ಶ್ವೇತಪತ್ರ
shwethabc@gmail.com
ನಾವೆಲ್ಲ ಪ್ರಕೃತಿಯ ನಿಯಮಗಳಾದ ಹುಟ್ಟು ಸಾವಿನ ಚಕ್ರದಲ್ಲಿ ಬಂಧಿತರು. ಈ ಹುಟ್ಟು ಸಾವಿನ ಚಕ್ರಗಳ ನಡುವಿನ ನಮ್ಮ ಬದುಕಿನ ಪಥದಲ್ಲಿ ಘರ್ಷಣೆಯು ನಮ್ಮಲ್ಲಿ ನಾಚಿಕೆ ಹಾಗೂ ಅಪರಾಧಿ ಪ್ರಜ್ಞೆಯನ್ನು ಮೂಡಿಸುತ್ತದೆ. ಮಹಾಕಾವ್ಯ ಗೀತೆಯೂ ಅಪರಾಧಿ ಪ್ರಜ್ಞೆಯನ್ನು ಬದಿಸರಿಸಿ ಹೊಸ ಹೊಳಹುಗಳನ್ನು ಮರುಪ್ರೇರಣೆಯನ್ನು ಮನಸ್ಸಿಗೆ ತುಂಬುತ್ತದೆ.
ಭಗವದ್ಗೀತೆ, ಮಹಾಭಾರತವೆಂಬ ಮಹಾಕಾವ್ಯದ ಮುಖ್ಯ ಭಾಗ. ಭೀಷ್ಮ ಪರ್ವದಲ್ಲಿ ಉಲ್ಲೇಖಿತಗೊಳ್ಳುವ ಗೀತೆ, ಶ್ರೀಕೃಷ್ಣ ಹಾಗೂ ಅರ್ಜುನನ ನಡುವೆ ಯುದ್ಧ ಭೂಮಿಯಲ್ಲಿ ನಡೆಯುವ ಸಂಭಾಷಣೆ. ೧೮ ಯೋಗಗಳು ಹಾಗೂ ೭೧ ಶ್ಲೋಕಗಳುಳ್ಳ ಇದು ಶ್ಲೋಕದಿಂದ ಮೊದಲುಗೊಂಡು ಮೋಕ್ಷ ಸನ್ಯಾಸ ಯೋಗದಲ್ಲಿ ಮುಕ್ತಾಯ ಗೊಳ್ಳುತ್ತದೆ. ಭಗವದ್ಗೀತೆಯನ್ನು ಒಬ್ಬ ಓದುಗ ಆತನ ಅಥವಾ ಆಕೆಯ ನಂಬಿಕೆಯ ಆಧಾರದ ಮೇಲೆ ವಿವೇಕದ ಆಧಾರದ ಮೇಲೆ ಹೇಗೆ ಬೇಕಾದರೂ ಅರ್ಥೈಸಬಹುದು. ಕೆಲವರಿಗೆ ೫ ಸಾವಿರ ವರ್ಷಗಳ ಹಿಂದಿನ ಐತಿಹಾಸಿಕವೊ, ಕಾಲ್ಪನಿಕ ಕಥೆಯೋ ಆಗಿರಬಹುದು. ಆದರೆ ಇನ್ನೂ ಕೆಲವರಿಗೆ ವೇದವ್ಯಾಸರು ಗಣಪತಿಯಿಂದ ಬರೆಸಿದ ಪೌರಾಣಿಕ ಕಥೆಯೇ ಇರಬಹುದು – ಈ ಮಹಾಭಾರತವೆಂಬ ಮಹಾಕಾವ್ಯ.
