Sunday, 15th December 2024

ನಮ್ಮ ಮನಸ್ಸು, ಅದನ್ನು ಕಾಡುವ ಭಯ ಮತ್ತು ಬದುಕು

ಶ್ವೇತಪತ್ರ

shwethabc@gmail.com

ಏನಿದು ಭಯ? ಆಸೆಯಿಂದ ಹುಟ್ಟುವ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೆ ಭಯ ನಮಗೆ ಅರ್ಥವಾಗುತ್ತದೆ. ಜತೆಗೆ ಅದರಿಂದ ನಾವು ಮುಕ್ತರಾಗುತ್ತೇವೆ.

ನನ್ನ ಬದುಕಲ್ಲಿ ಇದು ಆಗಬೇಕು ಎಂಬ ಅನಿಸಿಕೆಯೇ ಭಯದ ಮೂಲ. ಬದುಕಲ್ಲಿ ಏನೋ ಆಗಬೇಕು ಎನ್ನುವ ಆಶಯ ಈಡೇರದೇ ಹೋದರೆ ಏನು ಮಾಡೋದು ಎಂಬ ಆಲೋಚನೆಯ ನಡುವಿನ ಸಂಘರ್ಷವೇ ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೆ. ಹೀಗೆಂದು ಭಯವನ್ನು ವ್ಯಾಖ್ಯಾನಿಸುತ್ತಾರೆ ಚಿಂತಕ ಜಿಡ್ಡು ಕೃಷ್ಣಮೂರ್ತಿ. ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳು ನಮ್ಮೆಲ್ಲರ ಬದುಕಿನ ಪ್ರತಿ ಕ್ಷಣಕ್ಕೂ ಅನ್ವಯ ವಾಗುತ್ತವೆ.

ನಮ್ಮ ಯೋಚನೆಗಳಲ್ಲಿ , ಅನಿಸಿಕೆಗಳಲ್ಲಿ, ಆಕಾಂಕ್ಷೆಗಳಲ್ಲಿ ಭಯವಿದೆ. ನಮ್ಮ ಬದುಕನ್ನು ನಾವು ಬದುಕದೇ ಭಯದ ಬದುಕಲ್ಲಿ ಜೀವಿಸುತ್ತೇವೆ. ಪ್ರತಿಕ್ಷಣ ಮನಸ್ಸಲ್ಲಿ ಭಯ ಅವಲೋಕಿಸುತ್ತಿರುತ್ತದೆ. ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ, ಹಾಗಿದ್ದರೆ ನಮ್ಮ
ಭಯಗಳ ಕುರಿತಾದ ಅರಿವು ನಮಗಿದೆಯಾ? ಮೇಲ್ನೋಟಕ್ಕೆ ಅರಿವಿದೆ ಎಂದಿಟ್ಟು ಕೊಳ್ಳೋಣ. ಪ್ರಯತ್ನಪೂರ್ವಕವಾಗಿ ಭಯ ವನ್ನು ಮರೆಸುವ ಬೇರೆಯದೇ ವಿಷಯ ಗಳಲ್ಲಿ ನಮ್ಮ ಮನಸ್ಸನ್ನು ಕನೆಕ್ಟ್ ಮಾಡಿಕೊಂಡರೆ ಭಯದ ವಿಚಾರಗಳು ನಮ್ಮನ್ನು ಕಾಡುವುದಿಲ್ಲವಾ? ಭಯದಿಂದ ಮುಕ್ತ ರಾಗಿ ಬಿಡಬೇಕೆಂದು ಹೀಗೆಲ್ಲ ನಾವು ಯೋಚಿಸುವುದು ಸಹಜ.

