ಅಭಿಪ್ರಾಯ
ಎಲ್.ಪಿ.ಕುಲಕರ್ಣಿ
ಇದೇ ಮಾರ್ಚ್ 21, ಭಾನುವಾರ ರಾತ್ರಿ ಭಾರತೀಯ ಕಾಲಮಾನ ಸರಿಸುಮಾರು 9:30ಕ್ಕೆ, ಗಂಟೆಗೆ 1 ಲಕ್ಷ 24 ಸಾವಿರ ಕಿ.ಮೀ
ವೇಗದೊಂದಿಗೆ ಚಲಿಸುತ್ತಿದ್ದ ‘2001 ಎಫ್.ಒ-32’ ಎಂಬ ಕ್ಷುದ್ರ ಗ್ರಹ ಭೂಮಿಗೆ ಸಮೀಪವೆಂದರೆ 20 ಲಕ್ಷ ಕಿ.ಮೀ ದೂರದಲ್ಲಿ ಹಾಯ್ದು ಹೋಯಿತು.
ವಿಶೇಷವೇನು ಗೊತ್ತೆ, ಇದುವರೆಗೂ ಭೂಮಿಯ ಸಮೀಪ ಹಾದು ಹೋದ ಕ್ಷುದ್ರ ಗ್ರಹಗಳಲ್ಲಿ ಈ 2001 ಎಫ್.ಒ-32 ಅತ್ಯಂತ ಸಮೀಪ ಹಾದು ಹೋದ ಕ್ಷುದ್ರ ಗ್ರಹವಂತೆ! ಮೊದಲೇ ಅನ್ಯ ಗ್ರಹದ ಜೀವಿ, ಭೂಮಿಯನ್ನೇ ಹೋಲುವ ಇನ್ನೊಂದು ಆಕಾಶ ಕಾಯ ಮುಂತಾದ ಕುತೂಹಲಗಳ ಹುಡುಕಾಟದಲ್ಲಿರುವ ವಿeನಿಗಳಿಗೆ, ಈ ಕ್ಷುದ್ರಗ್ರಹ ಗಳನಾದರೂ ಭೂಮಿಯಂತಹ ವಾತಾವರಣವಿದೆಯೇ ಎಂಬ ಪ್ರಶ್ನೆ ತಲೆಯಲ್ಲಿ ಮೂಡಿದೆಯಂತೆ. ತಕ್ಷಣವೇ ಈ ಕುರಿತು ಅವರು ಅಧ್ಯಯನದಲ್ಲಿ ತೊಡಗಿದ್ದಾರೆ.
‘ವಿಶ್ವವಾಣಿ’ಯಲ್ಲಿ ಈ ಹಿಂದೆ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಆಕಾಶ ವೀಕ್ಷಣೆಯ ಬಗ್ಗೆ ಸರಣಿ ಲೇಖನ ಬರೆದಿರುವೆ. ಈಗ ಏಪ್ರಿಲ್ ತಿಂಗಳ ಆಕಾಶ ವೀಕ್ಷಣೆ ಹೇಗಿರುತ್ತದೆಂದು ಪ್ರಸ್ತುತ ಲೇಖನದಲ್ಲಿ ನೋಡೋಣ. ರಾತ್ರಿ ಆ ಕಪ್ಪು ಆಕಾಶದಲ್ಲಿ ಏನೆ ನೋಡಬಹುದು, ಎಂಬುದರ ಬಗ್ಗೆ ಇಲ್ಲಿ ಇಬ್ಬರು ಖಗೋಳ ತಜ್ಞರಾದ ಉಡುಪಿಯ ಡಾ.ಎ.ಪಿ. ಭಟ್ ಹಾಗೂ ಬೆಂಗಳೂ ರಿನ ನೆಹರು ತಾರಾಲಯದಲ್ಲಿ ಖಗೋಳ ವಿeನಿ ಯಾಗಿರುವ ಡಾ. ಬಿ.ಎಸ್. ಶೈಲಜಾ ಅವರು ವಿಶ್ಲೇಷಿಸಿದ ಮಾಹಿತಿ ಯನ್ನು ಲೇಖನದಲ್ಲಿ ವ್ಯಕ್ತಪಡಿಸಿರುವೆ.
