Thursday, 12th December 2024

75ರ ಪ್ರಾಯದ ಭಾರತಕ್ಕೆ 7 ವರ್ಷ ಪ್ರಾಯದ ಮೋದಿಯ ಸಾರಥ್ಯ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಯುನಿವರ್ಸಲ್ ಆಗಿ ಮೆಚ್ಚಿದ ಒಪ್ಪಿದ ಮತ್ತು ಗೊತ್ತಿರುವ ಏಕೈಕ ವ್ಯಕ್ತಿಯೆಂದರೆ ಗಾಂಧಿಯೊಬ್ಬರೇ ಎಂಬಷ್ಟು ಭಾರತ ಅಂದಾಕ್ಷಣ ನೆನಪಾಗುವ ಮತ್ತೊಂದು
ಹೆಸರು ಗಾಂಽಯದ್ದಾಗಿದೆ. ಪ್ರಾಯಃ ಗಾಂಧಿಗೂ ಭಾರತದ ಗಾಢ ತಾದಾತ್ಮ್ಯದಿಂದ ಬಿಡುಗಡೆ ಸಾಧ್ಯವೇ ಇಲ್ಲ! ಗಾಂಧಿಯೆಂಬ ಹೆಸರು ರೂಢಿಯಾಗಿಯೂ,
ಅನ್ವರ್ಥವಾಗಿಯೂ, ವಿಶೇಷಣವಾಗಿಯೂ, ವಿಶೇಷ್ಯ(ಎಕ್ಸ್ ಕ್ಲೂಸಿವ್) ವಾಗಿಯೂ ಬಳಸಲ್ಪಟ್ಟಿವೆ.

ಅಂಥ ವ್ಯಕ್ತಿತ್ವಕ್ಕೆ ಮೊನ್ನೆಯಷ್ಟೇ 152ರ ಸಂಭ್ರಮವನ್ನು ಆಚರಿಸಲಾಯಿತು. ಗಾಂಧಿಯ ಬದುಕಿನ ಹಲವು ಮಜಲುಗಳನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಿ ಬರೆದ ಪುಸ್ತಕಗಳಿಗೇನೂ ಕೊರತೆಯಿಲ್ಲ! ಈಗಲೂ ಗಾಂಧಿಯ ಬಗ್ಗೆ ವಿಭಿನ್ನ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಿದ ಪುಸ್ತಕಗಳು ಪ್ರಕಟವಾಗುತ್ತಲೇ ಇದೆ. ಗಾಂಧಿ ಯನ್ನು ಹತ್ತಿರದಿಂದ ಕಂಡವರೂ ಗಾಂಧಿಯ ಬಗ್ಗೆ ಎಷ್ಟು ಬರೆದರೋ ಗೊತ್ತಿಲ್ಲ, ಆದರೆ, ಗಾಂಧಿ ಇಲ್ಲವಾದ ಮೇಲೆ ಗಾಂಧಿಯನ್ನು ಹೊಗಳಿ ಬರೆದವರಿ ಗೇನೂ ಕಡಿಮೆಯಿಲ್ಲ! ವಿಚಿತ್ರವೇನೆಂದರೆ, ಗಾಂಧಿಗೂ ತನ್ನ ಬದುಕಿನ ಬಗ್ಗೆ ಗೊತ್ತಿರದಷ್ಟು ಗಾಂಧಿಯ ಬದುಕನ್ನು ವಿಶ್ಲೇಷಿಸಿದವರಿದ್ದಾರೆ.

ಗಾಂಽಯೆಂದರೆ ಬದುಕುವ ಮಾರ್ಗವೆಂದೂ, ಜೀವನ ಮಾರ್ಗವೆಂದೂ, ಮಹಾನ್ ಮಾನವತಾವಾದಿಯೆಂದೂ, ಅವತಾರ ಪುರುಷನೆಂದೂ, ಹೆಚ್ಚೇಕೆ ದೇವ ರೆಂದೂ ಭಾವಿಸಿದವರಿದ್ದಾರೆ. ಅಂಥ ಪರಂಪರೆ ಮತ್ತು ಸಂಸ್ಕೃತಿಯ ದೇಶ ನಮ್ಮದ್ದು. ಯಾರಾದರೂ ಸತ್ಯ ಪ್ರಾಮಾಣಿಕತೆಯ ಋಜುಮಾರ್ಗದ ಮಾತು ಗಳನ್ನಾಡಿದರೆ ಅಥವಾ ಅಂಥ ಅಭಿವ್ಯಕ್ತಿಯ ಬದುಕನ್ನು ಸಾರ್ವಜನಿಕವಾಗಿ ಹೊಂದಿದವರಾದರೆ ಅವರನ್ನು ಗಾಂಽಯೆಂದು ಸಂಬೋಽಸುವ ಅಥವಾ ಆ ಹೆಸರನ್ನೇ ಕ್ಲೀಷೆಯಾಗಿ ಬಳಸುವ ಮಟ್ಟಿಗೆ ಗಾಂಽ ಜನಜನಿತ ರಾಗಿದ್ದಾರೆ.

