ವೀಕೆಂಡ್ ವಿತ್ ಮೋಹನ್
camohanbn@gmail.com
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ರಾತ್ರಿ ಅವರ ಅಧಿಕೃತ ನಿವಾಸದಲ್ಲಿ ಖಾಸಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ
ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪುಟಿನ್ ಮೋದಿಯವರು ಭಾರತದ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಾಯಕನೆಂದು ಶ್ಲಾಘಿಸಿದರು.
ಮೋದಿಯವರ ರಷ್ಯಾ ಭೇಟಿಯ ಸಂದರ್ಭದಲ್ಲಿ ಉಭಯ ನಾಯಕರು ಮಾಸ್ಕೋದ ಹೊರಗೆ ಅನೌಪಚಾರಿಕ ಸಭೆ ನಡೆಸುತ್ತಿದ್ದಂತೆ, ವ್ಲಾಡಿಮಿರ್ ಪುಟಿನ್ ಪ್ರಧಾನಿಗೆ ‘ನೀವು ಪ್ರಧಾನಿಯಾಗಿ ಮರು ಆಯ್ಕೆಯಾದ ಮೇಲೆ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಇದು ಆಕಸ್ಮಿಕವಲ್ಲ, ಹಲವು
ವರ್ಷಗಳಿಂದ ನಿಮ್ಮ ಕೆಲಸದ ಫಲಿತಾಂಶ ನಿಮಗೆ ಮತ್ತೊಮ್ಮೆ ಗೆಲುವನ್ನು ತಂದುಕೊಟ್ಟಿದೆ. ನಿಮಗೆ ದೇಶದ ಪರವಾದ ನಿಮ್ಮದೇ ವಿಚಾರಗಳಿವೆ. ನೀವು ಜಗತ್ತಿನ ಶಕ್ತಿಯುತ ವ್ಯಕ್ತಿಯಾಗಿದ್ದೀರಿ, ಭಾರತ ಮತ್ತು ಭಾರತೀಯರ ಹಿತಾಸಕ್ತಿಗಳಲ್ಲಿ ನಿಮ್ಮ ಶ್ರದ್ದೆ ದೇಶವು ಉತ್ತಮ ಫಲಿತಾಂಶಗಳನ್ನು ಸಾಧಿಸಲು
ಸಾಧ್ಯವಾಗುತ್ತಿದೆ.
ಫಲಿತಾಂಶ ಸ್ಪಷ್ಟವಾಗಿದೆ’ ಎಂದು ಹೇಳಿದರು. ಇದೇ ವೇಳೆ ಭಾರತವು ನಿಮ್ಮ ಅವಧಿಯಲ್ಲಿಯೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಪುಟಿನ್ ಹೇಳಿರುವುದನ್ನು ರಷ್ಯಾದ ಸರಕಾರಿ ಸ್ವಾಮ್ಯದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೋದಿ ಅವರು ತಮ್ಮ ಇಡೀ ಜೀವನವನ್ನು ಭಾರತದ ಜನರಿಗೆ ಮುಡಿಪಾಗಿಟ್ಟಿzರೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿzರೆ. ಇದಕ್ಕೆ ಪ್ರತಿಕ್ರಿಸಿರುವ ಮೋದಿ ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳ ಕುರಿತು ಮಾತನಾಡಿ, ಭಾರತದ ಜನರು ತಾಯ್ನಾಡಿಗೆ ಸೇವೆ ಸಲ್ಲಿಸಲು ಮತ್ತೊಮ್ಮೆ ನನಗೆ ಅವಕಾಶ ನೀಡಿzರೆ ಎಂದು ಹೇಳಿದ್ದಾರೆ.