ಭಯವನ್ನು ಉಂಟುಮಾಡುತ್ತಿದೆ ಎಂಬುದನ್ನು ತಿಳಿಯಲು ನಮಗೆ ಹೆಚ್ಚು ಹೊತ್ತು ಬೇಕಿರುವುದಿಲ್ಲ. ಆದರೆ ವಿಷಯದ ಕುರಿತಾದ ಭಯ ನಮ್ಮನ್ನು ಎಷ್ಟರಮಟ್ಟಿಗೆ ಕಂಗೆಡಿಸುತ್ತದೆ ಎಂಬುದನ್ನು ಅರಿಯಲು ಬರಿಯ ಇಂಟೆಲೆಕ್ಚುಯಲ್ ತಿಳಿವಳಿಕೆ ಅಷ್ಟೇ ಸಾಲದು. ಮನಸ್ಸಿನ ಆಳಕ್ಕಿಳಿದು ಇಣುಕಬೇಕು. ಭಯವನ್ನು ಹೆಕ್ಕಬೇಕು. ಭಯದ ರಚನೆ ಜಟಿಲತೆಗಳನ್ನು  ಹೊರ ತೆಗೆಯುವುದು ಹೇಗೆ? ಸಮಸ್ಯೆ ಶುರುವಿಟ್ಟುಕೊಳ್ಳುವುದೇ ಇಲ್ಲಿಂದ.

ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆಯ ಭಯಗಳಿವೆಯಾ? ಅಥವಾ ಮೂಲ ಭಯವೊಂದೇ, ಅದಕ್ಕೆ ಬ್ರಾಂಚೆಸ್‌ಗಳಿವೆಯಾ ಎಂದು? ಭಯದ ಮೂಲ ನಮಗೆ ಹೆಚ್ಚು ಅರ್ಥವಾದಷ್ಟು ಅದರ ಬ್ರಾಂಚೆಸ್‌ಗಳು ಸದ್ದಿಲ್ಲದೆ ಬತ್ತಿಹೋಗುತ್ತವೆ. ಅದರ ಪೂರ್ಣ ನೆಟ್ವರ್ಕ್‌ನ ಪರಿಚಯ ನಮ ಗಾಗುತ್ತದೆ. ಹಾಗಿದ್ದರೆ ಭಯದ ಮೂಲವೇನು ಎಂದು ನೀವು ನೋಡಿಕೊಳ್ಳಬಲ್ಲಿರಾ? ಇಲ್ಲವಾದರೆ ದಯವಿಟ್ಟು ಈಗ ನಿಮ್ಮ ಭಯಗಳತ್ತ ನೋಡಿ ನಿಮ್ಮ ಭಯಗಳನ್ನು ಇನ್ವೈಟ್ ಮಾಡಿ.

ಸಹಜವಾಗೇ ಈಗ ನಿಮಗೆ ಭಯವಾಗುವುದಿಲ್ಲ. ನಿಮ್ಮ ನಿಜವಾದ ಭಯಗಳಾವುವು ಗೊತ್ತಾ? ಒಂಟಿತನ, ಪ್ರೀತಿಸುವವರನ್ನು ಕಳೆದು ಕೊಂಡುಬಿಡುತ್ತೇನೆಂಬ ಭಯ, ಕೆಲಸ ಹೋಗಿಬಿಟ್ಟರೆಂಬ ಭಯ… ಹೀಗೆ ನಿಮ್ಮ ಒಂದೊಂದೇ ಭಯಗಳನ್ನು ನೀವು ಗುರುತಿಸುತ್ತ ಹೋದಂತೆ ನಿಮ್ಮೆಲ್ಲ ಭಯದ ಮೂಲವನ್ನು ಅವಲೋಕಿಸಲು ಸಾಧ್ಯವಾಗುತ್ತದೆ.