‘ಹೋಗೆಲೋ ನೀನ್ಯಾವನೋ ಗಾಂಽ’ ಎಂದು ಟೀಕಿಸುವವರಿಗೇನೂ ಈ ಸಮಾಜದಲ್ಲಿ ಕಡಿಮೆಯಿಲ್ಲ. ಎಲ್ಲವನ್ನೂ ಬಿಟ್ಟುಬಿಡಲು ನಾನೇನು ಗಾಂಽಯಲ್ಲ ಎಂಬುವರಿಗೂ, ಗಾಂಽಯಿಲ್ಲದ ಈ ದಿನಗಳಲ್ಲಿ ಗಾಂಽಯ ಹೆಸರನ್ನು ಹೇಳಿಕೊಂಡು ಪ್ರಶಸ್ತಿ, ಸ್ಥಾನಮಾನ, ಅಽಕಾರ ಪಡೆದವರಿಗೂ ಗಾಂಽಯನ್ನು ಅನು ಸಂಽಸುವುದಕ್ಕೆ ಸಾಧ್ಯವಾಗಿಲ್ಲ, ಈ ದಿನಮಾನಗಳಲ್ಲಂತೂ ಬಿಡಿ, ಸಾಧ್ಯವೇ ಇಲ್ಲ ಎಂದೂ, ಹಾಗೆ ಅನುಸರಿಸಲೂ ಬಾರದು ಎಂಬ ನಿರ್ಧಾರಕ್ಕೆ ಬಂದವರಿದ್ದಾರೆ. ಪ್ರಾಯಃ ಗಾಂಽಯನ್ನು ಯಾವ ನೆಲೆಯಲ್ಲೂ ಮುಟ್ಟಲು ಸಾಧ್ಯವಾಗದಿರುವುದಕ್ಕೆ ಈ ಮಾತು ಹುಟ್ಟಿರಬಹುದು! ಅಥವಾ ಗಾಂಽಯ ಬದುಕಿನ ಒಟ್ಟೂ ನೆಲೆಯು ಈ ರೀತಿಯಲ್ಲಿ ತೀರ್ಮಾನಕ್ಕೆ ಬರುವುದಕ್ಕೆ ಕಾರಣವಾಗಿರಬಹುದು.

ಒಬ್ಬನಿಗೆ ಯಾವುದು ಸಾಧ್ಯವೋ ಅದು ಎಲ್ಲರಿಗೂ ಸಾಧ್ಯ ಎಂದು ನಾನು ನಂಬಿದ್ದರಿಂದ ನನ್ನ ಜೀವನದ ಪ್ರಯೋಗಗಳು ಬಹಿರಂಗವಾಗಿ ನಡೆದಿವೆ ಎಂಬ ಸತ್ಯವನ್ನು ಹೇಳುತ್ತಾ ಆ ಕುರಿತಾಗಿ ತಾನು ಕಂಡುಕೊಂಡಿದ್ದೇ ಪರಮೋಚ್ಚವೆಂಬಂತೆ ಗಾಂಽ ಬದುಕಿದವರು. ಸರಳತನದ ಬದುಕಿಗೆ ಮುಂದಾಗಿ ಈ ಸತ್ಯವನ್ನು ಸಾಕ್ಷಾತ್ಕರಿಸಿ ಕೊಳ್ಳುವುದಕ್ಕಾಗಿ ಅವರು ತಮ್ಮ ಮನೆಯನ್ನು ಖಾಲಿ ಮಾಡಿಕೊಂಡರು. ಹೆಂಡತಿ, ಮಕ್ಕಳ ವಿರೋಧವನ್ನು ಕಟ್ಟಿಕೊಂಡರು. ಯಾವ ಬೆಲೆಬಾಳುವ ವಸ್ತುವನ್ನೂ ಅವರು ಇಟ್ಟುಕೊಳ್ಳಲಿಲ್ಲ. ಇಡಗೊಡಲಿಲ್ಲ. ಜನರ ಸೇವೆಯೇ ಜನಾರ್ದನನ ಸೇವೆಯೆಂದು ಬದುಕಿದ ಗಾಂಽಗೆ ತನಗೇ ಹುಟ್ಟಿದ ಮಕ್ಕಳನ್ನು ಸರಿ ಯಾಗಿ ಅಲ್ಲ ಸಹಜವಾಗಿ ಪೋಷಿಸಲು ಸಾಧ್ಯವಾಗಲಿಲ್ಲವೆಂದು ಅನಿಸುತ್ತದೆ.