ಫೆಬ್ರವರಿ, ಮಾರ್ಚ್, ಏಪ್ರಿಲ್ ಈ ಮೂರು ತಿಂಗಳು ಆಕಾಶ ವೀಕ್ಷಣೆ ಬಹಳ ಕುತೂಹಲಕಾರಿಯಾಗಿರುತ್ತದೆ. ಸ್ವಚ್ಛಂದ ಆ ರಾತ್ರಿ ಕಪ್ಪು ಆಕಾಶದಲ್ಲಿ ಗ್ರಹ, ಕ್ಷುದ್ರ ಗ್ರಹ, ನಕ್ಷತ್ರ ಮುಂತಾದ ಆಕಾಶ ಕಾಯಗಳನ್ನು ನೋಡುವುದೇ ಒಂದು ರೋಮಾಂಚನ. ಆ ಸ್ವಚ್ಛಂದ ಕಪ್ಪು ಆಕಾಶದಲ್ಲಿ ಒಟ್ಟು ೮೮ ನಕ್ಷತ್ರ ಪುಂಜಗಳನ್ನು ಇದುವರೆಗು ಗುರುತಿಸಲಾಗಿದೆ. ಈಗಂತೂ ಬೇಸಿಗೆಯ ಬಿರು ಬಿಸಿಲು, ಧಗೆ ಬೇರೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ, ಧಗೆ ಕೊಂಚ ಕಡಿಮೆಯಾದಂತೆ ಅನಿಸುತ್ತದೆ ಅಷ್ಟೆ.
ಸಂಜೆ ಏಳು ಗಂಟೆಯ ನಂತರ ಕಪ್ಪು ರಾಶಿಯ ಆಕಾಶವನ್ನು ತಲೆ ಎತ್ತಿ ನೋಡಿದಾಗ ನಮ್ಮ ನೆತ್ತಿಯ ಮೇಲೆ ಹೊಳೆಯುತ್ತಾ
ಗೋಚರಿಸುವುದೇ ಮಂಗಳ ಗ್ರಹ. ಈ ತಿಂಗಳು ಕೇವಲ ಮಂಗಳ ಗ್ರಹ ಮಾತ್ರ ನಮಗೆ ಕಾಣುತ್ತದೆ. ಉಳಿದಂತೆ ಕೆಲವು ಪ್ರಖರವಾಗಿ ಹೊಳೆಯುವ ನಕ್ಷತ್ರಗಳು ಮಾತ್ರ ಗೋಚರಿಸುತ್ತವೆ. ನಮ್ಮ ಕಣ್ಣಿಗೆ ಸ್ಪಷ್ಠವಾಗಿ ಕಾಣುವ ನಕ್ಷತ್ರಗಳನ್ನು ಬ್ರೈಟೆ ಸ್ಟಾರ್‌ಗಳೆಂದು ಕರೆಯುತ್ತೇವೆ. ಇದುವರೆಗೂ ಅಂತ 21 ಬ್ರೈಟೆ ಸ್ಟಾರ್‌ಗಳನ್ನು ಗುರುತಿಸಲಾಗಿದೆ.
ಈ ಸಾಲಿನಲ್ಲಿ ಮೊದಲನೆಯದಾಗಿ ಬರವ ನಕ್ಷತ್ರವೇ ಲುಬ್ಧಕ. ಸುಮಾರು 8.6 ಜ್ಯೋತಿರ‍್ವರ್ಷದಷ್ಟು ದೂರವಿರುವ ಈ ಬಲುಬ್ಧಕ ಬಿಳಿ-ನೀಲಿ ಬಣ್ಣದಿಂದ ಕೂಡಿದೆ. ನಂತರ, ಎರಡನೇಯದಾಗಿ ಬರುವ ಅತಿ ಪ್ರಖರ ನಕ್ಷತ್ರವೇ 310 ಜ್ಯೋತಿರ‍್ವರ್ಷ ದಷ್ಟು ಕೆನೋಪಸ್ ನಕ್ಷತ್ರ. ಇದನ್ನು ವೈಟ್ ಜೇಂಟ್ ಎನ್ನಲಾಗುತ್ತದೆ. ಮಹಾವ್ಯಾಧ, ಮಹಾಶ್ವಾನ, ಮಿಥುನ ಇಂತಹ ಪ್ರಕಾಶಮಾನ ನಕ್ಷತ್ರ ಪುಂಜಗಳಲ್ಲದೆ ಕುಂತಿ, ಪಾರ್ಥ, ವಿಜಯಸಾರಥಿ ದಕ್ಷಿಣದ ಶಶ, ನೌಕಾ, ವೈತರಣೀ ಇವುಗಳನ್ನೂ ಸಹ ನಾವು ಈ ಏಪ್ರಿಲ್ ತಿಂಗಳಿನಲ್ಲಿ ಗುರುತಿಸಬಹುದು.
