Sunday, 8th September 2024

ಮೋದಿ ವರ್ಚಸ್ಸು: ರಾಜಕೀಯ ಪಕ್ಷಗಳಲ್ಲಿ ಹೆಚ್ಚಿದ ಜಿಜ್ಞಾಸೆ

ನಿರೂಪಣೆ,

ಮುರುಗೇಶ್ ಆರ್‌.ನಿರಾಣಿ,

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು

ವರ್ಚಸ್ಸು ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಅವರು ಅಮೆರಿಕದಲ್ಲಿ ಮೂರು ತಿಂಗಳ ಕೋರ್ಸ್ ಮುಗಿಸಿದ್ದಾರೆ ಎನ್ನುವ ಸೋಜಿಗದ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕ ಸಂಪರ್ಕ ಕ್ಷೇತ್ರದ ಪಂಡಿತರು ಹಾಗೂ ವ್ಯಕ್ತಿತ್ವ ವಿಕಸನ ತಜ್ಞರಿಂದ ಅವರು ಮಾರ್ಗದರ್ಶನ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಮೋದಿ ಅವರು ಬಹುಸಂಸ್ಕೃತಿಯ ಭವ್ಯ ಭಾರತಕ್ಕೆ ಗಾಂಧೀಜಿ ನಂತರ ಬಂದ ಒಬ್ಬ ಅಪ್ರತಿಮ ನಾಯಕರಾಗಿದ್ದಾರೆ. ಇದು ಕಾಲದ ಅವಶ್ಯಕತೆಯೂ ಆಗಿರಬಹುದು.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಯು.ಎಸ್.ಎ ಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ದೊಡ್ಡ ಜನಜಂಗುಳಿಯೇ ಕಾದು ನಿಂತಿತ್ತು. ಮೋದಿ ಅವರು ಭಾಷಣ ಮಾಡಿದರೆ ಕೇಳುಗರು ಮನದುಂಬಿ ತಲೆದೂಗು ತ್ತಾರೆ. ಅವರು ಹೋದೆಡೆಯಲ್ಲ ಜನ ಮುಗಿ ಬೀಳುತ್ತಾರೆ. ಕೈ ಕುಲಕಲು, ಅವರ ಒಂದು ಮಾತು ಆಲಿಸಲು ಹಾತೊರೆಯುತ್ತಾರೆ. ಜಗತ್ತಿನ ಗಣ್ಯಾತಿಗಣ್ಯ ನಾಯಕರು ಅವರ ಸ್ವಾಗತಕ್ಕೆ ಸಾಲು ಗಟ್ಟಿ ನಿಲ್ಲುತ್ತಾರೆ. ಮೋದಿ ಅವರಿಗೆ ಇಂತಹ ದ್ದೊಂದು ಆಕರ್ಷಕ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾದದ್ದು ಹೇಗೆ? ಎನ್ನುವ ಕುತೂ ಹಲದ ಪ್ರಶ್ನೆ ಈಗ ರಾಜಕೀಯ ಪಂಡಿತರ ನಡುವೆ ಚರ್ಚೆಗೆ ಒಳಪಟ್ಟಿದೆ.

ಕಾಂಗ್ರೆಸ್, ಕಮ್ಯುನಿಷ್ಟ ದಳ, ಎನ್‌ಸಿಪಿ ಹೀಗೆ ಹತ್ತು ಹಲವು ರಾಜಕೀಯ ಪಕ್ಷಗಳಲ್ಲಿ ಮೋದಿಯವರು ಈ ಪರಿಯ ತೇಜಸ್ವಿ ವ್ಯಕ್ತಿತ್ವ ಸಾಧಿಸಿದ್ದು ಹೇಗೆ ಎಂಬ ಜಿಜ್ಞಾಸೆ ಚರ್ಚೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ದಿಸೆಯಲ್ಲಿ ಅಧ್ಯಯನ ನಡೆಸಿದ ರಾಜಕೀಯ ವಿಶ್ಲೇಷಕರು, ವರ್ಚಸ್ಸು ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಅವರು ಅಮೆರಿಕದಲ್ಲಿ ಮೂರು ತಿಂಗಳ ಕೋರ್ಸ್ ಮುಗಿಸಿದ್ದಾರೆ ಎನ್ನುವ ಸೋಜಿಗದ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕ ಸಂಪರ್ಕ ಕ್ಷೇತ್ರದ ಪಂಡಿತರು ಹಾಗೂ ವ್ಯಕ್ತಿತ್ವ ವಿಕಸನ ತಜ್ಞರಿಂದ ಅವರು ಮಾರ್ಗದರ್ಶನ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ.