ಇಲ್ಲಿ ಮುಖ್ಯವಾಗುವ ಹಾಗೂ ಹೆಚ್ಚು ಪ್ರಸ್ತುತವಾಗುವ ವಿಷಯ ಭಗವದ್ಗೀತೆ ಏನು? ಎನ್ನುವುದಕ್ಕಿಂತ ಅದು ಏನನ್ನು ಹೊರಹೊಮ್ಮಿಸಿತು ಎಂಬುದು. ಮನೋವಿಜ್ಞಾನದ ಪ್ರಾಧ್ಯಾಪಕಿಯಾಗಿ ೧೮ ಅಧ್ಯಾಯಗಳ ಗೀತೆ, ಅದರಲ್ಲಿನ ಪ್ರಕ್ರಿಯೆ ಹಾಗೂ ಸಂಭಾಷಣೆಯನ್ನು ಆಪ್ತ ಸಲಹೆಯ ಮಾದರಿಯಲ್ಲಿ ರೂಪಿಸಲು ಉಪಯುಕ್ತ. ಜತೆಗೆ ಇವತ್ತಿನ ಮನೋಚಿಕಿತ್ಸೆಗೆ ಅನ್ವಯಿಸಿ ಕೊಳ್ಳಬಹುದಾದ ಸಾರಾಂಶವೇ ಇದರಲ್ಲಡಗಿದೆ ಎಂಬುದು ನನ್ನ ಅನಿಸಿಕೆ.
ಗೀತೆಯಲ್ಲಿನ ‘ಶಿಷ್ಯಸ್ತೆ ಅಃ ಸಾಧಿ ಮಂ ತ್ವಂ ಪ್ರಪಾಣಃ’ (ಎರಡನೆಯ ಅಧ್ಯಾಯ ಮೂರನೇಯ ಶ್ಲೋಕ) ಹಾಗೂ ‘ನಾಸೋ ಮೋಹಂ ಸ್ಮೃರ್ತಿ ಲಬ್ಧ ತ್ವತ್
ಪ್ರಸಾದನ್ ಮಾಯಾ ಅಚ್ಯೂತ ಸ್ಥಿತೋಸ್ಮಿ ಗತ ಸಂದೇಹಃ ಕರೀಶ್ಯೆ ವಚನಃ ತವ’ (18ನೆಯ ಅಧ್ಯಾಯ ೭೩ನೇ ಶ್ಲೋಕ). ಈ ಎರಡು ಶ್ಲೋಕಗಳಲ್ಲಂತೂ ಮನೋವಿಜ್ಞಾನವೇ ಅಡಗಿದೆ. ಮೊದಲಯನೇಯ ಶ್ಲೋಕ – ನಾನು ನಿನ್ನ ಅನುಯಾಯಿ. ನನಗೆ ಮಾರ್ಗದರ್ಶನ ನೀಡು, ಸಹಾಯ ಮಾಡು ಎಂಬ ಅರ್ಥವನ್ನು ಧ್ವನಿಸುತ್ತದೆ. ಎರಡನೆ ಶ್ಲೋಕವು-ಮೋಡಗಳೆಲ್ಲ ಸರಿದಿವೆ, ನನ್ನೆಲ್ಲ ಸಂವೇದನೆಗಳು ಮರಳಿ ಬಂದಿವೆ, ನಿನ್ನ ಮಾತುಗಳು ನನ್ನೆಲ್ಲ ಅನುಮಾನಗಳನ್ನು ತೊಡೆದು ಹಾಕಿವೆ, ನೀ ಹೇಳಿದಂತೆ ನಾ ನಡೆಯಲು ಸಿದ್ಧ ಎಂಬ ಅರ್ಥವನ್ನು ಹೊಮ್ಮಿಸುತ್ತದೆ. ಯುದ್ಧ ಭೂಮಿಯಲ್ಲಿ ತನ್ನವರನ್ನೆಲ್ಲ ಕಂಡು ಇವರೊಂದಿಗೆ ತಾನು ಯುದ್ಧ ಮಾಡಬೇಕೆ? ಎಂಬ ದ್ವಂದ್ವಕ್ಕೆ ಒಳಗಾದ ಅರ್ಜುನ ಮಾನಸಿಕವಾಗಿ ಅಸಹಾಯಕನಾಗುತ್ತಾನೆ.