ಆದರೆ ಅಮೆರಿಕ ದೇಶ ಭಾರತ ಸರಕಾರದ ರಷ್ಯಾ ಜತೆಗಿನ ಸಂಬಂಧದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯ ಕುರಿತು ಭಾರತದೊಂದಿಗೆ ಸಂಪರ್ಕದಲ್ಲಿರುವುದಾಗಿ ಅಮೆರಿಕ ಮಂಗಳವಾರ ಹೇಳಿದೆ ಮತ್ತು ಮೋದಿಯವರೊಟ್ಟಿಗಿನ ಸಂಭಾಷಣೆಯ ವಿಷಯವನ್ನು ಖಾಸಗಿಯಾಗಿಟ್ಟುಕೊಂಡು, ರಷ್ಯಾದೊಂದಿಗಿನ ಭಾರತದ ಸಂಬಂಧದ ಬಗ್ಗೆ ತನ್ನ ಕಳವಳವನ್ನು ಪುನರುಚ್ಚರಿಸಿದೆ. ಉಕ್ರೇನ್‌ನಲ್ಲಿ ‘ಶಾಶ್ವತ ಶಾಂತಿ’ ಪ್ರಯತ್ನಗಳನ್ನು ಬೆಂಬಲಿಸುವಂತೆ ದೆಹಲಿಯನ್ನು ಅಮೆರಿಕ ಒತ್ತಾಯಿಸಿದೆ. ಭಾರತವು ತನ್ನ ಎಲ್ಲಾ ಹೇಳಿಕೆಗಳಲ್ಲಿ ಸತತವಾಗಿ ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಅದರ ಸಾರ್ವಭೌಮತ್ವವನ್ನು ಬೆಂಬಲಿಸಿದೆ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಕರೆ ನೀಡಿದೆ.
ಮಾಸ್ಕೋದಲ್ಲಿ ಮೋದಿಯವರು ಉಕ್ರೇನ್ ಯುದ್ಧದಲ್ಲಿ ಉಂಟಾದ ಹಿಂಸಾಚಾರ ಮತ್ತು ದುಃಖದ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿzರೆ. ಭಾರತವು ಸತತವಾಗಿ ಉಕ್ರೇನ್ ರಷ್ಯಾ ಯುದ್ಧದಲ್ಲಿ ಶಾಂತಿಯನ್ನೇ ಪ್ರತಿಪಾದಿಸುತ್ತಾ ಬಂದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಎರಡು ದಿನಗಳ ಮಾಸ್ಕೋ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ರಾಜಮರ್ಯಾದೆಯಿಂದ ಚೀನಾ ದೇಶಕ್ಕೆ ಎದೆಯುರಿ ಉಂಟುಮಾಡಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾ ದೇಶ ಪಾಶ್ಚಿಮಾತ್ಯ ದೇಶಗಳಿಂದ ಉಂಟಾದಂತಹ ಒತ್ತಡವನ್ನು ಎದುರಿಸಲು ಚೀನಾದ ಬೆಂಬಲ ಕೋರಿತ್ತು. ಆದರೆ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿಯವರ ರಷ್ಯಾ ಭೇಟಿ ಕೇವಲ ಚೀನಾ ಮಾತ್ರವಲ್ಲ, ಭಾರತವೂ ಕೂಡ ರಷ್ಯಾ ಜತೆಗಿನ ತನ್ನ ದಶಕಗಳ ಸಂಬಂಧವನ್ನು ಮುಂದುವರೆಸಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದೆ.
ಇದರೊಂದಿಗೆ ೧೯೮೩ರ ನಂತರ ಆಸ್ಟ್ರೀಯಾಕ್ಕೆ ಭಾರತದ ಪ್ರಧಾನಿಯ ಮೊದಲ ಭೇಟಿ, ಹೈಟೆಕ್ ಮೂಲಸೌಕರ್ಯ ತಂತ್ರಜ್ಞಾನಗಳು ಮತ್ತು ಚಳಿಗಾಲದ ಉಪಕರಣಗಳನ್ನು ಸಂಗ್ರಹಿಸಲು ಭಾರತವು ನ್ಯಾಟೋ ಗುಂಪಿನಲ್ಲಿಲ್ಲದ ದೇಶವನ್ನು ತನ್ನೊಡನೆ ತೊಡಗಿಸಿಕೊಳ್ಳಲು ಸಿದ್ಧವಿದೆ ಎಂಬುದರ ಸಂಕೇತ ವಾಗಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಮೋದಿ ಮತ್ತು ಪುಟಿನ್ ಅಪ್ಪುಗೆಯನ್ನು ಭಾರತದ ಪಾಶ್ಚಿಮಾತ್ಯ ಸ್ನೇಹಿತರ ನಿರಾಕರಣೆ ಎಂದು ಲೇಬಲ್ ಮಾಡುವ ಬದಲು, ಮಾಸ್ಕೋದಲ್ಲಿ ನಡೆದ ದ್ವಿಪಕ್ಷೀಯ ಸಭೆಯನ್ನು ಭಾರತ ಮತ್ತು ರಷ್ಯಾ ದೇಶದ ನಡುವಿನ ದಶಕಗಳ ಹಿಂದಿನ ಪರಂಪರೆಯ
ಹಿನ್ನೆಲೆಯಲ್ಲಿ ನೋಡಬೇಕು.