ಜೀವನವನ್ನು ಆದಷ್ಟೂ ಸರಳವಾಗಿರಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಂತೆ ಬದುಕಿದರು. ಎಷ್ಟು ಸರಳ ಅಂದರೆ ತುಂಡು ಬಟ್ಟೆಯಲ್ಲಿ ಬ್ರಿಟನ್ನಿನ ದುಂಡುಮೇಜಿನ ಪರಿಷತ್ತಿಗೆ ಹೋಗಿ ಬರುವಷ್ಟು! ಗಾಂಽಗೆ ಮಾತ್ರ ಸಾಧ್ಯವಾದ ಈ ಸರಳ ಬದುಕು ಜಗತ್ತಿನ ಅನೇಕ ದಾರ್ಶನಿಕರಲ್ಲಿ ಕಂಡುಬಂದರೂ ಗಾಂಽಯಲ್ಲಿರುವಷ್ಟು ಸರಳತೆಯಿಲ್ಲ. ಆದರೆ, ಮನುಷ್ಯ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದರೆ ಅದು ಕದ್ದಂತೆ ಎಂದವರು ಗಾಂಽ. ಇಡೀ ವಿಶ್ವವೇ ತನ್ನ ಮನೆಯೆಂದು ತಿಳಿದ ಗಾಂಽ ವ್ಯರ್ಥಸಂಗ್ರಹಕ್ಕೆ ವಿರೋಽಯಾಗಿದ್ದರು. ಆದರೆ, ಪ್ರತಿಯೊಬ್ಬ ಭಾರತೀಯನಿಗೂ ಅವನಿಗೆ ಅಗತ್ಯವಾದ ವಸ್ತು ಸಿಕ್ಕಬೇಕೆಂಬುದು ಗಾಂಽಯ ಇಚ್ಛೆ ಯಾಗಿತ್ತು. ಆ ಇಚ್ಛೆಯಲ್ಲಿ ಸಾಮಾನ್ಯನೂ ಸರಳ ಬದುಕನ್ನು ಸಲೀಸಾಗಿ ಸಾಗಿಸಬೇಕೆಂಬ ಕಾಳಜಿಯೂ ಇತ್ತು. ಆದರೆ ವೈಯಕ್ತಿಕ ಬದುಕಲ್ಲಿ ಇದಕ್ಕೆ ವಿರುದ್ಧವಾಗಿ ಬೇರೆಯೇ ಆಗಿ ಕಂಡರು!

ಗಾಂಽಯ ಸ್ವರಾಜ್ಯದ ಕಲ್ಪನೆಯೆಂದರೆ ‘ನನ್ನ ಕೆಲಸವನ್ನು ನಾನು ಮಾಡಿಕೊಳ್ಳುವುದು’ ಎಂದು ಅರ್ಥ. ಗಾಂಽ ಮೂಲತಃ ಓರ್ವ ಸ್ವ-ವರ್ಣಿತ ದಾರ್ಶನಿಕ
ಅರಾಜಕತಾವಾದಿ. ಸರಕಾರಿ ಶಾಸನದ ಕೈಗೊಂಬೆಯಾಗಿರದ ಭಾರತ ಅವರ ಕನಸು. ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ. ಸ್ವಯಂ ಆಡಳಿತ-ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು-ಯಾವ ಕಾನೂನನ್ನು ಹೇರದಿರುವ ಸ್ಥಿತಿ ಅವರ ಸ್ವರಾಜ್ಯದ ಪರಿಕಲ್ಪನೆಯಲ್ಲಿತ್ತು. ಕಾಂಗ್ರೆಸ್ಸನ್ನು ಬರ್ಖಾಸ್ತು ಮಾಡಿ ನೇರ ಪ್ರಜಾಪ್ರಭುತ್ವ ವ್ಯವಸ್ಥೆಯ ಬಯಕೆಯನ್ನು ಹೇಳಿದ್ದರು.

ಒಂದು ನೆಲೆಯಲ್ಲಿ ಆಲೋಚಿಸಿದರೆ ಗಾಂಽಯ ಈ ಬಯಕೆಗೆ ಅರ್ಥವಿದೆ ಅನಿಸುತ್ತದೆ. ಅದೇ ಸಮಯಕ್ಕೆ ಸ್ವೇಚ್ಛೆಯಾಗಬಹುದಾದ ಬಯಕೆಯೆಂತಲೂ ಅನಿಸು ತ್ತದೆ. ಇಷ್ಟೊಂದು ವೈವಿಧ್ಯವೇ ತುಂಬಿರುವ ಈ ದೇಶಕ್ಕೆ ಯಾವ ಕಾನೂನು ಅಥವಾ ಸರಕಾರ ಇಲ್ಲವಾದರೆ ದೇಶದ ಹಳಿ ತಪ್ಪಲಾರದೆ? ತನ್ನ ಕಲ್ಪನೆಯ ಆಡಳಿತದ ಬಗ್ಗೆ ಗಾಂಽ ಹಿಂದ್ ಸ್ವರಾಜ್ ದಲ್ಲಿ ವಿವರಿಸಿದ್ದಾರೆ. ಆದರೆ ತನ್ನ ಈ ಆಡಳಿತ ಕಲ್ಪನೆಗಳನ್ನು ಒಪ್ಪದ ನೆಹರೂಗೆ ಅದನ್ನು 1945ರಲ್ಲಿ ಅರ್ಥವೂ ಮಾಡಿಸಿದ್ದರು ಒಂದು ಪತ್ರದ ಮುಖೇನ. ಅದರಲ್ಲಿ ವಿವರವಾಗಿ ತಾನು ಬಯಸಿದ ಸ್ವರಾಜ್ಯದ ಬಗ್ಗೆ ಹೇಳಿದ್ದರು.

