ವಿಶ್ವ ವಿಹಾರ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಪ್ರಧಾನ ಮಂತ್ರಿಯಾಗಿ ೨೦೧೪ರಿಂದ ಮೋದಿಯವರು ಅಮೆರಿಕಕ್ಕೆ ಆರು ಭಾರಿ ಭೇಟಿ ನೀಡಿದ್ದಾರೆ. ಅದು ಯಾವುದೂ ಅಧಿಕೃತ
ಪ್ರವಾಸವಾಗಿರಲಿಲ್ಲ ಎಂಬುದು ಗಮನಾರ್ಹ. ಪ್ರಧಾನ ಮಂತ್ರಿಗಳ ಅಮೆರಿಕ ಭೇಟಿಯ ಬಗ್ಗೆ ಅಲ್ಲಿನ ಅಧ್ಯಕ್ಷರ ನಿವಾಸ ‘ಶ್ವೇತ ಭವನ’ ಪ್ರತಿಕ್ರಿಯೆ ನೀಡಿ ಎರಡೂ ದೇಶಗಳ ನಡುವಿನ ಬಾಂಧವ್ಯ ದೃಢವಾಗಿದೆ ಮತ್ತು ಅತ್ಯುತ್ತಮ ಸಹಭಾಗಿತ್ವ ಹೊಂದಿರುವು ದಕ್ಕೆ ದೃಷ್ಟಾಂತ ಎಂದು ಬಣ್ಣಿಸಿದೆ.
ರಾಜಕೀಯ ಮುತ್ಸದ್ಧಿ, ಚಾಣಕ್ಯ, ಚತುರ ಮೋದಿಯವರು ಜೋ ಬೈಡನ್ ಜತೆ ಉತ್ತಮ ಸ್ನೇಹವನ್ನು ಶೀಘ್ರವಾಗಿ ಬೆಳೆಸಿದರು. ಬೈಡನ್ ಗೆಲುವಿನ ಪ್ರಾರಂಭದಲ್ಲಿಯೇ ಅವರ ವಿಶ್ವಾಸಕ್ಕೆ ಪಾತ್ರರಾದರು. ಇದು ಮೋದಿಯವರು ಜಗತ್ತಿನ ಪ್ರಮುಖ ರಾಜಕೀಯ
ನಾಯಕ ಎಂಬ ವಾದಕ್ಕೆ ಸಿಕ್ಕಿದ ಅಧಿಕೃತ ಮಾನ್ಯತೆಯೂ ಹೌದು. ಇದೇ ಸಂದರ್ಭದಲ್ಲಿ ಭಾರತದ ದೇಶಾಂಗ ಕಾರ್ಯಾಲಯ, ಈ ಭೇಟಿ ಎರಡೂ ದೇಶಗಳ ನಡುನ ಬಾಂಧವ್ಯ ದಲ್ಲಿ ಐತಿಹಾಸಿಕ ಮೈಲುಗಲ್ಲು ಎಂದು ಬಣ್ಣಿಸಿತು.
ಉಕ್ರೇನ್ ಯುದ್ಧದ ಕಾರಣಕ್ಕಾಗಿ ರಷ್ಯಾದ ಜತೆಗೆ ಅಮೆರಿಕ ಕೆಂಡಾಮಂಡಲವಾಗಿರುವ ಹೊತ್ತಿನಲ್ಲಿಯೇ ರಷ್ಯಾ ಅಧ್ಯಕ್ಷ ಪುಟಿನ್‌ರ ಪರಮಾಪ್ತ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಟೇಟ್ ವಿಸಿಟ್‌ನ ಗೌರವ ಸಿಕ್ಕಿದೆ. ಹಿಂದಿನಿಂದಲೂ ಭಾರತ ಮೈಗೂಡಿಸಿಕೊಂಡಿರುವ ಪವರ್ ಬ್ಯಾಲೆನ್ಸ್. ಅಲಿಪ್ತ ನೀತಿ ಮೋದಿಯವರಿಗೆ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ರಷ್ಯಾ ಮತ್ತು ಅಮೆರಿಕ ಇವೆರಡೂ ರಾಷ್ಟ್ರಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲದಿಂದ ಜಗತ್ತಿನಲ್ಲಿ ನಡೆದ ಯುದ್ಧಗಳು ಒಂದೆರಡಲ್ಲ.