ವಿಶೇಷವಾಗಿ ಪಶ್ಚಿಮದ ದೇಶಗಳು ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ನಾಯಕತ್ವಕ್ಕಿಂತ ಸರ್ವಾಧಿಕಾರಿಗಳನ್ನು ಹೆಚ್ಚಾಗಿ ಬೆಂಬಲಿಸುತ್ತಾ ಬಂದಿರುವ
ಇತಿಹಾಸವಿದೆ. ೧೯೬೫ ಮತ್ತು ೧೯೭೧ ರ ಪಾಕಿಸ್ತಾನದ ವಿರುದ್ದದ ಯುದ್ಧಗಳಲ್ಲಿ, ೧೯೮೦-೨೦೦೦ ರ ನಡುವಿನ ಖಲಿಸ್ತಾನ್ ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳ ಭಯೋತ್ಪಾದನೆಯಲ್ಲಿ, ಭಾರತದ ಪರವಾದ ಪಶ್ಚಿಮದ ಬೆಂಬಲ ಕಡಿಮೆಯಿತ್ತು. ಕೆನಡಾ ತನ್ನ ನೆಲದಲ್ಲಿ ಖಲೀಸ್ತಾನಿ ಹೋರಾಟಗಾರರಿಗೆ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಕೆನಡಾ ನೆಲದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಹೋರಾಟಗಳು ನಡೆದಾಗ ಭಾರತ ಖಂಡಿಸಿದೆ. ಖಾಲಿಸ್ತಾನಿ ಬೆಂಬಲಿಗ ‘ಪನ್ನು’ ಬಹಿರಂಗವಾಗಿ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ಹೇಳಿದರೂ ಸಹ ಕೆನಡಾ ಸರಕಾರ ಆತನ ಮೇಲೆ ಕ್ರಮ ಕೈಗೊಳ್ಳುವುದಿಲ್ಲ.
ಭಾರತವು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ‘ಆತ್ಮನಿರ್ಭರ ಭಾರತ’ದ ಯೋಜನೆಗೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಮತ್ತು ಅಗ್ನಿವೀರ್ ಯೋಜನೆಯು ೨೦೪೭ರ ವಿಕಸಿತ ಭಾರತಕ್ಕೆ ರಾಷ್ಟ್ರೀಯತೆಯ ಅಡಿಪಾಯವನ್ನು ಹಾಕುತ್ತದೆ ಎಂದು ಬಲವಾಗಿ ನಂಬಿzರೆ. ಇದನ್ನರಿಯದ
ಪ್ರತಿಪಕ್ಷಗಳು ಭಾರತದ ಭದ್ರತೆಯ ದೃಷ್ಟಿಯಿಂದ ಜಾರಿಗೆ ತಂದಂತಹ ಯೋಜನೆಯನ್ನು ಟೀಕಿಸುವಲ್ಲಿ ನಿರತವಾಗಿವೆ. ಪ್ರಧಾನಿ ಮೋದಿಯವರು ಭಾರತದ ಹಿತಾಸಕ್ತಿಯಲ್ಲಿ ದಿಟ್ಟ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸುತ್ತಿರುವ ಸಂದರ್ಭ ದಲ್ಲಿ, ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಯಾಗಲು ಭಾರತದ ಅಗತ್ಯತೆಗಳಿಗೆ ತಕ್ಕಂತೆ ಭಾರತೀಯ ರಾಜತಾಂತ್ರಿಕತೆಯನ್ನು ಮುಂದುವರೆಸಬೇಕಿದೆ. ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಸಂಬಂಧದೊಂದಿಗೆ, ಹಳೆಯ ಮಿತ್ರ ರಷ್ಯಾದ ಸಂಬಂಧವನ್ನೂ ಗಟ್ಟಿಗೊಳಿಸಬೇಕಿದೆ.
ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ಗಳ ಮೇಲೆ ಚೀನಾ ಆರ್ಥಿಕ ಮತ್ತು ಮಿಲಿಟರಿ ಹತೋಟಿ ಹೊಂದಿರುವುದರಿಂದ, ಅದರ ವಿರುದ್ಧ ಆರ್ಥಿಕ ಮತ್ತು ಮಿಲಿಟರಿ ಸಾಮ ರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಹೆಚ್ಚಿನ
ಗಮನ ವಹಿಸಿದೆ. ಇದರ ಹೊರತಾಗಿ, ಕಾಶ್ಮೀರ, ಪಂಜಾಬ್ ಮತ್ತು ದೇಶದ ಇತರ ರಾಜ್ಯಗಳಲ್ಲಿ ಚೀನಾ ಮತ್ತು ಆಂತರಿಕ ಭಾರತ ವಿರೋಧಿಗಳ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಆಂತರಿಕ ಭದ್ರತೆ ಮತ್ತು ಗುಪ್ತಚರವನ್ನು ಬಲಪಡಿಸಲಾಗುತ್ತಿದೆ. ಆದರೆ ಇದನ್ನರಿಯದ ಭಾರತದ ಪ್ರತಿಪಕ್ಷಗಳು
ಮೋದಿಯವರ ವಿದೇಶಿ ನಾಯಕರ ಭೇಟಿಯನ್ನು ರಾಜಕೀಯವನ್ನಾಗಿಸಿ ಸಮಯ ವ್ಯರ್ಥ ಮಾಡುತ್ತಿವೆ.
ಭಾರತದ ವಿದೇಶಾಂಗ ಇಲಾಖೆ ಮತ್ತು ಪ್ರಧಾನಿ ಮೋದಿಯವರು ರಷ್ಯಾವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಉಕ್ರೇನ್ ಮೇಲೆ ಮೇಲೆ ರಷ್ಯಾದ ಆಕ್ರಮಣದ ನಂತರ, ಪಾಶ್ಚಿಮಾತ್ಯ ನ್ಯಾಟೋ ದೇಶಗಳು ರಷ್ಯಾದೊಂದಿಗಿನ ವ್ಯಾಪಾರಕ್ಕೆ ನಿರ್ಬಂಧ ಹೇರಿದ್ದವು. ಆದರೆ ಭಾರತ ತನ್ನ ವಿಶ್ವಾಸಾರ್ಹ ಸ್ನೇಹಿತ ರಷ್ಯಾದಿಂದ ಕಚ್ಚಾತೈಲದ ಆಮದನ್ನು ಹೆಚ್ಚಿಸಿದೆ ಮತ್ತು ಮಾಸ್ಕೋದೊಂದಿಗೆ ರಕ್ಷಣಾ ವಲಯದ ಲ್ಲಿನ ಸಹಕಾರವನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ.
