Thursday, 12th December 2024

ಮುನ್ನಡೆಸಲು ಮೋದೀಜಿ ಬರಬೇಕಾಯಿತು !

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್, ಬರಹಗಾರ, ಶಿಕ್ಷಕ

ಮೋದಿ ಅಧಿಕಾರದ ಎರಡನೆಯ ಇನ್ನಿಂಗ್ಸಿನ ಎರಡು ವರ್ಷ ನಿನ್ನೆ ಮುಗಿಯಿತು. ಯಾರು ಏನೇ ಹೇಳಿದರೂ ಒಂದು ನಿಚ್ಚಳ ವಾದ ಸತ್ಯದ ಅರಿವಾಗಿದೆ, ಅರ್ಥವೂ ಆಗಿದೆ. ಆಗದಿದ್ದವರಿಗೆ ಜರೂರ್ ಆಗಲೇಬೇಕಿದೆ.

ಅದೇನೆಂದರೆ, ಕೋವಿಡ್‌ನಿಂದ ಉಂಟಾದ ಭಯ ಮತ್ತು ಭೀಕರವೆನಿಸಿದ ಸಂಕಷ್ಟ, ಅದರ ಹಿಂದೆ ಮುಂದೆ ಹುಟ್ಟಿಕೊಂಡ ಹೊಲಸು ನೀಚಮಟ್ಟದ ಅಧಿಕಾರ ರಾಜಕೀಯದ ಘಮಲು, ಅನ್ಯಾನ್ಯ ಕಾರಣಗಳಿಗಾಗಿ ದೇಶಾದ್ಯಂತ ಹುಟ್ಟಿಕೊಂಡ ಕ್ಷೋಭೆ, ಸೈದ್ಧಾಂತಿಕ ಮತ್ತು ವೈಚಾರಿಕ ಸಂಘರ್ಷಗಳು, ದೇಶದ್ರೋಹಿ ದುರುಳುತನದ ಅಭಿವ್ಯಕ್ತಿ, ವಿರೋಧಗಳ ಅಟ್ಟಹಾಸ, ಅಪಪ್ರಚಾರ, ಅವಹೇಳನ, ಅಪಹಾಸ್ಯ, ನಿಂದೆ, ಕುಹಕತನ, ಕಪಟತನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಿದ್ದು ಇವೇ ಮುಂತಾದ ಹಲವು ವೈರುಧ್ಯಗಳನ್ನು ಸಮರ್ಥವಾಗಿ ಎದುರಿಸುತ್ತಲೂ, ಹಾಗೂ ಈ ಸರಿಹೊತ್ತಿನಲ್ಲಿಯೂ ದೇಶದ ಪ್ರಧಾನಿ ಯಾಗಿ ಮೋದಿ ಇರುವುದರಿಂದಲೇ ದೇಶವಾಸಿಗಳು ಸುರಕ್ಷಿತವಾಗಿದ್ದಾರೆ.

ಮೂರು ಲಕ್ಷಕ್ಕೂ ಅಽಕ ಜನರು ಸಾವಿಗೀಡಾಗಿದ್ದಾರೆ ಎಂಬ ವಿಷಾದದ ಹೊರತಾಗಿಯೂ ಕೋವಿಡ್‌ನಿಂದಾದ ಸಾವಿನ ಪ್ರಮಾಣ ವನ್ನು ಯುರೋಪ್ ಮತ್ತು ಇತರ ಖಂಡ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವೇ ಹೆಚ್ಚು ಜಾಗ್ರತೆ ಮತ್ತು ಮುನ್ನೆಚ್ಚರಿಕೆಯನ್ನು ವಹಿಸಿದ್ದರ ಪರಿಣಾಮ ನಾವು ಸುರಕ್ಷಿತವಾಗಿದ್ದೇವೆ. ಬೇರೆ ಯಾರೇ ಅಧಿಕಾರದಲ್ಲಿದ್ದರೂ ಮೋದಿಯಷ್ಟು ಸಮರ್ಥವಾಗಿ ದೇಶ ವನ್ನು ಮುನ್ನಡೆಸಲು ಸಾಧ್ಯವೇ ಇರಲಿಲ್ಲ ಎಂದರೆ ಅತಿಶಯೋಕ್ತಿ ಯೆನಿಸಲಾಗದು.

ಇಂಥ ಸಂದರ್ಭದಲ್ಲಿ ದೇಶವನ್ನು ಸುಭದ್ರವಾಗಿ ಮುನ್ನಡೆಸಲು ಮೋದಿ ಬರಬೇಕಾಗಿ ಬಂದದ್ದು ಈ ನೆಲದ ಸೌಭಾಗ್ಯ! ಆ
ಅಭಿಮಾನ ಮತ್ತು ಕೃತಜ್ಞತೆ ಯಾವತ್ತೂ ನಮ್ಮಲ್ಲಿರಲಿ. ಭಾರತದ ಆತ್ಮವಿಮರ್ಶಾ ಪ್ರಜ್ಞೆ ವಿಶ್ವದ ಮೇಲ್ಪಂಕ್ತಿ ಯಾದುದು. ದಶಕಗಳ ಕಾಲದ ಭಾರತದ ಆತ್ಮವಿಸ್ಮೃತಿಯನ್ನು ಸ್ಮೃತಿಗೆ ತರಲು ಮೋದಿ ಬರಬೇಕಾಯಿತು.

