Sunday, 15th December 2024

ಸಮುದಾಯಗಳ ನಡುವೆ ಸೇತುವೆ ಕಟ್ಟುವ ಸಚಿವರು!

 ತುರುವೇಕೆರೆ ಪ್ರಸಾದ್

ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಸಮರ್ಥ ನಾಯಕರಲ್ಲೊಬ್ಬರಾದ ಎಸ್. ಸುರೇಶ್ ಕುಮಾರ ಸಭಾಪತಿ ಆಗ್ತಾಾರೆ ಅನ್ನೋೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಸುರೇಶ್ ಕುಮಾರ ಅಂಥವರು ಸಭಾಪತಿಯೆಂಬ ಉದ್ಭವ/ಉತ್ಸವಮೂರ್ತಿಯಾಗಿ ಕೂರಬಾರದು, ಸಂಪುಟದಲ್ಲೇ ಸಚಿವರಾಗಿ ಇರಬೇಕು ಅನ್ನೋದಕ್ಕೆ ಅವರ ಪ್ರಾಾಮಾಣಿಕತೆ ಮಾತ್ರ ಅಲ್ಲ, ಅವರ ಕಾರ್ಯಕ್ಷಮತೆ, ಅವರ ಉತ್ತರದಾಯಿತ್ವ ಗುಣನೂ ತುಂಬಾನೇ ಮುಖ್ಯವಾಗುತ್ತೆೆ. ಅದಕ್ಕೊೊಂದು ನಿದರ್ಶನ ಇಲ್ಲಿದೆ.

ಮಂಗಳವಾರ ಪತ್ರಿಕೆಯೊಂದರಲ್ಲಿ ಕುಣಿಗಲ್ ಸಮೀಪ ಯಡಿಯೂರು ಹೋಬಳಿಗೆ ಸೇರಿದ ಕಾಡಶೆಟ್ಟಿಹಳ್ಳಿ ಎಂಬಲ್ಲಿ ರೈತರು, ಗ್ರಾಾಮಸ್ಥರು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಅಲ್ಲಿನ ಶಾಲೆ ಉಳಿಸಿಕೊಳ್ಳಲು ಶ್ರಮದಾನ ಮಾಡಿ ಮೂರೇ ದಿನದಲ್ಲಿ ತೊರೆಯೊಂದರ ಮೇಲೆ ಸೇತುವೆ ಕಟ್ಟಿದ ಒಂದು ಯಶೋಗಾಥೆಯ ವರದಿ ಪ್ರಕಟವಾಗಿತ್ತು. ಅದನ್ನು ಓದಿದ ಪ್ರಾಾಥಮಿಕ ಮತ್ತು ಪ್ರೌೌಢಶಿಕ್ಷಣ ಸಚಿವ ಸುರೇಶ್ ಕುಮಾರ ಗುಬ್ಬಿಯ ಕಾರ್ಯಕ್ರಮದಿಂದ ನೇರವಾಗಿ ಆ ಹಳ್ಳಿಗೆ ಧಾವಿಸಿ ಬಂದು ಅಲ್ಲಿನ ಜನರ ಪರಿಶ್ರಮವನ್ನು ಕಣ್ಣಾರೆ ವೀಕ್ಷಿಸಿದರಂತೆ. ಅವರ ಸಮಸ್ಯೆೆಗಳನ್ನು ಆಲಿಸಿದರಂತೆ. ಜತೆಗೆ ಅಲ್ಲಿನ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಒಡನಾಡಿ ಶಾಲೆಯ ಸಮಸ್ಯೆೆಗಳನ್ನು ಬಗೆಹರಿಸುವ ಭರವಸೆ ನೀಡಿದರಂತೆ. ಸಂಜೆ ನನಗೆ ಫೋನ್ ಮಾಡಿ, ‘ನಾನಪ್ಪ, ಸುರೇಶ್ ಕುಮಾರ, ನಿಮ್ಮ ಹಳೆಯ ಸ್ನೇಹಿತ.’ಎಂದು ಮಾತು ಆರಂಭಿಸಿ ಲೇಖನದ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿ, ‘ಒಳ್ಳೆೆಯ ಲೇಖನ ಬರೆದಿದ್ದೀರಿ’ ಎಂದು ಅಭಿನಂದಿಸಿ ಥ್ಯಾಾಂಕ್‌ಸ್‌ ಹೇಳಿದರು.