ಭಾರತ ಪ್ರತಿ ಭಾರಿಯೂ ಯಾರ ಪರವಾಗಿಯೂ ನಿಲ್ಲದೆ ಯಾರನ್ನು ಹೆಸರಿಸದೇ ತಟಸ್ಥ ನೀತಿಯನ್ನು ಅನುಸರಿಸಿ ಸಾಮಾನ್ಯ ಜನರ ಹತ್ಯೆಯನ್ನು ಖಂಡಿಸಿತು. ಜಾಗತಿಕ ಅನ್ಯಾಯವನ್ನು ಖಂಡಿಸುವ ಜತೆಗೆ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತ ಬಂದಿದೆ. ಯುದ್ಧ ನಡೆದಾಗ ಭಾರತಕ್ಕೆ ಯಾರೂ ಶತ್ರುಗಳಲ್ಲ ಯಾರೂ ಮಿತ್ರರೂ ಅಲ್ಲ. ರಷ್ಯಾ, ಕ್ಯೂಬಾ, ಇರಾನ್, ಉತ್ತರ ಕೊರಿಯಾ ಜತೆಗೆ ಭಾರತ ಉತ್ತಮ ಸಂಬಂಧ ಕಾಯ್ದುಕೊಂಡೇ ಇತ್ತ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ರಾಷ್ಟ್ರ ಗಳ ಜತೆ ಸ್ನೇಹ ಬೆಳೆಸಿದೆ.
Read E-Paper click here
ದಶಕಗಳಿಂದ ಭಾರತ ಇಡುತ್ತಿರುವ ಈ ಜಾಣ ಹೆಜ್ಜೆ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಹೊಸ ಎತ್ತರಕ್ಕೇರಿದೆ. ಭಾರತಕ್ಕೆ ಅತ್ತ ರಷ್ಯಾ, ಇತ್ತ ಅಮೆರಿಕ ಇಬ್ಬರೂ ಸ್ನೇತರೇ. ಇಲ್ಲಿ ಹೆಚ್ಚಾಗಿ ಭಾರತದ ಪಾಲಿಗೆ ಕಷ್ಟಕಾಲದಲ್ಲಿ ರಷ್ಯಾವೇ ಹೆಚ್ಚು ಸಹಕಾರಿಯಾಗಿತ್ತು. ದೊಡ್ಡಣ್ಣ ಅಮೆರಿಕದ ನೀತಿಯನ್ನು ತನ್ನೆಡೆಗೆ ಸೆಳೆಯಲು ಭಾರತದ ೯ಪ್ರಧಾನಿಗಳು ೩೪ ಬಾರಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದರೆ ಇತ್ತೀಚೆಗೆ ಚೀನಾ ತನಗೆ ಪ್ರತಿಸ್ಪರ್ಧಿಯೆಂದು ಅಮೆರಿಕಕ್ಕೆ ಜ್ಞಾನೋದಯವಾಗುತ್ತಿದ್ದಂತೆಯೇ ಏಷ್ಯಾ ಖಂಡದಲ್ಲಿ ಭಾರತವನ್ನು ಬಲಿಷ್ಠಗೊಳಿಸಲು ಯುಎಸ್ ತೀರ್ಮಾನಿಸಿತು.
ಮೋದಿ ನಾಯಕತ್ವಕ್ಕೆ ಮನಸೋತಿರುವ ರಾಷ್ಟ್ರಗಳಲ್ಲಿ ಅಮೆರಿಕ ಪ್ರಮುಖ. ಅಮೆರಿಕದ ಸಂಸತ್ತಿನಲ್ಲಿ ೨ನೇ ಬಾರಿಗೆ ಭಾಷಣ ಮಾಡಿದ ಕೆಲವೇ ಪ್ರತಿಷ್ಠಿತ ಐತಿಹಾಸಿಕ ವಿಶ್ವನಾಯಕರ ಪಟ್ಟಿಗೆ ಮೋದಿ ಹೆಸರು ಸೇರ್ಪಡೆಯಾಗಿದೆ. ಚೀನಾವನ್ನು ಮಿತಿಯೊಳಗೆ ಇರಿಸುವ ಉದ್ದೇಶದಿಂದ ಭಾರತ ಮತ್ತು ಅಮೆರಿಕ ಒಂದಾಗಿರಬೇಕೆನ್ನುವುದು ಕೂಡ ಅಮೆರಿಕದ ಹಿತಾಸಕ್ತಿ. ಈ ಸಂದರ್ಭದಲ್ಲೂ ಭಾರತಕ್ಕೆ ರಷ್ಯಾ ಬೆಸ್ಟ್ ಫ್ರೆಂಡ್. ಕಚ್ಚಾತೈಲ, ಶಸಾಸ ಹಾಗೂ ಮಿಲಿಟರಿ ತಂತ್ರಜ್ಞಾನ, ಪ್ರಸ್ತುತ ಕೈಗೊಂಡಿರುವ ಗಗನಯಾನ
ಯೋಜನೆಗೆ ಸಹಕರಸಿದ್ದೂ ರಷ್ಯಾವೇ. ಮತ್ತು ಈ ಮೊದಲು ಭಾರತದ ರಾಕೇಶ್ ಶರ್ಮಾ ನಭಕ್ಕೆ ನೆಗೆದಿದ್ದು ಸೋವಿಯಟ್