ನೆಹರೂ, ಇಂದಿರಾ, ರಾಜೀವರ ಕಾಲದ ಭಾರತವನ್ನು ನೋಡಿ, ಮೋದಿಯ ಭಾರತವನ್ನೂ ನೋಡಿ: ಗಾಂಧಿ – ನೆಹರು ಮನೆ ತನದ ಹೆಸರುಗಳಿಂದಲೇ ತುಂಬಿ ಹೋಗಿದ್ದ ಯೋಜನೆಗಳು, ರಸ್ತೆ, ಕಟ್ಟಡ, ಭವನಗಳಿರುವಾಗ ಅಂಬೇಡ್ಕರ್, ಕಲಾಂ, ದೀನ್ ದಯಾಳ್ ಉಪಾಧ್ಯಾಯರಂಥವರ ಹೆಸರುಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲು, ನರಹಂತಕ ಜೌರಂಗಜೇಬನ ರಸ್ತೆಯು ಕಲಾಂ ರಸ್ತೆಯಾಗಿ ಮರು ನಾಮಕರಣಗೊಳ್ಳಲು, ನೋಟು ಅಮಾನ್ಯೀಕರಣದ ಮೂಲಕ ಖೋಟಾನೋಟು ದಂಧೆಗೆ ಕಡಿವಾಣ ಹಾಕಲು, ಪ್ರಧಾನಿಗಳ ವಿದೇಶ ಪ್ರವಾಸದಲ್ಲಿ ಮಜಾ ಮಾಡಲು ಹೋಗುತ್ತಿದ್ದ ಖಾಸಗಿ ಪತ್ರಕರ್ತರಿಗೆ ಮೂಗುದಾರ ಹಾಕಲು, ಅಕ್ರಮ ನುಗ್ಗುಕೋರರನ್ನು ತಡೆದು ಗಡಿಯಲ್ಲಿ ಸುಧಾರಿತ ಲೇಸರ್ ಬೇಲಿಯನ್ನು ನಿರ್ಮಿಸಲು, ಸರ್ಜಿಕಲ್ ದಾಳಿ ಮತ್ತು ಮಿಸೈಲ್ ದಾಳಿಗಳ ಮೂಲಕ ಭಾರತೀಯ ಸೈನಿಕರ ನೈಜಶಕ್ತಿಯನ್ನು ಅನಾವರಣ ಮಾಡಲು, ಸಾರ್ಕ್ ರಾಷ್ಟ್ರಗಳ ಪರಸ್ಪರ ಅನುಕೂಲಕ್ಕಾಗಿ ಇಸ್ರೋ ಸಂಸ್ಥೆಯ ಮೂಲಕ ಉಪಗ್ರಹ ಉಡಾಯಿಸಲು, ದುಬೈ ಹಿಂದೂಗಳಿಗೆ ಪೂಜಾಸ್ಥಳಕ್ಕಾಗಿ ಜಾಗ ಕೊಡಿಸಲು, ಮಂತ್ರಿಗಳು ಮತ್ತು ಅಧಿಕಾರಿಗಳ ಬೇಕಾಬಿಟ್ಟಿ ವಿದೇಶ ಪ್ರವಾಸಕ್ಕೆ ಅಂಕುಶ ಹಾಕಲು, ಕಪ್ಪುಹಣ ಖಾತೆದಾರರ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸ್ವಿಸ್ ಸರಕಾರವನ್ನು ಒಪ್ಪಿಸಲು, ದಶಕಗಳಿಂದ ನಿಗೂಢವಾಗಿದ್ದ ಬೋಸ್ ಸಾವಿನ ಕಡತಗಳು ಬಹಿರಂಗವಾಗಲು, ಇಂದಿರಾ ಗಾಂಧಿ ರದ್ದುಪಡಿಸಿದ ಸೈನಿಕರ ಬಹುಬೇಡಿಕೆಯ ಆರ್ ಒಪಿ ಜಾರಿಯಾಗಲು, ಸಂಸತ್ ಕ್ಯಾಂಟಿನ್‌ನಲ್ಲಿ ದೊರೆಯುತ್ತಿದ್ದ ಆಹಾರದ ಮೇಲಿನ ಸಬ್ಸಿಡಿ ರದ್ದುಗೊಳಿಸಲು, ಕುಸಿದಿದ್ದ ಭಾರತದ ಆರ್ಥಿಕತೆಯನ್ನು ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ತಂದು ನಿಲ್ಲಿಸಲು, ಮಕ್ಕಳ ಕಳ್ಳಸಾಗಣಿಕೆಯನ್ನು ನಿಯಂತ್ರಿಸಲು, ಯಾವ ರಾಜಕೀಯ ಹಿನ್ನೆಲೆ ಯೂ ಇಲ್ಲದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಲು ಸಾಧ್ಯವೆಂದು ಸಾಬೀತು ಮಾಡಲು, ಸಾಮಾನ್ಯ ಪ್ರಜೆಯೊಬ್ಬನ ಪತ್ರಕ್ಕೂ ಪ್ರತಿಕ್ರಿಯೆ ನೀಡುವಂತಹ ಸೌಜನ್ಯ ತೋರಲು, ಅಯೋಗ್ಯ ಅಪಾತ್ರ ಸಾಹಿತಿಗಳ ಪ್ರಶಸ್ತಿ ವಾಪಸ್ಸಾಗುವಂತೆ ಮಾಡಲು, ವಿವಿ ಗಳಲ್ಲಿರುವ ದೇಶದ್ರೋಹಿಗಳು