ಸುರೇಶ್ ಕುಮಾರ ಅವರ ಈ ಸೌಜನ್ಯಪೂರ್ಣ ನಡೆವಳಿಕೆ ಹೊಸದೇನಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆೆ ಬಂದ ಹೊಸದರಲ್ಲಿ ನಾನು ಪತ್ರಿಿಕೆಯೊಂದರಲ್ಲಿ ನಮ್ಮೂರಿನ ಕೆಲವು ಅವ್ಯವಸ್ಥೆೆಗಳ ಬಗ್ಗೆೆ, ಕೆಲವು ಪ್ರಗತಿ ವಿರೋಧಿ ಧೋರಣೆಯುಳ್ಳ ಅಧಿಕಾರಿಗಳ ಬಗ್ಗೆೆ ಲೇಖನವೊಂದನ್ನು ಬರೆದಿದ್ದೆೆ. ಆ ಸಮಯದಲ್ಲಿ ಸುರೇಶ್ ಕುಮಾರ ತುಮಕೂರು ಜಿಲ್ಲಾಾ ಉಸ್ತುವಾರಿ ಸಚಿವರಾಗಿದ್ದರು. ಅಂದು ಸಂಜೆ ಇದೇ ರೀತಿ ನನಗೊಂದು ಕರೆಬಂತು, ಅತ್ತಲಿಂದ ಮಾತಾಡಿದ ವ್ಯಕ್ತಿಿ ತಮ್ಮನ್ನು ಸುರೇಶ್ ಕುಮಾರ ಎಂದು ಪರಿಚಯಿಸಿಕೊಂಡರು. ನಾನು ಯಾವ ಸುರೇಶ್ ಕುಮಾರ? ಎಂದೆ. ಅದಕ್ಕವರು, ‘ನಾನಪ್ಪಾಾ ನಿಮ್ಮ ಜಿಲ್ಲೆೆಯ ಉಸ್ತುವಾರಿ ಸಚಿವ’ ಎಂದಾಗ ನಾನು ಕಕ್ಕಾಬಿಕ್ಕಿಯಾಗಿಹೋದೆ. ಸರಕಾರದ ಕ್ಯಾಾಬಿನೆಟ್ ದರ್ಜೆಯ ಸಚಿವರೊಬ್ಬರು ನನ್ನ ಜತೆ ಮಾತಾಡುತ್ತಿದ್ದಾರೆ ಎಂಬುವುದನ್ನು ನಂಬುವುದೇ ಕಷ್ಟವಾಯಿತು. ಸುರೇಶ್ ಕುಮಾರರವರು ನನ್ನ ಲೇಖನದ ಬಗ್ಗೆೆ ಮುಕ್ತ ಕಂಠದಿಂದ ಶ್ಲಾಸಿದರು. ‘ನಿಮ್ಮ ಊರಿನ ಸಮಸ್ಯೆೆಗಳ ಬಗ್ಗೆೆ ಓದಿದೆ. ಎಲ್ಲಾ ಸಮಸ್ಯೆೆಗಳನ್ನೂ ಪರಿಹರಿಸಲಾಗಿಲ್ಲ, ಇನ್ನು ಮುಂದೆ ಅವುಗಳನ್ನು ಪ್ರಾಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡ್ತೀನಪ್ಪ, ನಿಮ್ಮಂತಹ ಪತ್ರಕರ್ತರ ಸಹಕಾರ ಇರಲಿ, ನಿಮ್ಮೂರಿಗೆ ಬಂದಾಗ ಭೇಟಿ ಮಾಡಿ ಮಾತಾಡುತ್ತೇನೆ’ ಎಂದು