಯಾಟಿಕ್ಸ್ ಪ್ರಮಾಣ ಹೆಚ್ಚಾಗಿರುವುದರಿಂದ ಕರುಳಿನಲ್ಲಿರುವ ಉಪಕಾರಿ ಸೂಕ್ಷ ಜೀವಿಗಳ
ಪ್ರಮಾಣದಲ್ಲಿ ಹೆಚ್ಚಳವಾಗಿ ಅತಿಸಾರ ನಿರ್ವಹಿಸುವಲ್ಲಿ ಸಹಕಾರಿಯಾಗುತ್ತದೆ.

ಸಜ್ಜೆಯಲ್ಲಿ ಹೆರಳವಾಗಿ ದೊರೆಯುವ -ವನಾಯಿಡ್ಸ್ ಹಾಗೂ ಓಮೆಗಾ-೩ -ಟಿಆಸಿಡ್‌ಗಳು ಡಿಎನ್‌ಎ ತುಂಡಾಗುವದನ್ನು ಎಲ್‌ಡಿಎಲ್ ಕೊಲೆಸ್ಟಾಲ್ ಪ್ರಮಾಣವನ್ನು, ಲಿಪೋಸೋಮ್‌ಗಳ ಆಕ್ಸಿಡೇಷನ್ ಪ್ರಕ್ರಿಯೆಯನ್ನು ಹಾಗೂ ಎಚ್ ಟಿ -೨೯ ಅಡಿನೋಕಾರ‍್ಸಿನೋವ್ ಕೋಶಗಳ ಪ್ರಸರಣವನ್ನು ತಡೆಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ.

ಎಲುಬುಗಳ ಆರೋಗ್ಯ ರಕ್ಷಣೆ: ಇತ್ತೀಚಿನ ದಿನಗಳಲ್ಲಿ ಎಲುವು ಅಥವಾ ಮೂಳೆಗಳ ಅನಾಆರೋಗ್ಯ ತುಂಬಾ ಸಮಸ್ಯೆಗಳನ್ನು ತಂದೊಡ್ಡುತ್ತಲಿದೆ. ಮೂಳೆಗಳ ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಸಜ್ಜೆಯು ಅತ್ಯಂತ ಸೂಕ್ತ ಆಹಾರ. ಸಜ್ಜೆಯಲ್ಲಿರುವ ಹೆಚ್ಚಿನ ಪ್ರಮಾಣದ ರಂಜಕ ಮೂಳೆಗಳ ಆರೋಗ್ಯ ರಕ್ಷಣೆಯಲ್ಲಿ ತುಂಬಾ ಪರಿಣಾಮಕಾರಿ. ಸಜ್ಜೆಯಲ್ಲಿರುವ ಉತ್ಕರ್ಷಣ ನಿರೋಧಕ ಶಕ್ತಿ (ಆಂಟಿ ಆಕ್ಸಿಡೆಂಟ್) ಯಿಂದಾಗಿ ಮೂಳೆಗಳಲ್ಲಾಗುವ
ಉರಿಯೂತವನ್ನು ಕಡಿಮೆಗಳೋಸುವಲ್ಲಿ ಸಜ್ಜೆ ಸಹಕಾರಿ. ಆದ್ದರಿಂದ ಸಂಧಿವಾತದಂತಹ ತೊಂಧರೆಗಳಿಂದ ಬಳಲುವವರು ಸಜ್ಜೆಯನ್ನು ಸೇವಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಸಜ್ಜೆಯಲ್ಲಿರುವ ಹೈಪೋಅಲರ್ಜಿಕ್ ಗುಣಧರ್ಮದಿಂದಾಗಿ ಹಾಲೂಡುವ ತಾಯಂದಿರಿಗೆ ಸಜ್ಜೆ ಅತ್ಯಂತ ಸೂಕ್ತ ಆಹಾರ. ಸಜ್ಜೆಯಲ್ಲಿ ಹಲವಾರು ಸೂಕ್ಷ್ಮ ಪೋಷಕಾಂಶಗಳು ಹಾಗೂ ಪ್ರಧಾನ ಪೋಷಕಾಂಶಗಳು ಇರುವದರಿಂದ ತಾಯಿ ಹಾಗೂ ಮಗುವಿಗೆ ಬೇಕಾಗುವ ಪೋಷಕಾಂಶಗಳು ಹೇರಖವಾಗಿ ದೊರೆಯುವದರಿಂದ ಸಜ್ಜೆ ಹಾಲೂಡುವ ತಾಯಂದಿರಿಗೆ ಅತೀ ಸೂಕ್ತವಾದ ಆಹಾರ. ಹೀಗೆ ಹಲವಾರು ಆರೋಗ್ಯ ಪೂರಕ ಗುಣಗಳನ್ನು ಹೊಂದಿದ ಸಜ್ಜೆಯನ್ನು ನಮ್ಮ ಆಹಾರದೊಂದಿಗೆ ಸೇವಿಸಿ ಆರೋಗ್ಯವಂತರಾಗೋಣ.
Read E-Paper click here