suppose ಸ್ನೇಹಿತರೊಬ್ಬರಿಗೆ ಒಂಟಿತನದ ಭಯವೆಂದು ಇಟ್ಟುಕೊಳ್ಳೋಣ ಇಲ್ಲಿ ನಾವು ಗುರುತಿಸಬೇಕಿರುವುದು ಸ್ನೇಹಿತರಿಗೆ ಒಂಟಿತನದ ಭಯವಾ? ಅಥವಾ ಒಂಟಿತನದ ಆಲೋಚನೆ ಅವರಲ್ಲಿ ಭಯವನ್ನು ಹುಟ್ಟಿಸುತ್ತಿದೆಯಾ ಎಂದು. Infact ಇಲ್ಲಿ ಒಂಟಿತನದ ಭಯಕ್ಕಿಂತ ಅದರ ಆಲೋಚನೆಯ ಭಯವೇ ಹೆಚ್ಚು ನಮ್ಮನ್ನು ಕಾಡುತ್ತಿರುತ್ತದೆ. ಒಂಟಿತನವೆಂಬ actuality  ನಮ್ಮನ್ನು disturb ಮಾಡುವುದಕ್ಕಿಂತ ಹೆಚ್ಚಾಗಿ ಅದರ ಬಗೆಗಿನ ಯೋಚನೆಯೇ ನಮ್ಮನ್ನು ಹೆಚ್ಚು ಭಯಭೀತರನ್ನಾಗಿಸು
ತ್ತಿರುತ್ತದೆ.

ಉದಾಹರಣೆಗೆ ಒಂಟಿತನದ ಬಗ್ಗೆ ನಮಗೊಂದಿಷ್ಟು ಐಡಿಯಾಗಳಿರುತ್ತವೆ. ಈ ಐಡಿಯಾಗಳನ್ನು ನಾವು ತರ್ಕಕ್ಕೆ ಒಳಪಡಿಸಲು ಶುರು ಮಾಡ್ತೀವಿ. ಆ ತರ್ಕ ನಮ್ಮನ್ನ ಒಂದು conslusion ಗೆ ತಂದು ನಿಲ್ಲಿಸುತ್ತದೆ. ನಮ್ಮ ತರ್ಕದ ಪ್ರಕಾರ ಒಂಟಿತನದ ಬಗ್ಗೆ ನಮಗೆ ಹೆಚ್ಚು ಗೊತ್ತೇ ಇರುವುದಿಲ್ಲ. ಆದರೆ ಅದನ್ನು ನೆನಪಿಸಿಕೊಂಡಾಗಲೆಲ್ಲ ನಮಗೆ ಭಯ ಶುರುವಿಟ್ಟುಕೊಳ್ಳುತ್ತದೆ. ನಮ್ಮ looks,ನಮ್ಮ ಆಟಿಟ್ಯೂಡ್, ನಮ್ಮ ಒಪಿನಿಯನ್, ನಮ್ಮ judgements, ನಮ್ಮ position, ನಮ್ಮ status ಹೀಗೆ ನಮ್ಮ ಬಗ್ಗೆ ನಾವು ಕೇಂದ್ರೀಕರಿಸುತ್ತ ಹೋದಂತೆ ಆಳದಲ್ಲಿ ಒಂಟಿಯಾಗುತ್ತ ಹೋಗುತ್ತೇವೆ.

ಪ್ರತಿದಿನ, ಪ್ರತಿ ನಿಮಿಷ, ಅನೇಕ ವರ್ಷಗಳು ಹೀಗೆ ಸ್ವಕೇಂದ್ರೀಕೃತವಾಗಿ ಬದುಕಿ ಬಿಟ್ಟಿದ್ದೇವೆ. ಸಹಜವಾಗೇ ಈ ಬದುಕು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸಿದೆ. ಭಯ ಸದ್ದಿಲ್ಲದೆ ಮನೆ ಮಾಡಿಬಿಟ್ಟಿದೆ. ಹೀಗೆ ಭಯ ಪ್ರತಿದಿನದ ನಮ್ಮ ಚಟುವಟಿಕೆ ಗಳಲ್ಲಿ, ಆಲೋಚನೆಗಳಲ್ಲಿ, ಸಂತೋಷಗಳಲ್ಲಿ, ಅನುಭವಗಳಲ್ಲಿ, ಆವರಿಸುತ್ತಾ ನಮ್ಮನ್ನು ನಿಜವಾದ ನಮ್ಮಿಂದ ಪ್ರತ್ಯೇಕಿಸಿ ಬಿಟ್ಟಿದೆ. ಈ ನಾನು ಎನ್ನುವುದೇ ಭಯದ ಮೂಲ. ಕಾರಣವನ್ನು ಅನ್ವೇಷಿಸುತ್ತ ಅರ್ಥಮಾಡಿಕೊಂಡು resolve ಮಾಡಿ ಕೊಳ್ಳಬೇಕಿದೆ.