ನಾಯಕನಾದವನು ಎಂತಹ ಒತ್ತಡದ ನಡುವೆಯೂ ಕೇಳುವ ಕಿವಿ, ಆಲೋಚಿಸುವ ಮನಸ್ಸು ಮತ್ತು ವಿವೇಕ ವನ್ನು ಕಳೆದುಕೊಳ್ಳಬಾರದು ಎಂಬ ಮಾತೊಂದಿದೆ. ಈ ಮಾತು ಎಲ್ಲ ನಾಯಕರಿಗೂ ಅನ್ವಯಿಸುವಂತಹದು. ಮೋದಿಯವರು ಈಗ 2 ನೆಯ ಅವಧಿಗೆ ಪ್ರಧಾನಿಯಾಗಿದ್ದಾರೆ. ಇದಕ್ಕೂ ಮೊದಲು ಅವರು 10 ವರ್ಷ ಗುಜರಾತನ ಮುಖ್ಯಮಂತ್ರಿಯಾಗಿದ್ದರು. ಇಷ್ಟು ದೀರ್ಘಕಾಲ ನಾಯಕನಾಗಿ ನಿಂತ ಅವರು ಒಮ್ಮೆಯೂ ಕೇಳುವ ಕಿವಿ ಆಲೋಚಿಸುವ ಮನಸ್ಸು ಮತ್ತು ವಿವೇಕವನ್ನು ಕಳೆದುಕೊಂಡು ವರ್ತಿಸಿದ ಉದಾಹರಣೆ ಇಲ್ಲ.

ಇದೇ ಮೋದಿಯವರ ಗೆಲುವಿನ ಗುಟ್ಟು. ಟ್ರೇನಿಂಗ್ ಒಂದರಿಂದಲೇ ಮೋದಿ ಅವರು ಜಗತ್ತಿನ ಹೀರೋ ಆಗಿರುವುದು ಸಾಧ್ಯವಾಗಿದೆ ಎನ್ನುವುದು ಅಷ್ಟು ಸಮಾಧಾನಕರ ಅಭಿಪ್ರಾಯವಲ್ಲ. ಅವರು ಹೀರೋ ಆಗಲು ಅವರ ಪ್ರಾಮಾಣಿಕತೆ, ತ್ಯಾಗ, ಪರಿಶ್ರಮ, ಧನಾತ್ಮಕ ಚಿಂತನೆಗಳು ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನುಗ್ಗುವ ಗುಣಕಾರಣವಾಗಿವೆ ಎಂಬುದನ್ನು ಮರೆಯಬಾರದು.

ಗಾಂಧೀಜಿ ವಿಶ್ವಮಾನ್ಯರಾಗಲು ಅವರ ಪ್ರಾಮಾಣಿಕತೆ, ಸರಳತೆ ಮತ್ತು ಅಖಂಡತ್ಯಾಗ, ಸತ್ಯ, ಅಹಿಂಸೆ ಕಾರಣವಾಗಿದ್ದವು. ತ್ಯಾಗವನ್ನು ಭಾರತೀಯರು ತುಂಬಾ ಆರಾಧಿಸುತ್ತಾರೆ. ಮೋದಿ ಅವರು ಜನ್ಮದಿನದ ನಿಮಿತ್ತ ಗುಜರಾತಿನ ಗಾಂಧಿನಗರ ಸಮೀಪದ ರೈಸಿನ ಗ್ರಾಮಕ್ಕೆ ಭೇಟಿ ನೀಡಿ ತಾಯಿ  ರಾಬೆನ್‌ ಅವರ ಆಶೀರ್ವಾದ ಪಡೆದರು. ನಂತರ ಅವರೊಂದಿಗೆ ಊಟ ಸೇವಿಸಿ ಮಾತೃ ಪ್ರೀತಿಯ ಆನಂದ ಅನುಭವಿಸಿದರು. ಅಮ್ಮಕೊಟ್ಟ 501 ರೂಪಾಯಿ
ಪ್ರೀತಿಯಿಂದ ಸ್ವೀಕರಿಸಿದರು. 98 ವರ್ಷದ ಹೀರಾಬೆನ್‌ಅವರು ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರ ಜತೆ ವಾಸಿಸುತ್ತಿದ್ದಾರೆ. ಪ್ರಮುಖ ದಿನಗಳಂದು ಮೋದಿ ಅವರು ತಾಯಿಯ ಆಶೀರ್ವಾದ ಪಡೆಯುವ ಪರಿಪಾಠವನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಇಂಥ ಸಣ್ಣ ಸಣ್ಣಸಂಗತಿಗಳೇ ವ್ಯಕ್ತಿಯ ಘನತೆಯನ್ನು ಬೆಳೆಸುತ್ತವೆ.