ಗಾಂಽಯ ಸ್ವರಾಜ್ಯದ ಕಲ್ಪನೆ ಆಧುನಿಕ ನಾಗರಿಕತೆಗೆ ವಿರುದ್ಧವಾಗಿತ್ತು. ಈ ಕುರಿತಾಗಿ ಅವರು ಹಿಂದ್ ಸ್ವರಾಜ್ ದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಬ್ರಿಟಿಷರನ್ನು
ಓಡಿಸುವುದಷ್ಟೇ ಅಲ್ಲದೆ ಅವರ ನಾಗರಿಕತೆ ಮತ್ತು ಸಂಸ್ಕೃತಿಯ ಯಾವ ಅಂಶಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇರಬಾರದು. ಸಂವಿಧಾನ ಕೂಡ ನಮ್ಮದೇ
ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಾಂಶಗಳನ್ನು ಹೊಂದಿರಬೇಕು ಎಂಬ ಅಚಲ ನಿರ್ಧಾರ ಅವರದಾಗಿತ್ತು. ಯಾರೂ ಇದನ್ನು ಒಪ್ಪದಿದ್ದರೂ ಕೊನೆಯವರೆಗೂ ತನ್ನ ಈ ಧೋರಣೆಯಲ್ಲಿ ಗಾಂಽ ವಿಚಲಿತರಾಗದೇ ಉಳಿದರು.

ತಾನು ನಂಬಿದ ಸತ್ಯಗಳಲ್ಲಿ ಬದ್ಧತೆಯನ್ನು ಜೀವಂತವಾಗೇ ಇರಿಸಿಕೊಂಡಿರುವುದರಿಂದ ಗಾಂಽಗೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ನೆಹರೂವಿನ ಆಡಳಿತದ ಮಾದರಿಗಳು, ಅವು ಹೊಂದಿರುವ ವಿನ್ಯಾಸಗಳು ಇಷ್ಟವಾಗಲಿಲ್ಲ. ಸ್ವಾತಂತ್ರ್ಯದ ಅನಂತರದಲ್ಲಿ ಗಾಂಽ ತಾನೇ ಆಡಳಿತ ಸೂತ್ರವನ್ನು ಹಿಡಿದು ತನ್ನೊಳಗೆ ಆಳವಾಗಿರುವ ಸತ್ಯ ಮತ್ತು ಅಹಿಂಸೆಯ ರೂಪಕಗಳಿಂದ ರಾಷ್ಟ್ರವನ್ನು ಬಲಿಷ್ಠವಾಗಿ ಕಟ್ಟಬೇಕಿತ್ತು; ಪಟೇಲರನ್ನು ಬದಿಗೆ ಸರಿಸಿ ನೆಹರೂರನ್ನು ಪ್ರಧಾನಿ ಮಾಡುವ ಬದಲು. ಇಂದಿಗೆ ಗಾಂಽಯಿಲ್ಲದಿದ್ದರೂ ಗಾಂಽಯ ಭಾರತ ವಿರುತ್ತಿತ್ತು. ಈಗ ಇರುವ ಭಾರತಕ್ಕೆ ವಿಭಿನ್ನವಾದ ಭಾರತವನ್ನು ನಾವು ಹೊಂದಿರಬಹುದಿತ್ತೇನೋ ಖಂಡಿತವಾಗಿ!