ಬೀದಿಯಲ್ಲಿ ಬೆತ್ತಲಾಗಲು, ತುಷ್ಟೀಕರಣ ಮತ್ತು ಸ್ವಾರ್ಥ ರಾಜಕೀಯದಲ್ಲಿ ಪರಮ ವೈರಿಗಳಾಗಿದ್ದ ವರು ಮಹಾಘಟ್ ಬಂಧನ್ ರೂಪದಲ್ಲಿ ಒಂದಾಗಲು, ಗಿಲ್ಗಿಟ್ – ಬ್ಯಾಲ್ಟಿಸ್ತಾನ್ ಪ್ರದೇಶಗಳು ಭಾರತಕ್ಕೆ ಸೇರಿದ್ದೆಂದು ಬ್ರಿಟನ್ ಸಂಸತ್ತಿನಿಂದ ಹೇಳಿಸಲು, ಹಗರಣ ಮುಕ್ತ, ಭ್ರಷ್ಟಾಚಾರ ಮುಕ್ತ, ವಿವಾದ ಮುಕ್ತ ಪಾರದರ್ಶಕ ಸರಕಾರ ಕೊಡಲು, ಇತಿಹಾಸದ ಮೊಟ್ಟಮೊದಲ ಬಾರಿಗೆ ಭಾರತೀಯ ಮಿಲಿಟರಿ ಉಪಕರಣಗಳು ಅನ್ಯದೇಶಕ್ಕೆ ರದ್ದಾಗಿಸಲು, ಬಿಜೆಪಿ ಅಸ್ತಿತ್ವವೇ ಇಲ್ಲದ ರಾಜ್ಯ ಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಲು, ಕೆಂಪುಗೂಟದ ಕಾರುಗಳನ್ನು ಕಿತ್ತು ವಿವಿಐಪಿಗಳಿಗೆ ಬಗಣಿಗೂಟವಿಡಲು, ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದ ದೇಶ ವಿರೋಧಿ, ಪ್ರಗತಿ ವಿರೋಧಿ ಎನ್‌ಜಿಒಗಳನ್ನು ನಿಷೇಧಿಸಲು, ಸಿಎಎ, ಎನ್‌ಆರ್‌ಸಿ ಯಂಥ ಕಾಯಿದೆಗಳನ್ನು ಜಾರಿಗೆ ತರಲು, ತೆರಿಗೆ ಕಳ್ಳರನ್ನು ಮಟ್ಟಹಾಕಲು, ಮುಂಬೈ ದಾಳಿಯಂಥ ಭಯೋತ್ಪಾದಕ ದಾಳಿ ಯನ್ನು ನಿಯಂತ್ರಿಸಲು, ಬ್ರಿಟಿಷರ ಕಾಲದ ಹಲವಾರು ನಿರುಪಯುಕ್ತ ಯೋಜನೆಗಳನ್ನು ರದ್ದು ಗೊಳಿಸಲು, ತ್ರಿವಳಿ ತಲಾಖ್ ನಂಥ ಕೋಮು ಸೂಕ್ಷ್ಮ ವಿಷಯವು ಸಾರ್ವಜನಿಕ ಚರ್ಚೆಗೆ ಬಂದು ರದ್ದುಗೊಳಿಸಲು, ಅಂಬೇಡ್ಕ ರರ ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ಆಚರಿಸುವಂತೆ ಮಾಡಲು, ಭಗತ್ ಸಿಂಗ್, ರಾಜ್ ಗುರು, ಸುಖದೇವರ ಪುಣ್ಯಸ್ಮರಣೆಯ ದಿನ ಅವರ ಭಾವಚಿತ್ರಗಳು ವೃತ್ತಪತ್ರಿಕೆಗಳಲ್ಲಿ ಕಾಣಿಸುವಂತಾಗಲು, ರಾಮಮಂದಿರ ನಿರ್ಮಾಣವಾಗಲು, ಉಕ್ಕಿನ ಮನುಷ್ಯ ಪಟೇಲರ ಭವ್ಯ ಪ್ರತಿಮೆ ಎದ್ದು ನಿಲ್ಲಲು, ಯೋಗವನ್ನು ಜಗತ್ತಿನ ರಾಷ್ಟ್ರಗಳು ಅನುಸರಿಸಲು, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆಯಾಗಿ ಸಲು, ಜಾಗತಿಕ ನೆಲೆಯಲ್ಲಿ ಚೀನಾವನ್ನು ನಿಯಂತ್ರಿಸಲು, ಜಾತ್ಯತೀತತೆಯ ನಿಜಾರ್ಥ ವನ್ನು ನಿರ್ವಹಿಸಲು, ಸಂಸತ್ತಿನ ಮೆಟ್ಟಿಲಿಗೆ ಅಡ್ಡಬಿದ್ದು ಕೈಮುಗಿದು ಒಳ ಪ್ರವೇಶಿಸಿ ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ ವೆಂದು ತಿಳಿಸಲು, ಹಿಂದೂ ಎಂದು ಕರೆದುಕೊಳ್ಳಲು ನಾಚಿಕೆ ಪಟ್ಟುಕೊಳ್ಳುವ ತುಕಾಲಿ ರಾಜಕಾರಣಿಗಳಿರುವಾಗ ಪ್ರಧಾನಿಯಾಗಿ ನಾನೊಬ್ಬ ‘ಹಿಂದೂ ರಾಷ್ಟ್ರವಾದಿ’ ಯೆಂದು ಹೆಮ್ಮೆಯಿಂದ ಹೇಳಲು, ದುಷ್ಟ ರಾಜಕಾರಣಿಗಳಿಂದ ಕೋಮುವಾದಿಗಳ ಗ್ರಂಥವೆಂದು ಬೊಗಳಲ್ಪಟ್ಟ ಭಗವದ್ಗೀತೆ ಯನ್ನು ಹೋದಲೆಲ್ಲ ಕೊಂಡೊಯ್ದು ವಿದೇಶಿ ಗಣ್ಯಾತಿಗಣ್ಯರಿಗೆ ಉಡುಗೊರೆ ಕೊಡಲು, ಹುಸಿ ಜಾತ್ಯತೀತತೆಯ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವವರ ಮಧ್ಯೆ, ‘ನನ್ನ ದೃಷ್ಟಿಯಲ್ಲಿ ಜಾತ್ಯತೀತತೆ ಎಂದರೆ ದೇಶ ಮೊದಲು’ ಎನ್ನಲು, ನಾನು ತಿನ್ನೋದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳಿ, ಜನರ ಹಣವನ್ನು ತಿಂದು ತೇಗಿ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಿಗೂ ಕೂಡಿಟ್ಟ ಭ್ರಷ್ಟರಾಜಕಾರಣಿಗಳ ಹುಟ್ಟಡಗಿಸಲು, ಭಾರತದ ಪ್ರಾಚೀನ ಸಂಸ್ಕೃತಿಯಾದ ಯೋಗಕ್ಕೆ ವಿಶ್ವವೇ ಶರಣಾಗುವಂತೆ ಮಾಡಲು, ವಿದೇಶೀ ನಾಯಕರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಿಲಕವಿಡಿಸಲು, ಹಾವಾಡಿಗರ ದೇಶ ಎಂದು ಹೀಗಳಿಕೆಗೆ ಒಳಗಾಗಿದ್ದ ಭಾರತವನ್ನು ಆಧ್ಯಾತ್ಮಿಕ ದೇಶವೆಂದು ಪ್ರತಿಬಿಂಬಿಸಲು, ತಾನು ಪ್ರಧಾನ ಮಂತ್ರಿಯಲ್ಲ ಪ್ರಧಾನ ಸೇವಕನೆಂದು ಕರೆದುಕೊಂಡು ದಿನಕ್ಕೆ ಹದಿನೆಂಟು ತಾಸು ದುಡಿಯುತ್ತ ಹದಿನೆಂಟು ವರ್ಷಗಳಿಂದ ಒಂದೂ ರಜೆಯನ್ನು ಪಡೆಯದೇ ಸಾರ್ವಜನಿಕ ಜೀವನದಲ್ಲಿ ದಣಿವರಿಯದಂತೆ ದುಡಿದು ತೋರಲು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಭಾರತದ ಯಾವ ಪ್ರಧಾನ ಮಂತ್ರಿಯೂ ಎದುರಿಸದ ವಿರೋಧಗಳನ್ನು ಕಟ್ಟಿಕೊಂಡೂ, ರಾಷ್ಟ್ರಕ್ಕೇ ಹಿಡಿದ ಒಳ ಶತ್ರುಗಳ ಗ್ರಹಣ ಬಿಡಿಸಿ ದೇಶವನ್ನು ಸಮರ್ಥವಾಗಿ ಮುನ್ನಡೆಸಲು, ಪ್ರಧಾನ ಮಂತ್ರಿಯೆಂದರೆ ಜನಸೇವಕ ಎಂದು ತೋರಲು, ಭಾರತದ ಮೂರ್ತಿಶಿಲ್ಪಗಳನ್ನು ಮರಳಿ ಭಾರತಕ್ಕೆ ತರಲು, ತಾವೇ ಭಾರತ ರತ್ನ ಕೊಟ್ಟುಕೊಂಡ, ಸರ್ಕಾರದ ಹಣದಲ್ಲಿ ತಮ್ಮ ಪ್ರತಿಮೆ ಯನ್ನು ನಿರ್ಮಿಸಿಕೊಂಡ, ಹೆಂಡತಿ ಮಕ್ಕಳು, ಮೊಮ್ಮಕ್ಕ ಳನ್ನು ಮಂತ್ರಿ, ಮುಖ್ಯಮಂತ್ರಿ ಮಾಡಿಕೊಂಡ, ಯೋಜನೆಗಳಿಗೆಲ್ಲ ತಮ್ಮ ಪಕ್ಷ, ಪಕ್ಷಕ್ಕಿಂತ ದೊಡ್ಡದಾಗಿ ಕುಟುಂಬದ ಹೆಸರಿಟ್ಟುಕೊಂಡು ಆಳಿದವರ ಮಧ್ಯೆ, ಯಾವ ಸ್ವಾರ್ಥವೂ ಇಲ್ಲದೆ ದೇಶ ಸೇವೆಯನ್ನು ಮಾಡಿ ತೋರಿಸಲು ಮೋದಿ ಬರಬೇಕಾಯಿತು!