ಆಶ್ವಾಾಸನೆ ಹೇಳಿದರು. ಅದರಂತೆ ಎರಡೇ ದಿನಗಳಲ್ಲಿ ನಮ್ಮೂರಿನ ನ್ಯಾಾಯಾಲಯ ಕಟ್ಟಡದ ಕಾಮಗಾರಿಯ ಪರಿವೀಕ್ಷಣೆಗೆ ಬಂದಾಗ ನನ್ನನ್ನು ಕರೆಯಿಸಿ ಪರಿಚಯ ಮಾಡಿಕೊಂಡು ಮಾತಾಡಿ ಹೋದರು. ಪತ್ರಕರ್ತನೊಬ್ಬನಿಗೆ ಇದಕ್ಕಿಿಂತ ಹೆಚ್ಚಿಿನ ಸಂತೋಷ ಇನ್ನಾಾವುದಿದೆ? ಸಚಿವರೊಬ್ಬರು ತಮ್ಮೆೆಲ್ಲಾಾ ಗುರುತರವಾದ ಕೆಲಸ ಕಾರ್ಯಗಳ ಮಧ್ಯೆೆ ಪತ್ರಿಿಕೆಯೊಂದರಲ್ಲಿ ಬಂದ ಲೇಖನ ಓದಿ, ಅದನ್ನು ಪರಾಮರ್ಶಿಸಿ ಪ್ರತಿಕ್ರಿಿಯಿಸುವುದೇ ದೊಡ್ಡ ವಿಷಯ. ಅದರಲ್ಲೂ ಹೌದಪ್ಪ, ಇದು ನಿಜ, ತಪ್ಪಾಾಗಿದೆ, ಸರಿ ಮಾಡುತ್ತೇನೆ ಎನ್ನುವುದಿದೆಯಲ್ಲ, ಅದು ಪಕ್ಕಾಾ ಸೋಶಿಯಲ್ ಕಮಿಟ್‌ಮೆಂಟ್.

ಹಾಗೆ ನೋಡಿದರೆ ಅನುಭವಿ ಪತ್ರಕರ್ತನೊಬ್ಬನಿಗೆ ತಾನು ಒಂದು ಲೇಖನ ಬರೆದಾಕ್ಷಣಕ್ಕೆೆ ವ್ಯವಸ್ಥೆೆಯೇ ಬದಲಾಗುತ್ತದೆ ಎಂಬ ಹುಚ್ಚು ಭ್ರಮೆಯೇನೂ ಇರುವುದಿಲ್ಲ. ತಾನೊಬ್ಬ ಯುಗ ಪರಿವರ್ತಕ , ಸಮಾಜ ಸುಧಾರಕ ಎಂಬ ಯಾವ ಲೇಬಲ್ ಹಚ್ಚಿಿಕೊಳ್ಳುವ ಆಸೆಯೂ ಇರುವುದಿಲ್ಲ. ಇಲ್ಲವೇ ತನಗೆ ಯಾರಾದರೂ ಕಿರೀಟ ಇಡಲಿ ಎಂದು ಹಂಬಲಿಸುವುದೂ ಇಲ್ಲ. ಎಷ್ಟೋೋ ಜನ ಅಧಿಕಾರಿಗಳು, ರಾಜಕೀಯ ವ್ಯಕ್ತಿಿಗಳು ನಾವು ಬರೆದ ಲೇಖನವನ್ನು ಓದುವ ಗೋಜಿಗೂ ಹೋಗಿರುವುದಿಲ್ಲ ಎಂಬ ಸತ್ಯ ನಮಗೆ ಎಂದೋ ಮನವರಿಕೆ ಆಗಿದೆ. ಅಕಸ್ಮಾಾತ್ ಓದಿದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಿಯಿಸಲಾರದಷ್ಟು ಅಧಿಕಾರಶಾಹಿ ಜಡ್ಡುಗಟ್ಟಿಹೋಗಿದೆ.