ಲಯತಪ್ಪಿದ ಅರ್ಜುನನ ಮನಸ್ಥಿತಿಗೆ ಶ್ರೀಕೃಷ್ಣನೊಬ್ಬ ಆಪ್ತ ಸಲಹೆಗಾರನಾಗಿ (ಕೌನ್ಸಿಲರ್) ಹತ್ತಿರವಾಗುತ್ತಾನೆ. ಎಲ್ಲೂ ಹೀಗೇ ಮಾಡು, ಹೀಗೆ ಮಾಡ
ಬೇಡವೆಂಬ ತನ್ನ ಅಭಿಪ್ರಾಯಗಳನ್ನು ಹೇರದೆ, ವಾಸ್ತವದ ಸಂಗತಿಗಳನ್ನಷ್ಟೇ ಅರ್ಜುನನೆದುರು ತೆರೆದಿಡುತ್ತಾನೆ. ಶ್ರೀಕೃಷ್ಣನ ಮಾತುಗಳು ಅರ್ಜುನನ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು(Decision making) ವಿವೇಚನೆ ಯನ್ನು (Reasoning) ಸಮಸ್ಯೆ ಬಗೆಹರಿಸುವ ನೈಪುಣ್ಯವನ್ನು (Problem solviing) ಆಲೋಚನೆಯನ್ನು (Thinking)… ಈ ಎಲ್ಲ ಸಂeನಾತ್ಮಕ ಪ್ರಕ್ರಿಯೆಗಳನ್ನು ಗಟ್ಟಿಗೊಳಿಸುತ್ತ ಹೋಗುತ್ತವೆ. ಇದರ ಫಲಿತಾಂಶವೇ ಅರ್ಜುನನಲ್ಲಿದ್ದ ಆತಂಕ, ಚಿಂತೆ, ಖಿನ್ನತೆ, ಅಪರಾಧಿ ಮನೋಭಾವಗಳು ಕಳೆದು ಆತ ತನ್ನ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಆತ್ಮವಿಶ್ವಾಸದಿಂದ, ಚೈತನ್ಯದಿಂದ ತನ್ನ ಗುರಿಯೊಡಗೆ ಆತ ಕಾರ್ಯೊನ್ಮುಖನಾಗುತ್ತಾನೆ.
ಮನೋವಿಜ್ಞಾನದ ವಿದ್ಯಾರ್ಥಿಗಳಾಗಿ ಗೀತೆಯನ್ನು ನೋಡಿದಾಗ ಕೆಲವೊಂದು ಪ್ರಶ್ನೆಗಳು ಸಹಜವಾಗೇ ಮೂಡುತ್ತವೆ. ಗೀತೆಯಿಂದ ತೆಗೆದುಕೊಳ್ಳ ಬಹುದಾದ ಪಾಠಗಳೇನು? ಗೀತೆಯನ್ನು ಆಧಾರವಾಗಿಟ್ಟುಕೊಂಡು ಮನೋಚಿಕಿತ್ಸೆಯ ಮಾದರಿಯನ್ನು ರೂಪಿಸಬಹುದೇ? ಈ ಮನೋಚಿಕಿತ್ಸೆಯ ಮಾದರಿ ಇವತ್ತಿಗೆ ಹೇಗೆ ಉಪಯುಕ್ತವಾಗಬಹುದು? ಹೀಗೆ ಮಾನಸಿಕ ಸಮಸ್ಯೆ, ಒತ್ತಡಗಳಿಂದ ಬಳಲುವ ವ್ಯಕ್ತಿಗಳಿಗೆ ಮನೋವೈದ್ಯಕೀಯ ಭಾಗವಾಗಿ ಆಪ್ತ ಸಲಹೆ ಹಾಗೂ ಮನೋಚಿಕಿತ್ಸೆಗಳು ಅವಿಭಾಜ್ಯ ಅಂಶಗಳಾಗಿ ನಿಲ್ಲುತ್ತವೆ.