ಒಕ್ಕೂಟದ ನೆಲದಿಂದಲೇ. ಇಂದಿಗೂ ಭಾರತದೊಂದಿಗೆ ರಷ್ಯಾ ಮುಕ್ತವಾಗಿ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತದೆ; ಆದರೆ ಅಮೆರಿಕ ಇನ್ನೂ ಗೌಪ್ಯತೆ ಕಾಪಾಡಿಕೊಂಡಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಅಮೆರಿಕ ಪ್ರವಾಸ ಸ್ಟೇಟ್ ವಿಸಿಟ್ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ. ಉಭಯ ರಾಷ್ಟ್ರಗಳಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಸಂಚಲನ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅಲ್ಲಿನ ವಿವಿಧ ಸಂಸ್ಥೆಗಳು, ವಾಣಿಜ್ಯ, ರಕ್ಷಣೆ, ತಂತ್ರಜ್ಞಾನ, ಬಾಹ್ಯಾಕಾಶ ಸಹಿತ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿ ದಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ. ಭಯೋತ್ಪಾದನೆಯ ವಿಚಾರದಲ್ಲಿ ಸಂಘಟಿತ ಹೋರಾಟದ ಕುರಿತಂತೆ ಒಮ್ಮತದ ನಿಲುವು ತಾಳಿರುವ ಭಾರತ ಮತ್ತು ಅಮೆರಿಕ ತಮ್ಮ ಸ್ಪಷ್ಟ ನಿಲುವಿನಿಂದ ದುಷ್ಕೃತ್ಯಗಳಲ್ಲಿ ತೊಡಗಿಕೊಂಡ ಜಗತ್ತಿನ ಇತರ ರಾಷ್ಟ್ರಗಳಿಗೆ ಸಂದೇಶ ರವಾನೆಯಾಗಿದೆ.
ಮೋದಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜತೆ ನಡೆಸಿದ ಮಾತುಕತೆಯ ವೇಳೆ ಉಭಯ ರಾಷ್ಟ್ರಗಳ ಸಂಬಂಧ, ದ್ವಿಪಕ್ಷೀಯ ಸಹಕಾರ ಮತ್ತು ರಷ್ಯಾ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ರಾಜತಾಂತ್ರಿಕ ನೆಲೆಯಲ್ಲಿ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸುವ ಕುರಿತಂತೆ ಪ್ರಸ್ತಾಪಿಸಿರುವುದು ಮತ್ತು ಈ ಎಲ್ಲ ವಿಷಯಗಳ ಬಗ್ಗೆ ಜೋ ಬೈಡನ್ ಸಹಮತ ವ್ಯಕ್ತ ಪಡಿಸಿರುವುದು ಪ್ರಶಂಸನಾರ್ಹ. ಈ ನಿಟ್ಟಿನಲ್ಲಿ ಮೋದಿಯವರು ತನ್ನ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಿ ಕೊಂಡು, ವಿಶ್ವಶಾಂತಿ, ಸೌಹರ್ದ, ಖಚಿತವಾದ ಅಭಿಪ್ರಾಯ, ರಾಜಕೀಯ ಮುತ್ಸದ್ದಿತನ, ವಾಣಿಜ್ಯ ವ್ಯವಹಾರಗಳಲ್ಲಿನ
ಪಾರದರ್ಶಕತೆಯ ಬಗ್ಗೆ ಕೂಲಂಕಶ ತಿಳಿವಳಿಕೆ ಹಾಗೂ ವಸುದೈವ ಕುಟುಂಬಕಂ ಎಂಬ ಪರಿಜ್ಞಾನವನ್ನು ಸದಾ ಹೊಂದಿರು ವುದು ಯಾವ ರಾಷ್ಟ್ರನಾಯಕನಿರಲಿ, ರಾಷ್ಟ್ರವೇ ಇರಲಿ ಮಾನ್ಯ ಮಾಡಬೇಕಾದ ವಿಚಾರವೇ ಆಗಿದೆಯೆಂದರೆ ತಪ್ಪಿಲ್ಲ.
ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಗಾಢವಾಗಿದೆ ಮತ್ತು ಮಧುರವಾಗಿದೆ. ಪ್ರಜಾತಂತ್ರ, ಹವಾಮಾನ ಬದಲಾವಣೆ, ಬಲಿಷ್ಠ ಪೂರೈಕೆಯ ವ್ಯವಸ್ಥೆಯ ಸ್ಥಾಪನೆ, ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿನ ಸುಧಾರಣೆಗಳ ಬಗ್ಗೆ ಸ್ಪಷ್ಟ ಮಾತುಕತೆ ಮತ್ತು ಒಪ್ಪಂದವಾಗಿರುವುದು ಗಮನಾರ್ಹ. ಇತಿಹಾಸಗಳಲ್ಲಿನ ಹಿಂಜರಿಕೆಗಳನ್ನು ದಾಟಿ ಬರುವ ಆಯ್ಕೆಗಳನ್ನು ಉಭಯ ದೇಶಗಳ ನಾಯಕರು ಮಾಡಿಕೊಂಡಿದ್ದಾರೆ. ಅಮೆರಿಕ ಮತ್ತು ಭಾರತದ ಪಾಲುದಾರಿಕೆ ಶತಮಾನದ ಕರೆ ಎಂಬ ನೆಲೆಯಲ್ಲಿ ಮಾತನಾಡಿದರು.
ನಾನಾ ಸಂಸ್ಥೆಗಳು, ವಾಣಿಜ್ಯ ಕಂಪನಿಗಳ ಮುಖ್ಯಸ್ಥರೊಂದಿಗೆ ಮೋದಿಯವರು ನಡೆಸಿದ ಸಮಾಲೋಚನೆಯ ಸಂದರ್ಭದಲ್ಲಿ ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಿ ತಲ್ಲದೆ ವಿವಿಧ ವಿಚಾರಗಳಲ್ಲಿ ಸಹಭಾಗಿತ್ವದ ನಿರ್ಧಾರವನ್ನು ಕೈಗೊಂಡಿರುವುದು ಉಭಯ ದೇಶಗಳ ಆಂತರಿಕ ಹಿತಾಸಕ್ತಿ ಹೆಚ್ಚುವುದರಲ್ಲಿ ವಿಶ್ವಾಸ ಮೂಡಿದೆ. ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳು ಮಹತ್ವದ ಒಪ್ಪಂದಗಳನ್ನು ಮಾಡಿ ಕೊಂಡಿರುವುದು, ಯುದ್ಧ ವಿಮಾನಗಳ ಎಂಜಿನ್‌ಗಳನ್ನು ಭಾರತದಲ್ಲಿಯೇ ಉತ್ಪಾದಿಸುವ ಸಂಬಂಧ ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಮತ್ತು ಭಾರತದ ಎಚ್‌ಎಎಲ್ ನಡುವಿನ ಒಪ್ಪಂದ ಮತ್ತು ಅಮೆರಿಕದಿಂದ ಈ ಬಗ್ಗೆ
ತಂತ್ರಜ್ಞಾನ ವರ್ಗಾವಣೆಗೆ ಸಮ್ಮತಿ ಕೊಟ್ಟಿರುವುದರಿಂದ ಭಾರತದಲ್ಲಿ ರಕ್ಷಣಾ ಸಾಮಾಗ್ರಿ ಉತ್ಪನ್ನ ಹೆಚ್ಚಾಗಲಿದೆ ಮತ್ತು ಬಾಹ್ಯಾಕಾಶ ಕೇಂದ್ರಕ್ಕೆ ಒಂಟಿ ಗಗನಯಾನಕ್ಕೆ ಇಸ್ರೊ ಮತ್ತು ನಾಸಾ ಒಪ್ಪಿಗೆ ಸೂಚಿಸಿರುವುದು ಅತ್ಯಂತ ಮಹತ್ತರದ ಬೆಳವಣಿಗೆ ಯಾಗಿದೆ. ಹಲವಾರು ಮಹತ್ತರ ಕ್ಷೇತ್ರಗಳಲ್ಲಿನ ಬಗೆಗೆ ಪ್ರಮುಖ ಒಪ್ಪಂದಗಳಾಗಿವೆ.