ಬರೆಯುವವನ ಒಂದೇ ಹಂಬಲ ಸಾಮಾಜಿಕ ಸ್ಪಂದನ! ಜನಾಂದೋಲನ ರೂಪಿಸುವುದಾಗಲಿ, ಸಾಮಾಜಿಕ ಕಾರ್ಯ ಸೂಚಿಯನ್ನು ಗುರುತಿಸಿಕೊಡುವುದಾಗಲಿ, ತೀರಾ ಅಪರೂಪ ಎಂದು ಗೊತ್ತಿದ್ದರೂ ತನ್ನ ಬರೆವಣಿಗೆ ತನ್ನದೇ ಚಿಂತನೆ ಉಳ್ಳ ಪ್ರಗತಿಪರರಿಗೆ ಒಂದು ಸಾಂಕೇತಿಕ ಧ್ವನಿಯಾದೀತೆಂಬ ಹಂಬಲ ಎಲ್ಲ ಕಾಲಕ್ಕೂ ಇದ್ದೇ ಇರುತ್ತದೆ. ಅಂತೆಯೇ ಅದರ ಸ್ವೀಕೃತಿಯ ಬಗ್ಗೆೆ ಒಂದು ಥ್ಯಾಾಂಕ್‌ಸ್‌, ಒಂದು ಮೆಚ್ಚುಗೆ, ಒಂದು ಕೃತಜ್ಞತೆ, ಒಂದು ಬೆನ್ನು ತಟ್ಟುವಿಕೆಯ ಪ್ರೋೋತ್ಸಾಾಹ, ಇಷ್ಟೇ ಒಬ್ಬ ಪತ್ರಕರ್ತ ನಿರೀಕ್ಷಿಸುವುದು. ಅದೂ ತಪ್ಪೇ? ಆದರೆ, ನಮ್ಮ ಎಷ್ಟು ಜನ ರಾಜಕೀಯ ನಾಯಕರಿಗೆ ಸುರೇಶ ಕುಮಾರರವರಂತೆ ಅಂಥ ಒಂದು ಅಕ್ನಾಾಲೆಡ್‌ಜ್‌‌ಮೆಂಟ್ ಕೊಡಲು ಪುರುಸೊತ್ತಿದೆ?

ಅಧಿಕಾರಿಗಳಿರಲಿ, ನಮ್ಮ ಜನನಾಯಕರಿಗೆ ಎಷ್ಟು ಜನರಿಗೆ ಈ ಉತ್ತರದಾಯಿತ್ವದ ಗುಣಗಳಿವೆ? ಇವರು ಕರೆದ ಕೂಡಲೆ ಇದ್ದ ಎಲ್ಲಾಾ ಕೆಲಸ ಬಿಟು ಸುದ್ದಿಗೋಷ್ಠಿಿಗೆ ಹೋಗಬೇಕು. ತಮ್ಮ ವಿರೋಧಿಗಳ ಮೇಲೆ ಮಾಡಿದ ಆರೋಪಗಳೆಲ್ಲಾಾ ಮರುದಿನ ಯಥಾವತ್ತು (ಅವರೇ ಹೇಳಿದ ಕೆಟ್ಟ ಭಾಷೆಯಲ್ಲಿ) ಪತ್ರಿಿಕೆಯಲ್ಲಿ ಪ್ರಕಟಿಸಬೇಕು. ಅಕಸ್ಮಾಾತ್ ಒಂದು ದಿನ ಅದು ಪ್ರಕಟವಾಗುವುದು ತಡವಾದರಂತೂ ಅಂತಹ ಪತ್ರಕರ್ತ ಅವರ ಆಪ್ತ ವಲಯದಿಂದ ದೂರ ಸರಿದ ಎಂದೇ ಲೆಕ್ಕ. ಇನ್ನು ತಮ್ಮ ಅಮೋಘ ಸಾಧನೆಗಳ ತುತ್ತೂರಿ ಊದಲು ಪತ್ರಕರ್ತರು ಬೇಕು. ಇವರನ್ನು ಅನವರತ ಹಾಡಿ ಹೊಗಳುತ್ತಿಿರಬೇಕು. ಮತ್ತೊೊಬ್ಬರು ಇವರ ಬಗ್ಗೆೆ ಹೇಳಿದ್ದನ್ನು ಬರೆದರೂ ಇವರಿಗೆ ಮುಜಗರ. ಅದನ್ನ ಯಥಾವತ್ತಾಾಗಿ ಹಾಕಿದ್ದೇಕೆ ಎಂಬ ಕುತರ್ಕ! ಬಹುತೇಕ ರಾಜಕೀಯ ನಾಯಕರು ಪತ್ರಕರ್ತರನ್ನು ಬಾಜ ಭಜಂತ್ರಿಿ ಹಿಡಿದು ಅವರೊಂದಿಗೆ ಹೆಜ್ಜೆೆ ಹಾಕುವ ವಂದಿಮಾಗಧರು ಎಂದೇ ಭಾವಿಸಿದ್ದಾಾರೆ. ಕೆಲವು ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಪತ್ರಕರ್ತರನ್ನ ವಿರೋಧಿಗಳ ಚಲನವಲನಗಳ ಮೇಲೆ ನಿಗಾ ಇರಿಸುವ ಸ್ಪೈಗಳು ಎಂದೇ ಭಾವಿಸಿರುತ್ತಾಾರೆ.

ಅಕಸ್ಮಾಾತ್ ಅವರ ತಪ್ಪುು ನಡೆಗಳ ಬಗ್ಗೆೆ ಬರೆದರೆ ಅವರು ಕೆಂಡಾಮಂಡಲವಾಗುತ್ತಾಾರೆ. ಅವರು ಹೇಳಿದ ಗೊಂದಲದ ಹೇಳಿಕೆಗಳನ್ನು ನಾವು ಆತ್ಮ ವಂಚನೆ ಮಾಡಿಕೊಂಡರೂ ಪರವಾಗಿಲ್ಲ, ಹಾಗೆಯೇ ಬರೆಯಬೇಕು. ಅದನ್ನು ಅರ್ಥೈಸುವ ಪ್ರಕ್ರಿಿಯೆಗೇನಾದರೂ ಕೈ ಹಾಕಿದರೆ ರಾಜಕೀಯದ ಬಹುತೇಕರು ಅದು ನಮ್ಮ ತಲೆ ಪ್ರತಿಷ್ಠೆೆ ಎಂದೇ ಗುರುಗುಟ್ಟುತ್ತಾಾರೆ. ಎಲ್ಲಕ್ಕಿಿಂತ ಮುಖ್ಯವಾಗಿ ತಾವು ಮಾಡಿದ ತಪ್ಪನ್ನು ಒಪ್ಪಿಿಕೊಳ್ಳುವ ಗುಣ ಬಹುತೇಕರಲ್ಲಿ ಇರುವುದಿಲ್ಲ. ದೂರದರ್ಶಿತ್ವ ಇಲ್ಲದ ತಮ್ಮ ನಿರ್ಧಾರಗಳಿಂದ ಸಾರ್ವಜನಿಕರಿಗಾದ ತೊಂದರೆಗಳ ಬಗ್ಗೆೆ ಅವರೆಂದೂ ಆತ್ಮಾಾವಲೋಕನ ಮಾಡಿಕೊಳ್ಳುವುದಿಲ್ಲ. ಇದು ಸಾರ್ವಜನಿಕ ಅಭಿಪ್ರಾಾಯ ಎಂದು ಬರೆದರೆ ಅದನ್ನು ನಂಬುವುದು ಬೇಡ, ಕನಿಷ್ಠ ಅದರ ಬಗ್ಗೆೆ ಒಂದು ಟೆಸ್‌ಟ್‌ ಚೆಕ್ ಮಾಡುವ ವ್ಯವಧಾನವೂ ಅವರಿಗಿರುವುದಿಲ್ಲ. ತಮ್ಮೊೊಳಗಿನ ಜಗಳಗಳನ್ನು, ತಮ್ಮ ಪಕ್ಷದ ಭಿನ್ನಮತವನ್ನು, ತಮ್ಮ ಮೌಢ್ಯವನ್ನು, ತಮ್ಮ ಆಡಳಿತಾತ್ಮಕ ದೋರಣೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಿಸುವುದೇ ಅಪರಾಧ, ತಾವು ಅದಕ್ಕೆೆಲ್ಲ ಅತೀತರು ಎಂದು ಭಾವಿಸಿರುತಾರೆ. ಇಂಥವರಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಪತ್ರಕರ್ತನೊಬ್ಬ ಥ್ಯಾಾಂಕ್‌ಸ್‌ ನಿರೀಕ್ಷಿಸಲು ಸಾಧ್ಯವೇ?