ಮೋದಿಯವರ ರಷ್ಯಾ ಭೇಟಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ್ದು, ವಿಜ್ಞಾನ, ವ್ಯಾಪಾರ ಮತ್ತು ಹವಾಮಾನ ಬದಲಾವಣೆಯ ಉಪಕ್ರಮಗಳು ಸೇರಿದಂತೆ ಹಲವಾರು ಹೊಸ ಒಪ್ಪಂದಗಳ ಬಗ್ಗೆ ಚರ್ಚಿಸಲಾಗಿದೆ. ರಷ್ಯಾ ಭಾರತದ ಅತಿದೊಡ್ಡ ಶಸಾಸ
ಪೂರೈಕೆದಾರನಾಗಿ ಇಂದಿಗೂ ಉಳಿದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮದೊಂದಿಗಿನ ಸಂಬಂಧ ವೃದ್ಧಿಯ ಫಲವಾಗಿ ಅಮೆರಿಕ ದೇಶದಿಂದಲೂ ತನ್ನ ಪಾಲನ್ನು ಹೆಚ್ಚಿಸಿಕೊಂಡು, ರಷ್ಯಾದ ಶಸ್ತ್ರಾಸ್ತ್ರ ಆಮದುಗಳಲ್ಲಿ ತನ್ನ ಪಾಲನ್ನು ಕಡಿಮೆ ಮಾಡಿಕೊಂಡಿದೆ. ಇದರೊಂದಿಗೆ ಭಾರತವು – ಮತ್ತು ಇಸ್ರೇಲ್‌ನೊಂದಿಗೆ ತನ್ನ ಶಸಾಸ ವ್ಯಾಪಾರವನ್ನು ಹೆಚ್ಚಿಸುವ ಮೂಲಕ ಶಸಾಸ ಪೂರೈಕೆದಾರರ ಸಮೂಹವನ್ನು ವಿಸ್ತರಿಸುತ್ತಿದೆ. ಮೋದಿಯವರ ಆಡಳಿತಾವಧಿಯಲ್ಲಿ ಭಾರತ ಕೇವಲ ಒಂದು ಅಥವಾ ಎರಡು ದೇಶಗಳೊಂದಿಗೆ ಮಾತ್ರ ಅವಲಂಭಿತವಾಗಿಲ್ಲ.
ನವದೆಹಲಿ ಅತ್ತ ಪಶ್ಚಿಮಕ್ಕೂ ಹತ್ತಿರವಾಗಿ, ವಾಷಿಂಗ್ಟನ್ ನೊಂದಿಗೆ ಅಭೂತಪೂರ್ವ ಮಟ್ಟದ ಭದ್ರತಾ ಸಹಕಾರವನ್ನು ಅನುಸರಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಷ್ಯಾವು ಭಾರತದ ಪ್ರತಿಸ್ಪರ್ಧಿಯಾದ ಚೀನಾಕ್ಕೆ ನಿಧಾನವಾಗಿ ಹತ್ತಿರವಾಗುತ್ತಿದೆ ಮತ್ತು ಪಾಕಿಸ್ತಾನದೊಂದಿಗೆ ಆಗಾಗ್ಗ ಸಣ್ಣಮಟ್ಟದ
ಮಾತುಕತೆ ನಡೆಸುತ್ತಿರುತ್ತದೆ. ಆದರೆ ಭಾರತ ತನ್ನ ದೀರ್ಘಕಾಲದ ವಿದೇಶಿ ನೀತಿಯ ಮೂಲಕ ಬ್ರಿಕ್ಸ್ ಮತ್ತು ಆಐಇಖ ಮತ್ತು ಇಂಡೋ-ಪೆಸಿಫಿಕ್ ಕಿಖಿಅಈಗೆ ಸೇರಿ ಜಾಗತಿಕ ದಕ್ಷಿಣದ ನಡುವೆ ಸೇತುವೆಯಾಗಿ ಕಾರ್ಯನಿರ್ವ ಹಿಸುವ ಗುರಿಯನ್ನು ಹೊಂದಿದೆ. ಆದರೆ ರಷ್ಯಾ ಉಕ್ರೇನ್ ನಲ್ಲಿ ಹೆಚ್ಚು ಸಿಲುಕಿಕೊಂಡಿರುವುದರಿಂದ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಪ್ರತ್ಯೇಕತೆಯನ್ನು ಎದುರಿಸುತ್ತಿರುವು ದರಿಂದ, ಭಾರತ ರಷ್ಯಾವನ್ನು ಹೊರತುಪಡಿಸಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳನ್ನು ಕಂಡುಕೊಳ್ಳುತ್ತಿದೆ.
ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಭಾರತ ವಿರೋದಿಸುತ್ತದೆ. ರಷ್ಯಾ ಚೀನಾಕ್ಕೆ ಹತ್ತಿರವಾಗಿರುವ ಪರಿಣಾಮ, ರಷ್ಯಾ ಮತ್ತು ಪಶ್ಚಿಮದ ದೇಶಗಳ ಜೊತೆಗಿನ ಭಾರತದ ಬಾಂಧವ್ಯವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಭಾರತದ ವಿದೇಶಾಂಗ ನೀತಿ ಪ್ರಮುಖ ಪಾತ್ರ ವಹಿಸುತ್ತಿದೆ. ನವದೆಹಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗೊಳ್ಳಲು ಪದೇಪದೆ ಕರೆ ನೀಡಿದೆ. ಸಂಪೂರ್ಣ ಯುದ್ಧ ನಿಲ್ಲಿಸಲು ರಷ್ಯಾ ಒಪ್ಪದಿದ್ದರೂ ಸಹ ಮೋದಿಯವರ ಮನವಿ ಯುದ್ಧ ಮತ್ತಷ್ಟು ಉಲ್ಬಣಗೊಳ್ಳದಂತೆ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಬಲಪಡಿಸಲು ಸಹಕಾರಿಯಾಗಿದೆ.
ಭಾರತ ಮತ್ತು ರಷ್ಯಾ ಪಾಲುದಾರಿಕೆಯೂ ವಾಸ್ತವವಾಗಿ ಬೆಳೆಯುತ್ತಿರುವ ರಷ್ಯಾ ಮತ್ತು ಚೀನಾ ಸಂಬಂಧದ ಮೇಲೆ ಪರಿಶೀಲನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಚೀನಾ ದೇಶಕ್ಕಿಂತಲೂ ಮೊದಲು ರಷ್ಯಾದ ಪ್ರಬಲ ಸ್ನೇಹಿತರಲ್ಲಿ ಭಾರತ ಒಂದಾಗಿದೆ, ಆರ್ಥಿಕ ಮತ್ತು ರಕ್ಷಣಾ ಬೆಂಬಲಕ್ಕಾಗಿ ರಷ್ಯಾ ಚೀನಾ ಮೇಲೆ ಅವಲಂಬಿತವಾಗಿದ್ದರೂ ಸಹ, ಮಾಸ್ಕೋ ದಶಕಗಳ ಕಾಲ ಭಾರತದೊಂದಿಗೆ ತನ್ನ ವಾಣಿಜ್ಯ ಮತ್ತು ರಕ್ಷಣಾ ಸಂಬಂಧಗಳನ್ನು ಪರಿಶೀಲಿಸಿದೆ. ಭಾರತ ಮತ್ತು ರಷ್ಯಾ ಜಾಗತಿಕ ಶೀತಲ ಸಮರದ ಕಾಲದಿಂದಲೂ ಉತ್ತಮ ಸ್ನೇಹಿತ ದೇಶಗಳಾಗಿವೆ. ಇಬ್ಬರ ನಡುವಿನ ವಾಣಿಜ್ಯ ಮತ್ತು ರಕ್ಷಣಾ ಸಂಬಂಧದಲ್ಲಿ ಒಮ್ಮೆಯೂ ಬಿರುಕು ಮೂಡಿಲ್ಲ.
ಭಾರತದೊಂದಿಗೆ ರಷ್ಯಾದ ಸಂಬಂಧಕ್ಕೆ ಮಿತಿಯಿಲ್ಲ, ಆದರೆ ಮಾಸ್ಕೋ ಮತ್ತು ಬೀಜಿಂಗ್ ನಡುವಿನ ಸಂಬಂಧ ಹಲವು ಮಿತಿಗಳಿಗೆ ಸೀಮಿತವಾಗಿರುತ್ತದೆ. ಭಾರತ ಮತ್ತು ಚೀನಾ ನಡುವಿನ ಸಂಘರ್ಷದಲ್ಲಿ ಭಾರತವನ್ನು ರಷ್ಯಾ ಬೆಂಬಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಮೋದಿ ಪುಟಿನ್ ಭೇಟಿ ಮಹತ್ವಪೂರ್ಣವಾಗಿದೆ.