ಸಂಜೆಯ ಆಕಾಶದಲ್ಲಿ ಕಾಣುವ ಪ್ರಖರ ನಕ್ಷತ್ರ ಪುಂಜಗಳೆಂದರೆ ಮಹಾವ್ಯಾಧ (ಒರೈಯನ್), ಮಹಾಶ್ವಾನ ( ಕ್ಯಾನಿಸ್ ಮೇಜರ್), ಮಿಥುನ, ಲಘುಶ್ವಾನ, ವಿಜಯಸಾರಥಿ (ಆರಿಗಾ). ಲುಬ್ಧಕ ಅತಿ ಪ್ರಕಾಶಮಾನವಾದ ನಕ್ಷತ್ರ. ವಾಯವ್ಯಕ್ಕೆ ಪಾರ್ಥ ಮತ್ತು ಈಶಾನ್ಯದಲ್ಲಿ ಸಪ್ತರ್ಷಿಮಂಡಲ ಕಾಣಿಸುತ್ತವೆ.
ಈ ಧ್ರುವ ನಕ್ಷತ್ರವನ್ನು ಸೇರಿಕೊಂಡು ಸಪ್ತರ್ಷಿಯ ಪುಟ್ಟ ಪ್ರತಿಬಿಂಬದಂತೆ ಲಘುಸಪ್ತರ್ಷಿ ಮಂಡಲ ಕಾಣುವುದು. ಪೂರ್ವದಲ್ಲಿ ಚಿತ್ತಾ, ಸ್ವಾತಿ ಮತ್ತು ಹಸ್ತಾ ಗಳು ಕಂಡುಬರುತ್ತವೆ. ಮಿಥುನ ಮತ್ತು ಸಿಂಹಗಳ ನಡುವೆ ಕ್ಷೀಣವಾದ ಕಟಕವನ್ನು ಸೂಕ್ಷ್ಮವಾಗಿ
ಗಮನಿಸಬೇಕಷ್ಟೆ. ಈ ತಿಂಗಳ ಆಕಾಶ ವೀಕ್ಷಣೆಯ ಒಂದು ವಿಶೇಷವೆಂದರೆ, ಚಂದ್ರನ ಮೇಲೆ ಮಂಗಳ ಗ್ರಹ ಕೂತಂತೆ ಕಾಣುವುದು. ಅದು ಅರ್ಧ ಚಂದ್ರ ಇರುವಾಗ ಬಹಳ ಸುಂದರವಾಗಿ ಗೋಚರಿಸುತ್ತದೆ.
ಚಂದ್ರನಿಂದ ಪುಟ್ಟದಾಗಿ ಕಾಣುವ ಈ ಮಂಗಳ ನಮ್ಮನ್ನು ಇಣುಕಿ ನೋಡುತ್ತಿರುವಂತೆ ಭಾ ಸವಾಗುತ್ತದೆ. ತಜ್ಞರು, ಈ ಸುಂದರ ಕ್ಷಣವನ್ನು ಸ್ಮಾರ್ಟ್ ಫೋನ್ ಕ್ಯಾಮರಾ ಮೂಲಕವೂ ಸೆರೆಹಿಡಿಯಬಹುದೆಂದು ಹೇಳುತ್ತಿದ್ದಾರೆ. ಅಂದಹಾಗೆ, ಈ ರಮಣೀಯ ದೃಶ್ಯವನ್ನು ನಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲು ಇದೇ ಏ.17ರ ತನಕ ಕಾಯಬೇಕು. ನಸುಕಿನಲ್ಲಿ ಗುರು ಮತ್ತು
ಶನಿಗ್ರಹಗಳು ಕಾಣುತ್ತವೆ. ತಿಂಗಳ ಕೊನೆಗೆ ಅಂದರೆ 26ರಂದು ಬುಧ ಮತ್ತು ಶುಕ್ರಗ್ರಹಗಳು ಜೋಡಿಯಾ ದಂತೆ ಗೋಚರಿಸುತ್ತವೆ. ಇವೆರಡೂ ಆಗ ಸೂರ್ಯ ನಿಗೆ ಅತೀ ಸಮೀಪ ಬರುವುದರಿಂದ ಸಾಮಾನ್ಯವಾಗಿ ಅವುಗಳನ್ನು ನೋಡುವುದು ನಮಗೆ ಕೊಂಚ
ತೊಂದರೆ ಉಂಟುಮಾಡುತ್ತದೆ.