ಖನಿಜ, ಎಲೆಕ್ಟ್ರಿಕಲ್ ಉತ್ಪಾದನೆ, ಬ್ಯಾಟರಿ, ದೂರಸಂಪರ್ಕ, ಕೃತಕ ಬುದ್ಧಿಮತ್ತೆ, ಸುಧಾರಿತ ಕಂಪ್ಯೂಟರ್ ತಂತ್ರಜ್ಞಾನ ಸ್ಟೆಮ್ ವಲಯದಲ್ಲಿ ಪ್ರತಿಭಾವಂತರಿಗೆ ಪ್ರೋತ್ಸಾಹ, ವಿಮಾನ ಖರೀದಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಪರಸ್ಪರ ಸಹಕಾರಗಳಿಗೆ ಪ್ರತಿಸ್ಪಂದನೆ ಮತ್ತು ಸಂಬಂಧಗಳಿಗೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ಘಟನೆಯೆಂದೇ ಹೇಳಬೇಕಾಗುತ್ತದೆ. ಅಕ್ಷರಶಃ ಅನುಷ್ಠಾನಕ್ಕೆ ಬಂದದ್ದೇ ಆದಲ್ಲಿ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನೂ ಹೊಸ ದಿಕ್ಕಿನತ್ತ ಕೊಂಡೊಯ್ಯುವುದು
ನಿಶ್ಚಿತ ಮತ್ತು ಸಂಶಯಲ್ಲ. ಈ ಬಾರಿಯ ಮೋದಿಯವರ ಸ್ಟೇಟ್ ವಿಸಿಟ್ ಇತಿಹಾಸದಲ್ಲಿನ ಹಿಂಜರಿಕೆಗಳನ್ನು ದಾಟಿ ಬರುವ ಆಯ್ಕೆಗಳನ್ನು ಮಾಡಿಕೊಂಡಿವೆ.
ಅಮೆರಿಕ ಮತ್ತು ಭಾರತದ ಪಾಲುದಾರಿಕೆ ಶತಮಾನದ ಕರೆ ಎಂಬ ನೆಲೆಯಲ್ಲಿ ಮಾತನಾಡಿದರು. ಅಮೆರಿಕ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಮೋದಿಯವರು ಮಾಡಿಕೊಂಡ ಎಲ್ಲ ಒಪ್ಪಂದಗಳಿಗೆ ಒಂದು ಅರ್ಥ ಮತ್ತು ವ್ಯಾಖ್ಯಾನವನ್ನು ನೀಡಿದರು. ಒಪ್ಪಂದಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ವಿವರಿಸಿದರು. ಪ್ರಜಾತಂತ್ರ, ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣ ಹಾಗೂ ಚೀನಾ ಕುರಿತು ಅಧ್ಯಕ್ಷ ಬೈಡನ್ ಅವರು ಬಯಸಿದ್ದ ರೀತಿಯಲ್ಲಿ ಮೋದಿ ಮಾತನಾಡಿದಂತಿತ್ತು. ಚೀನಾ ವಿಚಾರದಲ್ಲಿ ಅವರು ಸ್ಪಷ್ಟವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಬಲಪ್ರಯೋಗ ಮತ್ತು ಸಂಘರ್ಷಗಳ ಕರಿಮೋಡಗಳು ಇಂಡೋ ಫೆಸಿಫಿಕ್ ಪ್ರದೇಶದ ಮೇಲೆ ಮಾಡಿದೆ ಎಂಬ ಎಚ್ಚರಿಕೆ ನೀಡಿದರು. ಈ ಪ್ರದೇಶವನ್ನು ಮುಕ್ತವಾಗಿ ಇರಿಸಲು ಜಾಗತಿಕ ವ್ಯವಸ್ಥೆಯ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅದನ್ನು
ಕೇಂದ್ರಿಕರಿಸಲು ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಸಾರಿದರು. ಇಲ್ಲಿರುವ ಸಂದೇಶ ಬಹಳ ಸ್ಪಷ್ಟವಾಗಿದೆ. ಚೀನಾವನ್ನು ಮಿತಿಯೊಳಗೆ ಇರಿಸುವ ಉದ್ದೇಶದೊಂದಿಗೆ ಭಾರತ ಮತ್ತು ಅಮೆರಿಕ ಒಂದಾಗಿ ನಿಂತಿವೆ.