ಸ್ವಾತಂತ್ರ್ಯ ಪ್ರಾಪ್ತಿಯ ಹೋರಾಟದಲ್ಲಿ ಗಾಂಽ ಈ ದೇಶದ ಬಹುಪಾಲು ಜನರಿಗೆ ಐಕಾನ್ ಆಗಿದ್ದವರು. ಆಮೇಲೂ ಅವರನ್ನೇ ಐಕಾನ್ ಎಂದು ಒಪ್ಪಲು ಯಾವ ಅಡ್ಡಿ, ವಿರೋಧಗಳೂ ಖಂಡಿತವಾಗಿಯೂ ಇರಲು ಸಾಧ್ಯವೇ ಇರಲಿಲ್ಲ; ಅಽಕಾರ ದಾಹವಿರುವ ನೆಹರೂ ಮತ್ತು ಜಿನ್ನಾರನ್ನು ಹೊರತು ಪಡಿಸಿ. ಯಾಕೆ, ಗಾಂಽಗೆ
ಸ್ವಾತಂತ್ರ್ಯಾನಂತರದಲ್ಲಿ ನೆಹರೂರನ್ನು ಪ್ರಧಾನಿ ಮಾಡಿದ ಮೇಲೂ ನೆಹರೂ ತನ್ನ ಉತ್ತರಾಽಕಾರಿಯೆಂದು ಯಾಜಮಾನ್ಯವನ್ನು ಸಂಪೂರ್ಣ ತ್ಯಜಿಸಿದರು?
ಪಟೇಲರನ್ನು ಆ ಅಧಿಕಾರದಿಂದ ವಂಚಿತಗೊಳಿಸಿದ್ದು ತಪ್ಪಲ್ಲವೆ? ಈಗ ಇದಕ್ಕೆಲ್ಲ ಉತ್ತರ ಹುಡುಕಿ ಏನಾಗಬೇಕಿದೆ, ಆದದ್ದು ಆಗಿಹೋಯ್ತು ಅಂತ ಭಾವಿಸು ವವರಿಗೆ ಏನನ್ನು ಹೇಳಿ ಪ್ರಯೋಜನವಾಗಲಾರದು. ಚರಿತ್ರೆಯನ್ನು ಮರೆಯಲು ವ್ಯವಹರಿಸಲು ಸಾಧ್ಯವೇ? ರಾವಣನನ್ನು ಕೊಂದ ರಾಮನಲ್ಲದ ರಾಮರಾಜ್ಯ ವನ್ನು ಗಾಂಧೀ ಬಯಸಿದಂತೆ ಕಾಣುತ್ತದೆ. ಆ ಮೂಲಕ ಸದೃಢ ಸ್ವರಾಜ್ಯ ನಿರ್ಮಾಣ ಅವರ ಕನಸಿನ ಭಾರತವಾಗಿತ್ತು.

ಆದರೆ ಗಾಂಧಿ ಎಡವಿದರು. ಪಟೇಲರಿಂದ ನೆಹರೂಗೆ ಅಧಿಕಾರ ಕೊಡಿಸಿ ಅಧಿಕಾರದಿಂದ ದೂರವೇ ಉಳಿದುಬಿಟ್ಟರು. ಅವ್ಯವಧಾನವನ್ನು ಅಸಮಾಧಾನವನ್ನು
ಬಹಿರಂಗವಾಗಿ ತೋರಿಸಿಕೊಂಡರು. ಗಾಂಧಿಯ ಈ ಕ್ರಿಯೆಯಿಂದಾಗಿ ನೆಹರೂಗೆ ಗಾಂಧಿಯ ಪರೋಕ್ಷ ಬೆಂಬಲವೇ ಸಿಕ್ಕಿದಂತಾಯಿತು. ಇನ್ನೊಂದು ನೆಲೆಯಲ್ಲಿ
ಯೋಚಿಸುವುದಾದರೆ ಗಾಂಧಿ ನೆಹರೂ ಮುಂದೆ ಸೋಲನ್ನು ಒಪ್ಪಿಕೊಂಡಂತಾಯಿತು. ಗಾಂಧಿಯ ಅಂತರ್ವಾಣಿ, ಅವರ ಆಧ್ಯಾತ್ಮಿಕ ಶಕ್ತಿ ಮತ್ತು ಅತಿಶಯವಾಗಿ ಹೊಗಳಿಕೆ ಪಡೆದಂಥ ಅವರ ಅಹಿಂಸಾ ತತ್ವ ಇವೆಲ್ಲವೂ ಜಿನ್ನಾ ಅವರ ದೃಢ ಸಂಕಲ್ಪದ ಮುಂದೆ ಉರುಳಿ ಬಿದ್ದವು. ಒಂದು ಕಾಲದಲ್ಲಿ ಕಟ್ಟಾ ರಾಷ್ಟ್ರೀಯತಾವಾದಿ ಯಾಗಿದ್ದ ಜಿನ್ನಾ 1920ರ ನಂತರ ಮೇಲ್ತರಗತಿಯ ಕೋಮುವಾದಿಯಾಗಿ ಪರಿವರ್ತನೆ ಯಾದದ್ದು ಗಾಂಧಿಗೆ ಅರ್ಥವಾಗಲಿಲ್ಲವೆ? ಜಿನ್ನಾನಿಗಾಗಿ ತಮ್ಮ ನೀತಿಗಳಲ್ಲಿ ಬದಲಾಗಿ ಭಿನ್ನ ರಾಜಕೀಯ ಧೋರಣೆಗಳನ್ನು ಹೊಂದಿದ ವ್ಯಕ್ತಿಗಳೊಂದಿಗೆ ಎಲ್ಲರನ್ನೂ ಒಂದುಗೂಡಿಸಿ ವ್ಯವಹರಿಸಲು ಬಿಡಬಹುದಾಗಿತ್ತು!