ಅದಕ್ಕೇ ಸುರೇಶ್ ಕುಮಾರ ಅಂಥವರ ಒಂದು ಥ್ಯಾಾಂಕ್‌ಸ್‌ ನನ್ನಂಥ ಬರಹಗಾರರಲ್ಲಿ ಹೊಸ ಸಂಚಲನ ಮೂಡಿಸುತ್ತದೆ. ಹೊಸ ಭರವಸೆ ತುಂಬುತ್ತದೆ. ವ್ಯವಸ್ಥೆೆಯನ್ನು ಮತ್ತಷ್ಟು ಶೋಧಿಸುವ ಕುತೂಹಲ, ಅನಾವರಣಗೊಳಿಸುವ ಹಂಬಲ ಹುಟ್ಟಿಿಸುತ್ತದೆ. ಸುರೇಶ ಕುಮಾರ ಇಂದಿಗೂ ಬದಲಾಗಿಲ್ಲ. ಅದೇ ಸರಳತೆ, ಸಜ್ಜನಿಕೆ, ಸೌಜನ್ಯಯುತ ನಡೆವಳಿಕೆ ಅವರಲ್ಲಿದೆ. ಸಚಿವರೆಂಬ ಹಮ್ಮು, ಬಿಮ್ಮ ಒಂದಿನಿತೂ ಅವರಲಿಲ್ಲ. ಪತ್ರಕರ್ತರು ಸಾಂವಿಧಾನಿಕವಾಗಿ ಯಾವುದೇ ವಿಶೇಷ ಸವಲತ್ತಿಿಲ್ಲದೆ ಜನರ ಮಧ್ಯೆೆ ಕೆಲಸ ಮಾಡುವವರು. ಅಂಥವರಿಗೆ ಥ್ಯಾಾಂಕ್‌ಸ್‌ ಗಿವಿಂಗ್ ಅಂದರೆ ಅದು ನೇರ ಜನಕ್ಕೇ ಕೊಟ್ಟ ಭರವಸೆ, ವಚನ ಬದ್ಧತೆ. ನಮ್ಮ ರಾಜಕೀಯ ನಾಯಕರು ಸುರೇಶ ಕುಮಾರರರಿಂದ ಕಲಿಯುವುದು ತುಂಬಾ ಇದೆ. ಜನರ ಸಂಕಷ್ಟಗಳ ಅಹವಾಲನ್ನೇ ರೂಲಿಂಗ್ ಎಂದು ಶಿರಸಾವಹಿಸಿ ಕೆಲಸ ಮಾಡುವ ಸುರೇಶ್ ಕುಮಾರ ಅಂಥವರು ಜನರ ಮಧ್ಯೆೆಯೇ ಇರಬೇಕು, ಊರುಗಳ ಮಧ್ಯೆೆ ಸೇತುವೆ ಕಟ್ಟುವ ಶ್ರಮಜೀವಿಗಳಂತೆ ಸಮುದಾಯಗಳ ಮಧ್ಯೆೆ, ಮನಸ್ಸು ಮನಸ್ಸುಗಳ ಮಧ್ಯೆೆ ಸೇತುವ ಕಟ್ಟುವ, ಇಂತಹ ಮಾನವೀಯ ಅಂತಃಕರಣ, ದಕ್ಷತೆ, ಕಾರ್ಯಕ್ಷಮತೆ, ಅಭಿವೃದ್ಧಿಿಪರ ಚಿಂತನೆಯುಳ್ಳ ಸುರೇಶ್ ಕುಮಾರ ಅವರಂಥ ಸಚಿವರಿರುವುದು ನಮ್ಮ ಪುಣ್ಯವೇ ಸರಿ. ಥ್ಯಾಾಂಕ್‌ಸ್‌ ಎ ಲಾಟ್ ಸುರೇಶ್ ಕುಮಾರ ಸರ್.