ಭಯ ತಾನಾಗೆ ಅಸ್ತಿತ್ವಕ್ಕೆ ಬರುವುದಲ್ಲ. ಅದೊಂದು ಅಮೂರ್ತ ಕಲ್ಪನೆಯೂ ಅಲ್ಲ. ನಮ್ಮ ಮನಸ್ಸು ಯಾವುದಾದರೂ ವಿಷಯವನ್ನು ಎದುರಿಸಲು ಅಸಮರ್ಥವಾದಾಗ ಆ ವಿಷಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ ಹೀಗೆ ತಪ್ಪಿಸಿಕೊಳ್ಳಲು ಹವಣಿಸುವ ಮನದ ಯೋಚನೆ ಭಯಕ್ಕೆ ಎಡೆಮಾಡಿಕೊಡುತ್ತದೆ. ಜತೆಗೆ ಮತ್ತೊಂದಿಷ್ಟು ಘರ್ಷಣೆಗಳನ್ನು ಸಂಕೀರ್ಣತೆಗಳನ್ನು ಹುಟ್ಟುಹಾಕುತ್ತದೆ.

ಹೀಗೆ ಹುಟ್ಟಿಕೊಳ್ಳುವ ಭಯ ಭ್ರಮೆಯನ್ನು ಸೃಷ್ಟಿಸುತ್ತ ಮನಸನ್ನು ಮಂಕಾಗಿಸುತ್ತದೆ. ನೀವು ಗಮನಿಸಿದ್ದೀರಾ; ನೀವು ಹೆದರಿ ದಾಗ ನಿಮ್ಮ ಮನಸ್ಸು ಹಿಂಜರಿಯುತ್ತದೆ. ಯಾರದ್ದಾದರೂ ಸಹಾಯಕ್ಕಾಗಿ ಹಾತೊರೆಯುತ್ತದೆ. ಇದೇ ಭಯ ವಾಸ್ತವ ವನ್ನು ಎದುರಿಸಲು ಸೋತು ನಿಮ್ಮ ಸುತ್ತಲೂ ಸುಳ್ಳಿನ ಗೋಡೆಯನ್ನು ಕಟ್ಟಿ ಬಿಡುತ್ತದೆ. ಭಯದಲ್ಲಿ ಬದುಕುವ ಮನಸ್ಸು ಸೋತಂತೆ-ಸತ್ತಂತೆ ಹೀಗೆ ಸೋತು-ಸತ್ತ ಮನಸ್ಸು ಹೊಸದಾಗಿ ಯೋಚಿಸುವ ಸಾಧ್ಯತೆಗಳನ್ನು ಕಳೆದುಕೊಳ್ಳುತ್ತದೆ.