ಪ್ರಸ್ತುತವಾಗಿ ನಾವೆಲ್ಲ ಅನುಸರಿಸುವ ಮನೋಚಿಕಿತ್ಸಕ ಮಾದರಿಗಳು ಪಾಶ್ಚಿಮಾತ್ಯದ ಅನುಕರಣೆಗಳೇ ಆಗಿವೆ. ಈ ಮಾದರಿಗಳು ನಮ್ಮ ನೆಲದ ಸಾಮಾಜಿಕ, ಸಾಂಸ್ಕೃತಿಕ, ಮನೋಭಾವಕ್ಕೆ ಎಷ್ಟು ಪ್ರಸ್ತುತ ಮತ್ತು ಪೂರಕವಾಗುತ್ತವೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡೆ ಡಾಕ್ಟರ್ ಐಐ ನೇಕಿರವರು ‘ದ ಗುರು ಚೇಲ’ ಅಂಶವನ್ನು ಮನೋಚಿಕಿತ್ಸೆಯ ಮಾದರಿಯಾಗಿ ರೂಪಿಸಿದರು. ಇದು ಬಾರಿ ಚರ್ಚೆಗೆ ಒಳಗಾದದ್ದು ಹೌದು. ಭಾರತದ ಪ್ರಮುಖ ಮನೋ ವೈದ್ಯರು, ಮನೋವಿಜ್ಞಾನಿಗಳು ಭಾರತೀಯ ನೆಲದ ಮನೋಭಾವನೆಗಳಿಗೆ ಅನುಗುಣವಾಗಿ ಭಗವದ್ಗೀತೆಯನ್ನು ಆಧಾರವಾಗಿಟ್ಟುಕೊಂಡು ಮನಸ್ಸಿನ ಕಾಯಿಲೆಗಳಿಗೆ ಚಿಕಿತ್ಸೆಯನ್ನು ರೂಪಿಸ ಬೇಕೆಂದು ಚರ್ಚಿಸಿದ್ದು ಇದೆ.
ವಿದ್ಯಾರ್ಥಿಗಳಿಗೆ ಆತಂಕ(ಅಜಿಛಿಠಿqs), ಖಿನ್ನತೆ (ಡಿಪ್ರೆಶನ್) ಹೀಗೆ ನಾವು ದಶಕದಿಂದ ಪಾಠ ಮಾಡುತ್ತ, ಓದಿದ್ದು ಓದಿಸಿದ್ದು ಪಾಶ್ಚಿಮಾತ್ಯ ಟೆಕ್ಸ್ಟ್‌ಬುಕ್ ಗಳನ್ನೇ. ಇತ್ತೀಚೆಗೆ ಮಹಾಕಾವ್ಯದ ಮರು ಓದು ಮನಸ್ಸಿನ ವಿeನಕ್ಕೆ ನನ್ನನ್ನು ಕನೆಕ್ಟ್ ಮಾಡದೆ ಇರಲಿಲ್ಲ. ಉದಾಹರಣೆಗೆ ಹೇಳುವುದಾದರೆ ‘ಸೀದಂತಿ ಮಮ ಗತ್ರಾಣಿ ಮುಖಃ ಪರಿಸುಶ್ಯತಿ ವೇಪತ್ಸು ಶರೀರೇ ಮೇ ರೋಮ ಹರ್ಷಸ್ ಚ ಜಯತೇ’-ಈ ಶ್ಲೋಕವು ಅರ್ಜುನನಲ್ಲಿನ ಆತಂಕದ ಮನಃಸ್ಥಿತಿಗೆ ಸಾಕ್ಷಿಯಾಗಿದೆ. ಮೇಲಿನ ಶ್ಲೋಕದ ಅರ್ಥವೂ ಕೈಕಾಲುಗಳಲ್ಲಿ ಶಕ್ತಿ ಇಲ್ಲದಂತಾಗಿದೆ, ಬಾಯಿ ಒಣಗಿದೆ, ದೇಹ ನಡುಗುತ್ತಿದೆ, ಚರ್ಮ ಹೆಬ್ಬಾತಿನಂತೆ
ಊದಿಕೊಂಡಿದೆ ಎಂಬುದಾಗಿರುತ್ತದೆ.