ಮಹಿಳೆಯರ ಮಾನ, ಪ್ರಾಣ ಕಾಪಾಡಲು ಅತ್ಯಾಚಾರಿಗಳಿಗೆ ಮರಣದಂಡನೆಯಂಥ ಕಠಿಣ ಕಾನೂನು ತರಲು, ಮುಸ್ಲಿಂ
ಮಹಿಳೆಯರಿಗೆ ಸ್ವಯಂ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲು, ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಲು, ಯುವಕರಲ್ಲಿ ಖಾದಿಯ ಹುಚ್ಚು ಹಚ್ಚಿ ಖಾದಿ ಮಾರಾಟವನ್ನು ಹೆಚ್ಚಿಸಲು, ಸೇನಾ ಸಾಮಗ್ರಿಗಳ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ನಿಲ್ಲಿಸಲು, ಸೈನಿಕರೊಂದಿಗೆ ದೀಪಾವಳಿ ಆಚರಿಸಲು, ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದ ಉತ್ಪಾದಿಸಿ ಸೈನ್ಯದ ವೆಚ್ಚ ಕಡಿಮೆ ಮಾಡಲು, ನಿವೃತ್ತ ಸೈನಿಕರಿಗೆ ಏಕರೂಪದ ಪಿಂಚಣಿ ನೀಡಲು, ಇಸ್ರೇಲ್‌ನಿಂದ ಮಿಸೈಲ್ ಖರೀದಿಸಲು, ಅತ್ಯಾಧುನಿಕ ಯುದ್ಧ ವಿಮಾನವಾದ ರಫೆಲ್‌ಗಳನ್ನು ತರಲು, ಸೈನಿಕರಿಗೆ ಗುಂಡು ನಿರೋಧಕ ಹೆಲ್ಮೆಟ್ ಮತ್ತು ಜಾಕೆಟ್ ನೀಡಲು, ಜಲಾಂತರ್ಗಾಮಿ ನಿರೋಧಕ ಬೋಯಿಂಗನ್ನು ಸೈನ್ಯಕ್ಕೆ ಸೇರಿಸಲು, ಸೈನ್ಯದಲ್ಲಿ ಮಹಿಳಾ ಪೈಲೆಟ್ ಗಳನ್ನು ನೇಮಕ ಮಾಡಲು, ನಾಗಾ ಉಗ್ರರನ್ನು ಧ್ವಂಸ ಮಾಡಲು, ದಶಕಗಳ ವಿವಾದವಾದ ಡೊಕ್ಲಾಂನಿಂದ ಚೀನಾ ಸೈನ್ಯ ಹಿಮ್ಮೆಟ್ಟಿಸಿ ಅರುಣಾಚಲ ಪ್ರದೇಶವನ್ನು ಸುರಕ್ಷಿತಗೊಳಿಸಲು, ನಕ್ಸಲ್ ಹಾವಳಿ ಕ್ಷೀಣಿಸುವಂತೆ ಮಾಡಲು, ಇತಿಹಾಸದ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರ ಕ್ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕಿ ಭಯೋತ್ಪಾದಕರನ್ನು ಹೊಡೆಯಲು, ಭ್ರಷ್ಟಾಚಾರ ಮತ್ತು ಕಳಂಕ ರಹಿತವಾದ ಆಡಳಿತ ನೀಡಲು, ಜಿಎಸ್‌ಟಿ ಜಾರಿ ಮೂಲಕ ದೇಶಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸಲು, ನೋಟು ಅಮಾನ್ಯೀಕರಣ ಮಾಡಿ ಕಪ್ಪು ಹಣದ ವಿರುದ್ಧ ಯುದ್ಧ ಸಾರಲು, ಭಾರತಮಾಲಾ, ಸಾಗರಮಾಲಾ ಯೋಜನೆಗಳನ್ನು ಜಾರಿಗೊಳಿಸಲು, ಬಡವರಿಗೆ ಎಲ.ಪಿ.ಜಿ ಸಂಪರ್ಕ ಕಲ್ಪಿಸಲು, ಪವಿತ್ರ ರಾಮಸೇತುವನ್ನು ಉಳಿಸಲು, ಹಜ್ ಯಾತ್ರೆ ಸಬ್ಸಿಡಿ ಹಣವನ್ನು ನಿಲ್ಲಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು, ಮಾತೃವಂದನಾ, ಇಂದ್ರಧನುಷ್, ಜನೌಷಧಿ, ಸ್ವಚ್ಛ ಭಾರತ್, ಪೋಷಣ್ ಅಭಿಯಾನ, ನಮಾಮಿ ಗಂಗಾ, ಮಿಶನ್ ಶಕ್ತಿ, ಸ್ಟ್ಯಾಂಡ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಉಡಾನ್ ಯೋಜನೆ, ಕೃಷಿ ಸಿಂಚಾಯಿ, ಭೇಟಿ ಬಚಾವೋ ಭೇಟಿ ಪಡಾವೋ, ಜನಸುರಕ್ಷಾ, ಅಟಲ್ ಪಿಂಚಣಿ, ಪ್ರಧಾನಮಂತ್ರಿ ಜನಧನ್, ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಆವಾಸ್, ಪ್ರಧಾನ ಮಂತ್ರಿ ಜೀವನ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ,  ಪ್ರಧಾನ ಮಂತ್ರಿ ಫಸಲ್ ಭೀಮಾ, ಪ್ರಧಾನಮಂತ್ರಿ ಗರಿಬ್ ಕಲ್ಯಾಣ, ಮೇಕ್ ಇನ್ ಇಂಡಿಯಾ, ಚಿನ್ನ ನಗದೀಕರಣ, ಅರುಣ್, ಟ್ಯಾಕ್ಸೇಬಲ್