ಈಗ ನೀವೇ ಯೋಚಿಸಿ ಹೀಗೆ ಭಯದಿಂದ ಬದುಕುವುದಾದರೂ ಹೇಗೆ? ಎಷ್ಟು ದಿನ? ನಮ್ಮ ಸಂಬಂಧ ನಾವು ಬದುಕುವ ಸಮಾಜದ ಜೊತೆಯು ಸಂಬಂಧಿಕರ ಜೊತೆಯು ಪ್ರತಿಯೊಂದರ ಜತೆಯು ಸಂಪೂರ್ಣವಾದ ಭಯದಿಂದ ಮುಕ್ತವಾಗಿರಬೇಕು. ಇಲ್ಲಿ ನಮಗೆಲ್ಲ ಸ್ಪಷ್ಟವಾಗುವ ಒಂದು ವಿಷಯವೆಂದರೆ ಭಯದಿಂದ ಓಡಿ ಹೋಗಲು ನಮಗೆ ಸಾಧ್ಯವಿಲ್ಲ. ಆದ್ಯಾಗೂ ನಾವು ಓಡಿ ಹೋದೆವೆಂದಿಟ್ಟು ಕೊಳ್ಳೋಣ ಒಂದು ದಿನ? ಒಂದು ವರುಷ? ಎಷ್ಟೇ ವರುಷ ಎಷ್ಟೇ ದೂರ ಓಡಿದರೂ ಭಯ ನಮ್ಮ
ಹಿಂದೆಯೇ ಓಡಿ ಬಂದಿರುತ್ತದೆ.

ನಮ್ಮ ಜತೆಯ. ಒಬ್ಬ ವ್ಯಕ್ತಿಯ ಒಂದು ವಸ್ತುವಿನ ಸಂಬಂಧದ ಜೊತೆ ಜೊತೆಯ ಭಯ ಹುಟ್ಟಿಕೊಳ್ಳುತ್ತದೆ. Public opinion
ಅಂದ್ರೆ ಭಯ, ಬಾಸ್ ಕಂಡರೆ ಭಯ, ಕೆಲಸ ಕಳೆದುಕೊಂಡರೆ ಎಂಬ ಭಯ, ಸಾವಿನ ಭಯ, ನೋವಿನ ಭಯ, ಆರೋಗ್ಯದ ಭಯ, ಒಂಟಿತನದ ಭಯ, ಯಾರೂ ಪ್ರೀತಿಸುತ್ತಿಲ್ಲವೆಂಬ ಭಯ…ಹೀಗೆ ಭಯಕ್ಕೆ ಅನೇಕ ರೂಪಗಳು. ಒಂದಷ್ಟು ಭಯಗಳು ಪ್ರಜ್ಞಾ ಪೂರಕವಾಗಿರುತ್ತವೆ ಮತ್ತೊಂದಷ್ಟು ಸುಪ್ತವಾಗಿರುತ್ತವೆ.

ಭಯದ ರೂಪಗಳು ಏನೇ ಇದ್ದರೂ ಭಯ ಎನ್ನುವುದೊಂದೇ. ಅದು ಪ್ರಜ್ಞೆ ಪೂರಕವಾಗಿರುತ್ತದೋ ಸೂಪ್ತವಾಗಿರುತ್ತದೋ ನೇರವಾಗಿ ಅದನ್ನು ಫೇಸ್ ಮಾಡಿದಾಗ ಅಷ್ಟೇ ಭಯದಿಂದ ನಾವು ಬಿಡುಗಡೆಯಾಗಬಹುದು. ಭಯವನ್ನು ಫೇಸ್ ಮಾಡಲು
ನಾವು ಹಿಂಜರಿಯುತ್ತೇವೆ ಅದರಿಂದ ವಿಮುಖರಾಗಿ ಓಡುತ್ತೇವೆ, ಸಾವಿನ ಭಯವನ್ನು ತೆಗೆದುಕೊಳ್ಳೋಣ, ಸಾವಿನ ಕುರಿತಾದ ಭಯ ನಿಮ್ಮನ್ನು ಕಾಡಿದಾಗ ಆ ಆಲೋಚನೆಯಿಂದ ತಪ್ಪಿಸಿಕೊಳ್ಳಲು ನೀವು ಹೆಣಗುತ್ತೀರಿ. ಆದರೆ ನೆನ ಪಿಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯಾವುದೇ ಆಲೋಚನೆಗಳು ಭಯವನ್ನು ಗಟ್ಟಿಗೊಳಿಸುತ್ತಾ peramanent ಗೊಳಿಸುತ್ತ ಅಸಮರ್ಥ ವನ್ನಾಗಿಸುತ್ತವೆ. ಕೆಲವೊಂದು ಬೌದ್ಧಿಕ ಭಯಗಳಿರುತ್ತವೆ. ಪ್ರಾಣಿಗಳನ್ನು ಕಂಡರೆ ಭಯ.