ಭಾಷಣದುದ್ದಕ್ಕೂ ಚಪ್ಪಾಳೆಯ ಸುರಿಮಳೆಯಾದುದು ಮಾತ್ರವಲ್ಲ; ೧೫ ಭಾರಿ ಜಯಘೋಷ ಮತ್ತು ಹರ್ಷನಿಂದ ಸ್ಟಾಡಿಂಗ್ ಒವೇಶನ್ ಪ್ರದರ್ಶನವಾಯಿತು. ಯಾವುದು ಏನೇ ಇದ್ದರೂ ಪ್ರಧಾನಿಯಾಗಿ ಮೋದಿಯವರು ಕಳೆದ ೯ ವರ್ಷಗಳ ಐತಿಹಾಸಿಕ ಸಾಧನೆ ಭಾರತದಲ್ಲಿ ವಿಜೃಂಭಿಸುತ್ತಿದೆ. ಭಾರತದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದವರು ಇದೀಗ ಭಾರತದ ಸಾಧನೆ ಮತ್ತು ಸ್ನೇಹ
ಸಂಬಂಧಗಳ ವೃದ್ಧಿಗೆ ಮುಂದಾಗುತ್ತಿದ್ದಾರೆ. ಇದೆಲ್ಲದಕ್ಕೆ ಕಾರಣ ೨೦೧೪ರಿಂದ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ
ನರೇಂದ್ರ ಮೋದಿಯವರ ಗಟ್ಟಿ ನಾಯಕತ್ವ, ದೂರದೃಷ್ಟಿಯ ಚಿಂತನೆ, ದೇಶದ ಹಿತಕ್ಕಾಗಿ ಅವಿರತ ಪರಿಶ್ರಮ, ದೇಶದ ರಕ್ಷಣೆಯ ವಿಚಾರ ಎದುರು ಬಂದಾಗ ರಾಜಿ ರಹಿತವಾದ ಗಟ್ಟಿ ನಿರ್ಧಾರಗಳು ಅವರನ್ನು ವಿಶ್ವವೇ ತಲೆದೂಗುವ ಹೆಮ್ಮೆಯ ನಾಯಕನನ್ನಾಗಿ ಮಾಡಿದೆ. ಇದರಿಂದಾಗಿ ದೇಶದ ಅಭಿವೃದ್ಧಿ ಮತ್ತು ವರ್ಚಸ್ಸು ಎರಡನ್ನೂ ಹೆಚ್ಚಿಸಿಕೊಂಡಿರುವುದು ನಿರ್ವಿವಾದದ ಮಾತು.
ಹತ್ತನೆಯ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ವಿಶ್ವಮಟ್ಟದಲ್ಲಿ ೫ನೇ ಸ್ಥಾನಕ್ಕೆ ತಲುಪಿ ಕಂಗೊಳಿಸುತ್ತಿದೆ. ಜನನಿಭಿಡ ಭಾರತ
ದೇಶದಲ್ಲಿ ಕೋಡ್ ಮಹಾಮಾರಿಯನ್ನು ನಿಯಂತ್ರಿಸಿ ರಾಷ್ಟ್ರದ ಜನತೆಗೆ ಲಸಿಕೆಯನ್ನು ಧರ್ಮಾರ್ಥವಾಗಿ ನೀಡಿದ್ದು ಐತಿಹಾಸಕ ದಾಖಲೆಯೇ ಸರಿ. ವಿಶ್ವಮಟ್ಟದಲ್ಲಿ ಕುಗ್ಗುತ್ತಿದ್ದ ದೇಶದ ವರ್ಚಸ್ಸಿಗೆ ಶಕ್ತಿ ತುಂಬಿ ದೇಶಕ್ಕೆ ಸೈದ್ಧಾಂತಿಕ, ಪಾರದರ್ಶಕ ಆಡಳಿತ ನೀಡಿ ಇಡೀ ವಿಶ್ವಕ್ಕೆ ನಾಯಕತ್ವ ನೀಡುವ ನಿಟ್ಟಿನಲ್ಲಿ ಸಾಗುತ್ತಿದೆ. ಮೋದಿಯವರ ಅಮೆರಿಕ ಸ್ಟೇಟ್ ವಿಸಿಟ್ ವಿಶ್ವದ ಇತರ ಕೆಲವು ರಾಷ್ಟ್ರಗಳಿಗೆ ಹಲವಾರು ಸಂದೇಶಗಳನ್ನು ರವಾನೆ ಮಾಡುವಂತಿತ್ತು ಮತ್ತು ಮಾದರಿಯಾಗಿತ್ತು.