ಪ್ರೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್, ಪ್ರಧಾನಮಂತ್ರಿ ರೋಜಗಾರ್, ಸಂಸದ ಆದರ್ಶ ಗ್ರಾಮ, ರಾಷ್ಟ್ರೀಯ ಗೋಕುಲ್, ವಸತಿ, ದೀನ ದಯಾಳ ಗ್ರಾಮಜ್ಯೋತಿ, ಮುದ್ರಾ..ಇತ್ಯಾದಿ ಅನೇಕ ರೈತಪರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು, ಸೀತವ್ವ ಕನ್ನಡತಿ ಜೋಗತಿ, ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ, ಬುಡಕಟ್ಟು ಜನಾಂಗದ ಸುಕ್ರಿ ಬೊಮ್ಮಗೌಡ
(ಸುಕ್ರಜ್ಜಿ), ಕನ್ನಡಿಗ ಗಿರೀಶ್ ಭಾರದ್ವಾಜರಿಗೆ ಮತ್ತು ಇವರಂಥ ಜನಸಾಮಾನ್ಯರಿಗೆ ಪದ್ಮಶ್ರೀ ಪ್ರಶಸ್ತಿಯನ್ನು, ಸಿದ್ಧಗಂಗೆಯ ಪೂಜ್ಯ
ಶ್ರೀಶಿವಕುಮಾರ ಸ್ವಾಮಿಗಳಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲು, ದಲಿತನೊಬ್ಬನನ್ನು ರಾಷ್ಟ್ರಪತಿಯಾಗಿಸಲು, ದಲಿತ
ಸಮುದಾಯದವರಿಗೆ ಸಾಲ ದೊರಕಿಸಲು, ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸಲು, ಸಾವಿರ ದಿನಗಳೊಳಗಾಗಿ
ಹದಿನೆಂಟು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲು, ಸೈನ್ಯಕ್ಕೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ಸೇನಾ
ಮುಖ್ಯಸ್ಥರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು, ಸೈನಿಕರಿಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ಸ್ಥೈರ್ಯವನ್ನು ಪ್ರತಿಹಂತದಲ್ಲೂ
ತುಂಬಲು, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಲು, ತೆರಿಗೆ ವಿವಾದ ಇತ್ಯರ್ಥಗೊಳಿಸಲು, ಕೃಷಿವಲಯವನ್ನು ಚೇತನ ಗೊಳಿಸಲು, ಬ್ಯಾಂಕುಗಳ ವಿಲೀನವಾಗಿಸಲು, ಕೈಗಾರಿಕಾ ವಲಯವನ್ನು ಪುನಶ್ಚೇತನಗೊಳಿಸಲು, ಮೂಲಸೌಕರ್ಯ  ಅಭಿವೃದ್ಧಿ ಗೊಳಿಸಲು, ವಿಶೇಷವಾಗಿ ರಕ್ಷಣಾ ವಲಯವನ್ನು ಸಮಗ್ರವಾಗಿ ಸದೃಢಗೊಳಿಸಲು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು, ಮುಸ್ಲಿಮೇತರ ಸಮುದಾಯಗಳಿಗೆ ರಾಷ್ಟ್ರೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ಕಾಯಿದೆಗೆ ತಿದ್ದುಪಡಿ ಮಾಡಲು, ಸಂಸತ್ ಭವನವನ್ನು ನಿರ್ಮಿಸಲು, ಯುಎಪಿಎ ಜಾರಿಗೊಳಿಸಲು, 20 ಲಕ್ಷ ಕೋಟಿ ರು.ಗಳ ಆತ್ಮನಿರ್ಭರ ಪ್ಯಾಕೇಜ್ ನೀಡಲು, ದೇಶವನ್ನು ಕಾಯುವ ಯೋಧರನ್ನು ಅಭಿಮಾನ ಮತ್ತು ಹೆಮ್ಮೆಯಿಂದ ಗೌರವಿಸಲು – ಹೀಗೆ ಹಲವು ಹತ್ತು ಕಾರಣ ಗಳಿಗಾಗಿ ಮೋದಿ ಈ ದೇಶದ ಪ್ರಧಾನಿಯಾಗಿ ಬರಬೇಕಾಯಿತು.