ಇದು ಸಹಜವೂ ಆರೋಗ್ಯಕರವಾದದ್ದು ಹೌದು. ಇದು  ಭಯವಲ್ಲ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂಬ ಸಹಜವಾದ ಬಯಕೆ. ಬದುಕಲ್ಲಿ permanent ಎಂಬುದು ಯಾವುದು ಇಲ್ಲ. ನಾವು ಸಂಬಂಧಗಳಲ್ಲಿ, ಜೀವಿಸುವ ಪ್ರತಿಯೊಂದರಲ್ಲೂ Permanancy ಯನ್ನು ಸ್ಥಾಪಿಸಲು ಪ್ರಯತ್ನಿಸುತ್ತೇವೆ inturn ಈ ಪ್ರಯತ್ನಿಸುವಿಕೆ ನಮ್ಮಲ್ಲಿ ಕಳೆದುಕೊಳ್ಳುವ ಭಯವನ್ನು ಮೂಡಿಸುತ್ತಾ ಹೋಗುತ್ತದೆ. ಭಯದಿಂದ ಹೊರ ಬರುವ ದಾರಿಗಳನ್ನು ಹುಡುಕ ಹೊರಟರೆ ಭಯದ ಕೂಪದೊಳಗೆ ನಾವು ಸಿಲುಕಿಬಿಡುತ್ತೇವೆ ಅದೇ ಭಯವನ್ನು ಅರ್ಥಮಾಡಿಕೊಳ್ಳುತ್ತ face ಮಾಡುತ್ತ ನಿಂತರೆ ಭಯ ಕೂಡ ಹೆದರಿ ನಿಲ್ಲುತ್ತದೆ.

ಹಾಗಿದ್ದರೆ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ಭಯ ಮುಕ್ತವಾಗಿಸಲು ಸಾಧ್ಯವಾ? ಸಾಧ್ಯವಾಗಿಸಿಕೊಳ್ಳಲು ಪ್ರಯತ್ನಿಸಬೇಕು ಭಯ ಕೇವಲ ಭ್ರಮೆಯನ್ನು ಪೋಷಿಸುತ್ತದೆ ಮನಸ್ಸನ್ನು ಟೊಳ್ಳಾಗಿಸುತ್ತದೆ. ಭಯ ಎಲ್ಲಿರುತ್ತದೆಯೋ ಅಲ್ಲಿ  ಸ್ವಾತಂತ್ರ್ಯ ವಿರುವುದಿಲ್ಲ. ಸ್ವಾತಂತ್ಯ್ರವಿರದ ಕಡೆ ಪ್ರೀತಿ ಹುಟ್ಟಲು ಸಾಧ್ಯವೇ ಇಲ್ಲ. ಬದುಕಿನುದ್ದಕ್ಕೂ ಬೇರೆಯವರ ಜೊತೆಗೆ comparisons ಗಳಿವೆ, competitions ಗಳಿವೆ ನಾನು ಏನೋ ಆಗಿಬಿಡಬೇಕೆಂಬ struggles ಗಳಿವೆ ಇವೆಲ್ಲವುಗಳಲ್ಲಿ ಭಯವಿದೆ.