ಆದರೆ ಗಾಂಽಯ ಪ್ರಾಮಾಣಿಕತೆ ಹಾಗೆ ಮಾಡಲಿಲ್ಲ! ಮಾಡುವುದಕ್ಕೂ ಬಿಡಲಿಲ್ಲ! ಹಿಮಾಲಯ ಸದೃಶ ಪ್ರಮಾದಗಳು ಆದಾಗಲೂ ವ್ಯಾವಹಾರಿಕ ರಾಜಕೀಯ
ನೀತಿಯು ಕೆಲಸ ಮಾಡುವಂಥ ಪರಿಸ್ಥಿತಿ ಇರಲಿಲ್ಲವಾಗಿತ್ತೆನ್ನಿಸುತ್ತದೆ. ತನ್ನ ಕಲ್ಪನೆಯ ರಾಷ್ಟ್ರವನ್ನು ಕಟ್ಟಲು ಗಾಂಧಿ ತನ್ನ ಯಾವತ್ತಿನ ಹಠದಿಂದ ಗೆಲ್ಲಬೇಕಿತ್ತು.
ತನ್ನ ಬದ್ಧತೆ, ಅಚಲ ನಿರ್ಧಾರ, ಹಠವನ್ನು ತೋರಿದ್ದೇ ಆದರೆ ಇಂದು ಭಾರತ ಹೀಗಿರುತ್ತಿರಲಿಲ್ಲ! ಗಾಂಧಿ ಬಯಸಿದ ಭಾರತವಾಗಿ ಇರುತ್ತಿತ್ತು. ಮತ್ತು ಆ ಭಾರತಕ್ಕೆ ೭೪ರ ಸಂಭ್ರಮವಾಗಿರುತ್ತಿತ್ತು. ಗಾಂಧಿಗೆ ೧೫೨ರ ಸಂಭ್ರಮವಾಗಿರುತ್ತಿತ್ತು. ಆದರೆ ಭಾರತಕ್ಕೆ ಆ ಯೋಗವೂ ಭಾಗ್ಯವೂ ಗಾಂಧಿಯಿಂದಾಗಿಯೇ ಒದಗಿ ಬರಲಿಲ್ಲವೆಂದು ಹೇಳಿದರೆ ಬೇಸರವಾಗುತ್ತದೆ, ಸಿಟ್ಟುಬರುತ್ತದೆ!

ಬಹುಮುಖ್ಯವಾಗಿ ಇಲ್ಲಿ ಗ್ರಹಿಸಬೇಕಾದ ಇನ್ನೊಂದು ವಿಚಾರವೇನೆಂದರೆ ಗಾಂಽ ಕಲ್ಪನೆಯ ಭಾರತದಂತೆ ಕಾಂಗ್ರೆಸ್, ಕಮ್ಯುನಿಸ್ಟ್ ಕಲ್ಪನೆಯ ಭಾರತವೂ ಗಾಂಽ
ಕಲ್ಪನೆಯ ಭಾರತಕ್ಕೆ ಮುಖಾಮುಖಿಯಾಗುವುದು ಅಂದೂ ಸತ್ಯವೇ ಆಗಿತ್ತು! ಅಂದರೆ ಗಾಂಧಿಗೆ ಇವೆಲ್ಲದರ ಸೂಚನೆಯಿತ್ತೆ? ತನಗೆ ಇದ್ಯಾವುದೂ ಬೇಡ ಅಂತ
ನಿರ್ಧರಿಸಿ ತಮ್ಮ ಆತ್ಮ ತೋರಿದ ದಾರಿಯಲ್ಲೇ ಸಾಗಿಬಿಟ್ಟರೇನೋ ಎಂದೆನಿಸುತ್ತದೆ. ಯಾಕೆಂದರೆ ಏನೇ ಅದ್ವಾನಗಳು ತನ್ನಿಂದ ಘಟಿಸಿದಾಗಲೂ ‘ನಾನು ನನ್ನ ಆತ್ಮ ಹೇಳಿದಂತೆ ನಡೆಯುತ್ತಿದ್ದೇನೆ’ ಎನ್ನುತ್ತಿದ್ದವರು ಗಾಂಧಿ. ಇದೊಂಥರಾ ಆತ್ಮವಂಚನೆಯ ಪಲಾಯನವಾದವೆಂದು ಅನಿಸುತ್ತದೆ!