ಫಿಲಿಪ್ ಕಾಟ್ಲರ್ಸ್ತಿ, ಸಿಯೋಲ್ ಶಾಂತಿ, ಚಾಂಪಿಯನ್ ಆಫ್ ಅರ್ಥ್, ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ತೀನ್,
ಅಮೀರ್ ಅಬ್ದು ಖಾನ್ ಅವಾರ್ಡ್ ಒಫ್ ಅಫಘಾನಿಸ್ಥಾನ, ಕಿಂಗ್ ಅಬ್ದುಲ್ ಅಝೀಜ್ ಸಾಶ್, ಸೌದಿ ಅರೇಬಿಯ, ಅಮೀರ್
ಅಮಾನುಲ್ಹಾ ಖಾನ್ ಪ್ರಶಸ್ತಿ, ಅಫಘಾನಿಸ್ಥಾನ, ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ…ಮುಂತಾದ ಹಲವು ಪ್ರಶಸ್ತಿಗಳು ನಿಮ್ಮನ್ನರಸಿ ಬಂದವು.

ಗೌರವ ರೂಪದಲ್ಲಿ ಸಂದ 1900 ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜಿನ ರೂ.11.7 ಕೋಟಿ ಹಾಗೂ ಸಿಯೋಲ್ ಶಾಂತಿ ಪ್ರಶಸ್ತಿಯ ರೂ.1.4 ಕೋಟಿ ಹಣವನ್ನು ಗಂಗಾಶುದ್ಧಿಗೆ ನೀವು ನೀಡಿದ್ದು, ಗುಜರಾತ್ ಬಡಮಕ್ಕಳ ಕಲ್ಯಾಣಕ್ಕಾಗಿ ನಿಮ್ಮ ಈವರೆಗಿನ ಒಟ್ಟೂ ಸಂಬಳವನ್ನು ಮೀಸಲಿಟ್ಟಿದ್ದು ತಪ್ಪಲ್ಲವೇ? ಕ್ಷಮಿಸಿ, ಹೀಗೆ ಹೇಳುತ್ತಿದ್ದೇನೆಂದು ತಪ್ಪು ಭಾವಿಸಬೇಡಿ. ಸ್ವಾರ್ಥವಿಲ್ಲದ ಮನುಷ್ಯರೇ ಇಲ್ಲವೆನ್ನುತ್ತದೆ ಈ ಜಗತ್ತು. ಹಾಗಾದರೆ ನಿಮಗೆ ಸ್ವಾರ್ಥವೆಂಬುದೇ ಇಲ್ಲವೆ? ನಿಮ್ಮ ಹಾಗೆ ಎಲ್ಲರೂ ನಿಸ್ವಾರ್ಥಿ ಗಳಾಗಲು ಸಾಧ್ಯವೇ? ಅಥವಾ ನೀವು ಹಾಗೆ ಬಯಸೋದು ಸರಿಯೇ? ಆದ್ದರಿಂದ ತಪ್ಪು ನಿಮ್ಮದೇ ಅನಿಸುವುದಿಲ್ಲವೆ? ನೀವು ಹಣ ಮಾಡಿ. ನಿಮ್ಮವರಿಗೂ ಹಣಮಾಡಿಕೊಳ್ಳಲು ಬಿಡಿ. ನಮಗೂ ಹಣಮಾಡಿಕೊಳ್ಳಲು ಬಿಡಿ.