ದೇಶವೆಂದೂ ಯಾರೆದರೂ ತಲೆತಗ್ಗಿಸದಂತೆ ಭಾರತೀಯರು ಜಗತ್ತಿನೆದರು ಎದೆಸೆಟೆಸಿ ನಿಲ್ಲುವಂತೆ ಮಾಡಿದ ಮೋದಿ ಅವರು ಬರೀ ಹಿರೋ ಅಲ್ಲ,
ಅವರೊಬ್ಬ ಯುಗಪುರುಷ ಎನ್ನುವ ಗೌರವ ಪಡೆದಿದ್ದಾರೆ. ರಾಜಕಾರಣಿಯ ಯಶಸ್ಸನ್ನುಏಕವಿಚಾರದಲ್ಲಿ ಅಳೆಯಲಾಗದು. ಆತ ಸಮಾಜದಲ್ಲಿ- ದೇಶದಲ್ಲಿ ಮಾಡಿದ ಬದಲಾವಣೆ ಮತ್ತು ತನ್ನ ಪಕ್ಷಕ್ಕೆ ಕೊಟ್ಟ ಕೊಡುಗೆಯನ್ನು ಮೊದಲು ಗಮನಿಸಬೇಕಾಗುತ್ತದೆ. ಸಮಾಜಕ್ಕೇನೂ ನೀಡಿದ ರಾಜಕಾರಣಿ ಹೆಚ್ಚು ದಿನಗಳ ಕಾಲ ರಾಜಕೀಯ ವೇದಿಕೆ ಮೇಲೆ ನಿಲ್ಲಲು ಸಾಧ್ಯವಿಲ್ಲ.

ರಾಜಕೀಯವಿರಲಿ ಅಥವಾ ಉದ್ದಿಮೆಯಿರಲಿ ಮ್ಯಾನೇಜ್‌ಮೆಂಟ್ ಬಹಳ ಮುಖ್ಯ. ನೀವು ಕಣ್ಣುದಾನ ಪಡೆಯಬಹುದು. ಆದರೆ ದೂರದೃಷ್ಟಿದಾನ ಪಡೆಯುವುದು ಸಾಧ್ಯವಿಲ್ಲ. ನಿರ್ವಹಣಾ ಕೌಶಲ್ಯ ಪ್ರತಿಯೊಬ್ಬರ ವೈಯಕ್ತಿಕ ಬೆಳವಣಿಗೆಗೂ ದೇಶದ ಸಮಗ್ರ ಅಭಿವೃದ್ಧಿಗೂ ಅತ್ಯಂತ ಅಗತ್ಯ. ದೂರ ದೃಷ್ಟಿಗೆ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ನೆರವು ಬೇಕು. ಈ ಮೂರನ್ನು ಸಂಪತ್ತಾಗಿ ಪರಿವರ್ತಿಸುವುದರಲ್ಲಿಯೇ ದೇಶದ ಭವಿಷ್ಯವಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಮೋದಿ ಅವರು ವಿಜ್ಞಾನವನ್ನು ಸಮರ್ಪಕವಾಗಿ ಬಳಸುವ ಮನಸ್ಥಿತಿ ಹೊಂದಿರುವುದು ಅವರ ವಿಶೇಷ ಗುಣ ವಾಗಿದೆ.