ಏಕೆಂದರೆ ಇವೆಲ್ಲವೂ ನಮ್ಮಲ್ಲಿ ಹೊಟ್ಟೆಕಿಚ್ಚು ಸ್ವಾರ್ಥ ದ್ವೇಷವನ್ನು ಪೋಷಿಸುತ್ತವೆ. ಎಲ್ಲಿ ದ್ವೇಷವಿರುತ್ತದೋ ಅಲ್ಲಿ ಖುಷಿ ಹುಟ್ಟಲಾರದು ಮತ್ತೊಂದಿಷ್ಟು ಭಯ ಮಾತ್ರ ಹುಟ್ಟುತ್ತದೆ. ಒಂದು ಮತ್ತು ಮತ್ತೊಂದರ ನಡುವಿನ relations ನಲ್ಲಿ ಭಯವಿದೆ. ನಾವೆಲ್ಲ ನಮ್ಮ ಮನಸ್ಸನ್ನ conditioned ಮಾಡಿಬಿಟ್ಟಿದ್ದೇವೆ ಹೀಗೆ ಯೋಚಿಸಬೇಕು, ಹೀಗೆ ಅರ್ಥೈಸಬೇಕು, ಹೀಗೆ ಭಾವಿಸಬೇಕು ಅಂತ ವರ್ಷಾನುಗಟ್ಟಲೆ conditioned ಆದ ಮನಸ್ಸು ಯಾವುದೋ unknow ವಿಚಾರಕ್ಕೆ ತೆರೆದು ಕೊಂಡಾಗ ಸಹಜವಾಗೆ ಭಯ ಕ್ಕೊಳಗಾಗುತ್ತದೆ.

ನಾನು ಇಂತಹುದೇ frame ನಲ್ಲಿ ಬದುಕಿ ಬಿಡಬೇಕು ಎಂಬ ಆಸೆಯ mindset ನ ಭಯ ವಿದೆ. ಭಯದಿಂದ ತಪ್ಪಿಸಿಕೊಳ್ಳಲು ನಾವು ಅನೇಕ ದಾರಿಗಳನ್ನು ಹುಡುಕುತ್ತೇವೆ. ಅದರಲ್ಲಿ ತುಂಬಾ common ಆದ ದಾರಿ ಅಂದ್ರೆ identification. We start identifying ourselves ನಾನು ಇಂತಹವರ ಮಗ, ಮೊಮ್ಮಗ, ಇಂತಹ ಊರೂ, ಇಂತಹ ಮನೆತನ ಅಂತ. ಈ ಗುರುತಿಸಿ ಕೊಳ್ಳುವಿಕೆ ಅಥವಾ identification ನಮ್ಮನ್ನೇ ನಾವು ಮರೆತುಬಿಡುವ ಒಂದು ಪ್ರಕ್ರಿಯೆ. ನಮಗಿಂತ ಗ್ರೇಟರ್ ಅನಿಸುವ ವ್ಯಕ್ತಿಗಳ ವಿಚಾರಗಳ ಜೊತೆ ನಮ್ಮ ಐಡೆಂಟಿಟಿಯನ್ನು ನಾವು ಮಾಡಿಕೊಳ್ಳುತ್ತ ಭಯದಿಂದ ಟೆಂಪರರಿಯಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಏನಿದೆಯೋ ಅದನ್ನು ಆಕ್ಸೆಪ್ಟ್ ಮಾಡಿಕೊಳ್ಳಲು ಮನಸ್ಸು ಸೋತಾಗ ಭಯ ಹುಟ್ಟಿಕೊಳ್ಳುತ್ತದೆ.

ಭಯದಿಂದ ನಾವು ಸ್ವತಂತ್ರರಾಗುವುದು ನಮ್ಮ SelfKnowledge ನ ಮೂಲಕ. ಆಸೆ ಮತ್ತು ಆಲೋಚನೆಗಳಿಂದ ಬಿಡಿ ಬಿಡಿ ಯಾಗಿರುವ ಮನಸ್ಸನ್ನು ಸಮಗ್ರ ವಾಗಿಸುತ್ತ lets start ‘Knowing our own-self’ ನಮಗೆ ನಾವು ಹೆಚ್ಚು ಪರಿಚಯ ವಾದ್ದಂತೆ fundamental realization ಆಗತ್ತೆ ಈ realization ನಿಧಾನವಾಗಿ ಮನಸ್ಸನ್ನ ಮುಕ್ತವಾಗಿಸುತ್ತ ಹೋಗುತ್ತದೆ.