ಒಬ್ಬ ಮಹಾತ್ಮ ಎನಿಸಿದವನನ್ನೇ ಇಂಥ ಗೊಂದಲಗಳು ಆಗ ತಾನೇ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಕಾಡಿದವು ಎಂದರೆ ಇಷ್ಟು ಸುದೀರ್ಘವಾಗಿ ಬೆಳೆದುಬಂದ, ಅನಗತ್ಯವಾಗಿ ಬೆಳೆದುಬಂದ ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಮೋದಿಯಂಥ ವರ್ತಮಾನದ ನಾಯಕನನ್ನು ಎಂಥೆಂಥಾ ಗೊಂದಲಗಳು ಕಾಡಿರಬಹುದು? ಕಾಡುತ್ತಿರಬಹುದು? ಊಹಿಸಲು ಸಾಧ್ಯವೇ ಇಲ್ಲ! ಗಾಂಽಗೆ ತನ್ನ ತತ್ವಗಳ ವಿರುದ್ಧ ಇದ್ದವರನ್ನು ನಿಯಂತ್ರಿಸಲು ನಿಗ್ರಹಿಸಲು ಆಗದೆ ಹೋದಾಗ ಸೋತು ನೆಹರೂರನ್ನು ಪ್ರಧಾನಿ ಮಾಡಿದರೆ ಎಂದು ನೆಹರೂರನ್ನು ಪ್ರಧಾನಿ ಮಾಡಲು ಗಾಂಧಿ ಕೊಟ್ಟ ಕಾರಣಗಳು ಈ ಪ್ರಶ್ನೆಯನ್ನು ಹುಟ್ಟಿಸುತ್ತದೆ.

ಗಾಂಧಿಯ ಹಿಂದ್ ಸ್ವರಾಜ್‌ದಲ್ಲಿಯ ಕಲ್ಪನೆಯ ರಾಷ್ಟ್ರವನ್ನು ಬದಿಗೊತ್ತಿ ಹೊಸ ರಾಷ್ಟ್ರ ನಿರ್ಮಾಣಕ್ಕೆ ಮುಂದಾದ ನೆಹರೂ ತನಗೆ ಎದುರಾದ ಆಪತ್ತಿನ ಸಂದರ್ಭ ದಲ್ಲಿ ತನ್ನ ರಕ್ಷಣೆಗೆ ಬೇಕಾಗಿ ಗಾಂಧಿಯನ್ನು ಒಂದು ಸಲಕರಣೆಯಂತೆ ಬಳಸಿಕೊಂಡರೆ? ಗಾಂಧಿ ಕಲ್ಪನೆಯ ಭಾರತಕ್ಕೆ ಮುಳ್ಳಾದವರು ಯಾರೆಂದು ಪ್ರತ್ಯೇಕ ವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ! ಗಾಂಧಿ ನೆಹರೂರನ್ನು ನಂಬಿದರು. ಆದರೆ ನೆಹರೂ ಗಾಂಧಿಯನ್ನು ಸ್ವಾರ್ಥಕ್ಕೋಸ್ಕರ ನಂಬಿದಂತೆ ನಟಿಸಿದರು. ಗಾಂಽ ಒಬ್ಬ ಭಯಂಕರ ಜಡ ಆಷಾಢಭೂತಿ ಎಂದು ನೆಹರೂ ಹೇಳಿದ್ದು ಯಾವ ಅರ್ಥದಲ್ಲೋ! ಅಂತೂ ಗಾಂಽಯ ಸಾತ್ವಿಕತೆ ನೆಹರೂ ಜಿನ್ನಾ ಮುಂದೆ ಸೋತಿತು. ಆದರೆ, ಪಟೇಲರು ಕೊನೆಯವರೆಗೂ ಗಾಂಽಗೆ ವಿಧೇಯರಾಗೇ ಉಳಿದು ಬಿಟ್ಟರು. ಅನೇಕ ಸಲ ಹೀಗನಿಸುವುದು ಸುಳ್ಳಲ್ಲ!

ಅಂಥ ನೆಹರೂ ಆಳಿಹೋದ ದೇಶಕ್ಕೀಗ ೭೪ರ ಸಂಭ್ರಮ. ಯಾವ ಗಾಂಽಯ ಕೃಪೆಯಿಂದ ನೆಹರೂ ಪ್ರಧಾನ ಅಽಕಾರ ಹಿಡಿದು ಭಾರತವನ್ನು ಆಳಿದರೋ ಆ ಗಾಂಽ ಭಾರತಕ್ಕೆ ೭೪ರ ಪ್ರಾಯ. ಗಾಂಽಯೆಂದರೆ ಭಾರತ, ಭಾರತವೆಂದರೆ ಗಾಂಽ. ಇರುವುದನ್ನೆಲ್ಲ ಕಳಚಿಕೊಂಡು ಸರಳ ಬದುಕಿನ ಮೇರುಸಾಧಕರಾಗಿ ಕಂಡ ಗಾಂಽ ಬಹುವರ್ಣರಂಜಿತದ ವ್ಯಕ್ತಿಯೇನಲ್ಲ. ಈ ಬಂಧಕ್ಕೆ ಕೊನೆಯಿರಲು ಸಾಧ್ಯವೇ ಇಲ್ಲವೇನೋ!