ಮುಂದೆ ಬರುವ ಮತ್ತೊಂದು ಶ್ಲೋಕ ‘ಗಾಂಡೀವಂ ಶ್ರಮಸ್ತೆ ಹಸ್ತತ್ ತ್ವ್ಕಚೈವ ಪರಿದ್ಯತೆನ ಚ ಸಕ್ ನೋಮಿ ಅವಸ್ತಂತು ಭ್ರ ಮಾತಿ ವ ಚ ಮೇ ಮನಂ’. ಇದರ ಅರ್ಥವೂ ಗಾಂಢೀವ ಕೈಯಿಂದ ಜಾರಿದೆ, ಚರ್ಮವೆಲ್ಲ ಸುಡುತ್ತಿದೆ. ನಿಂತುಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ಮನಸ್ಸು ತಾಕಲಾಟಕ್ಕೆ
ಒಳಗಾಗಿದೆ ಎಂದು. ಅರ್ಜುನನ ಇದೇ ಮನಃಸ್ಥಿತಿ ನಮ್ಮ ಈ ಹೊತ್ತಿನ ಕೆಲಸ ಕಳೆದುಕೊಳ್ಳುವ ಭಯ, ಪರಸ್ಪರ ಸಂಬಂಧಗಳಲ್ಲಿನ ಘರ್ಷಣೆ, ಸಾಲದ ಹೊರೆಗಳು, ಒತ್ತಡಕಾರಿ ಸನ್ನಿವೇಶಗಳಿಂದ ಉಂಟಾಗುವ ಆತಂಕಗಳಿಗೆ ಹೋಲಿಸಬಹುದಾಗಿದೆ. ಅದೇ ರೀತಿ ಖಿನ್ನತೆಯಿಂದ ಉಂಟಾಗುವ ಋಣಾತ್ಮಕ ಆಲೋಚನೆಗಳಾದ ‘ನ ಕಾಂಕ್ಷೆ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ ಕಿಂ ನ ರಾಜ್ಯೇನ ಗೋವಿಂದ ಕಿಂಗ್ ಭೋಗೈರ್ಯ ಜೀವಿತೇನ ವ-ಗೆಲುವನ್ನು ಹೊಂದಬೇಕೆಂಬ ಆಸೆ ತಪ್ಪು. ರಾಜ್ಯಭೋಗ, ಐಶಾರಾಮ, ಯುದ್ಧ ಇವೆಲ್ಲವುಗಳು ನನಗೇಕೆ ಎಂಬ ಭಾವ. ಇದೇ ರೀತಿ ಖಿನ್ನತೆಯಿಂದ ಅರ್ಜುನನಿಗೆ ಉಂಟಾಗುವ ‘ಅಹೋಬತ ಮಹತ್ ಪಾಪಂ ಕರ್ತುರಿ ವ್ಯವಸತಾ ವಾಯುಂ ಯದ್ರಾಜ್ಯ ಸುಖೋಬೇನ ಹನ್ ತುಮ್ ಸ್ವಜನ ಮುದ್ಯತಂ’ -ಇದರ ಅರ್ಥ ನಮ್ಮ ಸ್ವಂತ ಅಣ್ಣ ತಮ್ಮ ದಾಯಾದಿಗಳನ್ನು ಕೊಲ್ಲುವಂತಹ ಪಾಪದ ಕೆಲಸಕ್ಕೆ ಮುಂದಾಗಬೇಕೆ ಎಂಬ ದ್ವಂದ್ವ.
ಇದೇ ಖಿನ್ನತೆಯಿಂದ ಉಂಟಾಗುವ ಸಾವಿನ ಆಸೆ. ‘ಯಾದಿ ಮ ಪ್ರತೀಕರಂ ಅಸಾಸಂಂ ಪಣಯಹ್ ಧ್ರುತರಾಷ್ಟ್ರಾನೇ ಹನುಸ್ತನ್ ಮೇ ಕ್ಷೇಮಾತರಂ ಭವೇತ್ – ನನ್ನ ಶತ್ರುಗಳಿಂದ ಯುದ್ಧದಲ್ಲಿ ನಾನು ಕೊಲ್ಲಲ್ಪಟ್ಟರೂ ಅದು ಒಳ್ಳೆಯದೇ. ಅರ್ಜುನನ ಅಂದಿನ ಮನದ ವ್ಯಾಕುಲತೆ ನಮ್ಮೆಲ್ಲರ ಇಂದಿನ ತಾಕಲಾಟಗಳಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ.ಅಂದು ಹಸ್ತಿನಾವತಿ ಇದ್ದರೆ ಇಂದು ಸ್ವಂತzಂದು ಬೈಕು,ಕಾರು, ಮನೆ ಹೀಗೆ ಅನೇಕ ಹಸ್ತಿನಾವತಿಗಳ ಪಟ್ಟಿಯೇ ಮನದೆದುರು ತೆರೆದುಕೊಳ್ಳುತ್ತಾ ನಿಲ್ಲುತ್ತವೆ. ಸಮಸ್ಯೆಗೆ ಪರಿಹಾರವನ್ನು ಗೀತೆ ಒದಗಿಸಿಕೊಟ್ಟು ಅರ್ಜುನ ತನ್ನ ಮನಸ್ಸಿನ ಸಂಕಟಗಳ್ಳನ್ನು ಮೀರಿದ್ದು ಇತಿಹಾಸ. ಅದೇ ಇತಿಹಾಸವನ್ನು ನಾವು ಅನ್ವಯಿಸಿಕೊಂಡು ಇವತ್ತಿನ ಕಾಸ್ಮೋಪಾಲಿಟನ್ ಸಂಸ್ಕೃತಿ ಸೃಜಿಸಿರುವ ಅನೇಕ ಮನಸ್ಸಿನ ಯುದ್ಧಗಳನ್ನು ಗೆಲ್ಲಬೇಕಿದೆ. ಅದಕ್ಕೆ ಮನಸ್ಸು ಮಹಾಕಾವ್ಯವಾಗಬೇಕಿದೆ. ನಾವೆಲ್ಲ ಪ್ರಕೃತಿಯ ನಿಯಮಗಳಾದ ಹುಟ್ಟು ಸಾವಿನ ಚಕ್ರದಲ್ಲಿ ಬಂಽತರು. ಈ ಹುಟ್ಟು ಸಾವಿನ ಚಕ್ರಗಳ ನಡುವಿನ ನಮ್ಮ ಬದುಕಿನ ಪಥದಲ್ಲಿ ಘರ್ಷಣೆಯು ನಮ್ಮಲ್ಲಿ ನಾಚಿಕೆ ಹಾಗೂ ಅಪರಾಧಿಪ್ರಜ್ಞೆಯನ್ನು ಮೂಡಿಸುತ್ತದೆ.
ಮಹಾಕಾವ್ಯ ಗೀತೆಯೂ ಅಪರಾದಿ ಪ್ರಜ್ಞೆಯನ್ನು ಬದಿಸರಿಸಿ ಹೊಸ ಹೊಳಹುಗಳನ್ನು ಮರುಪ್ರೇರಣೆಯನ್ನು ಮನಸ್ಸಿಗೆ ತುಂಬುತ್ತದೆ. ಗೀತೆ ಸಾರುವ ಅದೇ ಪಾಠಗಳನ್ನು ಇವತ್ತಿನ ಸಂದರ್ಭಕನುಗುಣ ವಾಗಿ ಮನೋ ಚಿಕಿತ್ಸೆಯಾಗಿ ನಾವೆಲ್ಲ ತೆಗೆದುಕೊಳ್ಳಬೇಕಿದೆ. ‘ಅಸೋಚ್ಯನ್ ಅನ್ವ ಸೋಚ ಸ್ವಮಂ ಪ್ರಜ್ಞ ವಧಂ ಚ ಭಾಷಯೇ ಗತಸುನ್ ಅಗತ ಸುಮ್ ಸ್ವ ನ ಪಂಡಿತಹಃ.’- ನಿನಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಿನಗೆ ಚಿಂತೆ ಬೇಡ. ಕಲಿತವನಂತೆ ಮಾತನಾಡಬೇಕು ವಿವೇಕವುಳ್ಳ ಜನರೆಂದು ಅಳಿಸಿಹೋಗುವ ವಿಚಾರಗಳ ಬಗ್ಗೆ ಚಿಂತಿಸದಿರು.