ಈಚೆಗೆ ನಡೆದ ವಿಕ್ರಮ್‌ಉಪಗ್ರಹ ಕಾಲಕ್ಕೆ ಮೋದಿಯವರು ಸ್ವತಃ ಬಂದು ಉಡಾವಣೆ ಕೇಂದ್ರದಲ್ಲಿ ರಾತ್ರಿಯಿಡಿ ಕುಳಿತು ವೀಕ್ಷಿಸಿದರು. ಕೊನೆಯಲ್ಲಿ ನಡೆದ ಅಲ್ಪ ವಿಫಲತೆಯ ಕಾಲಕ್ಕೆ ಅಲ್ಲಿದ್ದ ವಿಜ್ಞಾನಿಗಳನ್ನು ಅಪ್ಪಿಕೊಂಡು ಧೈರ್ಯ ತುಂಬಿದ್ದು, ಇಡೀ ಭಾರತವೇ ಹೆಮ್ಮೆ ಪಡುವಂತಾಯಿತು. ಮಗು ಎಡವಿಬಿದ್ದಾಗ ತಾಯಿ ಮಗುವಿಗೆ ನೀನು ಬಿದ್ದಿಯೇ ಇಲ್ಲ!ಎಂದು ಧೈರ್ಯ ತುಂಬುವ ರೀತಿಯಲ್ಲಿ ಅವರು ನಡೆದುಕೊಂಡರು. ಈ ದೇಶದ ಸಮಸ್ಯೆಗಳಿಗೆ ಮೋದಿಯವರು ತಾಯಿ ಕರುಳಿನ ಹಾರೈಕೆ ನೀಡುತ್ತಾರೆ.

ಆರಾಮದಾಯಕ ಪರೀದಿಯಲ್ಲಿ ಎಂದಿಗೂ ಬೆಳವಣಿಗೆ ಸಾಧ್ಯವಿಲ್ಲ.ಅವರ ಬಾಡಿ ಲಾಂಗ್ವೇಜ್ (ಆಟbqs ಔZಜZಜಛಿ) ಸದಾಯುದ್ಧಕ್ಕೆ ಹೊರಟ
ಯೋಧನ ಹಾಗೆಯೇ ಗಟ್ಟಿಯಾಗಿರುತ್ತದೆ. ಸೈದ್ಧಾಂತಿಕ ಬದ್ಧತೆ, ದ್ವಂದ್ವ ಮುಕ್ತ ರಾಜಕೀಯ ಮನಸ್ಥಿತಿ, ಸಾಮೂಹಿಕ ನಾಯಕತ್ವ ಮೈಗೂಡಿಸಿ ಕೊಳ್ಳುವುದು ಅನಿವಾರ್ಯ. ಇವು ಮೋದಿಯವರಲ್ಲಿ ಅಂತರ್ಗತವಾಗಿ ಬೆಳೆದಿವೆ. ಅವರ ಮನ್ ಕೀ ಬಾತ್ ಪ್ರತಿ ತಿಂಗಳ ರೇಡಿಯೋ ಭಾಷಣ ಭಾರತೀಯ ಯುವಕರಲ್ಲಿ ಹೊಸ ಸ್ಪೂರ್ತಿ ತುಂಬುತ್ತಿದೆ. ಅವರು ಒಬ್ಬ ಪ್ರಧಾನಿಯಾಗಿ ಕಾಣದೇ ಮನೆಯ ಯಜಮಾನನಾಗಿ ಮಾತನಾಡುತ್ತಾರೆ.

ಅವರು ಜಾರಿಗೆ ತಂದಿರುವ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ, ಜನ-ಧನ ಯೋಜನೆ ಸಾಮಾನ್ಯಜನರಿಗೆ ಸರಳವಾಗಿ ತಲುಪುತ್ತಿವೆ. ಯೋಗದಿಂದ ಆರೋಗ್ಯ ಭಾಗ್ಯ ತಂಬಾಕು ಸೇವನೆಯಿಂದ ಆರೋಗ್ಯ ಹಾನಿ ಹೀಗೆ ವ್ಯಕ್ತಿಯ ವೆಲ್‌ಬಿಯಿಂಗ್ ಬಗ್ಗೆಯೂ ಅವರ ಕಾಳಜಿ ಅಸಾಧಾರಣವಾಗಿದ್ದಾಗಿದೆ.
ಮೋದಿ ಅವರು ಬಹುಸಂಸ್ಕೃತಿಯ ಭವ್ಯ ಭಾರತಕ್ಕೆ ಗಾಂಧೀಜಿ ನಂತರ ಬಂದ ಒಬ್ಬ ಅಪ್ರತಿಮ ನಾಯಕರಾಗಿದ್ದಾರೆ. ಇದು ಕಾಲದ ಅವಶ್ಯಕತೆಯೂ
ಆಗಿರಬಹುದು.

Leave a Reply

Your email address will not be published. Required fields are marked *

error: Content is protected !!