ಆಗ ಮಾತ್ರ ನೀವು ಒಳ್ಳೆಯವರಾಗಿ ನಮಗೆ ಕಾಣುತ್ತೀರಿ! ನೀವಿದ್ದಂತೆ ನಿಮ್ಮ ಪಕ್ಷದ ಎಲ್ಲರೂ ಇದ್ದಾರೆಂದು ಈಗಲೂ ನಾನು ಒಪ್ಪುವುದಿಲ್ಲ. ನಿಮ್ಮ ಹೆಸರಿನಲ್ಲಿ ಗೆದ್ದುಬಂದ ಯಾವ ಜನಪ್ರನಿಧಿಯೂ ವೈಯಕ್ತಿಕವಾಗಿ ನಿಮ್ಮ ಆದರ್ಶವನ್ನೇ ಪಾಲಿಸಿದರು ಅಂತ ನಂಬುವುದಕ್ಕೆ ಸಾಧ್ಯವಿಲ್ಲ. ಆದರೆ ಯಾವುದೇ ಪಕ್ಷದ ಯಾವುದೇ ಒಬ್ಬ ರಾಜಕಾರಣಿಗೂ ನಿಮ್ಮನ್ನು ನೈತಿಕವಾಗಿ ಅಷ್ಟು ಸುಲಭವಾಗಿ ಎದುರಿಸಲು ಸಾಧ್ಯವಿಲ್ಲ ಎಂತ ಯಾವಾಗಲೋ ಅನಿಸಿಬಿಟ್ಟಿದೆ.

ಕೊನೆಯ ಮಾತು: ಮೋದಿಜೀ, ಈ ದೇಶದ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳು ನಿಮ್ಮಲ್ಲಿದ್ದವೋ? ಎಲ್ಲವೂ ಕರೋನಾ ತಂದ
ವಿಪತ್ತಿನಡಿಯಲ್ಲಿ ಮಣ್ಣುಪಾಲಾಯಿತು. ದೇಶದ ಆರ್ಥಿಕ ಸ್ಥಿತಿ ಹಳ್ಳ ಹಿಡಿಯುವಂತಾಯಿತು. ಹಳಿತಪ್ಪಿದ ಭಾರತ ಆದಷ್ಟೂ ಬೇಗ ಹಳಿಗೆ ಬರಲಿ. ನಿಮ್ಮ ಕನಸುಗಳು ಸಾಕಾರಗೊಳ್ಳುವುದನ್ನು ಈ ದೇಶವಾಸಿಗಳು, ನಿಮ್ಮ ದ್ವೇಷವಾಸಿಗಳೂ ನೋಡುವಂತಾ ಗಲಿ. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲವಾದರೂ ನೀವು ನಿಮ್ಮ ಹಾದಿಯಲ್ಲಿ ಕ್ರಮಿಸಿ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ.

ದೇಶಕ್ಕಾಗಿ ತನ್ನ ವೈಯಕ್ತಿಕ ಸುಖ ಸಂತೋಷವನ್ನು, ಆರೋಗ್ಯವನ್ನು ಲೆಕ್ಕಿಸದೆ ದೇಶಕ್ಕಾಗಿ ದುಡಿಯುತ್ತಿರುವ ದೈತ್ಯ ವ್ಯಕ್ತಿತ್ವದ ನಿಮ್ಮಿಂದ ಇದೊಂದು ಕಾರ್ಯ ಸಾಧ್ಯವಾಗಲಿಲ್ಲ ಅಂತ ಹೇಳದಿರಲು ಸಾಧ್ಯವಿಲ್ಲ. ಹಾಗಂತ ನೀವು ಮಾಡಿದ್ದೆಲ್ಲವೂ ಸುಮ್ಮನೆ ಕಣ್ಮುಚ್ಚಿ ಒಪ್ಪುವುದಕ್ಕೂ ಆಲೋಚಿಸಬೇಕಾಗುತ್ತದೆ. ಮಾಡಬೇಕಾದುದು ಇನ್ನೂ ಇದೆ. ಅದೇ ರೀತಿ ನಿಮ್ಮ ಗಮ್ಯವು ನಿಚ್ಚಳ ವಾಗಿದೆ. ಆದರೆ ಹಾದಿ ದುಸ್ತರವಾಗಿದೆ. ಈ ಪ್ರಮಾಣದಲ್ಲಿ ದೇಶಕ್ಕಾಗಿ ನೀವು ದುಡಿದರೂ ನೀವಿನ್ನೂ ಅರ್ಥವಾಗಲಿಲ್ಲ!

ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅರ್ಥವಾದರೂ ನಿಮ್ಮ ಬಗ್ಗೆ ಅಪಪ್ರಚಾರ ಮಾಡಿ ಅಪಾರ್ಥ ಮಾಡಿಸು ವವರೇ ಇರುವಾಗ ಅಪಾರ್ಥವೇ ಪ್ರಚಾರದಲ್ಲಿದೆ. ಮೋದಿ ಏನು ಮಾಡಿದ್ದಾರೆಂದು ಕೇಳುವವರಿಗೆ ನೀವು ಅರ್ಥವಾಗುವುದಿಲ್ಲ!
ಯಾಕೆಂದರೆ, ಮೋದಿ ನಮಗೆ ಬೇಕಾದುದನ್ನು ಮಾಡಲಿಲ್ಲವೆಂಬ ಅತಿಸಣ್ಣ ಸಂಕುಚಿತ ಸ್ವಾರ್ಥದ ಕುಬುದ್ಧಿ ಅವರದ್ದು! ಅವರ ಈ ದುರ್ಬುದ್ಧಿ ದೇಶ – ವಿದೇಶಕ್ಕೇ ಪ್ರಕಟವಾಗಲೂ ನೀವೇ ಬರಬೇಕಾಯಿತು!