‘ಜಾತಸ್ಯ ಹಿ ಧ್ರುವೋ ಮೃತ್ಯು ಧ್ರುವಂ ಜನ್ಮಂ ಮೃತ್ಯುಸ್ಯ ಚ ತಸ್ ಮಾದ್ ಅಪರಿಹರಿರ್ಯೆ ರಥೇ ನ ತ್ವಂ ಮರ್ಶಿ’- ಹುಟ್ಟಿದ ಎಲ್ಲ ವಸ್ತುವು ತೀರಲೇಬೇಕು. ಸತ್ತ ವಸ್ತುವು ಮತ್ತೆ ಜನ್ಮ ಪಡೆಯಲೇಬೇಕು. ಈ ಮಧ್ಯದ ಕ್ರಿಯೆಗಳಿಗಾಗಿ ನೀನು ಚಿಂತಿಸಬಾರದು. ಗೀತೆಯ ಬಹಳ ಮುಖ್ಯವಾಗುವ ಸಿದ್ಧಾಂತವೆಂದರೆ ಕರ್ಮ ಸಿದ್ಧಾಂತ. ‘ಕರ್ಮಣ್ಯೇ ವಾದಿ ಕಾರಸ್ತೆ ಮಮಪಲೇಷು ಕದಾಚನ, ಮ ಕರ್ಮ-ಲ ಹೇತು ರ್ಭುರ್ಮತೆ ಸಂಘೋತ್ಸವ್ -ಆಕರ್ಷಮಣಿ ಮಾಡುವ
ಕೆಲಸದ ಮೇಲಷ್ಟೇ ನಮಗೆ ಹಿಡಿತ ಅದರ ಫಲಾಫಲಗಳಲ್ಲಿ ಅಲ್ಲ.
ನಾವು ಮಾಡುವ ಕೆಲಸವು ಫಲಿತಾಂಶಕ್ಕಾಗಲ್ಲ. ಫಲಿತಾಂಶ ವಿಫಲಗೊಂಡರೆ ಆಸಕ್ತಿ ಕಳೆದುಕೊಳ್ಳಬಾರದು. ಮನಸ್ಸಿನ ಜ್ಞಾನವು ಇದನ್ನೇ ಪ್ರತಿಪಾದಿಸಬೇಕು. ಪ್ರತಿಯೊಬ್ಬ ಮನುಷ್ಯನು ತನ್ನ ಸ್ವಸ್ವಮರ್ಥ್ಯವನ್ನು ಅರಿಯಬೇಕು. ತಾನು ಮಾಡುವ ಕೆಲಸಕ್ಕೆ ಹಾಗೂ ತನ್ನ ಇಂದಿನ ಪರಿಸ್ಥಿತಿಗೆ
ತನ್ನದೇ ಕೆಲಸ ಹಾಗೂ ಆಯ್ಕೆಗಳು ಮುಖ್ಯವಾಗುತ್ತವೆ ಎಂಬುದನ್ನು ನಂಬಬೇಕು. ನಮ್ಮ ಹಣೆಬರಹವನ್ನು ಬರೆದುಕೊಳ್ಳುವವರು ನಾವುಗಳೇ. ಗೀತೆಯ ಆಳದಲ್ಲಿ ಬದುಕಿಗೆ ಬೇಕಾದ ಅನೇಕ ಅನುಭವಗಳನ್ನು ಕಟ್ಟಿಕೊಡುವ ಬೌದ್ಧಿಕ ಬದುಕಿನ ಪಾಠಗಳಿವೆ.
ವಿಲಿಯಂ ಜೇಮ್ಸ್ ಹೇಳುವಂತೆ ಮನುಷ್ಯನ ನಂಬಿಕೆ ಅಥವಾ ಧರ್ಮಗಳು ಮುಖ್ಯವಲ್ಲ. ಅದರ ಹೊರತಾಗಿ ಯೂ ಮನುಷ್ಯನಗುವ ಪರಿವರ್ತನೆ ಮುಖ್ಯ. ಮುಗಿಸುವ ಮುನ್ನ ನೆನಪಾಗಿದ್ದು ಮಹಾತ್ಮ ಗಾಂಧೀಜಿಯವರ ಮಾತು. ಗಾಂಧೀಜಿಯವರಿಗೆ ಯಾವುದೇ ಸಮಸ್ಯೆ ಎದುರಾದರು ಮಹಾಕಾವ್ಯ ಗೀತೆ ಅವರ ಸಮಸ್ಯೆಗಳಿಗೆ ಎಂದೂ ಉತ್ತರವಾಗಿತ್ತಂತೆ!!!