ಗಾಂಽಯ ನೆಚ್ಚಿನ ರಾಮನಿಗೂ ಮಂದಿರವಾಗುವ ಅಸಂಖ್ಯ ಹಿಂದೂಗಳ ಮಹತ್ತಾದ ಹಂಬಲ ಈಡೇರುತ್ತಿದೆ ಎಂಬಲ್ಲಿಗೆ ರಾಮರಾಜ್ಯದ ಗಾಂಽಯ ಕನಸನ್ನು
ಭೌತಿಕವಾಗಿ ಆದರೂ ಸಾಽಸುತ್ತಿದ್ದೇವಲ್ಲ ಎಂಬ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯವಾಗುತ್ತಿದೆ. ಆಡಳಿತಾತ್ಮಕವಾಗಿ ರಾಮರಾಜ್ಯವಂತೂ ಸಾಧ್ಯವಾಗಲಿಲ್ಲ
ಎಂಬ ಕೊರಗಿಗೆ ಅರ್ಥವೇ ಇಲ್ಲವಾಗಿದೆ. ರಾಮ ಮಂದಿರವಾದರೂ ಸಾಧ್ಯವಾಗುವಂತೆ ಬೆಂಬಲಿಸಿ ಗಾಂಽಯ ಕನಸನ್ನು ಈ ಮೂಲಕವಾದರೂ ಈ ವಿಶೇಷ
ಸಂದರ್ಭದಲ್ಲಿ ಈಡೇರುತ್ತಿದೆ.

74 ವರ್ಷ ಪ್ರಾಯದ ಗಾಂಽಯ ಕನಸಿನ ಭಾರತಕ್ಕೆ ಈಗ ಏಳು ವರ್ಷ ಪ್ರಾಯದ ಮೋದಿಯ ಸಾರಥ್ಯ. ಆದರೆ ನೆಹರೂ ರಾಜಕಾರಣದ ಚರ್ಯೆಗಳು ಬಯಲಾಗುತ್ತಲೇ ಅವು ಮರೆಯಾಗುತ್ತಿರುವ ಈ ಹೊತ್ತಿನ ಭಾರತವನ್ನು ಗಾಂಽ ಹುಟ್ಟಿದ ನಾಡಿನಿಂದಲೇ ಬಂದ ಮೋದಿಯವರು ಆಳಲು ಆರಂಭಿಸಿದರೂ ಗಾಂಽಯ ಚರ್ಯೆಗಳು ಬದಲಾಗಲಿಲ್ಲ. ಬದುಕಿದ್ದರೆ ಗಾಂಽಗೀಗ 152ರ ಸಂಭ್ರಮ. ಗಾಂಽಯೂ ಇತಿಹಾಸವಾಗಿ ಹೋದರೇ ಹೊರತು ಗಾಂಽಯೇ ಇತಿಹಾಸವಾಗಲಿಲ್ಲ.

ಇದು ಮೋದಿಗೂ ಅನ್ವಯಿಸುವಂಥ ಮಾತೇ ಆಗಿದೆ! ಗಾಂಽಯನ್ನು ಮತ್ತೆ ಮತ್ತೆ ಪ್ರಶ್ನಾತೀತರಾಗಲು ಬಿಡದೇ ಅವರನ್ನು ನೆನಪಿಸಿ ಕೊಳ್ಳುವ ಮೂಲಕ ಎಲ್ಲ ಬಗೆಯ ವಿರಸಗಳನ್ನು ಮರೆತು ನಾವು ಒಂದು ರಾಷ್ಟ್ರವಾಗಿ ಹೇಗೆ ಮುನ್ನಡೆಯಬೇಕು ಎಂಬುದನ್ನೂ, ನಿತ್ಯದ ಬದುಕನ್ನು ರಾಷ್ಟ್ರಕ್ಕಾಗಿ ಆದಷ್ಟೂ ಮೀಸಲಾಗಿಡ ಬೇಕು ಎಂಬ ಪ್ರಜ್ಞೆಯನ್ನೂ ಈಗ ಭಾರತದೆಲ್ಲೆಲ್ಲೂ ಜಾಗೃತಗೊಳಿಸಿದ ಮೋದಿಯ ಏಳು ವರ್ಷದ ಬಾಲ್ಯ ಚೈತನ್ಯಮಯವಾಗಿದೆ. ಹಾಗಂತ ದಿನದ ಉಳಿದ ಸಮಯಗಳಲ್ಲಿ ನಮ್ಮ ಪಾಡು ನಮಗಿದ್ದದ್ದೇ!